ಅಭಿಪ್ರಾಯ / ಸಲಹೆಗಳು

ಇತರ ಪ್ರಕರಣಗಳು

  • ಬ್ರಹ್ಮಾವರ: ಪಿರ್ಯಾದಿದಾರರಾದ ಶ್ರೀಮತಿ ಸರಸ್ವತಿ (40), ಗಂಡ: ದೇವದಾಸ್‌, ವಾಸ: ಹೆಬ್ಬಾರ್‌ಬೆಟ್ಟು, ನೀಲಾವರ ಗ್ರಾಮ, ಬ್ರಹ್ಮಾವರ ತಾಲೂಕು ಇವರು ದಿನಾಂಕ 02/09/2021 ರಂದು ಸಂಜೆ 5:00 ಗಂಟೆಗೆ ಮನೆಯಲ್ಲಿರುವಾಗ ಅವರ ಮೊಬೈಲ್‌ ಗೆ ಯಾರೋ ಅಪರಿಚಿತ ಆರೋಪಿಯು ಕರೆ ಮಾಡಿ ಪಿರ್ಯಾದಿದಾರರಿಗೆ ಹಾಗೂ ಅವರ ಗಂಡ ಹಾಗೂ ಮಕ್ಕಳಿಗೆ ಅವಾಚ್ಯ ಶಬ್ದಗಳಿಂದ ಬೈದು, ನಿಂದಿಸಿ  ಜೀವ ಬೆದರಿಕೆ ಹಾಕಿರುವುದಾಗಿದೆ. ಅಲ್ಲದೇ ಆರೋಪಿಗಳಾದ ಅಶೋಕ ಮತ್ತು ಚಂದ್ರಕಾಂತ ಎಂಬುವವರು ಕರೆ ಮಾಡಿದವರಿಗೆ ಪ್ರಚೋದನೆ ಮಾಡಿರುವುದಾಗಿ ನೀಡಿದ ದೂರಿನಂತೆ ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 164/2021 ಕಲಂ:  504, 506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಮಲ್ಪೆ: ಪಿರ್ಯಾದಿದಾರರಾದ ಹೊನ್ನಯ್ಯ ಕುಂದರ್ (66), ತಂದೆ: ಐತು ಕಾಂಚನ್, ವಾಸ: ಹೊನ್ನಸುಮ, ತೊಟ್ಟಂ, ಬಡನಿಡಿಯೂರು ಗ್ರಾಮ, ಉಡುಪಿ ತಾಲೂಕು ಇವರು ಆರೋಪಿಗಳಾದ 1)ಶರತ್ ಎಲ್ ಕರ್ಕೆರಾ, 2) ಅನಿಲ್ ವಿ ಸಾಲ್ಯಾನ್, 3) ಉಮಾನಾಥ ಜಿ ಸುವರ್ಣ, 4) ಸುಭಾಸ್ ಮೆಂಡನ್ ಇವರೊಂದಿಗೆ ಮಲ್ಪೆ ಫಿಶರೀಸ್ ನ ಪಾಲುದಾರರಾಗಿದ್ದು, ಆರೋಪಿತರ ವ್ಯವಹಾರದಲ್ಲಿ ಜೂನ್ 2020 ರಲ್ಲಿ ಹಣದ ಅಡಚಣೆ ಉಂಟಾದಾಗ ಆರೋಪಿತರೆಲ್ಲರೂ ಪಿರ್ಯಾದಿದಾರರನ್ನು ಸಂಪರ್ಕಿಸಿ ರೂಪಾಯಿ  5,00,000/- ಸಾಲ ನೀಡಲು ಕೇಳಿಕೊಂಡಿದ್ದು ಪಿರ್ಯಾದಿದಾರರು ತನ್ನ ಸಿಂಡಿಕೇಟ್ ಬ್ಯಾಂಕ್ ಕೆಮ್ಮಣ್ಣು ಶಾಖೆ ಓಡಿ ಅಕೌಂಟ್ ನಿಂದ ಚೆಕ್ ಮುಖಾಂತರ ಹಣವನ್ನು ನೀಡಿದ್ದು ಅದಕ್ಕೆ ಪ್ರತಿಯಾಗಿ ಆರೋಪಿತರು ಪಿರ್ಯಾದಿದಾರರಿಗೆ 2 ಚೆಕ್ ನೀಡಿದ್ದು ,ಪಿರ್ಯಾದಿದಾರರು ಆರೋಪಿತರಲ್ಲಿ ಹಣವನ್ನು ಹಿಂದಿರಿಗಿಸಲು ಕೇಳಿಕೊಂಡರೂ ನೀಡಿರುವುದಿಲ್ಲ, ಆರೋಪಿತರೆಲ್ಲರೂ 2021 ಜೂನ್ ಅಲ್ಲಿ ಪಿರ್ಯಾದಿದಾರರಿಗೆ ಹಣ ವಾಪಾಸು ನೀಡುತ್ತೇವೆ ಎಂದು ವಾಗ್ದಾನ ಮಾಡಿ ಸಹಿಯನ್ನು ಬೇರೆ ರೀತಿಯಲ್ಲಿ ಬರೆದು ಚೆಕ್ ಬೌನ್ಸ್ ಆಗಲೆಂದೇ ಚೆಕ್ ನೀಡಿದ್ದು ಚೆಕ್‌ಅನ್ನು ಪಿರ್ಯಾದಿದಾರರು ಬ್ಯಾಂಕ್‌ ನಲ್ಲಿ ಕಲೆಕ್ಷನ್ ಗೆ ಹಾಕಿದಾಗ ಸಹಿಯಲ್ಲಿ ವ್ಯತ್ಯಾಸ ಇದೆ ಎಂಬುದಾಗಿ ಬ್ಯಾಂಕ್ ಅವರು ತಿಳಿಸಿದ್ದು. ಪಿರ್ಯಾದಿಗೆ ಆರೋಪಿತರೆಲ್ಲರೂ ಸೇರಿ ಸುಳ್ಳು  ಭರವಸೆ ನೀಡಿ   ದೊಡ್ಡ ಮೊತ್ತದ ಹಣವನ್ನು ಲಪಟಾಯಿಸಿ ಮೋಸ ಹಾಗೂ ನಂಬಿಕೆ ದ್ರೋಹ  ಮಾಡಿರುವುದಾಗಿ ನೀಡಿದ ದೂರಿನಂತೆ ಮಲ್ಪೆ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 100/2021 ಕಲಂ: 420 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   

ಇತ್ತೀಚಿನ ನವೀಕರಣ​ : 04-09-2021 09:33 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ