ಅಭಿಪ್ರಾಯ / ಸಲಹೆಗಳು

  • ಅಪಘಾತ ಪ್ರಕರಣ
  • ಹಿರಿಯಡ್ಕ: ಪಿರ್ಯಾದಿದಾರರಾದ ರೋಹಿತ್ ಬರೆಟ್ಟೋ, ತಂದೆ: ರೋನಾಲ್ಡ್ ಬರೆಟ್ಟೋ , ವಾಸ: ಕೊಳಲಗಿರಿ ಅಂಚೆ ಇವ ರಮಾವ ಲಿಗೋರಿ ಡಿಸೋಜ ಮತ್ತು ಜಾಯಿಲ್ ಡಿ ಸೋಜರವರು ಕೆಲಸದ ನಿಮಿತ್ತ ದಿನಾಂಕ 03/06/2022 ರಂದು ಜಾಯಿಲ್‌ರವರ KA-20-EW-3674 ನೇ ಪಲ್ಸರ್ ಬೈಕಿನಲ್ಲಿ ಕುಕ್ಕೆ ಹಳ್ಳಿಯ ಕಡೆಗೆ ಹೋಗಿ ಮನೆಗೆ ಹಿಂದಿರುಗಿ ಅತೀ ವೇಗದಿಂದ ಬರುವಾಗ 11:55 ಗಂಟೆಗೆ ಕುಕ್ಕಿಕಟ್ಟೆ ಮಾಧವರವರ ಪ್ರಭು ಹಾರ್ಡ್ ವೇರ್‌ನ ಸ್ವಲ್ಪ ಮುಂಭಾಗದಲ್ಲಿ ಬೈಕ್ ಸ್ಕಿಡ್ ಆಗಿ ಬಿದ್ದ ಕಾರಣ ಸವಾರ ಜಾಯಿಲ್‌ರವರಿಗೆ ಅಲ್ಪಸ್ವಲ್ಪ ಗಾಯವಾಗಿದ್ದು, ಲಿಗೋರಿಯವರಿಗೆ ತಲೆಗೆ ಪೆಟ್ಟಾಗಿದ್ದು ತೀವ್ರ ರಕ್ತ ಹರಿಯುತ್ತಿದ್ದು. ಆಗ ದಾರಿಯಲ್ಲಿ ಹೋಗುತ್ತಿರುವ ವಿರೇಂದ್ರ ಆಚಾರಿ ಹಾಗೂ ಅಶ್ವಿನ್ ರವರು ಅವರನ್ನು ಮಣಿಪಾಲ ಕೆಎಂಸಿ ಅಸ್ಪತ್ರೆಗೆ  ತುರ್ತು ವಿಭಾಗದಲ್ಲಿ ದಾಖಲು ಮಾಡಿದ್ದು, ಅಲ್ಲಿ ಚಿಕಿತ್ಸೆ ಫಲಕಾರಿಯಾಗಿದೆ ಲಿಗೋರಿಯವರು 12:20 ಗಂಟೆಗೆ ಮೃತಪಟ್ಟಿರುತ್ತಾರೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 31/2022 ಕಲಂ: 279, 304 (A) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕೋಟ: ಪಿರ್ಯಾದಿದಾರರಾದ ಚಂದ್ರ ಶೇಖರ (37), ತಂದೆ: ಕೃಷ್ಣ ದೇವಾಡಿಗ, ವಾಸ: ಕುಂದ ಬಾರಂದಾಡಿ ಕೊಡಪಾಡಿ ಮನೆ ಹಕ್ಲಾಡಿ ಗ್ರಾಮ ಮತ್ತು ಅಂಚೆ ಕುಂದಾಪುರ ತಾಲೂಕು ಇವರು ದಿನಾಂಕ 02/06/2022 ರಂದು ತನ್ನ ಮನೆಯಾದ ಕುಂದಬಾರಂದಾಡಿಯಿಂದ ಹೆಂಡತಿ ಮನೆಯಾದ ವಡ್ಡರ್ಸೆಗೆ ಹೊರಟು ತೆಕ್ಕಟ್ಟೆಯಲ್ಲಿ  ಪಿರ್ಯಾದಿದಾರರ ಬಾವ ಪ್ರವೀಣರವರ ಆಪ್ಟಿಕಲ್ ಅಂಗಡಿಯಲ್ಲಿ ಮಾತನಾಡಿಕೊಂಡು  ಪ್ರವೀಣರು ಆಪ್ಟಿಕಲ್ ಅಂಗಡಿಯನ್ನು  ಬಂದ್ ಮಾಡಿ  ಬಳಿಕ ಪ್ರವೀಣರು ತನ್ನ ಮೋಟಾರ್ ಸೈಕಲ್ KA-05-JK-9227 ನೇದರಲ್ಲಿ ಹೊರಟಿದ್ದು ಪಿರ್ಯಾದಿದಾರರು ಅವರ ಹಿಂದಿನಿಂದ ‌ಮೋಟಾರ್ ಸೈಕಲಿನಲ್ಲಿ ಹೊರಟಿರುತ್ತಾರೆ. ಪ್ರವೀಣರ  ಮನೆಯಾದ ವಡ್ಡೆರ್ಸೆ ಕಡೆಗೆ ಹೋಗುತ್ತಾ  ಮಣೂರು ಗ್ರಾಮದ ಉಡುಪಿ ಕುಂದಾಪುರ ರಾಷ್ಟ್ರೀಯ ಹೆದ್ದಾರಿ 66 ಕ್ಕೆ ತಾಗಿಕೊಂಡಿರುವ ಸರ್ವಿಸ್ ರಸ್ತೆಯಲ್ಲಿ  ಕೋಟ ಕಡೆಗೆ ಬರುತ್ತಾ  ರಾಜಲಕ್ಷ್ಮಿ ಸಭಾ ಭವನದ ಹತ್ತಿರ ತಲುಪುವಾಗ ರಾತ್ರಿ 8ಳ30 ಗಂಟೆಗೆ ಕೋಟ ಕಡೆಯಿಂದ ತೆಕ್ಕಟ್ಟೆ ಕಡೆಗೆ ಹೋಗುತ್ತಿದ್ದ KA-20-AA-6537 ಆಟೋ ರಿಕ್ಷಾ ಚಾಲಕ ರಾಘವೇಂದ್ರ ತನ್ನ  ರಿಕ್ಷಾ ವನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಪ್ರವೀಣ ರವರ ಮೋಟಾರ್ ಸೈಕಲಿಗೆ ಢಿಕ್ಕಿ ಹೊಡೆದ ಪರಿಣಾಮ ಪ್ರವೀಣ ರವರು ಮೊಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದು ಪ್ರವೀಣರವರಿಗೆ  ಬಲಕಾಲು , ಸೊಂಟ,  ಬಲ ಕೈಗೆ  ಮೂಳೆ ಮುರಿತದ ತೀವೃ ಸ್ವರೂಪದ ಗಾಯವಾಗಿರುತ್ತದೆ. ಈ ಬಗ್ಗೆ ಕೋಟ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 80/2022 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಕಾಣೆ ಪ್ರಕರಣ

  • ಕಾಪು: ಪಿರ್ಯಾದಿದಾರರಾದ ಮುಮ್ತಾಜ್ (53), ಗಂಡ:ಶೇಖ್ ಅಹ್ಮದ್, ವಾಸ: ಮಯ್ಯುದ್ದೀನ್ ಜುಮ್ಮಾ ಮಸೀದಿ ಎದುರು 4 ನೇ ಅಡ್ಡ ರಸ್ತೆ ಪಕೀರ್ಣಕಟ್ಟೆ ಮಲ್ಲಾರು ಗ್ರಾಮ  ಕಾಪು ತಾಲೂಕು ಉಡುಪಿ ಜಿಲ್ಲೆ ಇವರು ತನ್ನ ಪತಿ ಶೇಖ್ ಅಹ್ಮದ್,  ಸೊಸೆ ರೈಸಾ ತಬಸ್ಸುಂ( 26) ಮತ್ತು 2 ವರ್ಷ 10 ತಿಂಗಳು ಪ್ರಾಯದ ಮೊಮ್ಮಗ  ಇಜಾನ್ ಅಹ್ಮದ್ ಇವರೊಂದಿಗೆ  ವಾಸವಾಗಿದ್ದು,  ಪಿರ್ಯಾದಿದಾರರ ಮಗ ಶೇಖ್ ರಿಜ್ವಾನ್ ಅಹ್ಮದ್ ಅಬುದಾಬಿಯಲ್ಲಿ ಕೆಲಸ ಮಾಡಿಕೊಂಡಿರುತ್ತಾರೆ. ಪಿರ್ಯಾದಿದಾರರ  ಮಗ ಶೇಖ್ ರಿಜ್ವಾನ್ ಅಹ್ಮದ್ ನ ಹೆಂಡತಿ ರೈಸಾ ತಬಸ್ಸುಂ( 26)  ದಿನಾಂಕ 01/06/2022 ರಂದು ಬೆಳಿಗ್ಗೆ  10:00 ಗಂಟೆಯ  ಸಮಯ ಪಿರ್ಯಾದಿದಾರರು ಕ್ಯಾಟರಿಂಗ್ ಕೆಲಸಕ್ಕೆಂದು ಮನೆಯಿಂದ ಹೊರಡುವ ಸಮಯ ತಾನು ಮಲ್ಲಾರಿನಲ್ಲಿರುವ ತನ್ನತಾಯಿ ಮನೆಗೆ ಹೋಗಿ  ನಾಲ್ಕು ದಿವಸ ಅಥವಾ ಎಂಟು ದಿವಸ ಬಿಟ್ಟು ಬರುವುದಾಗಿ ತಿಳಿಸಿದರು. ಅದಕ್ಕೆ  ಪಿರ್ಯಾದಿದಾ ರ ರು ಆಗಬಹುದು ಎಂದು ಹೇಳಿ ಕೆಲಸದ ನಿಮಿತ್ತ  ಹೋಗಿರುತ್ತಾರೆ.  ಸಂಜೆ 04:00 ಗಂಟೆ ಸಮಯ ಪಿರ್ಯಾದಿದಾರರು ಮನೆಗೆ ಬಂದಾಗ ಮನೆಯಲ್ಲಿದ್ದ ಪಿರ್ಯಾದಿದಾರರ ಮಗಳು ಸೊಸೆ ರೈಸಾ ತಬಸ್ಸುಮ್  10:30 ಗಂಟೆಗೆ ತನ್ನ ಮಗನೊಂದಿಗೆ ತಾಯಿ ಮನೆಗೆಂದು ಹೋಗಿರುತ್ತಾರೆ ಎಂದು ತಿಳಿಸಿರುತ್ತಾರೆ. ದಿನಾಂಕ 02/06/2022 ರಂದು ಸಂಜೆ 07:00 ಗಂಟೆಯ ಸಮಯ ಪಿರ್ಯಾದಿದಾರರ ಸೊಸೆಯ ತಾಯಿ ಯಾಸ್ಮಿನ್ ಭಾನು ರವರು ಪಿರ್ಯಾದಿದಾರರಿಗೆ ಪೋನ್ ಮಾಡಿ  ರೈಸಾ ತಬಸ್ಸುಂಳ ಮೊಬೈಲ್ ಸ್ವಿಚ್ಆಫ್ ಬರುತ್ತಾ ಇದೆ .ಅವಳಿಗೆ ಸ್ವಲ್ಪ ಫೋನ್ ಕೊಡಿ ಎಂದು  ತಿಳಿಸಿದ್ದು ಅದಕ್ಕೆ ಪಿರ್ಯಾದಿದಾರರು ಸೊಸೆ ರೈಸಾ ತಬಸ್ಸುಂ ಳು ತನ್ನ ಮಗ ಇಜಾನ್ ಅಹ್ಮದ್ ನೊಂದಿಗೆ ದಿನಾಂಕ 01/06/2022 ರಂದು ಬೆಳಿಗ್ಗೆ 10:30 ಗಂಟೆಗೆ ತಾಯಿ ಮನೆಗೆ ಹೋಗುತ್ತೇನೆಂದು ಹೇಳಿ ಮನೆಯಿಂದ ಹೋಗಿರುತ್ತಾರೆ ಎಂದು ತಿಳಿಸಿದ್ದು ನಂತರ ಪಿರ್ಯಾದಿದಾರರು ಮತ್ತು  ತಬಸ್ಸುಂ ರವರ ತಾಯಿ ಮನೆಯವರು ಸಂಬಂಧಿಕರಲ್ಲಿ ಹಾಗು ಆಸುಪಾಸಿನ ಪರಿಚಯಸ್ಥರಲ್ಲಿ  ವಿಚಾರಿಸಿದ್ದು ಯಾವುದೇ ಮಾಹಿತಿ ದೊರೆತಿರುವುದಿಲ್ಲ.  ಪಿರ್ಯಾದಿದಾರರ ಸೊಸೆ ರೈಸಾ ತಬಸ್ಸುಂ ದಿನಾಂಕ 01/06/2022 ರಂದು 10:30 ಗಂಟೆಗೆ ತಾಯಿ ಮನೆಗೆಂದು ತನ್ನ ಮಗುವಿನೊಂದಿಗೆ ಹೋದವರು  ತಾಯಿ ಮನೆಗೆ  ಹೋಗದೇ ಹಾಗು ವಾಪಾಸ್ ಮನೆಗೂ ಬಾರದೇ ಕಾಣೆಯಾಗಿರುತ್ತಾರೆ. ಈ ಬಗ್ಗೆ ಕಾಪು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 55/2022 ಕಲಂ: ಹೆಂಗಸು ಮತ್ತು ಮಗು ಕಾಣೆಯಂತೆ ಪ್ರಕರಣ ದಾಖಲಾಗಿರುತ್ತದೆ.  

ಅಸ್ವಾಭಾವಿಕ ಮರಣ ಪ್ರಕರಣ

  • ಮಣಿಪಾಲ: ಪಿರ್ಯಾದಿದಾರರಾದ ಲಕ್ಷ್ಮೀ (55) , ಗಂಡ: ಆನಂದ , ವಾಸ: ಸ್ನೇಹ ಸಾಧನ, , ಸರಸ್ವತಿ ನಗರ ೧ ನೇ ಕ್ರಾಸ,  ಪಕಳ, ಹೆರ್ಗಾ ಗ್ರಾಮ, ಉಡುಪಿ ತಾಲೂಕು ಮತ್ತು ಜಿಲ್ಲೆ ಇವರ ಗಂಡ ಆನಂದ (66) ಎಂಬುವವರು ದಿನಾಂಕ  03/06/2022 ರಂದು ಬೆಳಿಗ್ಗೆ 10:30 ಗಂಟೆಯಿಂದ ಮಧ್ಯಾಹ್ನ 4:40 ಗಂಟೆಯ ಮಧ್ಯಾವಧಿಯಲ್ಲಿ ಸಾಲದ ಭಾಧೆಯಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಪರ್ಕಳ ಸರಸ್ವತಿ ನಗರದಲ್ಲಿ ತಾನು ವಾಸವಿರುವ ಮನೆಯ ಬೆಡ್‌ ರೂಮ್‌ನ ಮಹಡಿಯ ಕಬ್ಬಿಣದ ಕೊಂಡಿಗೆ ನೈಲಾನ್‌ ಹಗ್ಗದ ಒಂದು ತುದಿಯನ್ನು ಕಟ್ಟಿ, ಇನ್ನೊಂದು ತುದಿಯನ್ನು ಕುತ್ತಿಗೆಗೆ ಕಟ್ಟಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆ ಯುಡಿಆರ್ ಕ್ರಮಾಂಕ 19/2022 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಇತರ ಪ್ರಕರಣ

  • ಪಡುಬಿದ್ರಿ: ಪಡುಬಿದ್ರಿ ಠಾಣಾ ವ್ಯಾಪ್ತಿಯ ಪಾದೆಬೆಟ್ಟು ಗ್ರಾಮದ ಪಡುಬಿದ್ರಿ ಕಾರ್ಕಳ ರಸ್ತೆಯಲ್ಲಿರುವ ಆಶಾ ಸದನ  ನಿವಾಸಿ ಜೀತು @ ಜಿತೇಂದ್ರ ಶೆಟ್ಟಿ ಎಂಬುವವರು ಈ ಹಿಂದೆ ಪಡುಬಿದ್ರಿ ಠಾಣೆಯ ಅಪರಾಧ ಕ್ರಮಾಂಕ  67/2021 ಪ್ರಕರಣದ  ಆರೋಪಿಯಾಗಿದ್ದು, ಕೆಲವು ಹಿಂಬಾಲಕರನ್ನು ಜೊತೆಯಲ್ಲಿ ಸೇರಿಸಿಕೊಂಡು ರೌಡಿ ಚಟುವಟಿಕೆಯನ್ನು ನಡೆಸುತ್ತಿರುವುದಾಗಿ ಮಾಹಿತಿಯಿಂದ ತಿಳಿದು ಬಂದಿರುತ್ತದೆ.  ಕಳೆದ  ಎರಡು ದಿನಗಳಿಂದ  ಸ್ಥಳೀಯವಾಗಿ  ಸಾಮಾಜಿಕ ಜಾಲತಾಣವಾದ  ವಾಟ್ಸಪ್ ನಲ್ಲಿ ಒಂದು ಪೋಟೋ ಮತ್ತು ಒಂದು ವೀಡಿಯೋ ಹರಿದಾಡುತ್ತಿದ್ದು, ಅದರಲ್ಲಿ ಜೀತು  @ ಜಿತೆಂದ್ರ  ಶೆಟ್ಟಿ, (52), ತಂದೆ: ಜಾರಪ್ಪ  ಶೆಟ್ಟಿ, ವಾಸ: ಆಶಾ ಸದನ, ಕಾರ್ಕಳ ರಸ್ತೆ, ಪಡುಬಿದ್ರಿ ಅಂಚೆ, ಪಾದೆಬೆಟ್ಟು ಗ್ರಾಮ, ಕಾಪು ತಾಲೂಕು, ಉಡುಪಿ  ಜಿಲ್ಲೆ ಮತ್ತು ಅವರ ಜೊತೆ ಈ ಹಿಂದೆ ಕೊಲೆಯತ್ನ ಪ್ರಕರಣದ ಆರೋಪಿಗಳಾಗಿದ್ದ 2]ಸೂರಜ್ ಸಾಲ್ಯಾನ್, (25), ತಂದೆ: ಕುಮಾರ ಸಾಲ್ಯಾನ್, ವಾಸ: ಫಲಿಮಾರು ಹೊಸಾಗ್ಮೆ, ಹೆಜಮಾಡಿ ಕೋಡಿ, ಕೋಡಿ ಅಂಚೆ, ಹೆಜಮಾಡಿ ಗ್ರಾಮ, ಕಾಪು ತಾಲೂಕು, 3]ತನುಜ್ ಎಂ ಕರ್ಕೇರ, (25), ತಂದೆ: ಮುರಾರಿಪಿ. ಕರ್ಕೇರ, ವಾಸ: ಕಾಡಿಪಟ್ನ, ಪಡುಬಿದ್ರಿ ಅಂಚೆ, ನಡ್ಸಾಲು ಗ್ರಾಮ, ಕಾಪು ತಾಲೂಕು, 4]ಅನ್ವೀಶ್ (23), ತಂದೆ: ಭರತ್  ಕುಮಾರ್, ವಾಸ: ಕೋಟ್ಯಾರ್, ಪಡುಬಿದ್ರಿ  ಅಂಚೆ,  ನಡ್ಸಾಲು  ಗ್ರಾಮ, ಕಾಪು ತಾಲೂಕು, 5] ಗಣೇಶ ಪೂಜಾರಿ (50), ತಂದೆ: ರಾಜು ಪೂಜಾರಿ, ವಾಸ:  ಬೀಚ್ ರಸ್ತೆ, ಪಡುಬಿದ್ರಿ, ನಡ್ಸಾಲು  ಗ್ರಾಮ, ಕಾಪು ತಾಲೂಕು, 6] ನಿರಂಜನ್ ಶೆಟ್ಟಿಗಾರ್(31), ತಂದೆ: ವಿಶ್ವನಾಥ ಶೆಟ್ಟಿಗಾರ್, ವಾಸ: ತಜೆ ಪಲ್ಕೆ ಮನೆ, ಕೆಮುಂಡೇಲು  ಅಂಚೆ, ಎಲ್ಲೂರು ಗ್ರಾಮ, ಕಾಪು  ತಾಲೂಕು, 7] ಶರತ್  ಶೆಟ್ಟಿ @ ಪುಟ್ಟ,(26)ತಂದೆ: ಕರುಣಾಕರ ಶೆಟ್ಟಿ, ವಾಸ: ಭಾಗಿ ನಿವಾಸ, ಫಲಿಮಾರು,ಅವರಾಲು ಅಂಚೆ, ಫಲಿಮಾರು ಗ್ರಾಮ, ಕಾಪು  ತಾಲೂಕು ಇವರು ಒಟ್ಟಾಗಿ ನಿರಂಜನ್ ಶೆಟ್ಟಿಗಾರ್ ನ ಬರ್ತ್ ಡೇ ಸೆಲೇಬ್ರೇಷನ್ ಮಾಡುವ ಫೊಟೋ ಮತ್ತು ವೀಡಿಯೋವಾಗಿದ್ದು, ದಿನಾಂಕ 30/05/2022 ರಂದು ರಾತ್ರಿ 21:30 ಗಂಟೆಗೆ ಬರ್ತ್ ಡೇ ಕೇಕ್ ನ ಒಂದು ಪಕ್ಕದಲ್ಲಿ ಒಂದು ಹರಿತವಾದ ತಲವಾರನ್ನು ಮತ್ತು ಇನ್ನೊಂದು ಪಕ್ಕದಲ್ಲಿ ಪರಶು (ಕೊಡಲಿ) ರೀತಿಯ ಆಯುಧವನ್ನು ಇಟ್ಟು ಫೊಟೋ ತೆಗೆದಿರುವುದು ಮತ್ತು ವೀಡಿಯೋದಲ್ಲಿ ನಿರಂಜನ್ ಶೆಟ್ಟಿಗಾರನು ತಲವಾರಿನಿಂದ  ಕೇಕ್ ಕಟ್ ಮಾಡಿ ಸಂಭ್ರಮ ಆಚರಣೆ ಮಾಡುತ್ತಿರುವುದು ಕಂಡು ಬಂದಿರುತ್ತದೆ. ಉಳಿದವರು ಅವನ ಅಕ್ಕಪಕ್ಕದಲ್ಲಿ ನಿಂತು ಸಂಭ್ರಮ ಆಚರಣೆ ಮಾಡುತ್ತಿರುವುದು ಕಂಡು ಬಂದಿರುತ್ತದೆ.  ಫೊಟೋ ಮತ್ತು ವೀಡಿಯೋ ಸ್ಥಳೀಯವಾಗಿ ವ್ಯಾಪಕ  ಚರ್ಚೆಗೆ ಗ್ರಾಸವಾಗಿದ್ದು,  ವೀಡಿಯೋ ಮತ್ತು  ಫೊಟೋವನ್ನು ಜೀತು ಶೆಟ್ಟಿ ಮತ್ತವರ ಜೊತೆಯಲ್ಲಿದ್ದವರು ಮಾರಕ ಆಯುಧಗಳನ್ನು ಸ್ವಾಧೀನದಲ್ಲಿ ಇಟ್ಟುಕೊಂಡು  ಮತ್ತು ಸಾರ್ವಜನಿಕರಿಗೆ  ಭಯಭೀತಿ  ಹುಟ್ಟಿಸುವ  ಮತ್ತು ಪ್ರಚೋದನೆ ನೀಡುವ ಉದ್ದೇಶದಿಂದ  ಆಯುಧಗಳ ಪ್ರದರ್ಶನವನ್ನು ಸಾಮಾಜಿಕ ಜಾಲತಾಣದಲ್ಲಿ  ಹರಿಯಬಿಟ್ಟು  ಅಪರಾಧಿಕ ಭಯಬೀತಿ  ಉಂಟು ಮಾಡುವ ಕೃತ್ಯ ಎಸಗಿದ್ದು, ಆರೋಪಿತರ ವಿರುದ್ದ ಕ್ರಮ ಕೈಗೊಳ್ಳುವ ಉದ್ದೇಶದಿಂದ ಜಿತೇಂದ್ರ ಶೆಟ್ಟಿಯ ಮನೆಯನ್ನು ಶೋಧನೆ ನಡೆಸಿ  ಮಾರಕ ಆಯುಧಗಳಾದ ಕಬ್ಬಿಣದ ಮಚ್ಚು-01, ಕಬ್ಬಿಣದ ತಲವಾರ್-01, ಮತ್ತು ಕಬ್ಬಿಣದ ಕೊಡಲಿ (ಪರಶು)-01 ನ್ನು ಸ್ವಾಧಿನಪಡಿಸಿಕೊಂಡು ಆರೋಪಿಯನ್ನು ದಸ್ತಗಿರಿ ಮಾಡಿರುವುದಾಗಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 70/2022, ಕಲಂ: 7, 25 ಭಾರತೀಯ ಶಸ್ತ್ರಾಸ್ತ್ರ ಅಧಿನಿಯಮ ರಂತೆ ಪ್ರಕರಣ ದಾಖಲಾಗಿರುತ್ತದೆ.
  • ಕುಂದಾಪುರ: ಪಿರ್ಯಾದಿದಾರರಾದ ಶೈಲಶ್ರೀ (52), ಗಂಡ: ಶರತ್‌ ಚಂದ್ರ ಕೆ, ವಾಸ: ಸಿದ್ದ ನಿವಾಸ ಸಿದ್ದ ನಾಯಕನ ರಸ್ತೆ ರಾಮ ಮಂದಿರ ಹತ್ತಿರ ಕಸಬಾ  ಗ್ರಾಮ, ಕುಂದಾಪುರ ತಾಲೂಕು ಇವರು ದಿನಾಂಕ 02/06/2022 ರಂದು ತನ್ನ ಮನೆಯ ಹಿಂಭಾಗದಲ್ಲಿ ಶೌಚಾಲಯ ಹೊಂಡದ ಕಾಮಗಾರಿ ಕೆಲಸ ಮಾಡಿಸುತ್ತಿರುವಾಗ ಮದ್ಯಾಹ್ನ 2:00 ಗಂಟೆಗೆ ಪಿರ್ಯಾದಿದಾರರ ಮನೆಯ ಪಕ್ಕದ ನಿವಾಸಿಯಾದ ಉಷಾ ಹಾಗೂ ಅವರ ಬಾಡಿಗೆ ಮನೆಯ ವಾಸಿಯಾದ ರಾಬರ್ಟ್ ಎಂಬುವವರು ಅಲ್ಲಿಗೆ ಬಂದು ಪಿರ್ಯಾದಿದಾರರನ್ನು  ಉದ್ದೇಶಿಸಿ ನೀವು ಇಲ್ಲಿ ಶೌಚಾಲಯದ ಹೊಂಡ ಮಾಡ ಬಾರದಿತ್ತು ಎಂದು ಹೇಳಿ ಹೋಗಿದ್ದು ಅದಾಗಲೇ ಶೌಚಾಲಯದ ಹೊಂಡದ ಕೆಲಸ ಮುಕ್ಕಾಲು ಭಾಗ ಮುಗಿದಿದ್ದು, ಇದೇ ವಿಚಾರದಲ್ಲಿ ರಾತ್ರಿ 08:45 ಗಂಟೆಗೆ ಉಷಾ ಹಾಗೂ ರಾಬರ್ಟ್ ರವರು ಪಿರ್ಯಾದಿದಾರರ ಮನೆ ಬಳಿ ಇರುವ ಕಾಂಕ್ರೀಟ್ ರಸ್ತೆ ಬಳಿ ಬಂದು ಪಿರ್ಯಾದಿದಾರರ ಮನೆಗೆ ಸಂಬಂದಿಸಿದ ಸಿಮೆಂಟ್‌ ದಂಡೆಯನ್ನು ರಾಬರ್ಟ್‌ ಸುತ್ತಿಗೆಯಿಂದ ಒಡೆಯುತ್ತಿರುವ ಶಬ್ಧ ಕೇಳಿ ಪಿರ್ಯಾದಿದಾರರು ಮನೆಯಿಂದ ಹೊರಗೆ ಬಂದು ರಾಬರ್ಟ್ ನಲ್ಲಿ ಒಡೆಯ ಬೇಡಿ ಪ್ಲೀಸ್  ಎಂದು ಹೇಳಿದಾಗ ರಾಬರ್ಟ್‌ನು ಪಿರ್ಯಾದಿದಾರರ ಮನೆಯ ಅಂಗಳಕ್ಕೆ ಬಂದು ಪಿರ್ಯಾದಿದಾರರನ್ನು ಕೈಯಿಂದ ದೂಡಿ ಆತನ ಕೈಯಲ್ಲಿದ್ದ ಸುತ್ತಿಗೆಯಿಂದ ಪಿರ್ಯಾದಿದಾರರ ತಲೆಯ ಮುಂಭಾಗಕ್ಕೆ ಜೋರಾಗಿ ಹೊಡೆದಿದ್ದು, ಪಿರ್ಯಾದಿದಾರರು ನೋವಿನಿಂದ ಕೂಗಿಕೊಂಡು ಕೆಳಗೆ ಬಿದ್ದಾಗ ಅವರ ಗಂಡ ಮನೆಯ ಒಳಗಿನಿಂದ ಹೊರಗೆ ಬಂದು ಕೆಳಗೆ ಬಿದ್ದ ಪಿರ್ಯಾದಿದಾರರನ್ನು ಎತ್ತುತ್ತಿರುವಾಗ ರಾಬರ್ಟನು ಅದೇ ಸುತ್ತಿಗೆಯಿಂದ ಪಿರ್ಯಾದಿದಾರರ ಗಂಡನ ಬೆನ್ನಿಗೆ ಹೋಡೆದಿರುತ್ತಾನೆ. ಪಿರ್ಯಾದಿದಾರರು ಹಾಗೂ ಅವರ ಗಂಡ  ನೋವಿನಿಂದ ಬೊಬ್ಬೆ ಹೊಡೆಯುವುದನ್ನು ಕೇಳಿ ಪಿರ್ಯಾದಿದಾರರ ಮಗಳು ಹಾಗೂ ಅಕ್ಕ ಪಕ್ಕದವರು ಓಡಿ ಬರುವುದನ್ನು ನೋಡಿ ಆಪಾದಿತರಾದ ರಾಬರ್ಟ್ ಮತ್ತು ಉಷಾರವರು ಅಲ್ಲಿಂದ ಓಡಿ ಹೋಗಿದ್ದು ಹೋಗುವಾಗ ಇಬ್ಬರೂ ಸೇರಿ  ಅವಾಚ್ಯ ಶಬ್ಧಗಳಿಂದ ಬೈದು ಜೀವ ಬೆದರಿಕೆ ಹಾಕಿ ಹೋಗಿರುತ್ತಾರೆ.  ಗಾಯಗೊಂಡ ಪಿರ್ಯಾದಿದಾರರು ಹಾಗೂ ಅವರ ಗಂಡ ಚಿಕಿತ್ಸೆ ಬಗ್ಗೆ ಕುಂದಾಪುರ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ವೈದ್ಯಾಧಿಕಾರಿಯವರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದು ಬಿಡುಗಡೆಗೊಂಡು  ದಿನಾಂಕ 03/06/2022 ರಂದು ಪಿರ್ಯಾದಿದಾರರಿಗೆ ತಲೆಗೆ ಹಾಗೂ ಅವರ ಗಂಡನಿಗೆ ಬೆನ್ನು ನೋವು ಜಾಸ್ತಿಯಾದ ಕಾರಣ ಕುಂದಾಪುರ ಚಿನ್ನಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಬಗ್ಗೆ ಒಳರೋಗಿಯಾಗಿ ದಾಖಲಾಗಿರುವುದಾಗಿ ನೀಡಿದ ದೂರಿನಂತೆ ಕುಂದಾಪುರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 58/2022 ಕಲಂ: 447, 354,  324, 504, 506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಶಂಕರನಾರಾಯಣ: ದಿನಾಂಕ 03/06/2022 ರಂದು 16:35 ಗಂಟೆಗೆ ಆರೋಪಿ ದೀಪಕ್ ಎಂಬಾತ KA-20-A- 6865  ನೇ ನಂಬ್ರದ ಪಿಕಪ್ ವಾಹನದಲ್ಲಿ  ಕುಂದಾಪುರ ತಾಲೂಕಿನ  ಕೊಡ್ಲಾಡಿ ಗ್ರಾಮದ   ಹೊಲದ  ಮನೆಗೆ   ಹೋಗುವ  ದಾರಿಯ  ಬಳಿ  ಮೇಯುತ್ತಿದ್ದ  ಕಪ್ಪು ಬಣ್ಣದ ಗಂಡು ದನದ  ಕರುವನ್ನು ಕಳವು   ಮಾಡಿಕೊಂಡು ಅದಕ್ಕೆ  ಯಾವುದೇ  ಮೇವು  ಬಾಯಾರಿಕೆ  ನೀಡದೇ  ಹಿಂಸಿಸುವ ರೀತಿಯಲ್ಲಿ  ಕಾಲುಗಳನ್ನು ಹಗ್ಗದಿಂದ ಕಟ್ಟಿ  ಹಿಂಸಾತ್ಮಕವಾಗಿ  ಪಿಕಪ್ ವಾಹನದಲ್ಲಿ ತುಂಬಿಸಿ   ಮಾಂಸ  ಮಾಡಲು  ಕಸಾಯಿಖಾನೆಗೆ  ಸಾಗಾಟ  ಮಾಡಲು  ಹೊರಟಿರುವುದಾಗಿದೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 55/2022 ಕಲಂ: 379 ಐಪಿಸಿ ಮತ್ತು ಕಲಂ:  4, 5, 7 , 12 ಕರ್ನಾಟಕ  ಜಾನುವಾರು ಹತ್ಯೆ ಪ್ರತಿಬಂಧಕ  ಮತ್ತು ಸಂರಕ್ಷಣಾ ಆಧ್ಯಾದೇಶ  2020 ರ ಕಲಂ 11 (1) (ಡಿ) ಪ್ರಾಣಿ ಹಿಂಸೆ ತಡೆ ಕಾಯ್ದೆ 1966 ರಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾರ್ಕಳ: ದಿನಾಂಕ 01/06/2022 ರಂದು ಬೆಳಗ್ಗೆ ಪಿರ್ಯಾದಿದಾರರಾದ ಲೊಕೇಶ (58), ತಂದೆ: ಚಾಂಟು, ವಾಸ: ಜನತಾ ಕಾಲೋನಿ, ಅಶ್ವಥಕಟ್ಟೆ, ತೆಳ್ಳಾರ್, ದುರ್ಗಾ ಗ್ರಾಮ, ಕಾರ್ಕಳ ತಾಲೂಕು ಇವರ ದುರ್ಗಾ ಗ್ರಾಮದ ತೆಳ್ಳಾರು ಪೇಟೆಯ ಅಶ್ವಥಕಟ್ಟೆ ಎಂಬಲ್ಲಿ  ಬಾಬ್ತು ಕಂದು ಬಣ್ಣದ  4 ವರ್ಷ ಪ್ರಾಯದ ಮೇಯಲು ಬಿಟ್ಟ ದನವು  ವಾಪಾಸು ಬಾರದೇ ಇದ್ದು, ದಿನಾಂಕ 02/06/2022 ರಂದು ತೆಳ್ಳಾರು ಪೇಟೆಯ ಅಶ್ವಥಕಟ್ಟೆ ಎಂಬಲ್ಲಿ ದನವನ್ನು ಹುಡುಕುತ್ತಿದ್ದಾಗ ಪಿರ್ಯಾದಿದಾರರ ಪರಿಚಯದ ನಾರಾಯಣ ಪೂಜಾರಿ ಎಂಬುವವರು ದಿನಾಂಕ 02/06/2022 ರಂದು ಮುಂಜಾನೆ 1:30 ಗಂಟೆಗೆ ಅಶ್ವಥಕಟ್ಟೆ ಬಳಿ ಮಲಗಿದ್ದ ದನವನ್ನು ಮಾರಕಾಸ್ತ್ರಗಳನ್ನು ಹಿಡಿದುಕೊಂಡು ಬಂದ ಯಾರೋ ಕಳ್ಳರು ಒಂದು ವಾಹನದಲ್ಲಿ ಕಂದು ಬಣ್ಣದ ದನವನ್ನು ತುಂಬಿಸಿಕೊಂಡು ಹೋಗಿರುವುದಾಗಿ ತಿಳಿಸಿದ್ದು, ಪಿರ್ಯಾದುದಾರರ ಮೇಯಲು ಬಿಟ್ಟಿದ್ದ  10,000/- ರೂಪಾಯಿ ಮೌಲ್ಯದ ಕಂದು ಬಣ್ಣದ ದನವನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 76/2022 ಕಲಂ: 379 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.    

ಇತ್ತೀಚಿನ ನವೀಕರಣ​ : 05-06-2022 08:31 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080