ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಉಡುಪಿ: ,   ದಿನಾಂಕ  03/12/2021 ರಂದು  ಪಿರ್ಯಾದಿದಾರರಾದ ರಂಗಪ್ಪ  (24),  ತಂದೆ: ಶಾಂತಪ್ಪ,  ವಾಸ:   ಗುಡ್ಡದದೇಲಾಪುರ   ಅಂಚೆ  ಮತ್ತು  ಗ್ರಾಮ  ಕುಷ್ಟಗಿ  ತಾಲೂಕು  ಕೊಪ್ಪಳ  ಜಿಲ್ಲೆ  ಇವರ ಅಣ್ಣ   ಲಕ್ಮಣ ಎಂಬುವವರು  ತನ್ನ  ಮೋಟಾರು  ಸೈಕಲ್  ನಂಬ್ರ  KA-20- EA-5311 ರಲ್ಲಿ  ಹನುಮಂತ ಎಂಬುವವರನ್ನು  ಹಿಂಬದಿ  ಕುಳ್ಳಿರಿಸಿಕೊಂಡು  ದೊಡ್ಡಣಗುಡ್ಡೆ  ಬಾಳಿಗಾ  ಆಸ್ಪತ್ರೆಯ ಕಡೆಯಿಂದ  ಮನೆ ಕಡೆಗೆ  ರಸಿಕಾ  ಬಾರ್  ಜಂಕ್ಷನ್ನ  ಮಾರ್ಗವಾಗಿ  ಸವಾರಿ  ಮಾಡಿಕೊಂಡು  ಹೋಗುತ್ತಿರುವಾಗ  ರಾತ್ರಿ  7:00 ಗಂಟೆಗೆ  ದೊಡ್ಡಣಗುಡ್ಡೆ ಪೊಲೀಸ್  ಕ್ವಾಟರ್ಸ  ಬಳಿ  ಉಡುಪಿ ಜಿಲ್ಲಾ  ತೋಟಾಗಾರಿಕಾ  ಬೆಳೆಗಾರರ ಸಹಕಾರಿ  ಸಂಘದ  ಕಛೇರಿಯ  ಕಟ್ಟಡದ  ಎದುರು  ತಲುಪುವಾಗ   ಎದುರಿನಿಂದ   ರಸಿಕ ಬಾರ್ ಜಂಕ್ಷನ್ ಕಡೆಯಿಂದ  ಪೆರಂಪಳ್ಳಿ ಕಡೆಗೆ  KA-01-Y-3080 ನೇ ಮೋಟಾರು  ಸೈಕಲ್  ಸವಾರ ತನ್ನ  ಮೋಟಾರು  ಸೈಕಲನ್ನು  ಸವಾರಿ  ಮಾಡಿಕೊಂಡು  ಬಂದು  ಬಲಬದಿಗೆ  ಸವಾರಿ  ಮಾಡಿ  ಲಕ್ಷ್ಮಣ ರವರು  ಸವಾರಿ ಮಾಡುತಿದ್ದ  KA-20-EA-5311 ನೇ ಮೋಟಾರು  ಸೈಕಲಿಗೆ ಡಿಕ್ಕಿ  ಹೊಡೆದ  ಪರಿಣಾಮ   ಮೋಟಾರು  ಸೈಕಲ್  ಸವಾರರು   ತಮ್ಮ ಮೋಟಾರು  ಸೈಕಲ್  ಸಮೇತ  ರಸ್ತೆಗೆ  ಬಿದ್ದು    ಲಕ್ಷ್ಮಣ  ರವರ ಮುಖಕ್ಕೆ  ತಲೆಗೆ  ಗಂಬೀರ  ಗಾಯವಾಗಿ  ಮಾತನಾಡದೇ  ಇದ್ದವರನ್ನು  ಹಾಗೂ ಸಹ ಸವಾರ  ಹನುಮಂತ ಮತ್ತು   KA-01-Y-3080 ನೇ ಮೋಟಾರು  ಸೈಕಲ್  ಸವಾರ ನಿಗೆ  ಮುಖಕ್ಕೆ  ಮತ್ತು  ತಲೆಗೆ  ಗಾಯವಾಗಿದ್ದು   ಚಿಕಿತ್ಸೆಯ  ಬಗ್ಗೆ ಉಡುಪಿ ಆದರ್ಶ ಆಸ್ಪತ್ರೆಗೆ  ಕರೆತಂದಲ್ಲಿ ಪರೀಕ್ಷಿಸಿದ  ವೈದ್ಯರು   ಲಕ್ಷ್ಮಣ  ರವರು  ಈಗಾಗಲೇ  ಮೃತಪಟ್ಟಿರುವುದಾಗಿ ತಿಳಿಸಿದ್ದು , ಹನುಮಂತ  ಮತ್ತು  KA-01-Y-3080    ನೇ ಮೋಟಾರು  ಸೈಕಲ್  ಸವಾರನನ್ನು   ಒಳರೋಗಿಯಾಗಿ  ದಾಖಲು  ಮಾಡಿರುತ್ತಾರೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 78/2021 ಕಲಂ : 279, 337, 304 (ಎ) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಶಂಕರನಾರಾಯಣ: ದಿನಾಂಕ  03/12/2021 ರಂದು  10:00 ಗಂಟೆಗೆ ಶಾರದ  ದೇವಾಡಿಗ (45), ಗಂಡ: ಶಂಕರ  ದೇವಾಡಿಗ,  ವಾಸ: ಅಶ್ವಿನಿ  ನಿಲಯ  ಸಿಗುಂಡಿ  ಕಮಲಶಿಲೆ  ಅಂಚೆ  ಯಡಮೊಗ್ಗೆ   ಗ್ರಾಮ ಕುಂದಾಪುರ  ತಾಲೂಕು ಇವರು ರಂಜೀತ್  ದೇವಾಡಿಗ  ಇವರೊಂದಿಗೆ KA-19-EJ-0821 ನೇ  ನಂಬ್ರದ ಮೋಟಾರ್ ಸೈಕಲ್‌ನಲ್ಲಿ   ಕುಂದಾಪುರ  ತಾಲೂಕಿನ ಸಿದ್ದಾಪುರ  ಗ್ರಾಮದ  ಕಮಲಶಿಲೆ ರಸ್ತೆಯ ಕೋಳಿ  ಪಾರ್ಮ ಬಳಿ  ಕಮಲಶಿಲೆ ಕಡೆಗೆ   ಹೋಗುತ್ತಿರುವಾಗ  ಆರೋಪಿ KA-20-C-6595 ನೇ  ನಂಬ್ರದ   ಆಟೋರಿಕ್ಷಾವನ್ನು   ಕಮಲಶಿಲೆ ಕಡೆಯಿಂದ    ಸಿದ್ದಾಪುರ  ಕಡೆಗೆ   ಅತೀ  ವೇಗ   ಹಾಗೂ ಅಜಾಗರೂಕತೆಯಿಂದ  ಚಲಾಯಿಸಿಕೊಂಡು  ಬಂದು  ಬೇರೆ  ವಾಹನವನ್ನು ಓವರಟೇಕ್  ಮಾಡುವ  ರಭಸದಲ್ಲಿ ಆತನ   ತೀರಾಬಲಬದಿಗೆ   ಚಲಾಯಿಸಿ  ಮೋಟಾರ್  ಸೈಕಲ್‌ಗೆ   ಡಿಕ್ಕಿ  ಹೊಡೆದ  ಪರಿಣಾಮ  ಮೋಟಾರ   ಸೈಕಲ್ ಸವಾರ   ರಂಜೀತ್  ದೇವಾಡಿಗ  ಇವರ  ಎಡಕಾಲು   ಹಾಗೂ  ಬಲಕೈಗೆ  ಮೂಳೆ ಮುರಿತದ  ಗಾಯವಾಗಿರುವುದಾಗಿದೆ  ಹಾಗೂ  ಪಿರ್ಯಾದಿದಾರರ ತಲೆಗೆ  ರಕ್ತಗಾಯವಾಗಿರುವುದಾಗಿದೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 109/2021  ಕಲಂ: 279, 337, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕೋಟ: ಪಿರ್ಯಾದಿದಾರರಾದ ಸುಭಾಷ್ ಶೆಟ್ಟಿ (37), ತಂದೆ: ಶೀನಪ್ಪ ಶೆಟ್ಟಿ, ವಾಸ: ಉಪ್ಪರಿ ಗೆ ಮನೆ ಅಚ್ಲಾಡಿ ಗ್ರಾಮ ಮತ್ತು ಅಂಚೆ  ಬ್ರಹ್ಮಾವರ ತಾಲೂಕು ಉಡುಪಿ ಜಿಲ್ಲೆ ಇವರು ದಿನಾಂಕ 02/12/2021ರಂದು ತನ್ನ ಸ್ನೇಹಿತ  ದಿನೇಶ ಶೆಟ್ಟಿಯವರೊಂದಿಗೆ  KA-20-EC-1878 ನೇ ಮೊಟಾರ್ ಸೈಕಲ್ ನಲ್ಲಿ ಸಹಸವಾರನಾಗಿ ಕುಳಿತು  ಅಚ್ಲಾಡಿಯ ಬೊಬ್ಬರ್ಯ ದೇವಸ್ಥಾನದ ದೀಪೋತ್ಸವ ಕಾರ್ಯಕ್ರಮ ಮುಗಿಸಿ ಬಳಿಕ ವಾಪಾಸ್ಸು ಮನೆ ಕಡೆಗೆ ಅದೇ ಮೊಟಾರ್ ಸೈಕಲಿನಲ್ಲಿ  ಸೈಬ್ರಕಟ್ಟೆ –ಕೋಟ ಮೂರು ಕೈ  ಡಾಮರು ರಸ್ತೆಯಲ್ಲಿ  ಗರಿಕೆ ಮಠ ಕಡೆಯಿಂದ  ಮಧುವನ ಕಡೆಗೆ ಹೊರಟಿದ್ದು ಮೋಟಾರ್ ಸೈಕಲನನ್ನು ದಿನೇಶ ಶೆಟ್ಟಿಯವರು ಸವಾರಿ ಮಾಡಿಕೊಂಡಿದ್ದು  ರಾತ್ರಿ 11:15 ಗಂಟೆಯ ಸಮಯಕ್ಕೆ  ಅಚಲಾಡಿಯ  ಮಧುವನ ವಿವೇಕಾನಂದ ಶಾಲೆಯ ಬಳಿ ತಲುಪುವಷ್ಟರಲ್ಲಿ  ದಿನೇಶ ಮೋಟಾರ್ ಸೈಕಲನ್ನು ಅತಿವೇಗ ಹಾಗೂ ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ಬಂದು ಒಮ್ಮೆಲೆ ಬ್ರೇಕ್ ಹಾಕಿದ ಪರಿಣಾಮ ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದ ಪರಿಣಾಮ ಪಿರ್ಯಾದಿದಾರರ  ಭುಜದ ಎಡಬದಿ ಗುದ್ದಿದ ತೀವೃ ಸ್ವರೂಪದ  ಒಳಗಾಯವಾಗಿದ್ದು  ಎಡ ಕೈ ಮೊಣ ಗಂಟಿನಲ್ಲಿ ಭುಜದ ಎಡ ಬದಿಯಲ್ಲಿ ಹಾಗೂ ಬೆನ್ನಿನ ಹಿಂಬದಿಯಲ್ಲಿ  ರಕ್ತ ಗಾಯಗಳಾಗಿದ್ದು ಎಡ ಕಿವಿಗೆ ತರಚಿದ ಗಾಯವಾಗಿರುತ್ತದೆ . ಸವಾರ ದಿನೇಶ ಶೆಟ್ಟಿಯವರಿಗೆ ಎರಡೂ ಕಾಲಿನ ಮೊಣ ಗಂಟಿಗೆ ಹಾಗೂ ಎರಡೂ  ಕೈ ಮೊಣ ಗಂಟಿಗೆ ತರಚಿದ ರಕ್ತಗಾಯಗಳಾಗಿರುತ್ತದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 207/2021 ಕಲಂ: 279, 337, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಗಂಡಸು ಕಾಣೆ ಪ್ರಕರಣ

  • ಬ್ರಹ್ಮಾವರ: ಪಿರ್ಯಾದಿದಾರರಾದ ದಿನೇಶ (40), ತಂದೆ: ಶಿವ ಪೂಜಾರಿ, ವಾಸ: ಹೊಸಹಿತ್ಲು, ಹಂದಾಡಿ ಗ್ರಾಮ ಬ್ರಹ್ಮಾವರ ತಾಲೂಕು ಇವರ ಅಣ್ಣ  ರಾಜು ಪೂಜಾರಿ (49) ಇವರಿಗೆ 15 ವರ್ಷಗಳಿಂದ ಮಾನಸಿಕ ಕಾಯಿಲೆಯಿದ್ದು ಈ ಬಗ್ಗೆ ಉಡುಪಿಯ ದೊಡ್ಡಣಗುಡ್ಡೆಯ ಬಾಳಿಗಾ  ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುತ್ತಿದ್ದು ಪ್ರಸುತ್ತ 5 ವರ್ಷಗಳಿಂದ  ಕೆಲಸಕ್ಕೆ ಹೋಗದೇ ಮನೆಯಲ್ಲಿರುವುದಾಗಿದೆ.  ವಾರಕ್ಕೊಮ್ಮೆ ಹೆಂಡತಿಯ ಮನೆಗೆ ಹೋಗಿ ಬರುತ್ತಿದ್ದು,  ದಿನಾಂಕ 02/12/2021 ರಂದು ಮಧ್ಯಾಹ್ನ 3:00 ಗಂಟೆಯಿಂದ ಮನೆಯಿಂದ ಹೊರಗೆ ಹೋಗಿದವರು ರಾತ್ರಿಯಾದರೂ  ಮನೆಗೆ ಬಂದಿರುವುದಿಲ್ಲ  ಈ ಬಗ್ಗ ಆತನ ಹೆಂಡತಿ ಮನೆಗೆ ಪೋನ್‌ಮಾಡಿ  ವಿಚಾರಿಸಿದಾಗ  ಅಲ್ಲಿಗೂ  ಹೋಗಿರುವುದಿಲ್ಲ , ಬಾರ್ಕೂರು, ಯಡ್ತಾಡಿ, ಬ್ರಹ್ಮಾವರ  ಕಡೆಗಳಲ್ಲಿ  ಹುಡುಕಾಡಿದಾಗ ಪತ್ತೆಯಾಗಿರುವುದಿಲ್ಲ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 197 /2021 ಕಲಂ: ಗಂಡಸು ಕಾಣೆಯಂತೆ ಪ್ರಕರಣ ದಾಖಲಾಗಿರುತ್ತದೆ.    

ಇತ್ತೀಚಿನ ನವೀಕರಣ​ : 04-12-2021 09:50 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080