ಅಭಿಪ್ರಾಯ / ಸಲಹೆಗಳು

ಅಸ್ವಾಬಾವಿಕ ಮರಣ ಪ್ರಕರಣಗಳು

  • ಹೆಬ್ರಿ: ಪಿರ್ಯಾದಿದಾರರಾದ ದರ್ಶನ್ (20) ತಂದೆ: ವಿಜಯ ಶೆಟ್ಟಿ ವಾಸ: ದರ್ಶನ್ ನಿಲಯ ನೆಹರು ನಗರ ಹುತ್ತುರ್ಕೆ ಹೆಬ್ರಿ ಗ್ರಾಮ ಇವರ ತಂದೆ ವಿಜಯ ಶೆಟ್ಟಿ (57) ರವರು ಹೆಬ್ರಿ ಗ್ರಾಮದ ಬಂಗಾರುಗುಡ್ಡೆಯ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಅದ್ಯಾಪಕರಾಗಿದ್ದು. ಲಾಕ್ ಡೌನ್ ಇರುವುದರಿಂದ ಹೆಬ್ರಿ ಗ್ರಾಮದ ಹುತ್ತುರ್ಕೆಯ ನೆಹರು ನಗರ ಎಂಬಲ್ಲಿ ಮನೆಯಲ್ಲಿಯೇ ಇರುವುದಾಗಿದೆ. ದಿನಾಂಕ 04/06/2021 ರಂದು ಬೆಳಿಗ್ಗೆ ಸಮಯ ಸುಮಾರು ಬೆಳಿಗ್ಗೆ 08:00 ಗಂಟೆಗೆ ವಿಜಯ ಶೆಟ್ಟಿ ರವರು ಮನೆಯ ಎದುರುಗಡೆ ಅಂಗಳದಲ್ಲಿ ನಿಂತು ಕೊಂಡಿರುವಾಗ ಅಲ್ಲಿಯೇ ಕುಸಿದು ಬಿದ್ದು ಮಾತನಾಡುತ್ತಿರದ ಕಾರಣ ಅವರನ್ನು ಚಿಕಿತ್ಸೆಯ ಬಗ್ಗೆ ಬೆಳಿಗ್ಗೆ 08:15 ಗಂಟೆಗೆ ಹೆಬ್ರಿಯ ರಾಘವೇಂದ್ರ ಐತಾಳ್ ಅಸ್ಪತ್ರೆಗೆ ಕರೆ ತಂದು ವೈದ್ಯರಲ್ಲಿ ತೋರಿಸಿದಾಗ ವೈದ್ಯರು ಪರೀಕ್ಷಿಸಿ ಮೃತ ಪಟ್ಟಿರುತ್ತಾರೆಂದು ತಿಳಿಸಿರುತ್ತಾರೆ ಮೃತರು ಹೃದಯಾಘಾತದಿಂದ ಮರಣ ಹೊಂದಿರುವ ಸಾದ್ಯತೆ ಇರುತ್ತದೆ ಮೃತರ ಮರಣದಲ್ಲಿ ಬೇರೆ ಯಾವುದೇ ಸಂದೇಹ ಇರುವುದಿಲ್ಲವಾಗಿದೆ. ಈ ಬಗ್ಗೆ ಹೆಬ್ರಿ ಠಾಣಾ ಯುಡಿಆರ್‌ ಕ್ರಮಾಂಕ 19/2021 ಕಲಂ: 174 ಸಿ.ಆರ್.ಪಿ.ಸಿ. ರಂತೆ ಪ್ರಕರಣ ದಾಖಲಿಸಲಾಗಿದೆ.
  • ಬ್ರಹ್ಮಾವರ: ಪಿರ್ಯಾದಿದಾರರಾಧ ಕವಿತಾ (38) ಗಂಡ: ಪ್ರಕಾಶ್ ಶೆಟ್ಟಿ, ವಾಸ: 1/71, ಹಾವಂಜೆ ಅಂಗಡಿಬೆಟ್ಟು, ಹಾವಂಜೆ ಗ್ರಾಮ, ಬ್ರಹ್ಮಾವರ ತಾಲೂಕು ಇವರ ಗಂಡನಾದ ಪ್ರಕಾಶ್ ಶೆಟ್ಟಿ (40)   ಎಂಬವರು ಗೋವಾದಲ್ಲಿದ್ದು, ಹೊಟೇಲ್‌ವೊಂದರಲ್ಲಿ ವೈಟರ್ ಕೆಲಸ ಮಾಡಿಕೊಂಡಿರುತ್ತಾರೆ. ಈಗ ಲಾಕ್‌ಡೌನ್‌ ಆಗಿರುವುದರಿಂದ ಸುಮಾರು ಒಂದು ತಿಂಗಳ ಹಿಂದೆ ಅವರು ಊರಿಗೆ ಬಂದು ಕವಿತಾ ರವರ ಮನೆಯಲ್ಲಿ ವಾಸವಾಗಿದ್ದರು. ಇವರಿಗೆ ಮಕ್ಕಳಾಗದೇ ಇದ್ದು, ಸುಮಾರು ಹತ್ತು ವರ್ಷಗಳಿಂದ ಪ್ರಕಾಶ್ ಶೆಟ್ಟಿ ರವರು ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದರು. ಈಗ ಸರಿಯಾಗಿ ಕೆಲಸ ಇಲ್ಲದೇ, ಸಾಲವನ್ನು ಮಾಡಿಕೊಂಡು ಮಾನಸಿಕವಾಗಿ ಕುಗ್ಗಿ ಹೋಗಿರುತ್ತಾರೆ.  ಪ್ರಕಾಶ್ ಶೆಟ್ಟಿಯವರು ದಿನಾಂಕ 02/06/2021 ರಂದು ಅವರ  ತಾಯಿ ಮನೆಯಾದ ಹಾರಾಡಿ ಗ್ರಾಮದ ಪೇಟೆಮನೆ ಎಂಬಲ್ಲಿಗೆ ಹೋಗಿದ್ದರು, ಅಲ್ಲಿ ರಾತ್ರಿ ಊಟಮಾಡಿ ಮಲಗಿದ್ದವರು ದಿನಾಂಕ 03/06/2021 ರಂದು ಬೆಳಿಗ್ಗೆ 05:30 ಗಂಟೆಯ ನಂತರ ಪ್ರಕಾಶ್ ಶೆಟ್ಟಿಯವರು ಮಲಗಿದ್ದಲ್ಲಿ ಇಲ್ಲದೇ ಕಾಣೆಯಾಗಿರುತ್ತಾರೆ. ಈ ಬಗ್ಗೆ ಠಾಣೆಯಲ್ಲಿ ಗಂಡಸು ಕಾಣೆಯಂತೆ ಪ್ರಕರಣ ದಾಖಲಾಗಿರುತ್ತದೆ. ಕವಿಥ ಇವರ ಗಂಡನ ಮನೆಯಾದ ಹಾರಾಡಿ ಗ್ರಾಮದ ಪೇಟೆಮನೆ ಎಂಬಲ್ಲಿ  ಇರುವಾಗ   ದಿನಾಂಕ 04/06/2021 ರಂದು ಬೆಳಿಗ್ಗೆ 08:30 ಗಂಟೆಯ ಸುಮಾರಿಗೆ  ಮನೆಯ ಬಾವಿಯ ನೀರಿನಲ್ಲಿ ಪ್ರಕಾಶ್ ಶೆಟ್ಟಿ ರವರ ಮೃತ ಶರೀರ ತೇಲುತ್ತಿರುವುದು ಕಂಡು ಬಂದಿರುವುದಾಗಿದೆ. ಪ್ರಕಾಶ್ ಶೆಟ್ಟಿ ರವರು ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದು, ಅದೇ ಚಿಂತೆಯಿಂದ ಜೀವನದಲ್ಲಿ ಜೀಗುಪ್ಸೆಗೊಂಡು ಮನೆಯ ಬಾವಿಯ ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಪ್ರಕಾಶ್ ಶೆಟ್ಟಿ  ರವರ ಮರಣದಲ್ಲಿ ಬೇರೆ ಯಾವುದೇ ಸಂಶಯ ಇರುವುದಿಲ್ಲವಾಗಿದೆ. ಈ ಬಗ್ಗೆ ಬ್ರಹ್ಮಾವರ ಠಾಣಾ ಯುಡಿಆರ್‌ ಕ್ರಮಾಂಕ 30/2021 ಕಲಂ: 174 ಸಿ.ಆರ್.ಪಿ.ಸಿ. ರಂತೆ ಪ್ರಕರಣ ದಾಖಲಿಸಲಾಗಿದೆ.

ಇತರ ಪ್ರಕರಣಗಳು

  • ಉಡುಪಿ: ದಿನಾಂಕ 03/06/2021 ರಂದು ಪಿರ್ಯಾದಿದಾರರಾದ ವಿಜಯ. ಎ.ಎಸ್.ಐ ಉಡುಪಿ ನಗರ ಪೊಲೀಸ್ ಠಾಣೆ, ಉಡುಪಿ ತಾಲೂಕು ಇವರು  ರಾತ್ರಿ  ರೌಂಡ್ಸ್  ಕರ್ತವ್ಯದಲ್ಲಿರುವಾಗ ದೊರೆತ ಖಚಿತ  ಮಾಹಿತಿಯಂತೆ, ಸಿಬ್ಬಂದಿಯವರೊಂದಿಗೆ ದಿನಾಂಕ  04/06/2021 ರಂದು 00:30 ಗಂಟೆಗೆ  ಉಡುಪಿ ಶ್ರೀಕೃಷ್ಣ  ಮಠದ ರಾಜಾಂಗಣ ಪಾರ್ಕಿಂಗ್‌ ಸ್ಥಳದ  ಮಥುರಾ  ಕಂಫರ್ಟ್‌  ಲಾಡ್ಜಿನ  ರೂಂ. ನಂ. 403 ರಲ್ಲಿದ್ದ  ಕೊಲೆ ಯತ್ನ  ಪ್ರಕರಣದ ಆರೋಪಿತರನ್ನು  ವಶಕ್ಕೆ ಪಡೆದಿದ್ದು, ಪ್ರಸ್ತುತ ಕೋವಿಡ್ -19 ಕೊರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿದ್ದು ಅದನ್ನು ತಡೆಗಟ್ಟುವ ನಿಟ್ಟಿನಲ್ಲಿ ಮಾನ್ಯ ರಾಜ್ಯ ಸರ್ಕಾರ ಹಾಗೂ ಉಡುಪಿ ಜಿಲ್ಲಾಧಿಕಾರಿಯವರು ವಿಧಿಸಿದ ಲಾಕ್ ಡೌನ್ ನಿಯಮಾವಳಿಗಳನ್ನು ಸದ್ರಿ ಮಥುರಾ ಕಂಫರ್ಟ್‌ ಲಾಡ್ಜಿನ ಮ್ಯಾನೇಜರ್‌ ಆದ ಸುರೇಶ ಶೆಟ್ಟಿಗಾರ್‌ ಮತ್ತು ಲಾಡ್ಜಿನ ಮಾಲಕರು ಉಲ್ಲಂಘನೆ ಮಾಡಿ ನಾಲ್ವರು ಯುವಕರಿಗೆ ಲಾಡ್ಜಿನ ಒಂದೇ ರೂಂನಲ್ಲಿ  ತಂಗಲು ಅವಕಾಶ ಮಾಡಿಕೊಟ್ಟು  ಮಾನ್ಯ ಜಿಲ್ಲಾಧಿಕಾರಿಯವರ ಆದೇಶವನ್ನು ಉಲ್ಲಂಘಿಸಿ ಕೊರೊನಾ ವೈರಸ್‌ ಎಂಬ ಹೆಸರಿನ ಸಾಂಕ್ರಮಿಕ ಖಾಯಿಲೆಯ ಸ್ಪೋಟ ಮತ್ತು ಹರಡುವುದನ್ನು ತಡೆಗಟ್ಟಲು ನಿರ್ಲಕ್ಷ್ಯ ವಹಿಸಿರುವುದಾಗಿದೆ. ಈ ಬಗ್ಗೆ ಉಡುಪಿ ನಗರ ಠಾಣಾ ಅಪರಾಧ ಕ್ರಮಾಂಕ 90/2021  ಕಲಂ: 269 ಐಪಿಸಿಯಂತೆ ಪ್ರಕರಣ ದಾಖಲಿಸಲಾಗಿದೆ.
  • ಕಾರ್ಕಳ: ಪಿರ್ಯಾದಿದಾರರಾದ ಶ್ರೀಮತಿ ಯಶೋದ (83) ಗಂಡ; ದಿ: ಶ್ರೀಧರ ಆಚಾರ್ಯ ವಾಸ: ಅನುಗ್ರಹ ನಿಲಯ ಅಶೋಕನಗರ ಕುಂಟಾಡಿ ಕಲ್ಯಾ ಅಂಚೆ, ಮತ್ತು  ಗ್ರಾಮ ಕಾರ್ಕಳ ತಾಲೂಕು ಉಡುಪಿ ಜಿಲ್ಲೆ  ರವರು  ವಯೋವೃದ್ದರಾಗಿದ್ದು, ಕಾರ್ಕಳ ತಾಲೂಕು ಕಲ್ಯಾ ಗ್ರಾಮದ ಅಶೋಕನಗರ ಎಂಬಲ್ಲಿ ಅನುಗ್ರಹ ನಿವಾಸದಲ್ಲಿ ವಾಸವಾಗಿದ್ದು ಅವರಿಗೆ ಮನೆ ಕೆಲಸ ಮಾಡಲು ಸಾದ್ಯವಾಗದ ಕಾರಣ ಅವರ ಮಗ ದಾಮೋದರ ಆಚಾರಿಯು ಕೋಪದಿಂದ ಪ್ರತಿದಿನ ಹೊಡಯವುದು ಬೈಯುವುದು ಮಾಡುತ್ತಿದ್ದು, ಅದರಂತೆ ದಿನಾಂಕ 02/06/2021 ರಂದು 21:00 ಗಂಟೆಗೆ ಶ್ರಿಮತಿ ಯಶೋದ ರವರು ತನ್ನ ಮಗ ದಾಮೋದರ ಆಚಾರ್ಯ ನಿಗೆ ಊಟ ಕೇಳಿದ್ದು, ಅದರಿಂದ ಕೋಪಗೊಂಡ ದಾಮೋದರ ಆಚಾರಿಯು ತೆಂಗಿನ ಮರದ ಹೆಡೆಯಿಂದ ಇವರ ತಲೆಯ ಹಿಂಬಾಗಕ್ಕೆ ಹೊಡೆದು ರಕ್ತ ಗಾಯಗೊಳಿಸಿ ನಿನಗೆ ಊಟ ಹಾಕಲು ಆಗುದಿಲ್ಲ ಎಂದು ಬೈದಿದ್ದು, ಶ್ರೀಮತಿ ಯಶೋದ ರವರು ಹೆದರಿಕೆಯಿಂದ ಈ ವಿಚಾರವನ್ನು ಯಾರಲೀಯೂ ಹೇಳದೇ ಇದ್ದು, ಈ ದಿನ ಬೆಳಿಗ್ಗೆ ಯಾರೋ ಇವರನ್ನು ಅಂಬುಲೆನ್ಸ್ ನಲ್ಲಿ ಕಾರ್ಕಳ ಸರಕಾರಿ ಆಸ್ಪತ್ರೆಗೆ ಕರೆ ತಂದು ದಾಖಲಿಸಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 69/2021 ಕಲಂ: 323, 324, 504, ಐಪಿಸಿಯಂತೆ ಪ್ರಕರಣ ದಾಖಲಿಸಲಾಗಿದೆ.

ಇತ್ತೀಚಿನ ನವೀಕರಣ​ : 04-06-2021 06:06 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080