ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಮಣಿಪಾಲ: ದಿನಾಂಕ 01/08/2021ರಂದು ಬೆಳಿಗ್ಗೆ 10:00 ಗಂಟೆಗೆ ಪಿರ್ಯಾದಿದಾರರಾದ ಮಂಜುನಾಥ್ (48), ತಂದೆ: ಅಣ್ಣಮಲೈ, ವಾಸ: 4-690(49) ನೇತಾಜಿ ನಗರ, 4ನೇ ಅಡ್ಡ ರಸ್ತೆ, 80 ಬಡಗಬೆಟ್ಟು ಗ್ರಾಮ, ಮಣಿಪಾಲ ಉಡುಪಿ ತಾಲೂಕು ಇವರು ತನ್ನ KA-20-EG-8664 ನೇ ಸ್ಕೂಟರ್ ನಲ್ಲಿ ಮನೆಯಿಂದ ಹೊರಟು ರಾಜೀವ ನಗರ ತಲುಪಿದಾಗ ಅವರ ಪರಿಚಯದ ಕೃಷ್ಣ @ ಶೇಟ್ ಎಂಬುವರರನ್ನು ಸಹ ಸವಾರನನ್ನಾಗಿ ಕುಳ್ಳಿರಿಸಿಕೊಂಡು ಅಲೆವೂರು-ಮಣಿಪಾಲ ರಸ್ತೆಯಲ್ಲಿ ಮಣಿಪಾಲದ ಕಡೆಗೆ ಹೋಗುತ್ತೀದ್ದಾಗ ರಾಹುಲ್ ನಗರ ಆಟೋ ರಿಕ್ಷಾ ನಿಲ್ದಾಣದ ಬಳಿ ತಲುಪುತ್ತಿದಂತೆ KA-20-EW-8329 ನೇ ಬೈಕ್ ನ ಸವಾರ ಭರತ ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದರರು ಸವಾರಿ ಮಾಡಿಕೊಂಡು ಹೊಗುತಿದ್ದ KA-20-EG-8664 ನೇ ಸ್ಕೂಟರಗೆ ಹಿಂದಿನಿಂದ ಡಿಕ್ಕಿ ಹೊಡೆದು ಅಪಘಾತ ಪಡಿಸಿದ ಪರಿಣಾಮ ಎರಡೂ ವಾಹನದ ಸವಾರರು ಸ್ಕೂಟರ ಸಮೇತ ರಸ್ತೆಗೆ ಬಿದ್ದು ಪಿರ್ಯಾದಿದಾರರ ಬಲ ಗೈ ಗೆ ತರಚಿದ ಗಾಯ ಮತ್ತು ಬಲಕಾಲಿನ ಮೂಳೆ ಮುರಿತ ಉಂಟಾಗಿರುತ್ತದೆ. ಸಹ ಸವಾರರಾದ ಕೃಷ್ಣ ಎಂಬುವವರಿಗೆ ಕಾಲಿಗೆ ಗಾಯ ವಾಗಿರುತ್ತದೆ. ಪಿರ್ಯಾದಿದಾರರು ಚಿಕಿತ್ಸೆ ಬಗ್ಗೆ ಉಡುಪಿ ಸರ್ಕಾರಿ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ದಾಖಲಾಗಿರುತ್ತಾರೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 99/2021 ಕಲಂ: 279, 337, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ವಂಚನೆ ಪ್ರಕರಣಗಳು

  • ಉಡುಪಿ: ಪಿರ್ಯಾದಿದಾರರಾದ ಅಂಬೆರ್ ಕರ್ ಮೋಹನ್ ಬಾಬು .ವಿ (43), ತಂದೆ: ವಿಠಲ್ ರಾವ್,ವಾಸ: ಅಸೋಸಿಯೇಟ್ ಫ್ರೋಪೆಸರ್, Pharmacology Department, KMC, ಮಣಿಪಾಲ ಇವರು SBI Bank ಮಣಿಪಾಲ ಶಾಖೆಯಲ್ಲಿ ಎಸ್.ಬಿ ಖಾತೆ ಹೊಂದಿದ್ದು, ದಿನಾಂಕ 03/08/2021 ರಂದು ಪಿರ್ಯಾದಿದಾರರಿಗೆ ಯಾರೋ ಅಪರಿಚಿತರು ಮೇಸೇಜ್ ಸಂದೇಶ ಮಾಡಿ ಬ್ಯಾಂಕ್ ಖಾತೆಯ ಕೆವೈಸಿ ಅಪ್‌ ಡೇಟ್‌ ಮಾಡುವಂತೆ ಲಿಂಕ್‌ ಕಳುಹಿಸಿದ್ದು, ಲಿಂಕ್‌ ಕ್ಲಿಕ್ ಮಾಡಿದಾಗ ಪಿರ್ಯಾದಿದಾರರ ಎಸ್.ಬಿ.ಐ ಬ್ಯಾಂಕ್‌ ಖಾತೆಯಿಂದ 2 ಸಲ ಟ್ರಾನ್ಸ್ ಕ್ಷನ್ ಮಾಡಿ ರೂಪಾಯಿ 20,000/-,ಹಾಗೂ 13,500/- ರೂಪಾಯಿಯಂತೆ ಒಟ್ಟು 33,500/- ಹಣವನ್ನು ವಿದ್ ಡ್ರಾ ಆಗಿರುವುದಾಗಿದೆ. ಈ ಬಗ್ಗೆ ಸೆನ್ ಅಪರಾಧ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 40/2021 ಕಲಂ:66(c), 66(d) ಐ.ಟಿ. ಆಕ್ಟ್ ಮತ್ತು ಕಲಂ : 420 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಉಡುಪಿ: ಪಿರ್ಯಾದಿದಾರರಾದ ಶ್ರೀಮತಿ ಲಿನೆಟ್‌ ಸೀಮಾ ರೊಡ್ರಿಗಸ್‌ (38), ಗಂಡ: ರೋಶನ್‌ ಸಲ್ದಾನ, ವಾಸ: ಬ್ಯಾಂಕ್‌ ಆಫ್‌ ಬರೋಡದ ಎದುರು, ಶಂಕರಪುರ ಅಂಚೆ, ಉಡುಪಿ ತಾಲೂಕು ಇವರು ಕುವೈಟ್‌ ದೇಶದಲ್ಲಿ ಉದ್ಯೋಗದಲ್ಲಿದ್ದು, ದಿನಾಂಕ 19/05/2021 ರಂದು ಫೇಸ್‌ಬುಕ್‌ ಮೂಲಕ ಆರೋಪಿ ಡಾ. ಆ್ಯಂಡ್ರಿವ್‌ ಫೆಲಿಕ್ಸ್‌ ಎಂಬುವವರ ಪರಿಚಯ ಆಗಿದ್ದು, ಆರೋಪಿಯು ತಾನು ಡಾಕ್ಟರ್‌ ಆಗಿದ್ದು, ದೆಹಲಿಗೆ ಬಂದು ಒಂದು ಫಾರ್ಮಸಿಯನ್ನು ತೆರೆಯುತ್ತೇನೆ ಎಂದು ಪಿರ್ಯಾದುದಾರರನ್ನು ನಂಬಿಸಿ ಪಿರ್ಯಾದಿದಾರರೊಂದಿಗೆ ವಾಟ್ಸಪ್‌ ನಿಂದ ಸಂಪರ್ಕ ಹೊಂದಿ, ಪಿರ್ಯಾದಿದಾರರಿಂದ ಹಂತ ಹಂತವಾಗಿ ರೂಪಾಯಿ 19 ಲಕ್ಷ ಹಣವನ್ನು ಬ್ಯಾಂಕ್‌ ಖಾತೆಗೆ ವರ್ಗಾಯಿಸಿಕೊಂಡು ಮೋಸ ಹಾಗೂ ನಂಬಿಕೆ ದ್ರೋಹ ಎಸಗಿರುವುದಾಗಿ ನೀಡಿದ ಮಾನ್ಯ ನ್ಯಾಯಾಲಯದ ಖಾಸಗಿ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 107/2021 ಕಲಂ: 406, 419, 420, 467, 468, 471, 120(b) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 04-08-2021 02:59 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080