ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಬೈಂದೂರು: ಪಿರ್ಯಾದಿದಾರರಾದ ರಾಜು ನಾಯ್ಕ್ ತಂದೆ: ಹೆರಿಯ ನಾಯ್ಕ್ ವಾಸ: ಕಲ್ಮಡಿ ಮನೆ ಕಾಲ್ತೋಡು ಅಂಚೆ ಮತ್ತು ಗ್ರಾಮ ಬೈಂದೂರು ಇವರು ದಿನಾಂಕ 02/11/2022 ರಂದು ಸಂಜೆ 5:15 ಗಂಟೆಯ ಸುಮಾರಿಗೆ ಮನೆಯಾದ ಕಲ್ಮಾಠದಿಂದ KA-09 F-5029ನೇ ಕೆ ಎಸ್ ಆರ್ ಟಿ ಸಿ ಬಸ್ಸಿನಲ್ಲಿ ಕುಂದಾಪುರ ಕಡೆಗೆ ಪ್ರಯಾಣ ಮಾಡುತ್ತಿರುವಾಗ ಹೇರೂರು ಗ್ರಾಮದ ಯರುಕೋಣೆ ಕವಲ್ ಕೊಡ್ಲು ಬಳಿ ತಿರುವಿನಲ್ಲಿ ಬಸ್ ಚಾಲಕನು ಬಸ್ ನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ರಸ್ತೆಯ ತೀರಾ ಬಲಭಾಗಕ್ಕೆ ಬಂದು ಎದುರಿನಿಂದ ಬರುತ್ತಿದ್ದ ಭಾಸ್ಕರ ನಾಯ್ಕ್ ರವರ KA-20 EW-7179ನೇ ಮೋಟಾರು  ಸೈಕಲ್  ಗೆ ಢಿಕ್ಕಿ ಹೊಡೆದು, ಮೋಟಾರ್ ಸೈಕಲ್ ನ್ನು ಸುಮಾರು 10 ಅಡಿ ದೂರದವರೆಗೆ ನೂಕಲ್ಪಟ್ಟಿದ್ದು, ಪರಿಣಾಮ ಭಾಸ್ಕರ ನಾಯ್ಕ್ ರವರಿಗೆ ಕಾಲು ಮುರಿತಕ್ಕೊಳಗಾಗಿದ್ದು, ನಂತರ ಗಾಯಗೊಂಡ ಭಾಸ್ಕರ ನಾಯ್ಕ್ ರವರನ್ನು ಒಂದು ಖಾಸಗಿ ವಾಹನದಲ್ಲಿ ಚಿಕಿತ್ಸೆ ಬಗ್ಗೆ ಕರೆದುಕೊಂಡು ಹೋಗಿ ಕುಂದಾಪುರ ಚಿನ್ಮಯಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲು ಮಾಡಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 219/2022 ಕಲಂ. 279 , 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಬೈಂದೂರು: ಪಿರ್ಯಾದಿದಾರರಾಧ ಶೇಖರ (40), ನಾಗ ಖಾರ್ವಿ, ವಾಸ: ಗುಡ್ಡಿಮನೆ, ಆಕಳುಬೈಲು, ಕಿರಿಮಂಜೇಶ್ವರ ಗ್ರಾಮ, ಬೈಂದೂರು ಇವರು ದಿನಾಂಕ  02/11/2022 ರಂದು 20:30 ಗಂಟೆಗೆ ಅವರ ಪ್ರಿಷಾ ಡ್ರೆಸ್ ಸೆಂಟರ್ ನ್ನು ಮುಚ್ಚಿ  ಗಾಡಿಗೆ ಪೆಟ್ರೋಲ್ ಹಾಕಿಸುವ ಸಲುವಾಗಿ ನಾವುಂದ ಪೆಟ್ರೋಲ್ ಬಂಕ್ ಗೆ  ಹೋಗಲು ಅಂಡರ್ ಪಾಸ್ ಎಡಬದಿಯ ಸರ್ವಿಸ್  ರಸ್ತೆಯಲ್ಲಿ ಅಂದುಮಾಯ್ ರವರ ಮನೆಯ ಬಳಿ ಹೋಗುತ್ತಿರುವಾಗ   ಸುಮಾರು 20 ಮೀಟರ್ ದೂರದಲ್ಲಿ ಕೆಎ-20 ಈ ರ್-3880 ನೇ  ಸ್ಕೂಟಿಯಿಂದ  ಗಿರೀಶನು  ಬಿದ್ದಿರುವುದು ತಿಳಿದು, ಸದ್ರಿ ಸ್ಥಳಕ್ಕೆ ಹೋಗಿ ಪರಿಶೀಲಿಸಿದಾಗ ಶೇಖರ ರವರ ಪರಿಚಯದ ಪ್ರಶಾಂತ ದೇವಾಡಿಗನು  ಗಿರೀಶನನ್ನು ಸಹಸವಾರನನ್ನು ಕುಳ್ಳಿರಿಸಿಕೊಂಡು ನಾಗೂರಿನಿಂದ ನಾವುಂದಕ್ಕೆ ಬರುತ್ತಿರುವಾಗ  ನಾವುಂದ  ರಾ ಹೆ 66 ರ ಅಂಡರ್ ಪಾಸ್ ಎಡಬದಿಯ ಸರ್ವಿಸ್  ರಸ್ತೆಯಲ್ಲಿ ಅಂದುಮಾಯ್ ರವರ ಮನೆಯ ಬಳಿಯ ಸರ್ವಿಸ್ ರಸ್ತೆಯಲ್ಲಿದ್ದ ಹಂಪ್ಸ್ ನ ಬಳಿ ಪ್ರಶಾಂತ್ ದೇವಾಡಿಗನು ಆತನ ಸ್ಕೂಟಿಗೆ ತಕ್ಷಣಕ್ಕೆ ಬ್ರೇಕ್ ಹಾಕಿದ  ಪರಿಣಾಮ, ಹಿಂಬದಿಯಲ್ಲಿ ಕುಳಿತಿದ್ದ ಗಿರೀಶ ಹಾಗೂ ಸವಾರ ಪ್ರಶಾಂತ ಸ್ಕೂಟಿ ಸಮೇತ ರಸ್ತೆಯ ಬಲಬದಿಗೆ ಬಿದ್ದಿದ್ದು, ಗಿರೀಶನ ತಲೆಗೆ ರಸ್ತೆಗೆ  ಹೊಡೆದು ತೀವ್ರ ರಕ್ತಸ್ರಾವವಾಗಿದ್ದು, ಆತನನ್ನು ಶೇಖರ ರvರು  ಹಾಗೂ ಸ್ಥಳಿಯರು ಸೇರಿ ಎತ್ತಿಉಪಚರಿಸಿ ಒಂದು ಅಂಬುಲೆನ್ಸ್  ವಾಹನದಲ್ಲಿ  ಕುಂದಾಪುರ  ಚಿನ್ಮಯಿ ಆಸ್ಪತ್ರೆಗೆ  ಕರೆದುಕೊಂಡು  ಹೋಗಿದಲ್ಲಿ ಅಲ್ಲಿನ ವೈದ್ಯಾಧಿಕಾರಿಗಳು ಗಿರೀಶನಿಗೆ  ಹೆಚ್ಚಿನ ಚಿಕಿತ್ಸೆಯ ಅಗತ್ಯವಿರುವುದರಿಂದ  ಉಡುಪಿ ಆದರ್ಶ ಆಸ್ಪತ್ರೆಗೆ  ಕರೆದುಕೊಂಡು ಹೋಗುವಂತೆ  ತಿಳಿಸಿದ ಮೇರೆಗೆ ಗಿರೀಶನನ್ನು  ಉಡುಪಿ ಆದರ್ಶ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಯ ಬಗ್ಗೆ ಒಳರೋಗಿಯಾಗಿ ದಾಖಲಿಸಿದ್ದು, ಗಿರೀಶನು ಚಿಕಿತ್ಸೆಯಲ್ಲಿರುತ್ತಾ ದಿನಾಂಕ 03/11/2022 ರಂದು ಮದ್ಯಾಹ್ನ 2:15 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 218/2022 ಕಲಂ 279, 304(ಎ)  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಉಡುಪಿ: ದಿನಾಂಕ 02/11/2022 ರಂದು ಪಿರ್ಯಾದಿದಾರರಾಧ ಮುಸರ್ರತ್ ಜಹಾಂನ್ ಅಕ್ಬರ್.ಎಮ್(37) ವರ್ಷ, ಗಂಡ: ಉಸ್ತಾದ್ ಅಬ್ದುಲ್ ಕಯ್ಯೂಮ್, ವಾಸ: ದಾರುಸ್ಸಲಾಂ ಆಂಗ್ಲ ಮಾಧ್ಯಮ ಶಾಲೆಯ ಬಳಿ, ಹೂಡೆ ಅಂಚೆ, ಪಡುತೋನ್ಸೆ ಗ್ರಾಮ, ಉಡುಪಿ ಇವರ ಗಂಡನಾದ ಉಸ್ತಾದ್ ಅಬ್ದುಲ್ ಕಯ್ಯಾಮ್ ರವರು ಉಡುಪಿ ಸಿಟಿ ಬಸ್ಸು ನಿಲ್ದಾಣದಿಂದ KA-21 X-9878 ನೇ ಮೋಟಾರ್ ಸೈಕಲಿನಲ್ಲಿ ತನ್ನ ತಾಯಿ ಉಡುಪಿ ಹೈಟೆಕ್ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದವರನ್ನು ನೋಡಿಕೊಂಡು ಬರುವರೇ ಮೋಟಾರ್ ಸೈಕಲಿನಲ್ಲಿ ಕರಾವಳಿಯಿಂದ ಅಂಬಲಪಾಡಿ ಕಡೆಗೆ ಹಾದುಹೋಗಿರುವ ಸಾರ್ವಜನಿಕ ಡಾಮಾರು ಸರ್ವಿಸ್ ರಸ್ತೆಯಲ್ಲಿ ಬರುತ್ತಿರುವಾಗ ಸಮಯ ಸುಮಾರು ರಾತ್ರಿ 8:00 ಗಂಟೆಗೆ ಅಂಬಲಪಾಡಿ ಗ್ರಾಮದ ಅಕ್ಷಯಾ ವೇಬ್ರಿಡ್ಜ್ ಬಳಿ ತಲುಪುವಾಗ ಸರ್ವಿಸ್ ರಸ್ತೆಯಲ್ಲಿ KA-51 AG-2186 ನೇ ಲಾರಿಯನ್ನು ಅದರ ಚಾಲಕ ಚನ್ನಪ್ಪ ಎಂಬಾತನು ಮುಂಜಾಗ್ರತಾ ಕ್ರಮವಾಗಿ ಯಾವುದೇ ಪಾರ್ಕಿಂಕ್ ಲೈಟ್ ಅಳವಡಿಸದೇ ನಿಲ್ಲಿಸಿದ್ದ ಲಾರಿಯ ಹಿಂದುಗಡೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರ ಗಂಡನ ಎಡಭುಜದ ಬಳಿ ಮೂಳೆ ಮುರಿತದಗಂಬೀರ ಸ್ವರೂಪದ ಜಖಂ ಆಗಿದ್ದು ಅಲ್ಲದೇ ಎಡಕಾಲಿಗೆ ತರಚಿದ ರಕ್ತಗಾಯವಾಗಿರುತ್ತದೆ. ಈ ಬಗ್ಗೆ ಚಿಕಿತ್ಸೆಗಾಗಿ ಉಡುಪಿ ಹೈಟೆಕ್ ಆಸ್ಪತ್ರೆಗೆ ದಾಖಲಾಗಿರುವುದಾಗಿದೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 79/2022 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಬೈಂದೂರು: ಪಿರ್ಯಾದಿದಾರರಾಧ ನಜೀರ್  ಅಹಮ್ಮದ್ ಕರ್ನಾಚೆ  (32)  ಚಾಲಕ ಬಿಲ್ಲೆ ನಂಬ್ರ 1033  ಕುಂದಾಪುರ ಘಟಕ.  ಮಂಗಳೂರು ಇವರು ಕೆ ಎಸ್ ಆರ್ ಟಿ ಸಿ ಬಸ್ಸು ನಂಬ್ರ KA-09 F-5029ನೇದರಲ್ಲಿ ಚಾಲಕರಾಗಿ ಕೆಲಸ ಮಾಡಿಕೊಂಡಿದ್ದು, ದಿನಾಂಕ  02/11/2022 ರಂದು ಸಂಜೆ ಎಲ್ಲೂರಿನಿಂದ ಕುಂದಾಪುರಕ್ಕೆ ಹೊರಟು, ಬಸ್ಸನ್ನು ಚಲಾಯಿಸಿಕೊಂಡು ಬರುತ್ತಾ ಸಂಜೆ  05:35 ಗಂಟೆಗೆ ಹೇರೂರು ಗ್ರಾಮದ ಯರುಕೋಣೆ ಸಮೀಪ ತಲುಪುವಾಗ ಫಿರ್ಯದುದಾರರ ಎದುರಿನಿಂದ KA-20 EW-7179ನೇ ಮೋಟಾರು  ಸೈಕಲ್  ನ್ನು ಅದರ  ಸವಾರ   ಭಾಸ್ಕರ  ನಾಯ್ಕ ಎಂಬವರು ಅತೀ ವೇಗ ಹಾಗೂ  ಅಜಾಗರೂಕತೆಯಿಂದ  ಸವಾರಿ ಮಾಡಿಕೊಂಡು ಬಂದು ಬಸ್ಸಿನ  ಬಲಭಾಗಕ್ಕೆ  ಡಿಕ್ಕಿ ಹೊಡೆದು ಬಿದ್ದಿದ್ದು, ಮೋಟಾರ್ ಸೈಕಲ್ ಸವಾರ ಭಾಸ್ಕರ ನಾಯ್ಕರವರ ಬಲಕಾಲಿಗೆ ಪೆಟ್ಟಾಗಿರುತ್ತದೆ. ಗಾಯಗೊಂಡ ಭಾಸ್ಕರ ನಾಯ್ಕ್ ರವರನ್ನು ಚಿಕಿತ್ಸೆ ಬಗ್ಗೆ ಕುಂದಾಪುರ ಚಿನ್ಮಯಿ ಆಸ್ಪತ್ರೆಗೆ  ದಾಖಲಿಸಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 217/2022 ಕಲಂ. 279 , 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಶಂಕರನಾರಾಯಣ: ದಿನಾಂಕ 03/11/2022 ರಂದು ಬೆಳಿಗ್ಗೆ ಸುಮಾರು 11:00  ಘಂಟೆಗೆ  ಫಿರ್ಯಾದಿದಾರರಾಧ ರವಿಚಂದ್ರ  ಶೆಟ್ಟಿ  (23) ತಂದೆ,ಸದಾಶಿವ  ಶೆಟ್ಟಿ   ವಾಸ, ಕೆಳಪೇಟೆ  ಹಾಡಿಮನೆ  ಸಿದ್ದಾಪುರ ಗ್ರಾಮ ಕುಂದಾಪುರ ಇವರು ಕೆಎ-19 ಇಜಿ-1367  ನೇ   ನಂಬ್ರದ ಮೋಟಾರ್  ಸೈಕಲ್‌ನಲ್ಲಿ   ಕುಂದಾಪುರ ತಾಲೂಕಿನ ಸಿದ್ದಾಪುರ ಗ್ರಾಮದ ವರಾಹಿ  ಚಾನೆಲ್ ಬಳಿ ಅಮ್ಯಾಸೆಬೈಲ್ ಕಡೆಗೆ ಹೋಗುತ್ತಿರುವಾಗ   ಆರೋಪಿಯು ಎಪಿ-03 ಪಿಬಿ-1248  ನೇ ನಂಬ್ರದ ಜಲ್ಲಿ ಮಿಕ್ಸಿಂಗ್ ವಾಹನವನ್ನು ಅಮ್ಯಾಸೆಬೈಲ್  ಕಡೆಯಿಂದ ಸಿದ್ದಾಪುರ   ಕಡೆಗೆ  ಅತೀ ವೇಗ  ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು  ಬಂದು  ಮೋಟಾರ್  ಸೈಕಲ್‌ಗೆ ಡಿಕ್ಕಿ  ಹೊಡೆದಿರುತ್ತಾನೆ, ಇದರ ಪರಿಣಾಮ  ಮೋಟಾರ್  ಸೈಕಲ್  ಸವಾರರಾದ  ಫಿರ್ಯಾದುದಾರರು ಮೋಟಾರ್  ಸೈಕಲ್  ಸಮೇತ   ರಸ್ತೆಯ ಮೇಲೆ ಬಿದ್ದಿದ್ದು ಇದರಿಂದ  ಅವರ ಬಲಕಾಲು  ಹಾಗೂ  ಬಲಕೈಗೆ    ಮೂಳೆ ಮುರಿತದ  ಗಂಭೀರ ಸ್ವರೂಪದ ಗಾಯವಾಗಿರುವುದಾಗಿದೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 119/2022 ಕಲಂ. 279 , 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಗಂಡಸು ಕಾಣೆ ಪ್ರಕರಣ

  • ಬ್ರಹ್ಮಾವರ:  ಫಿರ್ಯಾದಿದಾರರಾದ ಸಂಗೀತಾ  (30), ಗಂಡ: ದಯಾನಂದ , ವಾಸ: ಬೃಂದಾವನ ಲಕ್ಷ್ಮೀ ನಗರ ಮೂಡುಕುಕ್ಕುಂಡೆ ಹಾರಾಡಿ ಗ್ರಾಮ, ಬ್ರಹ್ಮಾವರ  ಇವರ ಗಂಡ ದಯಾನಂದ ಎಂಬವರು ಇತ್ತೀಚಿಗೆ ವಿಪರೀತ ಶರಾಬು ಕುಡಿದು ಬಂದು ಮನೆಯಲ್ಲಿ ಗಲಾಟೆ ಮಾಡುತ್ತಿದ್ದು, ಅದೇ ರೀತಿ ದಿನಾಂಕ 30/10/2022 ರಂದು ರಾತ್ರಿ  ಅವರು ಶರಾಬು ಕುಡಿದು ಬಂದು ಸಂಗೀತಾ ಇವರಲ್ಲಿಹಾಗೂ ಮನೆಯವರಲ್ಲಿ ಗಲಾಟೆ ಮಾಡಿದ್ದು  ಈ ಬಗ್ಗೆ ದಿನಾಂಕ 01/11/2022 ರಂದು ಬ್ರಹ್ಮಾವರ ಪೊಲೀಸ್‌ ಠಾಣೆಯಲ್ಲಿ ಅವರ  ವಿರುದ್ದ ಸಂಗೀತಾ  (30), ಗಂಡ: ದಯಾನಂದ , ವಾಸ: ಬೃಂದಾವನ ಲಕ್ಷ್ಮೀ ನಗರ ಮೂಡುಕುಕ್ಕುಂಡೆ ಹಾರಾಡಿ ಗ್ರಾಮ, ಬ್ರಹ್ಮಾವರ ಸಂಗೀತಾ ಇವರು ದೂರು ಅರ್ಜಿ ನೀಡಿದ್ದು,  ನಂತರ ಅರ್ಜಿ ವಿಚಾರಣೆಯ ಬಗ್ಗೆ ದಯಾನಂದ ರವರು ಠಾಣೆಗೆ ಬಾರದೇ ಇದ್ದು,  ಅದೇ ದಿನ ಬೆಳಿಗ್ಗೆ 10:00 ಗಂಟೆಗೆ ದಯಾನಂದ ರವರು ಮನೆಯಿಂದ ಅವರ KA-20 EW-0300 ನೇ ಸ್ಕೂಟರನ್ನು  ತೆಗೆದುಕೊಂಡು ಹೋಗಿ ದೂಪದ ಕಟ್ಟೆಯ ರಸ್ತೆಯ ಬದಿಯಲ್ಲಿ ನಿಲ್ಲಿಸಿ  ಹೋದವರು  ಇದುವರೆಗೂ ಮನೆಗೆ ಬಾರದೇ  ಎಲ್ಲಿಯೂ ಪತ್ತೆಯಾಗದೇ  ಕಾಣೆಯಾಗಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 183/2022 ಕಲಂ : ಗಂಡಸು ಕಾಣೆಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 04-11-2022 09:49 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080