ಅಭಿಪ್ರಾಯ / ಸಲಹೆಗಳು

ಅಫಘಾತ ಪ್ರಕರಣ

  • ಬ್ರಹ್ಮಾವರ: ದಿನಾಂಕ:02/08/2022 ರಂದು ಫಿರ್ಯಾದಿ ದಿನೇಶ್ ನಾಯ್ಕರವರು ಅಶೋಕನೋಂದಿಗೆ ಸ್ಕೂಟಿಯಲ್ಲಿ ಯಡ್ತಾಡಿ ರಂಗನಕೇರಿ ಕಡೆಗೆ ಹೋಗುವ ರಸ್ತೆಯಲ್ಲಿ ಸವಾರಿ ಮಾಡಿಕೊಂಡು ಬರುತ್ತಿರುವಾಗ  ಅವರ ಎದುರಿನಲ್ಲಿ ಆರೋಪಿ  ಉಮೇಶ್ ಎಂಬವರು ಅವರ ಬಾಬ್ತು  KA.20.X.2868 ನೇ ಮೋಟಾರ್ ಸೈಕಲ್ ನಲ್ಲಿ ಕೃಷ್ಣನಾಯ್ಕ ರವರನ್ನು ಸಹ ಸವಾರರನ್ನಾಗಿ ಕುಳ್ಳಿರಿಸಿಕೊಂಡು ಅತೀ ವೇಗ ಹಾಗೂ ನಿರ್ಲಕ್ಷತನದಿಂದ ಸವಾರಿ ಮಾಡಿಕೊಂಡು ಹೋಗಿ ಸಂಜೆ ಸುಮಾರು 06:00 ಗಂಟೆಗೆ ಹೇರಾಡಿ ಗ್ರಾಮದ ಕೂಡ್ಲಿ ಬಳಿ ತಲುಪಿದಾಗ ಅವರ ಮೋಟಾರ್ ಸೈಕಲ್ ಗೆ ನಾಯಿ ಅಡ್ಡ ಬಂದಿದ್ದು, ಆಗ ಆರೋಪಿಯು ಓಮ್ಮೆಲೇ  ಅವರ ಮೋಟಾರ್ ಸೈಕಲ್ ಗೆ ಬ್ರೇಕ್  ಹಾಕಿದ ಪರಿಣಾಮ ಮೋಟಾರ್ ಸೈಕಲ್ ಸ್ಕಿಡ್ ಆಗಿ ಬಿದ್ದು, ಅದರಲ್ಲಿರುವ ಇಬ್ಬರು ಕೂಡ ರಸ್ತೆ ಮೇಲೆ ಬಿದ್ದರು. ಈ ಅಪಘಾತದ ಪರಿಣಾಮ ಮೋಟಾರ್ ಸೈಕಲ್ ಸಹ ಸವಾರ ಕೃಷ್ಣ ನಾಯ್ಕ ರವರ ತಲೆಯ ಎಡ ಬದಿಗೆ ಗುದ್ದಿದ ಒಳ ಜಖಂ ಆಗಿ  ಇತರ ಕಡೆ ತರುಚಿದ ಗಾಯವಾಗಿರುತ್ತದೆ.ಹಾಗೂ ಆರೋಪಿಗೂ ಕೂಡ ತರುಚಿದ ಗಾಯವಾಗಿರುತ್ತದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 132/2022 ಕಲಂ :279,337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಪಡುಬಿದ್ರಿ: ಪ್ರಕಾಶ್ ಸಾಲ್ಯಾನ್, ಪೊಲೀಸ್ ಉಪ ನಿರೀಕ್ಷಕರು (ತನಿಖೆ), ಪಡುಬಿದ್ರಿ ಪೊಲೀಸ್ ಠಾಣೆ  ಅವರು ದಿನಾಂಕ: 03/08/2022 ರಂದು ರಾತ್ರಿ ರೌಂಡ್ಸ್ ಕರ್ತವ್ಯದ ಬಗ್ಗೆ ಸಿಬ್ಬಂದಿಯವರೊಂದಿಗೆ ರವರೊಂದಿಗೆ ಕಾಪು ತಾಲೂಕು ನಂದಿಕೂರು ಗ್ರಾಮದ ನಂದಿಕೂರು-ಮುದರಂಗಡಿ ಕ್ರಾಸ್‌ ಬಳಿ ರಾಜ್ಯ ಹೆದ್ದಾರಿ 01 ರಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದು, ದಿನಾಂಕ: 04/08/2022 ರಂದು ಬೆಳಿಗ್ಗೆ 04:00 ಗಂಟೆಗೆ  ಕಾರ್ಕಳ ಕಡೆಯಿಂದ ಪಡುಬಿದ್ರಿ ಕಡೆಗೆ KA-19-AA-5053 ನೇ ನಂಬ್ರದ ಆಟೋ ರಿಕ್ಷಾ ಬರುತ್ತಿದ್ದುದನ್ನು ಕಂಡು ತಪಾಸಣೆಯ ಬಗ್ಗೆ ನಿಲ್ಲಿಸುವಂತೆ ಸೂಚಿಸಿದರೂ, ಆಟೋ ರಿಕ್ಷಾ ಚಾಲಕನು ನಿಲ್ಲಿಸದೇ ವೇಗವಾಗಿ ಚಲಾಯಿಸಿಕೊಂಡು ಹೋಗಿದ್ದು, ಸಿಬ್ಬಂದಿಯವರ ಜೊತೆ ಹೊಯ್ಸಳ  ವಾಹನದಲ್ಲಿ ಸದ್ರಿ ಆಟೋ ರಿಕ್ಷಾವನ್ನು ಬೆನ್ನಟ್ಟಿ ಪಾದೆಬೆಟ್ಟು ಗ್ರಾಮದ ಪಾದೆಬೆಟ್ಟು ಸುಬ್ರಹ್ಮ್ಯಣ್ಯ ದೇವಸ್ಥಾನ ದ್ವಾರದ ಬಳಿ 04:05 ಗಂಟೆಗೆ  ಸದ್ರಿ  ರಿಕ್ಷಾವನ್ನು ತಡೆದು ನಿಲ್ಲಿಸಿದಾಗ, ಚಾಲಕ ಮತ್ತು  ಅದರಲ್ಲಿದ್ದ  ಇಬ್ಬರು ವ್ಯಕ್ತಿಗಳು ಆಟೋ ರಿಕ್ಷಾದಿಂದ ಜಿಗಿದು ಓಡಿ ಹೋಗಲು ಯತ್ನಿಸಿದ್ದು, ಸಿಬ್ಬಂದಿಯವರೊಂದಿಗೆ ಅವರುಗಳನ್ನು ಬೆನ್ನಟ್ಟಿ ಹಿಡಿದು ವಿಚಾರಿಸಿದಾಗ,  ತಮ್ಮ ಬಗ್ಗೆ ಸುಳ್ಳು ಮಾಹಿತಿ ನೀಡಿ, ಮಾತನಾಡಲು ತಡವರಿಸಿದ್ದು, ನಂತರ ಕೂಲಂಕುಷವಾಗಿ ವಿಚಾರಿಸಿದಾಗ 1] ಮಹಮ್ಮದ್ ಮುನೀರ್, ಪ್ರಾಯ: 24 ವರ್ಷ, ತಂದೆ: ದಿ! ಅಹಮ್ಮದ್‌ ಬಾವ, ವಾಸ:1-112 ಕುರ್ಸುಗುಡ್ಡೆ, ಕಾಳಾವರ, ಬಜ್ಪೆ , ಮಂಗಳೂರು ತಾಲೂಕು. ದ.ಕ. ಜಿಲ್ಲೆ. 2] ಮಹಮ್ಮದ್ ಆರೀಫ್‌ @ ಮುನ್ನ, ಪ್ರಾಯ:37 ವರ್ಷ, ತಂದೆ:ಅಹಮ್ಮದ್‌ ಬಾವ, ಮನೆ ನಂ: 1-112, ಕುರ್ಸುಗುಡ್ಡೆ ಮನೆ,ಕಾಳಾವರ ಅಂಚೆ, ಬಜ್ಪೆ, ಮಂಗಳೂರು ತಾಲೂಕು, 3] ಅಕ್ಬರ್‌, ಪ್ರಾಯ: 36  ವರ್ಷ, ತಂದೆ: ದಿ! ಗೌಸ್‌ ಬಾಷಾ,  ವಾಸ: ಸ್ಮಶಾನದ ಬಳಿ, ಶರೀಫ್‌ ಎಂಬವರ ಬಾಡಿಗೆ ಮನೆ, ಕುರ್ಸುಗುಡ್ಡೆ, ಕಾಳಾವರ ಅಂಚೆ, ಬಜ್ಪೆ ಎಂಬುದಾಗಿ ತಿಳಿಸಿರುತ್ತಾರೆ. ಸದ್ರಿಯವರಲ್ಲಿ ಸುಳ್ಳು ಹೆಸರು, ವಿಳಾಸ ಹೇಳಿದ ಬಗ್ಗೆ ವಿಚಾರಿಸಿದಾಗ ಯಾವುದೇ ಸಮರ್ಪಕ ಉತ್ತರ ನೀಡಿರುವುದಿಲ್ಲ. ಆಟೋ ರಿಕ್ಷಾದ ಬಗ್ಗೆ ಕೇಳಿದಾಗ ಆಟೋ ಚಾಲಕನು ತನ್ನ ಆಟೋ ರಿಕ್ಷಾ ಎಂದು ಹೇಳಿದ್ದು, ಅದಕ್ಕೆ ಸಂಬಂಧಿಸಿದ ಯಾವುದೇ ದಾಖಲಾತಿ ಇಲ್ಲವೆಂದು ಹೇಳಿರುತ್ತಾನೆ.  ಬಳಿಕ ಸದ್ರಿ ಆಟೋ ರಿಕ್ಷಾವನ್ನು ಕೂಲಂಕುಷವಾಗಿ  ಪರಿಶೀಲಿಸಿದಾಗ ಹಿಂಬದಿ ಸೀಟಿ ಅಡಿಯಲ್ಲಿ ಒಂದು ಕಬ್ಬಿಣದ ರಾಡ್‌, ಕಟ್ಟಿಂಗ್‌ ಪ್ಲೇಯರ್‌, ಸ್ಕ್ರೂಡ್ರೈವರ್‌ ಇರುವುದು ಕಂಡುಬಂದಿದ್ದು, ಆ ಸ್ವತ್ತುಗಳನ್ನು ಅಲ್ಲಿ ಇರಿಸಿದ ಬಗ್ಗೆ ವಿಚಾರಿಸಿದಾಗ ತಾವು ಮೂವರು ಸೇರಿ ಯಾವುದಾದರೂ ಅಂಗಡಿ ಅಥವಾ ಮನೆಯಲ್ಲಿ ಕಳವು ಮಾಡುವ  ಉದ್ದೇಶದಿಂದ ಬಂದಿರುವುದಾಗಿ ತಿಳಿಸಿರುತ್ತಾರೆ. ಸದ್ರಿ ಅರೋಪಿತರು ಈ ಹಿಂದೆ ಪಡುಬಿದ್ರಿ ಠಾಣಾ ವ್ಯಾಪ್ತಿಯಲ್ಲಿ ಸುಲಿಗೆ, ಮನೆಕಳ್ಳತನ ಮತ್ತು ಬೈಕ್ ಕಳ್ಳತನ ನಡೆಸಿರುವುದಾಗಿ ತಿಳಿಸಿದ್ದು, ಸದ್ರಿ ಮೂವರು ಆರೋಪಿತರು ಯಾವುದೋ ಬೇವಾರಂಟು ತಕ್ಷೀರು ಮಾಡುವ ಉದ್ದೇಶಕ್ಕೆ ಬಂದಿರುವುದು ಹಾಗೂ ಆ ಉದ್ದೇಶಕ್ಕೆ ಉಪಯೋಗಿಸುವ ಸಲಕರಣೆಗಳನ್ನು ಹೊಂದಿದ್ದು, ಸದ್ರಿ ಆರೋಪಿತರ ವಶದಲ್ಲಿದ್ದ ಆಟೋ ರಿಕ್ಷಾದ ಬಗ್ಗೆ ದಾಖಲಾತಿ ಇಲ್ಲದೇ ಇದ್ದು, ಸದ್ರಿ ಆಟೋ ರಿಕ್ಷಾವನ್ನು ಎಲ್ಲಿಂದಲೋ ಕಳವು ಮಾಡಿಕೊಂಡು ಬಂದಿರುವುದಾಗಿ ಸಂಶಯ ಬಂದ ಮೇರೆಗೆ ಸದ್ರಿಯವರ ವಿರುದ್ದ ಪಡುಬಿದ್ರಿ ಠಾಣಾ ಅಪರಾಧ ಕ್ರಮಾಂಕ: 95/2022, ಕಲಂ: 41(1)(ಡಿ), 102 ಸಿಆರ್‌‌ಪಿಸಿ. ಮತ್ತು 379 ಜೊತೆಗೆ 34 ಐಪಿಸಿಯಂತೆ  ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಕಾರ್ಕಳ : ಪಿರ್ಯಾದಿ ವಿಜಯ್ ಪ್ರಾನ್ಸಿಸ್ ಸಲ್ದಾನ  ಇವರ ತನ್ನ ತಾಯಿ ನತಾಲಿಯ ಸಲ್ದಾನ (72) ವರ್ಷ ಇವರು ಸುಮಾರು 8 ವರ್ಷ ಗಳಿಂದ ಬಿ ಪಿ ಕಾಯಿಲೆಯಿಂದ ಬಳಲುತಿದ್ದು ಅಲ್ಲದೆ ಇತ್ತೀಚೆಗೆ ನ್ಯೂಮೋನಿಯಾ ಕಾಯಿಲೆ ಕಾಣಿಸಿಕೊಂಡಿದ್ದು ಇದರಿಂದ ಸಕ್ಕರೆ ಕಾಯಿಲೆ ಜಾಸ್ತಿಯಾಗಿ ಕಾರ್ಕಳ ಟಿ ಎಂ ಎ ಪೈ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆದುಕೊಂಡಿರುತ್ತಾರೆ. ದಿನಾಂಕ: 03/08/2022 ರಂದು ರಾತ್ರಿ 8 ಗಂಟೆಗೆ ಪಿರ್ಯಾದಿದಾರ ತಾಯಿ ನತಾಲಿಯ ಸಲ್ದಾನ ಹಾಗೂ ತಂದೆ ವಿಲಿಯಂ ಸಲ್ದಾನ ರವರು ಊಟ ಮಾಡಿ ಕೋಣೆಯಲ್ಲಿ ಮಲಗಿಕೊಂಡಿದ್ದು ಬೆಳಿಗ್ಗೆ ಸಮಯ ಸುಮಾರು 05:30 ಗಂಟೆಗೆ ತಂದೆ ವಿಲಿಯಂ ಸಲ್ದಾನ ರವರು ಎದ್ದು ನೋಡಿದಾಗ ತಾಯಿಯವರು ಮನೆಯೊಳಗಡೆ ಕಾಣದೆ ಇದ್ದು, ಪಿರ್ಯಾದಿದಾರರು ಮನೆಯ ಹೊರಗೆ ಹೋಗಿ ನೋಡಿದಾಗ ಮೃತ ದೇಹವು ಬಾವಿಯಲ್ಲಿ ತೇಲುತ್ತಿರುವುದು ಕಂಡು ಬಂತು. ಪಿರ್ಯಾದಿದಾರರ ತಾಯಿಯು ಬಿ ಪಿ , ನ್ಯೂಮೋನಿಯಾ ಹಾಗೂ ಸಕ್ಕರೆ ಕಾಯಿಲೆಯಿಂದ  ನೊಂದು ಖಿನ್ನತೆಗೆ ಒಳಗಾಗಿ ದಿನಾಂಕ: 03/08/2022 ರಿಂದ  ರಾತ್ರಿ  8 ಗಂಟೆಯಿಂದ ದಿನಾಂಕ; 04/08/2022 ರಂದು ಬೆಳಿಗ್ಗೆ 05:30 ರ ಮದ್ಯಾವಧಿಯಲ್ಲಿ ಕಾರ್ಕಳ ತಾಲೂಕು ಕೌಡೂರು ಗ್ರಾಮದ ರಂಗನಪಲ್ಕೆಯಲ್ಲಿನ ಮನೆಯ ಬಳಿ ಇರುವ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಈ ಬಗ್ಗೆ ಕಾರ್ಕಳ ನಗರ  ಪೊಲೀಸ್‌ಠಾಣೆ ಯು.ಡಿ.ಆರ್ 34/2022 ಕಲಂ: 174 ಸಿ.ಆರ್‌.ಪಿ.ಸಿ  ಯಂತೆ ಪ್ರಕರಣ ದಾಖಲಿಸಲಾಗಿದೆ.

ಇತ್ತೀಚಿನ ನವೀಕರಣ​ : 04-08-2022 05:58 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080