ಅಭಿಪ್ರಾಯ / ಸಲಹೆಗಳು

ಅಸ್ವಾಭಾವಿಕ ಮರಣ ಪ್ರಕರಣಗಳು

 • ಕಾರ್ಕಳ:  ಕಾರ್ಕಳ ತಾಲೂಕು ಕಲ್ಯಾ ಗ್ರಾಮದ ಕುಂಟಾಡಿಯಲ್ಲಿ  ವಾಸವಾಗಿರುವ ಪಿರ್ಯಾದಿದಾರರ ತಂದೆ ನಾರಾಯಣ ಕರ್ಕೇರ ಪ್ರಾಯ 61 ವರ್ಷ ಇವರು ವಿಪರೀತ ಮಧ್ಯವಸನಿಯಾಗಿದ್ದು,ಅವರಿಗೆ ಯಾವುದೇ ಕೆಲಸ ಮಾಡಲು ಆಗುತ್ತಿರಲಿಲ್ಲ ಇದೇ ಕಾರಣದಿಂದ ಅಥವಾ ಬೇರಾವುದೋ ಕಾರಣದಿಂದ ಮನನೊಂದು ದಿನಾಂಕ 03/01/2023 ರ ರಾತ್ರಿ 11:00  ಗಂಟೆಯಿಂದ ದಿನಾಂಕ 04/01/2023 ರ ಬೆಳಿಗ್ಗೆ 06:30 ಗಂಟೆಯ ನಡುವಿನ ಅವಧಿಯಲ್ಲಿ  ಮೃತರ ಮನೆಯ ಬಾವಿಯ ರಾಟೆಗೆ ನೈಲಾನ್ ಹಗ್ಗದಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ವಿಶಾಲ್  ಕುಮಾರ್ (32) ತಂದೆ: ನಾರಾಯಣ ಕರ್ಕೇರ ವಾಸ: ಗುರುಕ್ರಪಾ ಹೌಸ್ ಮಾದಿರಿಗುಡ್ಡೆ ಪಡ್ಡೆ ಹಿರಿಯಡಕ ಅಂಚೆ ಇವರು ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಠಾಣೆ UDR NO 03/ 2023 US 174 CRPC ಯಂತೆ ಪ್ರಕರಣ ದಾಖಲಿಸಲಾಗಿದೆ.
 • ಕಾರ್ಕಳ: ಕಾರ್ಕಳ ತಾಲೂಕು, ಬೆಳ್ಮಣ್ ಗ್ರಾಮದ ಕಂಬಳಗುತ್ತು ನಿವಾಸಿ ವಿಶ್ವನಾಥ , ಪ್ರಾಯ 52 ವರ್ಷ, ಎಂಬವರು ಕೃಷಿ ಕೂಲಿ ಕೆಲಸ ಮಾಡಿಕೊಂಡಿದ್ದು, ದಿನಾಂಕ 03/01/2023 ರಂದು 18:00 ಗಂಟೆಗೆ ಅವರ ಪರಿಚಯದ ಲಿಗೋರಿ ಡಿಕುನ್ಹಾ ಎಂಬವರ ಅಡಿಕೆ ತೋಟದಲ್ಲಿ ಅಡಿಕೆ ಕೊಯ್ಯುವ ಸಮಯ ಸಂಜೆ 6:00 ಗಂಟೆಗೆ ಅಕಸ್ಮಿಕವಾಗಿ ಅಡಿಕೆ ಮರದಿಂದ ಬಿದ್ದು ಗಾಯಗೊಂಡವರನ್ನು ಮೊದಲು ಕಾರ್ಕಳ ಸರಕಾರಿ ಆಸ್ಪತ್ರೆಯಲ್ಲಿ  ಚಿಕಿತ್ಸೆ ಕೊಡಿಸಿ, ನಂತರ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಉಡುಪಿ ಅಜ್ಜರ ಕಾಡು ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಗೆ ದಾಖಲಿಸಿದ್ದು, ಉಡುಪಿ ಜಿಲ್ಲಾ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆಯಲ್ಲಿದ್ದವರು, ಚಿಕಿತ್ಸೆಗೆ ಸ್ಪಂದಿಸದೆ ದಿನಾಂಕ 04/01/2023 ರಂದು ಮಧ್ಯಾಹ್ನ 12:30 ಗಂಟೆಗೆ ಮೃತಪಟ್ಟಿರುತ್ತಾರೆ. ಈ ಬಗ್ಗೆ ವಿನೋದ ಕುಲಾಲ್  (49) ಗಂಡ: ದಿ/ ಉಮೇಶ್ ಕುಲಾಲ್ ವಾಸ: ಅಗೋಲಿ ಬೈಲು ಬೆಳ್ಮಣ್   ಗ್ರಾಮ ರವರು ದೂರು ನೀಡಿದ್ದು ಕಾರ್ಕಳ ಗ್ರಾಮಾಂತರ ಠಾಣೆ UDR NO 04/2023 US 174 CRPC ಯಂತೆ ಪ್ರಕರಣ ದಾಖಲಿಸಲಾಗಿದೆ.

ಕಳವು ಪ್ರಕರಣ

 • ಶಿರ್ವಾ: ಪಿರ್ಯಾದಿ  ಕೆ. ಕೊರಗ(69), ತಂದೆ: ದಿ ಸೋಮಯ್ಯ ವಾಸ: ಮನೆ ನಂ 1-149(1), ಸಾಕೇತ,ಡಾ ಅಂಬೇಡ್ಕರ್ ರೋಡ್, ಬೆಳಪು ಇವರಿಗೆ ಸಂಬಂದಿಸಿದ ಜಾಗದಲ್ಲಿ ದಿನಾಂಕ:12/10/2018ನೇ ರಲ್ಲಿ ಕರ್ನಾಟಕ ಸರ್ಕಾರದ ಸಣ್ಣ ರೈತರ ಯೋಜನೆಯಡಿ ಸರ್ಕಾರದ ವತಿಯಿಂದ ಬಾವಿ ತೋಡಿಸಿ ಅದಕ್ಕೆ 3 ಹೆಚ್ ಪಿ ಪಂಪ್ ನ್ನು ಅಳವಡಿಸಿದ್ದು ಈ ಬಾವಿಯ ಕುಡಿಯುವ  ನೀರನ್ನು ಆಸುಪಾಸಿನ ಜನರು ಉಪಯೋಗಿಸುತ್ತಿದ್ದರು. ದಿನಾಂಕ: 02/01/2023 ರಂದು ರಾತ್ರಿ 11.00 ಗಂಟೆಯಿಂದ ದಿನಾಂಕ:03/01/2023ರ ಮಧ್ಯಾಹ್ನ 03.00 ಗಂಟೆಯ ನಡುವಿನ ಅವಧಿಯಲ್ಲಿಯಾರೋ ಕಳ್ಳರು ಸದ್ರಿ 3 ಹೆಚ್ ಪಿ ಪಂಪ್ ನ್ನು ಕಳವು ಮಾಡಿಕೊಂಡು ಹೋಗಿದ್ದು ಕಳವಾದ ಪಂಪ್ ನ ಅಂದಾಜು ಮೌಲ್ಯ ಸುಮಾರು 5000/- ಆಗಬಹುದು. ಈ ಬಗ್ಗೆ ಶಿರ್ವ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 02/2023 US 379 IPC ಯಂತೆ ಪ್ರಕರಣ ದಾಖಲಿಸಲಾಗಿದೆ.

ಇತರ ಪ್ರಕರಣ

 • ಕಾರ್ಕಳ: ಪಿರ್ಯಾದಿ: ಶ್ರೀಮತಿ ಸ್ಮಿತಾ ಪ್ರಾಯ: 35 ವರ್ಷ ಗಂಡ: ಪ್ರಶಾಂತ್ ಕುಮಾರ್ ವಾಸ: ಅಕ್ಷಯ್ ಶಾಂಭವಿ ನಗರ, ತೆಳ್ಳಾರ್ 04 ನೇ ಅಡ್ಡರಸ್ತೆ, ಕಾರ್ಕಳ ಇವರ ಮಾವ ಹಾಗೂ ಮಾವನ ಮಗಳಾದ ಆರತಿ ಅಶೋಕ್ ರವರ ನಡುವೆ ಆಸ್ತಿಯ ವಿಚಾರದಲ್ಲಿ ತಕರಾರು ಇದ್ದು ಪಿರ್ಯಾದುದಾರರ ಗಂಡ ಪ್ರಶಾಂತ್ ರವರು ವಿದೇಶದಲ್ಲಿ ಕೆಲಸ ಮಾಡಿಕೊಂಡಿದ್ದು ಅವರು ತನ್ನ ಮಗನ ಹುಟ್ಟುಹಬ್ಬದ ನಿಮಿತ್ತ ಊರಿಗೆ ಬಂದಿದ್ದು ದಿನಾಂಕ: 02/01/2023 ರಂದು ಪಿರ್ಯಾದುದಾರರ ಅತ್ತೆ ಶ್ರೀಮತಿ ಲಕ್ಷ್ಮಿ ರವರ ಕರೆಯ ಮೇರೆಗೆ ಬೆಳಿಗ್ಗೆ ಸುಮಾರು 11:20 ಗಂಟೆಗೆ ಅತ್ತೆಯ ಮನೆಯಾದ ಕಾರ್ಕಳ ತಾಲೂಕು  ಮುಡಾರು ಗ್ರಾಮದ ಕಡಾರಿ ಎಂಬಲ್ಲಿರುವ ಆರ್,ಕೆ,ಎಲ್ ನಿವಾಸಕ್ಕೆ ಪಿರ್ಯಾದುದಾರರು ಹಾಗೂ ಅವರ ಗಂಡ ಪ್ರಶಾಂತ್ ಕುಮಾರ್, ಪಿರ್ಯಾದುದಾರರ ಮೈದುನ ಸಂದೀಪ್ ಕುಮಾರ್, ಅವರ ಪತ್ನಿ ಶ್ರೀಮತಿ ಸುಜಾತಾ ಮೈದುನನ ಮಗಳು ಸಂಜನಾಳೊಂದಿಗೆ ಹೋಗಿದ್ದು ಅಲ್ಲಿ ಪಿರ್ಯಾದುದಾರರ ಅತ್ತೆ ಶ್ರೀಮತಿ ಲಕ್ಷ್ಮಿ ರವರ ಯೋಗಕ್ಷೇಮವನ್ನು ವಿಚಾರಿಸಿಕೊಂಡು ಹಿಂದಿರುಗಿ ಹೊರಡುವ ಸಮಯದಲ್ಲಿ ಮಧ್ಯಾಹ್ನ 12:30 ಗಂಟೆಗೆ ಆರೋಪಿತರುಗಳಾದ ಅಶೋಕ್ ನಾಯರ್ ಹಾಗೂ ಅವರ ಹೆಂಡತಿ ಶ್ರೀಮತಿ ಆರತಿ ಅಶೋಕ್ ನಾಯರ್ ರವರು ಅಲ್ಲಿಗೆ ಬಂದಿದ್ದು ಅಶೋಕ್ ನಾಯರ್ ನು ಪಿರ್ಯಾದುದಾರರನ್ನು ಉದ್ದೇಶಿಸಿ “ ನಮ್ಮನ್ನು ಕೇಳದೇ ಮನೆಗೆ ಪ್ರವೇಶಿಸಿದ್ದು ಯಾಕೆ, ನನ್ನ ಅತ್ತೆಯ ಆಸ್ತಿಯು ಸಂಪೂರ್ಣವಾಗಿ ನನಗೆ ಸೇರಬೇಕು. ನೀವು ಅವರಲ್ಲಿ ಆಶೀರ್ವಾದ ಪಡೆಯುವ ನೆಪದಲ್ಲಿ ಅವರ ಮನೆಗೆ ಬಂದು ನನ್ನ ಅತ್ತೆಯ ಆಸ್ತಿಯನ್ನು ನನಗೆ ಸಿಗದ ಹಾಗೆ ಮಾಡುತ್ತೀರಿ.ನಿನ್ನನ್ನು ಹಾಗೂ ನಿನ್ನ ಪತಿಯನ್ನು ಹಾಗೂ ನಿನ್ನ ಪತಿಯ ಸಹೋದರನನ್ನು  ಕತ್ತಿಯಿಂದ ಕಡಿದು ಕೊಲ್ಲುತ್ತೇನೆ” ಎಂದು ಹೇಳಿ ಪಿರ್ಯಾದುದಾರರ ತಲೆಕೂದಲನ್ನು ಎಳೆದು ಗೋಡೆಗೆ ಗುದ್ದಿ ಅವರ ಚೂಡಿದಾರದ ವೇಲನ್ನು ಎಳೆದು ಕೈಯಿಂದ ಬೆನ್ನಿಗೆ ಗುದ್ದಿ ಹಲ್ಲೆ ಮಾಡಿರುವುದು ಅಲ್ಲದೇ ಆರತಿಯು ಪಿರ್ಯಾದುದಾರರಿಗೆ ಅವಾಚ್ಯ ಶಬ್ದಗಳಿಂದ ಬೈದು ಸುಜಾತಾ ರವರಿಗೆ ಕೈಯಿಂದ ಬೆನ್ನಿಗೆ ಗುದ್ದಿ ಅವರ ಕುತ್ತಿಗೆಯಲ್ಲಿನ ಚೈನ್ ನ್ನು ಎಳೆದು ತುಂಡು ಮಾಡಿದ್ದು ಇನ್ನು ಮುಂದಕ್ಕೆ ಈ ಮನೆಗೆ ಪ್ರವೇಶ ಮಾಡಿದರೆ ನಿಮ್ಮೆಲ್ಲರನ್ನು ಕೊಲ್ಲುವುದಾಗಿ ಜೀವಬೆದರಿಕೆ ಹಾಕಿದ್ದು ಅಲ್ಲದೇ ಗಲಾಟೆ ಬಿಡಿಸಲು ಬಂದ ಸುಜಾತಾಳ ಮಗಳಾದ ಸಂಜನಾಳನ್ನು ಕೂಡಾ ಕೂದಲು ಹಿಡಿದು ಎಳೆದು ಕೆಳಗೆ ಬೀಳಿಸಿ ಅವರ ಕೈಯನ್ನು ತಿರುಗಿಸಿ ಹಲ್ಲೆ ಮಾಡಿದ್ದು  ಪಿರ್ಯಾದುದಾರರು ತಮಗೆ ಆದ ನೋವಿಗೆ ಕಾರ್ಕಳ ನರ್ಸಿಂಗ್ ಹೋಮ್ ನಲ್ಲಿ ಚಿಕಿತ್ಸೆ ಪಡೆದುಕೊಂಡಿರುವುದಾಗಿದೆ. ಈ ಬಗ್ಗೆಕಾರ್ಕಳ ಗ್ರಾಮಾಂತರ ಠಾಣೆ  ಅಪರಾಧ ಕ್ರಮಾಂಕ 04-2023 ಕಲಂ: 323, 354, 504, 506 ಜೊತೆಗೆ 34 ಐಪಿಸಿ   ಯಂತೆ ಪ್ರಕರಣ ದಾಖಲಿಸಲಾಗಿದೆ.

ಇತ್ತೀಚಿನ ನವೀಕರಣ​ : 04-01-2023 06:37 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080