ಅಭಿಪ್ರಾಯ / ಸಲಹೆಗಳು

ಜುಗಾರಿ ಪ್ರಕರಣ

  • ಕೋಟ: ದಿನಾಂಕ 03/07/2022 ರಂದು ಮಧ್ಯಾಹ್ನ ಮಧು ಬಿ.ಇ, ಪೊಲೀಸ್‌ ಉಪನಿರೀಕ್ಷಕರು, ಕೋಟ ಪೊಲೀಸ್‌ ಠಾಣೆ ಇವರಿಗೆ ಬ್ರಹ್ಮಾವರ ತಾಲೂಕು ಪಾಂಡೇಶ್ವರ ಗ್ರಾಮದ ಗೋಳಿಗರಡಿ ಹಾಡಿಯ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟು ಜುಗಾರಿ ಆಡುತ್ತಿರುವ ಬಗ್ಗೆ ಬಂದ ಮಾಹಿತಿ ಮೇರೆಗೆ ದಾಳಿ ನಡೆಸಿ 1) ಶಿವರಾಮ (44), ತಂದೆ: ಸಂಜೀವ ಪೂಜಾರಿ, ವಾಸ: 3/92ಎ ಮೂಡಕಟ್ಟು ಪಾರಂಪಳ್ಳಿ ಗ್ರಾಮ ಬ್ರಹ್ಮಾವರ ತಾಲೂಕು, 2) ರಾಜು (50), ತಂದೆ: ಕೊರಗ ಮರಕಾಲ, ವಾಸ: ಮ.ನಂ. 2/10 ಸಂಕದಕಲ್ಲು ಮೂಡಹಡು ಗ್ರಾಮ ಸಾಸ್ತಾನ ಬ್ರಹ್ಮಾವರ ತಾಲೂಕು,  3) ರಘು (46),  ತಂದೆ: ಪಂಜು ಪೂಜಾರಿ, ವಾಸ: ತೋಡುಕಟ್ಟು ಪಾರಂಪಳ್ಳಿ ಗ್ರಾಮ ಬ್ರಹ್ಮಾವರ, 4) ಶ್ರೀನಿವಾಸ (25), ತಂದೆ: ದಯಾನಂದ, ವಾಸ: ಮುದ್ದಣ್ಣಶೆಟ್ಟಿ ಕಂಪೌಂಡ್‌ ಮಾಬುಕಳ ಐರೋಡಿ ಗ್ರಾಮ ಬ್ರಹ್ಮಾವರ, 5) ಶಂಕರ (32), ತಂದೆ: ಶೀನ ಪೂಜಾರಿ, ವಾಸ: ಹದ್ದಿನಬೆಟ್ಟು ಮಡಾಬೆಟ್ಟು ಮೂಡಹಡು ಗ್ರಾಮ ಬ್ರಹ್ಮಾವರ ತಾಲೂಕು,  6) ನಾಗರಾಜ (39), ತಂದೆ: ಶೀನ ಪೂಜಾರಿ, ವಾಸ: ನಾಗಮಠ ಭಟ್ರಕಟ್ಟೆ ಹೊಸಾಳ ಗ್ರಾಮ ಬ್ರಹ್ಮಾವರ,  7) ರಾಘವೇಂದ್ರ (38), ತಂದೆ: ನರಸಿಂಹ, ವಾಸ: ಚೆನ್ನಕೇಶವ ದೇವಸ್ಥಾನದ ಬಳಿ ಗುಂಡ್ಮಿಗ್ರಾಮ ಬ್ರಹ್ಮಾವರ, 8) ಕರುಣಾಕರ (40), ತಂದೆ: ಆನಂದ ಮರಕಾಲ, ವಾಸ: ಬೆಣ್ಣೆಕುದ್ರು ದೇವಸ್ಥಾನದ ಬಳಿ ಕುಮ್ರಗೋಡು ಗ್ರಾಮ ಬ್ರಹ್ಮಾವರ ಇವರನ್ನು ವಶಕ್ಕೆ ಪಡೆದು ಜುಗಾರಿ ಆಟಕ್ಕೆ ಬಳಸಿದ ರೂಪಾಯಿ 2,250/- ಮತ್ತು 52 ಇಸ್ಪೀಟು ಎಲೆಗಳನ್ನು ಹಾಗೂ ಪೇಪರ್‌ ನ್ನು ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಕೋಟ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 106/2022 ಕಲಂ: 87 KP ACT ರಂತೆ ಪ್ರಕರಣ ದಾಖಲಾಗಿರುತ್ತದೆ.     

ಇತರ ಪ್ರಕರಣ

  • ಪಡುಬಿದ್ರಿ: 1 ನೇ ಆರೋಪಿತ ನಾಗಪ್ರಸನ್ನ ಭಟ್‌ ಇವರು ಪಿರ್ಯಾದಿದಾರರಾದ ತುಳಸಿ (43), ಗಂಡ: ಭಾಸ್ಕರರಾವ್‌, ಡೋರ್‌ ನಂ. 1-1(21)  ವಿನಾಯಕ ನಿವಾಸ್‌, ರಾಜೀವ ನಗರ ಮಣಿಪಾಲ-ಅಲೆವೂರು ರಸ್ತೆ, 80 ಬಡಗಬೆಟ್ಟು ಗ್ರಾಮ, ಉಡುಪಿ ತಾಲೂಕು ಇವರ ತಂದೆಯ ತಮ್ಮನ ಮಗನಾಗಿದ್ದು, 2 ನೇ ಆರೋಪಿತ ರಾಜಾರಾಮ ಭಟ್‌ ಇವರು ಪಿರ್ಯಾದಿದಾರರ ತಂದೆಯ ಇನ್ನೊಬ್ಬ ತಮ್ಮ ಆಗಿರುತ್ತಾರೆ. 3 ನೇ ಆರೋಪಿತ ನಾಗರಾಜ ಇವರು ಪಿರ್ಯಾದಿದಾರರ ನೇರ ತಮ್ಮ ಆಗಿರುತ್ತಾರೆ. ಪಿರ್ಯಾದಿದಾರರ ತಂದೆ ಅವರ ಸಹೋದರ ಸಹೋದರಿ ಸೇರಿ ಒಟ್ಟು 6 ಜನರಿದ್ದು, ಈ ಪೈಕಿ ಪಿರ್ಯಾದಿದಾರರ ಚಿಕ್ಕಪ್ಪ ರಘುರಾಮ ಭಟ್‌ ಮತ್ತು ತಂದೆ ಜಯರಾಮ ಭಟ್‌ ಮೃತಪಟ್ಟಿರುತ್ತಾರೆ. ಇವರೆಲ್ಲರಿಗೆ ಸೇರಿದ ಒಟ್ಟು 2.35 ಎಕ್ರೆ ಸ್ಥಿರಾಸ್ತಿ ಜಮೀನು ಕಾಪು ತಾಲೂಕು ಬಡಾ ಗ್ರಾಮದಲ್ಲಿದ್ದು ಜಮೀನನ್ನು ಕುಟುಂಬದೊಳಗೆ ವಿಭಾಗಪತ್ರ ಮಾಡಿ ದಿನಾಂಕ 20/03/2012 ರಂದು ಮುಲ್ಕಿ ಸಬ್‌ ರಿಜಿಸ್ಟ್ರಾರ್‌ ಕಛೇರಿಯಲ್ಲಿ ನೋಂದಣಿ ಆಗಿರುತ್ತದೆ.  ನೋಂದಣಿ ಸಮಯ ಪಿರ್ಯಾದಿದಾರರು ತನ್ನ ತಂದೆಯ ಪಾಲಿನಲ್ಲಿ ತನಗೆ ಬರಬೇಕಾದ ಪಾಲಿನ ಅಂಶ 10 ಸೆಂಟ್ಸ್‌ ಆಸ್ತಿಯನ್ನು ಕೇಳಿದಾಗ ಪಾಲು ನೀಡುವುದಾಗಿ ತಿಳಿಸಿ 2 ನೇ ಆರೋಪಿತನ ಭರವಸೆಯನ್ನೂ ಹಾಗೂ 3 ನೇ ಆರೋಪಿತನು ಬ್ಯಾಂಕ್‌ ಚೆಕ್‌ ನೀಡಿದ್ದು,  ಜಾಗ ನೀಡಿದ ಬಳಿಕ ಚಕ್‌ ಹಿಂತಿರುಗಿಸುವಂತೆ ತಿಳಿಸಿರುತ್ತಾರೆ. 2 ನೇ ಆರೋಪಿತನ ಒತ್ತಾಯದ ಮೇರೆಗೆ ವಿಭಾಗ ಪತ್ರಕ್ಕೆ ಮುಲ್ಕಿ ಸಬ್‌ ರಿಜಿಸ್ಟ್ರಾರ್‌ ಕಛೇರಿಯಲ್ಲಿ ನೋಂದಣಿ ಸಮಯ ಪಿರ್ಯಾದಿದಾರರು ಕೂಡಾ ಸಹಿಯನ್ನು ಹಾಕಿರುತ್ತಾರೆ. ಆ ಬಳಿಕ ಪಿರ್ಯಾದಿದಾರರಿಗೆ ಆರೋಪಿಗಳು ಪಾಲು ನೀಡದೇ ಮೋಸ ಮಾಡಿರುತ್ತಾರೆ. ಪಿರ್ಯಾದಿದಾರರಿಗೆ ಬರ ಬೇಕಾದ ಪಾಲಿನ ಜಾಗವನ್ನು 3 ನೇ ಆರೋಪಿಯು ದಿನೇಶ ಪೂಜಾರಿ ಎಂಬುವವರಿಗೆ ಮೋಸದಿಂದ  ಮಾರಾಟ ಮಾಡಿರುತ್ತಾರೆ. ಪಿರ್ಯಾದಿದಾರರು ತನ್ನ ಪಾಲಿನ ಅಂಶ ನೀಡುವಂತೆ ಕೇಳಿದಾಗ ಪಾಲು ನೀಡುವುದಾಗಿ 1 ಮತ್ತು 2 ನೇ ಆರೋಪಿಗಳು ಪಿರ್ಯಾದಿದಾರರನ್ನು ನಂಬಿಸಿರುವುದಲ್ಲದೆ 3 ನೇ ಆರೊಪಿಯು ರೂಪಾಯಿ 1,00,000.00 ಮೌಲ್ಯದ 2 ಚೆಕ್‌ ನೀಡಿದ್ದು, ಅದು ಅಮಾನ್ಯಗೊಂಡಿರುತ್ತದೆ.  ಆರೋಪಿಗಳು ಪಿರ್ಯಾದಿದಾರರಿಗೆ ಹಣವನ್ನು ನೀಡದೇ ಜಾಗವನ್ನೂ ನೀಡದೇ ಮೋಸಮಾಡಿರುತ್ತಾರೆ. ಈ ಸಂಬಂದ ಪಾಲುಪಟ್ಟಿ ರದ್ಧತಿ ಕೋರಿದ ಅರ್ಜಿಯು ಉಡುಪಿಯ ಮಾನ್ಯ 1ನೇ ಎ.ಸಿ.ಜೆ ಮತ್ತು ಜೆ.ಎಂ.ಎಫ್‌.ಸಿ. ನ್ಯಾಯಾಲಯದಲ್ಲಿ ಒ.ಎಸ್‌. ನಂ. 322/2012 ರಂತೆ ವಿಚಾರಣೆಗೆ ಬಾಕಿ ಇರುತ್ತದೆ.  ಭಾಗಪತ್ರ ತಯಾರಿಸಿ ನೋಂದಣಿ ಮಾಡುವಾಗ ಮಾನಸಿಕ ಅಸ್ವಸ್ಥೆಯಿಂದ ಬಳಲುತಿದ್ದ ಮಾನಸಿಕ ಸ್ಥಿರತೆಯನ್ನು ಕಳೆದುಕೊಂಡಿದ್ದ ನಡೆಯಲು ಅಸಾದ್ಯವಾದ ಹಾಸಿಗೆಯಿಂದ ಏಳಲಾಗದ ಸ್ಥಿತಿಯಲ್ಲಿದ್ದ  ರಘುರಾಮ ಭಟ್‌ರವರ ಮಗ ಹರೀಂದ್ರ ಭಟ್‌ ರವರ ನಕಲಿ ಸಹಿಯನ್ನು, ನಕಲಿ ಫೊಟೋ,  ನಕಲಿ ಹೆಬ್ಬೆಟ್ಟನ್ನು   1 ನೇ ಆರೋಪಿಯೇ ಹಾಕಿ, ತಾನೇ ಹರೀಂದ್ರ ಭಟ್‌ ಎಂಬುದಾಗಿ ನಂಬಿಸಿ ಮೋಸ ಮಾಡಿರುವುದಾಗಿ ನೀಡಿದ ಮಾನ್ಯ ನ್ಯಾಯಾಲಯದ ಖಾಸಗಿ ದೂರಿನಂತೆ ಪಡುಬಿದ್ರಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ  84/2022 ಕಲಂ: 120 A, 120 B, 415,420,463,465,468,471, 506  ಜೊತೆಗೆ 34  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಹೆಬ್ರಿ: ದಿನಾಂಕ 03/07/2022 ರಂದು ಸುದರ್ಶನ್ ದೊಡಮನಿ, ಪೊಲೀಸ್‌ ಉಪನಿರೀಕ್ಷಕರು, ಹೆಬ್ರಿ ಪೊಲೀಸ್ ಠಾಣೆ ಇವರಿಗೆ ಬಂದ ಮಾಹಿತಿಯಂತೆ ಚಾರಾ ನವೋದಯಾ ಶಾಲೆಯ ಬಳಿ ವಾಹನ ತಪಾಸಣೆ ಮಾಡುತ್ತಿರುವಾಗ ರಾತ್ರಿ 08:30 ಗಂಟೆಗೆ ಬೆಳಂಜೆ ಕಡೆಯಿಂದ ಒಂದು ಕಾರು ಅತೀವೇಗ ವಾಗಿ ಬರುತ್ತಿರುವುದನ್ನು ನೋಡಿ ಅದನ್ನು ನಿಲ್ಲಿಸುವಂತೆ ಸೂಚನೆ ನೀಡಿದಾಗ ಅದರ ಚಾಲಕನು ವಾಹನವನ್ನು ನಿಲ್ಲಿಸದೇ ಹೆಬ್ರಿ ಕಡೆಗೆ ಅತೀವೇಗವಾಗಿ ಚಲಾಯಿಸಿದ್ದು. ಅನುಮಾನ ಬಂದು ವಾಹನವನ್ನು ಇಲಾಖಾ ವಾಹನದಲ್ಲಿ ಬೆನ್ನಟ್ಟಿದಾಗ ಅದರ ಚಾಲಕನು ಚಾರಾ ಸರ್ಕಲ್ ಬಳಿ ಬಂದು ಬ್ರಹ್ಮಾವರ ರಸ್ತೆಯಲ್ಲಿ ಹೋಗಿ ಮಂಡಾಡಿಜೆಡ್ಡು ಬಳಿ ಕೆರೆಬೆಟ್ಟು ಕಡೆಗೆ ಹೋಗುವ ರಸ್ತೆಗೆ ತಿರುಗಿಸಿ ರಾತ್ರಿ 8:55  ಗಂಟೆಗೆ ಕೆರೆಬೆಟ್ಟು ಗ್ರಾಮದ ಕರೆಬೆಟ್ಟು ಮಹಾಲಿಂಗ ದೇವಸ್ತಾನಕ್ಕೆ ಹೋಗುವ ಕ್ರಾಸ್ ಬಳಿ ಕಾರು ನಿಲ್ಲಿಸಿ ತಪ್ಪಿಸಿಕೊಳ್ಳುವ ಉದ್ದೇಶದಿಂದ ಕಾರಿನಲ್ಲಿದ್ದ ಎರಡು ಜನರು ಕಾರಿನಿಂದ ಇಳಿದು ಓಡಿ ಹೋಗುವಾಗ ಅದರಲ್ಲಿ ಶಕೀಲ್ ಅಹಮ್ಮದ್ ಟಿ.ಕೆ ಇವರನ್ನು ಸೆರೆ ಹಿಡಿದಿದ್ದು. ಇನ್ನೊಬ್ಬನು ಕಾಡಿಗೆ ಓಡಿ ತಪ್ಪಿಸಿಕೊಂಡನು. ಸೆರೆಸಿಕ್ಕಿ ವ್ಯಕ್ತಿಯ ಹೆಸರು ವಿಳಾಸ ವಿಚಾರಿಸಿದಾಗ ತನ್ನ ಹೆಸರು ಶಕೀಲ್ ಅಹಮ್ಮದ್ .ಟಿ.ಕೆ ತಿಳಿಸಿರುತ್ತಾನೆ.  ಕಾರನ್ನು ಪರಿಶೀಲಿಸಿದಾಗ KA-53-MB-6960 ನೇ ಸ್ವಿಪ್ಟ್ ಕಾರಾಗಿದ್ದು. ಅದರ ಮುಂದಿನ ಗ್ಲಾಸ್ ಜಖಂ ಅಗಿದ್ದು. ಮುಂದಿನ ಎರಡು ಬದಿಯ ಚಕ್ರವು ಜಖಂ ಅಗಿರುತ್ತದೆ ಕಾರಿನ ಒಳಗಡೆ ಎರಡು ಜಾನುವಾರುಗಳು ಇದ್ದು. ಅವುಗಳಿಗೆ ಹಿಂಸೆಯಾಗುವ ರೀತಿಯಲ್ಲಿ ಕಟ್ಟಿ ಹಾಕಿರುವುದು ಕಂಡು ಬಂತು. ಅವುಗಳನ್ನು ಪರಿಶೀಲಿಸಿದಾಗ ಅದರಲ್ಲಿ ಒಂದು ಜಾನುವಾರು ಮೃತ ಪಟ್ಟಿರುವುದು ಕಂಡು ಬಂತು. ಈ ಬಗ್ಗೆ ಸೆರೆಸಿಕ್ಕಿ ಶಕೀಲ್ ಅಹಮ್ಮದ್ .ಟಿ.ಕೆ ಈತನಲ್ಲಿ ವಿಚಾರಿಸಿದಾಗ ತಾನು ಮತ್ತು ತನ್ನ ತಮ್ಮ ಅಕಿಲ್ ಅಹಮ್ಮದ್ ಇವರೊಂದಿಗೆ ಬೇಳಂಜೆ ಗ್ರಾಮದ ಈಸರಗದ್ದೆ ಎಂಬಲ್ಲಿ ರಸ್ತೆಯ ಬದಿಯಲ್ಲಿ ಮಲಗಿದ ಎರಡು ಜಾನುವಾರುಗಳನ್ನು ಕಳವು ಮಾಡಿ ಅವುಗಳನ್ನು ನಾವು ತಂದಿದ್ದ ಕಾರಿನಲ್ಲಿ ಅವುಗಳಿಗೆ ಹಿಂಸೆಯಾಗುವ ರೀತಿಯಲ್ಲಿ ತುಂಬಿಸಿ ಕೊಂಡು ವಧೆ ಮಾಡುವ ಬಗ್ಗೆ ಕಸಾಯಿಖಾನೆಗೆ ಮಾರಾಟ ಮಾಡಲು ಕೊಂಡು ಹೋಗುವುದಾಗಿಯೂ ಕಾರನ್ನು ತಾನೇ ಚಲಾಯಿಸಿದ್ದಾಗಿ ಹೇಳಿರುತ್ತಾನೆ. ಈ ಬಗ್ಗೆ ಹೆಬ್ರಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 29/2022 ಕಲಂ: 379, 279 ಐಪಿಸಿ ಮತ್ತು ಕಲಂ: 4,5,7,12 ಕರ್ನಾಟಕ ಜಾನುವಾರುಹತ್ಯೆ ಪ್ರತಿಬಂದಕ ಮತ್ತುಸಂರಕ್ಷಣ ಕಾಯಿದೆ 2020 ಮತ್ತು ಕಲಂ 11(1`)(ಡಿ) ಪ್ರಾಣಿಹಿಂಸಾ ಪ್ರತಿಬಂದಕ ಕಾಯಿದೆ 1960 ರಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 04-07-2022 09:55 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080