ಅಭಿಪ್ರಾಯ / ಸಲಹೆಗಳು

ಅಸ್ವಾಭಾವಿಕ ಮರಣ ಪ್ರಕರಣ 

  • ಮಣಿಪಾಲ : ದಿನಾಂಕ : 03/07/2021 ರಂದು 16:00 ಗಂಟೆಗೆ ಪಿರ್ಯಾದಿದಾರರಾದ ಪ್ರಾನ್ಸಿಸ್ ಡಿಸೋಜಾ ಪ್ರಾಯ : 45 ವರ್ಷ,ತಂದೆ: ಮೋತಿಡಿಸೋಜಾ ,ವಾಸ : ಮನೆ ನಂಬ್ರ : 14-91 ಅಚಾರಿಬೆಟ್ಟು ಮೂಡು ಪೆರಂಪಳ್ಳಿ, ಕುಂಜಿಬೆಟ್ಟು ಪೋಸ್ಟ್, ಶಿವಳ್ಳಿ ಗ್ರಾಮ, ಉಡುಪಿ ತಾಲೂಕು ಇವರ ತಂದೆ ಮೋತಿ ಡಿಸೋಜಾ ಪ್ರಾಯ : 74 ವರ್ಷ ರವರು ಮನೆ ಬಳಿಯ ತೋಟದಲ್ಲಿ ಕೆಲಸ ಮಾಡುತ್ತಿರುವಾಗ ವಿಷ ಪೂರಿತ ನಾಗರ ಹಾವೊಂದು ಅವರ ಬಲ ಕಾಲಿನ ಬೆರಳಿಗೆ ಕಚ್ಚಿದ್ದು, ಕೂಡಲೇ ಅವರನ್ನು ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು ವೈದ್ಯರು ಪರೀಕ್ಷಿಸಿದಲ್ಲಿ ಮೋತಿ ಡಿಸೋಜಾ ರವರು ಮೃತಪಟ್ಟಿರುತ್ತಾರೆ ಎಂಬುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 22/2021ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ 

  • ಕೋಟ: ಪಿರ್ಯಾದಿದಾರರಾದ ಜಯಂತಿ. ಎ ಮೆಂಡನ್ ಪ್ರಾಯ 46 ವರ್ಷ, ಗಂಡ: ಅಶೋಕ ಮೆಂಡನ್ ,ವಾಸ: ಲಿಲ್ಲಿ ಲುಸ್ರಾಡೋ ಬೀಚ್ ರೋಡ್ ಮಣೂರು ಪಡುಕೆರೆ ಬ್ರಹ್ಮಾವರ ತಾಲೂಕು ಇವರ ಮನೆಯ ಬಳಿಯಲ್ಲಿ ಅವರ ಚಿಕ್ಕಮ್ಮ ಗುಲಾಬಿ ಹಾಗೂ ಚಿಕ್ಕಮ್ಮನ ಗಂಡ ಬಸವರಾಜ ವಾಸ ಮಾಡಿಕೊಂಡಿರುತ್ತಾರೆ. ಚಿಕ್ಕಮ್ಮನ ಮನೆಯ ಬಳಿಯಿರುವ ಜಮೀನನ್ನು ಪಿರ್ಯಾದಿದಾರರ ಮನೆಯವರು ಖರೀದಿಸಿದ್ದು, ಜಮೀನನ್ನು ಚಿಕ್ಕಮ್ಮನ ಅತ್ತಿಗೆಯ ಮಗಳಿಗೆ ಖರೀದಿಸಬೇಕೆಂದು ಕೊಂಡಿದ್ದನ್ನು ಪಿರ್ಯಾದಿದಾರರು ಖರೀದಿಸಿದ್ದರಿಂದ ಪಿರ್ಯಾದಿದಾರರ ಮೇಲೆ ಅಸಮಾಧಾನ ದಿಂದ ಗಲಾಟೆ ಮಾಡಿ ಅವಾಚ್ಯ ಶಬ್ದದಿಂದ ಬೈದಿರುತ್ತಾರೆ. ಆದರೂ ಪಿರ್ಯಾದಿದಾರರು ಸುಮ್ಮನಿದ್ದರು. ದಿನಾಂಕ 02/07/2021 ರಂದು ಸಂಜೆ 5.00 ಗಂಟೆಗೆ ಪಿರ್ಯಾದಿದಾರರು ಮನೆಗೆ ಹೋಗುವ ರಸ್ತೆಯಲ್ಲಿ ಹೋಗುವಾಗ ಬಸವರಾಜರಲ್ಲಿ ನನ್ನ ಗಂಡನಿಗೆ ಬೆಳಿಗ್ಗೆ ಯಾಕೆ ಸುಮ್ಮನೆ ಬೈದದ್ದು ಎಂದು ಕೇಳಿದ್ದಕ್ಕೆ ಕೋಲಿನಿಂದ ಪಿರ್ಯಾದಿದಾರರ ಬೆನ್ನಿಗೆ ಹೊಡೆದಿರುತ್ತಾರೆ. ಹಾಗೆ ಪಿರ್ಯಾದಿದಾರರನ್ನು ದೂಡಿ ಅವಾಚ್ಯ ಶಬ್ದದಿಂದ ಬೈದು ಹೋಗಿರುತ್ತಾನೆ. ಪಿರ್ಯಾದಿದಾರರು ಬೆನ್ನು ನೋವು ಸರಿಯಾಗಬಹುದೆಂದು ಆಸ್ಪತ್ರೆಗೆ ಹೋಗದೇ ಇದ್ದು ಈ ದಿನ ಬೆನ್ನು ನೋವು ಜಾಸ್ತಿ ಆಗಿದ್ದರಿಂದ ಕುಂದಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿರುವುದಾಗಿ ನೀಡಿದ ದೂರಿನಂತೆ ಕೋಟ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 132/2021 ಕಲಂ: 354 ,324 ,504 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತ್ತೀಚಿನ ನವೀಕರಣ​ : 04-07-2021 08:29 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ