ಅಭಿಪ್ರಾಯ / ಸಲಹೆಗಳು

ಹಲ್ಲೆ ಪ್ರಕರಣ

  • ಕಾಪು: ಪಿರ್ಯಾದಿ ಗೌರೀಶ್ ಪೂಜಾರಿ ಇವರಿಗೆ ದಿನಾಂಕ 03/03/2021 ರಂದು ರಾತ್ರಿ 10:30 ಗಂಟೆಗೆ  ಆತನ ಪರಿಚಯದ ಅಭಿಷೇಕ್ ಎಂಬುವನು ಆತನ ಮೊಬೈಲ್‌‌ಗೆ ಕರೆ ಮಾಡಿ ನಾನು ಊರಿನವರಲ್ಲಿ ನನಗೆ ನೀನು ಹೊಡೆದಿರುವುದಾಗಿ ಹೇಳಿಕೊಂಡು ಬರುತ್ತಿದ್ದಿಯಾ ಎಂದು ಕೇಳಿದ್ದು ಅದಕ್ಕೆ ಪಿರ್ಯಾದಿದಾರರು ನಿನ್ನ ಬಗ್ಗೆ ಈ ವರೆಗೆ ನಾನು ಯಾರಲ್ಲಿಯೂ ಏನೂ ಹೇಳಲಿಲ್ಲ ಎಂದು ಹೇಳಿದ್ದು, ಅದಕ್ಕೆ ಆತನು ನಿನ್ನಲ್ಲಿ ನನಗೆ ಮಾತಾನಾಡಲಿಕ್ಕೆ ಇದೆ ಈಗಲೇ ನೀನು ವೀರಾಂಜನೇಯ ವ್ಯಾಯಾಮ ಶಾಲೆಯ ಬಳಿಗೆ ಬಾ ಇವತ್ತು ಬಗೆಹರಿಸುವ ಎಂದು ಬರುವಂತೆ ಕರೆದಿದ್ದು ಅದರಂತೆ ಗೆಳೆಯ ಶೃಜನ್‌‌ನ್ನು ಕರೆದುಕೊಂಡು ಪಳ್ಳಿಗುಡ್ಡೆ ವೀರಾಂಜನೆಯ ವ್ಯಾಯಾಮ ಶಾಲೆಯ ಬಳಿ ನಿಂತುಕೊಂಡಿರುವಾಗ ರಾತ್ರಿ ಸುಮಾರು 11:30 ಗಂಟೆಗೆ ಪಿರ್ಯಾದಿದಾರರನ್ನು ಅಲ್ಲಿಯೇ ಮುಂದಕ್ಕೆ ಕರೆದುಕೊಂಡು ಹೋಗಿ ಮೊದಲೇ ಆತನ ಕೈಯಲ್ಲಿ ಹಿಡಿದುಕೊಂಡಿದ್ದ ಚೂರಿಯಿಂದ ಪಿರ್ಯದಿದಾರರನ್ನು ಕೊಲ್ಲುವ ಉದ್ಧೇಶದಿಂದ ಹೊಟ್ಟೆಯ ಮಧ್ಯ ಭಾಗಕ್ಕೆ ಮತ್ತು ಹೊಟ್ಟೆಯ ಎಡಬದಿಗೆ ಚೂರಿಯಿಂದ ಇರಿದನು. ಪಿರ್ಯಾದಿದಾರರು ಜೋರಾಗಿ ಬೊಬ್ಬೆ ಹೊಡೆದಾಗ ಅಲ್ಲೇ ಇದ್ದ ಶೃಜನ್‌ನು ಬಿಡಿಸಲು ಬಂದಿದ್ದು ಆ ಸಮಯ ಶೃಜನ್‌‌‌ಗೆ ಚೂರಿಯಿಂದ ಅಭಿಷೇಕನು ಬೆನ್ನಿಗೆ ಇರಿದನು. ಇವರಿಬ್ಬರು ಬೊಬ್ಬೆ ಹೊಡೆಯುವದನ್ನು ಕೇಳಿ ರಾಹುಲ್ ಮತ್ತು ಪುನೀತ್ ಎಂಬವರು ಬರುತ್ತಿದ್ದುದನ್ನು ಕಂಡು ಅಭಿಷೇಕನು ಅವಾಚ್ಯವಾಗಿ ಬೈದು, ಈ ದಿನ ಬದುಕಿದ್ದೀರಾ ಮುಂದಕ್ಕೆ ಕೊಲ್ಲದೇ ಬಿಡುವುದಿಲ್ಲ ಎಂದು ಹೇಳಿ ಕತ್ತಲೆಯಲ್ಲಿ ಚೂರಿಯನ್ನು ಅಲ್ಲಿಯೆ ಬಿಸಾಡಿ ಓಡಿ ಹೋಗಿರುತ್ತಾನೆ. ಪರಿಣಾಮ ಪಿರ್ಯಾದಿದಾರರ ಹೊಟ್ಟೆಯ ಮಧ್ಯಭಾಗದಲ್ಲಿ ಮತ್ತು ಹೊಟ್ಟೆಯ ಎಡಬದಿ ಗಾಯವಾಗಿದ್ದು, ಸೃಜನ್‌‌ನ ಬೆನ್ನಿಗೆ ಗಾಯವಾಗಿದ್ದು ಅಲ್ಲಿದ್ದ ರಾಹುಲ್ ಮತ್ತು ಪುನಿತ್ ಅವರಿಬ್ಬರನ್ನುಚಿಕಿತ್ಸೆಯ ಬಗ್ಗೆ  ಉಡುಪಿಯ ಆದರ್ಶ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿನ ವೈದ್ಯರು ಪರೀಕ್ಷಿಸಿ ಒಳರೋಗಿಯಾಗಿ ದಾಖಲಿಸಿಕೊಂಡಿರುತ್ತಾರೆ. ಈ ಘಟನೆಗೆ ಅಭಿಷೇಕ್ ಮತ್ತು ಪಿರ್ಯಾದಿದಾರರಿಗೆ ಇದ್ದ ಹಳೆ ವೈಷಮ್ಯವೇ ಕಾರಣವಾಗಿರುತ್ತದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 29/2021  ಕಲಂ 324,326,307, 504,506 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

   ಅಸ್ವಾಭಾವಿಕ ಮರಣ ಪ್ರಕರಣಗಳು

  • ಉಡುಪಿ: ಪಿರ್ಯಾದಿ ಗುಲಾಬಿ ಶೆಡ್ತಿ ಇವರು ಉಡುಪಿ ತಾಲೂಕು  ಅಂಬಲಪಾಡಿ ಗ್ರಾಮದ  ಬನ್ನಂಜೆ ಮನೆ ನಂ 2-3-15 ಬಿ ನೇದರಲ್ಲಿ ವಾಸವಾಗಿದ್ದು, ಫಿರ್ಯಾದುದಾರರ ಮಗನಾದ ಹರೀಶ್ ಶೆಟ್ಟಿ(42 ವರ್ಷ) ರವರು ಮಂಡ್ಯದಲ್ಲಿ ಹೋಟೆಲ್ ಒಂದರಲ್ಲಿ ಕೆಲಸ ಮಾಡಿಕೊಂಡಿದ್ದು, ಆತನ ಹೆಂಡತಿ ಮಗಳು ಅವರ  ಮನೆಯಾದ ಬಿದ್ಕಲ್ ಕಟ್ಟೆಯಲ್ಲಿ ವಾಸವಿರುತ್ತಾರೆ. ಒಂದುವರೆ  ತಿಂಗಳಿಂದ ಮಂಡ್ಯದಿಂದ ಮನೆಗೆ ಬಂದಿದ್ದು, ದಿನಾಂಕ: 03/03/2021ರಂದು ರಾತ್ರಿ 09:00 ಗಂಟೆಗೆ  ಊಟ ಮಾಡಿ ಮನೆಯಲ್ಲಿ ಇದ್ದು ಪಿರ್ಯಾದಿದಾರರು ಈ ದಿನ ಬೆಳಿಗ್ಗೆ 4:00 ಗಂಟೆಯ ಸಮಯಕ್ಕೆ ಎದ್ದು  ನೋಡಿದಾಗ  ಮಗನಾದ ಹರೀಶನು ಮನೆಯ ಪಕ್ಕದಲ್ಲಿರುವ ಶೆಡ್‌ನಲ್ಲಿರುವ ನೇಣು  ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 09/2021 ಕಲಂ:174  ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಬೈಂದೂರು: ಫಿರ್ಯಾದಿ ಮಂಜುನಾಥ ಇವರಿಗೆ ದಿನಾಂಕ:04/03/2021 ರಂದು ಬೆಳಿಗ್ಗೆ 07.00 ಗಂಟೆಗೆ ತೆಗ್ಗರ್ಸೆ ಗ್ರಾಮದ ಉದ್ದಬೆಟ್ಟು ಸುಮುನಾವತಿ ನದಿಯ ಹೊಳೆಯಲ್ಲಿ ಒಬ್ಬ ಗಂಡಸಿನ ಮೃತದೇಹ ತೇಲುತ್ತಿರುವುದಾಗಿ ಮಾಹಿತಿ ಬಂದ ಮೇರೆಗೆ ಸದ್ರಿ ಸ್ಥಳಕ್ಕೆ ಹೋಗಿ ನೋಡಲಾಗಿ ಒಬ್ಬ ಅಪರಿಚಿತ ಗಂಡಸಿನ ಮೃತದೇಹವು ತೇಲುತ್ತಿದ್ದು, ಫಿರ್ಯಾದಿದಾರರು ಅಲ್ಲಿ ಸೇರಿದ್ದ ಜನರ  ಸಹಾಯದಿಂದ ಮೃತದೇಹವನ್ನು ಹೊಳೆಯ ದಡಕ್ಕೆ ತಂದು ಅಂಗಾತ ಮಲಗಿಸಿ ಮೃತ ವ್ಯಕ್ತಿಯು ಸುಮಾರು 35 ರಿಂದ 40 ವರ್ಷ ವಯಸ್ಸಿನವನಾಗಿದ್ದು,  ಶವವು ಸಂಪೂರ್ಣ ಕೊಳೆತು ಚರ್ಮ ಸುಲಿದು ಹೋಗಿದ್ದು, ಮೃತದೇಹದ ಮೇಲೆ ಯಾವುದೇ ಗಾಯಗಳು ಇಲ್ಲದೇ ಇದ್ದು, ಶವದ ಮೇಲೆ ಕಪ್ಪು ಒಳಚಡ್ಡಿ ಕಂಡುಬಂದಿದ್ದು ಸದ್ರಿ ಅಪರಿಚಿತ ವ್ಯಕ್ತಿಯು 2 ಅಥವಾ 3 ದಿನಗಳ ಹಿಂದೆ ಸುಮುನಾವತಿ ನದಿಗೆ ಆಕಸ್ಮಿಕವಾಗಿ ಬಿದ್ದು ಅಥವಾ ಇನ್ನಾವುದೋ ಕಾರಣದಿಂದ ನದಿ ನೀರಿಗೆ ಬಿದ್ದು ಮೃತಪಟ್ಟಿರಬಹುದಾಗಿದೆ.  ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 07/2021 ಕಲಂ:174  ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 04-03-2021 06:11 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080