ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 • ಕುಂದಾಪುರ: ದಿನಾಂಕ 03/04/2022 ರಂದು ಸಂಜೆ ಸುಮಾರು 6:00 ಗಂಟೆಗೆ, ಕುಂದಾಪುರ  ತಾಲೂಕಿನ ಕೋಣಿ ಗ್ರಾಮ ಕಾಗೇರಿಬೈಲು ಬಳಿ ರಸ್ತೆಯಲ್ಲಿ, ಆಪಾದಿತ ರಾಘವೆಂದ್ರ ಎಂಬವರು KA20-EH-0577ನೇ ಬೈಕಿನಲ್ಲಿ ಸುಬ್ರಹ್ಮಣ್ಯ ರವರನ್ನು ಸಹ ಸವಾರರಾಗಿ ಕುಳ್ಳಿರಿಸಿಕೊಂಡು   ಹಾಲಾಡಿ ಕಡೆಯಿಂದ ಕುಂದಾಪುರ ಕಡೆಗೆ ಅತೀವೇಗ  ಹಾಗೂ ನಿರ್ಲಕ್ಷ್ಯತನದಿಂದ ಸವಾರಿ ಮಾಡಿಕೊಂಡು ಬಂದು,  ರಸ್ತೆಯ ಬದಿಯಲ್ಲಿ ನಿಂತ್ತಿದ್ದ  ಪೊಲೀಸ್ ಜೀಪನ್ನು ನೋಡಿ ಆಪಾದಿತ ಬೈಕ್‌ಸವಾರ  ಒಮ್ಮೇಲೆ  ಯಾವುದೇ  ಸೂಚನೆ ನೀಡದೇ  ನಿರ್ಲಕ್ಷ್ಯತನದಿಂದ ವಾಪಾಸು (ಯೂ ಟರ್ನ್‌) ಹಾಲಾಡಿ ಕಡೆಗೆ ತಿರುಗಿಸಿ,  ಸದ್ರಿ ಬೈಕಿನ ಹಿಂಬದಿಯಲ್ಲಿ ಅದೇ ದಿಕ್ಕಿನಲ್ಲಿ ಪಿರ್ಯಾದಿದಾರರಾದ ಬಿ ಸತೀಶ್  ಕಿಣಿರವರು ಚಾಲನೆ ಮಾಡಿಕೊಂಡು ಬರುತ್ತಿದ್ದ KA25-Z-1549ನೇ ನೊಂದಣಿ ನಂಬ್ರದ ಇನ್ನೋವಾ ಕಾರಿನ ಮುಂಭಾಗದ ಬಲಬದಿಗೆ ಡಿಕ್ಕಿ ಹೊಡೆದು  ಬೈಕ್‌ಸಮೇತ ಇಬ್ಬರು ರಸ್ತೆಯಲ್ಲಿ ಬಿದ್ದು, ರಾಘವೆಂದ್ರರವರ ತಲೆಗೆ ತಲೆಗೆ ಒಳಜಕಂ ಗಾಯ ಹಾಗೂ ಮೈ ಕೈಗೆ ಗಾಯವಾಗಿದ್ದು ಸುಬ್ರಹ್ಮಣ್ಯ ರವರಿಗೆ ರ ಮೈ ಕೈಗೆ ತರಚಿದ ಗಾಯವಾಗಿದ್ದು, ರಾಘವೆಂದ್ರರವರು ಕೊಟೇಶ್ವರ  ಎನ್‌. ಆರ್‌ಆಚಾರ್ಯ  ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು, ಹೆಚ್ಚಿನ ಚಿಕಿತ್ಸೆ  ಬಗ್ಗೆ ಮಣಿಪಾಲ ಕೆ.ಎಂಸಿ ಆಸ್ಪತ್ರೆಗೆ ಹೋಗಿದ್ದು, ಸುಬ್ರಹ್ಮಣ್ಯ ರವರು ಕೊಟೇಶ್ವರ  ಎನ್‌. ಆರ್‌ಆಚಾರ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ  ಪಡೆದುಕೊಂಡಿರುತ್ತಾರೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ: 45/2022  ಕಲಂ 279, 337, 338  IPC  ಯಂತೆ ಪ್ರಕರಣ  ದಾಖಲಿಸಲಾಗಿದೆ.
 • ಕುಂದಾಪುರ: ದಿನಾಂಕ 03/04/2022 ರಂದು ರಾತ್ರಿ  ಸುಮಾರು 9:30 ಗಂಟೆಗೆ, ಕುಂದಾಪುರ  ತಾಲೂಕಿನ ಕಸಬಾ ಗ್ರಾಮದ ಕೆ.ಎಸ್‌. ಆರ್‌.ಟಿ ಬಸ್‌ನಿಲ್ದಾಣದ ಬಳಿ,  ಎನ್‌‌‌. ಹೆಚ್‌66 ಸರ್ವಿಸ್‌‌ರಸ್ತೆಯಲ್ಲಿ ಆಪಾದಿತ ಮೊಹಮ್ಮದ್‌ಮೀರಾ ಎಂಬವರು KA19-V-6726 ನೇ ಬೈಕನ್ನು  ತಲ್ಲೂರು ಕಡೆಯಿಂದ ಕುಂದಾಪುರ ಶಾಸ್ತ್ರಿಸರ್ಕಲ್‌‌ಕಡೆಗೆ  ಅತೀವೇಗ  ಹಾಗೂ ನಿರ್ಲಕ್ಷ್ಯತನದಿಂದ ಸವಾರಿ ಮಾಡಿಕೊಂಡು ಬಂದು,  ರಸ್ತೆಯ ಬದಿಯಲ್ಲಿ ಶಾಸ್ತ್ರಿಸರ್ಕಲ್‌‌ಕಡೆಯಿಂದ  ಮನೆಗೆ ನಡೆದುಕೊಂಡು ಬರುತ್ತಿದ್ದ  ಪಿರ್ಯಾದಿ ಶೇಖರ್‌ಪ್ರಾಯ 48 ವರ್ಷ ತಂದೆಗಣಪತಿ ವಾಸ: ಹಳೇ ಆದರ್ಶ ಹತ್ತಿರ, ಕಸಬಾ ಗ್ರಾಮ, ಕುಂದಾಪುರ ರವರಿಗೆ ಡಿಕ್ಕಿ ಹೊಡೆದ ಪರಿಣಾಮ ಶೇಖರ ಹಾಗೂ ಬೈಕ್‌ಸವಾರ ಮೊಹಮ್ಮದ್‌ಮೀರಾ  ರವರು ಗಾಯಗೊಂಡು ಕುಂದಾಪುರ ಆದರ್ಶ ಆಸ್ಪತ್ರೆಯಲ್ಲಿ ಚಿಕಿತ್ಸೆ  ಬಗ್ಗೆ  ದಾಖಲಾಗಿರುತ್ತಾರೆ. ಈ ಬಗ್ಗೆ ಕುಂದಾಪುರ ಸಂಚಾರ ಠಾಣಾ ಅಪರಾದ ಕ್ರಮಾಂಕ: 46/2022  ಕಲಂ 279, 337    IPC   ಯಂತೆ ಪ್ರಕರಣ  ದಾಖಲಿಸಲಾಗಿದೆ.

ಇತರ ಪ್ರಕರಣ

 • ಕುಂದಾಪುರ ಗ್ರಾಮಾಂತರ: ಈ ದಿನಾಂಕ 04.04.2022 ರಂದು ಪಿರ್ಯಾಧಿ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣಾ ಪಿಎಸ್‌ಐ (L&O), ನಿರಂಜನ ಗೌಡ ಬಿಎಸ್‌‌., ರವರು    ಠಾಣಾ ಸಿಬ್ಬಂದಿಯವರೊಂದಿಗೆ ಇಲಾಖಾ ವಾಹನದಲ್ಲಿ  ರಂಜಾನ್  ಹಬ್ಬದ ಸಂಬಂದ ರೌಂಡ್ಸ್‌ ಕರ್ತವ್ಯದಲ್ಲಿ ಇರುವಾಗ  ಬೆ 07-50  ಗಂಟೆಗೆ  ಕುಂದಾಪುರ ತಾಲೂಕು ಕಾವ್ರಾಡಿ ಗ್ರಾಮದ ಧೂಪದಕಟ್ಟೆ ವಾಲ್ತೂರು ವಾಹನ ತಪಾಸಣೆ ನಡೆಸುತ್ತಿರುವ ವೇಳೆ ಧೂಪದಕಟ್ಟೆ ಕಡೆಯಿಂದ ಬರುತ್ತಿದ್ದ ಒಂದು ದ್ವಿಚಕ್ರ ವಾಹನವನ್ನು ನಿಲ್ಲಿಸಲು ಸೂಚನೆ ನೀಡುತ್ತಿದ್ದಂತೆ, ವಾಹನ ಸವಾರನು ಇಲಾಖಾ ವಾಹನ ಹಾಗೂ ಸಮವಸ್ತ್ರದಲ್ಲಿರು ಪಿರ್ಯಾಧಿದಾರನ್ನು  ನೋಡಿ, ದ್ವಿಚಕ್ರ ವಾಹನವನ್ನು ರಸ್ತೆಯಿಂದ ಸ್ವಲ್ಪ ದೂರ   ಹೋಗಿ ನಿಲ್ಲಿಸಿ ಪರಾರಿಯಾಗಿರುತ್ತಾನೆ. ಈ ವ್ಯಕ್ತಿಯು ಕಂಡ್ಲೂರು ನಿವಾಸಿ ಕಾಜಿ ಅಫ್ಫಾನ್‌‌ ಎಂಬಾತನಾಗಿದ್ದು . ದ್ವಿಚಕ್ರ ವಾಹನದ ಬಳಿ ಹೋಗಿ ಪರಿಶೀಲನೆ ನಡೆಸಿದಾಗ ಈ ವಾಹನವು KA20 EM 2551 ನಂಬ್ರದ ಹೋಂಡಾ ಏವಿಯೇಟರ್‌ ಸ್ಕೂಟರ್‌ ಆಗಿದ್ದು, ಇದರ ಮುಂಬದಿ ಕಾಲು ಇಡುವ ಸ್ಥಳದಲ್ಲಿ ಒಂದು ಪ್ಲಾಸ್ಟಿಕ್‌‌ ಚೀಲ ಇದ್ದು, ಈ ಚೀಲದಲ್ಲಿ ಪರಿಶೀಲಿಸಿದಾಗ ದನದ ತ್ಯಾಜ್ಯ ಭಾಗಗಳಾದ ಒಂದು ದನದ ಬಾಲ ಸಹಿತ ಇರುವ ಚರ್ಮ, ದನದ ತಲೆಯ ಎಲುಬಿನ ಭಾಗ-1, ದನದ ಕೊಂಬು ಹಾಗೂ ಕಿವಿಯ ಭಾಗ, ದನದ ಕಾಲಿನ ಗೊರಸು-4 ಹಾಗೂ ಹೊಟ್ಟೆಯ ತ್ಯಾಜ್ಯ ಇರುವುದು ಕಂಡುಬಂದಿರುತ್ತದೆ. ಆರೋಪಿತನಾದ KA20 EM 2551 ನೇ ದ್ವಿಚಕ್ರ ವಾಹನ ಸವಾರ ಕಾಜಿ ಅಫ್ಫಾನ್‌‌ ನು ಈ ಜಾನುವಾರನ್ನು ಎಲ್ಲಿಯೋ ಕಳವು ಮಾಡಿ, ಯಾವುದೇ ಪರವಾನಿಗೆ ಇಲ್ಲದೆ ಹಿಂಸಾತ್ಮಕವಾಗಿ ವಧೆ ಮಾಡಿ ಮಾಂಸ ಮಾಡಿ, ಅದರ ತ್ಯಾಜ್ಯಗಳನ್ನು ವಿಲೆ ಮಾಡಲು ಸಾಗಾಟ ಮಾಡುತ್ತಿದ್ದುದು ಧೃಡಪಟ್ಟಿರುತ್ತದೆ.  ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣಾ ಅಪರಾದ ಕ್ರಮಾಂಕ 16/2022 ಕಲಂ: 379 ಐಪಿಸಿ ಮತ್ತು ಕಲಂ:4,5,7,12(1)(2) ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಅಧ್ಯಾದೇಶ 2020 ಮತ್ತು ಕಲಂ11(1)(ಡಿ) ಪ್ರಾಣಿ ಹಿಂಸೆ ನಿಷೇಧ ಕಾಯ್ದೆ 1960  ಯಂತೆ ಪ್ರಕರಣ  ದಾಖಲಿಸಲಾಗಿದೆ.

ಅಸ್ವಾಭಾವಿಕ ಮರಣ ಪ್ರಕರಣ

 • ಕುಂದಾಪುರ :ಪಿರ್ಯಾಧಿ ಶ್ರೀಮತಿ ರತ್ನ (28) ಕೋಂ:ನಾಗರಾಜ ವಾಸ:ಕೆಳಮನೆ ಸೌಕೂರು ಗುಲ್ವಾಡಿ ಗ್ರಾಮ & ಅಂಚೆ ಇವರು ದಿನಾಂಕ:03-04-2022 ರಂದು ತನ್ನ ಗಂಡನಾದ ನಾಗರಾಜ ಇವರೊಂದಿಗೆ ತವರು  ಮನೆಯಾದ ಆಲೂರು ಗ್ರಾಮದ ನಾರ್ಕಳಿಗೆ ಹೋಗಿರುತ್ತಾರೆ. ಬಳಿಕ ನಾಗರಜರವರು ಮಧ್ಯಾಹ್ನದ ಊಟದ ನಂತರ ವಾಪಾಸ್ಸು ತನ್ನ  ಮನೆಗೆ ಬಂದಿರುತ್ತಾರೆ.ಈ ದಿನ ದಿನಾಂಕ:04-04-2022 ರಂದು ಬೆಳಿಗ್ಗೆ  06:30 ಗಂಟೆಗೆ ಗಂಡನ   ಮನೆಯಿಂದ ಪಿರ್ಯಾಧಿದಾರರಿಗೆ ಕರೆ ಮಾಡಿ ನಿನ್ನ ಗಂಡನಾದ ನಾಗರಾಜನು ಮೀನು ಹಿಡಿಯಲು ಗಾಳ ಹಾಕಲು ಕೆರೆಗೆ ಹೋದವರು ಕೆರೆಯ ನೀರಿನಲ್ಲಿ ಮುಳುಗಿ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ನಂತರ ಪಿರ್ಯಾಧಿದಾರರು ಕೂಡಲೇ ತವರು ಮನೆಯಿಂದ ಹೊರಟು ಬಂದು ಕರೆಯ ಬಳಿ ಬಂದು ಗಂಡನಾದ ನಾಗರಾಜರವರ ಮೃತ ಶರೀರವನ್ನು ನೋಡಿರುತ್ತಾರೆ.ಪಿರ್ಯಾಧಿದಾರ ಗಂಡನಾದ ನಾಗರಾಜನು ಎಂದಿನಂತೆ ಎಂದಿನಂತೆ ನಿನ್ನೆ ದಿನ ರಾತ್ರಿ ಮೀನು ಹಿಡಿಯುವ ಬಗ್ಗೆ ಕೆರೆಗೆ ಗಾಳ ಹಾಕಿ ಬಂದಿದ್ದು ಈ ದಿನ  ದಿನಾಂಕ:04-04-2022 ರಂದು ಬೆಳಿಗ್ಗೆ 05:30 ರಿಂದ 06:15 ಗಂಟೆಯ ನಡುವೆ   ಗಾಳಕ್ಕೆ ಮೀನು ಬಿದ್ದಿದೆಯೇ ಎಂದು ನೋಡಲು ಹೋದವರು ಆಕಸ್ಮಿಕವಾಗಿ ಕಾಲು ಜಾರಿ ಕೆರೆಗೆ ಬಿದ್ದು  ನೀರಿನಲ್ಲಿ ಮುಳುಗಿ ಉಸಿರುಗಟ್ಟಿ  ಮೃತಪಟ್ಟಿರುವುದಾಗಿದೆ.ಮೃತ ನಾಗರಾಜ(40) ವರ್ಷ ರವರ ಮರಣದಲ್ಲಿ ಬೇರೆ ಯಾವುದೇಸಂಶಯ ಇರುವುದಿಲ್ಲ . ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣಾ.
  ಯುಡಿಆರ್‌ನಂ:11/2022 ಕಲಂ:174 ಸಿಆರ್‌ಪಿಸಿ ಯಂತೆ ಪ್ರಕರಣ  ದಾಖಲಿಸಲಾಗಿದೆ.
 • ಉಡುಪಿ:  ಉಡುಪಿ ತಾಲ್ಲೂಕು  76ನೇ ಬಡಗುಬೆಟ್ಟು  ಗ್ರಾಮದ  ಚಿಟ್ಪಾಡಿ ಕಸ್ತೂರ್ಬಾ  ನಗರದ  ಮನೆನಂಬ್ರ   2-32,  ಶ್ರೀ  ಗುರುಪ್ರಸಾದದಲ್ಲಿ  ಫಿರ್ಯಾದಿ  ನಿತೇಶ್ K.ಪ್ರಾಯ: 31  ವರ್ಷ ತಂದೆ: ಸಿ.  ಮುದ್ದು ವಾಸ: ಮನೆನಂಬ್ರ   2-32,  ಶ್ರೀ  ಗುರು  ಪ್ರಸಾದ, ಕಸ್ತೂರ್ಬಾ ನಗರ,  ಚಿಟ್ಪಾಡಿ, ಇವರೊಂದಿಗೆ  ವಾಸವಿದ್ದ ಫಿರ್ಯಾದುದಾರರ ತಂದೆಯಾದ  ಸಿ. ಮುದ್ದು ,  ಪ್ರಾಯ: 63  ವರ್ಷರವರು ನಿವೃತ್ತ  ಅಂಚೆ  ನೌಕರರಾಗಿದ್ದು,  ಕಳೆದ  ಹದಿನ್ನೈದು  ವರ್ಷಗಳಿಂದ  ಹೃದಯದ ತೊಂದರೆಯಿಂದ ಬಳಲುತ್ತಿದ್ದು, ಈ ಬಗ್ಗೆ ಮಣಿಪಾಲದ  ಕೆಎಂಸಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೊಳಗಾಗಿ, ಫೇಸ್‌ಮೇಕರ್‌ಯಂತ್ರವನ್ನು ಅಳವಡಿಸಲ್ಪಟ್ಟಿದ್ದವರು  ದಿನಾಂಕ: 04/04/2022 ರಂದು ಬೆಳಿಗ್ಗೆ  6:00  ಗಂಟೆಯ  ಸುಮಾರಿಗೆ  ಮನೆಯಲ್ಲಿ ತೀವ್ರ ಅಸ್ವಸ್ಥಗೊಂಡವರನ್ನು  ಚಿಕಿತ್ಸೆಯ  ಬಗ್ಗೆ  ಅಜ್ಜರಕಾಡು  ಜಿಲ್ಲಾಸ್ಪತ್ರೆಗೆ ಕರೆ  ತಂದಲ್ಲಿ  ಬೆಳಿಗ್ಗೆ 10:15  ಗಂಟೆ  ಸುಮಾರಿಗೆ  ಪರೀಕ್ಷಿಸಿದ  ವೈದ್ಯರು ಸಿ. ಮುದ್ದುರವರು ಅದಾಗಲೇ ಮೃತಪಟ್ಟಿರುವುದಾಗಿ  ತಿಳಿಸಿರುವುದಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಯುಡಿಆರ್‌ನಂ 20/2022 ಕಲಂ 174  ಸಿಆರ್‌ಪಿಸಿ ಯಂತೆ ಪ್ರಕರಣ  ದಾಖಲಿಸಲಾಗಿದೆ. 
 • ಅಮಾಸೆಬೈಲು: ಪಿರ್ಯಾದಿ ಬಾಲಕೃಷ್ಣ ಭಂಡಾರ್ಕರ್ ತಂದೆ:ಸುಧಾಕರ್ ಭಂಡಾರ್ಕರ್ ವಾಸ:ಹೊಸಂಗಡಿ  ಗ್ರಾಮದ ಕಡೆಪೇಟೆ ಇವರ ಚಿಕ್ಕಪ್ಪ ರಾಮಚಂದ್ರ ಬಂಡಾರ್ಕರ್ (58) ಎಂಬವರು ಕುಂದಾಪುರ ತಾಲೂಕು ಹೊಸಂಗಡಿ  ಗ್ರಾಮದ ಕಡೆಪೇಟೆ ಎಂಬಲ್ಲಿ ವಾಸವಾಗಿದ್ದು ದಿನಾಂಕ: 04/04/2022 ರಂದು ಹೊಸಂಗಡಿ  ಗ್ರಾಮದ ಅನಗಳ್ಳಿಬೈಲು ಪರಿಸರದ ಹತ್ತು ಸಮಸ್ತರಿಗೆ ಸೇರಿದ ನಾಗ ಮತ್ತು ಹೈಗುಳಿ  ದೇವರ ಕಾರ್ಯಕ್ರಮದ ಬಗ್ಗೆ ಚಪ್ಪರ ಹಾಕುತ್ತಿರುವ ಸಮಯ ಬೆಳಿಗ್ಗೆ ಸುಮಾರು 11.30 ಗಂಟೆಗೆ ರಾಮಚಂದ್ರ ಬಂಡಾರ್ಕರ್ ಅವರು ಕೆಲಸದಲ್ಲಿ ತೊಡಗಿಕೊಂಡಿರುವಾಗ  ಚಪ್ಪರಕ್ಕೆ ಹಾಕುತ್ತಿದ್ದ ಅಡಿಕೆ ಮರದ ಕಂಬವು ಮೇಲಿಂದ  ಜಾರಿದಾಗ  ಅದನ್ನು ತಡೆಯಲು ಹೋದ ಸಮಯ ಕಾಲು ಎಡವಿ ಅವರು ಕೆಳಗೆ ಬಿದ್ದಾಗ ಜಾರಿದ ಅಡಿಕೆ ಮರದ ಕಂಬ ಅವರ ಕುತ್ತಿಗೆ ಹಿಂದೆ ಬಿದ್ದು ಗಾಯಗೊಂಡವರನ್ನು ಚಿಕಿತ್ಸೆಗಾಗಿ ಸಿದ್ದಾಪುರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅಲ್ಲಿನ ವೈದ್ಯಾಧಿಕಾರಿಗಳು ಪರೀಕ್ಷಿಸಿ ಅವರು ಮೃತಪಟ್ಟಿದ್ದಾರೆ ಎಂದು ತಿಳಿಸಿರುತ್ತಾರೆ . ಈ ಮರಣದಲ್ಲಿ ನಮಗೆ ಯಾವುದೇ ಸಂಶಯವಿರುವುದಿಲ್ಲ. ಈ ಬಗ್ಗೆ ಅಮಾಸೆಬೈಲು ಪೊಲೀಸ್ ಠಾಣೆ ಯುಡಿಆರ್ ನಂ 04/2022 ಕಲಂ : 174   ಸಿಆರ್‌ಪಿಸಿ ಯಂತೆ ಪ್ರಕರಣ  ದಾಖಲಿಸಲಾಗಿದೆ.

ಇತ್ತೀಚಿನ ನವೀಕರಣ​ : 04-04-2022 06:27 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080