ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕುಂದಾಪುರ: ದಿನಾಂಕ 03/05/2021 ರಂದು ಸಂಜೆ 6:30 ಗಂಟೆಗೆ, ಕುಂದಾಪುರ  ತಾಲೂಕು ತಲ್ಲೂರು  ಗ್ರಾಮದ, ತಲ್ಲೂರು ಜಂಕ್ಷನ್ ಬಳಿ ರಾಷ್ಟ್ರೀಯ ಹೆದ್ದಾರಿ 66 ರ ಪೂರ್ವಬದಿಯ  ರಸ್ತೆಯಲ್ಲಿ ಆಪಾದಿತ ಲಾರಿ ಚಾಲಕ ಮೈನುದ್ದೀನ್ ರವರು ತನ್ನ MH-09-CA-2677 ನೇ ಲಾರಿಯನ್ನು ಬೈಂದೂರು  ಕಡೆಯಿಂದ ಕುಂದಾಪುರ  ಕಡೆಗೆ ಅತೀವೇಗ ಹಾಗೂ ನಿರ್ಲಕ್ಷ್ಯತನದಿಂದ ಚಾಲನೆ ಮಾಡಿಕೊಂಡು ಬರುತ್ತಾ ರಸ್ತೆಯಲ್ಲಿ  ತೀರಾ ಎಡಬದಿಗೆ ಲಾರಿಯನ್ನು ಚಲಾಯಿಸಿ ತಂದು, ರಸ್ತೆಯ ಅಂಚಿನಲ್ಲಿ ಪಿರ್ಯಾದಿದಾರರಾದ ದಿನೇಶ ಮೊಗವೀರ (28),  ತಂದೆ :  ನರಸಿಂಹ ಮೊಗವೀರ, ವಾಸ: ಗೋತಾಳಿ ಮನೆ ಸುಪ್ರೀಂ ಕಾರ್ಖಾನೆ ಬಳಿ ತಲ್ಲೂರು ಗ್ರಾಮ ಕುಂದಾಪುರ ತಾಲೂಕು ಇವರ ಜೊತೆಗೆ ತಲ್ಲೂರಿನಿಂದ ಸುಪ್ರೀಂ ಟೈಲ್ಸ್ ಕಡೆಗೆ ನಡೆದುಕೊಂಡು ಹೋಗುತ್ತಿದ್ದ  ಅವರ  ಅಕ್ಕ ನೇತ್ರಾವತಿಯವರಿಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ನೇತ್ರಾವತಿ ಯವರು  ಲಾರಿಯ ಮುಂಭಾಗದ ಎಡಬದಿಯ ಟಯರ್ ಗೆ ಸಿಲುಕಿ, ಲಾರಿಯು ಸ್ವಲ್ಪ ದೂರದ ತನಕ ಎಳೆದುಕೊಂಡು ಹೋಗಿದ್ದು,ಪರಿಣಾಮ ಅವರ ಸೊಂಟಕ್ಕೆ,ಗಂಭೀರ ಸ್ವರೂಪದ ಗಾಯ ಉಂಟಾಗಿದ್ದು ಆಕೆ ಮಾತನಾಡುತ್ತಿರಲಿಲ್ಲ. ಕೂಡಲೇ  ಗಾಯಗೊಂಡಿದ್ದ ನೇತ್ರಾವತಿಯವರನ್ನು ಒಂದು ಕಾರಿನಲ್ಲಿ ದೂರುದಾರರು ಮತ್ತು ಇತರರು ಸೇರಿಕೊಂಡು ಚಿಕಿತ್ಸೆ ಬಗ್ಗೆ ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಾಗ  ಆಸ್ಪತ್ರೆಯ ವೈದ್ಯರು ಪರೀಕ್ಷಿಸಿ ನೇತ್ರಾವತಿ ರವರು ಮೃತಪಟ್ಟಿದ್ದಾಗಿ ತಿಳಿಸಿರುವುದಾಗಿದೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 50/2021 ಕಲಂ: 279, 304 (A) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಬೈಂದೂರು: ಪಿರ್ಯಾದಿದಾರರಾದ ಉದಯ ಪೂಜಾರಿ (36). ತಂದೆ;ನಾರಾಯಣ ಪೂಜಾರಿ,ವಾಸ; ಮರ್ಲಿ ಮನೆ,ಹೇರಂಜಾಲು ,ಹೇರಂಜಾಲು ಅಂಚೆ ಮತ್ತು ಗ್ರಾಮ, ಬೈಂದೂರು ತಾಲೂಕು ಇವರು ದಿನಾಂಕ 02/05/2021 ರಂದು ಎಡಮಾವಿನ ಹೊಳೆ ಅಣೆಕಟ್ಟು ನಿರ್ಮಾಣದ ಕೆಲಸಕ್ಕೆ ಹೋಗಿ ಎಂದಿನಂತೆ ಕೆಲಸ ಮುಗಿಸಿ ಅವರ ಹೆಂಡತಿ ಅಣ್ಣ ಮಂಜುರವರೊಂದಿಗೆ ವಾಪಸ್ಸು ಮನೆಗೆ ಬರುವಾಗ್ಗೆ ಅವರ ಮೋಟಾರು ಸೈಕಲ್ ನಂಬ್ರ KA-20-EG-6845 ನೇದರಲ್ಲಿ ಸಹ ಸವಾರನಾಗಿ ಕುಳಿತು ಮಂಜುರವರು ಬೈಕ್ ಚಲಾಯಿಸಿಕೊಂಡು ಹೆರಂಜಾಲುಗೆ ಬರುತ್ತಿರುವಾಗ ಸಂಜೆ  7:30 ಗಂಟೆಗೆ ಹೆರಂಜಾಲು ಗ್ರಾಮದ ಶೇಡಿಗುಡ್ಡೆ ರಸ್ತೆಯ ಇಳಿಜಾರುವಿನಲ್ಲಿ ಮೋಟಾರ್ ಸೈಕಲ್ ಚಲಾಯಿಸುತ್ತಿದ್ದ ಮಂಜುರವರು ಅವರ  ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಒಮ್ಮೇಲೆ ಬ್ರೇಕ್ ಹಾಕಿದ ಪರಿಣಾಮ ಮೋಟಾರ್ ಸೈಕಲ್ ಸ್ಕೀಡ್ ಆಗಿ ಮೋಟಾರು ಸೈಕಲ್ ಸಮೇತ ಸವಾರರು ಹಾಗೂ ಪಿರ್ಯಾದಿದಾರರು ರಸ್ತೆಗೆ ಬಿದ್ದಿದ್ದು ಪಿರ್ಯಾದುದಾರರ ಬಲಕಾಲಿನ ಮೂಳೆಗೆ,ಬಲ ಕೈ ಮೂಳೆಗೆ ಪೆಟ್ಟಾಗಿರುತ್ತದೆ. ಅಲ್ಲದೇ  ಮೋಟಾರ್ ಸೈಕಲ್ ಸವಾರರಿಗೆ ಬಲ ಕೈ ಮೂಳೆಗೆ ಪೆಟ್ಟಾಗಿದ್ದು ಕುಂದಾಪುರ ಚಿನ್ಮಯಿ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ದಾಖಲಾಗಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 84/2021 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಜುಗಾರಿ ಪ್ರಕರಣ

  • ಕಾಪು: ದಿನಾಂಕ 03/05/2021 ರಂದು ಜಯ ಕೆ, ಪೊಲೀಸ್ ಉಪನಿರೀಕ್ಷಕರು, ಕಾಪು ಪೊಲೀಸ್‌ ಠಾಣೆ ಇವರು ಉಳಿಯಾರಗೋಳಿ ಗ್ರಾಮದ ಪಿನಾಕಿನಿ ನದಿಯ ಸಮೀಪ ದಾಳಿ ನಡೆಸಿ ರಾಜ್ಯ ಸರಕಾರದ ಕೋವಿಡ್-19 ನಿಯಮವನ್ನು ಉಲ್ಲಂಘಿಸಿ ಕೋಳಿ ಹುಂಜಗಳ ಮೇಲೆ ಹಣವನ್ನು ಪಣವಾಗಿ ಒಡ್ಡಿ ಕೋಳಿಗಳ ಕಾಲುಗಳಿಗೆ ಹರಿತವಾದ ಬಾಳ್‌ನ್ನು ಕಟ್ಟಿ  ಜೂಜಾಟ ಆಡುತ್ತಿರುವುದನ್ನು ಖಚಿತಪಡಿಸಿಕೊಂಡು ದಾಳಿ ನಡೆಸಿ ಆರೋಪಿಗಳಾದ 1) ಸಂದೀಪ, 2) ಸಚಿನ್, 3) ಸುರೇಶ್, 4) ವಿಲ್ಸನ್, 5) ಹನುಮಂತ, 6) ಶರತ್ ಪೂಜಾರಿ ಇವರನ್ನು ವಶಕ್ಕೆ ಪಡೆದು 11 ಕೋಳಿ ಹುಂಜ ಮೌಲ್ಯ 6150/- ಮತ್ತು 5 ಕೋಳಿ ಬಾಳ್‌ಗಳನ್ನು ಸ್ವಾದಿನಪಡಿಸಿಕೊಂಡಿದ್ದು ಓಡಿ ಹೋದವನ ಹೆಸರು ಶ್ರೀಕಾಂತ್  ಎಂಬುದಾಗಿರುತ್ತದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 60/2021 ಕಲಂ: 269 ಐಪಿಸಿ & 87, 93 KP ACT ರಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣಗಳು

  • ಕಾರ್ಕಳ:ಪಿರ್ಯಾದಿದಾರರಾದ ಎಡ್ವರ್ಡ್ ಪಿಂಟೋ (63), ತಂದೆ: ದಿವಂಗತ ಬೆನೋಡ್‌ ಪಿಂಟೋ, ವಾಸ: ನಂ 63 ಡ್ಲ್ಯೂ 3, ಪಿಂಟೋ ಕಾಟೇಜ್‌, ರಾಮಸಮುದ್ರ ಬಳಿ, ಕಾರ್ಕಳ ಕಸಬ ಗ್ರಾಮ,  ಕಾರ್ಕಳ ತಾಲೂಕು ಇವರ ತಮ್ಮ ಜೋಕಿಂ ನೋಬಾರ್ಟ್ ಪಿಂಟೋ (58) ಇವರು ವಿಪರೀತ ಮದ್ಯಪಾನ ಮಾಡುವ ಅಭ್ಯಾಸವುಳ್ಳವನಾಗಿದ್ದು ದಿನಾಂಕ 03/05/2021 ರಂದು ಬೆಳಿಗ್ಗೆ 08:05 ಗಂಟೆಯಿಂದ ಮಧ್ಯಾಹ್ನ 3:30 ಗಂಟೆಯ ಮಧ್ಯೆ ಕಸಬ ಗ್ರಾಮದ ರಾಮಸಮುದ್ರ ಕಟ್ಟದ ಬಳಿ ಹಾದು ಹೋಗುವ ಕಾರ್ಕಳ ಸ್ವರಾಜ್ ಮೈದಾನ –ಮಂಗಳಪಾದೆ ಕಡೆಗೆ ಹೋಗುವ ಕಾಂಕ್ರಿಟ್ ರಸ್ತೆಯಲ್ಲಿ ಸೈಕಲನ್ನು ಸವಾರಿ ಮಾಡಿಕೊಂಡು ಹೋಗುವಾಗ ಅಕಸ್ಮಿಕವಾಗಿ ಆಯ ತಪ್ಪಿ ಕಾಂಕ್ರಿಟ್ ರಸ್ತೆಯ ಮೇಲೆ ಬಿದ್ದವರು, ಬಿಸಿಲಿನ ತಾಪ ಅಥವಾ ವಿಪರೀತ ಮದ್ಯಪಾನ ಮಾಡಿದ್ದ ಪರಿಣಾಮ ಮೃತಪಟ್ಟಿರುತ್ತಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 16/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾರ್ಕಳ: ಪಿರ್ಯಾದಿದಾರರಾದ ಮನಮೋಹನ (35), ತಂದೆ: ದಿವಂಗತ ಶ್ರೀರಂಗ ರಾವ್‌, ವಾಸ: ಮಂಜರಾಯಿ ಮನೆ, ಮಿಯ್ಯಾರು ಗ್ರಾಮ ಕಾರ್ಕಳ ತಾಲೂಕು ಇವರ ದೊಡ್ಡಪ್ಪ ವಾಸುದೇವ ರಾವ್ (74) ಇವರು ಮನೆಯಲ್ಲಿ ಒಬ್ಬಂಟಿಯಾಗಿ ವಾಸವಾಗಿದ್ದು, ವಿಪರೀತ ಮದ್ಯಪಾನ ಮಾಡುವ ಅಭ್ಯಾಸ ಉಳ್ಳವರಾಗಿದ್ದು, ದಿನಾಂಕ 29/04/2021 ರಿಂದ ದಿನಾಂಕ 03/05/2021 ರಂದು ಮಧ್ಯಾಹ್ನ 12:00 ಗಂಟೆಯ ಮಧ್ಯೆ ಹೊಟ್ಟೆಗೆ ಆಹಾರ ನೀರು ಇಲ್ಲದೆ ಯಾ ವಿಪರೀತ ಮದ್ಯಪಾನ ಮಾಡಿದ ಕಾರಣದಿಂದ ಮೃತಪಟ್ಟಿದ್ದು, ಮೃತ ದೇಹ ಭಾಗಶಃ ಕೊಳೆತು ಹೋಗಿರುತ್ತದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 15/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಕಾರ್ಕಳ: ದಿನಾಂಕ 26/04/2021 ರಿಂದ ದಿನಾಂಕ 12/05/2021 ರವೆರೆಗೆ ಕೋವಿಡ್ ಕರ್ಪ್ಯೂ ವಿಧಿಸಿ ಆದೇಶ ಹೊರಡಿಸಿದ್ದು, ಈ ಕರ್ಪ್ಯೂ ಜಾರಿಗೊಳಿಸುವ ಬಗ್ಗೆ ಪೋಲೀಸ್ ಇಲಾಖೆಗೆ ಆದೇಶ ಹೊರಡಿಸಿದ್ದು, ಈ ಸಮಯದಲ್ಲಿ ಅನಗತ್ಯವಾಗಿ ಸಾರ್ವಜನಿಕರ ಓಡಾಟಕ್ಕೆ ನಿಷೇಧ ಇದ್ದು ಈ ಬಗ್ಗೆ ಮಧು ಬಿ ಇ, ಪೊಲೀಸ್ ಉಪ ನಿರೀಕ್ಷಕರು, ಕಾರ್ಕಳ ನಗರ ಪೊಲೀಸ್ ಠಾಣೆ ಇವರು ದಿನಾಂಕ 03/05/2021 ರಂದು ಸಿಬ್ಬಂದಿಯವರೊಂದಿಗೆ ಕಾರ್ಕಳ ನಗರ ಠಾಣಾ ಸರಹದ್ದಿನಲ್ಲಿ ರೌಂಡ್ಸ್ ಕರ್ತವ್ಯದಲ್ಲಿರುವಾಗ ಹಿರ್ಗಾನ ಗ್ರಾಮದ ಮುಜೂರು ಎಂಬಲ್ಲಿಗೆ ಬೆಳಗ್ಗೆ 10:30 ಗಂಟೆಗೆ ತಲುಪುವಾಗ ಅಲ್ಲಿಯ ಮೋರಿಯ ಸಮೀಪ KA-20-EV-6883 ಮತ್ತು KA-20-EE-6784 ನೇ ನಂಬ್ರದ ಮೋಟಾರು ಸೈಕಲ್ಗಳನ್ನು ನಿಲ್ಲಿಸಿ, ಮೋರಿಯ ಮೇಲೆ 5 ಜನರು ಮಾಸ್ಕ್ ಹಾಕದೆ ಕುಳಿತುಕೊಂಡಿದ್ದು ಆಪಾದಿತರಿಗೆ ಘನ ಕರ್ನಾಟಕ ಸರಕಾರವು ಕೋವಿಡ್ ಮಹಾಮಾರಿ ಕರೋನಾ ಸೋಂಕನ್ನು ತಡೆಯುವ ಬಗ್ಗೆ ಹೊರಡಿಸಿರುವ ನಿಯಮಗಳ ಬಗ್ಗೆ ತಿಳುವಳಿಕೆ ಇದ್ದರೂ ಅನಗತ್ಯವಾಗಿ 5 ಜನರು ಒಟ್ಟು ಸೇರಿ ಜಿಲ್ಲಾಡಳಿತ ಆದೇಶ ಮತ್ತು ಕೋವಿಡ್ ನಿಯಮ ಉಲ್ಲಂಘಿಸಿರುತ್ತಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 51/2021 ಕಲಂ: 188, 269 ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಮಲ್ಪೆ: ಮಾನ್ಯ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ದಂಡಾಧಿಕಾರಿಯವರ ನ್ಯಾಯಾಲಯದ ಆದೇಶ ಕ್ರಮ ಸಂಖ್ಯೆ  ಡಿ ಎಂ ಕೋವಿಡ್- 19 : ಸಿಆರ್/ 01/2020-21 ದಿನಾಂಕ 27/04/2021 ರಂತೆ ಕೋವಿಡ್ 19 ರ ಸಂಬಂಧ ಸರ್ಕಾರದಿಂದ ಹೊರಡಿಸಿರುವ ಆದೇಶಗಳನ್ನು ಉಡುಪಿ ಜಿಲ್ಲೆಯಾದ್ಯಂತ ಕಾರ್ಯಗತಗೊಳಿಸುವ ಸಲುವಾಗಿ ಪ್ಲೈಯಿಂಗ್  ಸ್ವ್ಯಾಡ್  ಕರ್ತವ್ಯದಲ್ಲಿ  ಉಡುಪಿ ನಗರ ಸಭಾ ವ್ಯಾಪ್ತಿಯ ಮಲ್ಪೆ ಠಾಣಾ ಸರಹದ್ದಿಗೆ  ಕರ್ತವ್ಯಕ್ಕೆ  ನಿಯೋಜಿಸಿದಂತೆ ರೋಶನ್‌ ಕುಮಾರ್ ಶೆಟ್ಟಿ(45), ಉಪನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಉಡುಪಿ ಇವರು ದಿನಾಂಕ 03/05/2021 ರಂದು ಮಲ್ಪೆ ಠಾಣಾ ವ್ಯಾಪ್ತಿಯ ಕೊಡವೂರು ಗ್ರಾಮದ ಮಲ್ಪೆ ವ್ಯಾಪ್ತಿಯಲ್ಲಿ ಸಂಚರಿಸಿಕೊಂಡಿರುವಾಗ  ಬೆಳಿಗ್ಗೆ 09:00 ಗಂಟೆಗೆ ಮಲ್ಪೆ ಕೊಡವೂರು ಗ್ರಾಮದ ಕಾರ್ನೆಟ್ ಸರ್ಕಲ್  ಬಳಿ ತಲುಪಿದಾಗ ಹತ್ತಿರದಲ್ಲಿದ್ದ ಶೇಖರ ಕಾಂಪ್ಲೆಕ್ಸ್ ನಲ್ಲಿರುವ ಇನ್ ಸ್ಟಾ ಸೆಲೂನ ನಲ್ಲಿ ಫಾಹಿಮ್ ಅಹಮ್ಮದ್ (24), ತಂದೆ: ಖುರ್ಷಿದ್ ಅಹಮ್ಮದ್, ವಾಸ: ವಿಂಧ್ಯಾ ಗೆಸ್ಟ್ ಹೌಸ್, ವಢಬಾಂಡೇಶ್ವರ, ಕೊಡವೂರು ಗ್ರಾಮ ರವರು ಯಾವುದೇ ಸಾರ್ವಜನಿಕ ಸಾಮಾಜಿಕ ಅಂತರ, ಹಾಗೂ ಸುರಕ್ಷಾ ಕ್ರಮವಾದ ಮಾಸ್ಕ ಧರಿಸದೆ, ಸ್ಯಾನಿಟೈಜರ್ ಬಳಸಲು ಇಟ್ಟುಕೊಳ್ಳದೆ  ಸೆಲೂನ್ ನಡೆಸುತ್ತಿದ್ದು , ಕೋವಿಡ್ -19 ಹರಡುವಿಕೆಯನ್ನು ತಡೆಗಟ್ಟಲು ಮುಂಜಾಗೃತಾ ಕ್ರಮವಾಗಿ ಮಾನ್ಯ ಕರ್ನಾಟಕ ಸರ್ಕಾರ  ಸೆಲೂನ ನನ್ನು ತೆರೆಯಬಾರದೆಂದು ಹೊರಡಿಸಿದ ಆದೇಶವನ್ನು ಉಲ್ಲಂಘಿಸಿ  ಮಾಸ್ಕ, ಸ್ಯಾನಿಟೈಜರ್, ಹ್ಯಾಂಡ್ ಗ್ಲೌಸ್ ಗಳನ್ನು ಉಪಯೋಗಿಸದೆ ಕೊರೋನ ವೈರಸ್ ಎಂಬ  ಸಾಂಕ್ರಾಮಿಕ ಖಾಯಿಲೆಯ ಸ್ಪೋಟ ಮತ್ತು ಹರಡುವುದನ್ನು  ತಡೆಗಟ್ಟಲು ನಿರ್ಲಕ್ಷ್ಯ ತೋರಿರುವುದಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ ಕ್ರ  44/2021 ಕಲಂ: 269 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಮಲ್ಪೆ: ಮಾನ್ಯ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ದಂಡಾಧಿಕಾರಿಯವರ ನ್ಯಾಯಾಲಯದ ಆದೇಶ ಕ್ರಮ ಸಂಖ್ಯೆ  ಡಿ ಎಂ ಕೋವಿಡ್- 19 : ಸಿಆರ್/ 01/2020-21 ದಿನಾಂಕ 27/04/2021 ರಂತೆ ಕೋವಿಡ್ 19 ರ ಸಂಬಂಧ ಸರ್ಕಾರದಿಂದ ಹೊರಡಿಸಿರುವ ಆದೇಶಗಳನ್ನು ಉಡುಪಿ ಜಿಲ್ಲೆಯಾದ್ಯಂತ ಕಾರ್ಯಗತಗೊಳಿಸುವ ಸಲುವಾಗಿ ಪ್ಲೈಯಿಂಗ್  ಸ್ವ್ಯಾಡ್  ಕರ್ತವ್ಯದಲ್ಲಿ  ಉಡುಪಿ ನಗರ ಸಭಾ ವ್ಯಾಪ್ತಿಯ ಮಲ್ಪೆ ಠಾಣಾ ಸರಹದ್ದಿಗೆ  ಕರ್ತವ್ಯಕ್ಕೆ  ನಿಯೋಜಿಸಿದಂತೆ ರೋಶನ್‌ ಕುಮಾರ್ ಶೆಟ್ಟಿ(45), ಉಪನಿರ್ಧೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಉಡುಪಿ ಇವರು ದಿನಾಂಕ 03/05/2021 ರಂದು ಮಲ್ಪೆ ಠಾಣಾ ವ್ಯಾಪ್ತಿಯ ಕೊಡವೂರು ಗ್ರಾಮದ ಮಲ್ಪೆ ವ್ಯಾಪ್ತಿಯಲ್ಲಿ ಸಂಚರಿಸಿಕೊಂಡಿರುವಾಗ ಬೆಳಿಗ್ಗೆ 09:30 ಗಂಟೆಗೆ ಮಲ್ಪೆ ಕೊಡವೂರು ಗ್ರಾಮದ ಕಾರ್ನೆಟ್ ಸರ್ಕಲ್  ಬಳಿ ತಲುಪಿದಾಗ ಹತ್ತಿರದಲ್ಲಿದ್ದ ಸಿಟಿಜನ್ ಕಾಂಪ್ಲೆಕ್ಸ್ ನಲ್ಲಿರುವ Max Men’s Hair & Beauty ಸೆಲೂನ್‌ನಲ್ಲಿ ರಮಾನಂದ (46), ತಂದೆ: ಸೂರಪ್ಪ ಸುವರ್ಣ, ವಾಸ: “ಸುವರ್ಣ ಸದನ”, ಕಿರಣ್ ಮಿಲ್ಕ್‌‌ ಡೈರಿ, ಗರಡಿ ಮಜಲು, ತೆಂಕನಿಡಿಯೂರು ಗ್ರಾಮ, ಉಡುಪಿ ತಾಲೂಕು ಇವರು ಯಾವುದೇ ಸಾರ್ವಜನಿಕ ಸಾಮಾಜಿಕ ಅಂತರ ಹಾಗೂ ಸುರಕ್ಷಾ ಕ್ರಮವಾದ ಮಾಸ್ಕ ಧರಿಸದೆ, ಸ್ಯಾನಿಟೈಜರ್ ಬಳಸಲು ಇಟ್ಟುಕೊಳ್ಳದೆ ಸೆಲೂನ್ ನಡೆಸುತ್ತಿದ್ದು, ಕೋವಿಡ್ -19 ಹರಡುವಿಕೆಯನ್ನು ತಡೆಗಟ್ಟಲು  ಮುಂಜಾಗೃತಾ ಕ್ರಮವಾಗಿ ಮಾನ್ಯ ಕರ್ನಾಟಕ ಸರ್ಕಾರ ಸೆಲೂನನನ್ನು ತೆರೆಯಬಾರದೆಂದು ಹೊರಡಿಸಿದ ಆದೇಶವನ್ನು ಉಲ್ಲಂಘಿಸಿ ಮಾಸ್ಕ, ಸ್ಯಾನಿಟೈಜರ್, ಹ್ಯಾಂಡ್ ಗ್ಲೌಸ್ ಗಳನ್ನು ಉಪಯೋಗಿಸದೆ ಕೊರೋನ ವೈರಸ್ ಎಂಬ ಸಾಂಕ್ರಾಮಿಕ ಖಾಯಿಲೆಯ ಸ್ಪೋಟ ಮತ್ತು ಹರಡುವುದನ್ನು ತಡೆಗಟ್ಟಲು ನಿರ್ಲಕ್ಷ್ಯ ತೋರಿರುವುದಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 45/2021 ಕಲಂ:  269 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  
  • ಮಲ್ಪೆ: ದಿನಾಂಕ 03/05/2021 ರಂದು ಪಿರ್ಯಾದಿದಾರರಾದ ಉಷಾ (26), ತಂದೆ: ಗೋಪಾಲ ಸಲ್ಯಾನ್‌‌, ವಾಸ: ಶಾಂತಿ ನಗರ, ಮಲ್ಪೆ, ಪಡುಕೆರೆ, ಉಡುಪಿ ತಾಲೂಕು ಇವರು ಮನೆಯಲ್ಲಿರುವಾಗ ಸಂಜೆ 3:30 ಗಂಟೆಗೆ ನೆರೆಕರೆಯವರಾದ ಶಶಿಧರ್, ಸಂದೀಪ್, ವಾಮನ್ ಕೋಟ್ಯಾನ್, ಸಂಪಿ ಮತ್ತು ನಾಗೇಶ್ ರವರು ಏಕಾಎಕಿಯಾಗಿ ಪಿರ್ಯಾದಿದಾರರ ಮನೆಗೆ ಅಕ್ರಮ ಪ್ರವೇಶ ಮಾಡಿ  ಹಲ್ಲೆ ಮಾಡಿ, ನಿನ್ನ ಸಾಕು ನಾಯಿಯನ್ನು ನೀನು ಹದ್ದುಬಸ್ತಿನಲ್ಲಿರಿಸಿಕೊಳ್ಳು, ಈಗಾಗಲೇ ಅದಕ್ಕೆ ಹೊಡೆದಿರುತ್ತೇವೆ. ಇನ್ನು ಮುಂದೆ ನಿನ್ನನ್ನು ಮತ್ತು ನಿನ್ನ ನಾಯಿಯನ್ನು ಜೀವ ಸಹಿತ ಬಿಡುವುದಿಲ್ಲ ಎಂದು ಹೇಳಿ ದೂಡಿ ಹೋಗಿರುವುದಾಗಿ ನೀಡಿದ ದೂರಿನಂತೆ ಮಲ್ಪೆ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 46/2021 ಕಲಂ:  448, 354, 323, 506 ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಮಲ್ಪೆ: ದಿನಾಂಕ 01/05/2021 ರಂದು ಮಧ್ಯಾಹ್ನ 12:00 ಗಂಟೆಗೆ ಪಿರ್ಯಾದಿದಾರರಾದ ಸಂಪಿ ಪಿ ಕೋಟ್ಯಾನ್ (55), ಗಂಡ: ವಾಮನ್ ಕೋಟ್ಯಾನ್, ವಾಸ: ವಾಸವಿ , ಶಾಂತಿನಗರ  ಮಲ್ಪೆ ಪಡುಕೆರೆ ,ಕೊಡವೂರು ಇವರ ನೆರೆಮನೆಯವರಾದ ಶ್ರೀಮತಿ ಚಂದ್ರಾವತಿ ಕುಂದರ್ ಅವರ ಗಂಡ ಗೋಪಾಲ್ ಸಾಲ್ಯಾನ್ ಹಾಗೂ ಅವರ ಮಗ ಸುಜನ್ ಕುಂದರ್ ಸೇರಿಕೊಂಡು ಅವರ ಸಾಕು ನಾಯಿಯನ್ನು ಪಿರ್ಯಾದಿದಾರರ ಮನೆಗೆ ಛೂ ಬಿಟ್ಟು ನಂತರ ಅವರುಗಳು ಏಕಾಏಕಿ ನಾಯಿಯೊಂದಿಗೆ ಪಿರ್ಯಾದಿದಾರರ ಮನೆಗೆ  ಅಕ್ರಮ ಪ್ರವೇಶ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಸುಜನ್ ಕುಂದರ್ ಅವರು ಹೊಡೆಯಲು ಯತ್ನಿಸಿದ್ದು ನಾಯಿಯನ್ನು ಸಹ ಪಿರ್ಯಾದಿಯ ಮೇಲೆ ಆಕ್ರಮಣ ಮಾಡುವಂತೆ ಪ್ರೇರೆಪಿಸಿರುತ್ತಾನೆ. ಈ ಮೂವರೂ ಸೇರಿ  ಜೀವ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನಂತೆ ಮಲ್ಪೆ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 42/2021 ಕಲಂ:  448, 504, 506, 352 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  
  • ಕೋಟ: ಮಾನ್ಯ ಕರ್ನಾಟಕ ಸರ್ಕಾರ ಹಾಗೂ ಉಡುಪಿ ಜಿಲ್ಲಾಡಳಿತ ದಿನಾಂಕ 26/04/2021 ರಿಂದ ದಿನಾಂಕ 12/05/2021 ರವರೆಗೆ ಕೋವಿಡ್ ಕರ್ಫ್ಯೂ ವಿಧಿಸಿ ಆದೇಶ ಹೊರಡಿಸಿದ್ದು, ಈ ಕರ್ಫ್ಯೂ ಜ್ಯಾರಿಗೊಳಿಸುವ ಬಗ್ಗೆ ಪೊಲೀಸ್ ಇಲಾಖೆಗೆ ಆದೇಶ ಹೊರಡಿಸಿದ್ದು, ಈ ಸಮಯದಲ್ಲಿ ಅವಶ್ಯ ವಸ್ತುಗಳ ಖರೀದಿಯ ಬಗ್ಗೆ ಇರುವ ಜಿಲ್ಲಾಧಿಕಾರಿಗಳ ಆದೇಶದಂತೆ ಅಂಗಡಿಗಳ ತಪಾಸಣೆಯ ಬಗ್ಗೆ ಸಂತೋಷ ಬಿಪಿ , ಪೊಲೀಸ್ ಉಪನಿರೀಕ್ಷಕರು,  ಕೋಟ ಪೊಲೀಸ್ ಠಾಣೆ ಇವರು ದಿನಾಂಕ 03/05/2021 ರಂದು ಬ್ರಹ್ಮಾವರ ತಾಲೂಕು ಗಿಳಿಯಾರು ಗ್ರಾಮದ  ಹಿರೇ ಮಹಾಲಿಂಗೇಶ್ವರದ ಎದುರು ರಾಷ್ಟ್ರೀಯ ಹೆದ್ದಾರಿ 66ರ ಬಳಿ  ತೆರಳಿ ಅವಶ್ಯ ವಸ್ತುಗಳ ಖರೀದಿಯ ಅಂಗಡಿಯನ್ನು ತಪಾಸಣೆ ಮಾಡುತ್ತಿರುವಾಗ ಬೆಳಿಗ್ಗೆ 08:15 ಗಂಟೆಗೆ  ಹಿರೇ ಮಹಾಲಿಂಗೇಶ್ವರದ ಎದುರು ರಾಷ್ಟ್ರೀಯ ಹೆದ್ದಾರಿ 66ರ ಬದಿಯಲ್ಲಿ  ಕಿಂಗ್ಸ ಲೈಫ್ ಬಟ್ಟೆ ಅಂಗಡಿಯ ಮಾಲೀಕ ಆರೋಪಿ ಶಿವರಾಮ  ರವರು ಕರ್ನಾಟಕ ಸರಕಾರವು ಕೋವಿಡ್‌ ಮಹಾಮಾರಿ ಕೊರೋನಾ ಸೋಂಕನ್ನು ತಡೆಯುವ ಬಗ್ಗೆ ಹೊರಡಿಸಿರುವ ಮಾರ್ಗಸೂಚಿಗಳ ಬಗ್ಗೆ ತಿಳುವಳಿಕೆ ಇದ್ದರೂ ಕೂಡಾ ಅನಗತ್ಯವಾಗಿ ಪ್ರಾಣಕ್ಕೆ ಅಪಾಯಕಾರಿಯಾದ ರೋಗದ ಸೋಂಕನ್ನು ಹರಡುವ ಸಂಭವ ಇದೆ ಎಂದು ತಿಳಿದೂ ಕೂಡಾ ನಿರ್ಲಕ್ಷತನದಿಂದ ಕೋವಿಡ್‌ ನಿಯಮ ಉಲ್ಲಂಘಿಸಿ ತನ್ನ ಕಿಂಗ್ಸ ಲೈಫ್ ಬಟ್ಟೆ ಅಂಗಡಿಯನ್ನು ತೆರೆದುಕೊಂಡಿರುವುದಾಗಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 76//2021 ಕಲಂ: 269 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಪಡುಬಿದ್ರಿ: ಪಿರ್ಯಾದಿದಾರರಾದ ಪ್ರವೀನ್ ಪೂಜಾರಿ (32), ತಂದೆ: ದಿ. ರಾಜು ಪೂಜಾರಿ, ವಾಸ: ಉಚ್ಚಿಲ ಪೊಲ್ಯ ಮಸೀದಿ ಬಳಿ, ಕಾಪು ತಾಲೂಕು  ಹಾಗೂ ಪಿರ್ಯಾದಿದಾರರಾದ ಅಣ್ಣ ನವೀನ್ ಪೂಜಾರಿ ಎಂಬುವವರಿಗೆ ತಾಯಿಯ ಜಾಗದ ವಿಚಾರದಲ್ಲಿ ತಕರಾರು ಇದ್ದು, ದಿನಾಂಕ 03/05/2021 ರಂದು ಬೆಳಿಗ್ಗೆ 11:00 ಗಂಟೆಗೆ ಪಿರ್ಯಾದಿದಾರರು ಮತ್ತು ಅವರ ತಾಯಿ ವಿನೋದ್ ಪೂಜಾರ್ತಿ (65) ಎಂಬುವವರು ಅವರಿಗೆ  ಸಂಬಂಧಿಸಿದ ಪಾದೆಬೆಟ್ಟು ಗ್ರಾಮದ ಕೆರೆಮೆನೆ ಎಂಬ ಜಾಗಕ್ಕೆ ಹಕೀಮ್ ಎಂಬುವವರೊಂದಿಗೆ ಹೋದಾಗ ಆರೋಪಿಗಳಾದ ನವೀನ್ ಪೂಜಾರಿ ಮತ್ತು ಆತನ ಪತ್ನಿ ಪ್ರೀತಿ  ಬಂದು ತಾಯಿಯನ್ನು ಹಾಗೂ ಪಿರ್ಯಾದಿದಾರರನ್ನು ಉದ್ದೇಶಿಸಿ  ಬೈಯುತ್ತಾ ಆರೋಪಿ ನವೀನ್ ಪೂಜಾರಿ ಪಿರ್ಯಾದಿದಾರರನ್ನು ದೂಡಿ ಅಲ್ಲೇ ಇದ್ದ ಮರದ ಸೊಂಟೆಯಿಂದ ಪಿರ್ಯಾದಿದಾರರಿಗೆ ಈ ಹಿಂದೆ ಅಪರೇಶನ್ ಆದ ಎಡಕಾಲಿಗೆ ಬೆನ್ನಿಗೆ ಹೊಡೆದಿರುತ್ತಾನೆ. ತಡೆಯಲು ಬಂದ ತಾಯಿ ವಿನೋದ್ ಪೂಜಾರ್ತಿ ರವರಿಗೆ  ಎಡಕೈಗೆ, ಸೊಂಟಕ್ಕೆ ಬಲವಾಗಿ ಹೊಡೆದು ಪರಿಣಾಮ ಅವರು ಕುಸಿದು ಬಿದ್ದವರಿಗೂ  ಕೂಡ ಹೊಡೆಯುತ್ತಿದ್ದು, ಆಗ ಅಲ್ಲಿ ಸೇರಿದವರು ಮತ್ತು ಹಕೀಂ ರವರು ಬಿಡಿಸಿರುತ್ತಾರೆ. ನಂತರ  ನವೀನ್ ಪೂಜಾರಿ ಸೊಂಟೆಯನ್ನು ಅಲ್ಲೆ ಬಿಸಾಡಿ  ಹೊರಟು ಹೋಗಿದ್ದು, ಆರೋಪಿಗಳು ಹಲ್ಲೆ ಮಾಡಿದ ಪರಿಣಾಮ ಪಿರ್ಯಾದಿದಾರರ ತಾಯಿ ವಿನೋದ ಪೂಜಾರ್ತಿ ರವರಿಗೆ  ಎಡಕೈ ರಟ್ಟೆ ಬಾತು ಹೋಗಿ ಒಳ ಪೆಟ್ಟಾಗಿರುತ್ತದೆ. ಹಾಗೂ ಪಿರ್ಯಾದಿದಾರರ ಕಾಲಿಗೆ, ಬೆನ್ನಿಗೆ ಗುದ್ದಿದ ಪೆಟ್ಟಾಗಿರುತ್ತದೆ. ಗಾಯಗೊಂಡ ಪಿರ್ಯಾದಿದಾರರು ಅಜ್ಜರಕಾಡು ಸರಕಾರಿ ಆಸ್ಪತ್ರೆಯಲ್ಲಿ ಹೊರರೋಗಿಯಾಗಿ ಚಿಕಿತ್ಸೆ ಪಡೆದು, ವಿನೋದ್ ಪೂಜಾರ್ತಿರವರು ಒಳ ರೋಗಿಯಾಗಿ ಚಿಕಿತ್ಸೆಯಲ್ಲಿರುತ್ತಾರೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 34/2021 ಕಲಂ: 504, 506, 323,324  ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಇತ್ತೀಚಿನ ನವೀಕರಣ​ : 04-05-2021 10:06 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080