ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಬ್ರಹ್ಮಾವರ: ದಿನಾಂಕ 03/01/2022 ರಂದು ಪಿರ್ಯಾದಿದಾರರಾದ ರಾಕೇಶ್‌ಶೆಟ್ಟಿ (30), ತಂದೆ: ರಮೇಶ್ ಶೆಟ್ಟಿ, ವಾಸ: ಗುರುಕೃಪಾ ನಿಲಯ, ಕಲ್ಯಾ, ಕಾಪು, ಉಡುಪಿ ಇವರು ಆರೋಪಿ ವಿನಯ್ ರವರು ಚಲಾಯಿಸುತ್ತಿದ್ದ KA-20-C-2448 ನೇ ನೊಂದಣಿ ನಂಬ್ರದ ವಂದನ ಬಸ್ ನಲ್ಲಿ ಬ್ರಹ್ಮಾವರ ಬಸ್ಸ್ ನಿಲ್ದಾಣದಿಂದ ಉಡುಪಿ ಕಡೆಗೆ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಹೋಗುತ್ತಿರುವಾಗ ಮಧ್ಯಾಹ್ನ 2:50 ಗಂಟೆಗೆ ಹೇರೂರು ಗ್ರಾಮದ ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಎದುರು ಆರೋಪಿಯು ಯಾವುದೇ ಸೂಚನೇ ನೀಡದೇ ಒಮ್ಮೇಲೆ ರಸ್ತೆ ಮೇಲೆ ಬ್ರೇಕ್‌ ಹಾಕಿ ಬಸ್ಸ್ ನ್ನು ನಿಲ್ಲಿಸಿದ ಪರಿಣಾಮ ಬಸ್ಸಿನ ಹಿಂದಿನಿಂದ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಉಡುಪಿ ಕಡೆಗೆ ಪ್ರಮೋದ್ ರವರು ಸವಾರಿ ಮಾಡಿಕೊಂಡು ಬರುತ್ತಿದ್ದ KA-51-X-663 ನೇ ನೊಂದಣಿ ನಂಬ್ರದ ಹೀರೊ ಹೊಂಡ ಮೋಟಾರ್ ಸೈಕಲ್‌ಬಸ್ಸಿನ ಹಿಂದಿನ ಬಲಭಾಗಕ್ಕೆ ಡಿಕ್ಕಿ ಹೊಡೆದು ಪ್ರಮೋದ್ ರವರು ರಸ್ತೆಯ ಮೇಲೆ ಬಿದ್ದಿರುವುದಾಗಿದೆ. ಈ ಅಪಘಾತದಿಂದ ಪ್ರಮೋದ್ ರವರ ಕೈ ಕಾಲುಗಳಿಗೆ ಅಲ್ಲಲ್ಲಿ  ತರಚಿದ ರಕ್ತಗಾಯ, ಎದೆಗೆ ತೀವ್ರ ಗುದ್ದಿದ ಒಳನೋವು ಆಗಿರುತ್ತದೆ.  ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 04/2022 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾರ್ಕಳ: ದಿನಾಂಕ 03/01/2022 ರಂದು ಪಿರ್ಯಾದಿದಾರರಾದ ಚೆನ್ನಾರಾಮ (22), ತಂದೆ: ಆತ್ಮಾರಾಮ್, ವಾಸ ಮೇಘಾ ಗ್ರಾಮ, ಜೈಸಲ್ಮೇರ್ ತಾಲೂಕು ಮತ್ತು ಜಿಲ್ಲೆ, ರಾಜಸ್ಥಾನ ಇವರು ಮುಲ್ತಾನ್ ಸಿಂಗ್ ರವರು ಸವಾರಿ ಮಾಡುತ್ತಿದ್ದ  ಮೋಟಾರು ಸೈಕಲ್‌ KA-20-EW-7337 ನೇದರಲ್ಲಿ ಸಹಸವಾರರಾಗಿ ಕುಳಿತುಕೊಂಡು ಜೋಡುರಸ್ತೆ ಕಡೆಯಿಂದ ಕಾರ್ಕಳ ಕಡೆಗೆ ಸಾರ್ವಜನಿಕ ರಸ್ತೆಯಲ್ಲಿ ಬರುತ್ತಾ ಮಧ್ಯಾಹ್ನ 12:00 ಗಂಟೆಗೆ ಜೋಡುರಸ್ತೆ ಪೂರ್ಣಿಮಾ ಸಿಲ್ಕ್ ಬಟ್ಟೆ ಅಂಗಡಿ ಸಮೀಪ ತಲುಪುವಾಗ KA-20-R-4522 ನೋಂದಣಿ ಸಂಖ್ಯೆಯ ಮೋಟಾರ್ ಸೈಕಲ್ ಸವಾರ ಹರಿಕೇಶ್ ತಾನು ಸವಾರಿ ಮಾಡುತ್ತಿದ್ದ ಮೋಟಾರ್ ಸೈಕಲನ್ನು ಅತೀವೇಗ ಮತ್ತು ಅಜಾಗರೂಕತೆಯಿಂದ ಸವಾರಿ ಮಾಡಿ  ಡಿವೈಡರ್‌ನ ಮಧ್ಯರಸ್ತೆಯಿಂದ  ಯೂ ಟರ್ನ್ ಮಾಡಿ ಮೋಟಾರ್ ಸೈಕಲ್ KA-20-EW-7337 ನೇದಕ್ಕೆ ಡಿಕ್ಕಿ ಹೊಡೆದ ಪರಿಣಾಮ  ಪಿರ್ಯಾದಿದಾರರಿಗೆ ಬಲಕಾಲಿನ ಮೂಳೆ ಮುರಿತವಾಗಿದ್ದಲ್ಲದೇ ಬಲಕೈಯ ಬೆರಳಿಗೆ ತರಚಿದ ಗಾಯವಾಗಿರುತ್ತದೆ. ಈ ಬಗ್ಗ್ ಕಾರ್ಕಳ ನಗರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 02/2022  ಕಲಂ: 279,337 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಬೈಂದೂರು: ಪಿರ್ಯಾದಿದಾರರಾದ ಮಹಾಬಲ ನಾಯ್ಕ (38), ತಂದೆ: ದಿ.ರಾಮ ನಾಯ್ಕ, ವಾಸ:ಅತ್ತಿಹೊಳೆ ಕಾಲ್ತೋಡು ಗ್ರಾಮ ಬೈಂದೂರು ತಾಲೂಕು ಇವರು ದಿನಾಂಕ 02/01/2022  ರಂದು ಮಧ್ಯಾಹ್ನ 1:15 ಗಂಟೆಗೆ ಅವರ ಚಿಕ್ಕಪ್ಪನ ಮಗ  ಮಂಜುನಾಥ ರವರ ಮೋಟಾರ್ ಸೈಕಲ್ ನಂಬ್ರ KA-20-EB-4742 ನೇದರಲ್ಲಿ ಅವರ ತಮ್ಮ ಸುರೇಶ್ ರವರ ಜೊತೆಯಲ್ಲಿ  ಹಿಂಬದಿ ಸವಾರರಾಗಿ ಕುಳಿತುಕೊಂಡು ಹುಂತನಗೋಳಿ  ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದ ಜಾತ್ರೆಗೆ  ಹೋಗಿ ವಾಪಾಸು ಮನೆಗೆ ಬರುತ್ತಾ ಕಾಲ್ತೋಡು ಗ್ರಾಮದ  ಅತ್ತಿಹೊಳೆ ಎಂಬಲ್ಲಿ  ಮಣ್ಣು ರಸ್ತೆಯ ಇಳಿಜಾರಿನಲ್ಲಿ  ಸುರೇಶನು ಮೋಟಾರು ಸೈಕಲ್ ನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿದ ಪರಿಣಾಮ ಮೋಟಾರು  ಸೈಕಲ್ ನಿಯಂತ್ರಣ ತಪ್ಪಿ ತಿರುವಿನಲ್ಲಿ  ಕಲ್ಲಿಗೆ ಹೊಡೆದು ಎಡಬದಿಯ ಚರಂಡಿಗೆ ಬಿದ್ದ  ಪರಿಣಾಮ ಪಿರ್ಯಾದಿದಾರರು ಹಾಗೂ  ಸುರೇಶ  ಮೋಟಾರು ಸೈಕಲ್ ಸಮೇತ ರಸ್ತೆಗೆ ಬಿದ್ದು ಪಿರ್ಯಾದಿದಾರರ ಎಡಕಾಲಿನ ಪಾದ ತಿರುಚಿ ಹೋಗಿದ್ದು , ಬಲಕೈಗೆ ತರಚಿದ ಗಾಯವಾಗಿರುತ್ತದೆ  ಹಾಗೂ ಆಪಾದಿತ ಸುರೇಶನಿಗೂ ಬಲಕಾಲಿಗೆ ತರಚಿದ ಗಾಯವಾಗಿರುತ್ತದೆ. ಪಿರ್ಯಾದಿದಾರರು ಚಿಕಿತ್ಸೆ ಬಗ್ಗೆ ಕುಂದಾಪುರ ಚಿನ್ಮಯಿ ಆಸ್ಪತ್ರೆಯಲ್ಲಿ  ಒಳರೋಗಿಯಾಗಿ ದಾಖಲಾಗಿರುತ್ತಾರೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 01/2022 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಬೈಂದೂರು: ಪಿರ್ಯಾದಿದಾರರಾದ ವಾಸು (29), ತಂದೆ:ವೆಂಕ ಮರಾಠಿ, ವಾಸ: ಕಂಡಗ, ಯೆಳಜಿತ್ ಗ್ರಾಮ ಬೈಂದೂರು ತಾಲೂಕು ಇವರು ದಿನಾಂಕ 02/01/2022  ರಂದು ಸಂಜೆ 17:30 ಗಂಟೆಗೆ ಮೂಡುಗಲ್ಲು  ಕೇಶವನಾಥ ದೇವಸ್ಥಾನದ ವಾರ್ಷಿಕ ಜಾತ್ರೆ ಹೋಗಿ ವಾಪಾಸ್ಸು    ಮೋಟಾರು  ಸೈಕಲ್ ನಲ್ಲಿ ಯೆಳಜಿತ್ ಗೆ ಬರುತ್ತಿರುವಾಗ ಮುಂದಿನಿಂದ KA-20-EN-9150ನೇ ಮೋಟಾರು ಸೈಕಲ್ ನ್ನು ಸಂತೋಷ ಮರಾಠಿ ಚಲಾಯಿಸಿಕೊಂಡು ಸಹ ಸವಾರಳನ್ನಾಗಿ ತಾಯಿ ಸುಮತಿ ರವರನ್ನು ಕುಳ್ಳಿರಿಸಿಕೊಂಡು ಯೆಳಜಿತ್ ಗ್ರಾಮದ  ಹುಲ್ಕಟ್ಕಿ ಡಾಮಾರು ರಸ್ತೆಯ ಇಳಿಜಾರಿನಲ್ಲಿ ಕಾಂಬ್ಳಿ ಬಳಿ ಆತನ ಮೋಟಾರು ಸೈಕಲ್ ನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ   ಚಲಾಯಿಸಿಕೊಂಡು  ಹೋಗುತ್ತಿರುವಾಗ  ಮೋಟಾರು ಸೈಕಲ್ ಹತೋಟಿ ತಪ್ಪಿ ಸ್ಕಿಡ್ ಆಗಿ ಮೋಟಾರು ಸೈಕಲ್ ಸವಾರ ಹಾಗೂ ಸಹ ಸವಾರಳು ರಸ್ತೆಗೆ ಬಿದ್ದಿದ್ದು, ಪರಿಣಾಮ  ಸಹ ಸವಾರಳ  ತಲೆಯ ಹಿಂಬಾಗಕ್ಕೆ ತೀವ್ರ ತರಹದ ರಕ್ತಗಾಯವಾಗಿದ್ದು ಮತ್ತು ಬಲ ಕೈಗೆ ತರಚಿದ ರಕ್ತಗಾಯವಾಗಿರುತ್ತದೆ. ಸವಾರನಿಗೆ ಯಾವುದೇ ಗಾಯಗಳಾಗಿರುವುದಿಲ್ಲ. ಗಾಯಗೊಂಡವರನ್ನು ಬೈಂದೂರು ಸಮುದಾಯ ಆರೋಗ್ಯ ಕೇಂದ್ರಕ್ಕೆ  ಕರೆ ತಂದು ವೈದ್ಯರು ಪ್ರಥಮ ಚಿಕಿತ್ಸೆ ನೀಡಿ  ನಂತರ ವೈದ್ಯರ ಸೂಚನೆ ಮೇರೆಗೆ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಣಿಪಾಲ ಕೆ ಎಂ ಸಿ ಆಸ್ಪತ್ರೆಗೆ  ಒಳ ರೋಗಿಯಾಗಿ ದಾಖಲಿಸಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 02/2022 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಮಲ್ಪೆ: ಪಿರ್ಯಾದಿದಾರರಾದ ರವಿ (36), ತಂದೆ: ರಾಮ ಮರಕಾಲ, ವಾಸ:ಸಾಸ್ತಾನ  ಉಡುಪಿ  ಮತ್ತು ಇತರ ಮೀನುಗಾರರಾದ ಚಂದ್ರಮರಕಾಲ(51), ವಾಸ: ಸಾಸ್ತಾನ್ ಕೋಡಿ ಹಾಗೂ ಇತರರೊಂದಿಗೆ ಮೀನುಗಾರಿಕೆಯ ಬಗ್ಗೆ ಬೋಟಿನಲ್ಲಿ ಮಲ್ಪೆ ಬಂದರಿನಿಂದ ದಿನಾಂಕ 31/12/2021 ರಂದು ಹೊರಟಿದ್ದು , ದಿನಾಂಕ 01/01/2022 ರಂದು ಸಮುದ್ರ ಮಧ್ಯದಲ್ಲಿ ಮೀನುಗಾರಿಕೆ ಮಾಡುತ್ತಿರುವಾಗ ರಾತ್ರಿ 12:00 ಗಂಟೆಗೆ ಚಂದ್ರಮರಕಾಲರವರು ಬಲೆ ಎಳೆಯುವಾಗ ಆಕಸ್ಮಿಕವಾಗಿ ಕಾಲು ಜಾರಿ ಬೋಟಿನಿಂದ ನೀರಿಗೆ ಬಿದ್ದು ಕಾಣೆಯಾಗಿರುತ್ತಾರೆ . ದಿನಾಂಕ 02/01/2022 ರಂದು ರಾತ್ರಿ 10:00 ಗಂಟೆಗೆ ಚಂದ್ರ ಮರಕಾಲ ರವರ ಮೃತದೇಹವು ಸಮುದ್ರದ ನೀರಿನಲ್ಲಿ ತೇಲುತ್ತಿದ್ದು , ಮೃತದೇಹವನ್ನು ಮೇಲಕ್ಕೆತ್ತಿ ಬೋಟಿನೊಳಗೆ ಹಾಕಿಕೊಂಡು ದಿನಾಂಕ 03/01/2022 ಬೆಳಿಗ್ಗೆ 4:40 ಗಂಟೆಗೆ ಮಲ್ಪೆ ಬಂದರಿಗೆ ತಂದು ನಂತರ ಉಡುಪಿ ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ಮೃತದೇಹವನ್ನು ಇರಿಸಲಾಗಿದೆ . ಚಂದ್ರಮರಕಾರ ರವರು  ಬೋಟಿನಲ್ಲಿ ಮೀನುಗಾರಿಕೆ ಮಾಡುತ್ತಿದ್ದ ಸಮಯ ಆಕಸ್ಮಿಕವಾಗಿ ಕಾಲು ಜಾರಿ ಸಮುದ್ರದ ನೀರಿಗೆ ಬಿದ್ದು  ನೀರಿನಲ್ಲಿ ಮುಳುಗಿ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಮಲ್ಪೆ ಯುಡಿಆರ್ ಠಾಣೆ ಅಪರಾಧ ಕ್ರಮಾಂಕ 03/2022 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಉಡುಪಿ: ಪಿರ್ಯಾದಿದಾರರಾದ ಶ್ರೀಮತಿ ಸುಜನಾ ಬೇಗಂ (32), ಗಂಡ: ಅಲ್ತಾಫ್‌, ವಾಸ: ಕೊಡಂಕೂರು, ಪುತ್ತೂರು ಗ್ರಾಮ, ಉಡುಪಿ ತಾಲೂಕು ಇವರ ಕಿರಿಯ ಮಗಳು ಶ್ರೀಮತಿ ಸುಜನಾ ಬೇಗಂ (32) ರವರು ದಿನಾಂಕ 20/12/2015 ರಂದು ಕೊಡಂಕೂರಿನ ಅಲ್ತಾಫ್‌ ಎಂಬುವವರೊಂದಿಗೆ ವಿವಾಹವಾಗಿದ್ದು, ಅವರು ಅಲ್ಪಕಾಲೀನ ಉದರ ಸಂಬಂಧಿ ಅಸೌಖ್ಯದಿಂದ ಬಳುತ್ತಿದ್ದವರು ಚಿಕಿತ್ಸೆಯ  ಬಗ್ಗೆ ಉಡುಪಿ ತಾಲೂಕು ಕುತ್ಪಾಡಿ-ಉದ್ಯಾವರದ ಎಸ್‌ಡಿಎಂ ಆಯುರ್ವೇದಿಕ್‌ ಆಸ್ಪತ್ರೆಗೆ ದಾಖಲಾಗಿದ್ದವರು,  ದಿನಾಂಕ 03/01/2022 ರಂದು ಬೆಳಿಗ್ಗೆ  6:00  ಗಂಟೆಗೆ ಹೆಚ್ಚಿನ  ಚಿಕಿತ್ಸೆಯ ಬಗ್ಗೆ  ಶಿವಮೊಗ್ಗದ ಸಹ್ಯಾದ್ರಿ ನಾರಾಯಣ ಆಸ್ಪತ್ರೆಗೆ ತೆರಳುವಾಗ ಬೆಳಿಗ್ಗೆ 11:00 ಗಂಟೆಗೆ ಮಾರ್ಗ ಮಧ್ಯೆ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 01/2022 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಶಂಕರನಾರಾಯಣ: ಪಿರ್ಯಾದಿದಾರರಾದ ಸಂತೋಷ  ಕುಮಾರ್ ಶೆಟ್ಟಿ (50), ತಂದೆ: ಸಂಜೀವ ಶೆಟ್ಟಿ, ವಾಸ: ಶಂಕರನಾರಾಯಣ ಗ್ರಾಮ ಕುಂದಾಪುರ  ತಾಲೂಕು ಇವರು ಕುಂದಾಪುರ ತಾಲೂಕಿನ  ಶಂಕರನಾರಾಯಣ  ಗ್ರಾಮದ  ಶಂಕರನಾರಾಯಣದಲ್ಲಿ  ಶ್ರೀ ಬ್ರಹ್ಮಲಿಂಗೇಶ್ವರ   ಎಂಬ ಹೆಸರಿನ  ಹಾರ್ಡವೇರ್ ಅಂಗಡಿ ಇಟ್ಟುಕೊಂಡು  ವ್ಯವಹಾರ  ಮಾಡಿಕೊಂಡಿರುತ್ತಾರೆ. ಹಾಗೂ ಪಿಡ್ಲ್ಯೂ  ಗುತ್ತಿಗೆದಾರರು   ಆಗಿರುತ್ತಾರೆ.  ಆರೋಪಿಗಳಾದ 1. ಲ್ಯಾನ್ಸಿ ರಾಜ್ (45), ತಂದೆ:ವಿಲ್ಪೇಡ್  ರಾಜ್, ವಾಸ: ಸಿಂಡಿಕೇಟ್  ಬ್ಯಾಂಕ್  ಬಳಿ ಮಣಿಪಾಲ ಉಡುಪಿ,ಗಂಗಾಧರ ರಾವ್ (50), ತಂದೆ: ಸೂರ್ಯ ನಾರಾಯಣ ರಾವ್, ವಾಸ: ಮಂಜುನಾಥೇಶ್ವರ ಕಾಲೇಜು ಬಳಿ ಉಜಿರೆ  ಧರ್ಮಸ್ಥಳ ಇವರು ದಿನಾಂಕ 10/01/2021  ರಂದು  ಪಿರ್ಯಾದಿದಾರರ  ಅಂಗಡಿಗೆ  ಬಂದು 1,00,000,00/- ಹಣವನ್ನು ಕಡಿಮೆ ಬಡ್ಡಿದರದಲ್ಲಿ ಸಾಲ ತೆಗೆಯಿಸಿಕೊಡುತ್ತೇನೆ  ಎಂದು ಹೇಳಿ   ನಂಬಿಸಿ  ಅವರಿಂದ   28,00,000/- ರೂಪಾಯಿ  ಹಣವನ್ನು  ಸಾಲದ ಕಾಗದ  ಪತ್ರ  ಮಾಡಲು  ಎಂದು ಹೇಳಿ ಪಡೆದುಕೊಂಡು ಹೋಗಿರುತ್ತಾರೆ, ಆ ಬಳಿಕ ಆರೋಪಿಗಳು ಸಾಲವನ್ನು ತೆಗೆಯಿಸಿಕೊಡದೇ ಪಿರ್ಯಾದಿದಾರರಿಂದ ಪಡೆದುಕೊಂಡ  ಹಣವನ್ನು ಸಹ  ವಾಪಾಸು ನೀಡದೇ  ಮೋಸ ಮಾಡಿರುವುದಾಗಿ ನೀಡಿದ ದೂರಿನಂತೆ ಶಂಕರನಾರಾಯಣ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 01/2022  ಕಲಂ:  417, 418, 420 ಜೊತೆಗೆ  34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಶಿರ್ವಾ: ದಿನಾಂಕ 02/01/2022 ರಂದು ಶ್ರೀಶೈಲ್‌ ಡಿಎಮ್‌, ಪೊಲೀಸ್ ಉಪನಿರೀಕ್ಷಕರು, ಶಿರ್ವ ಪೊಲೀಸ್‌ ಠಾಣೆ ಇವರು ದಿನಾಂಕ 02/01/2022 ರಂದು ರಾತ್ರಿ ಸಿಬ್ಬಂದಿಯವರೊಂದಿಗೆ ಜೊತೆ ರಾತ್ರಿ ರೌಂಡ್ಸ್ ಕರ್ತವ್ಯದಲ್ಲಿರುತ್ತಾ  ದಿನಾಂಕ 03/01/2022 ರಂದು  ಬೆಳಗ್ಗಿನ ಜಾವ 4:30 ಗಂಟೆಗೆ ಕಾಪು ತಾಲೂಕು ಶಿರ್ವ ಗ್ರಾಮದ ಸ್ಯಾಮ್‌ ಸ್ಕ್ವಾರ್‌ ಕಟ್ಟಡದ  ಬಳಿ ತಲುಪುವಾಗ ಒಂದು  ಅಟೋ ರಿಕ್ಷಾ  ಹಾಗೂ   ಸ್ಕೂಟರ್‌ ನಿಂತಿದ್ದು ಈ ವಾಹನದ  ಬಳಿ ವ್ಯಕ್ತಿಗಳು ಗುಂಪು  ಸೇರಿಕೊಂಡು  ನಿಂತಿದ್ದು ಅವರುಗಳ  ಬಳಿಗೆ  ಹೋಗಿ ವಿಚಾರಿಸಿದಾಗ ಸ್ಥಳದಲ್ಲಿ  ಮುಖಗವಸುಗಳನ್ನು ಧರಿಸದೇ, ಆ ಸಮಯದಲ್ಲಿ ಇದ್ದ ಬಗ್ಗೆ ಸಮಪರ್ಕವಾದ ಮಾಹಿತಿಯನ್ನು ಕೂಡ ನೀಡಿರುವುದಿಲ್ಲ. ಹೆಸರು ವಿಳಾಸ ಕೇಳಲಾಗಿ 1.ಅಸ್ಟನ್, (29), ತಂದೆ: ಅಬ್ದುಲ್ ಖಾದರ್, 2. ರಝೀನ್ (29), ತಂದೆ: ಅಬ್ದುಲ್ ಖಾದರ್, 3. ಸೋಮನಾಥ(35), ತಂದೆ: ಮುದ್ದು, 4. ಅಬ್ದುಲ್ ಸಮಾದ್ (29), ತಂದೆ: ನಜೀಬ್ ಶೇಕ್, 5. ಪ್ರಶಾಂತ್ (32), ತಂದೆ: ನವೀನ್ ಕುಮಾರ್, 6. ಜೀವನ್ (24), ತಂದೆ: ಮೈಕಲ್ ಡಿಸೋಜ, 7.ಮುನಾಸ್(28), ತಂದೆ: ಅಹಮ್ಮದ್ ಎಂದು ತಿಳಿಸಿದ್ದು, ಸ್ಥಳದಲ್ಲಿದ್ದ ಅಟೋರಿಕ್ಷಾದ ಬಗ್ಗೆ ವಿಚಾರಿಸಿದಾಗ ಆಸ್ಪನ್‌ ತಾನು ಚಲಾಯಿಸಿಕೊಂಡು  ಬಂದಿದ್ದಾಗಿ  ತಿಳಿಸಿದ್ದು ಅಟೋ ರಿಕ್ಷಾವನ್ನು  ಪರಿಶೀಲಿಸಲಾಗಿ PIAGGIO  ಕಂಪೆನಿ  ತಯಾರಿಕೆಯ KA-20-D-5558 ನೇ  ನೊಂದಣಿ  ಸಂಖ್ಯೆಯ   ಅಟೋ  ರಿಕ್ಷಾ  ಆಗಿರುತ್ತದೆ. ಸ್ಥಳದಲ್ಲಿದ್ದ  ಸ್ಕೂಟರಿನ ಬಗ್ಗೆ  ವಿಚಾರಿಸಿದಾಗ  ಜೀವನ್‌ ತಾನು  ಸವಾರಿ  ಮಾಡಿಕೊಂಡು ಬಂದಿದ್ದಾಗಿ ತಿಳಿಸಿದ್ದು  ಪರಿಶೀಲಿಸಲಾಗಿ ಯಮಹ ಕಂಪೆನಿ ತಯಾರಿಕೆಯ ರೇ  ಮಾದರಿಯ  KA-20-EQ-9142 ನೇ  ನೊಂದಣಿ  ಸಂಖ್ಯೆಯ ಸ್ಕೂಟರ್‌ ಆಗಿರುತ್ತದೆ.ಮೇಲಿನ ವ್ಯಕ್ತಿಗಳು ಸಮಂಜಸ ಕಾರಣವಿಲ್ಲದೇ ಅನಗತ್ಯವಾಗಿ ಸ್ಥಳದಲ್ಲಿ ಮುಖಗವಸು ಧರಿಸದೇ ಗುಂಪು ಸೇರಿರುವುದಾಗಿದೆ.  ವ್ಯಕ್ತಿಗಳು ಘನ ಕರ್ನಾಟಕ ಸರಕಾರವು ಕೋವಿಡ್‌ ಮಹಾಮಾರಿ ಕೊರೋನಾ ಸೋಂಕನ್ನು ತಡೆಯುವ ಬಗ್ಗೆ ಹೊರಡಿಸಿರುವ ಮಾರ್ಗಸೂಚಿಗಳ ಬಗ್ಗೆ ತಿಳುವಳಿಕೆ ಇದ್ದರೂ ಕೂಡಾ ಅನಗತ್ಯವಾಗಿ ಪ್ರಾಣಕ್ಕೆ ಅಪಾಯಕಾರಿಯಾದ ರೋಗದ ಸೋಂಕನ್ನು ಹರಡುವ ಸಂಭವ ಇದೆ ಎಂದು ತಿಳಿದೂ ಕೂಡಾ ನಿರ್ಲಕ್ಷತನದಿಂದ ಕೋವಿಡ್‌ನಿಯಮ ಹಾಗೂ  ಮಾನ್ಯ  ಜಿಲ್ಲಾಧಿಕಾರಿಗಳ  ಕರ್ಪ್ಯೂ ಆದೇಶವನ್ನು ಉಲ್ಲಂಘಿಸಿ ಅನಗತ್ಯವಾಗಿ ವಾಹನದಲ್ಲಿ ಬಂದು  ಸ್ಥಳದಲ್ಲಿ ಗುಂಪು ಸೇರಿರುವುದಾಗಿದೆ. ಈ ಬಗ್ಗೆ ಶಿರ್ವಾ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 01/2022 , ಕಲಂ: 269, 188  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.      

ಇತ್ತೀಚಿನ ನವೀಕರಣ​ : 04-01-2022 06:17 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080