ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣಗಳು

  • ಉಡುಪಿ: ಪಿರ್ಯಾದಿದಾರರಾದ ರಂಗ  ಬಿ (54), ತಂದೆ:  ಅಂಗಾರ, ವಾಸ: ರಾಘವೇಂದ್ರ  ನಿಲಯ  ಬುಡ್ನಾರು  2 ನೇ  ರಸ್ತೆ  ಕುಂಜಿಬೆಟ್ಟು  ಅಂಚೆ  ಉಡುಪಿ  ತಾಲೂಕು  ಉಡುಪಿ  ಜಿಲ್ಲೆ ಇವರು ದಿನಾಂಕ 02/02/2021 ರಂದು  ಸಂಜೆ  ಮನೆಗೆ  ಬೇಕಾದ  ಸಾಮಾನು  ತರಲು   ಬುಡ್ನಾರು  ಕುಂಜಿಬೆಟ್ಟುವಿನಿಂದ  ಎಂ ಜಿ ಎಂ    ಜಂಕ್ಷನ್ ನ  ಬಳಿ  ಇರುವ  ಅಂಗಡಿಗೆ  ಹೋಗಲು  ಜಂಕ್ಷನ್  ಬಳಿ ರಾಷ್ಟ್ರೀಯ  ಹೆದ್ದಾರಿ 169 (ಎ) ರಲ್ಲಿ ರಸ್ತೆ  ಬದಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಸಂಜೆ  5:30 ಗಂಟೆಗೆ  ಮಣಿಪಾಲ  ಕಡೆಯಿಂದ  ಉಡುಪಿ  ಕಡೆಗೆ KA-05-AC- 0193 ನೇ ಬಸ್ಸಿನ  ಚಾಲಕ  ಜೇಮ್ಸ್  ಹ್ಯಾಮಲ್ಟನ್  ಪೆಂಗಲ್  ಎಂಬಾತ  ತನ್ನ  ಬಸ್ಸನ್ನು   ದುಡುಕುತನ  ಮತ್ತು  ನಿರ್ಲಕ್ಷ್ಯತನದಿಂದ  ಚಲಾಯಿಸಿ  ಪಿರ್ಯಾದಿದಾರರಿಗೆ   ಹಿಂದಿನಿಂದ  ಡಿಕ್ಕಿ  ಹೊಡೆದ  ಪರಿಣಾಮ   ಪಿರ್ಯಾದಿದಾರರು ರಸ್ತೆಗೆ  ಬಿದ್ದು  ತಲೆಗೆ  ಹಣೆಗೆ  ಮೂಗಿಗೆ  ಎಡ ಕೈಗೆ  ಗಾಯವಾಗಿದ್ದು  ಸೊಂಟಕ್ಕೆ  ಗುದ್ದಿದ  ನೋವಾಗಿರುತ್ತದೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 10/2021 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕುಂದಾಪುರ: ದಿನಾಂಕ 02/02/2021 ರಂದು ಬೆಳಿಗ್ಗೆ 9:30 ಗಂಟೆಗೆ ಕುಂದಾಪುರ  ತಾಲೂಕಿನ,  ಕನ್ಯಾನ  ಗ್ರಾಮದ, ಜಾಡಿ ರಸ್ತೆಯ ಕಲ್ಲುಕಂಬ ಎಂಬಲ್ಲಿ  ಮಣ್ಣಿನ ಕಚ್ಚಾ ರಸ್ತೆಯಲ್ಲಿ ಆಪಾದಿತ ಪ್ರಕಾಶ್‌ ಹೆಗ್ಡೆ KA-20-ET-3558ನೇ ಸ್ಕೂಟರ್‌ನಲ್ಲಿ ರಾಜೇಶ್‌ ಎಂಬುವವರನ್ನು ಸಹ ಸವಾರರಾಗಿ ಕುಳ್ಳಿರಿಸಿಕೊಂಡು  ದೇವಲ್ಕುಂದ ಕಡೆಯಿಂದ ಕೆಂಚನುರು ಕಡೆಗೆ ಅತೀವೇಗ ಹಾಗೂ ನಿರ್ಲಕ್ಷ್ಯತನದಿಂದ  ಸವಾರಿ ಮಾಡಿಕೊಂಡು ಬಂದು, ಕಚ್ಚಾ ರಸ್ತೆಯಲ್ಲಿ ಸ್ಕಿಡ್‌‌‌  ಆಗಿ ವಾಹನ  ಸಮೇತ ರಸ್ತೆಯಲ್ಲಿ  ಬಿದ್ದು  ಪಿರ್ಯಾದಿದಾರರ ಸೊಂಟಕ್ಕೆ ಮೂಳೆ ಮುರಿತದ ಗಾಯ ಹಾಗೂ ಬಲ ಕೈಗೆ ತರಚಿದ ಗಾಯವಾಗಿ ಕುಂದಾಪುರ ಚಿನ್ಮಯಿ  ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ  ದಾಖಲಾಗಿರುವುದಾಗಿದೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 17/2021 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣಗಳು

  • ಹೆಬ್ರಿ: ಪಿರ್ಯಾದಿದಾರರಾದ ಸೌಮ್ಯ (19), ತಂದೆ: ಸಂಜೀವ ಪೂಜಾರಿ,  ವಾಸ: ಹರಿಕೃಪಾ, ಮೂಡುಕುಡುರು, ಮುನಿಯಾಲು, ವರಂಗ ಗ್ರಾಮ  ಇವರ ತಾಯಿ ಮಾಲಿನಿ (48) ರವರು ಸುಮಾರು ವರ್ಷಗಳಿಂದ ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದು ಈ ಬಗ್ಗೆ ಅವರಿಗೆ ಚಿಕಿತ್ಸೆ ಕೊಡಿಸಿದರೂ ಗುಣಮುಖರಾಗದೇ ಇದ್ದು, ದಿನಾಂಕ 03/02/2021 ರಂದು ಬೆಳಿಗ್ಗೆ 09:30 ಗಂಟೆಯಿಂದ ಸಂಜೆ 16:00 ಗಂಟೆ ಮಧ್ಯಾವಧಿಯಲ್ಲಿ ವರಂಗ ಗ್ರಾಮದ ಮಾತಿಬೆಟ್ಟು ಎಂಬಲ್ಲಿರುವ ತನ್ನ ವಾಸದ ಮನೆಯ ಮಲಗುವ ಕೋಣೆಯಲ್ಲಿ ಫ್ಯಾನಿನ ಹುಕ್ಕಿಗೆ ನೈಲಾನ್ ಹಗ್ಗದಿಂದ ಕಟ್ಟಿ ಇನ್ನೊಂದು ತುದಿಯನ್ನು ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರವುದಾಗಿದೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆ ಯುಡಿಅರ್ ಕ್ರಮಾಂಕ 05/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 
  • ಉಡುಪಿ: ಪಿರ್ಯಾದಿದಾರರಾದ ಶ್ವೇತಾ ಕೆ ಟಿ (30), ಗಂಡ: ಅರುಣ್ ಬಾಬು, ವಾಸ: ಶೋಭಾ ನಿವಾಸ್ ಬನ್ನಂಜೆ ಮೂಡನಿಡಂಬೂರು ಗ್ರಾಮ ಉಡುಪಿ ಜಿಲ್ಲೆ ಇವರ  ಅಣ್ಣನಾ ಟಿ. ಶರತ್ (35) ರವರು ಹೆಂಡತಿ ಹಾಗೂ ಮಗುವಿನಿಂದ ದೂರಾಗಿರುವುದರಿಂದ ಹಾಗೂ ಗಂಡ-ಹೆಂಡತಿ ಕೇಸು ನ್ಯಾಯಾಲಯದಲ್ಲಿರುವ ವಿಚಾರದಿಂದ ಮನನೊಂದು ಜೀವನದಲ್ಲಿ ಜಿಗುಪ್ಸೆ ಹೊಂದಿ ದಿನಾಂಕ 03/02/2021ರಂದು  ಬೆಳಿಗ್ಗೆ 03:00 ಗಂಟೆಗೆ ಮನೆಯಲ್ಲಿ ಯಾವುದೋ ವಿಷ ಪದಾರ್ಥ ಸೇವಿಸಿ ಅಸ್ವಸ್ಥಗೊಂಡ ಸ್ಥಿತಿಯಲ್ಲಿ ಕಂಡುಬಂದಿದ್ದು, ಬೆಳ್ಳಿಗ್ಗೆ 8:00 ಗಂಟೆಗೆ ಉಡುಪಿ ಮಿಷನ್ ಆಸ್ಪತ್ರೆಗೆ ಚಿಕೆತ್ಸೆಗೆ ದಾಖಲು ಮಾಡಿದ್ದು, ಅಲ್ಲಿನ ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ 03/02/2021 ರಂದು ಸಮಯ ಸಂಜೆ 04:30 ಗಂಟೆಗೆ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 03/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಗಾಂಜಾ ಸೇವನೆ ಪ್ರಕರಣ

  • ಗಂಗೊಳ್ಳಿ: ದಿನಾಂಕ 31/01/2021 ರಂದು ಭೀಮಾಶಂಕರ ಸಿನ್ನೂರ ಸಂಗಣ್ಣ, ಪೊಲೀಸ್ ಉಪನಿರೀಕ್ಷಕರು, ಗಂಗೊಳ್ಳಿ ಪೊಲೀಸ್ ಠಾಣೆ ಇವರು  ರೌಂಡ್ಸ್‌ ಕರ್ತವ್ಯದಲ್ಲಿರುವಾಗ ಮುಳ್ಳಿಕಟ್ಟೆ ನೀರು ಟ್ಯಾಂಕ್ ಬಳಿ, ಗೇರು ಪ್ಲಾಂಟೇಶನ್‌ನಲ್ಲಿ ಓರ್ವ ವ್ಯಕ್ತಿಯು ಗಾಂಜಾ ಸೇವಿಸುತ್ತಿರುವುದಾಗಿ ದೊರೆತ ಮಾಹಿತಿಯಂತೆ ಸ್ಥಳಕ್ಕೆ ತೆರಳಿ ಪರಿಶೀಲಿಸಲಾಗಿ ಓರ್ವ ವ್ಯಕ್ತಿ ಅಮಲಿನಲ್ಲಿ ತೂರಾಡುತ್ತಿರುವುದು ಕಂಡು ಬಂದಿದ್ದು, ಆತನ ಹೆಸರು ವಿಳಾಸ ವಿಚಾರಿಸಲಾಗಿ ನಿಶಾನ್ (20), ತಂದೆ: ಸುಕುಮಾರ್ ದೇವಾಡಿಗ, ವಾಸ: ರಾಷ್ಟ್ರೀಯ ಹೆದ್ದಾರಿ-66 ಮುಳ್ಳಿಕಟ್ಟೆ, ಹೊಸಾಡು ಗ್ರಾಮ, ಕುಂದಾಪುರ ತಾಲೂಕು ಎಂದು ತಿಳಿಸಿದ್ದು, ಆಪಾದಿತನು ಮಾದಕ ಪದಾರ್ಥ ಸೇವನೆ ಮಾಡಿರುವ ಬಗ್ಗೆ ಅನುಮಾನ ಇದ್ದುದರಿಂದ ಆತನನ್ನು ಕೆ.ಎಂ.ಸಿ ಮಣಿಪಾಲ ಫಾರೆನ್ಸಿಕ್ ಮೆಡಿಸಿನ್ ವಿಭಾಗದ ತಜ್ಞರ ಮುಂದೆ ಹಾಜರುಪಡಿಸಿ ವೈದ್ಯಕೀಯ ಪರೀಕ್ಷೆ ನಡೆಸಲಾಗಿ ಆಪಾದಿತನು ಗಾಂಜಾ ಸೇವನೆ ಮಾಡಿರುವುದಾಗಿ ವರದಿ ನೀಡಿರುವುದಾಗಿದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 11/2021 ಕಲಂ : 27(ಬಿ) NDPS Act ರಂತೆ ಪ್ರಕರಣ ದಾಖಲಾಗಿರುತ್ತದೆ. 

ಇತರ ಪ್ರಕರಣ

  • ಕೊಲ್ಲೂರು: ಪಿರ್ಯಾದಿದಾರರಾದ ಶೇಷಯ್ಯ (46), ತಂದೆ: ಚಿಕ್ಕಯ್ಯ, ವಾಸ: ರಣಘಟ್ಟ ಸಂಶೆ ಹಳ್ಳಿ, ಬೇಲೂರು ಗ್ರಾಮ, ಹಾಸನ ಜಿಲ್ಲೆ ಇವರು ದಿನಾಂಕ  01/02/2021 ರಂದು  ಶಿವವೀರ ಸಂಗಪ್ಪ , ಶಿವಕುಮಾರ್ @ನಿಂಗಪ್ಪ ಹಾಗೂ ರಘು ಎಂಬುವವರೊಂದಿಗೆ KA-51-N-5488 ನೇ ಇನ್ನೋವಾ ಕಾರು ಚಾಲಕ ಮಂಜುನಾಥ ಎಂಬುವವರೊಂದಿಗೆ  ಪ್ರವಾಸಕ್ಕಾಗಿ ಚಿತ್ರದುರ್ಗ ಹಂಪೆ ಬೇಟಿ ನೀಡಿ ಕೊಲ್ಲೂರಿಗೆ ಬಂದು ದಿನಾಂಕ 03/02/2021 ರಂದು ಕೊಲ್ಲೂರಿನಿಂದ ಉಡುಪಿಗೆ ಹೋಗುತ್ತಿರುವಾಗ ಬೆಳಿಗ್ಗೆ 09:30 ಗಂಟೆಗೆ ಕೊಲ್ಲೂರು ಗ್ರಾಮದ ಆನೆಜರಿ ಬಳಿ ಪಿರ್ಯಾದಿದಾರರು ಮತ್ತು ಅವರ ಸಂಗಡಿಗರು ಪ್ರಯಾಣಿಸುತ್ತಿದ್ದ KA-51-N-5488  ಕಾರನ್ನು ಆರೋಪಿಗಳಾದ 1)ಕಾಂತರಾಜು, 2) ಚಂದು,3)ಕುಮಾರ, 4) ದೇವರಾಜ ಹಾಗೂ ಇತರರು KA-41-Z-7114 ನೇ ಮಾರುತಿ ಶೀಪ್ಟ್ ಕಾರು ಮತ್ತು  ತವೇರ ಕಾರಿನಲ್ಲಿ ಬಂದು ಅಡ್ಡ ಗಟ್ಟಿ  ಪಿರ್ಯಾದಿದಾರರ ಕಾರಿನ ಎಡಬದಿಯ ಡೋರ್ ನ ಗ್ಲಾಸ್ ನ್ನು ಕೈಯಿಂದ ಒಡೆದು ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿ ಪಿರ್ಯಾದಿದಾರರನ್ನು, ಶಿವವೀರ ಸಂಗಪ್ಪ ಮತ್ತು ಶಿವಕುಮಾರ್@ ನಿಂಗಪ್ಪ ನನ್ನು ಕಾರಿನಿಂದ ಬಲವಂತವಾಗಿ ಎಳೆದು ಪಿರ್ಯಾದಿದಾರರು ಮತ್ತು   ಶಿವವೀರ ಸಂಗಪ್ಪರವರನ್ನು KA-41-Z-7114 ನೇ ಮಾರುತಿ ಶೀಪ್ಟ್ ಕಾರಿನಲ್ಲಿ ಬಲವಂತವಾಗಿ ಕುಳ್ಳಿರಿಸಿ, ಶಿವಕುಮಾರ್ ನಿಂಗಪ್ಪನನ್ನು ಬಲವಂತವಾಗಿ ತವೇರ ಕಾರಿನಲ್ಲಿ ಕುಳ್ಳರಿಸಿ ಅಪಹರಿಸಿಕೊಂಡು ಹೋಗಿದ್ದು, ವಂಡ್ಸೆ ಎಂಬಲ್ಲಿ ಸಾರ್ವಜನಿಕರು ಸೇರಿದ್ದನ್ನು ನೋಡಿ ಕಾರನ್ನು ನಿಲ್ಲಿಸಿದಾಗ ಪಿರ್ಯಾದಿದಾರರು ಮತ್ತು  ಶಿವವೀರ ಸಂಗಪ್ಪ ನವರು ಕಾರಿನಿಂದ ತಪ್ಪಿಸಿಕೊಂಡು ಠಾಣೆಗೆ ಬಂದಿದ್ದು, ಶಿವಕುಮಾರ್@ ನಿಂಗಪ್ಪ ನನ್ನು ಆರೋಪಿತರು ಅಪಹರಿಸಿ ಕೊಂಡು ಹೋಗಿರುತ್ತಾರೆ. ಪಿರ್ಯಾದಿದಾರರ ಹಾಗೂ ಶಿವವೀರ ಸಂಗಪ್ಪ, ಶಿವಕುಮಾರ್ @ನಿಂಗಪ್ಪ ಇವರು ಕೋಗಿಲಮನೆ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಸದಸ್ಯರಾಗಿ ಆಯ್ಕೆಯಾಗಿದ್ದು, ಗ್ರಾಮ ಪಂಚಾಯತ್ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆಯ ಆಯ್ಕೆ ಸಮಯದಲ್ಲಿ ಹಾಜರಿರದಂತೆ ತಡೆಯುವ ಉದ್ದೇಶದಿಂದ ಆರೋಪಿತರಾದ ಕಾಂತರಾಜು, ದೇವರಾಜ, ಚಂದು, ಕುಮಾರ ಮತ್ತು ಇತರರು KA-41-Z-7114 ಶೀಪ್ಟ್ ಹಾಗೂ ಇನ್ನೊಂದು ತವೇರ ಕಾರಿನಲ್ಲಿ ಬಂದು ಅಡ್ಡಗಟ್ಟಿ  ಹಲ್ಲೆ ಮಾಡಿ ಹೆದರಿಸಿ ಬಲಾತ್ಕಾರವಾಗಿ ಅಪಹರಿಸಿರುವುದಾಗಿ ನೀಡಿದ ದೂರಿನಂತೆ ಕೊಲ್ಲೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 03/2021 ಕಲಂ: 341, 323, 363, 427, 504, 506, ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಬೈಂದೂರು: ಪಿರ್ಯಾದಿದಾರರಾದ ನೇತ್ರಾ ಪದ್ಮಯ್ಯ ಮೊಗವೀರ (39), ಗಂಡ: ಪದ್ದಯ್ಯ ಮೊಗವೀರ, ವಾಸ: ಸ್ವಾಗತಂ ಅಳಿವೆಗದ್ದೆ ಶಿರೂರು ಗ್ರಾಮ ಬೈಂದೂರು ತಾಲೂಕು ಇವರು ದಿನಾಂಕ 26/01/2021 ರಂದು ಸಂಜೆ 07:30 ಗಂಟೆಗೆ ಅವರ ಮಕ್ಕಳೊಂದಿಗೆ ಮನೆಯಲ್ಲಿರುವಾಗ ಪರಿಚಯದವರಾದ ಶಿವರಾಜ ಮೋಗವೀರ, ಶರತ್ ನಾಗೇಶ ಮೊಗವೀರ, ಚಂದ್ರ ಶ್ರೀಧರ ಮೊಗವೀರ, ನಾಗರಾಜ ಶ್ರೀಧರ ಮೋಗವೀರ ಹಾಗೂ ಇತರರು ಪಿರ್ಯಾದಿದಾರರ ಮನೆಯ ಒಳಗೆ ಅಕ್ರಮ ಪ್ರವೇಶ  ಮಾಡಿ, ಎಲ್ಲರೂ ಒಟ್ಟಾಗಿ ಸೇರಿ ಪಿರ್ಯಾದಿದಾರರಿಗೆ  ಅವಾಚ್ಯ ಶಬ್ದಗಳಿಂದ ಬೈದು, ಶಿವರಾಜ್ ಮತ್ತು ನಾಗರಾಜ ಪಿರ್ಯಾದಿದಾರರಿಗೆ ಹೊಡೆದು ದೂಡಿ ಹಾಕಿ, ಪಿರ್ಯಾದಿದಾರರು  ನೆಲಕ್ಕೆ ಬಿದ್ದಾಗ ಇಬ್ಬರು ಸೇರಿ ಕಾಲಿನಿಂದ ತುಳಿದಿರುತ್ತಾರೆ. ಪಿರ್ಯಾದಿದಾರರಿಗೆ ಶಿವರಾಜ ಮತ್ತು ನಾಗರಾಜರವರು ಹೊಡೆಯುವಾಗ ಚಂದ್ರ ಮತ್ತು ಶರತ್ ರವರು ಅವರ ಮೊಬೈಲ್ ನಲ್ಲಿ ವಿಡಿಯೋ ಮಾಡಿ, ನಂತರ ವಿಡಿಯೋವನ್ನು ವ್ಯಾಟ್ಸ್ ಪ್ ನಲ್ಲಿ ವೈರಲ್ ಮಾಡಿರುತ್ತಾರೆ. ಇದರಿಂದ ಪಿರ್ಯಾದಿದಾರರಿಗೆ ಮಾನಸಿಕವಾಗಿ ತುಂಬಾ ನೋವಾಗಿರುತ್ತದೆ. ಅಲ್ಲದೇ  ಜೀವ ಬೆದರಿಕೆ ಹಾಕಿ ಹೋಗಿರುವುದಾಗಿ ನೀಡಿದ ದೂರಿನಂತೆ ಬೈಂದೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 40-2021 ಕಲಂ: 448, 354, 504, 506 ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 
  • ಪಡುಬಿದ್ರಿ: ಪಿರ್ಯಾದಿದಾರರಾದ ತನುಶ್ರೀ ಎಸ್ ಕಾಂಚನ್ (34), ತಂದೆ: ದಿ. ಸುಧಾಕರ ಎಂ ಕಾಂಚನ್, ವಾಸ: ನಳಿನಿ ಕುಟೀರ, ವಿದ್ಯಾ ಪ್ರಬೋಧಿನಿ ಶಾಲೆಯ ಬಳಿ, ಬಡಾ ಎರ್ಮಾಳ್ ಗ್ರಾಮ, ಕಾಪು ತಾಲೂಕು, ಉಡುಪಿ ಜಿಲ್ಲೆ ಇವರ ತಾಯಿ ಮತ್ತು ಇಬ್ಬರು ಸಹೋದರಿಯರ ಜೊತೆ ಮುಂಬಯಿಯಲ್ಲಿ ವಾಸವಿದ್ದು, ದಿನಾಂಕ 01/02/2021 ರಂದು ಸಹೋದರಿ ನಿಶಾ ಕಾಂಚನ್ ರವರ ಜೊತೆ ಬಡಾ ಎರ್ಮಾಳ್ ನಲ್ಲಿರುವ ಮೂಲ ಮನೆಗೆ ಬಂದಿರುತ್ತಾರೆ. ದಿನಾಂಕ 03/02/2021 ರಂದು 17:00 ಗಂಟೆಗೆ ಪಿರ್ಯಾದಿದಾರರ ಮಾವ ಜಯ ಎನ್ ಸಾಲ್ಯಾನ್ ಮತ್ತು ಅವರ ಮಗ ಅಮಿತ್ ಜೆ ಸಾಲ್ಯಾನ್ ರವರು ಒಂದು ಬೈಕಿನಲ್ಲಿ ಪಿರ್ಯಾದಿದಾರರ ಮನೆಯ ಬಳಿ ಬಂದು, ಮನೆಗೆ ಅಕ್ರಮ ಪ್ರವೇಶ ಮಾಡಿ, ಜಾಗದ ವಿಚಾರದಲ್ಲಿ ವಾದ ಮಾಡಿ, ಅವಾಚ್ಯ ಶಬ್ಧಗಳಿಂದ ಬೈದಿರುತ್ತಾರೆ. ಮತ್ತು ಪಿರ್ಯಾದಿದಾರರ ಹತ್ತಿರ ಬಂದಾಗ ಅವರು ಮತ್ತು ಅವರ ಅಕ್ಕ ನಿಶಾ ಕಾಂಚನ್ ರವರು ಮನೆಯಿಂದ ಹೊರಗೆ ಬಂದಾಗ ಅಲ್ಲಿಗೂ ಬಂದ ಜಯ ಎನ್ ಸಾಲ್ಯಾನ್ ಮತ್ತು ಅಮಿತ್ ಜೆ  ಸಾಲ್ಯಾನ್ ರವರು ಪಿರ್ಯಾದಿದಾರರಿಗೆ ಕೈಯಿಂದ ಹೊಡೆದು, ನಂತರ ಅಮಿತ್ ಸಾಲ್ಯಾನ್ ಅಲ್ಲೇ ಇದ್ದ ರಾಡ್‌‌ನಿಂದ ಹೊಡೆದು ತಲೆಗೆ ಗಾಯಗೊಳಿಸಿರುತ್ತಾರೆ. ನಿಶಾರವರು ತಪ್ಪಿಸಲು ಬಂದಾಗ ಇಬ್ಬರೂ ಸೇರಿ ನಿಶಾರವರಿಗೆ ಕೈಯಿಂದ ಹೊಡೆದು, ಜೀವ ಬೆದರಿಕೆ ಹಾಕಿ ಅಲ್ಲಿಂದ ಹೋಗಿರುತ್ತಾರೆ. ಗಾಯಗೊಂಡ ಪಿರ್ಯಾದಿದಾರರು ಪಡುಬಿದ್ರಿ ಸಿದ್ದಿವಿನಾಯಕ ಆಸ್ಪತ್ರೆಯಲ್ಲಿ ಹೊರ ರೋಗಿಯಾಗಿ ಚಿಕಿತ್ಸೆ ಪಡೆದಿರುವುದಾಗಿ ನೀಡಿದ ದೂರಿನಂತೆ ಪಡುಬಿದ್ರಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 10/2021 ಕಲಂ: 448, 323, 324, 504, 506 ಜೊತೆಗೆ 34  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಇತ್ತೀಚಿನ ನವೀಕರಣ​ : 04-02-2021 10:31 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080