ಅಭಿಪ್ರಾಯ / ಸಲಹೆಗಳು

ಮಾಧಕ ವಸ್ತು ಸೇವನೆ ಪ್ರಕರಣ

  • ಉಡುಪಿ: ಪಿರ್ಯಾದಿದಾರರಾದ ಮಹೇಶ್‌ಟಿ.ಎಂ, ಪಿಎಸ್‌ಐ ಕಾ.ಸು-1, ಉಡುಪಿ ನಗರ ಪೊಲೀಸ್‌ಠಾಣೆ ಇವರು ದಿನಾಂಕ 02/07/2022 ರಂದು 20:00 ಗಂಟೆಗೆ ರೌಂಡ್ಸ್ ಕರ್ತವ್ಯದಲ್ಲಿರುವಾಗ ಉಡುಪಿ ತಾಲೂಕು  ಪುತ್ತೂರು ಗ್ರಾಮದ ರಾಜೀವ್‌ ನಗರದ ಕೊರಗ ಭವನದ ಬಳಿ ಆಪಾದಿತರು ಗಾಂಜಾ ಸೇವನೆ ಮಾಡುತ್ತಿರುವುದಾಗಿ ಖಚಿತ ಮಾಹಿತಿ ದೊರೆತಂತೆ, ಸಿಬ್ಬಂದಿಯವರೊಂದಿಗೆ 20:00 ಗಂಟೆಗೆ ಸದ್ರಿ ಸ್ಥಳಕ್ಕೆ ತಲುಪಿ ಆಪಾದಿತ 1) ತಿರುಪತಿ, (19) ತಂದೆ: ರಾಜ, ವಾಸ: ಬಾಳಿಗ ಫಿಶ್‌ನೆಟ್ ಬಳಿ, ನಿಟ್ಟೂರು, ಪುತ್ತೂರು ಗ್ರಾಮ, ಉಡುಪಿ ತಾಲೂಕು 2) ಕೌಶಿಕ್‌ ದೇವಾಡಿಗ (20) ತಂದೆ: ಹರೀಶ್‌ದೇವಾಡಿಗ ವಾಸ: ವಿಘ್ನೇಶ್ ನಿಲಯ, ಕಲ್ಲಕಾಂಡ ಮಾರ್ಗ, ನಿಟ್ಟೂರು, ಪುತ್ತೂರು ಗ್ರಾಮ, ಉಡುಪಿ ಇವರನ್ನು ವಶಕ್ಕೆ ಪಡೆದು, ಫಾರೆನ್ಸಿಕ್‌ ಮೆಡಿಸಿನ್‌ ವಿಭಾಗ, ಕೆ.ಎಂ.ಸಿ. ಮಣಿಪಾಲ ಇಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ತಜ್ಞ ವರದಿ ಪಡೆಯಲಾಗಿ ಆಪಾದಿತರು ನಿಷೇಧಿತ ಗಾಂಜಾ (Marijuana) ಎಂಬ ಮಾದಕ ವಸ್ತುವನ್ನು ಸೇವಿಸಿರುವುದು  ದೃಢಪಟ್ಟಿರುವುದದಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 106/2022 ಕಲಂ: 27(B) NDPS Act ರಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣಗಳು

  • ಕಾರ್ಕಳ: ಬೆಳ್ಮಣ್ ಗ್ರಾಮದ ಪುನಾರು ಶಾಲೆಯ ಬಳಿ ಶ್ರೀದೇವಿ ನಿಲಯದಲ್ಲಿ ವಾಸ ಇರುವ  ವಿನೋದ ಪ್ರಭು (60)  ರವರಿಗೆ ನಾಲ್ಕೈದು ವರ್ಷಗಳಿಂದ ಮಾನಸಿಕ ಹೃದಯ ಥೈರಾಯಿಡ್ ಕಾಯಿಲೆಗೆ ಸಂಬಂದಿಸಿದ ಉಡುಪಿ ಬಾಳಿಗಾ ಆಸ್ಪತ್ರೆ ಮತ್ತು ಕೆ ಎಂ ಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಕಾಯಿಲೆಯು ಗುಣಮುಖವಾಗಿಲ್ಲವೆಂದು ಮನೆಯವರಲ್ಲಿ ಆಗಾಗ ಬೇಸರದಿಂದ ಹೇಳಿ ಕೊಳ್ಳುತ್ತಿದ್ದು ಇದರಿಂದ ಅವರು ಅವರು ಜೀವನದಲ್ಲಿ ಮಾನಸಿಕವಾಗಿ ನೊಂದು ದಿನಾಂಕ 03/07/2022 ರಂದು ಮಧ್ಯಾಹ್ನ 02:30 ಗಂಟೆಯಿಂದ 03:00 ಗಂಟೆಯ ಮಧ್ಯ ಸಮಯದಲ್ಲಿ ಮನೆ ಎದುರಿನ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ,  ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆ ಯುಡಿಆರ್‌  ಕ್ರಮಾಂಕ 21/2022 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಪಡುಬಿದ್ರಿ: ಪಿರ್ಯಾದಿದಾರರಾದ ಸುದೇಶ ಗಂಗಾಧರ ಸಾಲಿಯಾನ್, (54) ತಂದೆ: ದಿ. ಗಂಗಾಧರ ಸಾಲಿಯಾನ್  ವಾಸ: ಸಿ2 ಗಣೇಶ ಭಾಗ್ ಸರಳಬೆಟ್ಟು ಹೆರ್ಗ ಗ್ರಾಮ ಮಣಿಪಾಲ, ಉಡುಪಿ ಇವರ ಅಣ್ಣ ಮಹೇಶ ಕುಮಾರ ಗಂಗಾಧರ ಸಾಲಿಯನಾ್ ರವರು ಸುಮಾರು 6 ವರ್ಷಗಳಿಂದ ಕಾಪು ತಾಲೂಕು ಬಡಾ ಎರ್ಮಾಳು ಗ್ರಾಮದ ಮೆ// ಬುದಗಿ ಸರ್ವಿಸ್ ಸ್ಟೇಷನ್ HPCL ಡೀಲರ್ಸ್ ಸಂಸ್ಥೆಯಲ್ಲಿ ಮೆನೇಜರ್ ಆಗಿ ಕೆಲಸ ಮಾಡುತ್ತಾ ಕಛೇರಿ ನಿವಾಸದಲ್ಲಿ ವಾಸ ಮಾಡುತ್ತಿದ್ದು, ಸುಮಾರು 2 ವರ್ಷಗಳಿಂದ ಶ್ವಾಸಕೋಶಕ್ಕೆ ಸಂಬಂಧಿಸಿದ ಕಾಯಿಲೆಯಿಂದ ಬಳಲುತ್ತಿದ್ದವರು ಮಣಿಪಾಲ ಕೆ.ಎಂ.ಸಿ. ಆಸ್ಫತ್ರೆಯಲ್ಲಿ ಈ ಬಗ್ಗೆ ಚಿಕಿತ್ಸೆ ಪಡೆಯುತ್ತಾ ಇತ್ತೀಚೆಗೆ ಸುಮಾರು 2 ತಿಂಗಳಿನಿಂದ ಆರೋಗ್ಯ ಹದಗೆಟ್ಟು ಕೃತಕ ಉಸಿರಾಟದಲ್ಲಿ ಈ ಮೇಲಿನ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದವರು ದಿನಾಂಕ 03/07/2022 ರಂದು ರಾತ್ರಿ ಅವರ ಕಛೇರಿ ನಿವಾಸದಲ್ಲಿ ರಾತ್ರಿ ವಿಶ್ರಾಂತಿ ಪಡೆಯುತ್ತಾ ಬೆಳಗ್ಗಿನ ಜಾವ 1:15 ಗಂಟೆಗೆ ಮೂರ್ತ ವಿಸರ್ಜನೆ ಮಾಡಿ ವಾಪಾಸ್ಸು ಬಂದು ಮಲಗಿದ್ದು, ಅದೇ ಕೋಣೆಯಲ್ಲಿ ಸಹೋದ್ಯೋಗಿ ಚೇತನ್ ಎಂಬವರು ವಿಶ್ರಾಂತಿ ಪಡೆದು ದಿನಾಂಕ 04/07/2022 ರಂದು ಬೆಳಗ್ಗಿನ ಜಾವ 5:15 ಗಂಟೆಗೆ ತನ್ನ ಪಾಳಿಯ ಕೆಲಸಕ್ಕೆ ತಯಾರಾಗಲು ಎದ್ದು ನೋಡಿದಾಗ ಕೃತಕ ಉಸಿರಾಟದಲ್ಲಿದ್ದ ಮಹೇಶ್ ಕುಮಾರ ಗಂಗಾಧರ ಸಾಲಿಯನಾ್ ರವರು ಯಾವುದೇ ಚಲನ ವಲನ ಇಲ್ಲದೇ ಇರುವುದನ್ನು ಕಂಡು ಸಂಸ್ಥೆಯ ಮಾಲೀಕರಿಗೆ ವಿಷಯ ತಿಳಿಸಿ ಚಿಕಿತ್ಸೆಗೆ ಮಣಿಪಾಲ ಕೆ.ಎಂ.ಸಿ. ಬೆಳಿಗ್ಗೆ. 8:15 ಗಂಟೆಗೆ ಆಸ್ಫತ್ರೆಗೆ ತಲುಪಿ ವೈದ್ಯರು ಪರೀಕ್ಷಿಸಿದಾಗ ಮಹೇಶ್ ಕುಮಾರ ಗಂಗಾಧರ ಸಾಲಿಯನಾ್ ರವರು ಮೃತಪಟ್ಟಿರುವುದಾಗಿ ತಿಳಿಸಿದ್ದು, ಮೃತರು ಶ್ವಾಸಕೋಶ ಸಂಬಂಧಿ ಖಾಯಿಲೆ ಉಲ್ಬಣಗೊಂಡು ಅಥವಾ ಇನ್ನಾವುದೋ ಕಾರಣದಿಂದ ರಾತ್ರಿ 1:15 ಗಂಟೆಯಿಂದ ಬೆಳಿಗ್ಗೆ 8:15 ಗಂಟೆಯ ಮಧ್ಯಾವಧಿಯಲ್ಲಿ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 17/2022 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಮಲ್ಪೆ: ಪಿರ್ಯದಿದಾರರಾದ ಸತೀಶ ತಂದೆ: ದಿ/ಕಾಲು ವಾಸ: ಮಾತ್ರಶ್ರೀ ವಿಷ್ಣುಮೂರ್ತಿನಗರ, ಕೆಳಾರ್ಕಳಬೆಟ್ಟು ಇವರ ತಾಯಿ ರಾಧಾ (65) ರವರು ವಯೋ ಸಹಜ ಖಾಯಿಲೆಯಿಂದ ಬಳಲುತ್ತಿದ್ದು ಸುಮಾರು 5 ವರ್ಷಗಳಿಂದ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದರು, ಆದರೂ ಅವರ ಖಾಯಿಲೆ ಗುಣ ಮುಖವಾಗಿರುವುದಿಲ್ಲ, ದಿನಾಂಕ 03/07/2022 ರಂದು ಸಂಜೆ ಸುಮಾರು 4:30 ಗಂಟೆಗೆ ರಾಧಾ ರವರು ಮನೆಯ ಬಚ್ಚಲು ಮನೆಗೆ ಹೋಗಿದ್ದು ವಾಪಾಸು ಮನೆಗೆ ಬಂದಿರುವುದಿಲ್ಲ ಸಂಜೆ ಸುಮಾರು 5:00 ಗಂಟೆಗೆ ಸತೀಶ್‌ ರವರ ಹೆಂಡತಿ ಸುನಿತಾಳು ಪಿರ್ಯಾದಿಗೆ ಪೋನ್ ಮಾಡಿ ತಿಳಿಸಿದಂತೆ ರಾಧಾ ರವರು ಮನೆಯ ಪಕ್ಕದಲ್ಲಿದ್ದ ಕೆಂಪು ಕೋರೆಯ ನೀರಿನಲ್ಲಿ ಬಿದ್ದಿರುವುದಾಗಿ ತಿಳಿಸಿದಂತೆ ಅಲ್ಲಿಗೆ ಸತೀಶ್‌ ಇವರು ಹೋದಾಗ ಸಾವಿತ್ರಿ ಹಾಗೂ ವಾಧಿರಾಜ ಹಾಗೂ ಇತರರ ಸಹಾಯದಿಂದ ರಾಧಾರವರನ್ನು ನೀರಿನಿಂದ  ಮೇಲೆ ಎತ್ತಿ  ಉಪಚರಿಸಿ ಚಿಕಿತ್ಸೆ ಬಗ್ಗೆ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಿಸಿದ್ದು ಅಲ್ಲಿ ಪರೀಕ್ಷಿಸಿದ ವೈದ್ಯರು ರಾಧಾ ರವರು ಈಗಾಗಲೇ ಮೃತಪಟ್ಟಿರುವುದಾಗಿ ತಿಳಿಸಿದ್ದು, ಮೃತ ರಾಧಾ ರವರು ಆಕಸ್ಮಿಕವಾಗಿ ಕಾಲು ಜಾರಿ ಕಲ್ಲು ಕೋರೆಯ ನೀರಿಗೆ ಬಿದ್ದು  ಮೃತಪಟ್ಟಿದ್ದು ಮೃತರ ಸಾವಿನಲ್ಲಿ ಬೇರೆ ಯಾವುದೇ ಸಂಶಯವಿರುವುದಿಲ್ಲವಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 38/2022 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 04-07-2022 06:01 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080