ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣಗಳು

 • ಉಡುಪಿ ಪಿರ್ಯಾದಿ ಶಾಂತರಾಮ್ (70) ವರ್ಷ, ತಂದೆ: ದಿ. ನಾಗಪ್ಪ,ವಾಸ: ಸುಶಾಂತ್ ನಿಲಯ ಬಳಿ,ಬಾಳಿಗಾ ಫಿಶ್ ನೆಟ್ ನಿಟ್ಟೂರು ಅಂಚೆ, ಪುತ್ತೂರು ಗ್ರಾಮ ಉಡುಪಿ ತಾಲೂಕು ಇವರ ಮಗಳು  ಸೌಧಾಮಿನಿ ಪ್ರಾಯ 30 ವರ್ಷರವರು ದಿನಾಂಕ: 03-09-2022 ರಂದು ತನ್ನ KA20EL8475ನೇ ಸ್ಕೂಟರ್ ನ್ನು ಅಂಬಾಗಿಲು ಕಡೆಯಿಂದ ಕರಾವಳಿ ಫ್ಲೈ ಓವರ್ ಆಗಿ ರಾ.ಹೆ 66ರಲ್ಲಿ ಸವಾರಿ ಮಾಡಿಕೊಂಡು ಬರುತ್ತಿರುವಾಗ ಸಮಯ ಸುಮಾರು ಬೆಳಿಗ್ಗೆ 09-00 ಗಂಟೆಗೆ ಕರಾವಳಿ ಕಡೆಯಿಂದ ಅಂಬಲಪಾಡಿ ಕಡೆಗೆ ಹಾದು ಹೋಗುವ ಸರ್ವಿಸ್ ರಸ್ತೆಯು ಸೇರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ತಲುಪುವಾಗ ಓರ್ವ ಅಪರಿಚಿತ ವಾಹನದ ಚಾಲಕನು ರಾ.ಹೆ 66ರಲ್ಲಿ ತನ್ನ ವಾಹನವನ್ನು ದುಡುಕುತನ ಮತ್ತು ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಸೌಧಾಮಿನಿಯವರಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸಮೇತ ರಸ್ತೆಗೆ ಬಿದ್ದು, ತಲೆಗೆ ಗುದ್ದಿದ ಒಳನೋವಾಗಿ ಹೈಟೆಕ್ ಆಸ್ಪತ್ರೆಗೆ ದಾಖಲಾಗಿ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಣಿಪಾಲ ಕೆ.ಎಮ್.ಸಿ ಆಸ್ಪತ್ರೆಗೆ ದಾಖಲಾಗಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿರುವುದಾಗಿದೆ ಹಾಗೂ ಅಪಘಾತಪಡಿಸಿದ ವಾಹನದ ಚಾಲಕನು ಅಪಘಾತ ಸ್ಥಳದಲ್ಲಿ ವಾಹನವನ್ನು ನಿಲ್ಲಿಸದೇ ಸ್ಥಳೀಯ ಠಾಣೆಗೆ ಯಾವುದೇ ಮಾಹಿತಿ ನೀಡದೇ ಪರಾರಿಯಾಗಿರುತ್ತಾನೆ. ಈ ಬಗ್ಗೆ ಉಡುಪಿ ಸಂಚಾರ ಠಾಣಾ ಅಪರಾಧ ಕ್ರಮಾಂಕ 65/2022 ಕಲಂ: 279, 337 ಐ.ಪಿ.ಸಿ ಮತ್ತು 134(ಎ) &(ಬಿ) ಐ.ಎಮ್.ವಿ  ಕಾಯಿದೆ ಯಂತೆ ಪ್ರಕರಣ ದಾಖಲಿಸಲಾಗಿದೆ.
 • ಮಣಿಪಾಲ: ದಿನಾಂಕ 04/09/2022 ರ ಸುಮಾರು ಬೆಳಗಿನ ಜಾವ 00.30 ಗಂಟೆಗೆ ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ಮಣಿಪಾಲ  ಡಿ ಸಿ  ಕಛೇರಿ ಸಾರ್ವಜನಿಕ ರಸ್ತೆಯಲ್ಲಿ  ಬ್ಯಾರೆಲ್ಸ್‌ ಪಬ್‌ ಬಳಿ ಇರುವ ಕ್ರೇವ್‌ ಬೇಕರಿ ಮುಂಭಾಗದ ಬಳಿ ಕಾರು ನಂಬ್ರ GA 08 F 3696 ನೇದನ್ನು ಅದರ ಚಾಲಕ ಸುಹಾಸ್‌ ಎಂಬವನು ಬ್ಯಾರೆಲ್ಸ್‌ಪಬ್‌ಒಳ ರಸ್ತೆಯಿಂದ ಅತೀವೇಗ ಹಾಗೂ ಅಜಾಗರೂಕತೆಯಿಂದ ಹಿಮ್ಮುಖವಾಗಿ  ಬಂದು, ಸಿಂಡಿಕೇಟ್‌ ಸರ್ಕಲ್‌ ಕಡೆಯಿಂದ ಕಾಯಿನ್‌ ಸರ್ಕಲ್‌ಕಡೆಗೆ  ಚಲಾಯಿಸಿಕೊಂಡು ಹೋಗುತ್ತಿದ್ದ ಪಿರ್ಯಾದಿ ರೋಶನ್‌  ಲೋಯ್‌  ಡಿಸೋಜ  ಪ್ರಾಯ  24  ವರ್ಷ  ತಂದೆ ; ಹಿಲಾರಿ  ಡಿಸೋಜ  ವಾಸ-   ಮಹಿಮಾ  ವಿಲ್ಲಾ  ಕೂರಾಡಿ  ಅಂಚೆ.     ಇವರ ಕಾರು ನಂಬ್ರ  KA 02 MN 1589 ನೇದಕ್ಕೆ ಡಿಕ್ಕಿ ಹೊಡೆದಿರುವುದಾಗಿದೆ.  ಈ ಅಪಘಾತ ಆಗುವ ಮೊದಲು ಕಾರು ನಂಬ್ರ GA 08 F 3696  ನೇದರ ಚಾಲಕನು ಬ್ಯಾರೆಲ್ಸ್‌ ಪಬ್‌ ಎದುರಿಗೆ ಸಾರ್ವಜನಿಕ ರಸ್ತೆಯಲ್ಲಿ ಅತೀ ವೇಗ ಮತ್ತು ನಿರ್ಲಕ್ಷ್ಯತನದಿಂದ ರಿವರ್ಸ್‌ ಗೇರ್‌ ನಲ್ಲಿ ಹಿಮ್ಮುಖವಾಗಿ ಚಲಿಸಿ ನಂತರ ಮುಂದಕ್ಕೆ ಚಲಿಸುವಾಗ ಸ್ಕೋಡಾ ಕಾರ್‌ ನಂ KA 20 ME 0304 ನೇದಕ್ಕೆ ಅಪಘಾತಪಡಿಸಿ ನಿಲ್ಲಿಸದೇ ಹೋಗಿದ್ದು, ಆ ಸಮಯದಲ್ಲಿ ಬ್ಯಾರೆಲ್ಸ್‌ ಪಬ್‌ನ ನೌಕರ ವಿಕ್ರಾಂತ್‌ ಎಂಬುವವರ ಎಡ ಕಾಲಿನ ಮೇಲೆ ಕಾರ್‌ ಚಕ್ರ ಹರಿದು ಅವರಿಗೆ  ಗಾಯವಾಗಿರುತ್ತದೆ. ಈ ಬಗ್ಗೆ ಮಣಿಪಾಲ ಠಾಣೆ,  ಅ.ಕ್ರ 124/2022 ಕಲಂ: 279, 337 ಐ.ಪಿ.ಸಿ  ಯಂತೆ ಪ್ರಕರಣ ದಾಖಲಿಸಲಾಗಿದೆ.  

ಅಸ್ವಾಭಾವಿಕ ಮರಣ ಪ್ರಕರಣ

 • ಶಂಕರನಾರಾಯಣ:  ಪಿರ್ಯಾದಿ ಮಂಜುನಾಥ ಕೆ.ಬಿ. ಪ್ರಾಯ: 38 ವರ್ಷ, ತಂದೆ: ದಿ: ಭಾಸ್ಕರ  ಕೆ. ಜೋಗಿ. ವಾಸ:  ಕಲ್ಲೋಣಿ ಅರಳಸುರಳಿ ಬಳಗೋಡು ಗ್ರಾಮ ತೀರ್ಥಹಳ್ಳಿ ಇವರ  ತಮ್ಮ ಮಧುಕರ ಕೆ.ಬಿ. (31)  ಇವರು ಚಾಲಕ ವೃತ್ತಿ ಮತ್ತು ಸೈಬರ್ ಸೆಂಟರನ್ನು ಇಟ್ಟುಕೊಂಡು ಕೆಲಸ ಮಾಡಿಕೊಂಡಿದ್ದು ವ್ಯವಹಾರದ ಬಗ್ಗೆ ಸಾಲ ಮಾಡಿಕೊಂಡಿದ್ದು  ಆತನ ಆರೋಗ್ಯ ಸರಿ ಇರಲಿಲ್ಲ ಇದರಿಂದ ಜೀವನದಲ್ಲಿ ಜಿಗುಪ್ಸೆ ಗೊಂಡು ಮನೆಯಿಂದ ಯಾರಿಗೂ ಎಲ್ಲಿ ಹೋಗುತ್ತೇನೆಂದು ಹೇಳದೆ ಹೋಗಿ ದಿ: 02-09-2022ರಂದು 14:00 ಗಂಟೆಗೆ ಕುಂದಾಪುರ  ತಾಲೂಕು ಹಾಲಾಡಿ 28 ಗ್ರಾಮದ ಹಾಲಾಡಿಯಲ್ಲಿ ಇಲಿ ಪಾಶಣ ವಿಷ ಸೇವಿಸಿ ಕುಂದಾಪುರ ಎನ್.ಆರ್. ಆಚಾರ್ಯ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದವರು ದಿನಾಂಕ: 03-09-2022 ರಂದು 20:45 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೇ ಮೃತ ಪಟ್ಟಿರುತ್ತಾರೆ ಇವರಸಾವಿನಲ್ಲಿ ಬೇರಾವುದೇ ಸಂಶಯ ಇರುವುದಿಲ್ಲ . ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆ ಯುಡಿಆರ್‌ನಂಬ್ರ 29/2022  ಕಲಂ:174 ಸಿಆರ್‌ಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.
 • ಕಾರ್ಕಳ:  ಪಿರ್ಯಾದಿ ಶ್ರೀಮತಿ ಅಮೃತಾ ಶೆಟ್ಟಿ , ಪ್ರಾಯ 36 ವರ್ಷ, ಗಂಡ ಆನಂದ  ಶೆಟ್ಟಿ, ವಾಸ  ಜಯದುರ್ಗಾ ನಿವಾಸ, ನೀರೆ , ಹೆದ್ದಾರಿ,  ನೀರೆ ಅಂಚೆ ಮತ್ತು ಗ್ರಾಮ, ಎಂಬವರ ಗಂಡ ಆನಂದ  ಶೆಟ್ಟಿ (ಪ್ರಾಯ 51 ವರ್ಷ) ಎಂಬವರು 407 ಟೆಂಪೋ ಹೊಂದಿದ್ದು  ಅದನ್ನು ನಿರ್ವಹಣೆ ಮಾಡಿಕೊಂಡಿರುತ್ತಾರೆ.  ದಿನಾಂಕ 03-09-2022 ರಂದು ಫಿರ್ಯಾದುದಾರರು  ಸಂಜೆ 5-45 ಗಂಟೆಗೆ ಪೂಜೆ ಕಾರ್ಯಕ್ರಮಕ್ಕೆ  ತಾಯಿ ಮನೆಗೆ ಹೋಗಿದ್ದು  ರಾತ್ರಿ 9-15 ಗಂಟೆಗೆ ಫೋನ್  ಮಾಡಿ ಮಾತನಾಡಿದ್ದು, ನಂತರ  ಫೋನ್ ಮಾಡಿದಾಗ ಕರೆ ಸ್ವೀಕರಿಸಿರುವುದಿಲ್ಲ. ಈ ದಿನ ದಿನಾಂಕ 04-09-2022 ರಂದು ಬೆಳಿಗ್ಗೆ 09-30 ಗಂಟೆಗೆ ತಾಯಿ ಹಾಗೂ ಮಕ್ಕಳೊಂದಿಗೆ ವಾಪಾಸು ಮನೆಗೆ ಬಂದಿದ್ದು, ಮಹಡಿಯ ಮೇಲೆ  ಹೋಗಿ ನೋಡಿದಾಗ ಆನಂದ ಶೆಟ್ಟಿರವರು  ಮಹಡಿಯ ಮೇಲೆ ವರಾಂಡದಲ್ಲಿ ಸ್ಲಾಬ್‌ಗೆ ಹಾಕಿದ  ಹುಕ್‌ಗೆ  ಬಿಳಿಬಟ್ಟೆಯಿಂದ ಕಟ್ಟಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು,  ಅವರಿಗೆ ಮದ್ಯಪಾನ ಮಾಡುವ ಅಭ್ಯಾಸ ಇದ್ದು ಯಾವುದೋ ಕಾರಣದಿಂದ ಮನನೊಂದು ದಿನಾಂಕ  03-09-2022 ರಂದುರಾತ್ರಿ 9-15  ಗಂಟೆಯಿಂದ ಈ ದಿನ ದಿನಾಂಕ  04-09-2022 ರಂದು ಬೆಳಿಗ್ಗೆ 09-30 ಗಂಟೆಯ ಮಧ್ಯೆ  ನೀರೆ ಗ್ರಾಮದ  ಹೆದ್ದಾರಿ  ಎಂಬಲ್ಲಿರುವ ತನ್ನ ವಾಸದಮನೆಯಲ್ಲಿಆತ್ಮಹತ್ಯೆ ಮಾಡಿಕೊಂಡಿದ್ದಾಗಿರುತ್ತದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್  ಠಾಣೆ ಯುಡಿಆರ್‌41/2022 ಕಲಂ 174 ಸಿಆರ್‌ಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.
 • ಕುಂದಾಪುರ: ಪಿರ್ಯಾದಿ ಇಂದಿರಾ (29) ಗಂಡ: ರತ್ನಾಕರ ವಾಸ: ಬಗ್ವಾಡಿ ಕ್ರಾಸ್ ಬಳಿ ದೇವಲ್ಕುಂದ ಗ್ರಾಮ ಇವರ ಗಂಡ ರತ್ನಾಕರ ಉಡುಪಿಯ ಗ್ಯಾರೇಜ್ ನಲ್ಲಿ ಕೆಲಸ ಮಾಡಿಕೊಂಡಿದ್ದು ವಿಪರೀತ ಕುಡಿಯುವ ಚಟವನ್ನು ಹೊಂದಿದ್ದು ದಿನಾಂಕ: 03-09-2022 ರಂದು ಕೆಲಸಕ್ಕೆ ಹೋಗದೇ ಇದ್ದು ಮನೆಯಿಂದ ಹೊರಗೆ ಹೋಗಿದ್ದು ರಾತ್ರಿ 20:00 ಗಂಟೆಗೆ ಮನೆಗೆ ಕುಡಿದು  ಬಂದಿದ್ದು ಪಿರ್ಯಾದಿದಾರರೊಂದಿಗೆ ಜಗಳ ಮಾಡಿದ್ದು ಪಿರ್ಯಾದಿದಾರರು ಹೆದರಿ ತನ್ನ ತಾಯಿಯ ಮನೆಗೆ ಹೋಗಿರುತ್ತಾರೆ. ಈ ದಿನ ದಿನಾಂಕ: 04-09-2022 ರಂದು ಬೆಳಿಗ್ಗೆ 06:15 ಗಂಟೆಗೆ ವಾಪಾಸು ಮನೆಗೆ ಬಂದು ನೋಡುವಾಗ ಮನೆಯ ಎದುರಿನ ಬಾಗಿಲು ಹಾಕಿದ್ದು ಮನೆಯ ಕಿಟಕಿಯ ಮೂಲಕ ಇಣುಕಿ ನೋಡುವಾಗ ಫಿರ್ಯಾದಿದಾರರ ಗಂಡ ನೇಣು ಬಿಗಿದು ನೇತಾಡುತ್ತಿರುವುದು ಕಂಡು ಬಂದಿದ್ದು, ಕೂಡಲೇ ಫಿರ್ಯಾದಿದಾರರು ಕೂಗಿ ಕೊಂಡಾಗ ಫಿರ್ಯಾದಿದಾರರ ತಂಗಿ ಗಂಡ ರಾಜೇಶರವರು ಬಂದು ಮನೆಯ ಎದುರಿನ ಬಾಗಿಲು ಒಡೆದು ಒಳಗೆ ಹೋಗಿ ನೋಡುವಾಗ ಮನೆಯ ಜಂತಿಗೆ ಚೂಡಿದಾರ ಶಾಲುನ್ನು  ಕಟ್ಟಿ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡು ಬಂದಿರುತ್ತದೆ. ಈ ಬಗ್ಗ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣಾ ಯುಡಿಆರ್‌ ನಂ:26/2022 ಕಲಂ:174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಿಸಲಾಗಿದೆ.

ಇತ್ತೀಚಿನ ನವೀಕರಣ​ : 04-09-2022 06:16 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080