ಅಭಿಪ್ರಾಯ / ಸಲಹೆಗಳು

ಕಳವು ಪ್ರಕರಣ

  • ಉಡುಪಿ ನಗರ : ಪಿರ್ಯಾದುದಾರರಾದ ರತ್ನಾಕರ ಪ್ರಾಯ 39 ವರ್ಷ ತಂದೆ: ಸದಾನಂದ ವಾಸ: 5-3-22ಎ, ಶ್ರೀ ಅಂಬಿಕಾ, ಪಾಂಡ್ಯ ನಿವಾಸ ಕಂಪೌಂಡ್, ಚಿಟ್ಪಾಡಿ ಇವರ ತಮ್ಮ ಗಣೇಶ್ ರವರು ಆರ್.ಸಿ ಮಾಲಕರಾಗಿರುವ HONDA DIO ದ್ವಿ-ಚಕ್ರ ವಾಹನ ನಂಬ್ರ: KA 47 V 0580 (Chassis No: ME4JF39HFJU003581, Engine No: JF39EU4012672) ನೇದನ್ನು ದಿನಾಂಕ 24/11/2021 ರಂದು ಪಿರ್ಯಾದುದಾರರು ಕೆಲಸದ ನಿಮಿತ್ತ ತೆಗೆದುಕೊಂಡು ಹೋಗಿದ್ದು, ಬೆಳಿಗ್ಗೆ 09:25 ಗಂಟೆಗೆ ಉಡುಪಿ ತಾಲೂಕು ಮೂಡನಿಡಂಬೂರು ಗ್ರಾಮದ ಶಿರಿಬೀಡು ಎಂಬಲ್ಲಿ ಕಿದಿಯೂರು ನಾಗಬನದ ಬಳಿ ರಸ್ತೆ ಬದಿಯಲ್ಲಿ ನಿಲ್ಲಿಸಿ, ದೇವರ ದರ್ಶನ ಪಡೆದು ವಾಪಾಸು ಬೆಳಿಗ್ಗೆ 09:40 ಗಂಟೆಗೆ ಬಂದು ನೋಡಲಾಗಿ, ದ್ವಿ-ಚಕ್ರ ವಾಹನ ಇಟ್ಟ ಜಾಗದಲ್ಲಿ ಇಲ್ಲದೆ ಇದ್ದು, ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು, ಕಳವಾದ ಮೋಟಾರ್ ಸೈಕಲ್ನ ಅಂದಾಜು ಮೌಲ್ಯ ರೂ. 50,000/- ಆಗಬಹುದು ಎಂಬಿತ್ಯಾದಿ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ  180/2021ಕಲಂ 379 IPC ಕಾಯ್ದೆ ಯಂತೆ ಪ್ರಕರಣ ದಾಖಲಿಸಲಾಗಿದೆ.

ಅಪಘಾತ ಪ್ರಕರಣ

  • ಹಿರಿಯಡ್ಕ: ಪಿರ್ಯಾದುದಾರರು ಪಿರ್ಯಾದುದಾರರು ಲವ ಕಾಂಚನ್ (63) ತಂದೆ: ತಬುರ ಮರಕಲ ವಾಸ: ಲಕ್ಷ್ಮಿ ನಿವಾಸ, ಪೊಲೀಸ್ ಕ್ವಾಟ್ರಸ್ ಬಳಿ ಅಂಜಾರು ಗ್ರಾಮ ಇವರು  ದಿನಾಂಕ: 02/12/2012 ರಂದು ತನ್ನ ದ್ವಿಚಕ್ರ ವಾಹನ ಕೆಎ-20-ಇಕೆ-2779  ನೇದರಲ್ಲಿ ತನ್ನ ಹೆಂಡತಿ ಸಂಜೀವಿ ಎಂ ಕಾಂಚನ್‌ ರವರನ್ನು  ಕರೆದುಕೊಂಡು  ಓಂತಿಬೆಟ್ಟುವಿನ ಶ್ರೀ ದುರ್ಗ ವಿನಾಯಕ ಜನರಲ್ ಸ್ಠೋರ್  ಅಂಗಡಿಗೆ ಮನೆಯ ಸಾಮಾನುಗಳನ್ನು ತರುವರೇ ಹೋಗಿದ್ದು ಸಮಾನುಗಳನ್ನು ತೆಗೆದುಕೊಂಡು ವಾಪಾಸು ಅಂಜಾರಿನಲ್ಲಲಿರುವ  ಮನೆ ಕಡೆಗೆ ಬರುತ್ತಿರುವಾಗ ಓಂತಿಬೆಟ್ಟು ಶ್ರೀ ದುರ್ಗಾ ಕಲ್ಯಾಣ ಮಂಟಪದ ಬಳಿ ತಲುಪುತ್ತಿರುವಾಗ ಸಮಯ ಸುಮಾರು ಸಂಜೆ 4:30 ಗಂಟೆಯ ಸಮಯಕ್ಕೆ ನನ್ನ   ಹಿಂದಿನಿಂದ ಒರ್ವ ಬಸ್ ಚಾಲಕನು ತನ್ನ ಬಸ್ಸ್ ನ್ನು ಅತೀವೇಗ ಹಾಗೂ ಅಜಾಗರೂಗಕತೆಯಿಂದ ಚಾಲಾಯಿಸಿಕೊಂಡು ಬಂದು ಹಿಂದಿಯಿಂದ ನನ್ನ ಸ್ಕೂಟರಿ ಬಲಬದಿಗೆ ಡಿಕ್ಕಿ ಹೊಡೆದನು. ಪರಿಣಾಮ ಪಿರ್ಯಾದಿದಾರರು ಮತ್ತು  ಹೆಂಡತಿ  ವಾಹನ ಸಮೇತ ರಸ್ತೆಗೆ ಬಿದ್ದೆವು  ಬಿದ್ದ ಪರಿಣಾಮ  ಬಲಕಾಲಿನ ಮೊಣಗಂಟಿಗೆ ಹಾಗೂ ಬಲಕೈ ಕೋಲುಕೈಗೆ ,  ಬಲ ಭುಜದ ಬಳಿ ತರಚಿದ ರಕ್ತಗಾಯವಾಗಿರುತ್ತದೆ. ಮತ್ತು ನನ್ನ ಹೆಂಡತಿಯಾದ ಶ್ರೀಮತಿ  ಸಂಜೀವಿಗೆ ಬಲಕಣ್ಣಿನ ಬಳಿ , ಬಲತಲೆ, ತಲೆಯ ಹಿಂಭಾಗ, ಹಾಗೂ ಬಲ ಭುಜಕ್ಕೆ ,ರಕ್ತಗಾಯವಾಗಿದ್ದು  ಹಾಗೂ  ಬಲಪಕ್ಕೆಯ ಬಳಿ ಗುದ್ದಿದ ಒಳ  ಜಖಂ ಆಗಿರುತ್ತದೆ, ಬಳಿಕ ಅಲ್ಲಿ ಸೇರಿದ ಸಾರ್ವಜನಿಕರು ಇವರನ್ನು ಚಿಕಿತ್ಸೆಯ ಬಗ್ಗೆ ಮಣಿಪಾಲ ಕೆಎಂಸಿ ಅಸ್ಪತ್ರೆಗೆ ಒಂದು  ಅಟೋ ರಿಕ್ಷಾದಲ್ಲಿ ಕಳುಹಿಸಿಕೊಟ್ಟಿರುತ್ತಾರೆ. ಅಪಘಾತಗೊಳಿಸಿದ ಬಸ್ಸಿನವರು ಬಸ್ ನಿಲ್ಲಿಸದೆ  ಪರಾರಿಯಾಗಿರುತ್ತಾರೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 64/2021 ಕಲಂ: 279 , 337  ಐಪಿಸಿ & 134 (ಎ)(ಬಿ)ಐಎಂವಿ ಕಾಯ್ದೆ ಯಂತೆ ಪ್ರಕರಣ ದಾಖಲಿಸಲಾಗಿದೆ.
  • ಕುಂದಾಪುರ: ದಿನಾಂಕ  03/12/2021   ರಂದು  ಸಂಜೆ ಸುಮಾರು 7:00 ಗಂಟೆಗೆ ಕುಂದಾಪುರ  ತಾಲೂಕಿನ,  ಬಳ್ಕೂರು ಗ್ರಾಮದ  ಶ್ರೀ ವಿಷ್ಣುಮೂರ್ತಿದೇವಸ್ಥಾನದ ಬಳಿ, ಎಸ್‌. ಹೆಚ್‌ 52 ರಸ್ತೆಯಲ್ಲಿ, ಆಪಾದಿತ ಕೌಶಿಕ್‌ ಎಂಬವರು KA05-KN-7384ನೇ ರಾಯಲ್‌‌ ಎನ್‌ಫಿಲ್ಡ್‌‌‌ ಹಿಮಾಲಯ  ಬುಲೆಟ್‌‌‌‌‌ನ್ನು ಕುಂದಾಪುರ ಕಡೆಯಿಂದ ಕಂಡ್ಲೂರು ಕಡೆಗೆ ಅತೀವೇಗ  ಹಾಗೂ ನಿರ್ಲಕ್ಷತನದಿಂದ ಸವಾರಿಮಾಡಿಕೊಂಡು  ಬಂದು,  ರಸ್ತೆಯಲ್ಲಿಬದಿಯಲ್ಲಿ ನಡೆದುಕೊಂಡು ಬರುತ್ತಿದ್ದ  ಪಿರ್ಯಾದಿದಾರರಾದ  ಶ್ರೀನಿವಾಸ  ಅಡಿಗ ಪ್ರಾಯ 72 ವರ್ಷ ತಂದೆ  ದಿ. ಲಕ್ಷ್ಮೀನಾರಾಯಣ  ಅಡಿಗ  ವಾಸ: ಯಳಂತೂರು, ಬೆಳ್ವೆ  ಗ್ರಾಮ, ಹೆಬ್ರಿ  ತಾಲೂಕು ಇವರಿಗೆ  ಡಿಕ್ಕಿ ಹೊಡೆದು, ಶ್ರೀನಿವಾಸ  ಅಡಿಗರವರ ಎರಡೂ ಕಾಲುಗಳಿಗೆ, ಎಡಕೈಗೆ ಮೂಳೆ ಮುರಿತವಾದ ಗಾಯ ಬಲಹಣೆ, ಕೆನ್ನೆಗೆ ತರಚಿದಗಾಯವಾಗಿದ್ದು,  ಆಲ್ಲದೇ  ಆಪಾದಿತನು ಗಾಯಗೊಂಡು ಕುಂದಾಪುರ  ಚಿನ್ಮಯಿ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ  ದಾಖಲಾಗಿರುತ್ತಾರೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 100/2021 ಕಲಂ 279, 338  IPC ಕಾಯ್ದೆ ಯಂತೆ ಪ್ರಕರಣ ದಾಖಲಿಸಲಾಗಿದೆ.
  • ಬ್ರಹ್ಮಾವರ:ಪಿರ್ಯಾದಿದಾರರು ರವಿಂದ್ರ ಪೂಜಾರಿ(35)ತಂದೆ:ಉಜ್ರಾಡಿ ಮನೆ ಅಲ್ಲಪಾದೆ ಪೋಸ್ಟ್‌‌ ಸಂಪಾಡಿ ಗ್ರಾಮ ಬಂಟ್ವಾಳ ತಾಲೂಕು ಇವರು ದಿನಾಂಕ: 03.12.2021ರಂದು ತಮ್ಮ ಜನನಿ ಇಲೆಕ್ಟ್ರಿಕಲ್‌ ಶೋರೂಮ್‌‌ನ ಎದುರು ನಿಂತುಕೊಂಡಿರುವಾಗ್ಗೆ ಅವರ ಎದುರಿನಿಂದ ಸುಮಾರು 55-60 ವರ್ಷ ಪ್ರಾಯದ ಒಬ್ಬ ವ್ಯಕ್ತಿಯು ನಡೆದುಕೊಂಡು ಹೋಗಿ ಬ್ರಹ್ಮಾವರದಿಂದ ಉಡುಪಿಗೆ ಹೋಗುವ ರಾಷ್ಟ್ರಿಯ ಹೆದ್ದಾರಿಯನ್ನು ದಾಟಿ ಡಿವೈಡರ್‌ ಮೇಲೆ ಹೋಗಿ ಸ್ವಾತ್ತ್ರಿ ಹೊಟೇಲ್‌ ಕಡೆಗೆ ಬರಲು ಡಿವೈಡರ್‌ ಕೆಳಗೆ ಬಂದು ರಸ್ತೆ ದಾಟಲು ನಿಂತುಕೊಂಡಿರುವಾಗ ಉಡುಪಿ ಕಡೆಯಿಂದ ಬ್ರಹ್ಮಾವರ ಕಡೆಗೆ ಕೆಎ 30 7509ನೇ ಈಚರ್‌ ಗೂಡ್ಸ್‌ ಲಾರಿಯನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಸ್ತೆ ದಾಟಲು ನಿಂತಿದ್ದ ವ್ಯಕ್ತಿಗೆ ಢಿಕ್ಕಿ ಹೊಡೆದಿದ್ದು, ಪರಿಣಾಮ ಸದ್ರಿ ಅಪರಿಚಿತ ವ್ಯಕ್ತಿಯು ರಸ್ತೆ ಬಿದ್ದು, ಆತನ ತಲೆಗೆ ತೀವ್ರ ಸ್ವರೂಪದ ಗಾಯವಾಗಿ ಹಾಗೂ ದೇಹದ ಇತರ ಕಡೆಗೆ ರಕ್ತಗಾಯವಾಗಿರುತ್ತದೆ. ಅವರನ್ನು ಪಿರ್ಯಾದಿದಾರರು ಹಾಗೂ ಇತರರು ಸೇರಿಕೊಂಡು ಚಿಕಿತ್ಸೆಯ ಬಗ್ಗೆ ಮಹೇಶ್‌ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲಿಸಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ  198 /2021 ಕಲಂ 279, 338 ಐಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.

ಇತ್ತೀಚಿನ ನವೀಕರಣ​ : 04-12-2021 06:19 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080