ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕಾರ್ಕಳ: ದಿನಾಂಕ 03/03/2022 ರಂದು ಬೆಳಗ್ಗೆ 10:30 ಗಂಟೆಗೆ ಕಾರ್ಕಳ ತಾಲೂಕು ಬೋಳ ಗ್ರಾಮದ ಇಟಮೇರಿ ಎಂಬಲ್ಲಿ ಹಾದು ಹೋಗುವ ಕೆದಿಂಜೆ-ಬೋಳ ಪದವು ಸಾರ್ವಜನಿಕ ರಸ್ತೆಯಲ್ಲಿ ರವಿ ಶೆಟ್ಟಿ ದ್ವಿಚಕ್ರ ವಾಹನ ನಂಬ್ರ KA-20-EN-6807 ನೇಯದರಲ್ಲಿ ಹರಿಣಾಕ್ಷಿ ಎಂಬುವವರನ್ನು ಸಹಸವಾರೆಯನ್ನಾಗಿ ಕುಳ್ಳಿರಿಸಿಕೊಂಡು ಕೆದಿಂಜೆ ಕಡೆಯಿಂದ ಬೋಳ ಪದವು ಕಡೆಗೆ ಅತಿವೇಗ ಹಾಗೂ ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ಹೋಗುವಾಗ ನಿರ್ಲಕ್ಷತನದಿಂದ ಒಮ್ಮೆಲೇ  ಬ್ರೇಕ್ ಅದುಮಿದ ಕಾರಣ ಸಹಸವಾರೆ ಹರಿಣಾಕ್ಷಿಯವರು ರಸ್ತೆಗೆ ಬಿದ್ದ ಪರಿಣಾಮ ಅವರ ತಲೆಗೆ ರಕ್ತಗಾಯವಾಗಿರುತ್ತದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 27/2022 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾಪು: ಪಿರ್ಯಾದಿದಾರರಾದ ವಿಜಯ (52), ತಂದೆ: ಕರಿಯ ಹೊಸಮನೆ, ಜೂನಿಯ್ರ್‌ಕಾಲೇಜಿನ ಹತ್ತಿರ ಪೊಲಿಪು ಪಡು ಗ್ರಾಮ  ಕಾಫು ತಾಲೂಕು ಇವರು ದಿನಾಂಕ 03/03/2022 ರಂದು ಸಂಜೆ 7:00 ಗಂಟೆಗೆ ಕಾಫು ಪಡು ಗ್ರಾಮದ ರಾಷ್ಟ್ರೀಯ ಹೆದ್ದಾರಿ 66 ಸರ್ವಿಸ್ ರಸ್ತೆಯ ಕಾಫು ಅಯ್ಯಂಗಾರ್ ಬೇಕರಿ ಬಳಿ ನಿಂತುಕೊಂಡಿರುವಾಗ KA-20-EH-7924 ನೇ ಮೋಟಾರು ಸೈಕಲ್ ಸವಾರ ತನ್ನ ಮೋಟಾರು ಸೈಕಲನ್ನು ಸರ್ವಿಸ್ ರಸ್ತೆಯಲ್ಲಿ ಉಡುಪಿ ಕಡೆಯಿಂದ ಅತೀವೇಗ ಹಾಗೂ ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ತೀರಾ ಎಡಬದಿಗೆ ಬಂದು ಪಿರ್ಯಾದಿದಾರರಿಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ರಸ್ತೆಗೆ ಬಿದ್ದು ಪಿರ್ಯಾದಿದಾರರ ಮುಖ ಹಾಗೂ ಮೂಗಿಗೆ, ದವಡೆಗೆ ರಕ್ತ ಗಾಯವಾಗಿದ್ದು  ಚಿಕಿತ್ಸೆಯ ಬಗ್ಗೆ ಉಡುಪಿ ಹೈಟೆಕ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 22/2022 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾಪು: ದಿನಾಂಕ 04/03/2022 ರಂದು ಬೆಳಿಗ್ಗೆ 09:30 ಗಂಟೆಗೆ ಪಿರ್ಯಾದಿದಾರರಾದ ಜಗದೀಶ್ (36), ತಂದೆ:ಶೇಖರ್ ಕೋಟ್ಯಾನ್,  ವಾಸ:ಬ್ರಾಹ್ಮರಿ ದಂಡತೀರ್ಥ ಶಾಲೆ ಬಳಿ ಉಳಿಯಾರಗೋಳಿ ಗ್ರಾಮ ಕಾಪು ತಾಲ್ಲೂಕು ಉಡುಪಿ ಜಿಲ್ಲೆ ಇವರು ಮನೆಯಲ್ಲಿರುವಾಗ   ಪರಿಚಯದರೊಬ್ಬರು ಅವರಿಗೆ  ಫೋನ್ ಮಾಡಿ ನಿಮ್ಮ ತಮ್ಮ ಸುನಿಲ್ ಮೋಟಾರ್ ಸೈಕಲ್ ನಲ್ಲಿ ಇನ್ನಂಜೆಯಿಂದ ಬಂಟಕಲ್ಲು ಕಡೆಗೆ ಹೋಗುತ್ತಿರುವಾಗ ಕಲ್ಲುಗುಡ್ಡೆ ಎಂಬಲ್ಲಿ ರಸ್ತೆ ಅಪಘಾತವಾಗಿರುವುದಾಗಿ ತಿಳಿಸಿದ್ದು ಕೂಡಲೇ ಪಿರ್ಯಾದಿದಾರರು ಸ್ಥಳಕ್ಕೆ ಹೋಗಿ ನೋಡಿದ್ದಲ್ಲಿ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಪಿರ್ಯಾದಿದಾರರ ತಮ್ಮ ಸುನಿಲ್ ನನ್ನು ಅಲ್ಲಿನ ಸ್ಥಳೀಯರು ಚಿಕಿತ್ಸೆ ಬಗ್ಗೆ ಉಡುಪಿ ಆದರ್ಶ ಆಸ್ಪತ್ರೆಗೆ ಕರೆದುಕೊಂಡ ಹೋಗಿದ್ದು, ಪಿರ್ಯಾದಿದಾರರು ಉಡುಪಿ ಆದರ್ಶ ಆಸ್ಪತ್ರೆಗೆ ಹೋದಲ್ಲಿ ಅವರ ತಮ್ಮ ಪಿರ್ಯಾದಿದಾರರ ತಮ್ಮ ಸುನಿಲ್ ಮೃತಪಟ್ಟಿರುವ ವಿಚಾರ ಅವರಿಗೆ ತಿಳಿದು ಬಂದಿದ್ದು, ಈ ದಿನ ಬೆಳಿಗ್ಗೆ 09:20 ಗಂಟೆ ಸುಮಾರಿಗೆ ಸುನಿಲ್ ರವರು ತನ್ನ ಮೋಟಾರ್ ಸೈಕಲ್ KA-20-U-6204 ನೇದರಲ್ಲಿ  ಇನ್ನಂಜೆ ಬಂಟಕಲ್ ರಸ್ತೆಯಲ್ಲಿ ಇನ್ನಂಜೆ ಕಡೆಯಿಂದ ಬಂಟಕಲ್ ಕಡೆಗೆ ಹೋಗುತ್ತಾ ಕಲ್ಲುಗುಡ್ಡೆ ಎಂಬಲ್ಲಿ ತಲುಪುತ್ತಿದ್ದಂತೆ ಎದುರಿನಿಂದ ಬಂಟಕಲ್ ಕಡೆಯಿಂದ ಇನ್ನಂಜೆ ಕಡೆಗೆ KA-20-C- 3871 ನೇ ಟಿಪ್ಪರ್ ಲಾರಿ ಚಾಲಕ  ತನ್ನ ಟಿಪ್ಪರ್ ಲಾರಿಯನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ತೀರ ಬಲಬದಿಗೆ ಚಲಾಯಿಸಿಕೊಂಡು ಬಂದು ಸುನಿಲ್ ರವರು ಸವಾರಿ ಮಾಡಿಕೊಂಡು ಹೋಗುತ್ತಿದ್ದ ಮೋಟಾರ್ ಸೈಕಲ್ ಗೆ ಢಿಕ್ಕಿ ಹೊಡೆದ ಪರಿಣಾಮ ಸುನಿಲ್ ಮೋಟಾರ್ ಸೈಕಲ್ ಸಮೇತಾ ರಸ್ತೆಗೆ ಬಿದ್ದು, ತೀವ್ರ ಗಾಯಗೊಂಡವರು  10:00 ಗಂಟೆಗೆ ಮೃತಪಟ್ಟಿರುವುಧಾಗಿದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 23/2022 ಕಲಂ: 279, 304(A) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಬ್ರಹ್ಮಾವರ: ದಿನಾಂಕ 02/03/2022 ರಂದು ರಾತ್ರಿ ಪಿರ್ಯಾದಿದಾರರಾದ ಸುನಿಲ್ (33), ತಂದೆ: ಬಾಬಣ್ಣ ನಾಯಕ್, ವಾಸ: ಶ್ರೀ ದೇವಿ ಕೃಪಾ, ಕುರ್ಪಾಡಿ, ಹೊಸೂರು ಗ್ರಾಮ, ಕರ್ಜೆ ಅಂಚೆ, ಬ್ರಹ್ಮಾವರ ತಾಲೂಕು ಇವರು ಕುಂದಾಪುರದಲ್ಲಿ ತನ್ನ ಕೆಲಸ ಮುಗಿಸಿಕೊಂಡು ಅವರ ಮೋಟಾರ್‌ಸೈಕಲ್‌ನಲ್ಲಿ ವಾಪಾಸ್ಸು ಕುರ್ಪಾಡಿಯಲ್ಲಿರುವ ಅವರ ಮನೆ ಕಡೆಗೆ ಹೊರಟು ಬ್ರಹ್ಮಾವರ–ಹೆಬ್ರಿ ಮುಖ್ಯ ರಸ್ತೆಯಲ್ಲಿ ಸವಾರಿ ಮಾಡಿಕೊಂಡು ಹೋಗುತ್ತಿರುವಾಗ ದಿನಾಂಕ 03/03/2022 ರ ಬೆಳಗ್ಗಿನ ಜಾವ 01:30 ಗಂಟೆಗೆ ಚೇರ್ಕಾಡಿ ಗ್ರಾಮದ ನೂಜಿನ ಬೈಲು, ಲಕ್ಷ್ಮೀ ಕೋಳಿ ಅಂಗಡಿ ಎದುರು  ಮುಖ್ಯ ರಸ್ತೆಯ ಉತ್ತರ ಅಂಚಿನಲ್ಲಿ KA-20-X-4336 ನೇ ನಂಬ್ರದ ಮೋಟಾರ್ ಸೈಕಲ್ ಹಾಗೂ ಅದರ ಸವಾರ ಶರತ್ ಕುಮಾರ್ ಎಂಬುವವರು ಬಿದ್ದುಕೊಂಡಿದ್ದು, ಅವರ ಕಿವಿ, ಮೂಗಿ ನಲ್ಲಿ ರಕ್ತ ಬರುತ್ತಿದ್ದು ಎದುರುಸಿರು ಬಿಡುತ್ತಿದ್ದರು. ಮಾತನಾಡುತ್ತಿರಲಿಲ್ಲ. ಗಾಯಗೊಂಡ ಶರತ್ ಕುಮಾರ್ ರವರನ್ನು ಅವರ ಸಂಬಂಧಿಯು ಒಂದು ಕಾರಿನಲ್ಲಿ ಚಿಕಿತ್ಸೆ ಬಗ್ಗೆ ಬ್ರಹ್ಮಾವರ ಮಹೇಶ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ನಂತ್ರ ಅಲ್ಲಿಂದ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಣಿಪಾಲದ ಕೆಎಮ್‌ಸಿ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 34/2022 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 

ಅಸ್ವಾಭಾವಿಕ ಮರಣ ಪ್ರಕರಣ

  • ಮಣಿಪಾಲ: ಪಿರ್ಯಾದಿದಾರರಾದ ಬಾಲಗಂಗಾಧರ್ ಲಾಗ್ವನಕಾರ್ (68), ತಂದೆ: ಪಾಂಡುರಂಗ ಶಾಸ್ತ್ರೀ , ವಾಸ: ಲಕ್ಷ್ಮೀ ಕೃಪಾ, ಎಡ್ಮೆಮಾರು ಮನೆ, ಅಂಚೆ ಪಟ್ಲ, ವಯಾ ಪರ್ಕಳ, ಉಡುಪಿ ತಾಲೂಕು ಮತ್ತು ಜಿಲ್ಲೆ ಇವರ  ಮಗ ಜೀವನ್ ಲಾಗ್ವನಕಾರ್ ದಿನಾಂಕ  01/03/2022 ರಂದು ರಾತ್ರಿ 10:30 ಗಂಟೆಗೆ ತೀವ್ರ ವಾಂತಿ ಹಾಗೂ ಭೇದಿಯಿಂದ ಸುಸ್ತಾಗಿದ್ದವರನ್ನು ಮಣಿಪಾಲ KMC ಆಸ್ಪತ್ರೆಗೆ ದಾಖಲಿಸಿದ್ದು, ICU ನಲ್ಲಿ  ಚಿಕಿತ್ಸೆ ಪಡೆಯುತ್ತಿದ್ದವರು ದಿನಾಂಕ 04/03/2022  ರಂದು ಮುಂಜಾನೆ 12:02 ಗಂಟೆಗೆ ಚಿಕಿತ್ಸೆಗೆ ಸ್ಪಂದಿಸದೆ ಮೃತ ಪಟ್ಟಿರುತ್ತಾರೆ, ಮೃತರು Food Poison ಅಥವಾ ಇತರೇ ಯಾವುದೋ ಖಾಯಿಲೆಯಿಂದ ಮೃತಪಟ್ಟಿರಬಹುದಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆ ಯುಡಿಅರ್ ಕ್ರಮಾಂಕ 08/2022 ಕಲಂ: 174  ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 04-03-2022 06:36 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080