ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಉಡುಪಿ: ಪಿರ್ಯಾದಿದಾರರಾದ ಶೇಖ್ ಮಹಮ್ಮದ್ ಹುಸೇನ್ (45) ತಂದೆ: ದಿ. ಅಬ್ದುಲ್ ಸಾಹೇಬ್ ವಾಸ: ಜಾಮಿಯಾ ಮಸೀದಿ ರೋಡ್ ಹೂಡೆ, ಪಡುತೋನ್ಸೆ ಗ್ರಾಮ ಇವರು ದಿನಾಂಕ 03/02/2023 ರಂದು ಶೇಖ್ ಮಹಮ್ಮದ್ ಹುಸೇನ್ ರವರು ತನ್ನ ಮೋಟಾರು ಸೈಕಲ್ ನಂಬ್ರ KA-20 V-8633 ನೇದರಲ್ಲಿ ತನ್ನ ಬಸ್ಸಿನ ಮಾಲೀಕರ ಮನೆಯಾದ ಸಿಂಡಕೇಟ್ ಬಳಿ ಹೋಗುವಾಗ ಸಮಯ ಸುಮಾರು ಮದ್ಯಾಹ್ನ 2:20 ಗಂಟೆಗೆ ಕೆಎಮ್‌ಮಾರ್ಗದಲ್ಲಿರುವ ಸಿಂಡಿಕೇಟ್ ಸರ್ಕಲ್ ಬಳಿ ಸೂಚನೆಯನ್ನು ನೀಡಿ ಬೈಕನ್ನು ತಿರುಗಿಸಿ ಪಶ್ಚಿಮ ಬದಿಯ ಅಂಚಿನಲ್ಲಿರುವಾಗ ಡಯಾನ ಸರ್ಕಲ್ ಕಡೆಯಿಂದ KA-20 P-3234 ನೇ ಕಾರಿನ ಚಾಲಕ ವಿನಯ ಶ್ರಿಯಾನ್ ರವರು ತನ್ನ ಕಾರನ್ನು ದುಡುಕುತನ ಮತ್ತು ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಶೇಖ್ ಮಹಮ್ಮದ್ ಹುಸೇನ್ ರವರು ಸವಾರಿ ಮಾಡುತ್ತಿದ್ದ ಬೈಕಿನ ಎಡಬದಿಗೆ ಡಿಕ್ಕಿ ಹೊಡೆದ ಪರಿಣಾಮ ಶೇಖ್ ಮಹಮ್ಮದ್ ಹುಸೇನ್ ರವರು ಬೈಕ್ ಸಮೃತ ರಸ್ತೆಗೆ ಬಿದ್ದು, ಇವರ ಎಡಕಾಲಿನ ಪಾದದ ಬಳಿ ಮೂಳೆಮುರಿತ ಉಂಟಾಗಿ ಸಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿದೆ.  ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 10/2023 ಕಲಂ: 279,   338  ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಲಾಗಿರುತ್ತದೆ.
  • ಮಲ್ಪೆ: ಪಿರ್ಯಾದಿದಾರರಾಧ ಶ್ರೀಮತಿ  ಸಾಬೀರ  ಭಾನು (58) ಗಂಡ: ದಿ/  ಮೊಹಮ್ಮದ್‌ ಹನೀಫ್‌  ವಾಸ: ಅಡ್ಡಬೇಂಗ್ರೆ ಮಸೀದಿ  ಹತ್ತಿರ  ಪಡುತೋನ್ಸೆ ಗ್ರಾಮ ಇವರ ಮೊಮ್ಮಗಳಾ ದ ಆಯೀಷಾ (7 ), ಮೊಮ್ಮಗ ಆಹಿಲ್ ಇವರು ದಿನಾಂಕ 02/02/2023 ರಂದು ಸಂಜೆ  5:30 ಗಂಟೆ ಸಮಯಕ್ಕೆ  ಅಡ್ಡಬೇಂಗ್ರೆ ಯಲ್ಲಿರುವ  ತಮ್ಮ ಮನೆಯಿಂದ   ಆಟ ಆಡಲು  ಮನೆಯ  ಎದುರು ಇರುವ ಅಡ್ಡಬೇಂಗ್ರೆ ಮಸೀದಿ ಬಳಿ ಹೋಗಿದ್ದು  ಆಟ ಆಡಿ  ವಾಪಸ್ಸು  ಮನೆಗೆ  ರಸ್ತೆಯ  ಎಡ ಬದಿಯಲ್ಲಿ ನಡೆದುಕೊಂಡು ಬರುತ್ತಿರುವಾಗ ಸಮಯ ಸುಮಾರು  ಸಂಜೆ  6:00 ಗಂಟೆಯ ಸಮಯಕ್ಕೆ ಕೋಡಿಬೇಂಗ್ರೆ ಕಡೆಯಿಂದ  ಹೂಡೆ ಕಡೆಗೆ  ಓರ್ವ ಮೋಟಾರು ಸೈಕಲ್‌ ಸವಾರನು ತನ್ನ ಮೋಟಾರು ಸೈಕಲ್‌ ನ್ನು ನಿರ್ಲಕ್ಷ್ಯತನ ಹಾಗೂ ಅಜಾಗರೂಕತೆಯಿಂದ  ಸವಾರಿ ಮಾಡಿಕೊಂಡು ಬಂದು  ರಸ್ತೆಯ  ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ  ಆಯಿಷಾ  ಇವಳಿಗೆ ಹಿಂದಿನಿಂದ  ಢಿಕ್ಕಿ ಹೊಡೆದ ಪರಿಣಾಮ ಆಯಿಷಾ ರಸ್ತೆಗೆ  ಬಿದ್ದು ಅವಳ ಬಲಕಾಲಿನ ಪಾದದ ಮಣಿಗಂಟಿನ ಮೇಲೆ  ಮೂಳೆ ಮುರಿತದ ರಕ್ತ ಗಾಯ ,ಹಣೆಗೆ  ರಕ್ತಗಾಯ , ಹಾಗೂ ಎರಡು  ಕೈ ಗಳಿಗೆ  ತರಚಿತ ಗಾಯ ಆಗಿದ್ದು , ಗಾಯಗೊಂಡ  ಆಯಿಷಾಳನ್ನು ಉಪಚರಿಸಿದ್ದು,  ಅಫಘಾತ ನಡೆಸಿದ ಮೋಟಾರು ಸೈಕಲ್‌  ನಂಬ್ರ ನೋಡಲಾಗಿ  KA-20 ET-8908  ಮೋಟಾರು ಆಗಿರುತ್ತದೆ. ಅಫಘಾತ ನಡೆಸಿದ ಮೋಟಾರು ಸೈಕಲ್‌ ಸವಾರನು ಗಾಯಾಳು ಆಯಿಷಾಳನ್ನು ಆಸ್ಪತ್ರೆಗೆ ಸೇರಿಸದೆ  ಮೋಟಾರು ಸೈಕಲ್‌ ನ್ನು ಅಪಘಾತ ಸ್ಥಳದಲ್ಲಿ ನಿಲ್ಲಿಸದೆ  ಹೋಗಿದ್ದು , ಶ್ರೀಮತಿ  ಸಾಬೀರ  ಭಾನು ರವರು ಆಯಿಷಾ ಳನ್ನು ಒಂದು ಆಟೋ ರಿಕ್ಷಾ ದಲ್ಲಿ ಚಿಕಿತ್ಸೆಯ ಬಗ್ಗೆ  ಕೆಎಂಸಿ ಮಣಿಪಾಲ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ,ಅಲ್ಲಿನ ವೈದ್ಯಾಧಿಕಾರಿಯವರು ಚಿಕಿತ್ಸೆ  ನೀಡಿ ಒಳರೋಗಿಯಾಗಿ ದಾಖಲಿಸಿರುತ್ತಾರೆ. ಈ ಅಪಘಾತಕ್ಕೆ ಮೋಟಾರು ಸೈಕಲ್‌ ಸವಾರನ ನಿರ್ಲಕ್ಷ್ಯತನ ಹಾಗೂ ಅಜಾಗರೂಕತೆಯ ಚಾಲನೆಯೆ ಕಾರಣವಾಗಿರುವುದಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 12/2023 ಕಲಂ: 279,338 ಐಪಿಸಿ  ಮತ್ತು 134(ಎ &ಬಿ) ಐಎಂವಿ ಕಾಯ್ದೆಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಕಾರ್ಕಳ: ಪಿರ್ಯಾದಿದಾರರಾಧ ವಸಂತಿ ಆಚಾರ್ತಿ(60)  ಗಂಡ: ಸೂರ್ಯ ಆಚಾರಿ  ತಂದೆ: ವಾಸ: ಶ್ರೀ ನಿಲಯ ಮನೆ ಗುಮ್ಮಟ ದರ್ಖಾಸು ತೆಳ್ಳಾರು ದುರ್ಗಾ ಗ್ರಾಮ, ಕಾರ್ಕಳ ಇವರ ಗಂಡ ಸೂರ್ಯ (80) ಇವರು ತನ್ನ ತಂಗಿ ಸೀತಾರವರ ಮನೆಯಾದ ಕಾರ್ಕಳ ತಾಲೂಕು ದುರ್ಗಾ ಗ್ರಾಮದ ಮುದಲಾಡಿ ಎಂಬಲ್ಲಿ ವಾಸವಾಗಿದ್ದು, ದಿನಾಂಕ 03/02/2023 ರಂದು 09:30 ಗಂಟೆಗೆ ಮನೆಯಲ್ಲಿ ಇರುವಾಗ ತಲೆ ತಿರುಗಿ ಬಿದ್ದು ಅಸ್ವಸ್ಥಗೊಂಡವರನ್ನು ಚಿಕಿತ್ಸೆ ಬಗ್ಗೆ ಮಣಿಪಾಲ ಕೆ.ಎಂ ಸಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು,  ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಮೃತರು ವಯೋವೃದ್ದರಾಗಿದ್ದು ಅಸೌಖ್ಯದಿಂದ ಮೃತಪಟ್ಟಿದ್ದು. ಅವರ ಮರಣದಲ್ಲಿ ಬೇರೆ ಯಾವುದೇ ಸಂಶಯ ಇರುವುದಿಲ್ಲ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣಾ ಯು.ಡಿ.ಆರ್‌ ಕ್ರಮಾಂಕ 09/2023 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಉಡುಪಿ: ಪಿರ್ಯಾದಿದಾರರಾಧ ಸ್ಟ್ಯಾನ್ಲೀ .ಪಿ. ಕುಂದರ್ (79) ತಂದೆ: ದಿ.ಹಸೆಲ್ ಕುಂದರ್ ವಾಸ:ನಂ.16-153(ಎ), ಎ.ಎಲ್.ಎನ್ ರಾವ್ ಲೇವೌಟ್, ಅಲೆವೂರು ರಸ್ತೆ, ಮಣಿಪಾಲ ಇವರು ಸಿಂಡಿಕೇಟ್ ಬ್ಯಾಂಕಿನ ನಿವೃತ್ತ ಉದ್ಯೋಗಿಯಾಗಿದ್ದು, ಇವರು ಕೆನರಾ ಬ್ಯಾಂಕ್ , ಮಣಿಪಾಲ ಶಾಖೆಯಲ್ಲಿ ಎಸ್.ಬಿ ಖಾತೆ ಯನ್ನು ಹೊಂದಿರುತ್ತಾರೆ. ಇವರು ದಿನಾಂಕ 02/01/2023 ರಂದು ಮಧ್ಯಾಹ್ನ  ಈ ಹಿಂದೆ ತನ್ನ ಮೊಬೈಲ್ ನಲ್ಲಿ “Dear CANARA BANK Customer Your Account Has Been Blocked Due TO KYC within 24 Hrs Please Contact Customer care 8539021512 to continue your Services. ಎಂದು ನಮೂದಿಸಿ ದಿನಾಂಕ 03/11/2022 ರಂದು 13:51 ಗಂಟೆಗೆ ಯಾರೋ ಅಪರಿಚಿತ ವ್ಯಕ್ತಿ ಮೊಬೈಲ್ ರಿಂದ ಸಂದೇಶ ಕಳುಹಿಸಿದ್ದನ್ನು ನೋಡಿ ಕೆನರಾ ಬ್ಯಾಂಕ್ ಕಸ್ಟಮರ್ ಕೇರ್ ಎಂದು ನಂಬಿಕೊಂಡು ಕರೆ ಮಾಡಲಾಗಿ ಯಾರೋ ಅಪರಿಚಿತ ವ್ಯಕ್ತಿಗಳು  ದಿನಾಂಕ 02/02/2023 ರಂದು ಕರೆ ಮಾಡಿ ತನ್ನ ಬ್ಯಾಂಕ್ ಖಾತೆಯ ವಿವರ ಹಾಗೂ ಓಟಿಪಿ ಪಡೆದು ತನ್ನ ಎಸ್.ಬಿ ಖಾತೆಯಿಂದ ರೂಪಾಯಿ. 50,000/-, 14,330.40/-, 14,165.20/-, 14,165.20/-, 14,165.20/-, ರಂತೆ 4 ಬಾರಿ ಟ್ರಾನ್ಸೆಕ್ಷನ್ ಮಾಡಿ ಒಟ್ಟು ರೂ.1,06,826/- ಹಣವನ್ನು ಬ್ಯಾಂಕ್ ಅಧಿಕಾರಿ ಎಂದು ನಂಬಿಸಿ, ಆನ್ ಲೈನ್ ಮುಖೇನ ವರ್ಗಾವಣೆ ಮಾಡಿ, ಸ್ಟ್ಯಾನ್ಲೀ .ಪಿ. ಕುಂದರ್ ಇವರಿಗೆ ನಷ್ಟ ಉಂಟು ಮಾಡಿರುವುದಾಗಿದೆ. ಈ ಬಗ್ಗೆ ಸೆನ್ ಅಪರಾಧ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 20/2023 ಕಲಂ:  20/2023ಕಲಂ: 66(C), 66(D)ಐ.ಟಿ. ಆಕ್ಟ್  ರಂತೆ ಪ್ರಕರಣ ದಾಖಲಿಸಲಾಗಿರುತ್ತದೆ.
  • ಉಡುಪಿ: ಪಿರ್ಯಾದಿದಾರರಾಧ ಖೋಕನ್‌ಮನ್ನಾ (31) ತಂದೆ: ಅಮಲೇಶ ಮನ್ನಾ ವಾಸ: ಲಕ್ಷ್ಮಣ ಚೌಕ್‌, ಖೇಜುರಿ, ಪುರ್ಬೊ ಮೇದಿನಪುರ, ಪಶ್ಚಿಮ ಬಂಗಾಳ ರಾಜ್ಯ. ಇವರು ಸುಮಾರು 5 ವರ್ಷಗಳಿಂದ ಬಾರ್ಬೇಂಡಿಂಗ್‌ಕೆಲಸ ಮಾಡಿಕೊಂಡಿದ್ದು, ಈಗ 2 ತಿಂಗಳುಗಳಿಂದ ಸಂತೆಕಟ್ಟೆಯ ಹಳೆ ಮಾರ್ಕೇಟ್‌ಬಳಿ ಮಾಂಡವಿಯವರು ಹೊಸದಾಗಿ ನಿರ್ಮಾಣ ಮಾಡುತ್ತಿರುವ ಅಪಾರ್ಟ್‌ಮೆಂಟ್‌ನಲ್ಲಿ ಕೆಲಸ ಮಾಡಿಕೊಂಡಿದ್ದು, ಖೋಕನ್‌ಮನ್ನಾ ರವರ ಊರಿನವರಾದ ಬಿಶುದಾಸ್‌ (52) ಎಂಬವರು ಪಿರ್ಯಾದುದಾರರೊಂದಿಗೆ ವಾಸವಾಗಿದ್ದು, ಅಡುಗೆ ಕೆಲಸ ಮಾಡಿಕೊಂಡಿರುತ್ತಾರೆ. ಅಪಾರ್ಟ್‌ಮೆಂಟ್‌ನ ವಿದ್ಯುತ್‌ಗಾಗಿ ಸರ್ವೀಸ್‌ವಯರ್‌ನ್ನು ಮರಕ್ಕೆ ಕಟ್ಟಿ ಅಲ್ಲಿಂದ ಅಪಾರ್ಟ್‌ಮೆಂಟ್‌ಕೆಡೆಗೆ ತೆಗೆದುಕೊಂಡು ಬಂದಿರುವುದಾಗಿದೆ. ದಿನಾಂಕ 03/02/2023 ರಂದು ಬೆಳಿಗ್ಗೆ 09:15 ಗಂಟೆಗೆ ಬಿಶುದಾಸ್‌ರವರು ಅಪಾರ್ಟ್‌ಮೆಂಟ್‌ಬಳಿ ಇರುವ ಮಾವಿನ ಮರದಿಂದ ಮಾವಿನ ಕಾಯಿ ಕೀಳಲು ಮರ ಹತ್ತಿದ್ದು, ಮಾವಿನ ಮರದಲ್ಲಿ ಕಟ್ಟಿರುವ ವಿದ್ಯುತ್‌ ಸರ್ವೀಸ್‌ ವಯರ್‌ನಿಂದ ವಿದ್ಯುತ್‌ಹರಿದು, ಬಿಶುದಾಸ್‌ನು ಮರದಿಂದ ಕೆಳಗೆ ಬಿದ್ದು, ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಮೃತಪಟ್ಟಿರುವುದಾಗಿದೆ. ಬಿಶುದಾಸ್‌ನ ಸಾವಿಗೆ ಅಪಾರ್ಟ್‌ಮೆಂಟ್‌ನ ಸೂಪರ್‌ ವೈಸರ್‌ ಅಲ್ವಿನ್‌ ಕ್ರಾಡ್ರಸ್‌ ಹಾಗೂ ಇಲೆಕ್ಟ್ರಿಶಿಯನ್‌ಮಂಜುನಾಥ ರವರ ನಿರ್ಲಕ್ಷತನವೇ ಕಾರಣವಾಗಿರುವುದಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 17/2023 ಕಲಂ:  304(A) Rw 34 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಲಾಗಿರುತ್ತದೆ.
  • ಉಡುಪಿ: ದಿನಾಂಕ 08/01/2023 ರಂದು ಬೆಳಿಗ್ಗೆ 8:00 ಗಂಟೆಗೆ ಪಿರ್ಯಾದಿದಾರರಾಧ ಶ್ರೀಮತಿ ಶಾಂತಾ (26) ಗಂಡ: ಬೀಮಪ್ಪ, ವಾಸ: ಮೂಡು ಸಗ್ರಿ  ಬಾಡಿಗೆ ಮನೆ, ಮಣಿಪಾಲ ಉಡುಪಿ ಖಾಯಂವಿಳಾಸ ರಕ್ಕಸಗಿ, ಹುನಗುಂದ ತಾಲೂಕು ಬಾಗಲಕೋಟೆ ಇವರ ಮಗಳು 3 ವರ್ಷ ಪ್ರಾಯದ ಸುಕನ್ಯಾಳನ್ನು ತನ್ನ ಸ್ನೇಹಿತ ಸಂಗಮೇಶನು  ಮೂಡು ಸಗ್ರಿಯಲ್ಲಿರುವ ಬಾಡಿಗೆ ಮನೆಯಿಂದ ಕರೆದುಕೊಂಡು ಹೋಗಿ ಸ್ನೇಹಿತ ಶಂಕರನ ಮನೆಯಲ್ಲಿ ಬಿಟ್ಟು ಕೆಲಸಕ್ಕೆ ಹೋಗುವುದಾಗಿ ಹೇಳಿ ಹೋದವನು ವಾಪಾಸು ಸಂಜೆ ಒಬ್ಬನೇ ಮನೆಗೆ ಬಂದಿರುತ್ತಾನೆ. ಶ್ರೀಮತಿ ಶಾಂತಾ ರವರು ಮಗುವಿನ ಬಗ್ಗೆ ವಿಚಾರಿಸಿದಾಗ  ತಾನು ಮಗುವನ್ನು ಕರೆದುಕೊಂಡು ಬರುವುದಾಗಿ ಹೇಳಿ ದಿನಾಂಕ 12/01/2023 ರಂದು  ಹೋದವನು ಈವರೆಗೆ ಮನೆಗೆ ಬಾರದೇ ತನ್ನ ಮೊಬೈಲ್ ನ್ನು ಕೂಡಾ ಸ್ವಿಚ್ ಆಫ್ ಮಾಡಿರುತ್ತಾನೆ. ಮಗುವಿನ ಬಗ್ಗೆ ಶಂಕರರವರಿಗೆ  ಕರೆ ಮಾಡಿ ವಿಚಾರಿಸಿದಲ್ಲಿ ಸಂಗಮೇಶ್ ಹಾಗೂ ಮಗಳು ಸುಕನ್ಯಾ ಮನೆಗೆ ಬಂದಿಲ್ಲವಾಗಿ ತಿಳಿಸಿದ್ದು ತನ್ನ ಮಗಳು ಸುಕನ್ಯಾ ಮತ್ತು ಸಂಗಮೇಶ್ ರವರು ಈವೆರೆಗೂ ಮನೆಗೆ ಬಾರದೇ ಕಾಣೆಯಾಗಿರುತ್ತಾರೆ. ಶ್ರೀಮತಿ ಶಾಂತಾ ರವರು ಸಂಬಂಧಿಕರಲ್ಲಿ ಹಾಗೂ ನೆರೆಕೆರೆಯಲ್ಲಿ ವಿಚಾರಿಸಿ ಠಾಣೆಗೆ ಬಂದು ದೂರು ನೀಡಲು ತಡವಾಗಿರುವುದಾಗಿದೆ. ಈ ಬಗ್ಗೆ ಮಹಿಳಾ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 04/2023 ಕಲಂ: 363 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಇತ್ತೀಚಿನ ನವೀಕರಣ​ : 04-02-2023 10:14 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080