ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಬೈಂದೂರು: ಪಿರ್ಯಾದಿದಾರರಾದ ಸುನೀಲ್ (19), ತಂದೆ: ನರಸಿಂಹ ದೇವಾಡಿಗ, ವಾಸ: ಕಲ್ಯಾಣಿ ಮನೆ ಹಳಗೇರಿ ಕಂಬದಕೋಣೆ ಗ್ರಾಮ ಬೈಂದೂರು ತಾಲೂಕು ಇವರು ದಿನಾಂಕ 02/01/2023 ರಂದು ಮದ್ಯಾಹ್ನ ಅವರ ಮೋಟಾರ್ ಸೈಕಲ್ ನಲ್ಲಿ ಮನೆಯಿಂದ ಬೈಂದೂರಿಗೆ ಹೋಗಿ ಅಲ್ಲಿಂದ ವಾಪಾಸ್ಸು ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಮದ್ಯಾಹ್ನ 2:00 ಗಂಟೆಗೆ ಉಪ್ಪುಂದ ಗ್ರಾಮದ ನಂದನವನದ ಬಳಿ ಹೋಗುತ್ತಿರುವಾಗ ಪಿರ್ಯಾದಿದಾರರ ಎದುರಿನಿಂದ  ಬೈಂದೂರು ಕಡೆಯಿಂದ ಕುಂದಾಪುರ ಕಡೆಗೆ ವಾಸುರವರು ಅವರ ಮೋಟಾರ್ ಸೈಕಲ್ ನಂಬ್ರ KA- 31-FB-2434 ನೇದನ್ನು ಸವಾರಿ ಮಾಡಿಕೊಂಡು ಹೋಗುತ್ತಿರುವಾಗ  ಹಿಂದಿನಿಂದ ಒಂದು ಗ್ಯಾಸ್ ಟ್ಯಾಂಕರ್  ನಂಬ್ರ MH-43-Y- 2665ನೇದನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಹೋಗಿ ಪಿರ್ಯಾದಿದಾರರ ಎದುರಿನಿಂದ ಹೋಗುತ್ತಿದ್ದ ವಾಸುರವರ ಮೋಟಾರ್ ಸೈಕಲ್ ನ ಹಿಂಬದಿಗೆ ಹೋಗಿ ಢಿಕ್ಕಿ ಹೊಡೆದ ಪರಿಣಾಮ ಮೋಟಾರ್ ಸೈಕಲ್ ಸವಾರ ವಾಸುರವರು ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದಿದ್ದು, ಪಿರ್ಯಾದಿದಾರರು ಕೂಡಲೇ ಅಲ್ಲಿಗೆ ಹೋಗಿ ರಸ್ತೆಯಲ್ಲಿ ಬಿದ್ದಿದ್ದ ವಾಸುರವರನ್ನು ಎತ್ತಿ ಉಪಚರಿಸಿದ್ದು, ವಾಸುರವರಿಗೆ ತಲೆಯ ಹಿಂಭಾಗಕ್ಕೆ , ಭುಜದ ಭಾಗ, ಬೆನ್ನಿಗೆ, ಎದೆಗೆ ರಕ್ತಗಾಯ, ಹೊಟ್ಟೆಯ ಒಳಭಾಗಕ್ಕೆ ತೀವ್ರ ತರಹದ ಗುದ್ದಿದ ಒಳನೋವು ಉಂಟಾಗಿರುತ್ತದೆ. ಗಾಯಗೊಂಡ ವಾಸುರವರನ್ನು ಚಿಕಿತ್ಸೆ ಬಗ್ಗೆ 108 ವಾಹನದಲ್ಲಿ ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ಅಲ್ಲಿನ ವೈದ್ಯರು ಪರೀಕ್ಷಿಸಿ ಹೆಚ್ಚಿನ ಚಿಕಿತ್ಸೆ ಬಗ್ಗೆ ಉಡುಪಿಗೆ ಕಳುಹಿಸಿದ್ದು, ಅಲ್ಲಿನ ವೈದ್ಯರು ಪರೀಕ್ಷಿಸಿ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರು ಆಸ್ಪತ್ರೆಗೆ ಹೋಗುವಂತೆ ಸೂಚಿಸಿದ ಮೇರೆಗೆ, ವಾಸುರವರನ್ನು ಮಂಗಳೂರು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಒಳರೋಗಿಯಾಗಿ ದಾಖಲಿಸಿರುತ್ತಾರೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 03/2023 ಕಲಂ:279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಬೈಂದೂರು: ಪಿರ್ಯಾದಿದಾರರಾದ ಸಂಜೀವ ದೇವಾಡಿಗ (54), ತಂದೆ: ದಿ. ತಿಮ್ಮ ದೇವಾಡಿಗ, ವಾಸ: ನಾರ್ಕಳಿ ಮನೆ ಕುದ್ರುಕೋಡು ನಾವುಂದ ಗ್ರಾಮ ಬೈಂದೂರು ತಾಲೂಕು ಇವರು ದಿನಾಂಕ 02/01/2023 ರಂದು ಮದ್ಯಾಹ್ನ ಮನೆಯಿಂದ ಜೀನಸಿ ಸಾಮಾನು ತರಲು ಅವರ KA-30-K- 3057ನೇ ಮೋಟಾರ್ ಸೈಕಲ್ ನ್ನು ಸವಾರಿ ಮಾಡಿಕೊಂಡು ಕುದ್ರುಕೋಡು ರಸ್ತೆಯಾಗಿ ಹಳೆ ಗಾರ್ಡ್ ಶೆಡ್ ಬಳಿಯಲ್ಲಿರುವ ಜಿನಸಿ ಅಂಗಡಿಗೆ ಹೊರಟಿದ್ದು, ಮದ್ಯಾಹ್ನ 1:30 ಗಂಟೆಗೆ ಕುದ್ರುಕೋಡು ಕಂತಿಹೊಂಡ ನಾಲ್ಕು ರಸ್ತೆ ಸೇರುವಲ್ಲಿ ಬರುತ್ತಿರುವಾಗ ಅರೆಹೊಳೆ ಕೊಲ್ಲೂರು ರಸ್ತೆಯಿಂದ ಉಳ್ಳೂರು 11 ಕಡೆಯ ರಸ್ತೆಗೆ KA-20-ME-5208 ನೇ ನಂಬ್ರದ ಕಾರು ಚಾಲಕನು ಆತನ ಕಾರನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬರುತ್ತಿರುವುದನ್ನು ನೋಡಿದ ಪಿರ್ಯಾದಿದಾರರು ಅವರ ಮೋಟಾರ್ ಸೈಕಲ್ ನ್ನು ಕುದ್ರುಕೋಡು ಜಂಕ್ಷನ್ ನ ಎಡಬದಿಯಲ್ಲಿ ನಿಲ್ಲಿಸಿದ್ದು, ಆಗ ಕಾರು ಚಾಲಕನು ಆತನ ಕಾರನ್ನು ರಸ್ತೆಯ ತೀರಾ ಎಡಕ್ಕೆ ಚಲಾಯಿಸಿ ಕೊಂಡು ಬಂದು ಮೋಟಾರ್ ಸೈಕಲ್ ಗೆ ಢಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದಿದ್ದು, ಅವರಿಗೆ ತಲೆಯ ಮೇಲ್ಭಾಗದಲ್ಲಿ ರಕ್ತಗಾಯ, ಬೆನ್ನಿಗೆ ಮತ್ತು ಸೊಂಟಕ್ಕೆ ಗುದ್ದಿದ ಒಳನೋವು ಉಂಟಾಗಿರುತ್ತದೆ. ಗಾಯಗೊಂಡ ಪಿರ್ಯಾದಿದಾರರನ್ನು ಕಾರು ಚಾಲಕನು ಎತ್ತಿ ಉಪಚರಿಸಿ, ಚಿಕಿತ್ಸೆ ಬಗ್ಗೆ ಕುಂದಾಫುರ ಚಿನ್ಮಯಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಒಳರೋಗಿಯಾಗಿ ದಾಖಲಿಸಿರುತ್ತಾರೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 02/2023 ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ .

ಅಸ್ವಾಭಾವಿಕ ಮರಣ ಪ್ರಕರಣ

  • ಮಣಿಪಾಲ: ಪಿರ್ಯಾದಿದಾರರಾದ ನಿಂಗಪ್ಪ ಜಾಧವ (58), ತಂದೆ: ದಿ. ನಿಂಗಪ್ಪ , ವಾಸ: ಅಮಜನೇಯ ದೇವಸ್ಥಾನದ ಎದುರುಗಡೆ ಡೋರ್ ನಂ: 180 ಗ್ರಾಮ ಹೊಸಕಟ್ಟೆ ಗ್ರಾಮ ಮತ್ತು ಅಂಚೆ ಕಟ್ಟಿಹಳ್ಳಿ ತಾಲೂಕು ಹಾವೇರಿ ಜಿಲ್ಲೆ ಇವರ   ಅಣ್ಣನ ಮಗ ಪ್ರಶಾಂತ ರಾಮಕೃಷ್ಣ ಜಾಧವ(38) ರವರು ಜೀವನದಲ್ಲಿ ಜಿಗುಪ್ಸೆಗೊಂಡು  ಹೆರ್ಗಾ ಗ್ರಾಮದ ಪರ್ಕಳದ ರಾಷ್ಟ್ರೀಯ ಹೆದ್ದಾರಿ 169 (A) ರಲ್ಲಿ ಕಾಮಗಾರಿ ನಡೆಯುತ್ತಿರುವ ರಸ್ತೆಯ ಬದಿಯಲ್ಲಿರುವ ಮರಕ್ಕೆ ದಿನಾಂಕ 03/01/2023 ರಂದು ಬೆಳಿಗ್ಗೆ 10:00 ಗಂಟೆಯಿಂದ ಸಂಜೆ 05:00 ಗಂಟೆಯ ಮಧ್ಯದಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 01/2023 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ .        

ಇತ್ತೀಚಿನ ನವೀಕರಣ​ : 04-01-2023 09:35 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080