ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣಗಳು

 • ಮಣಿಪಾಲ:  ದಿನಾಂಕ: 03.09.2022 ರಂದು ಬೆಳಿಗ್ಗೆ 10:00 ಗಂಟೆಗೆ ಪಿರ್ಯಾದಿ ಕಿಶೋರ್ ಸಾಲ್ಯಾನ್ ಪ್ರಾಯ: 35 ವರ್ಷ ತಂದೆ: ಬಾಸ್ಕರ್ ಸಾಲ್ಯಾನ್ ವಾಸ: ಪೂವಮ್ಮ ನಿಲಯ ಮನೆ ನಂಬ್ರ 13/51, ಪೆರಂಪಳ್ಳಿ, ಬಂಡಸಾಲೆ ತೋಟ ಕುಂಜಿಬೆಟ್ಟು ಇವರ ಪರಿಚಯದವರಾದ ವಿನೋದ ರವರು ಪೆರಂಪಳ್ಳಿ ಶಂಕರಾನಂದ ಆಶ್ರಮ ಕಡೆಯಿಂದ ಪೆರಂಪಳ್ಳಿ ಚರ್ಚ್ ಕಡೆಗೆ ನಡೆದುಕೊಂಡು ಬರುತ್ತಿರುವಾಗ ರಕ್ತೇಶ್ವರಿ ಜ್ಯೊತಿಷ್ಯಾಲಯದ ಎದುರುಗಡೆ ಪೆರಂಪಳ್ಳಿ ಕಡೆಯಿಂದ KL 33 N 8684  TATA HARIER ಕಾರ್ ಚಾಲಕನು ತನ್ನ ಕಾರನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ನಡೆದುಕೊಂಡು  ಪೆರಂಪಳ್ಳಿ ಶಂಕರಾನಂದ ಆಶ್ರಮ ಕಡೆಯಿಂದ ಬರುತ್ತಿದ್ದ ವಿನೋದ ಎಂಬುವರಿಗೆ ಡಿಕ್ಕಿ ಹೊಡೆದ  ಪರಿಣಾಮ ರಸ್ತೆಗೆ ಬಿದ್ದು ತೀವ್ರ ಸ್ವರೂಪದ ರಕ್ತ ಗಾಯವಾಗಿದ್ದು ಮಣಿಪಾಲದ ಕೆ ಎಂ ಸಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ದಾರಿ ಮಧ್ಯೆ ವಿನೋದ ರವರು ಮೃತಪಟ್ಟಿರುತ್ತಾರೆ. ಈ ಬಗ್ಗೆ ಮಣಿಪಾಲ ಠಾಣೆ,  ಅಪರಾಧ ಕ್ರಮಾಂಕ 123/2022 ಕಲಂ 279, 304(A) IPC  ಯಂತೆ ಪ್ರಕರಣ ದಾಖಲಿಸಲಾಗಿದೆ.
 • ಕಾರ್ಕಳ: ಪಿರ್ಯಾದಿ ಅಂತೋಣಿ ಡಿಸೋಜಾ (63) ತಂದೆ; ಅಗಸ್ಟಿನ್ ಡಿಸೋಜಾ ವಾಸ; ಕುಂಜಿಬೆಟ್ಟು ಮನೆ, ನಕ್ರೆ ಅಂಚೆ, ಕುಕ್ಕುಂದೂರು ಇವರು  ದಿನಾಂಕ: 03.09.2022 ರಂದು ಬೆಳಿಗ್ಗೆ ತನ್ನ ಮನೆಯಿಂದ ತನ್ನ ವಾಹನದಲ್ಲಿ ಕೆಲಸದ ನಿಮಿತ್ತ ರಂಗನಪಲ್ಕೆಗೆ ಹೋಗಿ ವಾಪಾಸು ರಂಗನಪಲ್ಕೆ ಕಡೆಯಿಂದ ಕಾರ್ಕಳ ಕಡೆಗೆ  ಹೊರಟಿದ್ದು ಸಮಯ ಸುಮಾರು ಬೆಳಿಗ್ಗೆ 07:30 ಗಂಟೆಗೆ ಕಾರ್ಕಳ ತಾಲೂಕು ಕುಕ್ಕುಂದೂರು ಗ್ರಾಮದ ಬೋಪಾಡಿ ಎಂಬಲ್ಲಿಗೆ ತಲುಪುವಾಗ, ಪಿರ್ಯಾದಿದಾರರ ಎದುರಿನಲ್ಲಿ ಓರ್ವ ಮೋಟಾರ್ ಸೈಕಲ್ ಸವಾರನು ನೊಂದಣಿಯಾಗದ ಹೊಂಡಾ ಕಂಪೆನಿಯ ಹೊಸ ಮೋಟಾರ್ ಸೈಕಲ್‌ನಲ್ಲಿ ಕಾರ್ಕಳ ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಿರುವಾಗ ಕಾರ್ಕಳ ಕಡೆಯಿಂದ ರಂಗನಪಲ್ಕೆ  ಕಡೆಗೆ KA 51 4591  ನೇ  ಲಾರಿಯನ್ನು ಅದರ ಚಾಲಕ ಸಿದ್ಧಿಕ್ ಎಂಬಾತನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯ ತೀರಾ ಬಲಬದಿಗೆ ಚಲಾಯಿಸಿಕೊಂಡು ಬಂದು ಕಾರ್ಕಳ ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಿದ್ದ ಮೋಟಾರ್ ಸೈಕಲ್‌‌ಗೆ ಡಿಕ್ಕಿ ಹೊಡೆದ ಪರಿಣಾಮ ಮೋಟರ್ ಸೈಕಲ್ ಸವಾರ ಸಲ್ಮಾನ್ ಎಂಬಾತನು ಮೋಟಾರ್ ಸೈಕಲ್ ನೊಂದಿಗೆ ರಸ್ತೆಗೆ ಬಿದ್ದಿದ್ದು ತಲೆಯಲ್ಲಿ ಇದ್ದ ಹೆಲ್ಮೆಟ್ ರಸ್ತೆಗೆ ಎಸೆಯಲ್ಪಟ್ಟಿದ್ದು, ಈ ಅಪಘಾತದಿಂದ ಮೋಟರ್ ಸೈಕಲ್ ಸವಾರ ಸಲ್ಮಾನ್ ರವರ ತಲೆಯ ಬಲಬದಿ ಹಣೆಗೆ  ಗಂಭೀರ ರಕ್ತಗಾಯವಾಗಿದ್ದು ಸ್ಥಳದಲ್ಲಿ  ಮೃತಪಟ್ಟಿರುತ್ತಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್  ಠಾಣಾ  ಅಪರಾಧ ಕ್ರಮಾಂಕ 113/2022 ಕಲಂ 279,304(A) ಐಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.
 • ಬೈಂದೂರು: ಪಿರ್ಯಾದಿ ತಬ್ಕೆ ಫಾರುಕ್ (65 ವರ್ಷ) ತಂದೆ: ದಿ.ತಬ್ಕೆ  ಇಸಾಕ್ ವಾಸ: ಗೌಸಿಯಾ ಮೊಹಲ್ಲಾ ಶಿರೂರು ಗ್ರಾಮ ಇವರು ದಿನಾಂಕ: 03-09-2022 ರಂದು ಮಧ್ಯಾಹ್ನ  2:15 ಗಂಟೆಗೆ  ಅವರ ಆಟೋ ರಿಕ್ಷಾವನ್ನು  ಬಾಡಿಗೆ ಬಗ್ಗೆ   ಶಿರೂರು  ಪೇಟೆಯಿಂದ ಶಿರೂರು ಕೆಳಪೇಟೆ ಕಡೆಗೆ ರಾ.ಹೆ 66 ರಲ್ಲಿ ಚಲಾಯಿಸಿಕೊಂಡು ಶಿರೂರು ಸೇತುವೆ ಬಳಿ  ಬರುತ್ತಿರುವಾಗ    KA 20C 5264 ನೇ ಆಟೋರಿಕ್ಷಾ ಚಾಲಕನು ಬೈಂದೂರು ಕಡೆಯಿಂದ ಶಿರೂರು  ಕಡೆಗೆ  ಆತನ ರಿಕ್ಷಾವನ್ನು ಚಲಾಯಿಸಿಕೊಂಡು ಹೋಗುತ್ತಿದ್ದು  ಆತನ  ಹಿಂದಿನಿಂದ  ಬೈಂದೂರು ಕಡೆಯಿಂದ  ಶಿರೂರು ಕಡೆಗೆ KL 44 H 3337 ನೇ ಲಾರಿ ಚಾಲಕನು ಆತನ ಲಾರಿಯನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಿಕ್ಷಾದ ಹಿಂಬದಿಗೆ ಡಿಕ್ಕಿ ಹೊಡೆದ  ಪರಿಣಾಮ KA 20C 5264 ನೇ ಆಟೋರಿಕ್ಷಾ ಚಾಲಕನು ರಿಕ್ಷಾ ಸಮೇತ ಮಗುಚಿ ರಸ್ತೆಗೆ ಬಿದ್ದಿದ್ದು  ಫಿರ್ಯಾದಿದಾರರು ತನ್ನ  ರಿಕ್ಷಾ ನಿಲ್ಲಿಸಿ  ಅಪಘಾತಕ್ಕಿಡಾದ ರಿಕ್ಷಾ ಚಾಲಕನನ್ನು ಎತ್ತಿ ಉಪಚರಿಸಿ ನೋಡಿದಾಗ ಪರಿಚಯದ ನನ್ನು ಇರ್ಫಾನ್ ಎಂಬವರಾಗಿದ್ದು  ಅಪಘಾತದ ಪರಿಣಾಮ  ಇರ್ಫಾನ್ ರವರಿಗೆ ತಲೆ, ಮೂಗು ಹಾಗೂ ಭುಜದ ಭಾಗಕ್ಕೆ ಒಳ ಜಖಂ ಉಂಟಾಗಿದ್ದು,ಮೂಗಿನ ಭಾಗ, ಕೈ ಹಾಗೂ ಎಡಕಾಲಿನ ಹೆಬ್ಬೆರಳಿಗೆ ರಕ್ತಗಾಯವಾದವರನ್ನು ಚಿಕಿತ್ಸೆ ಬಗ್ಗೆ ಕುಂದಾಪುರ ಚಿನ್ಮಯಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಿಸಲಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ  176/2022 ಕಲಂ. 279 , 337 ಐಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.  


ಅಸ್ವಾಭಾವಿಕ ಮರಣ ಪ್ರಕರಣ:

 • ಶಿರ್ವಾ:  ಪಿರ್ಯಾದಿ ಸಚಿನ್‌ ಕುಮಾರ್‌, (43),  ತಂದೆ: ಉಮಾನಾಥ ಅಮೀನ್‌, ವಾಸ: ಕೆ. ಟಿ ವಿಲ್ಲಾ, ಕುರ್ಕಾಲು ತೋಟ, ಸುಭಾಸ್‌ನಗರ ಇವರ ಚಿಕ್ಕಪ್ಪ ವಿಠಲ ಅಮಿನ್‌ (72) ರವರು ಉಡುಪಿಯ ಸಾಯಿ ರಾಧಾ ಅಪಾರ್ಟ್‌ಮೆಂಟ್‌ ನಲ್ಲಿ ತನ್ನ ಪತ್ನಿ ಶಶಿ ಅಮಿನ್‌ ರವರೊಂದಿಗೆ ವಾಸ್ತವ್ಯ ಇದ್ದು ವಾರಕೊಮ್ಮೆ ಪಿರ್ಯಾದುದಾರರ ಮನೆಗೆ ಬಂದು ಹೋಗುತ್ತಿದ್ದಾರೆ. ವಿಠಲ ಅಮಿನ್‌ ರವರಿಗೆ ರಕ್ತದ ಒತ್ತಡ ಇದ್ದು ಸುಮಾರು 6 ತಿಂಗಳ ಹಿಂದೆ ಪಾರ್ಶ್ವವಾಯು ಆಗಿದ್ದು ಬಲ ಕೈ ಹಾಗೂ ಬಲ ಕಾಲು ಬಲ ಹೀನವಾಗಿರುತ್ತದೆ. ವಿಠಲ ಅಮಿನ್‌ ರವರು ದಿನಾಂಕ 03.09.2022 ರಂದು ಸಂಜೆ 05:00 ಗಂಟೆಗೆ ತನ್ನ ಪತ್ನಿ ಶಶಿ ಅಮಿನ್‌ರವರೊಂದಿಗೆ ಪಿರ್ಯಾದುದಾರರ ಮನೆಗೆ ಬಂದಿದ್ದು ಬಳಿಕ ಪಿರ್ಯಾದುದರರ ಮನೆಯ ಅಂಗಳದಲ್ಲಿ ವಾಕಿಂಗ್‌ ಮಾಡುತ್ತಿದ್ದು. ಪಿರ್ಯಾದುದಾರರು ಮನೆಯೊಳಗಡೆ ಇದ್ದು 05:30 ಗಂಟೆಗೆ ಬಾವಿಗೆ ಯಾರೋ ಬಿದ್ದ ಜೋರಾದ ಶಬ್ದ ಕೇಳಿ ಬಾವಿಯ ಬಳಿ ಬಂದು ನೋಡಿದಾಗ ವಿಠಲ ಅಮಿನ್‌ ರವರು ನೀರಿನಲ್ಲಿ ಮುಳುಗಿ ಹೋಗಿದ್ದರು ನಂತರ ಅಗ್ನಿಶಾಮಕ ದಳದವರನ್ನು ಕರೆಸಿ 06:15 ಗಂಟೆಗೆ ಮೇಲಕ್ಕೆ ಎತ್ತಿ ನೋಡಲಾಗಿ ವಿಠಲ ಅಮಿನ್‌ ಅವರು ಮೃತಪಟ್ಟಿರುವುದು ಕಂಡು ಬಂತು .ವಿಠಲ್ ಅಮಿನ್‌ ರವರು ವಾಕಿಂಗ್ ಮಾಡುತ್ತಾ ಮನೆಯ ಬಳಿ ಇರುವ ಬಾವಿಯ ದಂಡೆಯ ಮೇಲೆ  ಕುಳಿತವರು ಆಯ ತಪ್ಪಿ ಬಾವಿಯೊಳಗೆ  ಬಿದ್ದಿರುವುದಾಗಿದೆ. ಇವರ  ಮರಣದಲ್ಲಿ  ಬೇರೆ ಯಾವುದೇ  ಸಂಶಯ  ಇರುವುದಿಲ್ಲ. ಈ ಬಗ್ಗೆ ಶಿರ್ವ ಪೊಲೀಸ್ ಠಾಣೆ ಯುಡಿಆರ್‌ 24/2022  ಕಲಂ 174  ಸಿಆರ್‌ಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.  


ಇತರ ಪ್ರಕರಣಗಳು

 • ಕಾಪು: ಪಿಯಾ೯ದಿ ಪೂಣೆ೯ಶ್‌ ಪ್ರಾಯ:22 ವಷ೯  ತಂದೆ:ಉಮೇಶ ಆಚಾಯ೯  ವಾಸ: ಸಂಪಿಗೆ ನಗರ ಉದ್ಯಾವರ ಗ್ರಾಮ ಇವರಿಗೂ ಹಾಗೂ ಆವರ ಸ್ನೇಹಿತನಾದ  ರಾಯನ್‌ ರೋಷನ್‌ ಮುಯ೯ನಿಗೂ ಎರಡು ವಷ೯ದ ಹಿಂದೆ ರಾಯನ್‌ ರೋಷನ್‌ ಮುಯ೯, ಧನುಷ್‌ ಎಂಬವನ ಸ್ನೇಹ ಮಾಡಿದ ವಿಚಾರವಾಗಿ  ಜಗಳವಾಗಿದ್ದು, ಆ ಬಳಿಕ ಪಿಯಾ೯ದಿ ಹಾಗೂ ರಾಯನ್‌ ರೋಷನ್‌ ಮುಯ೯ ನಡುವೆ ಮಾತುಕತೆ ಇಲ್ಲದೇ ಇದ್ದು, ಈ ದಿನ ದಿನಾಂಕ:03/09/2022 ರಂದು ಸಂಜೆ 4:00 ಗಂಟೆಗೆ ಪಿಯಾ೯ದಿದಾರರು ಮನೆಯಲ್ಲಿರುವ ಸಮಯ ರಾಯನ್‌ ರೋಷನ್‌ ಮುಯ೯ ಪಿಯಾ೯ದಿಗೆ ಕರೆಮಾಡಿ  ನಮ್ಮ ಸ್ನೇಹ ಸರಿಮಾಡಿಕೊಳ್ಳುವ  ಸಂಜೆ 5:30 ಗಂಟೆಗೆ  ಉದ್ಯಾವರದ ಸಂಪಿಗೆ ನಗರ ಎಂಬಲ್ಲಿಗೆ ಬರುವಂತೆ ತಿಳಿಸಿದ್ದು, ಅದರಂತೆ ಪಿಯಾ೯ದಿದಾರರು ತನ್ನ ಸ್ನೇಹಿತನಾದ ವಷಿ೯ತ್‌ ಎಂಬವರೊಂದಿಗೆ ಪಿಯಾ೯ದಿದಾರರ ಮನೆಯಿಂದ ನೆಡೆದುಕೊಂಡು  ಹೊರಟು  ಸಂಜೆ 5:30 ಗಂಟೆ ಸಮಯಕ್ಕೆ ಉದ್ಯಾವರದ ಸಂಪಿಗೆ ನಗರ ಜಂಕ್ಷನ್‌ ಬಳಿ ನಿಂತಿರುವಾಗ  ಆರೋಪಿಗಳಾದ ರಾಯನ್‌ ರೋಷನ್‌ ಮುಯ೯ ಮತ್ತು ಧನುಷ್‌ ರವರು ಬೈಕ್‌ ಒಂದರಲ್ಲಿ ಬಂದು, ರಾಯನ್‌ ರೋಷನ್‌ ಮುಯ೯ ಬೈಕನ್ನು ಪಿಯಾ೯ದಿದಾರರ  ಎದುರುಗಡೆ  ನಿಲ್ಲಿಸಿ , ಪಿಯಾ೯ದಿದಾರರ ಬಳಿ ಬಂದು  ನಿನ್ನ ಸ್ನೇಹ ಯಾರಿಗೆ ಬೇಕು ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ ಈಗಲೇ ಕೊಂದು ಹಾಕುತ್ತೇನೆ ಎಂದು ಹೇಳಿ ತನ್ನ ಬೈಕಿನಲ್ಲಿದ್ದ ಕಬ್ಬೀಣದ ರಾಡನ್ನು ತೆಗೆದುಕೊಂಡು ಏಕಾಏಕಿ ಪಿಯಾ೯ದಿಯ ತಲೆಗೆ ಹಲ್ಲೆ ನೆಡೆಸಿದ್ದು ಇದರಿಂದ ಪಿಯಾ೯ದಿದಾರರ ತಲೆಗೆ ತೀವೃ ರಕ್ತಗಾಯವಾಗಿರುತ್ತದೆ. ಈ ಸಮಯ ರಾಯನ್‌ ರೋಷನ್‌ ಮುಯ೯ ಜೊತೆಗೆ ಇದ್ದ ಧನುಷ್ ನು ಬೈಕಿನಲ್ಲಿದ್ದ  ಮರದ ದೊಣ್ಣೆಯನ್ನು ತೆಗೆದುಕೊಂಡು ಪಿಯಾ೯ದಿದಾರರ ಬೆನ್ನಿಗೆ, ಹೊಟ್ಟೆಗೆ ಹೊಡೆದು ಹಲ್ಲೆ ನೆಡೆಸಿದ್ದು, ಹೊಡೆತ ತಪ್ಪಿಸಿಕೊಳ್ಳಲು ಪ್ರಯತ್ನಿಸುವಾಗ ಮರದ ದೊಣ್ಣೆ ಪಿಯಾ೯ದಿದಾರರ ಬಲಕೈಯ ಮಧ್ಯದ ಬೆರಳಿಗೆ ತಾಗಿ ರಕ್ತಗಾಯವಾಗಿರುತ್ತದೆ.  ತಪ್ಪಿಸಲು ಬಂದ ಪಿಯಾ೯ದಿದಾರರ ಸ್ನೇಹಿತ ವಷಿ೯ತ್‌ ನಿಗೆ ಕೂಡ ಕೈಯಿಂದ ಹಲ್ಲೆ ನೆಡೆಸಿ ಅವರು ಬಂದ ಬೈಕಿನಲ್ಲಿ ಅಲ್ಲಿಂದ ಹೋಗಿರುತ್ತಾರೆ. ಹಲ್ಲೆಯಿಂದ ಗಾಯಗೊಂಡ ನನ್ನನ್ನು  ಸುಧೀರ್ ಎಂಬವರು ರಿಕ್ಷಾವೊಂದರಲ್ಲಿ ಉಡುಪಿ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಿದಾಖಲಿಸಿರುತ್ತಾರೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆ ಅ.ಪರಾಧ ಕ್ರಮಾಂಕ  97/2022 ಕಲಂ : 307,323 324,504,506, ಜೊತೆಗೆ 34 ಐ.ಪಿ.ಸಿ. ಯಂತೆ ಪ್ರಕರಣ ದಾಖಲಿಸಲಾಗಿದೆ.
 • ಕಾಪು: ಪಿಯಾದಿ ರಾಯನ್‌ ರೋಷನ್‌ ಮುಯ೯ ಪ್ರಾಯ:22 ವಷ೯ ತಂದೆ:ರಿಚಡ೯ ಲಾರೆನ್ಸ್‌ ವಾಸ:ಮಂಥೆರಾ ವರ ಬಾಡಿಗೆ ಮನೆ ಸಿಂಡಿಕೇಟ್‌ ಬ್ಯಾಂಕ್‌ ಎದುರು ಪಿತ್ರೋಡಿ, ಇವರು ದಿನಾಂಕ:03/09/2022 ರಂದು ಆತನ ಸ್ನೇಹಿತ ಧನುಷ್‌ರವರೊಂದಿಗೆ  ಧನುಷ್‌ ರವರ ಮೋಟಾರ್‌ ಸೈಕಲ್ಲಿನಲ್ಲಿ ಪಿತ್ರೋಡಿಯಿಂದ ಸಂಪಿಗೆ ನಗರ ಕಡೆಗೆ ಹೋಗುವಾಗ ಪಿಯಾ೯ದಿದಾರರು ತನ್ನ ಮೊಬೈಲ್‌ನಿಂದ ಪೂಣೇ೯ಶ್‌ ಆಚಾಯ೯ನಿಗೆ ಕರೆಮಾಡಿ 5:30 ಗಂಟೆಗೆ ಸಂಪಿಗೆ ನಗರ ಜಂಕ್ಷನ್‌ ಬಳಿ ಬಾ, ನಿನ್ನ ಬಳಿ ಮಾತನಾಡಲು ಇದೇ ಎಂದು ಹೇಳಿದಂತೆ  ಪಿಯಾ೯ದಿದಾರರು ಹಾಗೂ ಧನುಷ್‌ ಸಂಪಿಗೆ ನಗರ ಜಂಕ್ಷನ್‌ ಬಳಿ ಸಂಜೆ 6:30 ಗಂಟೆಗೆ ತಲುಪಿದಾಗ ಜಂಕ್ಷನ್‌ನಲ್ಲಿ ಆರೋಪಿಯಾದ ಪೂಣೆ೯ಶ್‌ ಮತ್ತು ಆತನ ಸ್ನೇಹಿತ ವಷಿ೯ತ್‌ ಮಾತನಾಡಿಕೊಂಡು ನಿಂತಿದ್ದು, ಪಿಯಾ೯ದಿದಾರರು ಪೂಣೆ೯ಶ್‌ನಲ್ಲಿ  ಮಾತನಾಡಲು ಹೋದಾಗ, ಪೂಣೇ೯ಶನು ನಿನ್ನ ಸ್ನೇಹ ನನಗೆ ಬೇಕಾಗಿಲ್ಲ” ಎಂದು ಅವಾಚ್ಯ ಶಬ್ದದಿಂದ ಬೈದು ಪಿಯಾ೯ದಿದಾರರ ಮೈಗೆ ಕೈಹಾಕಿ ಕೈಯಿಂದ ಹೊಡೆದು ದೂಡಿದ  ಪರಿಣಾಮ ಪಿಯಾ೯ದಿದಾರು ಕೆಳಗೆ ಬಿದ್ದಿದ್ದು, ಅವರ ಬಲಕಾಲಿನ ಗಂಟಿನ ಕೆಳಗೆ ಹಾಗೂ ಎಡಮೊಣಕೈ ಬಳಿ ತರಚಿದ ಗಾಯವಾಗಿರುತ್ತದೆ. ಬಳಿಕ ಆರೋಪಿತ ಹಾಗೂ ವಷಿ೯ತ್‌  ಅಲ್ಲಿಂದ ಓಡಿ ಹೋಗಿರುತ್ತಾರೆ.ನಂತರ ಪಿಯಾ೯ದಿದಾರರ ತಂದೆ ಹಾಗೂ ಧನುಷ ಕೂಡಲೇ ಪಿಯಾ೯ದಿದಾರರನ್ನು ಚಿಕಿತ್ಸೆಯ ಬಗ್ಗೆ ಒಂದು ವಾಹನದಲ್ಲಿ ಉಡುಪಿ ಜಿಲ್ಲಾ ಸಕಾ೯ರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿರುತ್ತಾರೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ  98/2022 ಕಲಂ : 323 504, ಐ.ಪಿ.ಸಿ. ಯಂತೆ ಪ್ರಕರಣ ದಾಖಲಿಸಲಾಗಿದೆ.  

ಇತ್ತೀಚಿನ ನವೀಕರಣ​ : 04-09-2022 11:06 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080