ಅಭಿಪ್ರಾಯ / ಸಲಹೆಗಳು

ಇತರ ಪ್ರಕರಣಗಳು :

 • ಮಲ್ಪೆ: ಶೋಭ ಕೋಟ್ಯಾನ್ (64), ಗಂಡ: ದಿಲೀಪ್ ಚೌದ್ರಿ, ವಾಸ: ರಾಧ ಸಮೃದ್ದಿ  ಸುಜಾತ  ಹೋಟೆಲ್  ಬಳಿ ತೊಟ್ಟಂ ಬಡನಿಡಿಯೂರು ಗ್ರಾಮ ಇವರು ಕೊಡವೂರು ಗ್ರಾಮದ ತೊಟ್ಟಂ ನಲ್ಲಿರುವ ಸರ್ವೆನಂಬ್ರ 290/ 10ಬಿ  ರಲ್ಲಿ 2.50 ಸ್ತಿರಾಸ್ಥಿಯನ್ನು ಹೊಂದಿದ್ದು, ಆರೋಪಿತರಾದ  1) ನಾರಾಯಣ ಕೆ ಕುಂಭ. 2) ರಾಮಚಂದ್ರ ಕೆ ಕುಂಭ ಮತ್ತು 3) ಜಯ ಕೆ ಕುಂಭ ಇವರುಗಳು ಪಿರ್ಯಾದಿದಾರರ ಸ್ತಿರಾಸ್ಥಿಯ ಪಕ್ಕದಲ್ಲಿ ಸರ್ವೇ ನಂಬ್ರ 290-10ಬಿ ಯಲ್ಲಿ 8.50 ಸಿರಾಸ್ಥಿಯನ್ನು ಹೊಂದಿದ್ದು,ಪಿರ್ಯಾದಿದಾರರ ಜಾಗಕ್ಕೆ  ಹೋಗುವರೇ ಉತ್ತರದಲ್ಲಿ 12 ಅಡಿ ರಸ್ತೆಯಿದ್ದು ಸದ್ರಿ ರಸ್ತೆಯನ್ನು ಆರೋಪಿತರಾದ  1) ನಾರಾಯಣ ಕೆ ಕುಂಭ 2) ರಾಮಚಂದ್ರ ಕೆ ಕುಂಭ ,3) ಜಯ ಕೆ ಕುಂಭ ಇವರುಗಳು ಸದ್ರಿ ರಸ್ತೆಗೆ ತಂತಿ ಬೇಲಿ ಹಾಕಿದ್ದು, ಈ ಬಗ್ಗೆ ಪಿರ್ಯಾದಿದಾರರು ಮಾನ್ಯ ಎರಡನೇ ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್ ಸಿ ನ್ಯಾಯಾಲಯದಲ್ಲಿ ಇಲ್ಲಿ ಆರೋಪಿಗಳ ವಿರುದ್ದ ದಾವೆಯನ್ನು ಸಲ್ಲಿಸಿದ್ದು ಮಾನ್ಯ ನ್ಯಾಯಾಲಯವು ಪಿರ್ಯಾದಿದಾರರು ಉಪಯೋಗಿಸುವ ರಸ್ತೆಗೆ ಅಡೆತಡೆ ಮಾಡಬಾರದೆಂದು ತಡೆ ಆಜ್ಞೆ ನೀಡಿರುತ್ತದೆ. ದಿನಾಂಕ 04-03-2021 ರಂದು ಆರೋಪಿತರು ಪಿರ್ಯಾದಿದಾರರನ್ನು ತಡೆದು ನಿಲ್ಲಿಸಿ  ಅವಾಚ್ಯ ಶಬ್ದಗಳಿಂದ ಬೈದು ಕೈ ಯಿಂದ ಹೊಡೆದು, ದೂಡಿ, ಕೈ ಕಾಲು ಕಡಿದು ಕೊಂದು ಹಾಕುವುದಾಗಿ ಬೆದರಿಕೆ ಹಾಕಿ, ಮಾನ್ಯ ನ್ಯಾಯಾಲಯದ ತಡೆ ಆಜ್ಞೆ ಇದ್ದರೂ ಸಹ ಜಾಗದ ಒಂದು ಬದಿಯಲ್ಲಿ ತಂತಿ ಬೇಲಿ ಅಳವಡಿಸಿ ನ್ಯಾಯಾಂಗದ ಆದೇಶವನ್ನು ಉಲ್ಲಂಘಿಸಿರುತ್ತಾರೆ ಎಂಬುದಾಗಿ ನೀಡಿದ ದೂರಿನಂತೆ ಮಲ್ಪೆ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ: 72/2021  ಕಲಂ  323,341 504, 506, ಜೊತೆಗೆ 34 ಐಪಿಸಿ ಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
 • ಕಾಪು: ಪಿರ್ಯಾದಿ ರಾಘವೇಂದ್ರ ಸಿ., ಪೊಲೀಸ್ ಉಪನಿರೀಕ್ಷಕರು, ಕಾಪು ಪೊಲೀಸ್ ಠಾಣೆ ಇವರು ದಿನಾಂಕ 03.06.2021 ರಂದು ಸಿಬ್ಬಂದಿಯವರೊಂದಿಗೆ ಇಲಾಖಾ ವಾಹನ ಹೊಯ್ಸಳ ನಂಬ್ರ ಕೆ. ಎ. 20 ಜಿ. 353 ನೇದರಲ್ಲಿ ಚಾಲಕ ಎ.ಹೆಚ್.ಸಿ 91 ಜಗದೀಶರವರೊಂದಿಗೆ ಸಾಂಕ್ರಾಮಿಕ ರೋಗ ಕೋವಿಡ್-19 ಕೋರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಅದನ್ನು ತಡೆಗಟ್ಟುವ ನಿಟ್ಟಿನಲ್ಲಿ  ಮಾನ್ಯ ಕರ್ನಾಟಕ ಸರ್ಕಾರ ಹಾಗೂ ಉಡುಪಿ ಜಿಲ್ಲಾಡಳಿತ ದಿನಾಂಕ 26/04/2021 ರಿಂದ ದಿನಾಂಕ 12/05/2021 ರವರೆಗೆ ಕೋವಿಡ್ ಕರ್ಫ್ಯೂ ವಿಧಿಸಿ ಆದೇಶ ಹೊರಡಿಸಿದ್ದು, ಸದ್ರಿ ಆದೇಶವನ್ನು ಪರಿಷ್ಕರಿಸಿ ದಿನಾಂಕ 10.05.2021 ರಂದು ಬೆಳಗ್ಗೆ 06.00 ಗಂಟೆಯಿಂದ ದಿನಾಂಕ 24.05.2021 ರ ಬೆಳಗ್ಗೆ 06.00 ಗಂಟೆಯವರೆಗೆ ಕೋವಿಡ್ ಕರ್ಫ್ಯೂ ವಿಧಿಸಿ ಆದೇಶ ಹೊರಡಿಸಿದ್ದು, ಮತ್ತೆ ಸದ್ರಿ ಆದೇಶವನ್ನು ಪರಿಷ್ಕರಿಸಿ ದಿನಾಂಕ 24.05.2021 ರ ಬೆಳಗ್ಗೆ 06.00 ಗಂಟೆಯಿಂದ ದಿನಾಂಕ 07.06.2021 ರ ಬೆಳಗ್ಗೆ 06.00 ಗಂಟೆಯವರೆಗೆ ಲಾಕ್‌ಡೌನ್ ಘೋಷಿಸಿದ್ದು, ಈ ಬಗ್ಗೆ ಜಿಲ್ಲಾಧಿಕಾರಿಗಳ ಆದೇಶ ಮತ್ತು ಮೇಲಾಧಿಕಾರಿಗಳ ಸೂಚನೆಯಂತೆ ಅನಗತ್ಯವಾಗಿ ಓಡಾಟ ನಿಷೇಧಿಸಿದ್ದು, ಆ ಬಗ್ಗೆ ಸಿಬ್ಬಂದಿಯವರೊಂದಿಗೆ ರೌಂಡ್ಸ್ ಕರ್ತವ್ಯದಲ್ಲಿರುವಾಗ 19.00 ಗಂಟೆಯ ಸಮಯಕ್ಕೆ ಯೆಣಗುಡ್ಡೆ ಗ್ರಾಮದ ಕಟಪಾಡಿ ಜಂಕ್ಷನ್ ನಲ್ಲಿ ಸಿಬ್ಬಂದಿಯವರ ಸಹಾಯದಿಂದ ಸಾರ್ವಜನಿಕ ರಸ್ತೆಯಲ್ಲಿ ವಾಹನ ತಪಾಸಣೆಯಲ್ಲಿರುತ್ತಾ ಅಗತ್ಯ ವಸ್ತುಗಳ ಖರೀದಿ ಬಗ್ಗೆ ಸರಕಾರ ನಿಗದಿಪಡಿಸಿದ ಸಮಯ ಅವಕಾಶದ ಬಳಿಕವೂ ಅನಗತ್ಯವಾಗಿ ಸಂಚರಿಸುತ್ತಿರುವವರ ವಾಹನಗಳನ್ನು ತಪಾಸಣೆ ನಡೆಸುವರೇ ಉಡುಪಿ ಕಡೆಯಿಂದ ಬರುವ ಸ್ಕೂಟರ್ ಮತ್ತು ಬುಲೆಟ್ ಮೋಟಾರ್ ಸೈಕಲ್ಲನ್ನು ನಿಲ್ಲಿಸಲು ಸೂಚಿಸಿದಾಗ ಸ್ಕೂಟರ್‌ನ ಸವಾರ ಸಹಸವಾರನೊಂದಿಗೆ ತನ್ನ ಬಾಬ್ತು ಸ್ಕೂಟರ್‌ನ್ನು ನಿಲ್ಲಿಸಿದ ರೀತಿಯಲ್ಲಿ ತಾನು ಸವಾರಿ ಮಾಡಿಕೊಂಡು ಬಂದ ಸ್ಕೂಟರ್‌ನ ವೇಗವನ್ನು ನಿಧಾನಗೊಳಿಸಿ ನಂತರ ಓಮ್ಮೇಲ್ಲೆ ಸ್ಕೂಟರ್‌‌ನ್ನು ವೇಗವಾಗಿ ಸವಾರಿ ಮಾಡಿಕೊಂಡು ಓಡಿ ಹೋಗಿದ್ದು, ಆ ಸಮಯ ನಾನು ಸ್ಕೂಟರ್‌ ನಂಬ್ರ ನೋಡಿದ್ದು ಅದರ ನಂಬ್ರ ಕೆ.ಎ. 20 ಇ.ಕ್ಯೂ. 7147 ಆಗಿದ್ದು, ಸ್ಕೂಟರ್‌ನ ಜೊತೆಯಲ್ಲಿ ಬಂದಿದ್ದ ಬುಲೆಟ್‌ ಮೋಟಾರ ಸೈಕಲ್ಲನ್ನು ಅದರ ಸವಾರ ನಿಲ್ಲಿಸಿದ್ದು ಆತನ ಬಳಿ ವಿಚಾರಿಸಿಲಾಗಿ ತನ್ನ ಹೆಸರು ಅವಿನಾಶ  ಪ್ರಾಯ: 25  ವರ್ಷ ತಂದೆ : ಹೂವಣ್ಣ  ವಾಸ : ಬ್ಯಾಂಕರ್ಸ್ ಕಾಲೋನಿ ಮೂಡಬೆಟ್ಟು ಗ್ರಾಮ ಕಟಪಾಡಿ ಎಂದು ತಿಳಿಸಿದ್ದು, ಬುಲೆಟ್ ನಂಬ್ರ ನೋಡಲಾಗಿ ಕೆ.ಎ. 20 ಇ.ಪಿ. 7555 ಆಗಿರುತ್ತದೆ. ಅವಿನಾಶನ ಬಳಿ ಸ್ಕೂಟರ್‌ನಲ್ಲಿ ಓಡಿ ಹೋದವರ ಬಗ್ಗೆ ವಿಚಾರಿಸಲಾಗಿ ಸ್ಕೂಟರ್‌ ಸವಾರ ತನ್ನ ಪರಿಚಯದ ಮಂಜೇಶ ವಾಸ; ಬ್ಯಾಂಕರ್ಸ್ ಕಾಲೋನಿ ಮೂಡಬೆಟ್ಟು ಗ್ರಾಮ ಎಂಬುವುದಾಗಿಯೂ ಹಾಗೂ ಸಹ ಸವಾರನ ಬಗ್ಗೆ ನನಗೆ ತಿಳಿದಿಲ್ಲವಾಗಿ ತಿಳಿಸಿರುತ್ತಾನೆ. ಅವಿನಾಶನ ಬಳಿ ಅವರುಗಳ ಓಡಾಟದ ಕಾರಣವನ್ನು ವಿಚಾರಿಸಲಾಗಿ, ಯಾವುದೇ ತುರ್ತು ಕಾರಣವಿಲ್ಲದೇ ಅನಗತ್ಯವಾಗಿ ಸಂಚರಿಸುವುದು ಕಂಡು ಬಂದಿರುತ್ತದೆ. ಸದ್ರಿ ಆರೋಪಿಗಳು ಘನ ಕರ್ನಾಟಕ ಸರಕಾರವು ಕೋವಿಡ್‌ ಮಹಾಮಾರಿ ಕೊರೋನಾ ಸೋಂಕನ್ನು ತಡೆಯುವ ಬಗ್ಗೆ ಹೊರಡಿಸಿರುವ ಮಾರ್ಗಸೂಚಿಗಳ ಬಗ್ಗೆ ತಿಳುವಳಿಕೆ ಇದ್ದರೂ ಕೂಡಾ ಅನಗತ್ಯವಾಗಿ ಪ್ರಾಣಕ್ಕೆ ಅಪಾಯಕಾರಿಯಾದ ರೋಗದ ಸೋಂಕನ್ನು ಹರಡುವ ಸಂಭವ ಇದೆ ಎಂದು ತಿಳಿದೂ ಕೂಡಾ ನಿರ್ಲಕ್ಷತನದಿಂದ ಕೋವಿಡ್‌ ನಿಯಮ ಉಲ್ಲಂಘಿಸಿ ಅನಗತ್ಯವಾಗಿ ವಾಹನದಲ್ಲಿ ಸಂಚರಿಸುತ್ತಿರುವುದರಿಂದ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ನೀಡಿದ ವರದಿಯಂತೆ ಕಾಪು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ : 97/2021 ಕಲಂ 269 IPC ರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಮನುಷ್ಯ ಕಾಣೆ ಪ್ರಕರಣ

 • ಬ್ರಹ್ಮಾವರ: ಬ್ರಹ್ಮಾವರ ತಾಲೂಕು, ಹಾವಂಜೆ ಗ್ರಾಮದ, ಹಾವಂಜೆ ಅಂಗಡಿಬೆಟ್ಟು ಎಂಬಲ್ಲಿ ಪಿರ್ಯಾದಿ ಕವಿತಾ(38), ಗಂಡ: ಪ್ರಕಾಶ್ ಶೆಟ್ಟಿ, ವಾಸ:1/71, ಹಾವಂಜೆ ಅಂಗಡಿಬೆಟ್ಟು, ಹಾವಂಜೆ ಗ್ರಾಮ, ಬ್ರಹ್ಮಾವರ ತಾಲೂಕು. ಇವರು ವಾಸವಾಗಿದ್ದು, ಇವರ ಗಂಡನಾದ ಪ್ರಕಾಶ್ ಶೆಟ್ಟಿ (40 ವರ್ಷ) ಎಂಬವರು ಗೋವಾದಲ್ಲಿದ್ದು ಹೊಟೇಲ್‌ವೊಂದರಲ್ಲಿ  ವೈಟರ್ ಕೆಲಸ ಮಾಡಿಕೊಂಡಿರುತ್ತಾರೆ. ಈಗ ಲಾಕ್‌ಡೌನ್‌ ಆಗಿರುವುದರಿಂದ ಸುಮಾರು ಒಂದು ತಿಂಗಳ ಹಿಂದೆ ಅವರು ಊರಿಗೆ ಬಂದು ಪಿರ್ಯಾದಿದಾರರ ಮನೆಯಲ್ಲಿ ವಾಸವಾಗಿದ್ದರು. ಪಿರ್ಯಾದಿದಾರರಿಗೆ ಮಕ್ಕಳಾಗದೇ ಇದ್ದು, ಸುಮಾರು ಹತ್ತು ವರ್ಷಗಳಿಂದ ಪ್ರಕಾಶ್ ಶೆಟ್ಟಿ ರವರು ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದರು. ಈಗ ಸರಿಯಾಗಿ ಕೆಲಸ ಇಲ್ಲದೇ, ಸಾಲವನ್ನು ಮಾಡಿಕೊಂಡು ಮಾನಸಿಕವಾಗಿ ಕುಗ್ಗಿ ಹೋಗಿರುತ್ತಾರೆ. ಪ್ರಕಾಶ್ ಶೆಟ್ಟಿಯವರು ನಿನ್ನೆ ದಿನಾಂಕ: 02.06.2021 ರಂದು ಬೆಳಿಗ್ಗೆ 09:00 ಗಂಟೆಗೆ ಅವರ ತಾಯಿ ಮನೆಯಾದ ಹಾರಾಡಿ ಗ್ರಾಮದ ಪೇಟೆಮನೆ ಎಂಬಲ್ಲಿಗೆ ಹೋಗಿದ್ದು, ಅಲ್ಲಿ ರಾತ್ರಿ ಊಟಮಾಡಿ ಸುಮಾರು 10:00 ಗಂಟೆಯಿಂದ  ಈ ದಿನ ದಿನಾಂಕ: 03.06.2021 ರಂದು ಬೆಳಿಗ್ಗೆ 05:30 ಗಂಟೆಯ ವರೆಗೆ ಅವರ ಚಿಕ್ಕಪ್ಪನ ಪಕ್ಕ ಮಲಗಿಕೊಂಡಿದ್ದವರು ಬೆಲಿಗ್ಗೆ 06:00 ಗಂಟೆಯ ಸಮಯಕ್ಕೆ ನೋಡುವಾಗ ಪ್ರಕಾಶ್ ಶೆಟ್ಟಿಯವರು ಮಲಗಿದ್ದಲ್ಲಿ ಇಲ್ಲದೇ ಕಾಣೆಯಾಗಿರುತ್ತಾರೆ.  ಅವರ ಪತ್ತೆಯ ಬಗ್ಗೆ ಎಲ್ಲಾ ಕಡೆ ಹಾಗೂ ಸಂಬಂಧಿಕರ ಮನೆಗಳಿಲ್ಲಿ ಹುಡುಕಾಡಿದ್ದಲ್ಲಿ ಯಾವುದೇ ಮಾಹಿತಿ ಸಿಕ್ಕಿರುವುದಿಲ್ಲ. ಈ ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ: 108/2021 ಕಲಂ ಗಂಡಸು ಕಾಣೆ ಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಅಸ್ವಾಭಾವಿಕ ಮರಣ ಪ್ರಕರಣ

 • ಬ್ರಹ್ಮಾವರ: ಬ್ರಹ್ಮಾವರ ತಾಲೂಕು, ಹೇರಾಡಿ ಗ್ರಾಮದ, ಕೂಡ್ಲಿ ಎಂಬಲ್ಲಿ ಪಿರ್ಯಾದಿ ಸಂತೋಷ್ ನಾಯ್ಕ(45), ತಂದೆ: ಬಾಬಣ್ಣ ನಾಯ್ಕ, ವಾಸ: ಕೂಡ್ಲಿ, ಹೇರಾಡಿ ಗ್ರಾಮ, ಬಾರ್ಕೂರು ಅಂಚೆ, ಬ್ರಹ್ಮಾವರ ತಾಲೂಕು ಇವರು ತನ್ನ ತಂದೆ, ತಾಯಿ ಹಾಗೂ ಸಂಸಾರದೊಂದಿಗೆ ವಾಸವಾಗಿದ್ದು ಕೂಲಿ ಕೆಲಸ ಮಾಡಿಕೊಂಡಿರುತ್ತಾರೆ. ಅವರ ತಂದೆಯಾದ ಬಾಬಣ್ಣ ನಾಯ್ಕ, ಪ್ರಾಯ: ಪ್ರಾಯ:75 ವರ್ಷ ಎಂಬವರಿಗೆ ಹರ್ನಿಯಾ ಖಾಯಿಲೆ ಇದ್ದು, ಯಾವಾಗಲೂ ಹೊಟ್ಟೆನೋವು ಎಂದು ಹೇಳುತ್ತಿದ್ದರು, ಅಲ್ಲದೇ ಅವರು ಮಧ್ಯಪಾನ ಮಾಡುತ್ತಿದ್ದು, ವೈಧ್ಯರು ಮಧ್ಯಪಾನ ಸೇವಿಸ ಬಾರದು ಎಂದು ಹೇಳಿದ್ದರೂ ಕೇಳದೆ ಮದ್ಯಪಾನ ಮಾಡುತ್ತಿದ್ದು,ಇದರಿಂದ ವಿಪರೀತ ಹೊಟ್ಟೆನೋವು ನಿಂದ ಬಳಲುತ್ತಿದ್ದರು. ಹೊಟ್ಟೆನೋವು ತಾಳಲಾರದೇ ಅದೇ ಚಿಂತೆಯಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಬಾಬಣ್ಣ ನಾಯ್ಕ ರವರು ದಿನಾಂಕ: 03.06.2021 ರಂದು ಮಧ್ಯಾಹ್ನ 1:45 ಗಂಟೆಯ ಸುಮಾರಿಗೆ ಮನೆಯ ಹತ್ತಿರದ ಏಸು ನಾಯ್ಕ (ಸಾವೇರ ನಾಯ್ಕ) ರವರ ಜಾಗದಲ್ಲಿರುವ ಬಾವಿಯ ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ.  ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ: 29/2021 ಕಲಂ: 174 ಸಿಆರ್‌ಪಿಸಿ ಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಇತ್ತೀಚಿನ ನವೀಕರಣ​ : 04-06-2021 10:42 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ