ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಶಿರ್ವಾ:  ದಿನಾಂಕ 03/02/2022 ರಂದು ಪಿರ್ಯಾದಿದಾರರಾದ ಶ್ರೀಮತಿ ಭವ್ಯ (37), ಗಂಡ: ನಿತಿನ್‌ರಾಜ್‌, ವಾಸ: ಸುಮತಿ ನಿಲಯ, ಪಡೀಲ್‌, ಮಂಗಳೂರು ನಗರ ಇವರು ತನ್ನ ಗಂಡನ ಕಾರು ನಂಬ್ರ KA-19-MK-2090 ನೇದರಲ್ಲಿ ತನ್ನ ಸಹದ್ಯೋಗಿ ಶ್ರೀಲೇಖಾ ರವರೊಂದಿಗೆ ಶಿರ್ವದಲ್ಲಿ ನಡೆಯಲಿರುವ ತನ್ನ ಸ್ನೇಹಿತೆ ಶ್ರೀಮತಿ ಸುಶ್ಮಿತಾರವರ ಸೀಮಂತ ಕಾರ್ಯಕ್ರಮ ಮುಗಿಸಿಕೊಂಡು ವಾಪಾಸು ಶಿರ್ವ-ಬೆಳ್ಮಣ್‌ ಮಾರ್ಗವಾಗಿ ಮೂಡಬಿದ್ರೆ  ಕಡೆಗೆ ಹೋಗುತ್ತಿರುವಾಗ ಮದ್ಯಾಹ್ನ 2:00 ಗಂಟೆಗೆ ಪಿಲಾರು ಗ್ರಾಮದ  ಶ್ರೀ ಕ್ಷೇತ್ರ ಸುಬ್ರಹ್ಮಣ್ಯ ದೇವಸ್ಥಾನದ ದ್ವಾರದ ಮುಂದುಗಡೆ ಸಾರ್ವಜನಿಕ ರಸ್ತೆಯಲ್ಲಿ  ಎದುರುಗಡೆಯಿಂದ  ಅಂದರೆ ಬೆಳ್ಮಣ್‌ ಕಡೆಯಿಂದ ಶಿರ್ವ ಕಡೆಗೆ  ಟಿಪ್ಪರ್‌ ವಾಹನ ನಂಬ್ರ KA-19-AB-5380 ನೇದರ ಚಾಲಕ ಅಲ್ಪಾಝ್‌ ತೀರಾ ಬಲಬದಿಗೆ ಬಂದು ಪಿರ್ಯಾದಿದಾರರು ಚಲಾಯಿಸುತ್ತಿದ್ದ ಕಾರಿಗೆ  ಡಿಕ್ಕಿಹೊಡೆದ  ಪರಿಣಾಮ ಪಿರ್ಯಾದಿದಾರರ ಹಿಂದುಗಡೆ ತಲೆಗೆ ರಕ್ತಗಾಯವಾಗಿ ಒಳ  ಜಖಂ ಆಗಿದ್ದು, ಸಹದ್ಯೋಗಿ  ಶ್ರೀಲೇಖಾರವರಿಗೆ ತುಟಿಗೆ ಗುದ್ದಿದ  ನೋವಾಗಿರುತ್ತದೆ. ಈ ಬಗ್ಗೆ ಶಿರ್ವಾ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 08/2022, ಕಲಂ: 279, 337, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಗಂಗೊಳ್ಳಿ: ಪಿರ್ಯಾದಿದಾರರಾದ  ಶ್ರೀನಿವಾಸ ನಾಯಕ್ (61), ತಂದೆ: ಕೃಷ್ಣ, ವಾಸ: ಮೂಡು ಮರವಂತೆ, ಮರವಂತೆ ಗ್ರಾಮ ಬೈಂದೂರು ತಾಲೂಕು ಇವರು ಹೆಂಡತಿಯೊಂದಿಗೆ ಬೈಂದೂರು ತಾಲೂಕು, ಮರವಂತೆ ಗ್ರಾಮದ ಮೂಡು ಮರವಂತೆಯಲ್ಲಿ ವಾಸವಾಗಿದ್ದು,  ಪಿರ್ಯಾದಿದಾರರ ಹೆಂಡತಿ ಗಾಯತ್ರಿ (53) ಇವರು ಸುಮಾರು 12 ವರ್ಷಗಳಿಂದ  ಮಾನಸಿಕ  ಖಾಯಿಲೆಯಿಂದ ಬಳಲುತ್ತಿದ್ದು ಕುಂದಾಪುರ ಮಾತಾ ಆಸ್ಪತ್ರೆಯಲ್ಲಿ  ಚಿಕಿತ್ಸೆ ಪಡೆಯುತ್ತಿದ್ದರೂ  ಸಂಪೂರ್ಣ  ಗುಣಮುಖವಾಗಿರುವುದಿಲ್ಲ. ದಿನಾಂಕ 03/02/2022 ರಂದು ಮದ್ಯಾಹ್ನ 2:00 ಗಂಟೆಗೆ ಪಿರ್ಯಾದಿದಾರರ ಹೆಂಡತಿ ಗಾಯತ್ರಿಯವರು ಊಟ ಮಾಡಿ ಮಲಗಿರುತ್ತಾರೆ.  ಪಿರ್ಯಾದಿದಾರರು ಸ್ನಾನ ಮುಗಿಸಿ ಹೊರಗೆ ಬಂದಾಗ ಗಾಯತ್ರಿಯವರು ಕಾಣಿಸದೇ ಇದ್ದು ಹೊರಗೆ ಹೋಗಲು ಬಾಗಿಲ ಬಳಿ ಬಂದಾಗ ಬಾಗಿಲಿಗೆ ಹೊರಗಿನಿಂದ ಚಿಲಕ ಹಾಕಿದ್ದು ಹಿಂದಿನ ಬಾಗಿಲಿನಿಂದ ಹೊರಗೆ ಹೋಗಿ ಹುಡುಕಾಡಲಾಗಿ ಮನೆಯ ಬದಿಯಲ್ಲಿರುವ ಬಾವಿಯ ಬಳಿ ಕುರ್ಚಿ ಇರುವುದು ಕಂಡು ಬಂದಿದ್ದು ಮದ್ಯಾಹ್ನ 2:30 ಗಂಟೆಗೆ ಬಾವಿಯ ಬಳಿ ಇದ್ದ ಕುರ್ಚಿ ತೆಗೆಯಲು ಹೋದಾಗ ಅನುಮಾನಗೊಂಡು ಬಾವಿಯ ಹತ್ತಿರ ಹೋಗಿ ನೋಡಲಾಗಿ ಗಾಯತ್ರಿಯವರ ಮೃತದೇಹ ತೇಲುತ್ತಿರುವುದು ಕಂಡು ಬಂದಿರುತ್ತದೆ. ಗಾಯತ್ರಿಯವರು ಮಾನಸಿಕ ಖಾಯಿಲೆಯ ಖಿನ್ನತೆಗೆ ಒಳಗಾಗಿ ದಿನಾಂಕ 03/02/2022 ರಂದು ಮದ್ಯಾಹ್ನ 2:00 ಗಂಟೆಯಿಂದ 2:30 ಗಂಟೆಯ ಮಧ್ಯಾವಧಿಯಲ್ಲಿ ಮನೆಯ ಬದಿಯಲ್ಲಿರುವ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡು ಮೃತ ಪಟ್ಟಿರುವುದಾಗಿದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 01/2022 ಕಲಂ: 174 ಸಿ.ಆರ್‌.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಬೈಂದೂರು: ಪಿರ್ಯಾದಿದಾರರಾದ ರಾಮ ಮಡಿವಾಳ (38), ತಂದೆ: ಗುಂಡು  ಮಡಿವಾಳ, ವಾಸ: ಚಂದು ಮಡಿವಾಳ ತೇರು ಮನೆ ಅರೆಹೊಳೆ ನಾವುಂದ ಗ್ರಾಮ ಬೈಂದೂರು ತಾಲೂಕು ಇವರ ಸಂಬಂಧಿ ಲಕ್ಷ್ಮೀ  ಮಡಿವಾಳರವರ ಗಂಡ ವಿಜಯ ಮಡಿವಾಳ (50) ರವರು ನಾವುಂದ ಗ್ರಾಮದ ಅರೆಹೊಳೆ ಅಕ್ಕಯ್ಯ ಮಡಿವಾಳರ ಮನೆ ಎಂಬಲ್ಲಿ  ವಾಸಮಾಡಿಕೊಂಡಿದ್ದು,  ವಿಜಯ ಮಡಿವಾಳ ರವರು ಕೆಲಸಕ್ಕೆಂದು ಹೋದವರು  2-3 ದಿನಗಳಿಗೊಮ್ಮೆ ಮನೆಗೆ  ಬರುತ್ತಿದ್ದು   ದಿನಾಂಕ 01/02/2022 ರಂದು ಬೆಳಿಗ್ಗೆ 06:00 ಗಂಟೆಗೆ ಕೆಲಸಕ್ಕೆಂದು ಹೋದವರು ಮನೆಗೆ ಬಂದಿರುವುದಿಲ್ಲ. ದಿನಾಂಕ 03/02/2022 ರಂದು  ಬೆಳಿಗ್ಗೆ  10:00 ಗಂಟೆಗೆ ಪಿರ್ಯಾದಿದಾರರಿಗೆ ನಾಗರಾಜ್ ಎಂಬುವವರು ದೂರವಾಣಿ ಕರೆ ಮಾಡಿ ನಾವುಂದ ಗ್ರಾಮದ ರೈಲ್ವೆ  ಬ್ರಿಡ್ಜ್  ಬಳಿಯ  ಸೌಪರ್ಣಿಕ ಹೊಳೆಯಲ್ಲಿ  ನಿಮ್ಮ ಸಂಬಂದಿ  ಹೊಳೆಯಲ್ಲಿ ಬಿದ್ದು ಮರಣ ಹೊಂದಿರುವುದಾಗಿ ತಿಳಿಸಿದ ಮೇರೆಗೆ ಪಿರ್ಯಾದಿರರು ಸ್ಥಳಕ್ಕೆ ಬೆಳಿಗ್ಗೆ  10:30 ಗಂಟೆಗೆ ಹೋಗಿ  ನೋಡಲಾಗಿ ವಿಜಯ  ರವರ ಮೃತ ದೇಹವಾಗಿರುತ್ತದೆ. ವಿಜಯ ರರು  ಮನೆಯಿಂದ ಕೆಲಸಕ್ಕೆಂದು ಹೋದವರು ದಿನಾಂಕ 01/02/2022 ರಂದು ಬೆಳಿಗ್ಗೆ 06:00 ಗಂಟೆಯಿಂದ ದಿನಾಂಕ 03/02/2022 ರಂದು  ಬೆಳಿಗ್ಗೆ  10:00 ಗಂಟೆಯ  ಮಧ್ಯಾವದಿಯಲ್ಲಿ  ನಾವುಂದ ಗ್ರಾಮದ ರೈಲ್ವೆ ಬ್ರಿಡ್ಜ್ ಬಳಿಯ  ಸೌಪರ್ಣಿಕ ಹೊಳೆಯ ದಡದ ಅಂಚಿನಲ್ಲಿ  ನಡೆದುಕೊಂಡು ಹೋಗುತ್ತಿರುವಾಗ ಆಕಸ್ಮಿಕವಾಗಿ ಕಾಲುಜಾರಿ  ನೀರಿಗೆ ಬಿದ್ದು  ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 05/2022 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಇತ್ತೀಚಿನ ನವೀಕರಣ​ : 04-02-2022 09:33 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080