ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕೋಟ : ಫಿರ್ಯಾದಿ ಗಣೇಶ್‌ ದಾರರು ದಿನಾಂಕ  02/05/2022  ರಂದು ಮೋಟಾರು  ಸೈಕಲಿನಲ್ಲಿ  ಕುಂದಾಪುರ  ಹಳೆ  ಬಸ್‌‌‌‌ಸ್ಟಾಂಡ್‌‌‌‌‌‌ನಲ್ಲಿರುವ  ಚಿನ್ನದ  ಅಂಗಡಿಗೆ  ಹೋಗಿ  ಚಿನ್ನದ  ಕಟ್ಟಿಂಗ್‌‌‌‌‌‌ ಕೆಲಸವನ್ನು ಮುಗಿಸಿ   ವಾಪಾಸು  ಮನೆಗೆ ರಾತ್ರಿ  ಹೊರಟು ಕುಂದಾಪುರ  -  ಉಡುಪಿ  ರಾ.ಹೆ.  66  ರಲ್ಲಿ  ಬರುತ್ತಿರುವಾಗ ತೆಕ್ಕಟ್ಟೆ  ಹೈಸ್ಕೂಲ್‌‌‌‌‌‌ನ  ಎದುರು  ಉಡುಪಿ -  ಕುಂದಾಪುರ ರಾ.ಹೆ. 66  ರಲ್ಲಿ  ಒಂದು  ಮೋಟಾರು  ಸೈಕಲ್‌‌‌‌‌‌‌ ಸವಾರ  ಅತೀವೇಗ  ಹಾಗೂ  ನಿರ್ಲಕ್ಷತನದಿಂದ  ಕುಂದಾಪುರ  ಕಡೆಗೆ  ಹೋಗುತ್ತಿದ್ದು,   ಮೋಟಾರು  ಸೈಕಲ್‌‌‌‌‌ ಹತೋಟಿ  ತಪ್ಪಿ ರಸ್ತೆಗೆ  ಬಿದ್ದು,  ಸ್ವಲ್ಪ  ದೂರದವರೆಗೆ  ಎಳೆದುಕೊಂಡು  ಹೋಗಿರುತ್ತದೆ.  ಕೂಡಲೇ  ಮೋಟಾರು ಸೈಕಲ್‌‌‌ನ್ನು  ನಿಲ್ಲಿಸಿ  ಮೋಟಾರು ಸೈಕಲ್‌‌‌‌‌ ಬಿದ್ದಲ್ಲಿಗೆ  ಹೋಗಿ  ನೋಡಲಾಗಿ ಮೋಟಾರು ಸೈಕಲ್‌‌‌‌‌‌‌‌‌ ಸವಾರಿ ಮಾಡುತ್ತಿದ್ದವರಿಗೆ  ಎಡಕೈಗೆ,  ಎಡಕಾಲ  ಮಣಿಗಂಟಿಗೆ  ತರಚಿದ  ಗಾಯವಾಗಿ ಅವರ  ಹೆಸರು ರಾಘವೇಂದ್ರ ಎಂಬುದಾಗಿ  ತಿಳಿಯಿತು.  ಹಿಂಬದಿ  ಕುಳಿತ  ವ್ಯಕ್ತಿಯ ಪರಿಚಯ  ನನಗೆ  ಇದ್ದು,  ಆತನ  ಹೆಸರು ಪ್ರಕಾಶ್‌‌‌‌‌‌‌‌ ಎಂಬವರಾಗಿರುತ್ತಾರೆ.  ಪ್ರಕಾಶ್‌‌ರವರಿಗೆ ಎಡಬದಿ  ಕಣ್ಣಿಗೆ,  ತಲೆಗೆ  ತೀವ್ರ  ತರದ  ರಕ್ತ  ಗಾಯವಾಗಿ  ರಕ್ತ  ಸೋರುತ್ತಿತ್ತು.  ಪ್ರಕಾಶ್‌‌‌‌‌‌ನಿಗೆ  ಪ್ರಜ್ಞೆ ತಪ್ಪಿದ್ದು, ಮಾತನಾಡುತ್ತಿರಲಿಲ್ಲ.  ಅಪಘಾತಕ್ಕೊಳಪಟ್ಟ ಮೋಟಾರು  ಸೈಕಲ್‌‌‌‌‌‌‌ ನಂಬ್ರ  ನೋಡಲಾಗಿ  ಕೆ.ಎ-20-ವಿ-1669 ಆಗಿರುತ್ತದೆ.   ಆಗ  ಸಮಯ  ಸುಮಾರು  ರಾತ್ರಿ 10:00  ಗಂಟೆಯಾಗಬಹುದು.  ಅಲ್ಲಿ  ಸೇರಿದವರು  ಒಂದು  ಆಂಬುಲೆನ್ಸ್‌‌‌‌‌‌‌  ನ್ನು  ತರಿಸಿ ಪ್ರಕಾಶ್‌‌‌ರವರನ್ನು  ಎನ್‌‌‌‌‌.ಆರ್‌‌‌‌‌. ಆಚಾರ್ಯ ಆಸ್ಪತ್ರೆಗೆ  ಕರೆದುಕೊಂಡು  ಹೋಗಿದ್ದು,  ಅಲ್ಲಿ  ವೈದ್ಯರು  ಪರೀಕ್ಷಿಸಿ ವೈದ್ಯರ ಸಲಹೆಯಂತೆ ಹೆಚ್ಚಿನ  ಚಿಕಿತ್ಸೆಯ ಬಗ್ಗೆ  ಉಡುಪಿಯ  ಆದರ್ಶ  ಆಸ್ಪತ್ರೆಗೆ  ದಾಖಲಾಗಿರುತ್ತಾರೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 62/2022  ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಿಸಲಾಗಿದೆ.

ಇತರ ಪ್ರಕರಣ

  • ಗಂಗೊಳ್ಳಿ: ಫಿರ್ಯಾದಿದಾರರಾದ ಚಿಕ್ಕಯ್ಯ ಗಾಣಿಗರವರು ಕುಂದಾಪುರ ತಾಲೂಕು ಕುಂದಬಾರಂದಾಡಿ ಗ್ರಾಮದ ಕುಂದಬಾರಂದಾಡಿ MSIL  ವೈನ್ ಶಾಪ್ ಬಳಿ ಅಂಗಡಿ ಇಟ್ಟುಕೊಂಡಿರುತ್ತಾರೆ.  ದಿನಾಂಕ: 03-05-2022 ರಂದು ಮದ್ಯಾಹ್ನ ಸಮಯ  ಸುಮಾರು 1:00 ಗಂಟೆಗೆ ಯಾವಾಗಲೂ ಅಂಗಡಿಗೆ ಬರುತ್ತಿದ್ದ ಹೊಳ್ಮಗೆಯ ದಿನೇಶ್ ಪೂಜಾರಿ, ಆತನೊಂದಿಗೆ ರಾಘವೇಂದ್ರ ಪೂಜಾರಿಯವರು ಬೈಕ್ ನಲ್ಲಿ ಅಂಗಡಿಗೆ ಬಂದಿರುತ್ತಾರೆ. ದಿನೇಶ್ ಪೂಜಾರಿಯವರು ಈ ಹಿಂದೆ ತೆಗೆದುಕೊಂಡು ಹೋಗಿದ್ದ ಸಾಮಾನಿನ ಬಿಲ್ಲು ಬಾಕಿ ಇದ್ದು ಫಿರ್ಯಾದಿದಾರರು ಅದನ್ನು ಕೇಳಿದಾಗ ಉಡಾಫೆಯಿಂದ ಮಾತಾಡಿದ್ದು ಅದೇ ಸಮಯದಲ್ಲಿ ರಾಘವೇಂದ್ರ ಪೂಜಾರಿಯವರು ಫಿರ್ಯಾದಿದಾರರನ್ನು ಉದ್ದೇಶಿಸಿ  ಬಾಕಿ ಹಣ ಕೇಳುತ್ತೀಯಾ” ಎಂದು ಹೇಳಿ ತನ್ನ ಕೈಯಲ್ಲಿದ್ದ  ಹೆಲ್ಮೆಟ್ ನಿಂದ  ಫಿರ್ಯಾದಿದಾರರ ತಲೆಗೆ ಹೊಡೆದಿದ್ದು ದಿನೇಶ್ ಪೂಜಾರಿಯವರು  ಕೈಯಿಂದ ಫಿರ್ಯಾದಿದಾರರ ಕೆನ್ನೆಗೆ ಹಾಗೂ ಬೆನ್ನಿಗೆ ಗುದ್ದಿದ್ದು  ಅಲ್ಲದೇ ಇಬ್ಬರೂ ಸೇರಿ “ನಮ್ಮಲ್ಲಿ ಹಣ ಕೇಳಿದರೆ ನಿನ್ನನ್ನು ಕೊಲ್ಲದೇ  ಬಿಡುವುದಿಲ್ಲ”ವೆಂದು ಜೀವ ಬೆದರಿಕೆ ಹಾಕಿರುತ್ತಾರೆ.ಫಿರ್ಯಾದಿದಾರರು ಕೂಗಿ ಕರೆದಾಗ  ವೈನ್ ಶಾಪ್ನಲ್ಲಿದ್ದ ಕೆಲವರು ಬಂದಿದ್ದನ್ನು ನೋಡಿ ಆಪಾದಿತರು ಬೈಕ್ ನಲ್ಲಿ ಓಡಿ ಹೋಗಿರುತ್ತಾರೆ.  ಆಪಾದಿತರು ಫಿರ್ಯಾದಿದಾರರಿಗೆ ಹೊಡೆದ ಪರಿಣಾಮ  ತಲೆಗೆ, ಕೆನ್ನೆಗೆ, ಬೆನ್ನಿಗೆ ಒಳನೋವು ಉಂಟಾಗಿದ್ದು ಚಿಕಿತ್ಸೆ ಬಗ್ಗೆ ಕುಂದಾಪುರ ಚಿನ್ಮಯಿ ಆಸ್ಪತ್ರೆಗೆ ಹೋಗಿ ಒಳರೋಗಿಯಾಗಿ ದಾಖಲಾಗಿರುತ್ತಾರೆ.  ಫಿರ್ಯಾದಿದಾರರು ದಿನೇಶ್ ಪೂಜಾರಿಯವರು ಕೊಡಲು ಇದ್ದ ಬಾಕಿ ಹಣ ಕೇಳಿದ್ದಕ್ಕೆ ದಿನೇಶ್ ಪೂಜಾರಿ ಹಾಗೂ ರಾಘವೇಂದ್ರ ಪೂಜಾರಿಯವರು ಹಲ್ಲೆ ಮಾಡಿರುವುದಾಗಿದೆ.  ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 41/2022 ಕಲಂ: 323, 324, 504, 506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಿಸಲಾಗಿದೆ.
  • ಗಂಗೊಳ್ಳಿ: ಫಿರ್ಯಾದಿದಾರರಾದ ರಾಘವೇಂದ್ರ ಪೂಜಾರಿಯವರು ಹೊಳಮಗೆಯ ದಿನೇಶ ಪೂಜಾರಿ ಎಂಬವರ ಜೊತೆ ದಿನಾಂಕ: 03-05-2022 ರಂದು ಹಟ್ಟಿಕುದ್ರುವಿನಲ್ಲಿ ಕೆಲಸ ಮುಗಿಸಿ ತನ್ನ ಬೈಕ್ ನಲ್ಲಿ ಹೊರಟು ಮದ್ಯಾಹ್ನ ಸಮಯ ಸುಮಾರು 1:00 ಗಂಟೆಗೆ ಕುಂದಾಪುರ ತಾಲೂಕು ಕುಂದಬಾರಂದಾಡಿ ಗ್ರಾಮದ ವೈನ್ ಶಾಪ್ ಬಳಿಯ ಚಿಕ್ಕಯ್ಯ ಗಾಣಿಗರವರ ಅಂಗಡಿಗೆ ಹೋಗಿ ದಿನೇಶ್ ಪೂಜಾರಿಯವರು ಸಾಮಾನು ಖರೀದಿಸಿದ್ದು ಸದ್ರಿ ವಿಚಾರದಲ್ಲಿ ಮಾತಿಗೆ ಮಾತು ಬೆಳೆದಿದ್ದು ಫಿರ್ಯಾದಿದಾರರು ಗಲಾಟೆ ಬಿಡಿಸಲು ಹೋದಾಗ ಚಿಕ್ಕಯ್ಯ  ಗಾಣಿಗರವರು “ನೀವು ಗಲಾಟೆ ಮಾಡಲು ಬಂದಿದ್ದೀರಿ ಎಂದು ಹೇಳಿ ಅಂಗಡಿಯೊಳಗಿದ್ದ ಬಿಸಿ ನೀರನ್ನು ಫಿರ್ಯಾದಿದಾರರ ಮೈಮೇಲೆ ಚೆಲ್ಲಿ ಅಲ್ಲೇ ಇದ್ದ ಚೂರಿಯಿಂದ  ತಲೆಗೆ ಹೊಡೆದಿದ್ದು ಪರಿಣಾಮ ಫಿರ್ಯಾದಿದಾರರ ಎದೆಯ ಭಾಗ ಸುಟ್ಟು ಹೋಗಿದ್ದು ತಲೆಗೆ ರಕ್ತ ಗಾಯವಾಗಿರುತ್ತದೆ. ಫಿರ್ಯಾದಿದಾರರ ಜೊತೆಗಿದ್ದ ದಿನೇಶ್ ಪೂಜಾರಿಯವರಿಗೆ  ಕೇಬಲ್ ವೈಯರ್ ನಿಂದ ಹೊಡೆದಾಗ  ದಿನೇಶ್  ಪೂಜಾರಿ ಅಲ್ಲಿಂದ ಓಡಿ ಹೋಗಿರುತ್ತಾರೆ. ಗಲಾಟೆಯ ಶಬ್ದ ಕೇಳಿ ವೈನ್ ಶಾಪ್ ನಲ್ಲಿದ್ದ ಕೆಲವರು ಬಂದು ಗಲಾಟೆಯಿಂದ ಬಿಡಿಸಿದ್ದು ಚಿಕ್ಕಯ್ಯ ಗಾಣಿಗರು ಫಿರ್ಯಾದಿದಾರರನ್ನು ಉದ್ದೇಶಿಸಿ ಇನ್ನೊಂದು ಸಾರಿ ಅಂಗಡಿಯ ಬಳಿ ಬಂದರೆ ನಿಮ್ಮನ್ನು ಜೀವ ಸಹಿತ ಬಿಡುವುದಿಲ್ಲ “ಎಂದು ಜೀವ ಬೆದರಿಕೆ ಹಾಕಿರುತ್ತಾರೆ. ಗಾಯಗೊಂಡ ಫಿರ್ಯಾದಿದಾರರು ಚಿಕಿತ್ಸೆ ಬಗ್ಗೆ  ಕುಂದಾಪುರ ಸರಕಾರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ.  ಚಿಕ್ಕಯ್ಯ  ಗಾಣಿಗರವರ ಅಂಗಡಿಯಲ್ಲಿ ದಿನೇಶ್  ಪೂಜಾರಿಯವರು ಸಾಮಾನು ಖರೀದಿಸಿದ ವಿಚಾರದಲ್ಲಿ ಮಾತಿಗೆ ಮಾತು ಬೆಳೆದು ಗಲಾಟೆ ಬಿಡಿಸಲು ಹೋದ ಫಿರ್ಯಾದಿದಾರರಿಗೆ ಚಿಕ್ಕಯ್ಯ ಗಾಣಿಗರವರು ಹಲ್ಲೆ ಮಾಡಿರುವುದಾಗಿದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 42/2022 ಕಲಂ: 324, 504, 506 ಐಪಿಸಿಯಂತೆ ಪ್ರಕರಣ ದಾಖಲಿಸಲಾಗಿದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಕಾರ್ಕಳ: ಪಿರ್ಯಾದಿ ಮಂಜುನಾಥ ಇವರು ತನ್ನ ತಂಗಿ ಶೋಭಾ ಪ್ರಾಯ: 28 ವರ್ಷ, ಎಂಬುವವರನ್ನು 9 ವರ್ಷದ ಹಿಂದೆ ಶಿವಮೊಗ್ಗದ ಲೋಕೇಶ್ ಎಂಬುವವನಿಗೆ ಮದುವೆ ಮಾಡಿಕೊಟ್ಟಿದ್ದು, ಶೋಭಾರವರು ಗಂಡ ಮತ್ತು ಮಕ್ಕಳೊಂದಿಗೆ ಕುಕ್ಕುಂದೂರು ಗ್ರಾಮದ ಜೋಡುರಸ್ತೆ ಮಟನ್ ಸ್ಟಾಲ್ ಬಳಿ ಮನೆ ಮಾಡಿಕೊಂಡು ವಾಸವಾಗಿರುತ್ತಾರೆ. ದಿನಾಂಕ: 03.05.2022 ರಂದು ಬೆಳಗ್ಗೆ 11:40 ಗಂಟೆಗೆ ಹತ್ತಿರದ ಮನೆಯವರು ಶೋಭಾಳ ಮೊಬೈಲ್ ಪೋನ್ ನಿಂದ ಪಿರ್ಯಾದಿದಾರರಿಗೆ ಕರೆ ಮಾಡಿಶೋಭಾಳನ್ನು ಲೋಕೇಶ್ ನು ರಿಕ್ಷಾದಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗಿರುವುದಾಗಿ ತಿಳಿಸಿದ್ದು ಕೂಡಲೇ ಪಿರ್ಯಾದಿದಾರರು ಕಾರ್ಕಳ ಸರ್ಕಾರಿ ಆಸ್ಪತ್ರೆಗೆ ಹೋದಾಗ ಮದ್ಯಾಹ್ನ 12:07 ಗಂಟೆಗೆ ಶೋಭಾಳು ಮೃತಪಟ್ಟಿರುವುದಾಗಿ  ವೈದ್ಯರು ತಿಳಿಸಿದ್ದು, ಪಿರ್ಯಾದಿದಾರರು ಲೋಕೇಶ್ ನ ಹತ್ತಿರ ಕೇಳಿದಾಗ ಲೋಕೇಶ್ ನು ಬೆಳಗ್ಗೆ ಮದ್ಯಪಾನ ಮಾಡಿ ಶೋಭಾಳೊಂದಿಗೆ ಜಗಳ ಆಗಿದ್ದು, ಸ್ವಲ್ಪ ಹೊತ್ತಿನಲ್ಲಿ ಶೋಭಾಳು ಕೋಣೆ ಓಳಗೆ ಹೋಗಿ ಬಾಗಿಲು ಹಾಕಿಕೊಂಡಿದ್ದು ಕರೆದರು ಬಾಗಿಲು ತೆರೆಯದ ಕಾರಣ ಕಿಟಕಿಯಿಂದ ನೋಡಿದಾಗ ಶೋಭಾಳು ಕುತ್ತಿಗೆಗೆ ಸೀರೆಯಿಂದ ನೇಣು ಹಾಕಿಕೊಂಡಿದ್ದು,  ಓಳಗಿನಿಂದ ಚಿಲಕ ಇದ್ದ ಕಾರಣ ಬಾತ್ ರೂಮಿನ ಮಾಡಿನ ಸೀಟು ತೆಗೆದು ಕೆಳಗೆ ಇಳಿದು   ಲೋಕೇಶ್ ನು ಶೋಭಾಳನ್ನು ಎತ್ತಿ ಹಿಡಿದು ಸೀರೆ ಕತ್ತರಿಸಿ ಕೆಳಗೆ ಇಳಿಸಿ ರಿಕ್ಷಾದಲ್ಲಿ ಕಾರ್ಕಳ ನರ್ಸಿಂಗ್ ಹೋಂ ಗೆ ಕರೆದುಕೊಂಡು ಹೋದಾಗ ಅಲ್ಲಿನ ವೈದ್ಯರು ಕಾರ್ಕಳ ಸರ್ಕಾರಿ ಆಸ್ಪತ್ರೆಗೆ ಹೋಗಲು ತಿಳಿಸಿದ್ದು ಅದೇ ರಿಕ್ಷಾದಲ್ಲಿ ಮದ್ಯಾಹ್ನ 12:07 ಗಂಟೆಗೆ ಕಾರ್ಕಳ ಸರ್ಕಾರಿ ಆಸ್ಪತ್ರೆಗೆ ಹೋದಾಗ ಅಲ್ಲಿನ ವೈದ್ಯರು ಪರೀಕ್ಷಿಸಿ ಶೋಭಾಳು ಮೃತಪಟ್ಟಿರುವುದಾಗಿ ತಿಳಿಸಿರುವುದಾಗಿದೆ.  ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 15/2022 ಕಲಂ: 174 (ಸಿ) ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 

ಇತ್ತೀಚಿನ ನವೀಕರಣ​ : 04-05-2022 10:11 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080