ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಬೈಂದೂರು :ಫಿರ್ಯಾದಿ ಮಹಾಬಲ ಮೆಂಡನ್ ಪ್ರಾಯ:61 ವರ್ಷ ತಂದೆ: ವೆಂಕ್ಟ್  ಮೆಂಡನ್ ವಾಸ: ಕಾರಂತಬೆಟ್ಟು ಚಿಕ್ತಾಡಿ,  ಹೇರೂರು ಗ್ರಾಮ ಬೈಂದೂರು ಇವರು ದಿನಾಂಕ 03-02-2022 ರಂದು 19:40 ಗಂಟೆಗೆ ಹೇರೂರು ಗ್ರಾಮದ ಗಾರ್ಡ ಶೆಡ್  ಎಂಬಲ್ಲಿ  ರಾಘವೇಂದ್ರ ಎಂಬವರ ಅಂಗಡಿಯಲ್ಲಿ ಸಾಮಾನು ಖರೀದಿಸಿ ವಾಪಾಸ್ಸು ಮನೆಗೆ ಹೋಗಲು ರಸ್ತೆ ಬದಿಯಲ್ಲಿ ನಿಂತು ಕೊಂಡಿರುವ ಸಮಯ ಯೆರುಕೋಣೆ ಕಡೆಯಿಂದ ಅರೆಹೊಳೆ ಕ್ರಾಸ್ ಕಡೆಗೆ KA 20 EB 6588 ನೇ ಮೋಟಾರು ಸೈಕಲ್ ಸವಾರ ಅಣ್ಣಪ್ಪನು ಮೋಟಾರು ಸೈಕಲ್ ನ್ನುಅತೀ ವೇಗ ಹಾಗೂ ಅಜಾಗರೂಕತೆಯಿಂದ  ರಸ್ತೆಯ ತೀರಾ ಎಡ  ಬದಿಗೆ ಚಲಾಯಿಸಿಕೊಂಡು ಬಂದು ರಸ್ತೆಯ ಎಡ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ  ಪಿರ್ಯಾದುದಾರರ ಸಂಬಂದಿ ಗಣೇಶ್ ಎಂಬವರಿಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ  ಗಣೇಶ್ ಎಂಬವರು ರಸ್ತೆಗೆ ಬಿದ್ದು  ತಲೆಗೆ, ಕಿವಿಗೆ ತೀವ್ರ  ಸ್ವರೂಪದ ರಕ್ತಗಾಯವಾದವರನ್ನು ಚಿಕಿತ್ಸೆ ಬಗ್ಗೆ ಕುಂದಾಪುರ ಆದರ್ಶ ಆಸ್ಪತ್ರೆಗೆ ಕರೆದುಕೊಂಡು  ಹೋದಲ್ಲಿ ವೈದ್ಯರು ಪರೀಕ್ಷೀಸಿ  ಚಿಕಿತ್ಸೆ ನೀಡಿ  ಹೆಚ್ಚಿನ ಚಿಕಿತ್ಸೆ ಬಗ್ಗೆ ಉಡುಪಿ ಆದರ್ಶ ಆಸ್ಪತ್ರೆಗೆ ಕರೆದು ಕೊಂಡು  ಹೋಗಲು ಸೂಚಿಸಿದ ಮೇರೆಗೆ   ಉಡುಪಿ ಆದರ್ಶ ಆಸ್ಪತ್ರೆಗೆ ಕರೆದು ಕೊಂಡು  ಹೋದಲ್ಲಿ ವೈದ್ಯರು  ಪರೀಕ್ಷೀಸಿ ಒಳರೋಗಿಯಾಗಿ ದಾಖಲಿಸಿಕೊಂಡಿರುತ್ತಾರೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣಾ ಅಪರಾದ ಕ್ರಮಾಂಕ 36/2022 ಕಲಂ. 279, 338 ಬಾ. ದಂ. ಸಂ. ರಂತೆ ಪ್ರಕರಣ ದಾಖಲಿಸಲಾಗಿದೆ.

  ಇತರ ಪ್ರಕರಣ

  •  ಗಂಗೊಳ್ಳಿ:ಫಿರ್ಯಾದಿ ಶೇಖರ ಜಿ, ಪ್ರಾಯ :52  ವರ್ಷ, ವಾಸ:  “ಸಮೃದ್ಧಿ” ಗಂಗೊಳ್ಳಿ ಗ್ರಾಮ, ಕುಂದಾಪುರ ಇವರು ಗಂಗೊಳ್ಳಿ ಗ್ರಾಮದ ವೀರೇಶ್ವರ ದೇವಸ್ಥಾನದ ಹತ್ತಿರದ “ಸಮೃದ್ಧಿ” ಎಂಬ ಹೆಸರಿನ ಮನೆಯ ನಿವಾಸಿಯಾಗಿದ್ದು, ದಿನಾಂಕ 04/02/2022 ರಂದು ಸಮಯ ಬೆಳಿಗ್ಗಿನ ಜಾವ ಸುಮಾರು 2:45 ಗಂಟೆಗೆ ಯಾರೋ ಕಿಡಿಗೇಡಿಗಳು ಫಿರ್ಯಾದುದಾರರ ಮನೆಯ ಸಿಟ್‌ಔಟ್‌ ನ ಕಿಟಕಿಯ ಗಾಜಿಗೆ ಶಿಲೆ ಕಲ್ಲಿನಿಂದ ಹೊಡೆದು ಒಂದು ಕಿಟಕಿಯ ಎರಡು ಗಾಜುಗಳನ್ನು ಒಡೆದಿದ್ದು, ಶಬ್ದ ಕೇಳಿ ಫಿರ್ಯಾದುದಾರರು ಹಾಗೂ ಅವರ ಭಾವ ಹೊರಗೆ ಬಂದು ನೋಡಿದಲ್ಲಿ ಮನೆಯ ಹೊರಗೆ ಯಾರೂ ಕಾಣಿಸದೇ ಇದ್ದು, ಮನೆಯ ಸಿಟ್‌ಔಟ್‌ ನ ಜಗುಲಿಯ ಮೇಲೆ ಒಂದು ಶಿಲೆ ಕಲ್ಲು ಹಾಗೂ ಅಂಗಳದಲ್ಲಿ ಒಂದು ಶಿಲೆ ಕಲ್ಲು ಬಿದ್ದಿರುವುದು ಕಂಡು ಬಂದಿರುತ್ತದೆ.ಈ ಬಗ್ಗೆ  ಗಂಗೊಳ್ಳಿ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ  16/2022 ಕಲಂ  447, 427 ಐ.ಪಿ.ಸಿ ಯಂತೆ ಪ್ರಕರಣ ದಾಕಲಿಸಲಾಗಿದೆ.

ಇತ್ತೀಚಿನ ನವೀಕರಣ​ : 04-02-2022 06:12 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080