ಅಭಿಪ್ರಾಯ / ಸಲಹೆಗಳು

ಅಸ್ವಾಭಾವಿಕ ಮರಣ ಪ್ರಕರಣ

  • ಕಾರ್ಕಳ: ಕಾರ್ಕಳ ತಾಲೂಕು ಮುಡಾರು ಗ್ರಾಮದ ಮುಡ್ರಾಲು, ನೀರಪಾದೆ ನಿವಾಸಿ, ಪಿರ್ಯಾದಿದಾರರಾದ ಸುರೇಂದ್ರ ಇವರ ತಂದೆ ಜಯ ಪೂಜಾರಿ, ಪ್ರಾಯ 50 ವರ್ಷ, ಇವರು ವಿಪರೀತ ಮದ್ಯಪಾನ ಮಾಡುವ ಅಭ್ಯಾಸ ಉಳ್ಳವರಾಗಿದ್ದು, ಇದರಿಂದ ಈ ಹಿಂದೆ 2-3 ಸಲ ತೀವ್ಯ ಅನಾರೋಗ್ಯದಿಂದ ಬಳಲುತ್ತಿದ್ದವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದರೂ, ಮದ್ಯಪಾನ ಮಾಡುವುದನ್ನು ಬಿಡದೇ ಇದ್ದು, ದಿನಾಂಕ 04/10/2021 ರಂದು ಬೆಳಗ್ಗೆ 9:00 ಗಂಟೆಗೆ 11:30 ಗಂಟೆಯ ಮಧ್ಯೆ ವಿಪರೀತ ಮದ್ಯಪಾನ ಮಾಡಿದ ಪರಿಣಾಮ ಬಜಗೋಳಿ ಪೇಟೆಯಲ್ಲಿರುವ ಮಾರ್ಕೆಟ್ ವಠಾರದಲ್ಲಿ ಮೃತಪಟ್ಟಿರುತ್ತಾರೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 34/2021 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  
  • ಬ್ರಹ್ಮಾವರ: ಬ್ರಹ್ಮಾವರ ತಾಲೂಕು, ಹಲುವಳ್ಳಿ ಗ್ರಾಮದ ಅಂಗಡಿಬೆಟ್ಟು ಎಂಬಲ್ಲಿ ವಾಸವಿರುವ ಪಿರ್ಯಾದಿ ಸತೀಶ ಶೆಟ್ಟಿ ಇವರ ತಂದೆ ಆನಂದ ಶೆಟ್ಟಿ ಪ್ರಾಯ 75 ವರ್ಷದವರರಿಗೆ ಬಿ.ಪಿ ಕಾಯಿಲೆ ಇದ್ದು  ಶರಾಬು ಕುಡಿಯುವ ಹವ್ಯಾಸ ಇರುತ್ತದೆ. ಈ ಹಿಂದೆ ಫಿರ್ಯಾದಿದಾರರ ತಂದೆ ಕುಡಿತದ ಚಟದಿಂದ ರಾತ್ರಿ ಮನೆಗೆ ಬಾರದಿರುವುದು ಹಾಗೂ ಕೆಲಮೊಮ್ಮೆ ವಾರವಿಡಿ ಮನೆಗೆ ಬಾರದೇ ಸಂಬಂಧಿಕರ ಮನೆಗೆ ಹೋಗುವುದು ಹಾಗೂ ಪೇಟೆಯಲ್ಲಿ ಮಲಗುವ ಆಭ್ಯಾಸದವರಾಗಿರುತ್ತಾರೆ. ದಿನಾಂಕ: 03/10/2021 ರಂದು ರಾತ್ರಿ 8:15 ಗಂಟೆಗೆ ಫಿರ್ಯಾದಿದಾರರು  ಮನೆಗೆ ಬಂದಾಗ ಫಿರ್ಯಾದಿದಾರರ ತಂದೆ ಮನೆಯಲ್ಲಿರದೇ ಇದ್ದು ಈ ಬಗ್ಗೆ ಫಿರ್ಯಾದಿದಾರರ ಅತ್ತೆ ಮಗಳಲ್ಲಿ ವಿಚಾರಿಸಿದಾಗ ಮಧ್ಯಾಹ್ನ 5:00 ಗಂಟೆ ಸುಮಾರಿಗೆ ಈಶ್ವರ ಭಂಡಾರಿಯವರು ತಂದೆಯನ್ನು ಮನೆಗೆ ಬಿಟ್ಟು ಹೋಗಿದ್ದು ಆ ಸಮಯ ಶರಾಬು ಅಮಲಿನಲ್ಲಿದ್ದು 15 ನಿಮಿಷ ಮನೆಯಲ್ಲಿದ್ದು ನಂತರ ಮನೆಯಿಂದ ಹೊರಗೆ ಹೋದವರು ರಾತ್ರಿ ಮನೆಗೆ ಬಾರದೇ ಇರುವುದಾಗಿ ತಿಳಿಸಿರುತ್ತಾರೆ. ದಿನಾಂಕ 04/10/2021ರಂದು ಬೆಳಿಗ್ಗೆ ಸುಮಾರು 7:30 ಗಂಟೆಗೆ ನೆರೆಮನೆಯ ವಾಸಿ ಸುರೇಶರವರು ಫಿರ್ಯಾದಿದಾರರ ತಂದೆ ಫಿರ್ಯಾದಿದಾರರ ಮನೆಯ ಸ್ವಲ್ಪ ದೂರದ ನೀರಿನ ತೋಡಿನಲ್ಲಿ ಬಿದ್ದು ಕೊಂಡಿರುವುದಾಗಿ ತಿಳಿಸಿದ್,ದು ಕೂಡಲೇ ಹೋಗಿ ನೀರಿನಿಂದ ಎತ್ತಿ ಉಪಚರಿಸಿ  ಅಂಬುಲೆನ್ಸ್ ನಲ್ಲಿ ಚಿಕಿತ್ಸೆಯ ಬಗ್ಗೆ ಬ್ರಹ್ಮಾವರ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಾಗ ಅಲ್ಲಿನ ವೈದ್ಯರು ಪರೀಕ್ಷಿಸಿ ದಾರಿ ಮಧ್ಯದಲ್ಲಿ ಮೃತ ಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 58/2021 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  
  • ಕುಂದಾಪುರ: ಫಿರ್ಯಾದಿ ಸಂಜೀವ ದೇವಾಡಿಗ ಇವರ ತಮ್ಮ ವಾಸು ದೇವಾಡಿಗ ಪ್ರಾಯ 49 ವರ್ಷ ಎಂಬುವರು ತನ್ನ ಹೆಂಡತಿ ಮನೆಯಾದ ಕೊಳ್ಕೇರೆ ಬಸ್ರೂರು ಎಂಬಲ್ಲಿ ವಾಸವಾಗಿದ್ದು ದಿನಾಂಕ 01/10/2021 ರಂದು ರಾತ್ರಿ ಮಧ್ಯಪಾನ ಮಾಡಿಕೊಂಡು ಮನೆಗೆ ಬಂದಿದ್ದು ರಾತ್ರಿ ಸುಮಾರು 09:00 ಗಂಟೆಯ ಸಮಯ ಮನೆಯ ಹೊರಗಡೆ ಮೂತ್ರ ಮಾಡುವರೇ ಹೋಗಿದ್ದು ಆ ಸಮಯ ಕಾಲು ಜಾರಿ ಬಿದ್ದು ತಲೆಗೆ ರಕ್ತಗಾಯವಾಗಿರುತ್ತದೆ ಈ ವಿಚಾರವನ್ನು ಮಂಜುನಾಥ ಎಂಬವರು ಪಿರ್ಯಾದಿದಾರರಿಗೆ ಕರೆಮಾಡಿ ತಿಳಿಸಿರುತ್ತಾರೆ  ಪಿರ್ಯಾದಿದಾರರು ಹೋಗಿ ನೋಡಿ ಮಾತನಾಡಿಸಿದಾಗ ವಾಸು ದೇವಾಡಿಗ ತಾನು ಕಾಲು ಜಾರಿ ಬಿದ್ದಿರುವುದಾಗಿ ತಿಳಿಸಿ ಈಗ ಸುಧಾರಿಸಿ ಕೊಂಡಿರುವುದಾಗಿ ತಿಳಿಸಿರುತ್ತಾರೆ ನಂತರ ದಿನಾಂಕ 02/10/2021 ರಂದು ಕುಂದಾಪುರ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ತೋರಿಸಿದಾಗ ವೈದ್ಯರು ಪರೀಕ್ಷಿಸಿ ಹೆಚ್ಚಿನ ಚಿಕಿತ್ಸೆ ಬಗ್ಗೆ ವೆನ್ಲಾಕ್ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದಂತೆ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅಲ್ಲಿನ ವೈದ್ಯರು ಒಳರೋಗಿಯಾಗಿ ದಾಖಲಿಸಿಕೊಂಡು ಚಿಕಿತ್ಸೆ ನೀಡಿರುತ್ತಾರೆ ಆದರೆ ಚಿಕಿತ್ಸೆಗೆ ಸ್ಪಂದಿಸದೇ ದಿನಾಂಕ 04/10/2021 ರಂದು ಬೆಳಿಗ್ಗೆ 08:30 ಗಂಟೆಗೆ ಮೃತ ಪಟ್ಟಿರುವುದಾಗಿದೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 30/2021 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   

ಇತ್ತೀಚಿನ ನವೀಕರಣ​ : 04-10-2021 06:12 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080