Feedback / Suggestions

ಅಪಘಾತ ಪ್ರಕರಣ

  • ಕೋಟ: ಫಿರ್ಯಾದಿ ಪ್ರವೀಣ್‌ ಸಿ ಎಸ್‌ ಇವರು ದಿನಾಂಕ 04/05/2021 ರಂದು ಬೆಳಿಗ್ಗೆ ಗಂಟೆಗೆ 7-00 ಗಂಟೆಗೆ ತನ್ನ ಬಾಬ್ತು ಕೆಎ20 ಇಜಿ 5027 ನೇ ಟಿವಿಎಸ್‌ ಕಂಪೆನಿಯ ಮೋಟಾರು ಸೈಕಲ್‌ ನಲ್ಲಿ ನಾಗರಾಜ ಎಂಬವರನ್ನು ಸಹ ಸವಾರನನ್ನಾಗಿ ಕುಳ್ಳಿರಿಸಿಕೊಂಡು ಕೋಟದಿಂದ ಉಡುಪಿ ಕಡೆಗೆ ಎನ್‌ಹೆಚ್‌ 66  ನೇ ಏಕಮುಖ ಸಂಚಾರ ರಸ್ತೆಯಲ್ಲಿ ಹೋಗುತ್ತಿರುವಾಗ ಸಮಯ ಬೆಳಿಗ್ಗೆ 7-30 ಗಂಟೆಗೆ ಬ್ರಹ್ಮಾವರ ತಾಲೂಕು ಮೂಡಹಡು ಗ್ರಾಮದ ಎಡಬೆಟ್ಟುವಿನ ಬ್ರಹ್ಮಲಿಂಗೇಶ್ವರ ದೇವಾಸ್ಥನಕ್ಕೆ ಹೋಗುವ ರಸ್ತೆಯ ತಿರುವಿನ ಬಳಿ ತಲುಪುವಾಗ, ಕೋಟದಿಂದ ಉಡುಪಿ ಕಡೆಗೆ ಒಂದು ಕಾರನ್ನು ಅದರ ಚಾಲಕನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಯಾವುದೇ ಸೂಚನೆ ನೀಡದೇ ಕಾರನ್ನು ಒಮ್ಮಲೇ ಎಡಕ್ಕೆ ತಿರುಗಿಸಿದ ಪರಿಣಾಮ ಫಿರ್ಯಾದಿದಾರರ ಮೋಟಾರು ಸೈಕಲ್‌ನ ಬಲಬದಿಗೆ ಡಿಕ್ಕಿ ಹೊಡೆದಿರುತ್ತಾನೆ. ಇದರಿಂದ ಫಿರ್ಯಾದಿದಾರರು ಹಾಗೂ ಸಹ ಸವಾರ ಮೋಟಾರು ಸೈಕಲ್‌ ಸಮೇತ ಚರಂಡಿಗೆ ಬಿದ್ದಿದ್ದು, ಗಾಯಗೊಂಡರನ್ನು ಕೂಡಲೇ ಅಲ್ಲಿ ಸೇರಿದವರೊಂದಿಗೆ ಕಾರು ಚಾಲಕನು ಬ್ರಹ್ಮಾವರ ಮಹೇಶ್‌ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಒಳರೋಗಿಯಾಗಿ ದಾಖಲು ಮಾಡಿರುತ್ತಾರೆ.ಈ ಅಪಘಾತದಿಂದ ಫಿರ್ಯಾದಿದಾರರ ಬಲಕಾಲಿಗೆ ಮೂಳೆ ಮುರಿತ ಆಗಿದ್ದು, ಹಾಗೂ ಸಹ ಸವಾರ ನಾಗರಾಜರವರಿಗೂ ಬಲ ಕಾಲು ಹಾಗೂ ಬಲ ಭುಜದ ಬಳಿ ಮೂಳೆ ಮುರಿತ ಆಗಿರುತ್ತದೆ ಸದ್ರಿ ಅಫಘಾತಕ್ಕೆ ಕಾರು ನಂಬ್ರ ಕೆಎ 20 ಎಮ್‌ 2857 ನೇ ಜೆನ್‌ ಕಾರು ಚಾಲಕ ದಿನೇಶ್‌ ಆಚಾರ್‌ ಅತೀವೇಗ ಹಾಗೂ ಅಜಾಗರೂಕತೆಯ ಚಾಲನೆಯೇ ಕಾರಣವಾಗಿರುತ್ತದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 77/2021  ಕಲಂ: 279,338  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

Last Updated: 04-05-2021 05:56 PM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : UDUPI DISTRICT POLICE
Designed, Developed and Hosted by: Center for e-Governance - Web Portal, Government of Karnataka © 2021, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080