ಅಭಿಪ್ರಾಯ / ಸಲಹೆಗಳು

ಅಸ್ವಾಭಾವಿಕ ಮರಣ ಪ್ರಕರಣಗಳು

  • ಕಾರ್ಕಳ: ಪಿರ್ಯಾದಿ: ಮೋಹನ್‌ ನಾಯಕ್‌, ಪ್ರಾಯ: 64 ವರ್ಷ, ತಂದೆ: ಸುಬ್ರಾಯ ನಾಯಕ್‌, ವಾಸ: ಏಕದ್ರಿಪ್ವ ನಿವಾಸ, ಸಿದ್ದಿವಿನಾಯಕ ಲೇಔಟ್, ಜೋಡುರಸ್ತೆ, ಕುಕ್ಕುಂದೂರು ಗ್ರಾಮ ಇವರು ಮೇಲಿನ ವಿಳಾಸದಲ್ಲಿ ವಾಸವಾಗಿದ್ದು ಕ್ಯಾಟರಿಂಗ್ ಕೆಲಸ ಮಾಡಿಕೊಂಡಿರುತ್ತಾರೆ.  ದಿನಾಂಕ  03-05-2023 ರಂದು ಫಿರ್ಯಾದುದಾರರು  ಮನೆಯಲ್ಲಿರುವ ಸಮಯ  ಬೆಳಿಗ್ಗೆ  08-30 ಗಂಟೆಗೆ ಅವರ  ಹೆಂಡತಿ ಜಯಲಕ್ಷ್ಮಿ  ನಾಯಕ್, ಪ್ರಾಯ: 57 ವರ್ಷ ರವರು   ಅಸ್ವಸ್ಥಗೊಂಡು ವಾಂತಿ ಮಾಡುತ್ತಿದ್ದು ಕೂಡಲೇ ಅವರನ್ನು  ಚಿಕಿತ್ಸೆಯ  ಬಗ್ಗೆ  ಕಾರ್ಕಳ ಡಾ. ಟಿಎಂಎಪೈಆಸ್ಪತ್ರೆಗೆ  ಕರೆದುಕೊಂಡು ಹೋದಾಗ  ಪರೀಕ್ಷಿಸಿದ ವೈದ್ಯರು ಹೆಚ್ಚಿನ  ಚಿಕಿತ್ಸೆಗೆ  ಮಣಿಪಾಲ  ಕೆಎಂಸಿ  ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದ್ದು ಒಳರೋಗಿಯಾಗಿ  ಚಿಕಿತ್ಸೆಯಲ್ಲಿದ್ದ  ಶ್ರೀಮತಿ ಜಯಲಕ್ಷ್ಮಿ  ನಾಯಕ್‌ರವರು  ಚಿಕಿತ್ಸೆಗೆ ಸ್ಪಂದಿಸದೇ  ಮಣಿಪಾಲ ಕೆಎಂಸಿ  ಆಸ್ಪತ್ರೆಯಲ್ಲಿ  ದಿನಾಂಕ  04-05-2023 ರಂದು ಬೆಳಗ್ಗಿನ ಜಾವ  03-20 ಗಂಟೆಗೆ  ಮೃತಪಟ್ಟಿರುತ್ತಾರೆ. ಮೃತರ ಮಗನ ಮದುವೆ  ನಿಗದಿಯಾಗಿದ್ದು ಅದೇ   ಕಾರಣದಿಂದ  ಬೇಸರದಿಂದ  ಇದ್ದು ತಾನು ಸಾಯುತ್ತೇನೆಂದು ಹೇಳುತ್ತಿದ್ದರು. ಅದೇ  ಕಾರಣದಿಂದ ಬೇಸರಗೊಂಡು  ಅನಗತ್ಯ  ಮಾತ್ರೆಯನ್ನು  ಸೇವಿಸಿ  ಆತ್ಮಹತ್ಯೆ  ಮಾಡಿಕೊಂಡಿರುತ್ತಾರೆ ಈ ಬಗ್ಗೆ  ಕಾರ್ಕಳ ನಗರ ಪೊಲೀಸ್  ಠಾಣೆ ಯುಡಿಆರ್‌ 17/2023ಕಲಂ 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.
  • ಮಣಿಪಾಲ: ಪಿರ್ಯಾದಿ: ವಿಜಯ ಎನ್‌.ಜಿ ಪ್ರಾಯ: 26 ವರ್ಷ ತಂದೆ: ಜಯಪ್ರಕಾಶ್‌ ಎನ್.ಟಿ ವಾಸ: ನಂ: 184/ಎ ಶ್ರೀನಿವಾಸ ನಿಲಯ 3ನೇ ಕ್ರಾಸ್‌ ಅಲ್ಲಮಪ್ರಭು ಮಾರ್ಗ ಕಲ್ಯಾಣ ನಗರ, ಬೈಪಾಸ್‌ ರಸ್ತೆ, ಚಿಕ್ಕಮಂಗಳೂರು-ಇವರ  ತಂದೆ ಜಯಪ್ರಕಾಶ್‌ (60 ವರ್ಷ) ರವರು Rural Drinking Water Supply & Sanitation ಇಲಾಖೆಯಲ್ಲಿ ಎ.ಇ.ಇ ಯಾಗಿ ನಿವೃತ್ತರಾಗಿರುತ್ತಾರೆ, ಪ್ರಸ್ತುತ ನಿವೃತ್ತ ಜೀವನ ನಡೆಸುತ್ತಿರುತ್ತಾರೆ, ಪಿರ್ಯಾದಿದಾರರ ತಂದೆಯವರಿಗೆ ಮೂರು ವರ್ಷಗಳಿಂದ ಕಿಡ್ನಿ ವೈಫಲ್ಯದ ಸಮಸ್ಯ, ಬಿಪಿ ಮತ್ತು ಶುಗರ್‌ ನಿಂದ ಬಳಲಿತ್ತಿದ್ದು ಈ ಬಗ್ಗೆ ಆಶ್ರಯ ಆಸ್ಪತ್ರೆ ಚಿಕ್ಕಮಂಗಳೂರಿನಲ್ಲಿ ಚಿಕಿತ್ಸೆ ತೆಗೆದುಕೊಳ್ಳುತ್ತಿದ್ದರು ನಂತರ ದಿನಾಂಕ: 17.01.2023 ರಂದು ಕೆಎಂಸಿ ಆಸ್ಪತ್ರೆ ಮಣಿಪಾಲದಲ್ಲಿ ಕಿಡ್ನಿ ಶಸ್ತ್ರಚಿಕಿತ್ಸೆಯನ್ನು ಮಾಡಿಸಿರುತ್ತಾರೆ,  ದಿನಾಂಕ: 04.05.2023 ರಂದು ಬೆಳಿಗ್ಗೆ 06:00 ಗಂಟೆಗೆ ಸುಮಾರಿಗೆ ಪಿರ್ಯಾದಿದಾರರ ತಂದೆ ಜಯಪ್ರಕಾಶ್‌ ಎನ್‌ ಟಿ ರವರು ರಕ್ತ ವಾಂತಿ ಮಾಡಿಕೊಂಡು ಅಸ್ವಸ್ಥಗೊಂಡವರನ್ನು ಪಿರ್ಯಾದಿದಾರರು ಅಂಬುಲೆನ್ಸ್‌ ನಲ್ಲಿ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಚಿಕಿತ್ಸೆಗೆ ಕರೆತಂದಿದ್ದು 06:33 ಗಂಟೆಗೆ ವೈದ್ಯರು ಪರೀಕ್ಷಿಸಿ ಜಯಪ್ರಕಾಶ್‌ ಎನ್‌ ಟಿ ಇವರು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ . ಈ ಬಗ್ಗೆ  ಮಣಿಪಾಲ ಪೊಲೀಸ್ ಠಾಣೆ ಯುಡಿಆರ್‌‌ ನಂಬ್ರ 20/2023 ಕಲಂ: 174  ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ. 

ಇತ್ತೀಚಿನ ನವೀಕರಣ​ : 04-05-2023 06:17 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080