ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 • ಕೋಟ: ಪಿರ್ಯಾದಿದಾರರಾದ ಕಪಿಲ್ ರಾಜ್ (40), ತಂದೆ: ಕೆ.ಜಿ ಗೋಪಾಲಕೃಷ್ಣ ನಾಯರ್, ವಾಸ: ಕೀಚೇರಿಲಕ್ಕರೆ, ಚಾಮುಂಡಿಕುನ್ನ  ಅಂಚೆ, ರಾಜಪುರಂ ಕಾಸರಗೋಡು ಜಿಲ್ಲೆ ಕೇರಳ ರಾಜ್ಯ ಇವರು ಲಾರಿ KL-14-H-860 ರ ಚಾಲಕರಾಗಿದ್ದು ದಿನಾಂಕ 02/11/2021 ರಂದು ಸಂಜೆ 19:15 ಗಂಟೆ ಸಮಯಕ್ಕೆ ಕೋಟ ಆಶ್ರೀತಾ ನರ್ಸಿಂಗ್ ಕಾಲೇಜಿನ ಬಳಿ ಉಡುಪಿ ಕುಂದಾಪುರ ರಾಷ್ಟ್ರೀಯ ಹೆದ್ದಾರಿ 66 ರ ಎಡಬದಿ ರಸ್ತೆಬದಿಯಲ್ಲಿ ನಿಲ್ಲಿಸಿ  ಇನ್ನೊಂದು ಚಾಲಕ  ಅನೂಪ್ ನು ಲಾರಿಯ ಹಿಂದಿನ ಟಯರನ್ನು ಚೆಕ್ ಮಾಡುತ್ತಿದ್ದಾಗ ಪಿರ್ಯಾದಿದಾರರು ಲಾರಿಯ ಹಿಂಬದಿ ಇದ್ದು ಅದೇ ವೇಳೆಗೆ  ಸ್ಕೂಟಿ KA-47-K-6755  ರ ಸವಾರ ನಾಗೇಶ ದೇವಾಡಿಗ ಉಡುಪಿ ಕಡೆಯಿಂದ ಕುಂದಾಪುರ ಕಡೆಗೆ  ಸ್ಕೂಟಿಯನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಕಲಾಯಿಸಿಕೊಂಡು ಬಂದು ಅನೂಪ್ ರವರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಅನೂಪ್ ರಸ್ತೆಗೆ ಬಿದ್ದು ತಲೆಗೆ  ಬಲ ಕೈಗೆ  ತೀವ್ರ ತರಹದ ಗಾಯವಾಗಿ ಚಿಕಿತ್ಸೆಯ ಬಗ್ಗೆ ಉಡುಪಿ ಹೈಟೆಕೆ ಆಸ್ಪತ್ರೆಗೆ  ಒಳರೋಗಿಯಾಗಿ  ದಾಖಲಿಸಿರುವುದಾಗಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 185/2021 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಬ್ರಹ್ಮಾವರ: ದಿನಾಂಕ 02/11/2021 ರಂದು ಸಂಜೆ  6:30 ಗಂಟೆಗೆ ಪಿರ್ಯಾದಿದಾರರಾದ ಆಶೋಕ ಜತ್ತನ್ನ (42), ತಂದೆ: ದಿವಂಗತ ಶಿವ ಪೂಜಾರಿ, ವಾಸ: ಬೆಟ್ಟುಮನೆ ಕುದ್ರುಬೆಟ್ಟು, ಉಪ್ಪೂರು ಗ್ರಾಮ ಬ್ರಹ್ಮಾವರ ತಾಲೂಕು ಇವರು ಬ್ರಹ್ಮಾವರ ತಾಲೂಕು ಉಪ್ಪೂರು ಗ್ರಾಮದ  ಉಪ್ಪೂರು ಲಕ್ಷ್ಮೀ ಬಾರ್‌ಹತ್ತಿರ ಇರುವ  ಕಿರಣಿ ಅಂಗಡಿಯ ಬಳಿ ಇದ್ದಾಗ ಆರೋಪಿತೆ ರಮ್ಯಾ  ಎಂ. ಎನ್‌ ‌ತನ್ನ KA-20-ES-3031 ಯಮಹಾ  ಪ್ಯಾಸಿನೋ ಸ್ಕೂಟರ್‌‌‌ಯನ್ನು ರಾಷ್ಟ್ರೀಯ ಹೆದ್ದಾರಿ 66 ರ ಉಡುಪಿ - ಕುಂದಾಪುರ ಏಕ ಮುಖ ರಸ್ತೆಯಲ್ಲಿ ಉಡುಪಿ ಕಡೆಯಿಂದ ಬ್ರಹ್ಮಾವರ ಕಡೆಗೆ  ಅತೀ ವೇಗ  ಹಾಗೂ ಅಜಾಗರೂಕತೆಯಿಂದ ಆಕೆಯ ತೀರ ಎಡ ಭಾಗಕ್ಕೆ  ಸವಾರಿ ಮಾಡಿ ರಸ್ತೆಯ  ಪಕ್ಕದ  ಮಣ್ಣು ರಸ್ತೆಯಲ್ಲಿ ನಡೆದುಕೊಂಡು  ಹೋಗುತ್ತಿದ್ದ  ಜಗದೀಶ್‌ ಕೋಟ್ಯಾನ್‌ ‌ಎಂಬುವವರಿಗೆ ಡಿಕ್ಕಿ ಹೊಡೆದ ಪರಿಣಾಮ ಜಗದೀಶ ಕೋಟ್ಯಾನ್‌ ‌ಹಾಗೂ ಆರೋಪಿತೆ ಸ್ಕೂಟರ್‌ ಸಮೇತ ರಸ್ತೆಗೆ ಬಿದ್ದಿದ್ದು ಈ ಅಪಘಾತದಿಂದ ಜಗದೀಶ ಕೋಟ್ಯಾನ್‌‌‌ರವರ ಬಲಕಾಲಿನ ಕೋಲು ಕಾಲಿಗೆ ಮೂಳೆ ಮುರಿತದ ರಕ್ತ ಗಾಯವಾಗಿದ್ದು ಆರೋಪಿತೆಗೂ ಕೂಡಾ ಎಡಕಾಲಿಗೆ ತರಿಚಿದ ಗಾಯವಾಗಿರುತ್ತದೆ.  ಗಾಯಾಳು ಜಗದೀಶರವರನ್ನು ಚಿಕಿತ್ಸೆಯ ಬಗ್ಗೆ ಒಂದು ವಾಹನದಲ್ಲಿ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ. ಆರೋಪಿತೆಯು ಜಗದೀಶ ಕೋಟ್ಯಾನ್‌‌ರವರ ಚಿಕಿತ್ಸೆಯ ವೆಚ್ಚವನ್ನು ಕೊಡುವುದಾಗಿ ಹೇಳಿದ್ದು ಈಗ ಜಾಸ್ತಿ  ಹಣವಾಗುವುದರಿಂದ ಹಣ ನೀಡಲು ನಿರಾಕರಿಸಿದ ಕಾರಣ ದೂರ ನೀಡಲು ವಿಳಂಬವಾಗಿರುವುದಾಗಿ ನೀಡಿದ ದೂರಿನಂತೆ ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 184 /2021 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಕುಂದಾಪುರ: ದಿನಾಂಕ 03/11/2021 ರಂದು ಮಧ್ಯಾಹ್ನ 3:40 ಗಂಟೆಗೆ ಕುಂದಾಪುರ ತಾಲೂಕು ತಲ್ಲೂರು ಗ್ರಾಮದ ಕುಂತಿಯಮ್ಮ ದೇವಸ್ಥಾನದ ಬಳಿ ತಲ್ಲೂರು- ನೇರಳಕಟ್ಟೆ ರಸ್ತೆಯಲ್ಲಿ ಆಪಾದಿತ ವಿಘ್ನೇಶ ಕುಂದಾಪುರ ಕಡೆಯಿಂದ ನೇರಳಕಟ್ಟೆ ಕಡೆಗೆ KA-20-AA-6237  ನೇ ಬಸ್ಸನ್ನು ಅತೀವೇಗ ಹಾಗೂ ನಿರ್ಲಕ್ಷತನದಿಂದ  ರಸ್ತೆಯ ಬಲಬದಿಗೆ ಚಲಾಯಿಸಿ ನೇರಳಕಟ್ಟೆ ಕಡೆಯಿಂದ ಕುಂದಾಪುರ ಕಡೆಗೆ ರವೀಂದ್ರ ಶೆಟ್ಟಿಯವರು ಚಲಾಯಿಸುತ್ತಿದ್ದ KA-20-AA-6810 ನೇ ಆಟೋರಿಕ್ಷಾಕ್ಕೆ ಡಿಕ್ಕಿ ಹೊಡೆದ ಪರಿಣಾಮ  ಆಟೋರಿಕ್ಷಾ ಚಾಲಕ ರವೀಂದ್ರ  ಹಾಗೂ ಆಟೋರಿಕ್ಷಾದಲ್ಲಿ ಇದ್ದ ಪ್ರಯಾಣಿಕರಾದ ಪ್ರಶಾಂತ, ವಿಶಾಲಾಕ್ಷಿ @ ಚಿಕ್ಕಮ್ಮ , ಸುಶೀಲ ಎಂಬುವವರಿಗೆ ಸಾದ ಮತ್ತು ಗಂಭೀರ ಸ್ವರೂಪದ  ಗಾಯ ಉಂಟಾಗಿದ್ದು ಚಿಕಿತ್ಸೆಗೆ ಕುಂದಾಪುರ ಆದರ್ಶ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 87/2021 ಕಲಂ: 279, 337, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

 • ಕಾಪು: ಪಿರ್ಯಾದಿದಾರರಾದ ಜ್ಯೋತಿ ಎಸ್ ಪೂಜಾರಿ (36), ಗಂಡ: ಸುಬ್ರಮಣ್ಯ ಪೂಜಾರಿ, ವಾಸ: ಶ್ರೀ ಕಲ್ಯಾಣಿ ನಿವಾಸ, ಉಳಿಯಾರು ಮಜೂರು ಗ್ರಾಮ ಕಾಪು ತಾಲೂಕು ಉಡುಪಿ ಜಿಲ್ಲೆ ಇವರ ತಂದೆ ಜಯಕರ ಪೂಜಾರಿ (71) ಮತ್ತು ತಾಯಿಯ ಅಣ್ಣ ರಾಘು ಪೂಜಾರಿ ರವರು ಮಜೂರು ಗ್ರಾಮ ಮಾತೃಛಾಯ ಪಿಲಿಚಂಡಿ-ಬೆಟ್ಟು ಎಂಬಲ್ಲಿ ವಾಸವಾಗಿದ್ದು ಪಿರ್ಯಾದಿದಾರರ  ತಂದೆಯವರಿಗೆ 2 ತಿಂಗಳ ಹಿಂದೆ ಕಾಲುನೋವು ಮತ್ತು ತಲೆಯಲ್ಲಿ ರಕ್ತ ಹೆಪ್ಪುಗಟ್ಟಿದ್ದು ಈ  ಬಗ್ಗೆ  ಉಡುಪಿ ಸರ್ಕಾರಿ ಆಸ್ಪತ್ರೆಯಲ್ಲಿ  ಚಿಕಿತ್ಸೆ ಕೊಡಿಸಿದ್ದು, ಪಿರ್ಯಾದಿದಾರರ ತಾಯಿ ಲಲಿತರವರು  ಕಳೇದ ಮೇ ತಿಂಗಳಲ್ಲಿ  ಕೋರೋನಾ ಕಾಯಿಲೆಯಿಂದ  ಮೃತಪಟ್ಟಿರುವುದಾಗಿದೆ. ದಿನಾಂಕ 03/11/2021 ರಂದು ಸಂಜೆ ಸ್ಥಳೀಯರೋಬ್ಬರು ಪಿರ್ಯಾದಿದಾರರಿಗೆ  ಫೋನ್ ಮಾಡಿ ನಿಮ್ಮ  ತಂದೆಯವರು ಇದ್ದ ಮನೆಯ ಕೊಟ್ಟಿಗೆಯ ಮಾಡಿನ ಪಕ್ಕಾಸಿಗೆ ನೈಲಾನ್  ಹಗ್ಗವನ್ನು  ಕಟ್ಟಿಕೊಂಡು ಇನ್ನೊಂದು  ತುದಿಯನ್ನು  ಕುತ್ತಿಗೆಗೆ ನೇಣು ಬಿಗಿದುಕೊಂಡು ಮಾತನಾಡದೇ ಸ್ಥೀತಿಯಲ್ಲಿದ್ದು ನೀವು ಕೂಡಲೇ ಬರಲು ತಿಳಿಸಿದಂತೆ ಪಿರ್ಯಾದಿದಾರರು ಕೂಡಲೇ ಹೊರಟು ಬಂದು ಸ್ಥಳೀಯರೊಂದಿಗೆ ನೋಡುವಾಗ ಪಿರ್ಯಾದಿದಾರರ ತಂದೆಯವರು ನೇತಾಡುವ ಸ್ಥೀತಿಯಲ್ಲಿದ್ದು ಮೃತ ಪಟ್ಟಿರುವುದಾಗಿ ತಿಳಿಯಿತು. ಪಿರ್ಯಾದಿದಾರರ  ತಂದೆಯವರಿಗೆ ಕಾಲುನೋವು  ಮತ್ತು ತಲೆಯಲ್ಲಿ  ರಕ್ತ ಹೆಪ್ಪುಗಟ್ಟುವ ಕಾಯಿಲೆ ಇದ್ದು, ಅಲ್ಲದೇ ಅವರ ಹೆಂಡತಿ ಸಹ ತೀರಿ ಹೋಗಿರುವುದರಿಂದ ಜೀವನದಲ್ಲಿ  ಜಿಗುಪ್ಸೆಗೊಂಡು ನೇಣು ಬಿಗಿದುಕೊಂಡು ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 39/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

 • ಕೋಟ: ಪಿರ್ಯಾದಿದಾರರಾದ ಮಂಜುನಾಥ (55), ತಂದೆ: ದಿ. ಬಚ್ಚ  ಪೂಜಾರಿ, ವಾಸ: ಗೆಂಡೆಕೆರೆ, ಸಾಲಿಗ್ರಾಮ, ಪಾರಂಪಳ್ಳಿ  ಗ್ರಾಮ ಬ್ರಹ್ಮಾವರ ತಾಲೂಕು ಇವರು ಗಾರೆ ಕೆಲಸ ಮಾಡಿಕೊಂಡಿದ್ದು ಅವರ ಜೊತೆ ಮಂಜುನಾಥ (35) ರವರು ಹೆಲ್ಪರ್ ಆಗಿ ಕೆಲಸ ಮಾಡಿಕೊಂಡಿರುತ್ತಾರೆ. ದಿನಾಂಕ 03/11/2021 ರಂದು ಕೋಟತಟ್ಟು ಗ್ರಾಮದ ಪಡುಕೆರೆಯಲ್ಲಿರುವ ರಾಜಶೇಖರ ಹಂದೆರವರ ಮನೆಯಲ್ಲಿ  ಪಿರ್ಯಾದಿದಾರರು, ಮಂಜುನಾಥ, ಸತೀಶ , ಜೋಗಣ್ಣ ರವರ ಜೊತೆ  ಗಾರೆ ಕೆಲಸ ಮಾಡುವಾಗ ಬೆಳಿಗ್ಗೆ 11:00 ಗಂಟೆಗೆ ಪಿರ್ಯಾದಿದಾರರು ಮತ್ತು ಇತರರು ಮನೆಯ ಒಳಗೆ ಕೆಲಸ ಮಾಡಿಕೊಂಡಿದ್ದು ಮಂಜುನಾಥ ಮನೆಯ ಶೀಟ್ಔಟ್ನ ಹೊರಭಾಗದಲ್ಲಿ ಸಿಮೆಂಟ್ ಮಿಕ್ಸ್ ಮಾಡಿಕೊಂಡಿರುವಾಗ ಮನೆಯ ಮೇಲೆ ಹಾಕಿದ ಸ್ಲ್ಯಾಬ್ ಕುಸಿದು ಮಂಜುನಾಥನ  ಮೇಲೆ ಬಿದ್ದಿರುತ್ತದೆ.  ಅಲ್ಲದೇ ಸ್ಲ್ಯಾಬ್ ನ ಮೇಲೆ ಕೆಲಸ ಮಾಡುತ್ತಿದ್ದ ಚೇತನ್ ಕೂಡ ಕೆಳಗೆ ಬಿದ್ದಿದ್ದು, ಸ್ಲ್ಯಾಬ್ ನ ಅಡಿ ಸಿಲುಕಿದ್ದ ಮಂಜುನಾಥನನ್ನು ಹೊರತೆಗೆದಾಗ ಸ್ವಲ್ಪ ಉಸಿರಾಡುತ್ತಿದ್ದು  ತಲೆ ಸಂಪೂರ್ಣ ಗಾಯಗೊಂಡು ರಕ್ತ ಸುರಿಯುತ್ತಿತ್ತು ಚೇತನ್ ಗೆ ಕಾಲಿನ ಮೂಳೆ ಮುರಿತದ ಗಾಯವಾಗಿರುತ್ತದೆ.  ಕೂಡಲೇ ಅಂಬ್ಯುಲೆನ್ಸ್ ನಲ್ಲಿ ಮಣಿಪಾಲ ಕೆ.ಎಂ.ಸಿ ಗೆ  ಕರೆದುಕೊಂಡು ಹೋದಲ್ಲಿ ಮಂಜುನಾಥ ರವರನ್ನು 12:05 ಗಂಟೆಗೆ ಪರೀಕ್ಷೀಸಿದ ವೈದ್ಯರು ಅದಾಗಲೇ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಚೇತನ್ ರವರನ್ನು  ಒಳರೋಗಿಯಾಗಿ  ದಾಖಲಿಸಿಕೊಂಡಿರುತ್ತಾರೆ. ಈ ಅವಘಡಕ್ಕೆ ಗುತ್ತಿಗೆದಾರರಾದ ಅಶೋಕ್ ಪೂಜಾರಿ ಸರಿಯಾಗಿ ಕಾಮಗಾರಿ ಮಾಡದೇ ಹಾಗೂ ಮೇಲುಸ್ತುವಾರಿಯಾದ  ಇಂಜಿನಿಯರ್ ಅನಂತ ಶಾಸ್ತ್ರೀಯವರ ನಿರ್ಲಕ್ಷತನವೇ ಕಾರಣವಾಗಿರುವುದಾಗಿ ನೀಡಿದ ದೂರಿನಂತೆ ಕೋಟ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 184/2021 ಕಲಂ: 304(A) ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಉಡುಪಿ: ಪಿರ್ಯಾದಿದಾರರಾದ ಮಹೇಶ. ಹೆಚ್. ಎನ್ (45), ತಂದೆ: ನರಸಿಂಹ ಆಚಾರ್ಯ, ವಾಸ: ವಿ.ಪಿ ಪ್ಯಾಲೇಸ್, ಗೋಪಾಲಪುರ, ಸಂತೆಕಟ್ಟೆ, ಅಂಚೆ, ಪುತ್ತೂರು ಗ್ರಾಮ ಉಡುಪಿ ತಾಲೂಕು ಮತ್ತು ಜಿಲ್ಲೆ ಇವರು ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ಗುಂಡಿಬೈಲ್ ನಲ್ಲಿರುವ ರಸಿಕ ಬಾರ್ ಆ್ಯಂಡ್ ರೆಸ್ಟೋರೆಂಟ್ ವ್ಯವಹಾರ ನಿರ್ವಹಿಸಿಕೊಂಡಿದ್ದು, ದಿನಾಂಕ 03/11/2021 ರಂದು 17:30 ಗಂಟೆಗೆ ಆರೋಪಿ ರಾಕೇಶ್ @ ರಾಕಿ ಎಂಬಾತ ಇತರ ಇಬ್ಬರು ಆರೋಪಿಗಳೊಂದಿಗೆ ಸೇರಿಕೊಂಡು ಪಿರ್ಯಾದಿದಾರರನ್ನು ಹಾಗೂ ಅವರ ಕೆಲಸಗಾರರಾದ ವಾಲ್ಟರ್ ಡಿಸೋಜ, ಶರಣಪ್ಪ ಎಂಬುವವರಿಗೆ ಬಿಯರ್ ಬಾಟಲಿಯಿಂದ ಕೊಲೆ ಮಾಡುವ ಉದ್ದೇಶದಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿರುವುದಾಗಿದೆ. ಪಿರ್ಯಾದಿದಾರರಿಗೆ ಬಲ ಹಣೆಗೆ, ವಾಲ್ಟರ್ ಡಿಸೋಜಾಗೆ ಬಲಕೈ ಮೂಳೆ ಮುರಿತ, ಶರಣಪ್ಪ ರವರಿಗೆ ಬಲಗೈ ಮೊಣಗಂಟಿಗೆ ಗಾಯವಾಗಿದ್ದು ಚಿಕಿತ್ಸೆಗೆ ಉಡುಪಿ ಗಾಂಧಿ ಆಸ್ಪತ್ರೆ ದಾಖಲಾಗಿರುವುದಾಗಿ ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 159/2021 ಕಲಂ: 307 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.     

ಇತ್ತೀಚಿನ ನವೀಕರಣ​ : 04-11-2021 10:26 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080