ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕಾರ್ಕಳ: ಪಿರ್ಯಾದಿದಾರರಾದ ಪ್ರೆಸಿಲ್ಲಾಡಿ ಮೆಲ್ಲೋ, (36) ಗಂಡ: ಅನಿಲ್ ಡಿ ಮೆಲ್ಲೋ, ವಾಸ: ಸ್ವೀಟ್ ವಿಲ್ಲಾ, ಜೋಡು ಕಟ್ಟೆ, ಸುರೇಖಾನಗರ, ಮಿಯಾರು ಗ್ರಾಮ, ಕಾರ್ಕಳ ಇವರು ದಿನಾಂಕ 03/10/2022 ರಂದು KA-20 EU-6279 ನೇ ನೋಂದಣಿ ಸಂಖ್ಯೆಯ ಹೋಂಡಾ ಮ್ಯಾಟ್ರಿಕ್ಸ್ ಕಂಪೆನಿಯ ದ್ವಿಚಕ್ರ ವಾಹನವನ್ನು ಹೆಲ್ಮೆಟ್ ಧರಿಸಿಕೊಂಡು ಪಡುಬಿದ್ರೆ ಕಡೆಯಿಂದ ಬಜಗೋಳಿ ಕಡೆಗೆ ಸಾಗಿರುವ ಸಾರ್ವಜನಿಕ ರಸ್ತೆಯಲ್ಲಿ ಸವಾರಿ ಮಾಡಿಕೊಂಡು ಸಮಯ ಸುಮಾರು ಬೆಳಗ್ಗೆ 10:10 ಗಂಟೆಗೆ ಕಾರ್ಕಳ ತಾಲೂಕು ಸಾಣೂರು ಗ್ರಾಮದ ಪುಲ್ಕೇರಿ ಬೈಪಾಸ್ ಬಳಿ ತಲುಪಿದಾಗ ಮೂಡುಬಿದ್ರೆಯಿಂದ ಕಾರ್ಕಳ ಕಡೆಗೆ KA-70 H-5785 ನೇ ನೋಂದಣಿ ಸಂಖ್ಯೆಯ ಮೋಟಾರ್ ಸೈಕಲ್ ಸವಾರ ವಿಜೀತ್ ಎಂಬಾತನು ಚರಣ (20) ರವರನ್ನು ಸಹಸವಾರನನ್ನಾಗಿ ಕುಳ್ಳಿರಿಸಿಕೊಂಡು ಅತೀ ವೇಗ ಹಾಗೂ ನಿರ್ಲಕ್ಷತನದಿಂದ ಮೋಟಾರ್ ಸೈಕಲ್ ನ್ನು ಸವಾರಿ ಮಾಡಿಕೊಂಡು ಬಂದು ದ್ವಿ ಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ದ್ವಿ ಚಕ್ರ ವಾಹನ ಸಮೇತ ಜಾರಿಕೊಂಡು ಹೋಗಿ ಡಾಮಾರು ರಸ್ತೆಗೆ ಬಿದ್ದಿದ್ದು, ಈ ಅಪಘಾತದಿಂದ ಪ್ರೆಸಿಲ್ಲಾಡಿ ಮೆಲ್ಲೋ ರವರ ಎಡಕೈ ತೋಳಿನ ಭುಜದ ಮೂಳೆ ಮುರಿತಗೊಂಡು, ಎಡಹಣೆಗೆ, ಎರಡು ಕಾಲುಗಳ ಮಂಡಿಯ ಬಳಿ ತರಚಿದ ಗಾಯವಾಗಿರುತ್ತದೆ.ಹಾಗೂ ಮೋಟಾರ್ ಸೈಕಲ್ ಸವಾರ ವಿಜೀತ್ ಎಂಬಾತನಿಗೆ ಎರಡು ಕೈ ಬೆರಳಿಗೆ, ಎರಡು ಕಾಲಿಗೆ ತರಚಿದ ಗಾಯವಾಗಿದ್ದು, ಸಹಸವಾರ ಚರಣ ಎಂಬಾತನಿಗೆ ಬಲಕೈ ಮೊಣಗಂಟಿನ ಬಳಿ, ಎಡಕೈ ಬೆರಳಿನ ಬಳಿ, ಎಡಕಾಲಿನ ಬೆರಳಿಗೆ, ಬಲಕಾಲಿನ ಗಂಟಿನ ಬಳಿ ತರಚಿದ ಗಾಯವಾಗಿರುತ್ತದೆ. ಚಿಕಿತ್ಸೆ ಬಗ್ಗೆ ಸ್ಪಂದನಾ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲು ಮಾಡಿರುವುದಾಗಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 129/2022 ಕಲಂ  279,337,338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಸುಲಿಗೆ ಪ್ರಕರಣ

  • ಉಡುಪಿ: ಪಿರ್ಯಾದಿದಾರರಾದ ಶ್ರೀಮತಿ  ಪ್ರೇಮಾ  ಶೇಣವ, (62) ಗಂಡ:  ದಿ||  ಗಣೇಶ  ಶೇಣವ ವಾಸ:  ಫ್ಲ್ಯಾಟ್‌ನಂ: 003, ಸಾಯಿರಾಧಾ  ನೆಸ್ಟ್‌, ಎ ವಿಂಗ್‌ ಎಂಜಿಎಂ ಗ್ರೌಂಡ್‌ಹಿಂಭಾಗ,  ಕುಂಜಿಬೆಟ್ಟು  ಅಂಚೆ, ಶಿವಳ್ಳಿ  ಗ್ರಾಮ,  ಉಡುಪಿ ಇವರು ದಿನಾಂಕ 03/10/2022 ರಂದು ಸಂಜೆ ಕಡಿಯಾಳಿ ಮಹಿಷಮರ್ಧಿನಿ ದೇವಸ್ಥಾನಕ್ಕೆ ಹೋಗಿ, ವಾಪಾಸು ಮನೆ ಕಡೆಗೆ ಒಬ್ಬರೇ ನಡೆದುಕೊಂಡು ಹೋಗುವಾಗ 20:15 ಗಂಟೆಗೆ ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ಎಂಜಿಎಂ ಕಾಲೇಜು ಮೈದಾನದ ಗೇಟಿನ ಎದುರು ತಲುಪುವಾಗ ಅಂದಾಜು 25 ರಿಂದ 30 ವರ್ಷ ಪ್ರಾಯದ ಓರ್ವ ಅಪರಿಚಿತ ಯುವಕನು ಏಕಾಏಕಿ ಹಿಂದಿನಿಂದ ಬಂದು ಶ್ರೀಮತಿ  ಪ್ರೇಮಾ  ಶೇಣವ ರವರನ್ನು ಕೈಗಳಿಂದ ಗಟ್ಟಿಯಾಗಿ ಹಿಡಿದು, ಅವರ ಕುತ್ತಿಗೆಗೆ ಕೈ ಹಾಕಿ, ಕುತ್ತಿಗೆಯಲ್ಲಿದ್ದ ಅಂದಾಜು 50 ಗ್ರಾಂ ತೂಕದ ಚಿನ್ನದ ಪಕಳದ ಸರವನ್ನು ಸುಲಿಗೆ ಮಾಡಿಕೊಂಡು ಹೋಗಿದ್ದು, ಸುಲಿಗೆಯಾದ ಚಿನ್ನದ ಸರದ ಮೌಲ್ಯ ರೂ. 2,30,000/- ಆಗಬಹುದುದಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 147/2022 ಕಲಂ: 392 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಕಾಪು: ಪಿರ್ಯಾದಿದಾರರಾಧ ಶೈಲೇಶ್ (35) ತಂದೆ:ದಿ!ಜಗದೀಶ್‌  ವಾಸ: ಶರಣಂ ನಿಲಯ, ದೆಂದೂರು ಕಟ್ಟೆ,  ಇಂದ್ರಾಳಿ ತೋಟ, ಮಣಿಪುರ ಗ್ರಾಮ,ಉಡುಪಿ ಇವರ ತಾಯಿ ಗೌರಿ ಪೂಜಾರ್ತಿರವರು ಮಣಿಪಾಲ ಕೆ.ಎಂ. ಸಿ ಆಸ್ಪತ್ರೆಯಲ್ಲಿ ಹೌಸ್‌ ಕೀಪಿಂಗ್‌ ಕೆಲಸ ಮಾಡಿಕೊಂಡಿದ್ದು ಕಳೆದ ಹಲವು ವಷ೯ಗಳಿಂದ ಉಬ್ಬಸ ಕಾಯಿಲೆಯಿಂದ ಬಳಲುತ್ತಿದ್ದರು. ಈ ದಿನ ಕೆಲಸಕ್ಕೆ ರಜೆ ಇದ್ದು ಮನೆಯಲ್ಲಿಯೇ ಇದ್ದವರು ಮನೆ ಸಮೀಪದ ಸಂಬಂದಿಕರ ಮನೆಯಲ್ಲಿನ ಪೂಜಾ ಕಾಯ೯ಕ್ರಮಕ್ಕೆ ಹೋಗಿ ಮನೆಗೆ ಮರಳಿ ಬರುವಾಗ  ಸಂಜೆ ಸುಮಾರು 15:45 ಗಂಟೆಗೆ  ಸಮೀಪ ಬಿದ್ದಿರುವುದನ್ನು, ಶೈಲೇಶ್ ರವರ ಮೊಬೈಲ್‌ಗೆ  ಅವರ ಮನೆ ಸಮೀಪದ ರಚನಾ ಎಂಬವರು ಕರೆಮಾಡಿ ತಿಳಿಸಿದ್ದು,ಶೈಲೇಶ್ ರವರು ಹಾಗೂ ಅವರ ತಮ್ಮ ಸೇರಿ ಮಣಿಪಾಲ ಕೆ.ಎಂ. ಸಿ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ಅಲ್ಲಿ ಪರೀಕ್ಷಿಸಿದ ವೈಧ್ಯರು ಗೌರಿ ಪೂಜಾರ್ತಿರವರು ಈಗಾಗಲೇ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ.  ಗೌರಿ ಪೂಜಾತಿ೯ರವರು  ತನಗಿದ್ದ ಉಬ್ಬಸ ಕಾಯಿಲೆಯಿಂದ ಅಥವಾ ಇನ್ಯಾವುದೋ ಕಾರಣದಿಂದ ದಿನಾಂಕ 03/10/2022 ರಂದು 15:45  ಗಂಟೆಯಿಂದ 03/10/2022 ರಂದು 16:45 ಗಂಟೆಯ ಮಧ್ಯಾವಧಿಯಲ್ಲಿ ಮೃತಪಟ್ಟಿದ್ದು ಮೃತರ ಮರಣದಲ್ಲಿ ಬೇರೆ ಯಾವುದೇ  ಸಂಶಯ ಇರುವುದಿಲ್ಲವಾಗಿದೆ. ಈ ಬಗ್ಗೆ ಕಾಪು ಪೊಲೀಸ್‌ ಠಾಣಾ ಯು.ಡಿ.ಆರ್‌ ಕ್ರಮಾಂಕ 30/2022 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.    

ಇತರ ಪ್ರಕರಣ

  • ಹಿರಿಯಡ್ಕ: ಪಿರ್ಯಾದಿದಾರರಾದ ಸುವಾಸಿನಿ (62) ಗಂಡ: ದಿ|| ಸದಾನಂದ ಪೂಜಾರಿ ವಾಸ: ಶ್ರೀ ಪ್ರಸಾದ್ , ಕುದಿ-82, ಹಿರಿಯಡ್ಕ ಇವರ ನೆರೆಮನೆಯ ಬಾಲಕೃಷ್ಣ ಕಾಮತ್ ಎಂಬರವರಿಗೂ ಜಾಗದ ವಿಚಾರದಲ್ಲಿ ತಕರಾರು ಇದ್ದು ದಿನಾಂಕ 02/10/2022 ರಂದು ಸಯಾಂಕಾಲ 6:30 ಗಂಟೆಗೆ ಪ್ರಕಾಶ್ ಕಾಮತ್, ಬಾಲಕೃಷ್ಣ , ಪ್ರಶಾಂತ್, ಸುನೀತಾ  ಮತ್ತು ಜ್ಯೋತಿ, ಎಂಬವರು ಪಿರ್ಯಾದುದಾರರ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ  ತೆಂಗಿನ ಮರಕ್ಕೆ ಹಾಕಿದ ಸೊಪ್ಪುಗಳನ್ನು ಬಿಸಾಡಿದ್ದು ಸುವಾಸಿನಿ ಇವರು ಪುನಃ  ಸೊಪ್ಪುಗಳನ್ನು ತಂದು ಮರದ ಬುಡಕ್ಕೆ ಹಾಕಿದ್ದು  ನಂತರ ರಾತ್ರಿ 8:30 ಗಂಟೆಗೆ ಅಪಾದಿತರು ಸಮಾನ ಉದ್ದೇಶದಿಂದ  ಪುನಃ ಸುಹಾಸಿನಿ ರವರ ಜಾಗಕ್ಕೆ  ಅಕ್ರಮ ಪ್ರವೇಶ ಮಾಡಿ ತೆಂಗಿನ ಮರಕ್ಕೆ ಹಾಕಿದ ಸೊಪ್ಪುಗಳನ್ನು ಬಿಸಾಡಿದ್ದು  ಸುಹಾಸಿನಿ ರವರು ಅಕ್ಷೇಪಿಸಿದಕ್ಕೆ  ಅವಾಚ್ಯ ಶಬ್ದಗಳಿಂದ ಬೈದು ನಿಮ್ಮನ್ನು ಕೊಂದು ಹಾಕುತ್ತೇನೆ ಎಂದು ಬೆದರಿಸಿ  ಸುಹಾಸಿನಿ ರವರನ್ನುಕೈಯಿಂದ ದೂಡಿ ,ಬಾಲಕೃಷ್ಣ ಕಾಮತ್ ಮತ್ತು ಪ್ರಕಾಶ್ ಕೈಯಿಂದ ಗುದ್ದಿ, ಕಾಲಿನಿಂದ ತುಳಿದು ಮಾನಹಾನಿ ಉಂಟುಮಾಡಿರುವುದಾಗಿದೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 56/2022 ಕಲಂ: 354, 323,324,447, 341, 504,506, ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಪಡುಬಿದ್ರಿ: ಪಿರ್ಯಾದಿದಾರರಾದ ಕಿರಣ್ ರಾಜ್ ಕರ್ಕೆರ, (31), ತಂದೆ: ದಿ. ಸೇಸಪ್ಪ ಜಿ ಸಾಲ್ಯಾನ್, ವಾಸ: # 10/29 ಎ, ಶಾಂತಾ ನಿವಾಸ, ಬೀಚ್‌‌ ರೋಡ್, ನಡಿಪಟ್ಣ, ನಡ್ಸಾಲು ಗ್ರಾಮ, ಕಾಪು ಇವರು ಪಡುಬಿದ್ರಿ ಬ್ಲ್ಯೂ ಫ್ಲಾಗ್ ನಲ್ಲಿ ಬೀಚ್ ಮ್ಯಾನೇಜರ್ ಆಗಿ ಕೆಲಸ ಮಾಡಿಕೊಂಡಿದ್ದು, ದಿನಾಂಕ 03/10/2022 ರಂದು ಕೆಲಸ ಮುಗಿಸಿ ಮನೆಯ ಕಡೆಗೆ ಹೋಗುತ್ತಿರುವಾಗ, ಸಮಯ ಸುಮಾರು 18:45 ಗಂಟೆಗೆ ಕಾಪು ತಾಲೂಕು ನಡ್ಸಾಲು ಗ್ರಾಮ ಪಡುಬಿದ್ರಿ ನಡಿಪಟ್ಣದ ಶ್ರೀ ವಿಷ್ಣು ಭಜನಾ ಮಂದಿರದ ಬಳಿ ಬೀಚ್‌‌ನಲ್ಲಿ ಜೀವರಕ್ಷಕರಾಗಿ ಕೆಲಸ ಮಾಡುತ್ತಿರುವ ಕಿರಣ್ ರಾಜ್ ಕರ್ಕೆರ ರವರಿಗೆ ಪರಿಚಯದ ಅಕ್ಷಯ ಕೋಟ್ಯಾನ್ ಮತ್ತು ವಿಜೇಶ್ ಕೋಟ್ಯಾನ್ ಎಂಬುವರು ಕಿರಣ್ ರಾಜ್ ಕರ್ಕೆರ ರವರನ್ನು ತಡೆದು ನಿಲ್ಲಿಸಿ, ಡೌನ್ ಟೌನ್ ಹೋಟೆಲ್ ಬಳಿ ಬ್ಯಾನರ್ ಹಾಕಿದ ಬಗ್ಗೆ ಹೇಳುತ್ತಾ, ಅವಾಚ್ಯ ಶಬ್ಧಗಳಿಂದ ಬೈಯುತ್ತಾ, ಕೈಗಳಿಂದ ಹೊಡೆದು ಕಾಲಿನಿಂದ ತುಳಿದು, ಈ ವಿಷಯವನ್ನು ಯಾರಿಗಾದರೂ ಹೇಳಿದರೆ ಕೊಲ್ಲುವುದಾಗಿ ಕಿರಣ್ ರಾಜ್ ಕರ್ಕೆರ ರವರಿಗೆ ಬೆದರಿಕೆ ಹಾಕಿರುತ್ತಾರೆ. ಸದ್ರಿ ಹಲ್ಲೆಯಿಂದ ಕಿರಣ್ ರಾಜ್ ಕರ್ಕೆರ ರವರ ಎದೆಗೆ,  ಕಾಲಿಗೆ, ಎಡ ಕೆನ್ನೆಗೆ ಗುದ್ದಿದ ನೋವಾಗಿದ್ದು, ಚಿಕಿತ್ಸೆಯ ಬಗ್ಗೆ ಪಡುಬಿದ್ರಿಯ ಸಿದ್ದಿವಿನಾಯಕ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 122/2022 ಕಲಂ: 341, 504, 506, 323 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಇತ್ತೀಚಿನ ನವೀಕರಣ​ : 04-10-2022 08:03 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080