ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಬೈಂದೂರು: ಫಿರ್ಯಾದಿ ಶ್ರೀಮತಿ ರೇವತಿ ಶೆಟ್ಟಿ  ಇವರ ತಾಯಿ ಸುಶೀಲಾ ಶೆಟ್ಟಿ ರವರು ದಿನಾಂಕ 02/05/2023 ರಂದು  ಹಕ್ಲಾಡಿಯ  ಆದಿಮನೆಯಿಂದ ಈಗ ವಾಸವಾಗಿರುವ ಮೂರೂರಿನ ಮನೆಗೆ ಬರಲು ಅರೆಶಿರೂರಿಗೆ ಬಸ್ಸಿನಲ್ಲಿ  ಬಂದು ನಂತರ ಅರೆಶಿರೂರಿನಿಂದ ಸುಧಾಕರ  ಎಂಬವರ KA 20 C 2393 ನೇ ಆಟೋ ರಿಕ್ಷಾವನ್ನು  ಬಾಡಿಗೆ ಮಾಡಿಕೊಂಡು ಪ್ರಯಾಣಿಕರಾಗಿ ಹಿಂಬದಿ ಸೀಟಿನಲ್ಲಿ ಕುಳಿತುಕೊಂಡು ಅರೆಶಿರೂರು –ಮೂರೂರು ರಸ್ತೆಯಲ್ಲಿ  ಬರುತ್ತಿದ್ದಾಗ  ಮಧ್ಯಾಹ್ನ  2:00 ಗಂಟೆಗೆ  ಕಾಲ್ತೊಡು ಗ್ರಾಮದ ಮುರೂರು ದೊಡ್ಡಾಣಿ ಎಂಬಲ್ಲಿ ಆಟೋರಿಕ್ಷಾ ಚಾಲಕ ಸುಧಾಕರ ರವರು ಆಟೋರಿಕ್ಷಾವನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿದ ಪರಿಣಾಮ  ಆಟೋರಿಕ್ಷಾ ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿದ್ದಿದ್ದು ಅಪಘಾತದ  ಪರಿಣಾಮ ಫಿರ್ಯಾದಿದಾರರ ತಾಯಿ ಸುಶೀಲ ಶೆಟ್ಟಿಯವರಿಗೆ ಎಡಕಾಲಿನ ಮೊಣಗಂಟಿಗೆ ತರಚಿದ ಗಾಯವಾಗಿ ಮೊಣಗಂಟಿನ  ಚಿಪ್ಪು  ಜಾರಿ ಹೋಗಿದ್ದು  ಅಪಘಾತವಾದ ವಿಷಯ ತಿಳಿದ ಫಿರ್ಯಾದಿದಾರರು ಸ್ಥಳಕ್ಕೆ  ಹೋಗಿ ಸಂಬಂದಿಕರಾದ ಚಿತ್ರಾ ಹಾಗೂ ಶೇಖರ ರವರೊಂದಿಗೆ  ತಾಯಿ ಸುಶೀಲಾ ಶೆಟ್ಟಿಯವರನ್ನು  ಉಪಚರಿಸಿ ಚಿಕಿತ್ಸೆ ಬಗ್ಗೆ ಕಾರಿನಲ್ಲಿ ಕುಂದಾಪುರ ಚಿನ್ಮಯಿ ಆಸ್ಪತ್ರೆಗೆ  ಕರೆದುಕೊಂಡು  ಹೋದಲ್ಲಿ  ವೈದ್ಯರು  ಪರೀಕ್ಷಿಸಿ ಸುಶೀಲಾ ಶೆಟ್ಟಿಯವರನ್ನು ಒಳರೋಗಿಯಾಗಿ  ದಾಖಲಿಸಿಕೊಂಡಿರುತ್ತಾರೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 71/2023 ಕಲಂ:279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಕುಂದಾಪುರ: ದಿನಾಂಕ 03/05/2023 ರಂದು ಮಧ್ಯಾಹ್ನ ಸುಮಾರು 01:15   ಗಂಟೆಗೆ, ಕುಂದಾಪುರ  ತಾಲೂಕಿನ, ತಲ್ಲೂರು  ಗ್ರಾಮದ ತಲ್ಲೂರು ಪ್ರವಾಸಿ ಹೊಟೇಲ್‌‌ ಎದುರುಗಡೆ, ಪಶ್ಚಿಮ ಬದಿಯ  NH 66 ರಸ್ತೆಯಲ್ಲಿ, ಆಪಾದಿತ ಮನೋಹರ್‌ ಎಂಬವರು  KA20-D-2614 ನೇ ಭಾರತೀ ಬಸ್‌‌ನ್ನು ಕುಂದಾಪುರ ಕಡೆಯಿಂದ ಹೆಮ್ಮಾಡಿ ಅತೀವೇಗ ಹಾಗೂ ನಿರ್ಲಕ್ಷತನದಿಂದ ಚಾಲನೆ ಮಾಡಿಕೊಂಡು ಬಂದು, ಅಶೋಕ್‌ ಎಸ್‌ ಮಾದರ ಎಂಬವರು  KA31-F-1542 KSRTC ಬಸ್‌‌ನ್ನು ಹೆಮ್ಮಾಡಿ ಕಡೆಯಿಂದ ಚಾಲನೆ ಮಾಡಿಕೊಂಡು ಓಪನ್‌‌ ಡಿವೈಡರ್‌ ಮುಖೇನ ಪೂರ್ವ ಬದಿ NH 66 ರಸ್ತೆಯಿಂದ ಪಶ್ಚಿಮ ಬದಿಯ NH 66 ರಸ್ತೆಗೆ ಇಂಡಿಕೇಟರ್‌ ಹಾಕಿ ತಿರುಗಿಸಿ ಹೋಗುತ್ತಿರುವ ಸಮಯ, KSRTC ಬಸ್‌‌ನ ಎಡಬದಿಯ ಹಿಂಭಾಗಕ್ಕೆ ಡಿಕ್ಕಿ ಹೊಡೆದ ಪರಿಣಾಮ, ಭಾರತೀ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಪಿರ್ಯಾದಿದಾರಳಾದ ಕು: ರಶ್ಮೀತಾ, ದಿವ್ಯಾ ಹಾಗೂ ಚೈತ್ರ ಗಾಯಗೊಂಡು ಕುಂದಾಪುರ ಚಿನ್ಮಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು, ಭಾರತೀ ಬಸ್ಸಿನ ಚಾಲಕ ಮನೋಹರ್‌ ಹಾಗೂ ಬಸ್‌‌ನ ಪ್ರಯಾಣಿಕರಾದ ಚಂದ್ರವತಿ, ಜ್ಯೋತಿ, ರಕ್ಷೀತಾ ಹಾಗೂ ರಾಧಕೃಷ್ಣ ಎಂಬವರು ಗಾಯಗೊಂಡು ಕುಂದಾಪುರ ಸರಕಾರಿ  ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿರುತ್ತಾರೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 59/2023 ಕಲಂ 279, 337ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಪಡುಬಿದ್ರಿ: ಪಿರ್ಯಾದಿ ಕಾರ್ತಿಕ್ ರಾವ್ ವೈ ಇವರ ಮಾವನಾದ ಹರೀಶ್ ರಾವ್ ರವರು ವಾಚ್‌ನ ಸ್ಪೇರ್‌ ಪಾರ್ಟ್ಸ್‌ ಗಳನ್ನು ಅಂಗಡಿ ಅಂಗಡಿಗೆ ಕೊಂಡು ಹೋಗಿ ಮಾರಾಟ ಮಾಡುವ ಕೆಲಸ ಮಾಡಿಕೊಂಡಿದ್ದು, ಹರೀಶ್ ರಾವ್ ರವರು  ಈ ದಿನ ದಿನಾಂಕ:03.05.2023 ರಂದು ಬೆಳಿಗ್ಗೆ ಸುಮಾರು 09.30 ಗಂಟೆಗೆ ನಡ್ಸಾಲು ಗ್ರಾಮದ ಪಡುಬಿದ್ರಿ ಪೇಟೆಯ ಸುಮಂಗಲಾ ಅಂಗಡಿಯ ಎದುರು ಸರ್ವಿಸ್‌ ರಸ್ತೆಯ ಪೂರ್ವದ ಡಿವೈಡರ್‌ ಬಳಿ ನಿಂತಿರುವಾಗ ಪಡುಬಿದ್ರಿ ಜಂಕ್ಷನ್‌ ಕಡೆಯಿಂದ KA-20-EF-8970 ನಂಬ್ರದ ಸ್ಕೂಟರನ್ನು ಅದರ ಸವಾರ ಮಹಮ್ಮದ್‌ ಫಯಾಜ್‌ ಎಂಬವನು ಹಿಂಬದಿ ಸವಾರರೊಬ್ಬರನ್ನು ಕುಳ್ಳಿರಿಸಿ ಕೊಂಡು ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಕೊಂಡು ಬಂದು ಹರೀಶ್ ರಾವ್ ರವರ ಬಲಕಾಲಿಗೆ ಡಿಕ್ಕಿ ಹೊಡೆದಾಗ ಹರೀಶ್ ರಾವ್ ರಸ್ತೆಗೆ ಬಿದ್ದು ಗಾಯಗೊಂಡವನನ್ನು ಕೂಡಲೇ ಅಲ್ಲಿನ ರಿಕ್ಷಾ ಚಾಲಕ ರಾಘವೇಂದ್ರ ಎಂಬವರು ಅಪಘಾತ ಮಾಡಿದ ಸ್ಕೂಟರ್‌ ಸವಾರ ಮತ್ತಿತರರು ಹರೀಶ್ ರಾವ್ ರವರನ್ನು ಉಪಚರಿಸಿ ಸಿದ್ದಿ ವಿನಾಯಕ ಆಸ್ಪತ್ರೆಗೆ ಕರೆದು ಕೊಂಡು ಹೋದಾಗ ಅಲ್ಲಿನ ವೈದ್ಯರು ಪರೀಕ್ಷಿಸಿ ಹರೀಶ್ ರಾವ್ ರವರಿಗೆ ಕಾಲಿಗೆ ಬಲವಾದ ಮೂಳೆಮುರಿತ ವಾಗಿರುವುದಾಗಿ ಉಡುಪಿ ಆದರ್ಶ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸಿರುವುದರಿಂದ ಹರೀಶ್ ರಾವ್ ರವರನ್ನು ಉಡುಪಿಯ ಆದರ್ಶ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಬಗ್ಗೆ ದಾಖಲಿಸಿರುವುದಾಗಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 57/2023, ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಹಲ್ಲೆ ಪ್ರಕರಣ

  • ಬೈಂದೂರು: ದಿನಾಂಕ 02/05/2023 ರಂದು ಫಿರ್ಯಾದಿ ಸಂಜಯ್  ಇವರು ತನ್ನ ಸ್ನೇಹಿತರಾದ ಹರೀಶ್ ಮತ್ತು ನವೀನ ರೊಂದಿಗೆ  ಪಡುವರಿ ಗ್ರಾಮದ ಸೋಮೇಶ್ವರ ಬೀಚ್ ನಲ್ಲಿ ತಿರುಗಾಡುತ್ತಿರುವಾಗ  ಸಂಜೆ ಸುಮಾರು 7:00 ಗಂಟೆಗೆ  ಫಿರ್ಯಾದುದಾರರ ಬಳಿಗೆ ನಾಲ್ಕೈದು ಜನರು ಬಂದು ಫಿರ್ಯಾದಿದಾರರ ಜೊತೆಗಿದ್ದ ಹರೀಶ್ ಎಂಬವನಲ್ಲಿ  ನೀನೇನಾ ಹರೀಶ್ ಎಂದು ಕೇಳಿ ಶಿವರಾಜ್ ಮತ್ತು ನಾಗರಾಜ್ ಎಂಬವರು ಹರೀಶನಿಗೆ  ಕೈಯಿಂದ ಹೊಡೆದು ಅವಾಚ್ಯ ಶಬ್ದಗಳಿಂದ ಬೈದು ನಂತರ ಅಲ್ಲಿಯೇ ಪಕ್ಕದಲ್ಲಿದ್ದ   ತೆಂಗಿನ ಮರದ ತೆಂಗಿನ ಹೆಡೆಮಡಿಯಿಂದ ಹರೀಶ್ ನಿಗೆ ಹೊಡೆದಿರುತ್ತಾರೆ. ಆ ಸಮಯ  ಹರೀಶ ನಿಗೆ ಹೊಡೆಯದಂತೆ ಫಿರ್ಯಾದಿದಾರರು ಹಾಗೂ ನವೀನ್ ಹೋಗಿ ತಡೆದಿರುತ್ತಾರೆ. ಹಲ್ಲೆಯಿಂದ ಗಾಯಗೊಂಡ  ಹರೀಶ ನನ್ನು ಒಂದು ಕಾರಿನಲ್ಲಿ ಫಿರ್ಯಾದಿದಾರು ಮತ್ತು ನವೀನ್ ರವರು ಕುಂದಾಪುರ ಚಿನ್ಮಯ ಆಸ್ಪತ್ರೆಗೆ ಕರೆದುಕೊಂಡು ಹೋಗಿ  ಚಿಕಿತ್ಸೆ  ಬಗ್ಗೆ ದಾಖಲಿಸಿರುತ್ತಾರೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 70/2023 ಕಲಂ:143,147,323,324,504 ಜೊತೆಗೆ 149  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಮನುಷ್ಯ ಕಾಣೆ ಪ್ರಕರಣ:

  • ಅಮಾಸೆಬೈಲು: ಪಿರ್ಯಾದಿ ರತೀಶ್ ಕೆ ಆರ್  ಇವರ ಅಣ್ಣ ಕೆ ಆರ್ ರಾಜೇಶ(42)ಹೊಸಂಗಡಿ ಕೆಪಿಸಿಯಲ್ಲಿ ಉದ್ಯೋಗಿಯಾಗಿದ್ದು ಸುಮಾರು  6 ವರ್ಷದಿಂದ ಹೊಸಂಗಡಿಯಲ್ಲಿ ಕೆಲಸ ಮಾಡಿಕೊಂಡಿರುತ್ತಾರೆ ಪಿರ್ಯಾದಿದಾರರ ಅಣ್ಣ  ಸುಮಾರು 3 ವರ್ಷದ ಹಿಂದೆ ಕೆಲಸಕ್ಕೆ ಹೋಗುತ್ತೇನೆ ಎಂದು ಹೇಳಿ ಹೋದವರು ಮನೆಗೆ ಬಾರದೇ ಒಂದು ತಿಂಗಳ ನಂತರ ಮನೆಗೆ ವಾಪಾಸು ಬಂದಿರುತ್ತಾರೆ ಹಾಗೂ 5-6 ತಿಂಗಳ ಹಿಂದೆ ಪಿರ್ಯಾದಿದಾರರ ಅಣ್ಣ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದು ಕುಂದಾಪುರ ಮತಾ ಆಸ್ಪತ್ರೆಯ್ಲಲಿ ಚಿಕಿತ್ಸೆ ಮಾಡಿಸಿದ್ದು ತದ ನಂತರ ಸರಿಯಾಗಿ ಕೆಲಸಕ್ಕೆ ಹೋಗಿ ಮನೆಗೆ ಬರುತ್ತಿದ್ದವರು ದಿನಾಂಕ  01/04/2023 ರಂದು  ಕೆಲಸಕ್ಕೆ ಹೋಗುತ್ತೇನೆ ಎಂದು ಹೇಳಿ ಹೋದವರು ಮನೆ ಬಾಗದೇ ಕಾಣಿಯಾಗಿರುತ್ತಾರೆ. ಈ ಬಗ್ಗೆ ಅಮಾಸೆಬೈಲು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 15/2023   ಕಲಂ: ಗಂಡಸು ಕಾಣೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತರ ಪ್ರಕರಣ

  • ಕಾರ್ಕಳ: ಫಿರ್ಯಾದಿ ಶ್ರೀಮತಿ ರಮಿತಾ ಇವರು ಬಿ. ಜೆ. ಪಿ. ಪಕ್ಷದ ಕಾರ್ಯಕರ್ತೆಯಾಗಿದ್ದು.  ಈ  ಹಿಂದೆ ದಿನಾಂಕ 16-02-2023  ರಂದು  ಅವರ  ಬಗ್ಗೆ  ಫೇಸ್‌ಬುಕ್ ನಲ್ಲಿ ಅವಹೇಳನಕಾರಿಯಾಗಿ ಪ್ರಚಾರ ಮಾಡಿದ ಬಗ್ಗೆ ಕಾರ್ಕಳ ನಗರ  ಠಾಣೆಯಲ್ಲಿ  ಅಕ್ರ 19/2023  ರಂತೆ  ಕೇಸು ದಾಖಲಾಗಿರುತ್ತದೆ.ಈ ದೂರು ನೀಡುವಾಗ ಫಿರ್ಯಾದುದಾರರ ವೈಯಕ್ತಿಕ  ಮಾಹಿತಿಯನ್ನು  ಸಾಮಾಜಿಕ ಜಾಲತಾಣದಲ್ಲಿ  ಹಾಕುತ್ತೇವೆ ಎಂದು ಅಪಾದಿತರು ಬೆದರಿಕೆ  ಹಾಕಿರುತ್ತಾರೆ.   ಅದೇ  ದಿನ ದಿನಾಂಕ 23-04-2023  ರಂದು ಕೆಲವು ಕಾಂಗ್ರೆಸ್ ಬೆಂಬಲಿತ  ವ್ಯಕ್ತಿಗಳು ಮತ್ತು ಇತರರು ಸೇರಿ ಫಿರ್ಯಾದುದಾರರ  ಹಳೆಯ ಫೋಟೋವನ್ನು ಎಡಿಟ್  ಮಾಡಿ  ಅವರ ಚಹರೆ  ಇಟ್ಟು ಶೀಘ್ರದಲ್ಲಿ  ವಿಡಿಯೋ  ಬಿಡುಗಡೆ ಎಂದು ಹೇಳಿ ವಾಟ್ಸಾಪ್ ಮತ್ತು ಫೇಸ್‌ ಬುಕ್‌ನಲ್ಲಿ  ಹಾಕಿದ್ದು  ಈ ಕುರಿತಂತೆ ಫಿರ್ಯಾದುದಾರರು ನೀಡಿದ ದೂರಿನಂತೆ  ಕಾರ್ಕಳ  ಪೊಲೀಸ್  ಠಾಣೆಯಲ್ಲಿ ಅಪರಾಧ ಸಂಖ್ಯೆ   52/2023  ರಂತೆ  ಕೇಸು ದಾಖಲಾಗಿರುತ್ತದೆ.  ಈ ರೀತಿಯಲ್ಲಿ ಎಡಿಟ್ ಮಾಡಿರುವ ಫೋಟೋವನ್ನು  ಹಾಕಿ ಮಾನ ಹಾನಿ ಆಗುತ್ತಿರುವ ಫೋಟೋಗಳನ್ನು  ಪ್ರಸಾರ  ಮಾಡದಂತೆ ಫಿರ್ಯಾದುದಾರರು ಮಾನ್ಯ ವೆಕೇಷನ್ ನ್ಯಾಯಾಲಯ ಉಡುಪಿಯಿಂದ  ದಿನಾಂಕ 28-04-2023 ರಂದು ಒ ಎಸ್ ನಂಬ್ರ 0000001/2023 ರಂತೆ ತಡೆಯಾಜ್ಞೆಯನ್ನು  ತಂದಿರುತ್ತಾರೆ.  ಆದರೆ  ಪವರ್  ಟಿವಿ ನ್ಯೂಸ್ ಚಾನಲ್‌ನ ಮಾಲಿಕರಾದ  ರಾಕೇಶ್ ಶೆಟ್ಟಿ, ಸಂಚಾಲಕರು ಮತ್ತು  ನ್ಯೂಸ್ ಓದಿದವರು  ಮೊನ್ನೆ ದಿನ ಸಾಮಾಜಿಕ  ಜಾಲತಾಣದಲ್ಲಿ  ಹರಿದಾಡಿದ್ದ  ಎಡಿಟ್  ಮಾಡಿದ ಫೋಟೋವನ್ನು ಅವರ https;11youtu.be/tfhu2dtM2nc ನ್ಯೂಸ್‌ನಲ್ಲಿ  ಈ ದಿನ ದಿನಾಂಕ 03-05-2023 ರಂದು  ಪ್ರಸಾರ   ಮಾಡಿದ್ದು  ಈ  ದಿನ 03-05-2023 ರಂದು ಮಧ್ಯಾಹ್ನ  2-45 ಗಂಟೆಗೆ ಆ ಲಿಂಕ್ ಒತ್ತಿ  ವಿಡಿಯೋ  ನೋಡಿದಾಗ  ಫಿರ್ಯಾದುದಾರರು ಈ ಹಿಂದೆ  ದೂರು ದಾಖಲಿಸುವಾಗ ಇದ್ದ ಫೋಟೋವನ್ನು  ಬಳಸಿ ಎಲೆಕ್ಟ್ರಾನಿಕ್   ಮಾಧ್ಯಮವಾದ ಪವರ್  ನ್ಯೂಸ್  ಚಾನಲ್‌ನಲ್ಲಿ   ಪ್ರಸರಿಸಿದ್ದು ಅಲ್ಲದೇ  ಅದರ  ಸಣ್ಣ ವಿಡಿಯೋ ತುಣುಕನ್ನು ಸಾಮಾಜಿಕ  ಜಾಲತಾಣದಲ್ಲಿ   ಹರಿಯಬಿಟ್ಟು ಫಿರ್ಯಾದುದಾರರಿಗೆ ಸಮಾಜದಲ್ಲಿ ತಿರುಗಾಡದಂತೆ  ಸಾರ್ವಜನಿಕವಾಗಿ ಅವಮಾನಿಸಿರುತ್ತಾರೆ ಎಂಬಿತ್ಯಾದಿ.  ಈ ಬಗ್ಗೆ ಕಾರ್ಕಳ ನಗರ  ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 59/2023  ಕಲಂ  506 ಜೊತೆಗೆ 34 ಐಪಿಸಿ ಮತ್ತು 67, 67(ಎ) ಐಟಿ ಕಾಯ್ದೆ 2008 ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಅಸ್ವಾಭಾವಿಕ ಮರಣ ಪ್ರಕರಣ

  • ಉಡುಪಿ: ಪಿರ್ಯಾದಿ ಲಲಿತ್‌ ನಾರಾಯಣ  ಇವರ ದೂರದ ಸಂಬಂಧಿ ರತ್ನಾವತಿ ಪ್ರಾಯ: 66 ವರ್ಷ ರವರು ಅವಿವಾಹಿತರಾಗಿದ್ದು, ಪುತ್ತೂರು ಗ್ರಾಮದ ಶಾಂತಿವನ ಬಳಿ ಒಬ್ಬಂಟಿಯಾಗಿ ವಾಸವಾಗಿದ್ದು, ಅವರಿಗೆ ರಕ್ತ ಸಂಬಂಧಿಕರು ಯಾರೂ ಇಲ್ಲದೆ ಇದ್ದು, ಮಾನಸಿಕವಾಗಿ ಖಿನ್ನತೆಯಿಂದ ಬಳಲುತ್ತಿದ್ದು, ಯಾರೊಂದಿಗೂ ಸರಿಯಾಗಿ ಮಾತನಾಡುತ್ತಿರಲಿಲ್ಲ. ಹೀಗಿರುತ್ತಾ ದಿನಾಂಕ 01/05/2023 ರಂದು ಬೆಳಿಗ್ಗೆ 10:00 ಗಂಟೆಯಿಂದ ದಿನಾಂಕ 03/05/2023 ರಂದು 15:00 ಗಂಟೆ ನಡುವಿನ ಸಮಯದಲ್ಲಿ ಅವರು ಯಾವುದೋ ಖಾಯಿಲೆಯಿಂದ ಮೃತ ಪಟ್ಟಿರುತ್ತಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆ ಯುಡಿಆರ್ ಕ್ರಮಾಂಕ 24/2023  ಕಲಂ: 174 CRPC ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 04-05-2023 10:02 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080