ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 • ಶಂಕರನಾರಾಯಣ: ದಿನಾಂಕ 02/10/2021 ರಂದು 17:30 ಗಂಟೆಗೆ ಪಿರ್ಯಾದಿದಾರರಾದ ಜಯರಾಮ ನಾಯ್ಕ(28), ತಂದೆ: ನಾಗು  ನಾಯ್ಕ, ವಾಸ: ಕಮ್ಟಿ ಬೇರು ಯಡಮೊಗ್ಗೆ ಗ್ರಾಮ ಕುಂದಾಪುರ ತಾಲೂಕು ಇವರು ಕುಂದಾಪುರ ತಾಲೂಕಿನ ಕಮಲಶಿಲೆ ಗ್ರಾಮದ ಮಾನಂಜೆ ಸೊಸೈಟಿಯ ಎದುರುಗಡೆ KA-20-EF-9826ನೇ ಮೋಟಾರ್ ಸೈಕಲ್‌ನಲ್ಲಿ ಪ್ರಕಾಶ ನಾಯ್ಕ ಇವರನ್ನು ಸಹ ಸವಾರನ್ನಾಗಿ ಕುಳ್ಳಿರಿಸಿಕೊಂಡು ಸಿದ್ದಾಪುರ ಕಡೆಗೆ ಬರುತ್ತಿರುವಾಗ ಆರೋಪಿ ಸುಭಾಷ ಯಡಿಯಾಳ ನೊಂದಣಿ ಸಂಖ್ಯೆ ಇಲ್ಲದ  ಬಿಳಿ  ಬಣ್ಣದ  KIA ಕಂಪೆನಿಯ ಕಾರನ್ನು ಸಿದ್ದಾಪುರ ಕಡೆಯಿಂದ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಆತನ ತೀರಾ ಬಲಬದಿಗೆ ಚಲಾಯಿಸಿಕೊಂಡು ಹೋಗಿ ಮೋಟಾರ್ ಸೈಕಲ್‌ ಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಹಾಗೂ ಹಿಂಬದಿ ಸವಾರ ಪ್ರಕಾಶ ನಾಯ್ಕ ಇಬ್ಬರಿಗೂ ಬಲಕಾಲಿನ ಮೂಳೆ ಮುರಿತದ ಗಾಯವಾಗಿರುತ್ತದೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 92/2021 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಗಂಗೊಳ್ಳಿ: ಪಿರ್ಯಾದಿದಾರರಾದ ಸುರೇಶ (31), ತಂದೆ: ಬಾಬು ದೇವಾಡಿಗ, ವಾಸ: ಬಂಟ್ವಾಡಿ ಮನೆ, ಕಟ್ ಬೆಲ್ತೂರು ಗ್ರಾಮ, ಕುಂದಾಪುರ ತಾಲೂಕು ಇವರು ದಿನಾಂಕ 03/10/2021 ರಂದು ತನ್ನ ಬಾಬ್ತು ಮೋಟಾರ್ ಸೈಕಲ್ ನಂಬ್ರ KA-20-EP-1248 ನೇ ಮೋಟಾರ್ ಸೈಕಲ್ ನಲ್ಲಿ ಸ್ನೇಹಿತ ನಯನ್ ಎಂಬುವವರನ್ನು ಸಹ ಸವಾರನಾಗಿ ಕುಳ್ಳಿರಿಸಿಕೊಂಡು ಮುಳ್ಳಿಕಟ್ಟೆ ಕಡೆಯಿಂದ ಬೈಂದೂರು ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಿರುವಾಗ ಮದ್ಯಾಹ್ನ 2:45 ಗಂಟೆಗೆ ಕುಂದಾಪುರ ತಾಲೂಕು ತ್ರಾಸಿ ಗ್ರಾಮದ ತ್ರಾಸಿ ಜಂಕ್ಷನ್ ಬಳಿ ತಲುಪುವಾಗ ಗಜಾನನ ನಾಯ್ಕ್ ಎಂಬುವವರು ಕಾರು ನಂಬ್ರ KA-53-C-3589ನೇದನ್ನು ಬೈಂದೂರು ಕಡೆಯಿಂದ ಅತೀವೇಗವಾಗಿ ಚಲಾಯಿಸಿಕೊಂಡು ಬಂದು ತ್ರಾಸಿ ಡಿವೈಡರ್ “U” ಟರ್ನ್ ಬಳಿ ಬಂದು ಕಾರನ್ನು ಬೈಂದೂರು ಕಡೆಗೆ ತಿರುಗಿಸಿ ಅತೀವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯ ತೀರಾ ಎಡಭಾಗಕ್ಕೆ ಬಂದು ಪಿರ್ಯಾದಿದಾರರು ಸವಾರಿ ಮಾಡಿಕೊಂಡಿದ್ದ ಮೋಟಾರ್ ಸೈಕಲ್ ಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಹಾಗೂ ಸಹ ಸವಾರ ನಯನ್ ರವರು ಬೈಕ್ ಸಮೇತ ರಸ್ತೆಗೆ ಬಿದ್ದು ಪಿರ್ಯಾದಿದಾರರ ಬಲ ಕಾಲಿನ ಮೂಳೆಗೆ ಪೆಟ್ಟಾಗಿದ್ದು, ಎಡಕಾಲಿಗೆ ಗಾಯವಾಗಿದ್ದು ಕೈಗಳಿಗೆ, ತಲೆಗೆ ತರಚಿದ ಗಾಯವಾಗಿರುತ್ತದೆ. ಸಹಸವಾರನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಚಿಕಿತ್ಸೆ ಬಗ್ಗೆ ಕುಂದಾಪುರ ಚಿನ್ಮಯಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಿಸಿರುತ್ತಾರೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 93/2021  ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಅಜೆಕಾರು: ಪಿರ್ಯಾದಿದಾರರಾದ ಎಮ್. ರಾಘವೇಂದ್ರ ಆಚಾರ್ಯ (37), ತಂದೆ: ದಿ. ಅಪ್ಪು ಆಚಾರ್ಯ, ವಾಸ: ನಡಿಬೆಟ್ಟು ಬೈಲು ಮನೆ ಮರ್ಣೆ ಗ್ರಾಮ ಕಾರ್ಕಳ ತಾಲೂಕು ಉಡುಪಿ ಜಿಲ್ಲೆ ಇವರು ದಿನಾಂಕ 03/10/2021 ರಂದು ಸಂಜೆ ಅಜೆಕಾರಿನಿಂದ ನಡಿಬೆಟ್ಟುವಿನಲ್ಲಿರುವ ಶ್ರೀ ಮಹಾದೇವಿ ಭಜನಾ ಮಂದಿಕ್ಕೆ ಭಜನೆ ಪ್ರಯುಕ್ರ ಬೈಕ್ ನಲ್ಲಿ ಹೋಗುತ್ತಿರುವಾಗ ಸಂಜೆ 6:15 ಗಂಟೆಗೆ ಕಾರ್ಕಳ ತಾಲೂಕು ಮರ್ಣೆ ಗ್ರಾಮದ ಕೈಕಂಬದ ರಾಯಬಾಕ್ಯಾರು ಬಳಿ ತಲುಪಿದಾಗ ಪಿರ್ಯಾದಿದಾರರ ಎದುರಿನಿಂದ ರಸ್ತೆಯ ಎಡ ಬದಿಯಲ್ಲಿ ಓರ್ವ ವ್ಯಕ್ತಿ ತನ್ನ KA-20- EV-1809 ನೇ ಹೊಂಡಾ ಆ್ಯಕ್ವಿವಾ ಸ್ಕೂಟರ್‌ ನ್ನು ಅಜೆಕಾರು ಕಡೆಯಿಂದ ಕಾರ್ಕಳ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದಾಗ, ಕಾರ್ಕಳ ಕಡೆಯಿಂದ ಅಜೆಕಾರು ಕಡೆಗೆ ಓರ್ವ ವ್ಯಕ್ತಿ ತನ್ನ KA-20-ER-3750ನೇ ಯಮಹಾ FZ ಬೈಕ್ ನ್ನು ಸಹ ಸವಾರ ಓರ್ವನೊಂದಿಗೆ ಅತೀವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯ ತೀರಾ ಬಲಬದಿಗೆ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಎದುರಿನಿಂದ ಹೋಗುತ್ತಿದ್ದ KA-20-EV-1809 ನೇದಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್‌ ಸವಾರ ಹಾಗೂ ಯಮಹ ಬೈಕ್ ಸವಾರ ಮತ್ತು ಸಹ ಸವಾರ ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದು ಸ್ಕೂಟರ್ ಸವಾರನಿಗೆ ಬಾಯಲ್ಲಿ ರಕ್ತ ಬರುತ್ತಿದ್ದು, ಎಡಗೈ ಯಲ್ಲಿ ತರಚಿದ ರೀತಿಯ ಗಾಯಗಳಾಗಿದ್ದು, ಎಡಗಾಲಿನ ಮೊಣಗಂಟಿನ ಬಳಿ ತೀವ್ರ ಜಖಂ ಆಗಿರುತ್ತದೆ. ಅಲ್ಲದೇ ಅಪಘಾತ ಪಡಿಸಿದ ಬೈಕ್ ಸವಾರ ಹಾಗೂ ಸಹ ಸವಾರರಿಗೂ ತರಚಿದ ರೀತಿಯ ಗಾಯಗಳಾಗಿರುತ್ತದೆ. ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 27/2021 ಕಲಂ: 279, 337, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಜುಗಾರಿ ಪ್ರಕರಣ

 • ಬೈಂದೂರು: ದಿನಾಂಕ 02/10/2021 ರಂದು 15:30 ಗಂಟೆಗೆ ಪವನ ನಾಯಕ, ಪೊಲೀಸ್ ಉಪನಿರೀಕ್ಷಕರು, ಬೈಂದೂರು ಪೊಲೀಸ್ ಠಾಣೆ ಇವರಿಗೆ  ಯಳಜಿತ್ ಗ್ರಾಮದ ಗುಳ್ನಾಡಿ ಹಾಡಿ ಬಳಿ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ್ ಜುಗಾರಿ ಆಟ ಆಡುತ್ತಿರುವುದಾಗಿ ಮಾಹಿತಿ ಬಂದ ಮೇರೆಗೆ ಜೂಜಾಟ ಆಡುತ್ತಿದ್ದುದನ್ನು ಖಚಿತಪಡಿಸಿಕೊಂಡು ಸಿಬ್ಬಂದಿಯವರ ಸಹಾಯದಿಂದ ದಾಳಿ ನಡೆಸಿ 1) ರಾಘವೇಂದ್ರ ಪೂಜಾರಿ (42), ತಂದೆ; ಭಾಸ್ಕರ ಪೂಜಾರಿ, ವಾಸ; ಕಟ್ಟತಪ್ಲು, ಹಕ್ಲಾಡಿ ಗ್ರಾಮ ಕುಂದಾಪುರ ತಾಲೂಕು, 2) ಮೋಹನ ಕೊಠಾರಿ (42), ತಂದೆ: ನಾರಾಯಣ ಕೊಠಾರಿ, ವಾಸ; ನೂಜಾಡಿ, ಕುಂದಬಾರಂದಾಡಿ ಗ್ರಾಮ, ಕುಂದಾಪುರ ತಾಲೂಕು, 3) ದಯಾನಂದ ಗೌಡ (45), ತಂದೆ; ಅಣ್ಣಪ್ಪ ಗೌಡ, ವಾಸ: ಗುಳುಮಾಂವು, ಕಾಲ್ತೋಡು ಗ್ರಾಮ ಬೈಂದೂರು ತಾಲೂಕು, 4) ಗಣಪತಿ ಗೌಡ (37), ತಂದೆ: ರಂಗೆ ಗೌಡ, ವಾಸ: ಗುಳ್ನಾಡಿ ಹೌಸ್, ಯಳಜಿತ್ ಗ್ರಾಮ ಬೈಂದೂರು ತಾಲೂಕು, 5) ರಾಘವೇಂದ್ರ ದೇವಾಡಿಗ (38), ತಂದೆ: ಕೃಷ್ಣ ದೇವಾಡಿಗ, ವಾಸ; ಮುಳ್ಳಿಕಟ್ಟೆ, ಬಂಟ್ವಾಡಿ ಗ್ರಾಮ, ಕುಂದಾಪುರ ತಾಲೂಕು, 6) ಚಂದ್ರ ನಾಯ್ಕ (36), ತಂದೆ: ನಾರಾಯಣ ನಾಯ್ಕ ವಾಸ: ದೊಂಬೆ, ಪಡುವರಿ ಗ್ರಾಮ, ಬೈಂದೂರು ತಾಲೂಕು, 7) ಗಣೇಶ ನಾಯ್ಕ (35), ತಂದೆ: ಕೃಷ್ಣಾ ನಾಯ್ಕ ವಾಸ: ವ್ಯಾಸಬೈಲು, ಗೋಳಿಹೊಳೆ ಗ್ರಾಮ, ಬೈಂದೂರು ತಾಲೂಕು,8) ರಮೇಶ ನಾಯ್ಕ (38), ತಂದೆ: ಮೋಹನ ನಾಯ್ಕ, ವಾಸ: ಬಾಳೆಕೊಡ್ಲು, ಎಲ್ಲೂರು, ಗೊಳಿಹೊಳೆ ಗ್ರಾಮ, ಬೈಂದೂರು ತಾಲೂಕು, 9) ಕರುಣಾಕರ ಕೊಠಾರಿ (23), ತಂದೆ: ಮುತ್ತಯ್ಯ ಕೊಠಾರಿ ವಾಸ: ನೆಲ್ಯಾಡಿ, ತಗ್ಗರ್ಸೆ ಗ್ರಾಮ, ಬೈಂದೂರು ತಾಲೂಕು, 10) ಸಂತೋಷ ಕೊಠಾರಿ (26), ವರ್ಷ,ತಂದೆ: ರಾಜು ಕೊಠಾರಿ, ವಾಸ: ನೆಲ್ಯಾಡಿ, ತಗ್ಗರ್ಸೆ ಗ್ರಾಮ, ಬೈಂದೂರು ತಾಲೂಕು, 11)  ಮಧು ಬಳೆಗಾರ (35), ತಂದೆ: ದಯಾ ಬಳೆಗಾರ  ವಾಸ: ಕಡ್ಕೆಮನೆ, ನಾಗೂರು, ಕಿರಿಮಂಜೇಶ್ವರ ಗ್ರಾಮ, ಬೈಂದೂರು ತಾಲೂಕು, 12) ಸುಧಾಕರ ಕೊಠಾರಿ (39), ತಂದೆ: ನಾಗೂ ಕೊಠಾರಿ  ವಾಸ: ಯಳಜಿತ್ ಗ್ರಾಮ, ಬೈಂದೂರು ತಾಲೂಕು, 13) ದಿನೇಶ ಕೊಠಾರಿ (36), ತಂದೆ: ಮಹಾಬಲ ಕೊಠಾರಿ, ವಾಸ: ಯಳಜಿತ್ ಶಾಲೆ ಹತ್ತಿರ, ಯಳಜಿತ್ ಗ್ರಾಮ, ಬೈಂದೂರು ತಾಲೂಕು, 14) ಕೃಷ್ಣ ಗೌಡ (34), ತಂದೆ: ಮುತ್ತಯ್ಯ ಗೌಡ ವಾಸ:  ಮುಲ್ಲಿಗದ್ದೆ,ತೊಂಡ್ಲೆ, ಯಳಜಿತ್ ಗ್ರಾಮ, ಬೈಂದೂರು ತಾಲೂಕು, 15) ಜಯಾ ಗೌಡ (45), ತಂದೆ: ಕೃಷ್ಣ ಗೌಡ ವಾಸ: ಬೊಳಂಬಳ್ಳಿ, ಹೊಸಾಡು, ಕಾಲ್ತೋಡು ಗ್ರಾಮ ,ಬೈಂದೂರು ತಾಲೂಕು ಇವರನ್ನು ವಶಕ್ಕೆ ಪಡೆದು, ಸ್ಥಳದಲ್ಲಿದ್ದ 52 ಇಸ್ಲೀಟ್ ಎಲೆಗಳು, ಹಳೆಯದಿನ ಪತ್ರಿಕೆ ಮತ್ತು ಜೂಜಾಟಕ್ಕೆ ಉಪಯೋಗಿಸಿದ ನಗದು ರೂಪಾಯಿ 10,400/-ನ್ನು ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 160/2021 ಕಲಂ: 87 ಕರ್ನಾಟಕ ಪೊಲೀಸ್  ಕಾಯ್ದೆ  ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

 • ಕಾರ್ಕಳ: ಕಾರ್ಕಳ ಕಸಬಾದ ಗೋಮಟೇಶ್ವರ ಬೆಟ್ಟದ ಬಳಿ ಪಿರ್ಯಾದಿದಾರರಾದ ವಿ ಕೆ ಜೈನ್ (76), ತಂದೆ: ಕೆ ಕೆ  ಹೆಗ್ಡೆ , ವಾಸ: ವಿಜಯವನ, ಮುಕ್ರಂಪಾಡಿ, ದರ್ಬೆ, ಪುತ್ತೂರು ಇವರ ಹೆಂಡತಿ ಶ್ರೀಮತಿ ಸುಶ್ಮಾ ವಿ ಜೈನ್ ರವರ ಹೆಸರಿನಲ್ಲಿ ಸ.ನಂ. 49/34 ಹಕ್ಕಿನ ಜಾಗ ಇದ್ದು, ದಿನಾಂಕ 03/10/2021 ರಂದು ಮಧ್ಯಾಹ್ನ 03:10 ಗಂಟೆಗೆ ಪಿರ್ಯಾದಿದಾರರು ಜಾಗಕ್ಕೆ ಹೋದಾಗ ಅಪಾದಿತರಾದ ರಾಜೇಂದ್ರ ಕುಮಾರ್, ಮಹಾವೀರ, ಸಮಿತ್, ಸಚಿತ್ ಮತ್ತು ಇತರ 10 ಜನರು ಸೇರಿ ಜಾಗಕ್ಕೆ ಅಕ್ರಮವಾಗಿ ಪ್ರವೇಶಿಸಿ ಪಿರ್ಯಾದಿದಾರರು ಜಾಗಕ್ಕೆ ಪ್ರವೇಶಿಸದಂತೆ ಅಡ್ಡಗಟ್ಟಿ ಅಕ್ರಮವಾಗಿ ತಡೆದು ನಿಲ್ಲಿಸಿ ಹಲ್ಲೆ ಮಾಡಲು ಪ್ರಯತ್ನಿಸಿರುವುದಾಗಿ ನೀಡಿದ ದೂರಿನಂತೆ ಕಾರ್ಕಳ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 123/2021 ಕಲಂ:447, 341, 143, 147, 149 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 04-10-2021 10:30 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080