ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕಾರ್ಕಳ: ದಿನಾಂಕ 03/03/2021 ರಂದು 09:30 ಗಂಟೆಗೆ ಕಾರ್ಕಳ ತಾಲೂಕು ಮಾಳ ಗ್ರಾಮದ ಮಾಳ ಅಬ್ಬಾಸ್ ಕಟ್ಟಿಂಗ್ ಎಂಬಲ್ಲಿ ಮಾಳ ಘಾಟಿನಲ್ಲಿ ಹಾದುಹೋಗಿರುವ ಬಜಗೋಳಿ-ಶೃಗೇರಿ ರಾಷ್ಟ್ರಿಯ ಹೆದ್ದಾರಿ ರಸ್ತೆಯಲ್ಲಿ KA-21-B-6674 ನೇ ನಂಬ್ರದ ಟಿಪ್ಪರ್ ಚಾಲಕನು ತನ್ನ ಟಿಪ್ಪರ್ ನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಮಾಳ ಕಡೆಯಿಂದ ಶ್ರಂಗೇರಿ ಕಡೆಗೆ ಹೋಗುತ್ತಿದ್ದ KA-20-N-4341 ನೇ ನಂಬ್ರದ ಮಾರುತಿ ಓಮ್ನಿ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿ ಇದ್ದ ಪಿರ್ಯಾದಿದಾರರಿಗೆ ಹಾಗೂ ಮಗಳು ಮುಬೀನಾ, ಮೊಮ್ಮಗ ಮಹಮ್ಮದ್ ಮಹೀನ್ ಗೆ ಸಾಮಾನ್ಯ ಸ್ವರೂಪದ ಗಾಯವಾಗಿದ್ದು ಕಾರಿನ ಚಾಲಕ  ಅಜ್ಮಾಲ್ ನ ಬಲಕಾಲಿನ ಮೊಣಗಂಟಿನ ಬಳಿ ತೀವ್ರ ಸ್ವರೂಪದ ಗಾಯವಾಗಿದ್ದು, ಬಲಕೈಗೆ ರಕ್ತ ಗಾಯವಾಗಿದ್ದು ಚಿಕಿತ್ಸೆ ಬಗ್ಗೆ ಕಾರ್ಕಳ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಗಾಯಾಳುಗಳಿಗೆ ಚಿಕಿತ್ಸೆ ನೀಡಿ ಕಾರಿನ ಚಾಲಕನನ್ನು ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರು ಐಲ್ಯಾಂಡ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಒಳರೋಗಿಯಾಗಿ ದಾಖಲು ಮಾಡಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 27/2021 ಕಲಂ: 279, 337, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕುಂದಾಪುರ: ದಿನಾಂಕ 02/03/2021 ರಂದು ಸಂಜೆ 5:30 ಗಂಟೆಗೆ ಕುಂದಾಪುರ ತಾಲೂಕಿನ ಕಸಬಾ ಗ್ರಾಮದ  KSRTC ಬಸ್‌‌‌ಸ್ಟ್ಯಾಂಡ್‌ ಬಳಿ NH 66 ರಸ್ತೆಯಲ್ಲಿ ಆಪಾದಿತ ಸಂದೀಪ ಎಂಬುವವರು KA-20-AA-5993ನೇ ಬಸ್‌‌ನ್ನು ಮುಳ್ಳಿಕಟ್ಟೆ ಕಡೆಯಿಂದ ಕುಂದಾಪುರ ಕಡೆಗೆ ಚಾಲನೆ ಮಾಡಿಕೊಂಡು ಬಂದು ಪ್ರಯಾಣಿಕರಿಗೆ ಇಳಿಯಲು ನಿಲ್ಲಿಸಿದ ಸಮಯ ಪಿರ್ಯಾದಿದಾರರಾದ ಬಸಪ್ಪ (41),  ತಂದೆ :  ಭೀಮಪ್ಪ, ವಾಸ:   ಹನುಮಂತ ದೇವಸ್ಥಾನದ ಹತ್ತಿರ, ನರನೂರು  ಗ್ರಾಮ  ಕೆರೂರು ಅಂಚೆ, ಬಾದಾಮಿ ತಾಲೂಕು ಬಾಗಲಕೋಟೆ ಜಿಲ್ಲೆ ಇವರ ಜೊತೆಯಲ್ಲಿ ಅವರ  ಹೆಂಡತಿ ಶಾಂತವ್ವ ಬಸ್ಸಿಂದ ಇಳಿಯುತ್ತಿರುವ ಸಮಯ ಆಪಾದಿತ ಸಂದೀಪ ಬಸ್ಸ‌ನ್ನು ಒಮ್ಮೇಲೆ ಅತೀವೇಗ  ಹಾಗೂ  ನಿರ್ಲಕ್ಷ್ಯತನದಿಂದ ಮುಂದಕ್ಕೆ ಚಲಾಯಿಸಿದ ಕಾರಣ ಶಾಂತವ್ವ ಬಸ್ಸಿನ ಡೋರ್‌ನಿಂದ  ಕೆಳಗೆ ರಸ್ತೆಗೆ  ಬಿದ್ದು, ಅವರ   ತಲೆಗೆ ರಕ್ತಗಾಯವಾಗಿ  ಮೂಗು, ಕಿವಿ ಹಾಗೂ  ಬಾಯಿಂದ  ರಕ್ತ ಬಂದಿದ್ದು,  ಹಾಗೂ ಬಲಕೈಗೆ ತರಚಿದ ಗಾಯವಾಗಿದ್ದು, ಗಾಯಾಳು ಕುಂದಾಪುರ  ಸರಕಾರಿ ಆಸ್ಪತ್ರೆ ಹಾಗೂ  ಉಡುಪಿ ಜಿಲ್ಲಾ ಸರಕಾರಿ  ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆ ಬಗ್ಗೆ  ಮಂಗಳೂರು  ವೆನ್ಲಾಕ್‌  ಆಸ್ಪತ್ರೆಯಲ್ಲಿ  ದಾಖಲಾಗಿರುತ್ತಾರೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 34/2021 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಕಾರ್ಕಳ: ಕಾರ್ಕಳ ತಾಲೂಕಿನ ಎರ್ಲಪಾಡಿ ಗ್ರಾಮದ ಗೋವಿಂದೂರು ಎಂಬಲ್ಲಿರುವ ಶ್ರೀರಾಮಕೃಷ್ಣ ಆಶ್ರಮದಲ್ಲಿ ವಾಸ್ತವ್ಯ ಇದ್ದ ಬೆಂಗಳೂರು ಬಸವನಗುಡಿ ನಿವಾಸಿ ನಿವೃತ್ತ ಇಸ್ರೋ ವಿಜ್ಞಾನಿ ರತ್ನಾಕರ ಎಸ್.ಸಿ (63) ಇವರು  ದಿನಾಂಕ 03/03/2021 ರಂದು ಬೆಳಿಗ್ಗೆ 10:40 ಗಂಟೆಗೆ ಆಶ್ರಮದ ಬದಿಯಲ್ಲಿರುವ ಸ್ವರ್ಣ ನದಿಗೆ ಸ್ನಾನಕ್ಕೆ ಹೋದವರು ಆಕಸ್ಮಿಕವಾಗಿ ಮುಳುಗಿ ಮೃತಪಟ್ಟಿದ್ದು ಅವರ ಮೃತ ದೇಹ ಸಂಜೆ 4:00 ಗಂಟೆಗೆ ಪತ್ತೆಯಾಗಿರುತ್ತದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 05/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕುಂದಾಪುರ: ದಿನಾಂಕ 03/03/2021 ರಂದು ಪಿರ್ಯಾದಿದಾರರಾದ ಸತೀಶ ಮಡಿವಾಳ (32), ತಂದೆ: ನಾರಾಯಣ ಮಡಿವಾಳ, ವಾಸ: ಕೆರೆ ಜೆಡ್ಡು ಕೈಲ್ ಕೆರೆ ಜಪ್ತಿ ಗ್ರಾಮ ಇವರ ಅಕ್ಕ ಶಾರಾದ ರವರ ಗಂಡ ಮಂಜುನಾಥ ಮಡಿವಾಳ(42) ಎಂಬುವವರು ಜಪ್ತಿ ಗ್ರಾಮದ 5 ಸೆಂಟ್ಸ್ ಜನತಾ ಕಾಲೋನಿಯ ಲಕ್ಷ್ಮಣ ಮೊಗವೀರ ರವರಿಗೆ ಸೇರಿದ ಪಾಳು ಬಿದ್ದ ಮನೆಯಲ್ಲಿ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 05/2021 ಕಲಂ: 174  ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 

 ಕಳವು ಪ್ರಕರಣ

  • ಗಂಗೊಳ್ಳಿ: ಪಿರ್ಯಾದಿದಾರರಾದ ಶ್ರೀಮತಿ ಶೋಭಾ ಎಸ್‌ (40) ಇವರು ತ್ರಾಸಿ ಗ್ರಾಮ ಪಂಚಾಯತ್‌ನ ಪಂಚಾಯತ್‌ ಅಭಿವೃದ್ಧಿ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿಕೊಂಡಿದ್ದು ಗ್ರಾಮ ಪಂಚಾಯತ್‌‌ನಲ್ಲಿ ಪ್ರತಿದಿನ ತೆರಿಗೆಯಿಂದ ಸಂಗ್ರಹವಾಗುವ ಹಣವನ್ನು ಸಂಜೆ ಕ್ರೋಡೀಕರಿಸಿ ಮರು ದಿವಸ ಬ್ಯಾಂಕ್‌ ಖಾತೆಗೆ ಜಮೆ ಮಾಡುತ್ತಿದ್ದು ಅದರಂತೆ ದಿನಾಂಕ 02/03/2021 ರಂದು ಸಂಗ್ರಹಿಸಿದ ವಿವಿಧ ರೀತಿಯ ತೆರಿಗೆ 35,833/- ರೂಪಾಯಿ ನಗದನ್ನು ತೆರಿಗೆ ಸಂಗ್ರಹಿಸಿದ ಸಿಬ್ಬಂದಿಯವರು ಕ್ರೂಢೀಕರಿಸಿ ಕಛೇರಿಯ ಅಲ್ಮೇರಾ ಮತ್ತು ಕಪಾಟಿನಲ್ಲಿ ಇರಿಸಿ ಸಿಬ್ಬಂದಿಯವರು ಸಂಜೆ 5:45 ಗಂಟೆಗೆ ಗ್ರಾಮ ಪಂಚಾಯತ್‌ ಕಚೇರಿಗೆ ಬೀಗ ಹಾಕಿ ಮನೆಗೆ ಹೋಗಿದ್ದು ದಿನಾಂಕ 03/03/2021 ರಂದು ಬೆಳಿಗ್ಗೆ 8:45 ಗಂಟೆಗೆ ಕಛೇರಿಯ ಸಿಬ್ಬಂದಿ ಸಂದೀಪ ರವರು ಬಾಗಿಲು ತೆರೆಯಲು ಬಂದಾಗ ಕಚೇರಿಯ ಒಳಗಡೆ ಕಡತಗಳು ಹರಡಿ ಬಿದ್ದಿರುವುದನ್ನು ನೋಡಿ ಪಿರ್ಯಾದಿದಾರರಿಗೆ ಫೋನ್‌ ಕರೆ ಮಾಡಿದ್ದು ಪಿರ್ಯಾದಿದಾರರು ಹಾಗೂ ಇತರ ಸಿಬ್ಬಂದಿಯವರು ಬಂದು ಪರಿಶೀಲಿಸಿ ನೋಡಿದಾಗ ಅಧ್ಯಕ್ಷರ ಕೊಠಡಿಯ ಮೀಟಿಂಗ್‌ ಹಾಲ್‌ನಲ್ಲಿರುವ ಕಿಟಕಿಯ ಕಬ್ಬಿಣದ ಸರಳನ್ನು ಬಗ್ಗಿಸಿ ಯಾರೋ ಕಳ್ಳರು ಒಳ ಪ್ರವೇಶಿಸಿ ಕಛೇರಿಯ ಕಿಟಕಿ, ಅಲ್ಮೇರಾ, ಕಪಾಟು, ಡ್ರಾವರ್‌ಗಳನ್ನು ಜಖಂಗೊಳಿಸಿ ಕಚೇರಿಯ ಅಲ್ಮೇರಾ ಹಾಗೂ ಕಪಾಟಿನಲ್ಲಿ ಸಂಗ್ರಹಿಸಿ ಇಟ್ಟಿದ್ದ ವಿವಿಧ ರೀತಿಯ ತೆರಿಗೆ 35,833/- ರೂಪಾಯಿ ನಗದನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 24/2021 ಕಲಂ : 457, 380   ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 

ಇತ್ತೀಚಿನ ನವೀಕರಣ​ : 04-03-2021 09:55 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080