ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣಗಳು 

 • ಕಾರ್ಕಳ: ದಿನಾಂಕ 02/07/2021 ರಂದು ಸಂಜೆ 05:30 ಗಂಟೆಗೆ ಕಾರ್ಕಳ ತಾಲೂಕು ನಿಟ್ಟೆ ಗ್ರಾಮದ ದೂಪದಕಟ್ಟೆ ಶ್ರೀ ಮಹಾಗಣಪತಿ ದೇವಸ್ಥಾನದ ಬಳಿ, ಕಾರ್ಕಳ ಪಡುಬಿದ್ರೆ ರಾಜ್ಯ ಹೆದ್ದಾರಿಯಲ್ಲಿ KA-20-ER-705 ನೇ ಸ್ಕೂಟಿ ಸವಾರನು ಆತನ ಸ್ಕೂಟಿಯನ್ನು ನಿಟ್ಟೆ ಕಡೆಯಿಂದ ಕಾರ್ಕಳ ಕಡೆಗೆ ಅತೀವೇಗ ಹಾಗೂ ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ಬಂದು ರಸ್ತೆಯ ಬದಿಯಲ್ಲಿ ಹೋಗುತ್ತಿದ್ದ ದನವನ್ನು ನೋಡಿ ಒಮ್ಮೇಲೆ ಬ್ರೇಕ್ ಹಾಕಿದ್ದ ಪರಿಣಾಮ ಸ್ಕೂಟಿ ಸಮೇತ ರಸ್ತೆಗೆ ಬಿದ್ದ ಪರಿಣಾಮ ಆರೋಪಿ ಸವಾರ ಪ್ರವೀಣ್ ತಲೆಗೆ ಹಾಗೂ ಮುಖಕ್ಕೆ ರಕ್ತಗಾಯವಾಗಿ ಮಾತನಾಡುತ್ತಿರಲಿಲ್ಲ. ಚಿಕಿತ್ಸೆ ಬಗ್ಗೆ ಕಾರ್ಕಳ ಸಿಟಿ ಆಸ್ಪತ್ರೆಗೆ ಹೋಗಿದ್ದು , ನಂತರ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಣಿಪಾಲ ಕೆ.ಎಂ ಸಿ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 79 /2021 ಕಲಂ: 279,337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 
 • ಕಾರ್ಕಳ : ದಿನಾಂಕ 03/07/2021 ರಂದು 18:30 ಗಂಟೆಗೆ ಕಾರ್ಕಳ ತಾಲೂಕು, ಸಾಣೂರು ಗ್ರಾಮ ಪುಲ್ಕೇರಿ ಬೈಪಾಸ್‌ನಲ್ಲಿ ಪಿರ್ಯಾದಿದಾರರಾದ ಅಣ್ಣಪ್ಪ, (55), ತಂದೆ: ಪಳನಿಸ್ವಾಮಿ, ವಾಸ: ಶ್ರೀ ದುರ್ಗಾದೇವಿ ನಿಲಯ, ಹಾರ್ಜಡ್ಡು, ಕುಕ್ಕುಂದೂರು ಗ್ರಾಮ, ಕಾರ್ಕಳ ತಾಲೂಕು, ಉಡುಪಿ ಜಿಲ್ಲೆ ಇವರು ತನ್ನ ಟಿ.ವಿ.ಎಸ್. ಎಕ್ಸಲ್ ಬೈಕ್ ನಂಬ್ರ KA-20-ED-8012 ನೇಯದನ್ನು ನಲ್ಲೂರು ಕಡೆಯಿಂದ ಪುಲ್ಕೇರಿ ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಿರುವಾಗ ಸಾಣೂರು ಕಡೆಯಿಂದ ಪುಲ್ಕೇರಿ ಕಡೆಗೆ ಕಾರು ನಂಬ್ರ KA-20-MC-3828 ನೇಯದರ ಚಾಲಕನು ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪುಲ್ಕೇರಿ ಜಂಕ್ಷನ್‌ನಲ್ಲಿ ಬೈಕ್‌‌‌ಗೆ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರನ ಎಡಭಾಗದ ಸೊಂಟ, ಎದೆಯ ಎಡಭಾಗಕ್ಕೆ ಒಳ ಜಖಂ ಹಾಗೂ ಬಲಕಾಲು, ಎಡಕೈಗೆ ತರಚಿದ ರಕ್ತಗಾಯವಾಗಿರುತ್ತದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 79 /2021 ಕಲಂ: 279,337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ 

 • ಕಾರ್ಕಳ : ಪಿರ್ಯಾದಿದಾರರಾದ ಶ್ರೀಮತಿ ಶೋಭಾ ಪ್ರಾಯ: 39 ವರ್ಷ ಗಂಡ: ಅಶೋಕ ಶರವು, ವಾಸ: ರಾಮನಗರ ಅತ್ತಿಗೆರೆ ಗ್ರಾಮ ಮೂಡಿಗೆರೆ ತಾಲೂಕು ಇವರ ತಮ್ಮ ಮಂಜುನಾಥ, ಪ್ರಾಯ 29 ವರ್ಷ ಇವರು ದಿನಾಂಕ: 26/06/2021 ರಂದು ಸಂಜೆ 16:30 ಗಂಟೆಗೆ ಕಾರ್ಕಳ ಕಸಬಾ ಗ್ರಾಮದ ಮಂಜುನಾಥ ಪೈ ಹಾಲ್ ಬಳಿ ಯಾವುದೋ ವಿಷ ಪದಾರ್ಥ ಸೇವಿಸಿ ಅಸ್ವಸ್ಥಗೊಂಡವರನ್ನು ಸಾರ್ವಜನಿಕರು ಚಿಕಿತ್ಸೆ ಬಗ್ಗೆ ಉಡುಪಿ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅಲ್ಲಿನ ವೈದ್ಯರು ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಅದೇ ದಿನ ಮಂಗಳೂರು ವೆನ್ ಲಾಕ್ ಆಸ್ಪತ್ರೆಗೆ ಕಳುಹಿಸಿದ್ದು ಚಿಕಿತ್ಸೆಯಲ್ಲಿರುತ್ತಾ ಚಿಕಿತ್ಸೆಗೆ ಸ್ಪಂದಿಸದೇ ದಿನಾಂಕ: 03/07/2021 ರಂದು ಸಂಜೆ 18:40 ಗಂಟೆಗೆ ಮೃತಪಟ್ಟಿರುತ್ತಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 21/2021 ಕಲಂ 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಕಳವು ಪ್ರಕರಣ 

 • ಉಡುಪಿ: ಪಿರ್ಯಾದಿದಾರರಾದ ಯು. ಮಹೇಶ್‌ ಶೇಟ್‌ (53) ,ತಂದೆ:ದಿ. ಯು. ಗುರುರಾಜ ಶೇಟ್,‌ ವಾಸ: ನಂ: 6-4-77, ಸೌತ್‌ ಶಾಲೆಯ ಬಳಿ, ಒಳಕಾಡು, ಉಡುಪಿ ತಾಲೂಕು ಇವರು ಕಳೆದ 18 ವರ್ಷಗಳಿಂದ ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ಕನಕದಾಸ ರಸ್ತೆಯಲ್ಲಿನ ರಾಜಶ್ರೀ ಜುವೆಲ್ಲರ್ಸ್‌ ಎಂಬ ಚಿನ್ನಾಭರಣ ಅಂಗಡಿಯನ್ನು ನಡೆಸಿಕೊಂಡಿದ್ದು, ಕೋವಿಡ್‌19 ಬಗ್ಗೆ ಸರಕಾರದ ಮಾರ್ಗಸೂಚಿಯಂತೆ ಲಾಕ್‌ಡೌನ್‌ ನಿಂದಾಗಿ ಅಂಗಡಿ ಮುಚ್ಚಿದ್ದು, ದಿನಾಂಕ 30/06/2021 ರಂದು ಅಂಗಡಿಯಲ್ಲಿನ ಚಿನ್ನಾಭರಣಗಳ ಸ್ಟಾಕ್‌ ನ್ನು ಏಣಿಸಿದಾಗ 2 ಚಿನ್ನದ ಬಳೆ ಹಾಗೂ ಒಂದು ಚಿನ್ನದ ತುಂಡು ಕಡಿಮೆ ಬಂದಿದ್ದು, ಅಂಗಡಿಯಲ್ಲಿನ ಸಿಸಿ ಕ್ಯಾಮರಾ ದಾಖಲೆಗಳನ್ನುಪರಿಶೀಲನೆ ನಡೆಸಿದಾಗ ದಿನಾಂಕ 17/03/2021 ರಂದು 19:30 ಗಂಟೆಯಿಂದ 19:58 ಗಂಟೆ ನಡುವಿನ ಸಮಯದಲ್ಲಿ ಅಂಗಡಿಗೆ ಬಂದಿದ್ದ 40 ರಿಂದ 45 ವರ್ಷ ಪ್ರಾಯದ ಓರ್ವ ಮಹಿಳಾ ಗ್ರಾಹಕಿಯು ಅಂಗಡಿಯ ಟೇಬಲ್‌ ಮೇಲೆ ಇಟ್ಟಿದ್ದ 16 ಗ್ರಾಂತೂಕದ 2 ಬಳೆಗಳು ಹಾಗೂ 4 ಗ್ರಾಂ ತೂಕದ ಒಂದು ಚಿನ್ನದ ತುಂಡನ್ನು ಕಳವು ಮಾಡಿರುವುದು ಕಂಡು ಬಂದಿರುತ್ತದೆ. ಕಳವಾದ ಸೊತ್ತುಗಳ ಮೌಲ್ಯ ರೂಪಾಯಿ. 1,00,000/- ಆಗಬಹುದು. ಲಾಕ್‌ಡೌನ್‌ ಇದ್ದಾಗ ಅಂಗಡಿ ಬಂದ್‌ ಇದ್ದುದರಿಂದ ಕೃತ್ಯ ಗಮನಕ್ಕೆ ಬಾರದೇ ಇದ್ದು, ಸಿಸಿ ಕ್ಯಾಮರಾ ಪರಿಶೀಲಿಸಿ ದೂರು ನೀಡಲು ವಿಳಂಬವಾಗಿರುತ್ತದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 98/2021ಕಲಂ : 379 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತ್ತೀಚಿನ ನವೀಕರಣ​ : 04-07-2021 06:38 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ