ಅಭಿಪ್ರಾಯ / ಸಲಹೆಗಳು

ಅಸ್ವಾಭಾವಿಕ ಮರಣ ಪ್ರಕರಣ

  • ಬ್ರಹ್ಮಾವರ:  ಬ್ರಹ್ಮಾವರ ತಾಲೂಕು ಚೇರ್ಕಾಡಿ ಗ್ರಾಮದ ಮುಂಡ್ಕಿನ ಜೆಡ್ಡು  ಸೋಣೆಕೊಡಿ ಹೌಸ್‌ ಎಂಬಲ್ಲಿ ಫಿರ್ಯಾದಿ ಜಯರಾಮ ಜೆ. ಶೆಟ್ಟಿ (63 ವರ್ಷ), ತಂದೆ: ದಿ| ಜಗನ್ನಾಥ . ಶೆಟ್ಟಿ, ವಾಸ: ಸೋಣೆಕೊಡಿ ಹೌಸ್‌ ಮುಂಡ್ಕಿನ ಜೆಡ್ಡು  ಚೇರ್ಕಾಡಿ ಗ್ರಾಮ ಇವರ ಜೊತೆ ವಾಸವಾಗಿರುವ  ಅವರ ಹೆಂಡತಿ ಸುಗಂಧಿ ಶೆಟ್ಟಿ 58 ವರ್ಷ ಎಂಬವರು ಸುಮಾರು 15 ವರ್ಷಗಳಿಂದ  ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದು  ಈ ಬಗ್ಗೆ ಚಿಕಿತ್ಸೆಯನ್ನು ಕೊಡಿಸಿದರು ಗುಣಮುಖರಾಗದೇ ಇದ್ದು,  ಅದೇ ಚಿಂತೆಯಿಂದ  ಜೀವನದಲ್ಲಿ ಜಿಗುಪ್ಸೆಗೊಂಡು ಸುಗಂಧಿ ಶೆಟ್ಟಿ ರವರು ದಿನಾಂಕ: 04-02-2023 ರಂದು ಬೆಳಿಗ್ಗೆ 6:00 ಗಂಟೆಯಿಂದ ಬೆಳಿಗ್ಗೆ 10:30 ಗಂಟೆಯ ಮಧ್ಯಾವಧಿಯಲ್ಲಿ ಅವರ ಮನೆಯ  ಬಾವಿಯ ನೀರಿಗೆ ಹಾರಿ ಮುಳುಗಿ  ಅತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಈ  ಬಗ್ಗೆ ಬ್ರಹ್ಮಾವರ ಠಾಣೆ ಯುಡಿಆರ್ ನಂ. 11/2023 ಕಲಂ 174 ಸಿಆರ್‌ಪಿಸಿ  ಯಂತೆ ಪ್ರಕರಣ ದಾಖಲಿಸಲಾಗಿದೆ.
  • ಕಾರ್ಕಳ:  ಉಡುಪಿ ತಾಲೂಕು, ಭೈರಂಪಳ್ಳಿ ಗ್ರಾಮದ ಹರಿಖಂಡಿಗೆ ಕೆರೆಹಾಡಿ ಮನೆ, ನಿವಾಸಿ ಮಹೇಶ ಬಿ. ಹೆಗ್ಡೆ, ಪ್ರಾಯ 47 ವರ್ಷ, ಇವರು ಕಳೆದ ಒಂದು ವರ್ಷದಿಂದ ಕಾರ್ಕಳ ತಾಲೂಕು, ನಲ್ಲೂರು ಗ್ರಾಮದ, ಗಾಂಧಿ ನಗರ ಎಂಬಲ್ಲಿರುವ ಅನ್ನಪೂಣೇಶ್ವರಿ ಕಾಂಪ್ಲೆಕ್ಸ್ ನಲ್ಲಿರುವ ಶ್ರೀ ಓಂ ಎಂಬ ಹೊಟೇಲಿನಲ್ಲಿ ಕೆಲಸ ಮಾಡಿಕೊಂಡಿದ್ದು, ಸದರಿಯವರು ಅಲ್ಸರ್ ಖಾಯಿಲೆಯಿಂದ ಬಳಲುತ್ತಿದ್ದು, ಈ ಬಗ್ಗೆ ಮಣಿಪಾಲ ಆಸ್ಪತ್ರೆಯಿಂದ ಚಿಕಿತ್ಸೆ ಪಡೆಯುತ್ತಿದ್ದರೂ ಖಾಯಿಲೆಯು ಸರಿಯಾಗಿ ಗುಣವಾಗದೇ ಇದ್ದು, ಅಲ್ಲದೇ ದೇಹ ಸ್ಥಿತಿ ಕ್ಷೀಣಿಸುತ್ತಿದ್ದರಿಂದ, ಜೀವನದಲ್ಲಿ ಜುಗುಪ್ಸೆಹೊಂದಿ ಈ ದಿನ 04/02/2023 ರಂದು ಬೆಳಗ್ಗೆ 6:30 ಗಂಟೆಯಿಂದ 08:30 ಗಂಟೆಯ ಮಧ್ಯೆ ತಾನು ಕೆಲಸ ಮಾಡುತ್ತಿದ್ದ ಕ್ಯಾಂಟೀನ್‌ನ ಒಳಗೆ ಫ್ಯಾನಿಗೆ ಶಾಲಿನಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ . ಈ ಬಗ್ಗೆ ಗಣೇಶ್ ಹೆಗ್ಡೆ (51) ತಂದೆ: ಚನ್ನಪ್ಪ ಹೆಗ್ಡೆ ವಾಸ: ಕೆರೆಹಾಡಿ ಮನೆ ಹರಿಖಂಡಿಗೆ ಅಂಚೆ ಬೈರಂಪಳ್ಳಿ ಗ್ರಾಮ  ರವರು ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಠಾಣೆ UDR NO 10/2023 US 174 CRPC  ಯಂತೆ ಪ್ರಕರಣ ದಾಖಲಿಸಲಾಗಿದೆ.


ಅಪಘಾತ ಪ್ರಕರಣ:

  • ಉಡುಪಿ:  ಪಿರ್ಯಾದಿ:ಡಾ ಮಹೇಶ ಕುಮಾರ ಕೆ  ಈ  ಪ್ರಾಯ 46 ವರ್ಷ್ತಂದೆ ಈರಪ್ಪ  ವಾಸ-ಗುರುಕುಲ  ಎಮ್  ಜಿ ಎಂ ಕ್ವಾಟರ್ಸ ನಂ-11 ವಿದ್ಯಾರ್ಥಿ ನಿಲಯ ದ ಹಿಂಬದಿ ಶಿವಳ್ಳಿ ಗ್ರಾಮ ಇವರು ದಿನಾಂಕ: 03/02/2023 ರಂದು ತನ್ನ  KA 20 MD 5845 ನೇ ಕಾರನ್ನು  ಮಲ್ಪೆ ಕೊಡವೂರು  ಕಡೆಯಿಂದ  ಉಡುಪಿ ಕಡೆಗೆ ಚಲಾಯಿಸಿಕೊಂಡು ಬರುತ್ತಿರವಾಗ  ಸಮಯ ಸುಮಾರು  21.15 ಗಂಟೆಗೆ ಅಂಬಲಪಾಡಿ  ಗ್ರಾಮದ ಆದಿ ಉಡುಪಿ ಅಕ್ಷತಾ ಹೋಟೆಲ್  ಬಳಿ ತಲುಪುವಾಗ ಎದುರಿನಿಂದ ಅಂದರೆ  ಕರಾವಳಿ ಬೈಪಾಸ್  ಕಡೆಯಿಂದ  ಮಲ್ಪೆ ಕಡೆಗೆ KA16AA3714 ನೇ ಚಾಲಕ ಮನೋಜ ಬಿ ಕೆ  ಎಂಬಾತ ತನ್ನ ವಾಹನವನ್ನು ದುಡುಕುತನ  ಮತ್ತು ನಿರ್ಲಕ್ಷ್ಯತನದಿಂದ  ಚಲಾಯಿಸಿ ಪಿರ್ಯಾದಿದಾರರ ಕಾರಿನ ಬಲಬದಿಗೆ  ಡಿಕ್ಕಿ ಹೊಡೆದ  ಪರೀಣಾಮ ಎರ್  ಬ್ಯಾಗ್ ತೆರೆದು ಪಿರ್ಯಾದಿದಾರರಿಗೆ  ಬಲಕೈಗೆ  ಸುಟ್ಟ ಗಾಯವಾಗಿದ್ದು ಹಾಗೂ ಕಾಲಿಗೆ  ಗಾಯವಾಗಿದ್ದು ಮತ್ತು ಕಾರಿನಲ್ಲಿದ್ದ ಪಿರ್ಯಾದಿಯ ಮಗಳು ಅಲಕಾ (8 ವ),ರವರಿಗೆ ತಲೆಗೆ ರಕ್ತಗಾಯವಾಗಿದ್ದು ಪ್ರಬಾವತಿ (41ವ ) ರವರಿಗೆ  ಎದೆಗೆ  ಗುದ್ದಿದ ನೋವಾಗಿದ್ದು ಮೋನಿತಾ ಪ್ರಾಯ( 11ವ) ರವರಿಗೆ  ಸಣ್ಣಪುಟ್ಟ ಗಾಯವಾಗಿದ್ದು  4 ಜನರು  ಗಾಂದಿ ಆಸ್ಪತ್ರೆ ಉಡುಪಿಯಲ್ಲಿ ಹೊರರೋಗಿಯಾಗಿ  ಚಿಕಿತ್ಸೆ ಪಡೆದಿರುತ್ತಾರೆ.ಅಪಘಾತಪಡಿಸಿದ KA16 AA 3714  ನೇ ಮಹೇಂದ್ರ ಪಿಕ್‌ಪ್ ವಾಹನದ ಚಾಲಕ ಮನೋಜ  ಬಿ ಕೆ ಅಪಘಾತದ ಸಮಯ ಮದ್ಯಪಾನ  ಸೇವಿಸಿರುವ ಬಗ್ಗೆ  ಕಂಡುಬರುತ್ತದೆ. ಈ ಬಗ್ಗೆ ಉಡುಪಿ ಸಂಚಾರ ಠಾಣೆ ಅಪರಾಧ ಕ್ರಮಾಂಕ 11/2023 ಕಲಂ: 279, 337   ಐ.ಪಿ.ಸಿ & 185 ಐ ಎಂ ವಿ  ಕಾಯಿದೆ ಯಂತೆ ಪ್ರಕರಣ ದಅಖಲಿಸಲಾಗಿದೆ.


ಕಳವು ಪ್ರಕರಣ

  • ಉಡುಪಿ: ಪಿರ್ಯಾದಿ: ಶ್ರೀಮತಿ ಪ್ರತಿಮಾ ಕಾಮತ್‌ ಪ್ರಾಯ: 45 ವರ್ಷ ಗಂಡ: ಪದ್ಮನಾಭ ಕಾಮತ್‌  ವಾಸ: ವಾಸ: ಮನೆ ನಂಬ್ರ 5-3-94ಬಿ, ಶಾಂತಾದುರ್ಗಾ ಕೃಪಾ, ಭಾಗ್ಯ ಮಂದಿರ ಕಾಲೋನಿ, ಚಿಟ್ಪಾಡಿ, ಎಂಬವರು KSP App ಮುಖೇನ ನೀಡಿದ E-FIR ಸಾರಾಂಶವೇನೆಂದರೆ, ಇವರ ಮಾಲಕತ್ವದ HONDA DREAM NEC CB110 ಮೋಟಾರ್‌ ಸೈಕಲ್‌ ನಂಬ್ರ KA20EG1872 (Chassis No: ME4JC623AET033557 & Engine No: JC62ET1033377) ನೇದರಲ್ಲಿ ಪಿರ್ಯಾದುದಾರರ ಗಂಡ ಪದ್ಮನಾಭ ಕಾಮತ್‌ ರವರು ಪ್ರತಿದಿನ ವ್ಯವಹಾರ ನಿಮಿತ್ತ ಬ್ರಹ್ಮಾವರಕ್ಕೆ ಹೋಗಿ ವಾಪಾಸಾಗುತ್ತಿದ್ದು, ಎಂದಿನಂತೆ ದಿನಾಂಕ 26/01/2023 ರಂದು ರಾತ್ರಿ 10:30 ಗಂಟೆಗೆ ಸಂತೆಕಟ್ಟೆ ಆಶೀರ್ವಾದ್‌ ಬಳಿ ಇರುವ ರೋಬೋಸಾಫ್ಟ್‌ ಎದುರು ಸರ್ವೀಸ್‌ ರಸ್ತೆಯಲ್ಲಿ ಬರುತ್ತಿರುವಾಗ ಕಾರು ನಂಬ್ರ KA20MD8979 ನೇದರೊಂದಿಗೆ ರಸ್ತೆ ಅಪಘಾತವಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿ, ದಿನಾಂಕ 27/01/2023 ರಂದು ಆಸ್ಪತ್ರೆಯಿಂದ ಬಿಡುಗಡೆಯಾಗಿರುತ್ತಾರೆ. ಪಿರ್ಯಾದುದಾರರ ಗಂಡನವರು ಕಾರು ಚಾಲಕ ರವಿಕಿರಣ್‌ ರವರು ಮಾತುಕತೆ ಮೂಲಕ ರಾಜಿ ಮಾಡಿಕೊಂಡಿರುತ್ತಾರೆ. ನಂತರ ದಿನಾಂಕ 30/01/2023 ರಂದು ಬೆಳಿಗ್ಗೆ 10:00 ಗಂಟೆಯಿಂದ ರಾತ್ರಿ 09:00 ಗಂಟೆ ನಡುವಿನ ಸಮಯದಲ್ಲಿ ಯಾರೋ ಕಳ್ಳರು ಮೋಟಾರ್‌ ಸೈಕಲ್‌ ನ್ನು ಕಳವು ಮಾಡಿಕೊಂಡು ಹೋಗಿದ್ದು, ಕಳವಾದ ಮೋಟಾರ್‌ ಸೈಕಲ್‌ ನ ಮೌಲ್ಯ ರೂ. 30,000/- ಆಗಬಹುದು. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 18/2023 ಕಲಂ:  379  IPC (E-FIR)ಯಂತೆ ಪ್ರಕರಣ ದಾಖಲಿಸಲಾಗಿದೆ.

ಇತ್ತೀಚಿನ ನವೀಕರಣ​ : 04-02-2023 06:23 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080