ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣಗಳು

  • ಬೈಂದೂರು: ಪಿರ್ಯಾದಿದಾರರಾದ ಚಂದ್ರ ಮರಾಠಿ [36] ತಂದೆ: ದಿ. ವೆಂಕ ಮರಾಠಿ ವಾಸ: ಸಸಿಹಿತ್ಲು ಗಂಗನಾಡು ಬೈಂದೂರು ಗ್ರಾಮ ಮತ್ತು ತಾಲೂಕು ಇವರು ದಿನಾಂಕ 03/02/2021 ರಂದು ಅವರ ಮೋಟಾರ್ ಸೈಕಲ್ ನಲ್ಲಿ ಬೈಂದೂರಿನಿಂದ ಗಂಗನಾಡಿಗೆ ಅವರ ಮನಗೆ ಹೋಗುತ್ತಿರುವಾಗ ಸಮಯ ಸುಮಾರು ಮದ್ಯಾಹ್ನ 13:30 ಗಂಟೆಗೆ ಎತ್ತಾಬೇರು ಸಮೀಪ ಹೋಗುತ್ತಿರುವಾಗ ಅವರ ಎದುರುಗಡೆಯಿಂದ ವಿ.ಪಿ ಜೋಷಿರವರು ಕೆಎ-20-ಈಡಿ-0333 ನೇದರ ಮೋಟಾರ್ ಸೈಕಲ್ ನಲ್ಲಿ ಹೋಗುತ್ತಿರುವಾಗ ಇವರ ಹಿಂದಿನಿಂದ ಅಂದರೆ ಬೈಂದೂರು ಕಡೆಯಿಂದ ಗಂಗನಾಡು ಕಡೆಗೆ ಕೆಎ-20-ಸಿ-6593 ನೇದರ ಟಿಪ್ಪರ್ ಲಾರಿಯ ಚಾಲಕನು ಆತನ ಟಿಪ್ಪರ್ ನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಚಂದ್ರ ಮರಾಠಿ ರವರ ಎದುರುಗಡೆ ಹೋಗುತ್ತಿದ್ದ ಮೋಟಾರ್ ಸೈಕಲ್ ನ್ನು ಓವರ್ ಟೇಕ್ ಮಾಡುವ ಭರದಲ್ಲಿ ಮೋಟಾರ್ ಸೈಕಲ್ ನ ಬಲಬದಿಯ ಹ್ಯಾಂಡಲ್ ಗೆ ಟಿಪ್ಪರ್ ತಾಗಿದ್ದು, ಪರಿಣಾಮ .ಪಿ ಜೋಷಿರವರು ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದಿದ್ದು, ಅವರ ತಲೆಗೆ ಹಾಗೂ ಕಣ್ಣಿನ ಎಡಭಾಗಕ್ಕೆ ಮತ್ತು ಎಡಬದಿಯ ಭುಜಕ್ಕೆ ತೀವ್ರ ತರಹದ ಗಾಯವಾಗಿರುತ್ತದೆ. ಗಾಯಗೊಂಡ ವಿ.ಪಿ ಜೋಷಿರವರನ್ನು ಚಿಕಿತ್ಸೆ ಬಗ್ಗೆ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಒಳರೋಗಿಯಾಗಿ ದಾಖಲಿಸಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 42/2021 ಕಲಂ: 279,338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾಪು: ದಿನಾಂಕ 04/02/2021 ರಂದು ಬೆಳಗ್ಗೆ 05:45 ಗಂಟೆಗೆ KA-14-B-0622 ನೇ ಸಿಲಿಂಡರ್ ಲಾರಿಯ ಚಾಲಕ ಅಸಾದುಲ್ಲಾ ಉಡುಪಿ ಮಂಗಳೂರು ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ತನ್ನ ಲಾರಿಯನ್ನು ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಅತೀ ವೇಗ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು, ಪಾಂಗಾಳ ಡಿವೈಡರ್‌ಮತ್ತು ಡಿವೈಡರ್‌ಗೆ ಅಳವಡಿಸಿದ ಸೋಲಾರ್ ಬ್ಲಂಕರ್ ಢಿಕ್ಕಿ ಹೊಡೆದು ಮಂಗಳೂರು ಉಡುಪಿ ರಸ್ತೆಯಲ್ಲಿ ಮಗುಚಿ ಬಿದ್ದ, ಪರಿಣಾಮ ಲಾರಿ ಜಖಂ ಗೊಂಡಿದ್ದು, ಅಲ್ಲದೇ ನವಯುಗ ಕಂಪನಿಗೆ ಸೇರಿದ ರಸ್ತೆಗೆ ಅಳವಡಿಸಿದ ಸೋಲಾರ್ ಬ್ಲಿಂಕರ್ ಮತ್ತು ಮೆಟಲ್ ಕ್ರ್ಯಾಶ್‌ಬ್ಯಾರಿಯರ್ ಜಖಂ ಗೊಂಡಿರುತ್ತದೆ. ಇದರಿಂದಾಗಿ ನವಯುಗ ಕಂಪನಿಗೆ ಸುಮಾರು 76,760 ರೂ/- ನಷ್ಟ ಉಂಟಾಗಿರುತ್ತದೆ. ಈ ಅಪಘಾತದಿಂದ ಲಾರಿ ಚಾಲಕ ಅಸಾದುಲ್ಲಾ ಗಾಯ ಗೊಂಡಿರುತ್ತಾರೆ, ಎಂಬುದಾಗಿ ಶೈಲೇಶ್ ಶೆಟ್ಟಿ (35) ತಂದೆ : ದಿ. ಜಯರಾಮ ಶೆಟ್ಟಿ ವಾಸ : ಕೊಡಮಜಲು ಮನೆ ಬಳಕುಂಜೆ ಮಂಗಳೂರು ಇವರು ನೀಡಿದ ದೂರಿನಂತೆ ಕಾಪು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 19/2021 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಬೈಂದೂರು: ಪಿರ್ಯಾದಿದಾರರಾದ ಆಶೀರ್ವಾದ (20) ತಂದೆ: ರವೀಂದ್ರ ಶೆಟ್ಟಿ ವಾಸ: ಮೇಲ್ಮನೆ ಉಪ್ರಳ್ಳಿ 11ನೇ ಉಳ್ಳೂರು ಗ್ರಾಮ ಬೈಂದೂರು ಇವರು ದಿನಾಂಕ 03/02/2020 ರಂದು ಸೈದಾನಿ ಚಿಕನ್ ಸೆಂಟರ್ ನ ಬಳಿ ನಿಂತುಕೊಂಡಿರುವಾಗ ಸಮಯ ಸುಮಾರು ಸಂಜೆ 7:00 ಗಂಟೆ ಸಮಯಕ್ಕೆ ರಾಷ್ಟ್ರೀಯ ಹೆದ್ದಾರಿ 66 ಲ್ಲಿ ನಾಗೂರು ಯೂಟರ್ನ್ ಬಳಿ ಕೆಎ-20-ಡ್ಲ್ಯೂ-9144ನೇ ಟಿ.ವಿ.ಎಸ್ ಮೋಟಾರ್ ಸೈಕಲ್ ನಲ್ಲಿ ಶುಕ್ರ ಪೂಜಾರಿಯವರು ಪಶ್ಚಿಮ ಬದಿಯ ರಸ್ತೆ ದಾಟುವರೇ ನಿಂತುಕೊಂಡಿರುವಾಗ ಕುಂದಾಫುರ ಕಡೆಯಿಂದ ಬೈಂದೂರು ಕಡೆಗೆ ಒಂದು ಕಾರು ಚಾಲಕನು ಆತನ ಕಾರನ್ನು 66 ರ ಪಶ್ಚಿಮ ಬದಿಯ ರಸ್ತೆಯಲ್ಲಿ ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ರಸ್ತೆಯ ತೀರಾ ಬಲ ಬದಿಗೆ ಬಂದು ಯುಟರ್ನ್ ಬಳಿ ರಸ್ತೆ ದಾಟುವರೇ ನಿಂತುಕೊಂಡಿರುವ ಟಿ ವಿ ಎಸ್ ಮೋಟಾರ್ ಸೈಕಲ್ ಗೆ ಢಿಕ್ಕಿ ಹೊಡೆದು ಕಾರನ್ನು ನಿಲ್ಲಿಸದೇ ಪರಾರಿಯಾಗಿರುತ್ತಾನೆ. ಆಶೀರ್ವಾದ ರವರು ಹಾಗೂ ಇತರರು ಅಲ್ಲಿಗೆ ಹೋಗಿ ಶುಕ್ರ ಪೂಜಾರಿಯವರನ್ನು ಎತ್ತಿ ಉಪಚರಿಸಿದ್ದು, ಶುಕ್ರ ಪೂಜಾರಿಯವರ ತಲೆಗೆ, ಬಲಕಾಲಿನ ಬೆರಳಿಗೆ ರಕ್ತಗಾಯವಾಗಿರುತ್ತದೆ. ಗಾಯಗೊಂಡ ಶುಕ್ರ ಪೂಜಾರಿಯವರನ್ನು ಚಿಕಿತ್ಸೆ ಬಗ್ಗೆ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಿಸಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 41/2021 ಕಲಂ: 279, 337 IPC & 134(A), 134(B) IMV Act ರಂತೆ ಪ್ರಕರಣ ದಾಖಲಾಗಿರುತ್ತದೆ.
  • ಮಲ್ಪೆ: ಪಿರ್ಯಾದಿದಾರರಾಧ ಶ್ರೀಮತಿ ಶ್ರೀಲತಾ (32) ಗಂಡ: ರಮೇಶ ಕಾಂಚನ್ ವಾಸ: ಮಾತೃಕೃಪಾ ಹನುಮಾನ ನಗರ ಕೊಳ ,ಮಲ್ಪೆ ಕೊಡವೂರು ಇವರು ಅವರ ಅತ್ತೆಯಾದ ಶ್ರಿಮತಿ ಸೀತು ರವರೊಂದಿಗೆ ದಿನಾಂಕ 04/02/2021ರಂದು ಬೆಳಿಗ್ಗೆ 08:00 ಗಂಟೆಗೆ ಅವರ ಮನೆಯಾದ ಕೊಳ ದಿಂದ ನಡೆದುಕೊಂಡು ಮಲ್ಪೆ ಜಂಕ್ಷನ್ ನಲ್ಲಿ ಅಂಗಡಿಗೆ ಹೋಗಿ ವಾಪಸ್ಸು ನಡೆದುಕೊಂಡು ರಸ್ತೆಯ ಎಡಬದಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಸಮಯ 08:15 ಗಂಟೆಗೆ ಉಡುಪಿ ಕಡೆಯಿಂದ ಮಲ್ಪೆ ಕಡೆಗೆ ಹೋಗುತ್ತಿದ್ದ ಹೆ ಚ್ ಆರ್ 989048 ನೇ ಮೋಟಾರು ಸೈಕ ಲ್ ಸವಾರನು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಶ್ರೀಮತಿ ಸೀತುರವರಿಗೆ ಹಿಂದಿನಿಂದ ಢಿಕ್ಕಿಹೊಡೆದ ಪರಿಣಾಮ ಅವರ ಎಡ ಕೈಯ ಕೋಲುಕೈಗೆ ಒಳ ಜಖಂ ಆಗಿದ್ದು ಹಣೆಗೆ, ಗಲ್ಲಕ್ಕೆ, ಬಲಗಾಲಿನ ಬೆರಳಿಗೆ, ಎಡಕಾಲಿನ ಮೊಣಗಂಟಿಗೆ ರಕ್ತ ಗಾಯವಾಗಿದ್ದು ಚಿಕಿತ್ಸೆಗೆ ಉಡುಪಿ ಹೈಟೆಕ್ ಆಸ್ಪತ್ರೆ ದಾಖಲಾಗಿರುವುದಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 11/2021 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಕಳವು ಪ್ರಕರಣ

  • ಕಾಪು: ಪಿರ್ಯಾದಿದಾರರಾದ ಜಗದೀಶ್ (51) ತಂದೆ: ಕೃಷ್ಣ ಪೂಜಾರಿ ವಾಸ:ಗುರುಕೃಪಾ ನಿವಾಸ, ಬಿಲ್ಲವ ಸಂಘದ ಎದುರುಗಡೆ ಮೂಳೂರು ಗ್ರಾಮ ಕಾಫು ಇವರು ಮೂಳೂರಿನ ಬ್ರಹ್ಮ ಶ್ರೀ ನಾರಾಯಣ ಗುರುಸೇವಾ ಸಂಘದ ಗುರುಮಂದಿರದ ಅರ್ಚಕರಾಗಿ ಕೆಲಸ ಮಾಡಿಕೊಂಡಿರುತ್ತಾರೆ. ಇವರು ದಿನಾಂಕ 03/02/2021 ರಂದು ರಾತ್ರಿ 7:00 ಗಂಟೆಗೆ ಗುರು ಮಂದಿರದ ಬಾಗಿಲನ್ನು ಹಾಕಿ ಮನೆಗೆ ಹೋಗಿದ್ದು, ದಿನಾಂಕ 04/02/2021 ರಂದು ಬೆಳಿಗ್ಗೆ 5:15 ಗಂಟೆಗೆ ಗುರುಮಂದಿರದ ಬಾಗಿಲು ತೆಗೆಯಲು ಹತ್ತಿರ ಬಂದು ನೋಡಿದಾಗ ಗುರು ಮಂದಿರದ ಬೀಗ ಒಡೆದು ಬಾಗಿಲು ತೆರೆದಿದ್ದು ಕಂಡು ಬಂದಿದ್ದು, ಒಳಗೆ ಬಂದು ನೋಡಿದಾಗ ಗುರುಮಂದಿರದ ಕಾಣೆಕೆ ಡಬ್ಬಿಯ ಬೀಗ ಮುರಿದು ಬಾಗಿಲು ತೆರೆದಿದ್ದು ಅದರಲ್ಲಿದ್ದ ಅಂದಾಜು 4,000/- ರೂ ಹಣ ಇಲ್ಲದೇ ಇದ್ದು, ಅಲ್ಲದೇ ಗುರುಮಂದಿರದ ಕಛೇರಿಯ ಕಪಾಟಿನ ಬೀಗ ಒಡೆದು ಅದರಲ್ಲಿದ್ದ ಕಡತಗಳನ್ನು ಬಿಸಾಡಿದ್ದು, ಯಾರೋ ಕಳ್ಳರು ದಿನಾಂಕ 03/02/2021 ರಂದು ರಾತ್ರಿ 7:00 ಗಂಟೆಯಿಂದ ದಿನಾಂಕ 04/02/2021 ಬೆಳಿಗ್ಗೆ 5:15 ಗಂಟೆಯ ಮಧ್ಯಾವಧಿಯಲ್ಲಿ ಗುರುಮಂದಿರದ ಬಾಗಿಲಿನ ಬೀಗವನ್ನು ಒಡೆದು ಒಳಪ್ರವೇಶಿಸಿ ಕಾಣೆಕೆ ಡಬ್ಬಿಯ ಬೀಗ ಮುರಿದು ಕಾಣೆಕೆ ಡಬ್ಬಿಯಲ್ಲಿದ್ದ ರೂಪಾಯಿ 4000/-ಹಣವನ್ನು ಕಳವುಮಾಡಿಕೊಂಡು ಹೋಗಿರುವುದಾಗಿದೆ. ಈ ಬಗ್ಗೆ ಕಾಫು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 18/2021 ಕಲಂ: 457, 380 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 04-02-2021 06:21 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080