ಅಭಿಪ್ರಾಯ / ಸಲಹೆಗಳು

ಹಲ್ಲೆ ಪ್ರಕರಣ

 • ಮಣಿಪಾಲ: ದಿನಾಂಕ: 03/05/2022 ರಂದು ಪಿರ್ಯಾದಿ ಅರುಣ ಕುಮಾರ್ ಇವರು ವಾಸವಿದ್ದ ಬಾಡಿಗೆ ಮನೆಯ ಮಾಲೀಕರಾದ ಉದಯ ಕುಮಾರ್ ಶೆಟ್ಟಿ ರವರು ಪಿರ್ಯಾದಿದಾರರ ಹೆಂಡತಿಗೆ ಕರೆ ಮಾಡಿ ಮನೆ ಖಾಲಿ ಮಾಡಿ ಎಂದು ಏರುದ್ವನಿಯಲ್ಲಿ ಅವಾಚ್ಯ ಶಬ್ದದಲ್ಲಿ ಬೈದಿರುತ್ತಾರೆ, ಹಾಗೂ ಸಂಜೆ 19:45 ಗಂಟೆಗೆ ಪಿರ್ಯಾದಿದಾರರು ವಾಸವಿದ್ದ ಬಾಡಿಗೆ ಮನೆಗೆ ಉದಯ ಕುಮಾರ್ ಶೆಟ್ಟಿ ಹಾಗೂ ಅವರ ಮಾವ ಸುಂದರ್ ರವರು ಅಕ್ರಮ ಪ್ರವೇಶ ಮಾಡಿ ಪಿರ್ಯಾದಿದಾರಿಗೂ ಹಾಗೂ ಪಿರ್ಯಾದಿದಾರರ ಹೆಂಡತಿ ಮತ್ತು ಮಗನಿಗೆ ಅವಾಚ್ಯ ಶಬ್ದದಿಂದ ಬೈದು ಪಿರ್ಯಾದಿದಾರರ ಕೈಗೆ ಮುಖಕ್ಕೆ ಎದೆಗೆ ಹೊಡೆದು ಕಾಲಿನಿಂದ ತುಳಿದಿದ್ದಲ್ಲದೆ, ಜಗಳ ತಡಯಲು ಬಂದ ಪಿರ್ಯಾದಿದಾರರ ಹೆಂಡತಿಯನ್ನು ತಳ್ಳಿರುತ್ತಾನೆ. ಈ ಸಮಯ ಪಿರ್ಯಾದಿದಾರರ ಮಗನಿಗೂ ಉದಯ ಕುಮಾರ್ ಶೆಟ್ಟಿ ಹಾಗೂ ಸುಂದರ್ ರವರು ಕೈಯಿಂದ ಹೊಡೆದು ತಳ್ಳಿದ್ದು, ಪಿರ್ಯಾದಿದಾರರಿಗೆ ಉದಯ ಕುಮಾರ್ ಶೆಟ್ಟಿ ರವರು ಮುಷ್ಠಿಮಾಡಿ ಮುಖಕ್ಕೆ ಹೊಡೆದ ಪರಿಣಾಮ ಪಿರ್ಯಾದಿದಾರರ ಮೂಗು ಒಡೆದು ರಕ್ತ ಹರಿದಿರುತ್ತದೆ, ಈ ಘಟನೆಯು ಪಿರ್ಯಾದಿದಾರರಿಗೆ ಈ ಕೂಡಲೇ ಮನೆ ಖಾಲಿ ಮಾಡಲು ಮನೆಯ ಮಾಲೀಕರು  ತಿಳಿಸಿದ್ದು,  ಪಿರ್ಯಾದಿದಾರರು ಸ್ವಲ್ಪ ಕಾಲಾವಕಾಶ ಕೇಳಿದ್ದು ಮನೆಯ ಮಾಲೀಕರು  ಒಪ್ಪದೇ ಪಿರ್ಯಾದಿದಾರರ ಮೇಲೆ ಹಲ್ಲೆ ಮಾಡಿರುವುದಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 64/2022 ಕಲಂ; 448, 323,341,504,354 R/W 34 ಐಪಿಸಿಯಂತೆ ಪ್ರಕರಣ ದಾಖಲಿಸಲಾಗಿದೆ.
 • ಹಿರಿಯಡ್ಕ: ಪಿರ್ಯಾದಿ ಪ್ರತಿಭಾ ನಾಯಕ್ ಇವರ ಮನೆಯ ಪಕ್ಕದ ಗುರುಪ್ರಸಾದ್ ಎಂಬವನು ದಿನಾಂಕ: 11/04/2022 ರಂದು ಪಿರ್ಯಾದುದಾರರ ಮನೆಯ ಬಳಿ ಬಂದು ಅವರ ತಂದೆಯವರೊಂದಿಗೆ ಗಲಾಟೆ ಮಾಡಿ ಹೊಡೆದಿರುತ್ತಾನೆ. ಅಲ್ಲದೆ ದಿನಾಂಕ: 04/05/2022 ರಂದು  ತಂದೆ ತಾಯಿ ಹಾಗೂ ಅಕ್ಕ ಮನೆಯಲ್ಲಿರುವಾಗ ಸಮಯ ಸುಮಾರು ಬೆಳಿಗ್ಗೆ 9:00 ಗಂಟೆಗೆ ಗುರುಪ್ರಸಾದ್ ಎಂಬವನು ಪಿರ್ಯಾದಿದಾರರ ಮನೆಯ ಅಂಗಳಕ್ಕೆ ಅಕ್ರಮ ಪ್ರವೇಶ ಮಾಡಿ ಪಿರ್ಯಾದುದಾರರ ತಂದೆಯವರನ್ನು  ಕರೆದು ನನ್ನ ಮೇಲೆ ಸುಳ್ಳು ದೂರು ನೀಡುತ್ತೀಯಾ ಎಂದು ಹೇಳಿ ಹೊಡೆಯಲು ಹೋದಾಗ ಪಿರ್ಯಾದುದಾರರು ಹೊಡೆಯದಂತೆ ತಡೆಯಲು ಹೋದಾಗ ಗುರುಪ್ರಸಾದನು ಪಿರ್ಯಾದಿದಾರರಿಗೆ ಅವಾಚ್ಯ ಶಬ್ದಗಳಿಂದ ಬೈದು ನಿಮ್ಮನ್ನು ಜೀವ ಸಮೇತ  ಬಿಡುವುದಿಲ್ಲ ಎಂದು ಹೇಳಿ ಅಕ್ಕಪಕ್ಕದವರು ಬರುವುದನ್ನು ನೋಡಿ ತಾನು ಬಂದ ಮೋಟಾರು ಸೈಕಲ್ ನಲ್ಲಿ ಹೋಗಿರುತ್ತಾನೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 22/2022 ಕಲಂ :447, 323, 354, 504, 506ಐಪಿಸಿಯಂತೆ ಪ್ರಕರಣ ದಾಖಲಿಸಲಾಗಿದೆ.

 

ಅಸ್ವಾಭಾವಿಕ ಮರಣ ಪ್ರಕರಣ

 • ಕಾಪು: ಪಿರ್ಯಾದಿ ಆಶಾ ಇವರ ಗಂಡ ಜೆ ರಾಘವೇಂದ್ರ ಆಚಾರ್ಯ ರವರು ಕಾರ್ಪೆಂಟರ್ ಕೆಲಸ ಮಾಡಿಕೊಂಡಿದ್ದು  ವಿಪರೀತ ಕುಡಿತದ ಚಟವನ್ನು ಹೊಂದಿರುತ್ತಾರೆ. ದಿನಾಂಕ 03.05.2022 ರಂದು ಪಿರ್ಯಾದಿದಾರರು ತನ್ನ ಅಜ್ಜನ ವರ್ಷದ ಕಾರ್ಯ ಇದ್ದುರಿಂದ ತನ್ನ ಇಬ್ಬರು ಮಕ್ಕಳೊಂದಿಗೆ ತನ್ನ ತಾಯಿ ಮನೆ ಬಂಟಕಲ್‌ಗೆ ಹೋಗಿರುತ್ತಾರೆ. ರಾತ್ರಿ ಸುಮಾರು 9:54 ಗಂಟೆ ಸಮಯಕ್ಕೆ ಪಿರ್ಯಾದಿದಾರರ ಗಂಡ ರಾಘವೇಂದ್ರ ಆಚಾರ್ಯರವರು ಪಿರ್ಯಾದಿದಾರರ  ಮೊಬೈಲ್‌ ಗೆ ಕರೆ ಮಾಡಿ ತನ್ನ ಮಗನಲ್ಲಿ ಮಾತಾನಾಡಿ ನೀವು ಯಾವಾಗ ಮನೆಗೆ ಬರುವುದು  ನೀವು ಮನೆಗೆ ಬಾರದಿದ್ರೆ ನನ್ನ ಹೆಣ ನೋಡಬೇಕಾಗುತ್ತದೆ. ಎಂದು ಹೇಳಿ ಪೋನ್ ಕಟ್ ಮಾಡಿರುತ್ತಾರೆ. ದಿನಾಂಕ 04.05.2022 ರಂದು ಬೆಳಿಗ್ಗೆ 10:15 ಗಂಟೆಗೆ ಪಿರ್ಯಾದಿದಾರರ ನೆರೆಮನೆಯ ಸ್ವರ್ಣಲತಾ ಎಂಬವರು  ಪಿರ್ಯಾದಿದಾರರಿಗೆ ಪೋನ್ ಮಾಡಿ ನಿಮ್ಮ ಮನೆಯ ಬಾಗಿಲು ಹಾಕಿದ್ದು ಮನೆಯ ಒಳಗೆ ಲೈಟ್ ಉರಿಯುತ್ತಿದ್ದು ನಿನ್ನ ಗಂಡ ಎಲ್ಲಿಯೂ ಕಾಣಿಸ್ತಾ ಇಲ್ಲ ಎಂದು ತಿಳಿಸಿದ್ದು ಕೂಡಲೇ ಪಿರ್ಯಾದಿದಾರರು ತನ್ನ ಚಿಕ್ಕಪ್ಪ ಸುಬ್ರಾಯ ಆಚಾರ್ಯರವರೊಂದಿಗೆ ಮನೆಗೆ ಬಂದು ನೋಡುವಾಗ ಮನೆಯ ಬಾಗಿಲುಗಳು ಹಾಕಿದ್ದು ಕಿಟಿಕಿಯಿಂದ ಇಣುಕಿ ನೋಡಿದಾಗ ರಾಘವೇಂದ್ರ ಆಚಾರ್ಯರವರು ಮನೆಯ ಒಳಗಡೆ ಕೋಣೆಯಲ್ಲಿ ಕೋಣೆಗೆ ಅಳವಡಿಸಿದ ಫ್ಯಾನಿಗೆ ಚೂಡಿದಾರದ ಶಾಲನ್ನು ಕಟ್ಟಿ ಕುತ್ತಿಗೆಗೆ ನೇಣುಬಿಗಿದು ಕೊಂಡಿರುವುದು ಕಂಡು ಬಂದಿದ್ದು ಕೂಡಲೇ ಪಿರ್ಯಾದಿದಾರರು  ಹಾಗೂ ಇತರರು ಹಿಂದಿನ ಬಾಗಿಲನ್ನು ಒಡೆದು ಒಳಗೆ ಹೋಗಿ ನೋಡುವಾಗ ರಾಘವೇಂದ್ರ ಆಚಾರ್ಯ ರವರು ಕುತ್ತಿಗೆಗೆ ನೇಣು ಬಿಗಿದುಕೊಂಡು ಮೃತಪಟ್ಟಿರುವುದು ಕಂಡು ಬಂದಿರುತ್ತದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 12/2022 ಕಲಂ: 174  ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಕಳವು ಪ್ರಕರಣ

 • ಉಡುಪಿ: ಪಿರ್ಯಾದಿ ಶ್ರೀಲತಾ ಜಿ ಭಟ್‌ ಇವರ ಮಾಲೀಕತ್ವದಲ್ಲಿದ್ದ ALPHA SCOOTY ಸ್ಕೂಟರ್‌ ನಂಬ್ರ: KA 20 ER 0904 (Chassis No:ME1SED11BH0007818, Engine No: E3Y3E0291815) . ದಿನಾಂಕ: 03/05/2022 ರಂದು ಬೆಳಿಗ್ಗೆ 05:45 ಗಂಟೆಗೆ ಪಿರ್ಯಾದುದಾರ ಗಂಡ ತನ್ನ ಸ್ವಂತ ಕೆಲಸಕ್ಕೆಂದು ಸ್ಕೂಟಿಯನ್ನು ಮನೆಯಿಂದ ತೆಗೆದುಕೊಂಡು ಹೋದವರು ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ರಥಬೀದಿಯ ಸೋದೆಮಠದ ಭೂತ ರಾಜರ ಗುಡಿಯ ಬಳಿ ಸ್ಕೂಟರ್‌ನ್ನು ನಿಲ್ಲಿಸಿದ್ದು, ತನ್ನ ಕೆಲಸ ಮುಗಿಸಿ ವಾಪಾಸು ಬೆಳಿಗ್ಗೆ 09:30 ಗಂಟೆಗೆ ಕೆಲಸ ಮುಗಿಸಿ ವಾಪಾಸು ಬಂದು ನೋಡಿದಾಗ ನಿಲ್ಲಿಸಿದ ತನ್ನ ಸ್ಕೂಟರ್‌ ಇಲ್ಲದೇ ಇದ್ದು, ಪಿರ್ಯಾದುದಾರರ ಗಂಡ  ಸೋದೆಮಠದ ಭೂತ ರಾಜರ ಗುಡಿಯ ಬಳಿ ನಿಲ್ಲಿಸಿದ ಸ್ಕೂಟರ್‌ನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು, ಎಲ್ಲಾ ಕಡೆ ಹುಡುಕಿದಲ್ಲಿ ಪತ್ತೆಯಾಗದೇ ಇದ್ದು, ಕಳವಾದ ಸ್ಕೂಟರ್‌ನ ಅಂದಾಜು ಮೌಲ್ಯ ರೂ. 30,000/- ಆಗಬಹುದು ಎಂಬಿತ್ಯಾದಿ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 70/2022 ಕಲಂ:379 ಐಪಿಸಿಯಂತೆ  ಪ್ರಕರಣ ದಾಖಲಾಗಿರುತ್ತದೆ. 

ಇತ್ತೀಚಿನ ನವೀಕರಣ​ : 04-05-2022 06:11 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080