ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಬ್ರಹ್ಮಾವರ: ದಿನಾಂಕ 02/04/2022 ರಂದು ಸಂಜೆ ಪಿರ್ಯಾದಿದಾರರಾದ ಸಾಗರ್‌ ನಾಯರಿ  (19), ತಂದೆ: ರಂಗನಾಥ ನಾಯರಿ, ವಾಸ: ಶ್ರಮ ಕಾರ್ಕಡ ಗ್ರಾಮ, ಸಾಲಿಗ್ರಾಮ ಅಂಜೆ ಬ್ರಹ್ಮಾವರ ತಾಲೂಕು ಇವರ ಸ್ನೇಹಿತ ಅಖಿಲೇಶ್‌ ಹಾಗೂ ಶ್ರೀನಿವಾಸ ಬ್ರಹ್ಮಾವರಕ್ಕೆ ಹೋಗಲು ಪಿರ್ಯಾದಿದಾರರು ಮತ್ತು ಅಖಿಲೇಶ್‌ ಒಂದು ವಾಹನದಲ್ಲಿ ಹಾಗೂ ಶ್ರೀನಿವಾಸ KA-20-EB-8807 ನೇ ಬಜಾಜ್‌ಪಲ್ಸರ್‌ಮೋಟಾರ ಸೈಕಲ್‌ನಲ್ಲಿ  ಬ್ರಹ್ಮಾವರಕ್ಕೆ ಹೊರಟು ವಾರಂಬಳ್ಳಿ ಗ್ರಾಮದ ಮಂಜುಶ್ರೀ ಗ್ರಾನೈಟ್‌ ಬಳಿ ತಲಪುವಾಗ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ 17:00 ಗಂಟೆಗೆ ಶ್ರೀನಿವಾಸ ಪಿರ್ಯಾದಿದಾರರ ಮುಂಬಾಗದಲ್ಲಿ  ಆತನ ಬೈಕ್‌ನ್ನು ಸವಾರಿ ಮಾಡಿಕೊಂಡು ಹೋಗುತ್ತಿದ್ದು ಆತ ಅತೀ ವೇಗ ಹಾಗೂ ಅಜಾಗರೂಕತೆಯಿಂದ  ಚಲಾಯಿಸಿ ಆತನ ಹತೋಟಿ ತಪ್ಪಿ  ಮೋಟಾರ ಸೈಕಲ್‌ ಸಮೇತ ಬಲ ಬದಿಗೆ  ರಸ್ತೆಯ ಮೇಲೆ ಬಿದ್ದಿದ್ದನ್ನು ಕೂಡಲೇ ಪಿರ್ಯಾದಿದಾರರು ಅವರ ದ್ವಿಚಕ್ರ ವಾಹನವನ್ನು ರಸ್ತೆಯ ಬದಿಯಲ್ಲಿ ನಿಲ್ಲಿಸಿ  ಸ್ಧಳಕ್ಕೆ ಹೋಗುವಾಗ ಇತರ ಸಾರ್ವ ಜನಿಕರು ಬಂದಿದ್ದು ಎಲ್ಲರೂ ಸೇರಿ ಶ್ರಿನಿವಾಸನನ್ನು ಎತ್ತಿ ಉಪಚರಿಸಿದು ಆಗ ಶ್ರೀನಿವಾಸ ಮಾತನಾಡುತ್ತಿರಲಿಲ್ಲ ಈ ಅಪಘಾತದಿಂದ ಶ್ರೀನಿವಾಸನ ಎಡ ತಲೆಯ ಹಿಂಭಾಗಕ್ಕೆ  ತೀವ್ರ ರಕ್ತಗಾಯ ವಾಗಿರುತ್ತದೆ. ಕೂಡಲೇ ಒಂದು ವಾಹನದಲ್ಲಿ ಹತ್ತಿರದ ಮಹೇಶ  ಆಸ್ಪತ್ರಗೆ ಕರೆದುಕೊಂಡು ಹೋದಾಗ ಅಲ್ಲಿನ ವೈದ್ಯರು  ಪ್ರಥಮ ಚಿಕಿತ್ಸೆಯನ್ನು ನೀಡಿ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಉಡುಪಿಗೆ ಕರೆದುಕೊಂಡು ಹೋಗುವಂತೆ ತಿಳಿಸಿದಂತೆ ಅಸ್ಪತ್ರೆಯ ಅಂಬುಲೇನ್ಸ್‌ನಲ್ಲಿ  ಕೆ.ಎಂ.ಸಿ ಆಸ್ಪತ್ರೆ ಮಣಿಪಾಲಗೆ ಕರೆದು ಕೊಂಡು ಹೋದಾಗ ಅಲ್ಲಿನ ವೈದ್ಯರು ಪರೀಕ್ಷಿಸಿ ಒಳ ರೋಗಿಯಾಗಿ ದಾಖಲು ಮಾಡಿಕೊಂಡಿರುತ್ತಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 56/2022 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಕಳವು ಪ್ರಕರಣ

  • ಹಿರಿಯಡ್ಕ: ಪಿರ್ಯಾದಿದಾರರಾದ ಪ್ರಸನ್ನ  ಕುಮಾರ್ (46), ತಂದೆ: ದಿ. ನಾಗಪ್ಪ ನಾಯಕ್, ವಾಸ:ಕಬ್ಯಾಡಿ ಮನೆ, ಆತ್ರಾಡಿ ಅಂಚೆ, 80 ನೇಬಡಗಬೆಟ್ಟು ಗ್ರಾಮ, ಉಡುಪಿ ತಾಲೂಕು ಆತ್ರಾಡಿ ಗ್ರಾಮ, ಉಡುಪಿ ತಾಲೂಕು ಇವರು ಆತ್ರಾಡಿ ಬಾಲಾಜಿ ಕಾಂಪ್ಲೆಕ್ಸ್ ನಲ್ಲಿ ಮಹದೇವಿ ಸ್ಟೋರ್ ಎಂಬ ಹೆಸರಿನ ದಿನಸಿ ಅಂಗಡಿ ಇಟ್ಟುಕೊಂಡು ವ್ಯಾಪಾರ ಮಾಡಿಕೊಂಡಿದ್ದು, ದಿನಾಂಕ 03/04/2022 ರಂದು ಸಂಜೆ 4:00 ಗಂಟೆಗೆ ಅಂಗಡಿಯಿಂದ ಮನೆಗೆ ಚಾ ಕುಡಿಯಲು ಅವರ ಮೋಟಾರು ಸೈಕಲಿನಲ್ಲಿ  ಹೋಗಿ ವಾಪಾಸ್ಸು 4:30 ಗಂಟೆಯ ವೇಳೆಗೆ ಅಂಗಡಿಗೆ ಬೈಕ್ ನಲ್ಲಿ ಬಂದಿದ್ದು, ಬೈಕನ್ನು ಅಂಗಡಿಯ ಹೊರಗಡೆ ಇಟ್ಟು ಅಂಗಡಿಯಲ್ಲಿ ಗಿರಾಕಿಗಳು ಇದ್ದುದರಿಂದ ಒಳಗಡೆ ಹೋಗಿ ವ್ಯಾಪಾರ ಮಾಡುತ್ತಿದ್ದರು . ಬೈಕ್ ನ ಕೀಯನ್ನು ಬೈಕ್ ನಲ್ಲಿಯೇ ಬಿಟ್ಟಿದ್ದು  ಆ ಸಮಯ ಒರ್ವ ವ್ಯಕ್ತಿ ಅಂಗಡಿಯ ಹೊರಗಡೆ ನಿಂತುಕೊಂಡಿದ್ದು  ಅವರ  ಬೈಕ್ ನ ಮೇಲೆ ಬಂದು ಕುಳಿತುಕೊಂಡು ಒಮ್ಮೆಲೇ ಮೋಟಾರು ಸೈಕಲನ್ನು ಸ್ಟಾರ್ಟ್ ಮಾಡಿ ಮೋಟಾರು ಸೈಕಲನ್ನು ಸವಾರಿ ಮಾಡಿಕೊಂಡು ಆತ್ರಾಡಿ ಜಂಕ್ಷನ್ ಕಡೆಗೆ ಹೋದಾಗ ಪಿರ್ಯಾದಿದಾರರು ಅಂಗಡಿ ಹೊರಗಡೆ ಬಂದು ಕಳ್ಳ ಕಳ್ಳ ಎಂದು ಜೋರಾಗಿ ಕೂಗಿ ಬೈಕ್ ನ ಹಿಂದೆ ಓಡಿ ಹೋದಾಗ ಆತನು ಬೈಕನ್ನು ಹಿರಿಯಡ್ಕ ಕಡೆಗೆ ಸವಾರಿ ಮಾಡಿಕೊಂಡು ಹೋಗಿರುತ್ತಾನೆ. ಬೈಕನ್ನು ಕಳವು ಮಾಡಿದ ವ್ಯಕ್ತಿಯು ಸಪೂರ ಶರೀರದವನಾಗಿದ್ದು, ಮಾಸಲು ಬಣ್ಣದ ಬಟ್ಟೆಯನ್ನು ಧರಿಸಿರುತ್ತಾನೆ. ಕಳವಾದ ಮೋಟಾರು ಸೈಕಲ್ ಕಪ್ಪು ಬಣ್ಣದ 150 ಸಿಸಿ ಪಲ್ಸರ್ ಬೈಕ್ ಆಗಿದ್ದು ಅದರ ನೊಂದಣಿ ಸಂಖ್ಯೆ KA-20-S-4217 ಆಗಿರುತ್ತದೆ. ಕಳುವಾದ ಮೊಟಾ ರ್ ಸೈಕಲ್ ನ ಬೆಲೆ 25,000/- ರೂಪಾಯಿ ಆಗಿರುತ್ತದೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 17/2022 ಕಲಂ: 379 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಅಸ್ವಾಭಾವಿಕ ಮರಣ ಪ್ರಕರಣ

  • ಬೈಂದೂರು: ಪಿರ್ಯಾದಿದಾರರಾದ ಗಣೇಶ್ ಪೂಜಾರಿ (43), ಸ್ಟೇಷನ್ ಮಾಸ್ಟರ್ ಶಿರೂರು ರೈಲ್ವೆ ಸ್ಟೇಷನ್ ಇವರು ದಿನಾಂಕ 03/04/2022 ರಂದು ಶಿರೂರು ರೈಲ್ವೆ ಸ್ಟೇಷನ್ ನಲ್ಲಿ  ಕರ್ತವ್ಯದಲ್ಲಿರುವಾಗ  ಬೆಂಗಳೂರು –ಕಾರಾವಾರ  ಎಕ್ಸ್ ಪ್ರೆಸ್  ರೈಲು ಗಾಡಿ  ಸಂಖೈ 16595 ನೇಯದು  ಬೆಳಿಗ್ಗೆ  06:07 ಗಂಟೆಗೆ  ಶಿರೂರು ರೈಲ್ವೆ ಸ್ಟೇಷನ್ ಪ್ಲಾಟ್ ಫಾರಂ ಒಂದರಲ್ಲಿ ಬಂದು ನಿಂತಿದ್ದು  ನಂತರ 06:12 ಕ್ಕೆ ರೈಲು ಚಲಿಸಲು ಪ್ರಾರಂಬಿಸಿದಾಗ ಸುಮಾರು  50 ವರ್ಷ ಪ್ರಾಯದ ಅಪರಿಚಿತ ವ್ಯಕ್ತಿ  ಕೋಚ್  ನಂಬ್ರ 3,  ರೈಲ್ವೆ  ಹಳಿ  ಕೆ.ಎಮ್ ಸಂಖೈ 618/3- 618/4 ರ ನಡುವೆ  ಬಿದ್ದಿದ್ದು  ಆತನ ಹೊಟ್ಟೆಯ ಭಾಗ ರೈಲಿಗೆ ಸಿಕ್ಕಿ ಗಾಯವಾಗಿದ್ದು  ಆತನನ್ನು ಸ್ಥಳದಿಂದ ಎತ್ತಿಕೊಂಡು ಬಂದು ರೈಲ್ವೆ ಸ್ಟೇಷನ್ ಮುಂಭಾಗದಲ್ಲಿ  ಇಟ್ಟು  108 ಅಂಬುಲೆನ್ಸ್  ಕರೆಯಿಸಿ  108 ಅಂಬುಲೆನ್ಸ್ ಸಿಬ್ಬಂದಿಯವರು ನೋಡಿ ದಿನಾಂಕ 03/04/2022 ರಂದು  ಬೆಳಿಗ್ಗೆ 6:30 ಗಂಟೆಗೆ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಮೃತನ ಹೆಸರು ವಿಳಾಸ  ತಿಳಿದು ಬಂದಿರುವುದಿಲ್ಲ.  ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 17/2022 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಗಂಗೊಳ್ಳಿ: ಪಿರ್ಯಾದಿದಾರರಾದ ಶ್ರೀಮತಿ ಯಶೋಧ ಖಾರ್ವಿ (38), ಗಂಡ:ಗಣೇಶ್‌ ಖಾರ್ವಿ ವಾಸ: ದೊಡ್ಡಹಿತ್ಲು ಬಂದರು ರಸ್ತೆ ಗಂಗೊಳ್ಳಿ ಗ್ರಾಮ  ಕುಂದಾಪುರ ತಾಲೂಕು ಇವರು ಗಂಗೊಳ್ಳಿಯ ದಿನಕರ ನಾಯಕ್‌ ರವರ ಮನೆಯಲ್ಲಿ ಮನೆ ಕೆಲಸ ಮಾಡಿಕೊಂಡಿದ್ದು, ದಿನಾಂಕ 03/04/2022 ರಂದು ಬೆಳಿಗ್ಗೆ 08:15 ಗಂಟೆಗೆ ಕೆಲಸದ ಬಗ್ಗೆ ಮನೆಯಿಂದ ಹೋಗಿದ್ದು ಮನೆಯಲ್ಲಿ ಅವರ ಗಂಡ ಗಣೇಶ್‌ ಖಾರ್ವಿ (45) ರವರು ಒಬ್ಬರೇ ಮನೆಯಲ್ಲಿದ್ದಿದ್ದು ಪಿರ್ಯಾದಿದಾರರು ಕೆಲಸ ಮಾಡಿಕೊಂಡಿರುವಾಗ  ಅವರ ಮನೆಯ ಸಮೀಪದ ಗಿರಿಜಾರವರು ಬಂದು ಪಿರ್ಯಾದಿದಾರರಲ್ಲಿ ಮನೆಗೆ ಬೆಂಕಿ ಬಿದ್ದಿರುವುದಾಗಿ ಹೇಳಿದ್ದು ಪಿರ್ಯಾದಿದಾರರು ಬಂದು ನೋಡಲಾಗಿ ನೆರೆಕೆರೆಯವರೆಲ್ಲ ಸೇರಿ ಬೆಂಕಿಯನ್ನು ನಂದಿಸುತ್ತಿದ್ದು ಮನೆಗೆ ಕಟ್ಟಿದ ಪ್ಲಾಸ್ಟಿಕ್‌ ಟಾರ್ಪಲ್‌, ಪ್ಲೈವುಡ್‌ ಹಲಗೆಗಳು ಸುಟ್ಟುಹೋಗಿ ಮನೆಯ ಒಳಗಿದ್ದ ಕಾಟ್ ಸುಟ್ಟುಹೋಗಿ ಕಾಟಿನಲ್ಲಿ ಮಲಗಿದ್ದ ಪಿರ್ಯಾದಿದಾರರ ಗಂಡ ಗಣೇಶ್‌ ಖಾರ್ವಿ (45) ರವರು ಸುಟ್ಟ ಗಾಯವಾಗಿ ಮಲಗಿದ್ದಲ್ಲಿಯೇ ಮೃತಪಟ್ಟಿದ್ದು ಹಾಗೂ ಮನೆಯ ಎಲ್ಲಾ ವಸ್ತುಗಳು ಮತ್ತು ಚಿನ್ನದ ಕರಿಮಣಿ ಸರ ಸ್ವಲ್ಪ ಹಣ ಸುಟ್ಟು ಹೋಗಿರುತ್ತದೆ. ದಿನಾಂಕ 03/04/2022ರಂದು ಬೆಳಿಗ್ಗೆ 8:30 ಗಂಟೆಗೆ ಮನೆಯಲ್ಲಿ ದೇವರಿಗೆ ಹಚ್ಚಿಟ್ಟ ದೀಪದ ಬೆಂಕಿಯು ಮನೆಗೆ ಕಟ್ಟಿದ ಪ್ಲಾಸ್ಟಿಕ್‌ ಟಾರ್ಪಲ್‌ಗೆ ತಗುಲಿ ಮನೆಗೆ ಬೆಂಕಿ ತಾಗಿ ಸುಟ್ಟು ಹೋಗಿ  ಮನೆಯ ಒಳಗೆ ಮಂಚದಲ್ಲಿ ಮಲಗಿದ್ದ ಪಿರ್ಯಾದಿದಾರರ ಗಂಡನಿಗೆ ಬೆಂಕಿ ತಗುಲಿ ತೀವೃ ಸುಟ್ಟ ಗಾಯವಾಗಿ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 08/2022 ಕಲಂ: 174 ಸಿ.ಆರ್‌.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಅಮಾಸೆಬೈಲು: ಪಿರ್ಯಾದಿದಾರರಾದ ಕೃಷ್ಣ ನಾಯ್ಕ (29), ತಂದೆ:ದಿ. ಬಾಗಡು ನಾಯ್ಕ, ವಾಸ:ಗಂಗಡಬೈಲು ಶೇಡಿಮನೆ ಗ್ರಾಮ ಹೆಬ್ರಿ ತಾಲೂಕು ಇವರ ಅಣ್ಣ ಪುಟ್ಟ ನಾಯ್ಕ (38) ಎಂಬುವವರು ಶೇಡಿಮನೆ ಗ್ರಾಮದ ಗಂಗಡಬೈಲು ಎಂಬಲ್ಲಿ ವಾಸವಾಗಿದ್ದು ವಿಪರೀತ ಶರಾಬು ಕುಡಿಯುವ ಚಟ ಹೊಂದಿದ್ದು, 2-3 ದಿನಗಳಿಂದ ಕೆಲಸಕ್ಕೆ ಹೋಗದೇ ಮನೆಯಲಿದ್ದು ಶರಾಬು ಕುಡಿಯಲು ಹಣ ಇಲ್ಲದೇ ಇದ್ದುದರಿಂದ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 03/04/2022 ರಂದು ಬೆಳಿಗ್ಗೆ 03:00 ಗಂಟೆಯಿಂದ ಬೆಳಿಗ್ಗೆ 10:30 ಗಂಟೆಯ ನಡುವೆ ಮನೆಯ ಬಳಿ ಇರುವ ಕೊಟ್ಟಿಗೆಯಲ್ಲಿ ಬೀಣಿ ರೋಪಿನಿಂದ  ಕುತ್ತಿಗೆಗೆ ನೇಣು ಬಿಗಿದು ಆತ್ಹಹತ್ಯೆ ಮಾಡಿಕೊಂಡಿರುವುದಾಗಿದೆ ಈ ಬಗ್ಗೆ ಅಮಾಸೆಬೈಲು ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 03/2022 ಕಲಂ :  174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಇತ್ತೀಚಿನ ನವೀಕರಣ​ : 04-04-2022 09:50 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080