ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕುಂದಾಪುರ: ದಿನಾಂಕ 03/03/2022  ರಂದು ರಾತ್ರಿ 7:45 ಗಂಟೆಗೆ  ಕುಂದಾಪುರ  ತಾಲೂಕಿನ, ಕುಂದಾಪುರ ವಡೇರಹೋಬಳಿ  ಗ್ರಾಮದ  ನೆಹರೂ ಮೈದಾನದ ಎದುರಿನ  Fly  ಓವರ್ NH 66  ರಸ್ತೆಯಲ್ಲಿ ಆಪಾದಿತ ಕೃಷ್ಣಮೂರ್ತಿ ಶೇಟ್‌ KA-20-MF-2122ನೇ ಕಾರನ್ನು  ಉಡುಪಿ ಕಡೆಯಿಂದ ಬೈಂದೂರು  ಕಡೆಗೆ ಅತೀವೇಗ  ಹಾಗೂ  ನಿರ್ಲಕ್ಷ್ಯತನದಿಂದ ಚಾಲನೆ ಮಾಡಿಕೊಂಡು ಬಂದು, ಪೂರ್ವ ಬದಿಯ  ಸರ್ವಿಸ್‌ ರಸ್ತೆ ಕಡೆಯಿಂದ ಪಶ್ಚಿಮ  ಬದಿಯ  ಸರ್ವಿಸ್‌ ರಸ್ತೆಯ ನೆಹರೂ ಮೈದಾನದ ಕಡೆಗೆ  ಬರಲು  ರಸ್ತೆ ದಾಟುತ್ತಿದ್ದ ಶಿವಾನಂದರವರಿಗೆ  ಡಿಕ್ಕಿ ಹೊಡೆದ ಪರಿಣಾಮ ಶಿವಾನಂದ ರವರ ತಲೆಗೆ  ಹಾಗೂ ದೇಹದ ಇತರೆ  ಅಂಗಾಂಗಗಳಿಗೆ ಗಂಭೀರ ಗಾಯವಾಗಿ  ಸ್ಥಳದಲ್ಲಿಯೇ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 33/2022 ಕಲಂ: 279,  304 (ಎ) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಗಂಗೊಳ್ಳಿ: ಪಿರ್ಯಾದಿದಾರರಾದ ವಿಶ್ವನಾಥ (41), ತಂದೆ: ನಾರಾಯಣ ಖಾರ್ವಿ, ವಾಸ:ರಾಮ ಮಂದಿರದ ಬಳಿ, ಗುಜ್ಜಾಡಿ ಅಂಚೆ, ಕಂಚಗೋಡು, ಹೊಸಾಡು ಗ್ರಾಮ, ಕುಂದಾಪುರ ತಾಲೂಕು ಇವರ ಮನೆಯ ಬಳಿಯ ರೆಸಾರ್ಟ್‌ ನ ಕಾಮಗಾರಿ ನಡೆಯುತ್ತಿದ್ದು, ಕಾಮಗಾರಿಯ ಗುತ್ತಿಗೆಯನ್ನು ಕಟೀಲು ಕನ್‌ಸ್ಟ್ರಕ್ಷನ್ ರವರಿಗೆ ನೀಡಿದ್ದು, ದಿನಾಂಕ 03/03/2022 ರಂದು ಬೆಳಿಗ್ಗಿನ ಸಮಯದಲ್ಲಿ RJ-02-GB-2375 ನೇ ನಂಬ್ರದ ಲಾರಿಯಲ್ಲಿ ರಾಜಸ್ಥಾನದಿಂದ ಮಾರ್ಬಲ್ ಬಂದಿದ್ದು, ದಿನಗೂಲಿ ನೌಕರರಾದ ಗಣಪತಿ, ವಿಶ್ವಜಿತ್, ಸಫನ್ ಮಿತ್ರ, ಆಶಿಕ್ ಸರ್ಕಾರ್ ಹಾಗೂ ರಾಜು ಮಂಡಲ್ ಎಂಬುವವರು ಅವರ ಕೆಲಸವನ್ನು ಮುಗಿಸಿ ಬಳಿಕ RJ-02-GB-2375 ನೇ ನಂಬ್ರದ ಲಾರಿಯಲ್ಲಿದ್ದ ಮಾರ್ಬಲ್‌ ಗಳನ್ನು ಕೆಳಗಿಳಿಸಲು ಲಾರಿಯ ಚಾಲಕನಲ್ಲಿ ಮಾತನಾಡಿಕೊಂಡು ಸಂಜೆ 6:40 ಗಂಟೆಗೆ ಗಣಪತಿ ಹಾಗೂ ವಿಶ್ವಜಿತ್‌ ರವರು ಲಾರಿಯ ಮೇಲೆ ಹತ್ತಿದ್ದು, ಲಾರಿಯ ಎಡ ಹಾಗೂ ಬಲ ಬದಿ ಬಾಡಿಯ ಮಧ್ಯ ಭಾಗದಲ್ಲಿ ಜಾಗವಿದ್ದು, ಗಣಪತಿ ಹಾಗೂ ವಿಶ್ವಜಿತ್‌ ರವರು ಆ ಜಾಗದಲ್ಲಿ ನಿಂತು ಯಾವುದೇ ಮುಂಜಾಗೃತಾ ಸಲಕರಣೆಗಳನ್ನು ಉಪಯೋಗಿಸದೇ ಮಧ್ಯದಲ್ಲಿದ್ದ ಸಾಮಗ್ರಿಗಳನ್ನು ತೆಗೆಯುತ್ತಿರುವಾಗ ಲಾರಿಯ ಎಡ ಬದಿಯ ಬಾಡಿಗೆ ಒರಗಿಸಿಟ್ಟಿದ್ದ ಮಾರ್ಬಲ್ ಒಮ್ಮೆಲೇ ಗಣಪತಿ ಹಾಗೂ ವಿಶ್ವಜಿತ್‌ ರವರ ಮೈ ಮೇಲೆ ಬಿದ್ದಿದ್ದು, ಆಗ ಲಾರಿಯ ಕೆಳಗಡೆ ನಿಂತಿದ್ದ ಸಪನ್ ಮಿತ್ರ, ಆಶಿಕ್ ಸರ್ಕಾರ್ ಹಾಗೂ ರಾಜು ಮಂಡಲ್ ರವರು ಬೊಬ್ಬೆ ಹಾಕಲು ಪ್ರಾರಂಭಿಸಿದ್ದು, ಬೊಬ್ಬೆಯನ್ನು ಕೇಳಿ ಪಿರ್ಯಾದಿದಾರರು ಹಾಗೂ ಊರಿನ ಜನರು ಸೇರಿ ಗಣಪತಿ ಹಾಗೂ ವಿಶ್ವಜಿತ್‌ ರವರನ್ನು ಲಾರಿಯಿಂದ ಕೆಳಗಿಸಿಳಿದ್ದು,ಇದನ್ನು ಕಂಡ ಸಪನ್ ಮಿತ್ರ ರವರಿಗೆ ಆಘಾತವಾಗಿರುತ್ತದೆ. ಕೂಡಲೇ ಒಂದು ಅಂಬ್ಯುಲೆನ್ಸ  ನಲ್ಲಿ ಗಣಪತಿ, ವಿಶ್ವಜಿತ್ ಹಾಗೂ ಸಪನ್ ಮಿತ್ರ ರವರನ್ನು ಚಿಕಿತ್ಸೆ ಬಗ್ಗೆ ಕುಂದಾಪುರದ ಆದರ್ಶ ಆಸ್ಪತ್ರೆಗೆ ಆಶಿಕ್‌ ಸರ್ಕಾರ್ ರವರು ಕರೆದುಕೊಂಡು ಹೋದಲ್ಲಿ ವೈದ್ಯಾಧಿಕಾರಿಯವರು ಪರೀಕ್ಷಿಸಿ ಗಣಪತಿ ಯವರು ದಾರಿಯಲ್ಲಿ ಬರುವಾಗ ಮೃತಪಟ್ಟಿರುತ್ತಾರೆ ಎಂದು ತಿಳಿಸಿದ್ದು, ವಿಶ್ವಜಿತ್‌ ರವರಿಗೆ ತೀವೃ ಜಖಂ ಆಗಿರುವುದರಿಂದ ಹೆಚ್ಚಿನ ಚಿಕಿತ್ಸೆ ಬಗ್ಗೆ ಕೆ.ಎಂ.ಸಿ ಮಣಿಪಾಲ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದು, ಆಘಾತಗೊಂಡ ಸಪನ್ ಮಿತ್ರ ರವರನ್ನು ಒಳರೋಗಿಯಾಗಿ ದಾಖಲು ಮಾಡಿಕೊಂಡಿರುತ್ತಾರೆ. ಈ ಘಟನೆಗೆ RJ-02-GB-2375 ನೇ ನಂಬ್ರದ ಲಾರಿಯ ಚಾಲಕ ಅಕ್ತರ್‌ ಖಾನ್ ಹಾಗೂ ಸಂಬಂಧಟ್ಟವರು ಸರಿಯಾದ ಮುಂಜಾಗೃತಾ ಕ್ರಮವನ್ನು ತೆಗೆದುಕೊಳ್ಳದಿರುವುದೇ ಕಾರಣವಾಗಿರುವುದಾಗಿ ನೀಡಿದ ದೂರಿನಂತೆ ಗಂಗೊಳ್ಳಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 20/2022 ಕಲಂ:  338, 304 (A)  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕುಂದಾಪುರ: ದಿನಾಂಕ 03/03/2022  ರಂದು ಮಧ್ಯಾಹ್ನ 12:45 ಗಂಟೆಗೆ ಕುಂದಾಪುರ ತಾಲೂಕು, ಬೀಜಾಡಿ  ಗ್ರಾಮದ ಪೂಜಾ ಟೈಲ್ಸ್ ಅಂಗಡಿಯ ಎದುರು ರಾಷ್ಟ್ರೀಯ  ಹೆದ್ದಾರಿ 66 ರ ರಸ್ತೆಯಲ್ಲಿ  ಆಪಾದಿತ ಸುದರ್ಶನ್  ಅವರ  KA-20-EQ-8357  ನೇ ಬುಲೇಟ್  ಬೈಕ್ ನ್ನು ಉಡುಪಿ ಕಡೆಯಿಂದ ಕುಂದಾಪುರ ಕಡೆಗೆ   ಅತೀವೇಗ  ಹಾಗೂ ನಿರ್ಲಕ್ಷ್ಯತನದಿಂದ  ಸವಾರಿ ಮಾಡಿಕೊಂಡು ಬಂದು, ಪಿರ್ಯಾದಿದಾರರಾದ ವಿಜಯ ಜಿ (43), ಗಂಡ: ಸುಧಾಕರ ಜೋಗಿ, ವಾಸ:ಗಣೇಶ ನಗರ  ಕುಂಭಾಶಿ ಗ್ರಾಮ, ಕುಂದಾಪುರ ತಾಲೂಕು  ಇವರು  KA-20-EJ-2964 ನೇ ಸ್ಕೂಟರನ್ನು  ಕುಂದಾಪುರ –ಉಡುಪಿ  ಡಾಂಬರು ರಸ್ತೆಯಿಂದ ಉಡುಪಿ-ಕುಂದಾಪುರ ಏಕಮುಖ ಸಂಚಾರ ರಸ್ತೆಯ ಪಕ್ಕದ ಸರ್ವಿಸ್ ರಸ್ತೆಗೆ ಹೋಗುತ್ತಿದ್ದ ಸ್ಕೂಟರಗೆ ಡಿಕ್ಕಿ ಹೊಡೆದ ಪರಿಣಾಮ  ವಿಜಯ ಜಿ ರವರು ಸ್ಕೂಟರ ಸಮೇತ ರಸ್ತೆಗೆ ಬಿದ್ದು ಅವರ ಬಲ ಕೈ ಮೊಣಗಂಟಿಗೆ ಮತ್ತು  ಎಡ ಹಾಗೂ ಬಲ ಕಾಲಿನ ಮೊಣಗಂಟಿಗೆ ತರಚಿದ ಗಾಯನೋವಾಗಿ ಕೋಟೇಶ್ವರ ಎನ್ ಆರ್ ಆಚಾರ್ಯ ಆಸ್ಪತ್ರೆಯಲ್ಲಿ ಒಳರೋಗಿಯಾಗಿ  ದಾಖಲಾಗಿರುತ್ತಾರೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 32/2022 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಪಡುಬಿದ್ರಿ: ಪಿರ್ಯಾದಿದಾರರಾದ ಶೈಲೇಶ್ ಶೆಟ್ಟಿ (37), ತಂದೆ: ಎಲ್ ಜಯರಾಮ ಶೆಟ್ಟಿ, ವಾಸ: ಕೊಡಮಜಲು ಮನೆ, ಬಳ್ಕುಂಜೆ ಅಂಚೆ ಮತ್ತು ಗ್ರಾಮ,  ಮಂಗಳೂರು ತಾಲೂಕು, ದ.ಕ. ಜಿಲ್ಲೆ ಇವರು ಪಡುಬಿದ್ರಿ ಹೆಜಮಾಡಿ ಟೋಲ್‌ಗೇಟಿನಲ್ಲಿ ಸೇಫ್ಟಿ ಆಫೀಸರ್ ಆಗಿ ಕೆಲಸ ಮಾಡಿಕೊಂಡಿದ್ದು, ದಿನಾಂಕ 02/03/2022 ರಂದು KA-20-AA-3319 ನೇ ನಂಬ್ರದ ವಾಹನದಲ್ಲಿ ಚಾಲಕ ಶ್ರೇಯಸ್ ಎಂಬುವರೊಂದಿಗೆ ರಾಷ್ಟ್ರೀಯ ಹೆದ್ದಾರಿ-66 ರಲ್ಲಿ ರೌಂಡ್ಸ್ ಕರ್ತವ್ಯದಲ್ಲಿರುತ್ತಾ, ಸಮಯ 11:45 ಗಂಟೆಗೆ ಕಾಪು ತಾಲೂಕು ತೆಂಕ ಎರ್ಮಾಳು ಗ್ರಾಮದ ಮಸೀದಿ ಬಳಿ ತಲುಪಿದಾಗ KA-47-M-0503 ನೇ ನಂಬ್ರದ ಜೆಸಿಬಿ ಚಾಲಕನು ರಾಷ್ಟ್ರೀಯ ಹೆದ್ದಾರಿ-66 ರ ಉಡುಪಿ-ಮಂಗಳೂರು ಕಡೆಗೆ ಸಾಗುವ ಏಕಮುಖ ಸಂಚಾರ ರಸ್ತೆಯಲ್ಲಿ  ತನ್ನ ಜೆಸಿಬಿಯನ್ನು ಅತೀ ವೇಗ ಹಾಗೂ ಆಜಾರೂಕತೆಯಿಂದ ಚಲಾಯಿಸಿ ಡಿವೈಡರ್ ಗೆ ಡಿಕ್ಕಿ ಹೊಡೆದ ಪರಿಣಾಮ ಅಲ್ಲಿರುವ Metal Beam crash Barrier, Solar blinker ಹಾಗೂ Red Reflector ಗಳನ್ನು ಜಖಂಗೊಳಿಸಿ, ಜೆಸಿಬಿಯನ್ನು ಅಲ್ಲಿಯೇ ನಿಲ್ಲಿಸಿ  ಹೋಗಿರುತ್ತಾನೆ. ಅಪಘಾತದಿಂದ ರೂಪಾಯಿ 75,671/- ನಷ್ಟ ಉಂಟಾಗಿದ್ದು, ಜೆಸಿಬಿಯ ಮಾಲಕರಾದ ಕಾಪುವಿನ ಸಾಕ್ಷಾತ್ ಎಂಬುವವರು ನಷ್ಟದ ವೆಚ್ಛವನ್ನು ಕೊಡುವುದಾಗಿ ಹೇಳಿ ಈವರೆಗೂ ಕೊಡದೇ ಇದ್ದುದರಿಂದ ದೂರು ನೀಡಲು ವಿಳಂಬವಾಗಿರುತ್ತದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 24 /2022 ಕಲಂ: 279, 427 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಶಿರ್ವಾ: ದಿನಾಂಕ 03/03/2022 ರಂದು ಬೆಳಿಗ್ಗೆ 08:45 ಗಂಟೆಗೆ ಬೆಳಪು ಗ್ರಾಮದ ಬೆಳಪು ಸರ್ಕಲ್‌ನ ಸ್ವಲ್ಪ ಮುಂದೆ ಹಾದು ಹೋಗಿರುವ ಸಾರ್ವಜನಿಕ ರಸ್ತೆಯಲ್ಲಿ ಆರೋಪಿ ರೆಹಮ್‌‌ತುಲ್ಲಾ U.K KA-20-EW-4080 ನೇ ಸೂಜುಕಿ ಎಕ್ಸೆಸ್‌ದ್ವಿಚಕ್ರ ವಾಹನವನ್ನು ಬೆಳಪು ಕಡೆಯಿಂದ ಪಕೀರಣಕಟ್ಟೆ ಕಡೆಗೆ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರಾದ ಚಂದ್ರ ಮುಖಾರಿ (60), ತಂದೆ: ಮುಂಡ ಮುಖಾರಿ, ವಾಸ: ಸಾಯಿ ಕೃಪಾ, ಜವನರಕಟ್ಟೆ, ಬೆಳಪು ಅಂಚೆ ಮತ್ತು ಗ್ರಾಮ, ಕಾಪು ತಾಲೂಕು, ಉಡುಪಿ ಜಿಲ್ಲೆ ಇವರು ರಸ್ತೆ ದಾಟಲು ನಿಂತುಕೊಂಡಿದ್ದವರಿಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ರಸ್ತೆಗೆ ಬಿದ್ದಿದ್ದು, ಹಿಂಬದಿ ತಲೆಗೆ ರಕ್ತ ಗಾಯ ಮತ್ತು ಎಡಕಾಲಿನ ಪಾದದ ಹಿಂಬದಿ ತೀವ್ರ ಸ್ವರೂಪದ ಮೂಳೆ ಮುರಿತದ ಗಾಯವಾಗಿರುತ್ತದೆ. ಈ ಬಗ್ಗೆ ಶಿರ್ವಾ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 11/2022, ಕಲಂ: 279,  338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಬೈಂದೂರು: ದಿನಾಂಕ 26/02/2022 ರಂದು ಪಿರ್ಯಾದಿದಾರರಾದ ಪದ್ಮ  ಮೊಗೇರಾ (40), ಗಂಡ: ರಾಮ ಮೊಗೇರಾ, ವಾಸ: ಕನ್ನನ ಮನೆ , ಅಳ್ವೆ ಗದ್ದೆ  ಶಿರೂರು ಗ್ರಾಮ, ಬೈಂದೂರು ತಾಲೂಕು ಇವರ ಸ್ನೇಹಿತೆ ಲಕ್ಷ್ಮೀ (53) ರವರು ಪಿರ್ಯಾದುದಾರರ ಮನೆಗೆ ಬಂದು ರಾತ್ರಿ ಉಳಕೊಂಡು ದಿನಾಂಕ 27/02/2022 ರಂದು ಬೆಳಿಗ್ಗೆ 07:45 ಗಂಟೆಗೆ ಮನೆಗೆ ಹೋಗುವುದಾಗಿ ಹೇಳಿದವರನ್ನು ಪಿರ್ಯದಿದಾರರು ಅವರ ಪರಿಚಯದವರಾದ ಲೋಕೇಶ್ ಮೊಗೇರಾರವರಲ್ಲಿ ಶಿರೂರು ಟೋಲ್ ಗೇಟ್ ಬಳಿ ಬಿಡುವಂತೆ ಹೇಳಿದ್ದು ಲೋಕೇಶ್ ರವರು ಲಕ್ಷ್ಮೀ ರವರನ್ನು ಅವರ KA-20-EB-9947 ನೇ ಮೋಟಾರು  ಸೈಕಲ್ ನಲ್ಲಿ  ಸಹ ಸವಾರಳಾಗಿ ಕುಳ್ಳಿರಿಸಿಕೊಂಡು  ಅತೀ ವೇಗ ಹಾಗೂ ಅಜಾಗರೂಕತೆಯಿಂದ ಮೋಟಾರು ಸೈಕಲ್ ನ್ನು ಚಲಾಯಿಸಿಕೊಂಡು  ಶಿರೂರು ಗ್ರಾಮದ ಅಳ್ವೆಗದ್ದೆ ರಸ್ತೆಯಲ್ಲಿ ಹೋಗುತ್ತಿರುವಾಗ ನಾಯಿಯೊಂದು ಅಡ್ಡ ಓಡಿ ಬಂದ ಕಾರಣ ಲೋಕೇಶ್ ರವರು ನಾಯಿಯನ್ನು ತಪ್ಪಿಸುವ ಸಲುವಾಗಿ  ಮೋಟಾರು ಸೈಕಲ್ ಗೆ ಒಮ್ಮೇಲೆ ಬ್ರೇಕ್  ಹಾಕಿದಾಗ ಮೋಟಾರು ಸೈಕಲ್ ಹಿಂಬದಿ ಸವಾರರಾದ ಲಕ್ಷ್ಮೀ ರವರು  ಬೈಕ್ ನಿಂದ ಜಾರಿ ಕೆಳಗೆ ಬಿದ್ದ ಪರಿಣಾಮ ಲಕ್ಷ್ಮೀ ರವರಿಗೆ ತಲೆಯ ಹಿಂಬದಿಗೆ ರಕ್ತಗಾಯವಾಗಿ  ಪ್ರಜ್ಞಾಹೀನ   ಸ್ಥಿತಿಯಲ್ಲಿದ್ದವರನ್ನು  ಪಿರ್ಯಾದಿದಾರರು ಹಾಗೂ ಮೋಟಾರು ಸೈಕಲ್ ಸವಾರ  ಲೋಕೇಶ್ ರವರು ಚಿಕಿತ್ಸೆ  ಬಗ್ಗೆ  ಬೈಂದೂರು  ಸರಕಾರಿ ಆಸ್ಪತ್ರೆಗೆ ಕರೆದುಕೊಂಡು  ಬಂದಲ್ಲಿವೈದ್ಯರು ಪರಿಕ್ಷೀಸಿ ಪ್ರಥಮ ಚಿಕಿತ್ಸೆನೀಡಿ  ಹೆಚ್ಚಿನ ಚಿಕಿತ್ಸೆ ಬಗ್ಗೆ ಮಣಿಪಾಲಕ್ಕೆ ಕರೆದುಕೊಂಡು ಹೋಗುವಂತೆ ತಿಳಿಸಿದ  ಮೇರೆಗೆ  ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಗೆ  ಅಂಬುಲೆನ್ಸ್  ನಲ್ಲಿ ಕರೆದುಕೊಂಡು ಬಂದಲ್ಲಿ ವೈದ್ಯರು ಪರೀಕ್ಷಿಸಿ ಒಳರೋಗಿಯಾಗಿ ದಾಖಲಿಸಿಕೊಂಡಿರುತ್ತಾರೆ . ಪಿರ್ಯಾದುದಾರರು ಗಾಯಾಳುವಿನ ಆರೈಕೆಯಲ್ಲಿದ್ದು ಈ ವರೆಗೂ  ಠಾಣೆಯಲ್ಲಿ ಪ್ರಕರಣ ದಾಖಲಾಗದ ವಿಚಾರ ತಿಳಿದು ದಿನಾಂಕ 03/03/2022 ರಂದು ಠಾಣೆಗೆ ಬಂದು ದೂರು ನೀಡಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 54/2022 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಮಲ್ಪೆ: ಪಿರ್ಯಾದಿದಾರರಾದ ಬಸಮ್ಮ (32), ಗಂಡ: ಮಹೇಶ ಗೌಡ, ಖಾಯಂ ವಿಳಾಸ:#130,ವಾರ್ಡ್‌, ಮರಿಗೋನಾಳ ಗ್ರಾಮ, ಕುಷ್ಠಗಿ ತಾಲೂಕು, ಕೊಪ್ಪಳ ಜಿಲ್ಲೆ , ಹಾಲಿ ವಾಸ: ಕೆ ಸೀತಾರಾಮ ಶೆಟ್ಟಿಯವರ ಬಾಡಿಗೆ ಮನೆ, ಅಮ್ಮ ಲೇ ಔಟ್‌, ಕನ್ನರ್ಪಾಡಿ, ಕಡೆಕಾರು ಇವರ  ಗಂಡ ಮಹೇಶ ಗೌಡ (47) ರವರು ಮಧ್ಯಪಾನ ಸೇವಿಸುವ ಚಟವನ್ನು ಹೊಂದಿದ್ದು, ಪಿರ್ಯಾದಿದಾರರು ಬೆಳಿಗ್ಗೆ 11:10 ಗಂಟೆಗೆ ಮನೆಯಿಂದ ಕೆಲಸಕ್ಕೆ ಹೋಗುವ ಸಮಯ ಅವರ ಗಂಡ ಮನೆಯಲ್ಲಿ ಟಿ.ವಿ ನೋಡುತ್ತಿದ್ದು, ಬಳಿಕ ಕೆಲಸ ಮುಗಿಸಿ ವಾಪಾಸು ಮಧ್ಯಾಹ್ನ 2:00 ಗಂಟೆಗೆ ಮನೆಗೆ ಪಿರ್ಯಾದಿದಾರರು ಬಂದಾಗ ಮನೆಯ ಒಳಗಿನಿಂದ ಬಾಗಿಲಿಗೆ ಚಿಲಕ ಹಾಕಿದ್ದು, ಪಿರ್ಯಾದಿದಾರರು ಎಷ್ಟೇ ಕೂಗಿ ಕರೆದರೂ ಗಂಡ ಬಾಗಿಲು ತೆರೆಯದೆ ಇದ್ದು, ಸಂಜೆ 4:30 ಗಂಟೆಗೆ ಮಕ್ಕಳು ಶಾಲೆಯಿಂದ ಬಂದ ಬಳಿಕ ಮನೆಯ ಹಿಂದಿನ ಕಿಟಕಿಯಿಂದ ನೋಡಿದಾಗ ಪಿರ್ಯಾದಿದಾರರ ಗಂಡ ಮನೆಯ ಫ್ಯಾನಿಗೆ ಸೀರೆಯನ್ನು ಕಟ್ಟಿ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ     10 /2022  ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 

ಇತರ ಪ್ರಕರಣ

  • ಬೈಂದೂರು: ದಿನಾಂಕ 02/03/2022 ರಂದು ರಾತ್ರಿ ಪವನ್ ನಾಯಕ, ಪೊಲೀಸ್ ಉಪನಿರೀಕ್ಷಕರು ( ಕಾ&ಸು), ಬೈಂದೂರು ಪೊಲೀಸ್ ಠಾಣೆ ಇವರು ಸಿಬ್ಬಂದಿಗಳೊಂದಿಗೆ ರೌಂಡ್ಸ್  ಕರ್ತವ್ಯಕ್ಕೆ ತೆರಳಿ ರೌಂಡ್ಸ್ ಕರ್ತವ್ಯದಲ್ಲಿ ಇರುವಾಗ ನಾವುಂದ ಕಡೆಯಲ್ಲಿ ಗಸ್ತು ಕರ್ತವ್ಯದಲ್ಲಿದ್ದ ಸಿಬ್ಬಂದಿ ಗಳು ಕರೆ ಮಾಡಿ ನಾವುಂದ ಬಳಿ ಒಂದು ಮಹೀಂದ್ರ ಬೊಲೆರೋ ಪಿಕಪ್ ಗೂಡ್ಸ್ ವಾಹನ ನಂಬ್ರ KA-20-D-2661, ಟವೇರಾ ಕಾರು ನಂಬ್ರ KA-19-AA-6109 ರಲ್ಲಿ ಬಂದ ವ್ಯಕ್ತಿಗಳು ವಾಹನವನ್ನು ಅಡ್ಡನಿಲ್ಲಿಸಿಕೊಂಡು ರಸ್ತೆಯ ಬಳಿಯಲ್ಲಿ ಮಲಗಿದ್ದ ಜಾನವಾರುಗಳನ್ನು ಮಹೀಂದ್ರಾ ಬೊಲೆರೋ ಪಿಕಪ್ ವಾಹನಕ್ಕೆ ತುಂಬಿಸಿಕೊಂಡು ಬೈಂದೂರು ಕಡೆಗೆ ಹೋಗಿರುವುದಾಗಿ ಮಾಹಿತಿ ನೀಡಿದಂತೆ ಒತ್ತಿನೆಣೆಯ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಕಾದುಕೊಂಡಿರುವಾಗ ಬೆಳಗಿನ ಸಮಯ  ಕುಂದಾಫುರ ಕಡೆಯಿಂದ ಒಂದು ಮಹೀಂದ್ರ ಬೊಲೆರೋ ಪಿಕಪ್ ಗೂಡ್ಸ್ ವಾಹನ ಹಾಗೂ ಬಂದಿದ್ದು ಅದನ್ನು ನಿಲ್ಲಿಸಲು ಸೂಚನೆ ನೀಡಿದಾಗ್ಯೂ ಅದರ ಚಾಲಕ ವಾಹನವನ್ನು ನಿಲ್ಲಿಸದೇ ಭಟ್ಕಳ ಕಡೆಗೆ ಚಲಾಯಿಸಿಕೊಂಡು ಪರಾರಿಯಾಗಿದ್ದು,  ವಾಹನವನ್ನು ನಿಲ್ಲಿಸುವಂತೆ ಹೈವೇ ಗಸ್ತು ವಾಹನದಲ್ಲಿದ್ದ ಶಿರೂರು ಚೆಕ್ ಪೊಸ್ಟ್ ಕರ್ತವ್ಯದಲ್ಲಿದ್ದ  ಸಿಬ್ಬಂದಿಯವರಿಗೆ ಆದೇಶಿಸಿದ್ದು ಪಿಕಪ್ ಗೂಡ್ಸ್ ವಾಹನವನ್ನು ಬೆನ್ನಟ್ಟಿ ಹೋದಾಗ ಬೆಳಿಗ್ಗೆ 5:50 ಗಂಟೆಗೆ ಅದರ ಚಾಲಕ ಟೋಲ್ ಗೇಟ್ ನಲ್ಲಿ ನಿಲ್ಲಿಸದೇ ಟೋಲ್ ಗೇಟ್ ನ ವಾಹನ ತಡೆಯುವ ಅಡ್ಡಕಂಬಕ್ಕೆ ಢಿಕ್ಕಿ ಹೊಡೆಯಿಸಿಕೊಂಡು ನಂತರ ಶಿರೂರು ಚೆಕ್ ಪೋಸ್ಟ್ ನಲ್ಲಿದ್ದ ಸಿಬ್ಬಂದಿಗಳು ಚೆಕ್ ಪೋಸ್ಟ್ ನಲ್ಲಿ ಬ್ಯಾರಿಕೇಡ್ ಗಳಿಗೆ ಢಿಕ್ಕಿ ಹೊಡೆದು ಪರಾರಿ ಆಗಿರುತ್ತಾರೆ. ನಂತರ ಟವೇರಾ ಕಾರಿನ ಪತ್ತೆಯ ಬಗ್ಗೆ ಪ್ರಯತ್ನಿಸಿ ಕಾದುಕೊಂಡಿರುವಾಗ ಟೋಲ್ಗೇಟ್ ನಿಂದ ಸ್ವಲ್ಪ ಹಿಂದೆಯೇ ಟವೇರಾ ಕಾರು ನಂಬ್ರ KA-19-AA-6109 ನ್ನು ಅದರ ಚಾಲಕ ರಸ್ತೆಯ ಬದಿಗೆ ನಿಲ್ಲಿಸಿ ಪರಾರಿ ಆಗಿರುತ್ತಾರೆ. ಆರೋಪಿತರು ನಾವುಂದದಲ್ಲಿ ರಸ್ತೆಯ ಬದಿಯಲ್ಲಿ ಮಲಗಿದ್ದ ಜಾನುವಾರುಗಳನ್ನು  ಅಕ್ರಮವಾಗಿ  ವಧೆ ಮಾಡಿ ಮಾಂಸ ಮಾಡುವ ಉದ್ದೇಶದಿಂದ ಅಕ್ರಮವಾಗಿ ಪರವಾನಿಗೆ ಇಲ್ಲದೇ ಸಾಗಾಟ ಮಾಡಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 53/2022 ಕಲಂ: 4,5,7,12  ಕರ್ನಾಟಕ ಗೋ  ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಆಧಿನಿಯಮ 2020 & 11(1) (ಡಿ) ಪ್ರಾಣಿಹಿಂಸೆ ನಿಷೇಧ ಕಾಯಿದೆ.ಮತ್ತು ಕಲಂ 66,192(ಎ) ಐ ಎಮ್ ವಿ ಆಕ್ಟ್  ರಂತೆ ಪ್ರಕರಣ ದಾಖಲಾಗಿರುತ್ತದೆ.   

ಇತ್ತೀಚಿನ ನವೀಕರಣ​ : 04-03-2022 10:22 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080