ಅಭಿಪ್ರಾಯ / ಸಲಹೆಗಳು

ಕಳವು ಪ್ರಕರಣ

  • ಉಡುಪಿ: ದಿನಾಂಕ: 03/09/2021 ರಂದು 17:30 ಗಂಟೆಯಿಂದ ದಿನಾಂಕ: 04/09/2021 ರಂದು ಬೆಳಿಗ್ಗೆ 08:30 ಗಂಟೆಯ ಮದ್ಯಾವಧಿಯಲ್ಲಿ ಪಿರ್ಯಾದಿ ಲೋಹಿತ್‌ ಜಿ. ಸಾಲಿಯಾನ್‌ ಇವರು ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದ 76 ಬಡಗುಬೆಟ್ಟು ಗ್ರಾಮದ ಉಡುಪಿ ನ್ಯಾಯಾಲಯ ಸಂಕೀರ್ಣದ ಎದುರು ಇರುವ ಅನಂತ ಟವರ್‌ ಕಟ್ಟಡದ ನೆಲಮಹಡಿಯಲ್ಲಿರುವ ಉಡುಪಿ ಜಿಲ್ಲಾ ಸೌಹಾರ್ದ ಸಂಯುಕ್ತ ಸಹಕಾರಿ ನಿಗಮ ಬೆಂಗಳೂರು ಉಡುಪಿ ಜಿಲ್ಲಾ ಸಂಪರ್ಕ ಕಛೇರಿಯ ಶಟರ್‌ಗೆ ಹಾಕಿದ್ದ ಬೀಗಗಳನ್ನು ಯಾರೋ ಕಳ್ಳರು ಬಲಾತ್ಕಾರವಾಗಿ ಮುರಿದು ಕಛೇರಿಯ ಒಳ ಪ್ರವೇಶಿಸಿ ಕಛೇರಿಯ ಡ್ರಾವರ್‌ನಲ್ಲಿದ್ದ ನಗದು ರೂ. 13,000/- ನ್ನುಕಳವು ಮಾಡಿರುವುದಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 128/2021 ಕಲಂ: 454 457 380 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

 ಇತರ ಪ್ರಕರಣ

  • ಉಡುಪಿ: ಫಿರ್ಯಾದಿದಾರರಾದ  ದೀಕ್ಷಾ ಇವರ ವಿವಾಹವು ದಿನಾಂಕ: 15/05/2015 ರಂದು ಆಪಾದಿತ ರಾಕೇಶ್‌ನೊಂದಿಗೆ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ನೇರವೇರಿದ್ದು, ಮದುವೆಯ ನಂತರ 1ವರ್ಷಗಳ ಕಾಲ ಪಿರ್ಯಾದಿದಾರರು ಆಪಾದಿತನ ಜೊತೆ ಅವನ ತಂದೆ ತಾಯಿಯ ಮನೆಯಾದ ಬಡಾ ಎರ್ಮಾಳು ಎಂಬಲ್ಲಿ ವಾಸವಾಗಿದ್ದು, ಆ ಸಮಯದಲ್ಲಿ ಆಪಾದಿತ ಕ್ಷುಲ್ಲಕ ಕಾರಣಕ್ಕೆ ಪಿರ್ಯಾದಿದಾರರಿಗೆ ಹೊಡೆದು ಬಡಿಯುವ ಪ್ರವೃತ್ತಿಯನ್ನು ಹೊಂದಿದ್ದನು. ನಂತರ ಪಿರ್ಯದಿದಾರರು ಆಪಾದಿತನೊಂದಿಗೆ ಮಲ್ಪೆ ವಡಬಾಂಡೇಶ್ವರ ಬಳಿ ಬಾಡಿಗೆ ಮನೆಯಲ್ಲಿ ಸುಮಾರು 6 ವರ್ಷಗಳ ಕಾಲ ವಾಸವಾಗಿದ್ದು ಸದ್ರಿ ಸಮಯದಲ್ಲಿಯೂ ಸಹ ಆಪಾದಿತ ಆಗಾಗ ಕಾರಣವಿಲ್ಲದೇ ಜಗಳ ಮಾಡುತ್ತಿದ್ದು ಅವಾಚ್ಯ ಶಬ್ದಗಳಿಂದ ಬೈದು,ನಿಂದಿಸಿ ಮಾನಸಿಕ ಹಿಂಸೆ ನೀಡುತ್ತಿದ್ದರು. ಕೊಂದು ಬಿಸಾಡುತ್ತೇನೆ ಎಂದು ತುಳು ಭಾಷೆಯಲ್ಲಿ ಜೀವಬೆದರಿಕೆ ಹಾಕಿದ್ದು, ಪಿರ್ಯಾದಿದಾರರು ಹೆದರಿ ಅದೇ ದಿನ ತನ್ನ ತಾಯಿಮನೆಗೆ ಹೋಗಿದ್ದು,ದಿನಾಂಕ: 23/07/2021 ರಂದು ಬೆಳಿಗ್ಗೆ ಸುಮಾರು 09:00 ಗಂಟೆಗೆ ಕಾಪು ಶ್ರೀ ಕಾಳಿಕಾಂಬಾ ದೇವಸ್ಥಾನದ ಬಳಿ ಪಿರ್ಯಾದಿದಾರರಿಗೆ ಅವಾಚ್ಯವಾಗಿ ಬೈದು ನಿನ್ನನ್ನು ಜೀವಸಹಿತ ಬಿಡುವುದಿಲ್ಲಎಂದು ಬೆದರಿಕೆ ಹಾಕಿರುವುದಾಗಿದೆ. ಈ ಬಗ್ಗೆ ನ್ಯಾಯಾಲಯದ ಖಾಸಗಿ ದೂರಿನಂತೆ ಉಡುಪಿ ಮಹಿಳಾ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 38/2021 ಕಲಂ:420, 498(ಎ), 504, 506ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 04-09-2021 05:56 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ