Feedback / Suggestions

ಇತರ ಪ್ರಕರಣಗಳು

  • ಬ್ರಹ್ಮಾವರ: ಪಿರ್ಯಾದಿದಾರರಾದ ಶ್ರೀಮತಿ ಸರಸ್ವತಿ (40), ಗಂಡ: ದೇವದಾಸ್‌, ವಾಸ: ಹೆಬ್ಬಾರ್‌ಬೆಟ್ಟು, ನೀಲಾವರ ಗ್ರಾಮ, ಬ್ರಹ್ಮಾವರ ತಾಲೂಕು ಇವರು ದಿನಾಂಕ 02/09/2021 ರಂದು ಸಂಜೆ 5:00 ಗಂಟೆಗೆ ಮನೆಯಲ್ಲಿರುವಾಗ ಅವರ ಮೊಬೈಲ್‌ ಗೆ ಯಾರೋ ಅಪರಿಚಿತ ಆರೋಪಿಯು ಕರೆ ಮಾಡಿ ಪಿರ್ಯಾದಿದಾರರಿಗೆ ಹಾಗೂ ಅವರ ಗಂಡ ಹಾಗೂ ಮಕ್ಕಳಿಗೆ ಅವಾಚ್ಯ ಶಬ್ದಗಳಿಂದ ಬೈದು, ನಿಂದಿಸಿ  ಜೀವ ಬೆದರಿಕೆ ಹಾಕಿರುವುದಾಗಿದೆ. ಅಲ್ಲದೇ ಆರೋಪಿಗಳಾದ ಅಶೋಕ ಮತ್ತು ಚಂದ್ರಕಾಂತ ಎಂಬುವವರು ಕರೆ ಮಾಡಿದವರಿಗೆ ಪ್ರಚೋದನೆ ಮಾಡಿರುವುದಾಗಿ ನೀಡಿದ ದೂರಿನಂತೆ ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 164/2021 ಕಲಂ:  504, 506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಮಲ್ಪೆ: ಪಿರ್ಯಾದಿದಾರರಾದ ಹೊನ್ನಯ್ಯ ಕುಂದರ್ (66), ತಂದೆ: ಐತು ಕಾಂಚನ್, ವಾಸ: ಹೊನ್ನಸುಮ, ತೊಟ್ಟಂ, ಬಡನಿಡಿಯೂರು ಗ್ರಾಮ, ಉಡುಪಿ ತಾಲೂಕು ಇವರು ಆರೋಪಿಗಳಾದ 1)ಶರತ್ ಎಲ್ ಕರ್ಕೆರಾ, 2) ಅನಿಲ್ ವಿ ಸಾಲ್ಯಾನ್, 3) ಉಮಾನಾಥ ಜಿ ಸುವರ್ಣ, 4) ಸುಭಾಸ್ ಮೆಂಡನ್ ಇವರೊಂದಿಗೆ ಮಲ್ಪೆ ಫಿಶರೀಸ್ ನ ಪಾಲುದಾರರಾಗಿದ್ದು, ಆರೋಪಿತರ ವ್ಯವಹಾರದಲ್ಲಿ ಜೂನ್ 2020 ರಲ್ಲಿ ಹಣದ ಅಡಚಣೆ ಉಂಟಾದಾಗ ಆರೋಪಿತರೆಲ್ಲರೂ ಪಿರ್ಯಾದಿದಾರರನ್ನು ಸಂಪರ್ಕಿಸಿ ರೂಪಾಯಿ  5,00,000/- ಸಾಲ ನೀಡಲು ಕೇಳಿಕೊಂಡಿದ್ದು ಪಿರ್ಯಾದಿದಾರರು ತನ್ನ ಸಿಂಡಿಕೇಟ್ ಬ್ಯಾಂಕ್ ಕೆಮ್ಮಣ್ಣು ಶಾಖೆ ಓಡಿ ಅಕೌಂಟ್ ನಿಂದ ಚೆಕ್ ಮುಖಾಂತರ ಹಣವನ್ನು ನೀಡಿದ್ದು ಅದಕ್ಕೆ ಪ್ರತಿಯಾಗಿ ಆರೋಪಿತರು ಪಿರ್ಯಾದಿದಾರರಿಗೆ 2 ಚೆಕ್ ನೀಡಿದ್ದು ,ಪಿರ್ಯಾದಿದಾರರು ಆರೋಪಿತರಲ್ಲಿ ಹಣವನ್ನು ಹಿಂದಿರಿಗಿಸಲು ಕೇಳಿಕೊಂಡರೂ ನೀಡಿರುವುದಿಲ್ಲ, ಆರೋಪಿತರೆಲ್ಲರೂ 2021 ಜೂನ್ ಅಲ್ಲಿ ಪಿರ್ಯಾದಿದಾರರಿಗೆ ಹಣ ವಾಪಾಸು ನೀಡುತ್ತೇವೆ ಎಂದು ವಾಗ್ದಾನ ಮಾಡಿ ಸಹಿಯನ್ನು ಬೇರೆ ರೀತಿಯಲ್ಲಿ ಬರೆದು ಚೆಕ್ ಬೌನ್ಸ್ ಆಗಲೆಂದೇ ಚೆಕ್ ನೀಡಿದ್ದು ಚೆಕ್‌ಅನ್ನು ಪಿರ್ಯಾದಿಯು ಬ್ಯಾಂಕ್‌ಅಲ್ಲಿ ಕಲೆಕ್ಷನ್ ಗೆ ಹಾಕಿದಾಗ ಸಹಿಯಲ್ಲಿ ವ್ಯತ್ಯಾಸ ಇದೆ ಎಂಬುದಾಗಿ ಬ್ಯಾಂಕ್ ಅವರು ತಿಳಿಸಿದ್ದು. ಪಿರ್ಯಾದಿಗೆ ಆರೋಪಿತರೆಲ್ಲರೂ ಸೇರಿ ಸುಳ್ಳು  ಭರವಸೆ ನೀಡಿ   ದೊಡ್ಡ ಮೊತ್ತದ ಹಣವನ್ನು ಲಪಟಾಯಿಸಿ ಮೋಸ ಹಾಗೂ ನಂಬಿಕೆ ದ್ರೋಹ  ಮಾಡಿರುವುದಾಗಿ ನೀಡಿದ ದೂರಿನಂತೆ ಮಲ್ಪೆ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 100/2021 ಕಲಂ: 420 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   

Last Updated: 04-09-2021 09:33 AM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : UDUPI DISTRICT POLICE
Designed, Developed and Hosted by: Center for e-Governance - Web Portal, Government of Karnataka © 2024, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080