ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕೋಟ: ಫಿರ್ಯಾದಿ ಸಫಲ್ ಶೆಟ್ಟಿ ಇವರು ದಿನಾಂಕ: 03/03/2023 ರಂದು16:15 ಗಂಟೆಗೆ ಉಡುಪಿ-ಕುಂದಾಪುರ ರಾ.ಹೆ.-66 ರಲ್ಲಿ ಕಾರಿನಲ್ಲಿ ಬರುತ್ತಿರುವಾಗ ಕುಂದಾಪುರ- ಉಡುಪಿ ರಾ.ಹೆ.-66 ರಲ್ಲಿ  ಒಂದು ಕೆ.ಎ-20-ಇಜೆ-6659 ನೇ  ಆಕ್ಟೀವಾ  ಸ್ಕೂಟಿಯನ್ನು  ಅದರ  ಸವಾರ  ಅತುಲ್ ಎಂಬುವವನು ಅತೀವೇಗ, ಅಜಾಗರೂಕತೆ ಹಾಗೂ ನಿರ್ಲಕ್ಷತನದಿಂದ  ಸವಾರಿ  ಮಾಡಿಕೊಂಡು ಬಂದು ಸಾಸ್ತಾನ  ಬಸ್‌‌‌‌‌‌‌‌  ಸ್ಟಾಪ್‌‌‌‌  ಬಳಿ  ರಸ್ತೆ  ದಾಟಲು ನಿಂತಿದ್ದ ಪಾದಾಚಾರಿ ನಾರಾಯಣ ಎಂಬವರಿಗೆ  ಡಿಕ್ಕಿ  ಹೊಡೆದನು. ಪರಿಣಾಮ ಪಾದಾಚಾರಿ ನಾರಾಯಣ ತಲೆಗೆ  ತೀವ್ರ  ತರದ  ಗಾಯವಾಗಿದ್ದು,  ಕಾಲಿಗೆ  ತರಚಿದ  ಗಾಯವಾಗಿರುತ್ತದೆ. ಅಲ್ಲದೇ ಸ್ಕೂಟಿ  ಸವಾರನು ಸ್ಕೂಟಿ  ಸಮೇತ  ರಸ್ತೆಗೆ  ಬಿದ್ದಿದ್ದು ಎರಡೂ  ಕೈಗೆ,  ಮುಖಕ್ಕೆ  ರಕ್ತ  ಗಾಯವಾಗಿದ್ದು,  ಗಾಯಾಳುಗಳನ್ನು  ಬ್ರಹ್ಮಾವರ  ಮಹೇಶ್‌‌‌‌‌‌‌ ಆಸ್ಪತ್ರೆಗೆಂದು  ಕರೆದುಕೊಂಡು  ಹೋಗಿದ್ದು ‌‌‌‌‌ ಆಸ್ಪತ್ರೆಯಲ್ಲಿ  ಪರೀಕ್ಷಿಸಿದ  ವೈದ್ಯರು  ಪಾದಾಚಾರಿ ನಾರಾಯಣ ರವರು ಮೃತಪಟ್ಟಿರುವುದಾಗಿ  ತಿಳಿಸಿರುತ್ತಾರೆ. ಈ ಬಗ್ಗೆ ಕೋಟ  ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 36/2023  ಕಲಂ: 279, 304(A) ಐಪಿಸಿ ರಂತೆ ಪ್ರಕರಣ ದಾಖಲಿಸಿ ಕೊಳ್ಳಲಾಗಿದೆ.
  • ಗಂಗೊಳ್ಳಿ: ಪಿರ್ಯಾದಿದಾರರಾದ ಮೋಹನ ಖಾರ್ವಿ  ರವರು ದಿನಾಂಕ: 02.03.2023 ರಂದು ಸಂಜೆ ಆಲೂರಿನಿಂದ ಗಂಗೊಳ್ಳಿಗೆ ಹೋಗುವರೇ ತನ್ನ ಬಾಬ್ತು KA 20 EJ 1028 ನೇ ಮೋಟಾರು ಸೈಕಲ್‌ ನ್ನು ಆಲೂರಿನಿಂದ ಮುಳ್ಳಿಕಟ್ಟೆ ರಸ್ತೆಯಲ್ಲಿ ಸವಾರಿಮಾಡಿಕೊಂಡು ಬಂದು ಸಮಯ ಸುಮಾರು 19:00 ಗಂಟೆಗೆ ಹೊಸಾಡು ಗ್ರಾಮದ ಮುಳ್ಳಿಕಟ್ಟೆ ಜಂಕ್ಷನ್‌ ನಲ್ಲಿ ಗಂಗೊಳ್ಳಿ ರಸ್ತೆಗೆ ದಾಟಲು  NH 66 ರಸ್ತೆಯ ಬದಿಯ ಮಣ್ಣು ರಸ್ತೆಯಲ್ಲಿ ತನ್ನ ಮೋಟಾರು ಸೈಕಲ್‌ ನ್ನು ನಿಲ್ಲಿಸಿಕೊಂಡಿರುವಾಗ ಬೈಂದೂರು ಕಡೆಯಿಂದ ಕುಂದಾಪುರ ಕಡೆಗೆ NH 66 ರಸ್ತೆಯಲ್ಲಿ MH 18 BG 7878 ನೇ  ಲಾರಿಯ ಚಾಲಕ ದೇವಿದಾಸ್‌ ಎಂಬಾತನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿ ರಸ್ತೆಯ ತೀರಾ ಎಡಬಾಗಕ್ಕೆ ಬಂದು ಮುಳ್ಳಿಕಟ್ಟೆ ಜಂಕ್ಷನ್‌ ನಲ್ಲಿ ಮಣ್ಣು ರಸ್ತೆಯಲ್ಲಿ ನಿಲ್ಲಿಸಿಕೊಂಡಿದ್ದ KA 20 EJ 1028 ನೇ ಮೋಟಾರು ಸೈಕಲ್‌ ಗೆ ಡಿಕ್ಕಿ ಹೊಡೆದ ಪರಿಣಾಮ ಮೋಟಾರು ಸೈಕಲ್‌ ಸವಾರರಾದ ಪಿರ್ಯಾದಿದಾರರು ಬೈಕ್‌ ಸಮೇತ ರಸ್ತೆ ಬಿದ್ದು ಬಲಕಾಲಿನ ಮೂಳೆಗೆ ತೀವೃ ರಕ್ತಗಾಯ ಹಾಗೂ ಎಡಕಾಲು, ಕೈಗಳಿಗೆ ಸಣ್ಣಪುಟ್ಟ ಗಾಯವಾಗಿರುತ್ತದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 25/2023 ಕಲಂ: 279, 338 ಐಪಿಸಿ ರಂತೆ ಪ್ರಕರಣ ದಾಖಲಿಸಿ ಕೊಳ್ಳಲಾಗಿದೆ.
  • ಕಾಪು: ಪಿಯಾ೯ದಿ ಶ್ರೀನಿವಾಸ್  ಇವರು ದಿನಾಂಕ:03/03/2023 ರಂದು ತಾನು ಕೆಲಸ ಮಾಡುವ ಮಂದಾರ ಯಾತ್ರಿ ನಿವಾಸ್ ಹೊಟೆಲ್ ನಲ್ಲಿ ಇರುವಾಗ ತನ್ನ ಸಹೊದ್ಯೋಗಿಯಾದ ವಿನಯ್ ಶಿವರಾಮ್ ಶೆಟ್ಟಿ ರವರು ಪಿರ್ಯಾದಿದಾರರಿಗೆ ತಿಳಿಸಿ ಕಾಪುವಿನ ಕೆನರಾ ಬ್ಯಾಂಕ್ ಗೆ ಚಲನ್ ಕಟ್ಟಿ ಬರುವುದಾಗಿ ತಿಳಿಸಿ ಹೋಟೆಲ್‌ ನಿಂದ ಹೊರಟು  ಬೆಳಗ್ಗೆ 11:00 ಗಂಟೆ ಸುಮಾರಿಗೆ ರಾ.ಹೆ 66 ಮಂಗಳೂರು- ಉಡುಪಿ ರಸ್ತೆಯನ್ನುದಾಟುವರೇ ರಸ್ತೆಯ ಬದಿ ನಿಂತುಕೊಂಡಿರುವಾಗ ಕೆ.ಎ 21 ಸಿ. 1785 ನೇ ಮಿನಿ ಟ್ರಕ್ ನ ಚಾಲಕನು  ತನ್ನ ಬಾಬ್ತು ವಾಹನವನ್ನು ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಅತೀ ವೇಗ ಹಾಗೂ ಅಜಾಗರೂಕತೆಯಿಂದ  ಚಲಾಯಿಸಿಕೊಂಡು ತೀರ ಎಡ ಬದಿಗೆ ಬಂದು ವಿನಯ್ ಶಿವರಾಮ್ ಶೆಟ್ಟಿ ರವರಿಗೆ ಡಿಕ್ಕಿ ಹೊಡೆದ ಪರಿಣಾಮ ವಿನಯ್ ಶಿವರಾಮ್ ಶೆಟ್ಟಿರವರು ರಸ್ತೆಗೆ ಬಿದ್ದಿದ್ದು ತಲೆಗೆ ರಕ್ತಗಾಯವಾಗಿ ಪ್ರಜ್ಞೆ ತಪ್ಪಿ ಬಿದ್ದವರನ್ನು ಪಿರ್ಯಾದಿದಾರರು ಸ್ಥಳದಲ್ಲಿ ಅವರನ್ನು ಉಪಚರಿಸಿ ಬಳಿಕ ಒಂದು ರಿಕ್ಷಾದಲ್ಲಿ ಕಾಪುವಿನ ಪ್ರಶಾಂತ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿ ಪ್ರಥಮ ಚಿಕಿತ್ಸೆಯನ್ನು ಕೊಡಿಸಿಕೊಂಡು ಬಳಿಕ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಉಡುಪಿ ಹೈಟೆಕ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿ ಪರೀಕ್ಷಿಸಿದ ವೈದ್ಯರು ವಿನಯ್ ಶಿವರಾಮ್ ಶೆಟ್ಟಿ ರವರ ಪಕ್ಕೆಯ ಎಲುಬು ಮುರಿತವಾಗಿದೆ ಎಂದು ತಿಳಿಸಿರುತ್ತಾರೆ. ಈ ಅಪಘಾತಕ್ಕೆ ಕೆ.ಎ 21 ಸಿ 1785 ನಂಬ್ರದ ಅಶೋಕ ಲೈಲ್ಯಾಂಡ್ ಮಿನಿ ಟ್ರಕ್ ನ ಚಾಲಕನ ಅತಿ ವೇಗ ಹಾಗೂ ಅಜಾಗರೂಕತೆಯ ಚಾಲನೆಯೇ ಕಾರಣ ಎಂಬಿತ್ಯಾದಿ. ಈ ಬಗ್ಗೆ ಕಾಪು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 34/2023 ಕಲಂ 279, 338 ಐಪಿಸಿ ರಂತೆ ಪ್ರಕರಣ ದಾಖಲಿಸಿ ಕೊಳ್ಳಲಾಗಿದೆ.
  • ಕಾಪು: ದಿನಾಂಕ 28.02.2023 ರಂದು ಮಲ್ಲಾರು ಗ್ರಾಮದ ಪಕೀರನ ಕಟ್ಟೆ ಎಂಬಲ್ಲಿ ಪಿರ್ಯಾದಿ ಮಗ್ತುಮ್ ಸಾಬ್ ನದಾಫ್ ಇವರು ರಮೇಶ್ ಹಾಗೂ ತುಕರಾಮ್‌ ಎಂಬವರೊಂದಿಗೆ ಪೈಪ್ ಲೈನ್ ಕೆಲಸ ಮುಗಿಸಿ ಅಲ್ಲಿಯೇ ನಿಂತಿದ್ದ ಕ್ರೇನ್ ನ ಬಳಿ ನಿಂತುಕೊಂಡಿದ್ದಾಗ ಸಾಯಂಕಾಲ ಸುಮಾರು 4:45 ಗಂಟೆಗೆ KA 20 MA 0258 ನೇ ಕ್ರೇನ್ ಚಾಲಕ ಮೋಹನನು ತನ್ನ ಬಾಬ್ತು ಕ್ರೇನ್‌‌ನ್ನು ಒಮ್ಮೇಲೆ  ಸ್ಟಾರ್ಟ್‌ ಮಾಡಿ ಒಮ್ಮೇಲೆ  ಹಿಂದಕ್ಕೆ ಚಲಾಯಿಸಿದ ಪರಿಣಾಮ ಕ್ರೇನ್ ನ ಎಡಬದಿಯ  ಮಧ್ಯದಲ್ಲಿ ಕೆಳಗಡೆ ನಿಂತಿದ್ದ ರಮೇಶನ ಬಲಗಾಲಿನ ಹಿಮ್ಮಡಿ  ಮತ್ತು ಪಾದದ ಮೇಲೆ ಕ್ರೇನ್‌‌ ನ ಎದುರಿನ ಎಡಬದಿಯ ಚಕ್ರ ಹರಿದು  ತೀವೃವಾದ ಗಾಯವಾಗಿರುತ್ತದೆ. ಅಲ್ಲದೇ ಸೊಂಟಕ್ಕೆ ಒಳ ಜಖಂ ಆಗಿರುತ್ತದೆ. ನಂತರ ಪಿರ್ಯಾದಿದಾರರು ಒಂದು ವಾಹನದಲ್ಲಿ ರಮೇಶನನ್ನು ಉಡುಪಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಪಡೆದು ನಂತರ ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ವೆನ್ ಲಾಕ್‌ ಆಸ್ಪತ್ರೆಯಲ್ಲಿ ದಾಖಲಿಸಿರುವುದಾಗಿದೆ. ಈ ಅಪಘಾತಕ್ಕೆ KA 20 MA 0258 ನೇ ಕ್ರೇನ್ ಚಾಲಕ ಮೋಹನರವರ ಅತೀ ವೇಗ ಅಜಾಗರೂಕತೆಯ ಚಾಲನೆಯೇ ಕಾರಣವಾಗಿರುತ್ತದೆ. ಈ ಬಗ್ಗೆ ಕಾಪು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 35/2023 ಕಲಂ 279, 338 ಐಪಿಸಿ ರಂತೆ ಪ್ರಕರಣ ದಾಖಲಿಸಿ ಕೊಳ್ಳಲಾಗಿದೆ.
  • ಕುಂದಾಪುರ: ದಿನಾಂಕ 03/03/2023  ರಂದು ಸಂಜೆ ಸುಮಾರು 5:10 ಗಂಟೆಗೆ, ಕುಂದಾಪುರ ತಾಲೂಕು, ಉಪ್ಪಿನಕುದ್ರು ಗ್ರಾಮದ ಹಾದಿಬೆಟ್ಟು ಕ್ರಾಸ್‌ ಬಳಿ ರಸ್ತೆಯಲ್ಲಿ, ಆಪಾದಿತ ನಾಗರಾಜ ಎಂಬವರು KA20-D-7194ನೇ ಅಟೋರಿಕ್ಷಾವನ್ನು ತಲ್ಲೂರು ಕಡೆಯಿಂದ ಉಪ್ಪಿನಕುದ್ರು ಕಡೆಗೆ ಅತೀವೇಗ ಹಾಗೂ  ನಿರ್ಲಕ್ಷ್ಯ ತನದಿಂದ  ಚಾಲನೆ ಮಾಡಿಕೊಂಡು  ಬಂದು, ಉಪ್ಪಿನಕುದ್ರು ಕಡೆಯಿಂದ ತಲ್ಲೂರು ಕಡೆಗೆ ಪಿರ್ಯಾದಿದಾರರಾದ ಜಗದೀಶ್‌ ಮೋಗವೀರ ಎಂಬವರು ರಸ್ತೆಯ ಎಡಬದಿಯಲ್ಲಿ ಸವಾರಿ ಮಾಡಿಕೊಂಡು ಹೋಗುತ್ತಿದ್ದ KA20-EY-4239ನೇ ಮೋಟಾರ್‌ ಸೈಕಲ್‌‌‌ಗೆ ಎದುರುಗಡೆಯಿಂದ ಡಿಕ್ಕಿ ಹೊಡೆದ  ಪರಿಣಾಮ ಪಿರ್ಯಾದಿದಾರರ ಬಲಕಾಲಿನ ಪಾದದ ಬೆರಳುಗಳಿಗೆ ಜಜ್ಜಿದ ರಕ್ತಗಾಯವಾಗಿದ್ದು, KA20-D-7194ನೇ ಅಟೋರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ  ರಾಧ ಎಂಬವರ ಬಲಕೈಗೆ ಗಾಯವಾಗಿದ್ದು, ಪಿರ್ಯಾದಿದಾರರು ಚಿಕಿತ್ಸೆ  ಬಗ್ಗೆ ಕುಂದಾಪುರ ಚಿನ್ಮಯಿ ಆಸ್ಪತ್ರೆಗೆ  ದಾಖಲಾಗಿದ್ದು, ರಾಧರವರು   ಕುಂದಾಪುರ ಆದರ್ಶ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುತ್ತಾರೆ ಎಂಬಿತ್ಯಾದಿ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 25/2023 ಕಲಂ 279, 337 ಐಪಿಸಿ ರಂತೆ ಪ್ರಕರಣ ದಾಖಲಿಸಿ ಕೊಳ್ಳಲಾಗಿದೆ.

 

ಇತರ ಪ್ರಕರಣ

  • ಪಡುಬಿದ್ರಿ: ಪಿರ್ಯಾದಿ ಗೋವಿಂದ ರಾಜ್ ಇವರು ದಿನಾಂಕ:02.03.2023 ರಂದು ಕಾಪು ತಾಲೂಕು ನಂದಿಕೂರು ಗ್ರಾಮದ ಕೈಗಾರಿಕಾ ಪ್ರದೇಶದ ಶ್ರೀ ಚಕ್ರ ಇಂಡಸ್ಟ್ರಿ ಬಳಿ ಗಾರೆ ಕೆಲಸ ಮಾಡುತ್ತಿರುವಾಗ ಐವಾನ್ ಡಿಸೋಜ ರವರು ಪೋನ್ ಮಾಡಿ ಗ್ಯಾರೇಜಿಗೆ ಬರಲು ತಿಳಿಸಿದಂತೆ, ಮಧ್ಯಾಹ್ನ 14:00 ಗಂಟೆಯ ವೇಳೆಗೆ ನಂದಿಕೂರು ಕೈಗಾರಿಕಾ ಪ್ರದೇಶದಿಂದ ಹೋಗುತ್ತಿರುವಾಗ ಸಮಯ ಸುಮಾರು 14:00 ಗಂಟೆಯ ವೇಳೆಗೆ ನಿಟ್ಟೆಯ ಫಾರೂಕ್ ಹಾಗೂ ಆತನ ರೈಟರ್ ಅಲ್ಲಿಗೆ ಬಂದು ಪಿರ್ಯಾದಿದಾರರನ್ನು ತಡೆದು ನಿಲ್ಲಿಸಿ ನಾನು ಯಾರು ಎಂದು ಗೊತ್ತಿದೆಯಾ? ನಮ್ಮ ಬಗ್ಗೆ ಬೇರೆಯವರ ಬಳಿ ಏನೇನು ಬೈದಿದ್ದೀಯಲ್ಲ, ಎಂದು ಹೇಳಿ ಪಿರ್ಯಾದಿದಾರರನ್ನು ನೆಲಕ್ಕೆ ದೂಡಿ ಬೀಳಿಸಿ, ಬೂಟು ಕಾಲನಿಂದ ತುಳಿದು, ಕಲ್ಲಿನಲ್ಲಿ ಹೊಡೆದು ಹಲ್ಲೆ ಮಾಡಿ, ಅವಾಚ್ಯ ಶಬ್ಧಗಳಿಂದ ಬೈದಿದ್ದಲ್ಲದೇ, ಚೂರಿಯನ್ನು ತೋರಿಸಿ ಕೊಲ್ಲುವುದಾಗಿ ಜೀವ ಬೆದರಿಕೆ ಹಾಕಿರುತ್ತಾರೆ. ಸದ್ರಿ ಹಲ್ಲೆಯಿಂದ ಪಿರ್ಯಾದಿದಾರರ ಬಲಕೈಗೆ ತರಚಿದ ಗಾಯವಾಗಿದ್ದು, ಈ ಬಗ್ಗೆ ಕಾರ್ಕಳದ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದಿರುವುದಾಗಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 22/2023, ಕಲಂ: 341, 504, 323, 324, 506 ಜೊತೆಗೆ 34 ಐಪಿಸಿ ರಂತೆ ಪ್ರಕರಣ ದಾಖಲಿಸಿ ಕೊಳ್ಳಲಾಗಿದೆ.
  • ಮಲ್ಪೆ:  ದಿನಾಂಕ 02̲̲-03-2023  ರಂದು  ಗುರುನಾಥ್‌ ಬಿ ಹಾದಿಮನಿ ಪೊಲೀಸ್ ಉಪನಿರೀಕ್ಷಕರು ಠಾಣಾ ಸರಹದ್ದಿನಲ್ಲಿ ರೌಂಡ್ಸ್‌ ಕರ್ತವ್ಯದಲ್ಲಿರುವಾಗ ಸಂಜೆ 07:15 ಗಂಟೆ ಸಮಯಕ್ಕೆ ಬಾತ್ಮೀದಾರರು ಕರೆ ಮಾಡಿ  ಕೊಡವೂರು ಗ್ರಾಮದ ಸಿವ್ಯೂ ಬಾರ್‌ ಹಿಂಬದಿ ಸಾರ್ವಜನಿಕ  ಜಾಗದಲ್ಲಿ ಕಾನೂನು ಬಾಹಿರವಾಗಿ ಇಸ್ಪೀಟು ಜುಗಾರಿ ಆಟ ಆಡುತ್ತಿರುವುದಾಗಿ ಖಚಿತ ಮಾಹಿತಿ ಬಂದಂತೆ   ಸಿಬ್ಬಂದಿಯವರಾದ  ಶಿವನಾಯ್ಕ್,  ರವಿರಾಜ್‌, ಸಚಿನ್‌, ರವಿ ಜಾಧವ್  ಮತ್ತು ಪಂಚರೊಂದಿಗೆ  ಕೊಡವೂರು ಗ್ರಾಮದ ಸಿವ್ಯೂ ಬಾರ್‌ ಹಿಂಬದಿ ತಲುಪಿ ಸಮಯ ರಾತ್ರಿ ಸುಮಾರು 08;15 ಗಂಟೆಗೆ ದಾಳಿ ನಡೆಸಿ ಜುಗಾರಿ ಆಟ ಆಡುತ್ತಿದ್ದ  ಆರೋಪಿತರಾದ 1) ರೂಪೇಶ್‌  2)ಪ್ರಕಾಶ್  3) ಜಯರಾಮ್‌  4) ರಾಜು   ರವರನ್ನು ವಶಕ್ಕೆ  ಪಡೆದು  ಇಸ್ಪೀಟು ಎಲೆಗಳು 52, ಪ್ಲಾಸ್ಟಿಕ್‌  ಚೀಲ  ಹಾಗೂ  ಜೂಜಾಟಕ್ಕೆ ಬಳಸಿದ ಒಟ್ಟು ಹಣ 9310/- ರೂ ಪಂಚರ ಸಮಕ್ಷಮ ಮುಂದಿನ ಕ್ರಮದ ಬಗ್ಗೆ   ಸ್ವಾಧೀನಪಡಿಸಿಕೊಂಡಿದ್ದು ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 20/2023 ಕಲಂ:87 KP ACT ರಂತೆ ಪ್ರಕರಣ ದಾಖಲಿಸಿ ಕೊಳ್ಳಲಾಗಿದೆ.

ಇತ್ತೀಚಿನ ನವೀಕರಣ​ : 04-03-2023 05:47 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080