ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 • ಹೆಬ್ರಿ:  ದಿನಾಂಕ: 03/04/2023 ರಂದು  KA.19.C.1989 ನೇ ಲಕ್ಷ್ಮೀ ಎಕ್ಸಪ್ರೆಸ್‌ ಬಸ್‌ ನ್ನು ಅದರ ಚಾಲಕ ಮ್ಯಾಕ್ಸನ್‌ ರವರು  ಕೊಕ್ಕರ್ಣೆ ಮುದ್ದೂರು ರಸ್ತೆಯಲ್ಲಿ ಚಲಾಯಿಸಿಕೊಂಡು ಬರುತ್ತಿರುವಾಗ ಸಂಜೆ ಸಮಯ ಸುಮಾರು 06:00 ಗಂಟೆಗೆ ನಾಲ್ಕೂರು ಗ್ರಾಮದ ಮಾರಾಳಿ ಎಂಬಲ್ಲಿ ತಲುಪುವಾಗ ಬಸ್ಸನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ತಿರುವಿನ ಬಳಿ ಬಸ್ಸು ಚಾಲಕನ ಹತೋಟಿ ತಪ್ಪಿ ಫಿರ್ಯಾಧಿ ಶ್ರೀಮತಿ ಮೇಘನಾ ಇವರ ಮನೆಯ ಕಂಪೌಂಡ್‌ ಗೆ ಅಳವಡಿಸಿದ ಹೈಡ್ರೋಲಿಕ ಆಟೋಮೆಟಿಕ್‌ ಗೇಟ್‌ ಗೆ ಢಿಕ್ಕಿ ಹೊಡೆದ ಪರಿಣಾಮ ಕಲ್ಲಿನ ಕಂಬ, ಕಂಪೌಂಡ್‌ ಪಾಗರ ಮತ್ತು ಹೈಡ್ರೋಲಿಕ್‌ ಆಟೋಮೆಟಿಕ್‌ ಗೇಟ್‌ ಜಖಂಗೊಂಡು ಸುಮಾರು 4 ಲಕ್ಷ ರೂ ನಷ್ಟ ಉಂಟಾಗಿರುವುದಾಗಿದೆ. ಈ ಬಗ್ಗೆ ಹೆಬ್ರಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 17/2023  ಕಲಂ: 279, 427 ಐಪಿಸಿಯಂತೆ  ಪ್ರಕರಣ ದಾಖಲಾಗಿರುತ್ತದೆ.
 • ಉಡುಪಿ: ಪಿರ್ಯಾದಿ ಶೇಖರ್ ಸಾಲ್ಯಾನ್ ಇವರು ಈ ದಿನಾಂಕ:04-04-2023ರಂದು ತನ್ನ KA20EH2611ನೇ ಮೋಟಾರು ಸೈಕಲ್ ನಲ್ಲಿ ಪತ್ನಿ ಶಕುಂತಳಾ ರವರನ್ನು ಹಿಂಬದಿ ಸಹ ಸವಾರಳಾನ್ನಾಗಿ ಕುಳ್ಳಿರಿಸಿಕೊಂಡು ಮನೆಯಿಂದ ಕಲ್ಸಂಕದ ಕಡೆಗೆ ಸವಾರಿ ಮಾಡಿಕೊಂಡು ಬರುತ್ತಿರುವಾಗ ಸಮಯ ಸುಮಾರು ಬೆಳಿಗ್ಗೆ 08-20 ಗಂಟೆಗೆ ನಿಟ್ಟೂರು ಅಡ್ಕದ ಕಟ್ಟೆ ಮಾರ್ಗ ದಾಟಿ ಕಲ್ಸಂಕ ಅಂಬಾಗಿಲು ರಸ್ತೆಗೆ  ಬಂದು ಡಿವೈಡರ್  ಬಳಿ ಸೂಚನೆ ನೀಡಿ  ಅಂಬಾಗಿಲಿನಿಂದ  ಕಲ್ಸಂಕ ಕಡೆಗೆ ಹೋಗುವ ರಸ್ತೆಗೆ ತಿರುಗಿಸುತ್ತಿರುವಾಗ ಕಲ್ಸಂಕ ಕಡೆಯಿಂದ ಅಂಬಾಗಿಲು ಕಡೆಗೆ KA20EU9165ನೇ ಮೋಟಾರು ಸೈಕಲ್ ಸವಾರ ಕೃಷ್ಣ ಎಂಬಾತನು ತಾನು ಸವಾರಿಮಾಡಿಕೊಂಡು ಬರುತ್ತಿದ್ದ ಮೋಟಾರು ಸೈಕಲ್ ನ್ನು ದುಡುಕುತನ ಮತ್ತು ನಿರ್ಲಕ್ಷತನದಿಂದ ಸವಾರಿಮಾಡಿಕೊಂಡು ಬಂದು ಅಂಬಾಗಿಲು ಕಲ್ಸಂಕ ಕಡೆಗೆ ತಿರುಗಿಸುವರೇ ನಿಂತುಕೊಂಡಿದ್ದ  ಪಿರ್ಯಾದಿದಾರರ ಮೋಟಾರು ಸೈಕಲ್ ಗೆ ಡಿಕ್ಕಿ ಹೊಡೆದ ಪರಿಣಾಮ ಹಿಂಬದಿ ಸವಾರಳಾದ ಶಂಕುತಳಾರವರು ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದು, ಎಡತಲೆಗೆ ಗುದ್ದಿದ ಒಳಜಖಂ, ಮತ್ತು ಬಲ ಕೈಗೆತರಚಿದ ರಕ್ತಗಾಯ ವಾಗಿ ಚಿಕಿತ್ಸೆಯ ಬಗ್ಗೆ ಉಡುಪಿ ಆದರ್ಶ ಆಸ್ಪತ್ರೆಯಲ್ಲಿ  ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವುದಾಗಿದೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 35/2023 ಕಲಂ 279 337 ಐಪಿಸಿಯಂತೆ  ಪ್ರಕರಣ ದಾಖಲಾಗಿರುತ್ತದೆ.
 • ಕುಂದಾಪುರ: ದಿನಾಂಕ 03/04/2023 ರಂದು ಸಂಜೆ ಸುಮಾರು 7:15 ಗಂಟೆಗೆ, ಕುಂದಾಪುರ ತಾಲೂಕಿನ, ಕೊಟೇಶ್ವರ ಗ್ರಾಮದ  ಕ್ರೌನ್‌ ಟೌನ್‌ ಮಾಲ್‌ ಹತ್ತಿರ, ಪೂರ್ವ ಬದಿಯ ಎನ್‌. ಹೆಚ್‌ 66 ರಸ್ತೆಯಲ್ಲಿ, ಆಪಾದಿತ ಅವಿನಾಶ್‌ ಎಂಬವರು KA20-EN-3425ನೇ ಸ್ಕೂಟರ್‌ನಲ್ಲಿ ನರಸಿಂಹರವರನ್ನು ಸಹ ಸವಾರರಾಗಿ ಕುಳ್ಳಿರಿಸಿಕೊಂಡು ಕೋಟ ಕಡೆಯಿಂದ ಕುಂದಾಪುರ ಕಡೆಗೆ ವಿರುದ್ಧ ದಿಕ್ಕಿನಲ್ಲಿ ಅತೀವೇಗ ಹಾಗೂ ನಿರ್ಲಕ್ಷ್ಯತನದಿಂದ ಚಾಲನೆ ಮಾಡಿಕೊಂಡಿಕೊಂಡು ಬಂದು ,ರಸ್ತೆ ದಾಟಲು ನಿಂತುಕೊಂಡಿದ್ದ ಶಶಿಧರ ಶೆಟ್ಟಿ ಎಂಬವರಿಗೆ ಡಿಕ್ಕಿ ಹೊಡೆದು ಸ್ಕೂಟರ್‌ ಸಮೇತ ರಸ್ತೆಯಲ್ಲಿ ಬಿದ್ದು ನರಸಿಂಹರವರ ತಲೆಗೆ, ಮುಖಕ್ಕೆ ತರಚಿದ ರಕ್ತಗಾಯ  ಕುತ್ತಿಗೆಗೆ, ಸೊಂಟಕ್ಕೆ ಒಳನೋವಿನ ಗಾಯವಾಗಿ, ಕೊಟೇಶ್ವರ ಎನ್‌. ಆರ್‌ ಆಚಾರ್ಯ  ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು  ಹೆಚ್ಚಿನ ಚಿಕಿತ್ಸೆ ಬಗ್ಗೆ ಮಣಿಪಾಲ ಕೆ.ಎಂ. ಸಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 43/2023   ಕಲಂ 279,  337 ಐಪಿಸಿಯಂತೆ  ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

 • ಮಣಿಪಾಲ: ಪಿರ್ಯಾದಿ ಆದಿತ್ಯಾ ಕುಮಾರ್ ದಾಸ್ ಗುಪ್ತಾ  ಇವರ ಮಗ ಅನೀಶ್‌ ದಾಸ್‌ಗುಪ್ತ (22) ಎಂಬವನು ಎಂ.ಐ.ಟಿ ಮಣಿಪಾಲದಲ್ಲಿ ವ್ಯಾಸಂಗ ಮಾಡುತ್ತಿದ್ದು ಅನೀಶ್‌ ದಾಸ್‌ಗುಪ್ತ (22) ದಿನಾಂಕ 02/04/2023 ರಿಂದ 22:00 ಗಂಟೆಯಿಂದ 03/04/2023  ರ 07:15 ಗಂಟೆ ಮಧ್ಯಾವದಿಯಲ್ಲಿ ಮಾನಸಿಕ ಖಿನ್ನತೆಗೆ ಒಳಗಾಗಿ ಜೀವನದಲ್ಲಿ ಜಿಗುಪ್ಸೆಗೊಂಡು ತಾನು ವಾಸವಿದ್ದ ಹಾಸ್ಟೇಲ್‌ ನ ಬಾತ್‌ ರೂಮ್‌ ನಲ್ಲಿ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುತ್ತಾನೆ. ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 15/2023  ಕಲಂ:174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಬ್ರಹ್ಮಾವರ: ಬ್ರಹ್ಮಾವರ ತಾಲೂಕು ಕೆಂಜೂರು ಗ್ರಾಮದ ಕೋಲ್ಬೆಟ್ಟು ಗುಡ್ಡೆ ಎಂಬಲ್ಲಿ ನಾರಾಯಣ ಶೆಟ್ಟಿಯವರ ಬಾಬ್ತು ಬಾಡಿಗೆ  ಮನೆಯಲ್ಲಿ ವಾಸವಾಗಿದ್ದ ಫಿರ್ಯಾದಿ ಸುಜಾತ  ಇವರ ಅಣ್ಣ ಸಂತೋಷ ಶೆಟ್ಟಿ, ಪ್ರಾಯ 47 ವರ್ಷ, ಎಂಬವರು 2 – 3 ವರ್ಷದಿಂದ ಕೆಲಸಕ್ಕೆ ಹೋಗದೆ ಮನೆಯಲ್ಲಿ ಇದ್ದು ವಿಪರೀತ ಶುಗರ್‌ ಕಾಯಿಲೆ ಇದ್ದು, ಶರಾಬು ಕುಡಿಯುವ ಚಟ ಹೊಂದಿದ್ದರು. ಸಂತೋಷ ಶೆಟ್ಟಿಯವರು ತನಗಿದ್ದ ಬಿ.ಪಿ, ಶುಗರ್‌ ಕಾಯಿಲೆಯಿಂದ ಮನನೊಂದು ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ: 03/04/2023 ರಂದು ರಾತ್ರಿ 9.30 ಗಂಟೆಯಿಂದ ದಿನಾಂಕ: 04/04/2023 ರಂದು ಬೆಳಿಗ್ಗಿನ ಜಾವ 5.15 ಗಂಟೆಯ ಮಧ್ಯದದಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 24/2023  ಕಲಂ:174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

 • ಹಿರಿಯಡ್ಕ: ಹಿರಿಯಡ್ಕ ಠಾಣಾ ಪಿ.ಎಸ್‌.ಐ ಅನಿಲ್.ಬಿ.ಎಂ ರವರು ದಿನಾಂಕ:04/04/2023 ರಂದು ಮಧ್ಯಾಹ್ನ 12 ಗಂಟೆ ಸಮಯಕ್ಕೆ ವ್ಯಾಪ್ತಿಯ ಅಂಜಾರು ಪೊಲೀಸ್ ಚೆಕ್ ಪೋಸ್ಟ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ  ರಾ.ಕೆ 169(ಎ) ರಲ್ಲಿ ಹಿರಿಯಡಕ ಕಡೆಯಿಂದ ಉಡುಪಿ ಕಡೆಗೆ ಬಂದ  KA 19 MG 5434  ನೇ ಬಿಳಿ ಬಣ್ಣದ ಮಾರುತಿ ಓಮ್ನಿ ವಾಹನವನ್ನು ಪರಿಶೀಲಿಸಿದಲ್ಲಿ  27 ಕೆ.ಜಿ 520 ಗ್ರಾಂ ತಂಬಾಕು ಕಂಡುಬಂದಿರುತ್ತದೆ. ತಂಬಾಕಿನ ಅಂದಾಜು ಮೌಲ್ಯ ರೂ: 20 ಸಾವಿರ ಆಗಬಹುದು.ಓಮ್ನಿ ವಾಹನದ ಚಾಲಕನನ್ನು ವಿಚಾರಿಸಿದಲ್ಲಿ ಆತನ ಹೆಸರು  ಪ್ರಕಾಶ್, , ತಂದೆ: ಸುಂದರ, ವಿಳಾಸ: ಹೊಸ್ಮಾರು, ಈದು ಗ್ರಾಮ, ಕಾರ್ಕಳ ತಾಲೂಕು,ಎಂಬುದಾಗಿ ತಿಳಿಸಿರುತ್ತಾನೆ. ಈ ತಂಬಾಕನ್ನು ಸಾಗಾಟ ಮಾಡಲು ಅಗತ್ಯ ದಾಖಲಾತಿ ಇದೆಯೇ ಎಂದು ವಿಚಾರಿಸಿದಾಗ ಯಾವುದೇ ದಾಖಲಾತಿಗಳು ಇರುವುದಿಲ್ಲವಾಗಿ ತಿಳಿಸಿರುತ್ತಾನೆ. ಆತನು ಪರವಾನಿಗೆ/ದಾಖಲೆ ಇಲ್ಲದೇ ಅನುಮಾನಾಸ್ಪದವಾಗಿ  ತಂಬಾಕು ಸಾಗಾಟ ಮಾಡುತ್ತಿದ್ದ ಕಾರಣ ಸದ್ರಿ ತಂಬಾಕನ್ನು, ತಂಬಾಕನ್ನು ಸಾಗಾಟ ಮಾಡುತ್ತಿದ್ದ ಮಾರುತಿ ಓಮ್ನಿ  ವಾಹನವನ್ನು ಪಂಚರ ಸಮಕ್ಷಮದಲ್ಲಿ ಮಹಜರು ಮುಖೇನಾ ಸ್ವಾಧೀನಪಡಿಸಿಕೊಂಡಿದ್ದು ಈ ಬಗ್ಗೆ ಹಿರಿಯಡ್ಕ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 25/2023 ಕಲಂ: 98 ಕೆ.ಪಿ. ಕಾಯ್ದೆ ಯಂತೆ  ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 04-04-2023 05:53 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080