ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕಾಪು: ಪಿರ್ಯಾದಿದಾರರಾದ ಅಶ್ವಿನಿ (35),  ಗಂಡ : ನವೀನ್ ಎಮ್. ಬಂಗೇರಾ , ವಾಸ :   ಶ್ರೀದೇವಿ ನಿಲಯ ದೇವಪ್ಪ ತೋಟ ಕಾಪು ಪಡು ಗ್ರಾಮ ಕಾಪು ತಾಲೂಕು ಉಡುಪಿ ಜಿಲ್ಲೆ ಇವರು ದಿನಾಂಕ 03/01/2022 ರಂದು ಕಾಪು ರಾಜೀವ ಭವನದ ಹೊರಗಡೆ ನಿಂತಿರುವಾಗ  ಮಧ್ಯಾಹ್ನ 2:00 ಗಂಟೆಗೆ ರಾಷ್ಟ್ರೀಯ ಹೆದ್ದಾರಿ 66 ಮಂಗಳೂರು ಉಡುಪಿ ಸರ್ವಿಸ್ ರಸ್ತೆಯಲ್ಲಿ ಓರ್ವ ಮೋಟಾರು ಸೈಕಲ್‌ ಸವಾರ ತನ್ನ ಮೋಟಾರ್  ಸೈಕಲ್‌ನಲ್ಲಿ ಸಹ ಸವಾರನನ್ನು ಕುಳ್ಳರಿಸಿಕೊಂಡು ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಸವೀಸ್ ರಸ್ತೆಯಲ್ಲಿ ಅತಿ ವೇಗ ಹಾಗೂ ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ಬಂದು ಕಾಪು ಪಡು ಗ್ರಾಮದ ಪೊಲಿಪು ಕ್ರಾಸ್ ನಲ್ಲಿ ಒಮ್ಮೇಲೆ ಎಡಕ್ಕೆ ತಿರುಗಿಸಿದ ಪರಿಣಾಮ ಮೋಟಾರು ಸೈಕಲ್‌ ಸವಾರ ಮತ್ತು  ಸಹ ಸವಾರ, ಮೋಟಾರು ಸೈಕಲ್‌ ಸಮೇತ ರಸ್ತೆಗೆ ಬಿದ್ದಿದ್ದು ಕೂಡಲೇ ಪಿರ್ಯಾದಿದಾರರು ಮತ್ತು ಸ್ಥಳೀಯರು ಸ್ಥಳಕ್ಕೆ ಹೋಗಿ ಅವರಿಬ್ಬರನ್ನು ಉಪಚರಿಸಿ ನೋಡಲಾಗಿ ಪಿರ್ಯಾದಿದಾರರ  ಪರಿಚಯದ  ಮೋಟಾರು ಸೈಕಲ್‌ ಸವಾರ ಸಂತೋಷ ಶೆಟ್ಟಿ ಮತ್ತು ಸಹಸವಾರ ಪ್ರಸಾದ ಎಂಬುವವರಾಗಿದ್ದು,  ಸಂತೋಷ ಶೆಟ್ಟಿಯವರ ಮುಖಕ್ಕೆ ಹಾಗೂ ಪ್ರಸಾದ ರವರ ತಲೆಯ ಹಿಂಭಾಗ ರಕ್ತಗಾಯವಾಗಿದ್ದು ಕೂಡಲೇ ಪಿರ್ಯಾದಿದಾರರು ಸ್ಥಳೀಯರ ಸಹಾಯದಿಂದ ಇಬ್ಬರನ್ನು ಅಂಬುಲೇನ್ಸ್‌ನಲ್ಲಿ ಚಿಕಿತ್ಸೆ ಬಗ್ಗೆ ಉಡುಪಿ ಜಿಲ್ಲಾ  ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ಅಲ್ಲಿನ ವೈದ್ಯರು ಪರೀಕ್ಷಿಸಿ ಅವರಿಬ್ಬರನ್ನು ಒಳರೋಗಿಯನ್ನಾಗಿ ದಾಖಲಿಸಿಕೊಂಡಿದ್ದು. ಚಿಕಿತ್ಸೆಯಲ್ಲಿರುತ್ತಾ ಮೋಟಾರು ಸೈಕಲ್‌ನ ಸಹ ಸವಾರ ಪ್ರಸಾದ (32) ರವರು ಚಿಕಿತ್ಸೆಗೆ ಸ್ಪಂದಿಸದೇ ದಿನಾಂಕ 04/01/2022 ರಂದು ಬೆಳಗ್ಗೆ  07:10 ಗಂಟೆಗೆ ಮೃತ ಪಟ್ಟಿರುವುದಾಗಿ ವೈದ್ಯರು ತಿಳಿಸಿರುತ್ತಾರೆ. ಮೋಟಾರು ಸೈಕಲ್‌ನಂಬ್ರ ನೋಡಲಾಗಿ KA-20-V-6473 ಆಗಿರುತ್ತದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 03/2022  ಕಲಂ: 279, 337,304(A)  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಶಿರ್ವಾ: ದಿನಾಂಕ 03/01/2022 ರಂದು ರಾತ್ರಿ 09:00 ಗಂಟೆಗೆ ಶಿರ್ವಾ ಗ್ರಾಮದ ಶಿರ್ವಾ ಪಂಜಿಮಾರು ಕೋಡುಗುಡ್ಡೆ ಎಂಬಲ್ಲಿ ಸಾರ್ವಜನಿಕ ಡಾಮಾರು ರಸ್ತೆಯಲ್ಲಿ ಆರೋಪಿ KA-20-EU-6322ನೇ ಸ್ಕೂಟರ್ ನಲ್ಲಿ ಸಹಸವಾರ ನಿಯಾಜ್ ನನ್ನು ಕುಳ್ಳಿರಿಸಿಕೊಂಡು  ಬಂಟಕಲ್ಲುವಿನಿಂದ ಶಿರ್ವಾ ಕಡೆಗೆ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಎದುರಿನಿಂದ ನಿಟ್ಟೆಯಿಂದ  ಬಂಟಕಲ್ಲುವಿನ ಕಡೆಗೆ ಪಿರ್ಯಾದಿದಾರರಾದ ನಿತಿನ್ ಸುಂದರ ಅಂಚನ್ (37), ತಂದೆ: ಸುಂದರ ಅಂಚನ್, ವಾಸ: ನಂದಾದೀಪ ಹೌಸ್, ನಿಟ್ಟೆ ಗ್ರಾಮ, ಕಾರ್ಕಳ, ತಾಲೂಕು ಉಡುಪಿ ಜಿಲ್ಲೆ ಇವರು ಚಲಾಯಿಸಿಕೊಂಡು ಬರುತ್ತಿದ್ದ KA-20-EN-9457ನೇ ಸ್ಕೂಟರ್ ಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರ ಸ್ಕೂಟರ್ ಜಖಂ ಗೊಂಡಿದ್ದು, ಅಲ್ಲದೇ ಪಿರ್ಯಾದಿದಾರರು ಸ್ಕೂಟರ್ ಸಮೇತ ರಸ್ತೆಗೆ ಬಿದ್ದು ಮುಖಕ್ಕೆ ಬಲಕೈ, ಎಡಪಾದದ ಬಳಿ  ರಕ್ತಗಾಯವಾಗಿರುತ್ತದೆ. ಬೇರೆ ಯಾರಿಗೂ ಯಾವುದೇ ಗಾಯವಾಗಿರುವುದಿಲ್ಲ. ಈ ಬಗ್ಗೆ ಶಿರ್ವಾ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 03/2022, ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 

ಅಸ್ವಾಭಾವಿಕ ಮರಣ ಪ್ರಕರಣ

  • ಮಣಿಪಾಲ: ಪಿರ್ಯಾದಿದಾರರಾದ ಡೆನ್ಜಿಲ್ ಡಿಸೋಜಾ (37), ತಂದೆ: ಪ್ರೆಂಕಿ ಡಿಸೋಜಾ, ವಾಸ: ಅಂಬಡೆಬೆಟ್ಟು ಹೌಸ್ , ಪೆರಂಪಳ್ಳಿ, ಶಿವಳ್ಳಿ ಗ್ರಾಮ, ಉಡುಪಿ ತಾಲೂಕು ಇವರ ತಂದೆ ಅಣ್ಣನಾದ ವಿಲ್ಪ್ರೆಡ್  ಡಿಸೋಜಾ (73) ಎಂಬುವವರಿಗೆ ಮಧ್ಯಪಾನ ಮಾಡುವ ಹವ್ಯಾಸವಿದ್ದು  ಅವರಿಗೆ ಕಳೆದ ಎರಡು ವರ್ಷಗಳ ಹಿಂದೆ ಮೂತ್ರ ಸಮಸ್ಯೆ ಉಂಟಾಗಿದ್ದು ಅವರನ್ನು ಕೆ ಎಂ ಸಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದು, ಕಳೆದ 2-3 ತಿಂಗಳಿಂದ ಅನಾರೋಗ್ಯ ಸಮಸ್ಯೆ ತೀವ್ರವಾಗಿದ್ದು ಇದರಿಂದ ಮಾನಸಿಕ ಖಿನ್ನತೆಗೆ ಒಳಗಾಗಿ  ಅಥವಾ ಇತರೆ ಯಾವುದೋ ಹೇಳಿಕೊಳ್ಳಲಾಗದ ಕಾರಣದಿಂದ ಮನನೊಂದು ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 03/01/2022 ರ ರಾತ್ರಿ 09:30 ಗಂಟೆಯಿಂದ ದಿನಾಂಕ: 04/01/2022 ರ ಬೆಳಿಗ್ಗೆ 05:30 ಗಂಟೆಯ ಮಧ್ಯಾವಧಿಯಲ್ಲಿ ತಾನು ವಾಸವಿದ್ದ ರೂಮಿನ ಮಾಡಿನ ಪಕ್ಕಸಿಗೆ ಕೇಬಲ್ ಮತ್ತು ಲುಂಗಿಯಿಂದ ಕುತ್ತಿಗೆಗೆ ನೇಣು ಬೀಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 01/2022 ಕಲಂ: 174 ಸಿ. ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಕಾರ್ಕಳ: ಪಿರ್ಯಾದಿದಾರರಾದ ಶ್ರೀಮತಿ ಜಯಶ್ರೀ (34), ಗಂಡ:ಸುಂದರ್‌ ವಾಸ:ಪಡ್ಡಾಯಿ  ಗುಡ್ಡೆ , ಸಾಣೂರು ಗ್ರಾಮ,ಕಾರ್ಕಳ ತಾಲೂಕು ಇವರು ದಿನಾಂಕ 03/01/2022 ರಂದು ಬೆಳಿಗ್ಗೆ 10:30 ಗಂಟೆಗೆ ಮನೆಯಲ್ಲಿದ್ದಾಗ ಅಪಾದಿತ ಶೇಖರ ಪಿರ್ಯಾದಿದಾರರ ಮನೆಯ ಹತ್ತಿರ ಬಂದಿದ್ದು ಪಿರ್ಯಾದಿದಾರರ ಗಂಡ ಸುಂದರರವರು  ಅಪಾದಿತನಲ್ಲಿ ತಮ್ಮ ಮನೆಯ ಹತ್ತಿರ ಯಾಕೆ ಬರುತ್ತೀ ಎಂದು ಕೇಳಿದಾಗ ಅಪಾದಿತನು ಸುಂದರರವರ ಕಾಲರ್  ಹಿಡಿದು ಹಲ್ಲೆಗೆ ಮುಂದಾದಾಗ ಪಿರ್ಯಾದಿದಾರರು ಬಿಡಿಸಲು ಹೋಗಿದ್ದು ಅಪಾದಿತನು ಪಿರ್ಯಾದಿದಾರರಿಗೆ ಹಲ್ಲೆ ಮಾಡಿದ್ದು, ದಿನಾಂಕ 04/01/2022 ರಂದು ಬೆಳಿಗ್ಗೆ 07:30 ಗಂಟೆಗೆ ಅಪಾದಿತ ಶೇಖರನು ತನ್ನ ತಮ್ಮ ರಮೇಶ, ಶೇಖರನ ಹೆಂಡತಿ ಪುಷ್ಪ, ನೆರೆಮನೆಯ ಶಂಕರ, ಶಂಕರನ ತಂಗಿ ಶಾರದಾ , ಶಾರದಾ ರವರ ಮಕ್ಕಳಾದ ದೀಪ್ತಿ ಮತ್ತು ಯಶೋಧರ ಎಂಬುವವರೊಂದಿಗೆ  ಸೇರಿಕೊಂಡು ಪಿರ್ಯಾದಿದಾರರ ಮನೆಯ ಅಂಗಳಕ್ಕೆ ಅಕ್ರಮ ಪ್ರವೇಶ ಮಾಡಿ ಅವಾಚ್ಯ ಶಬ್ದಗಳಿಂದ ಬೈದು  ಜೀವ ಬೆದರಿಕೆ ಹಾಕಿರುತ್ತಾರೆ. ಹಾಗೂ ಮನೆಯ ಗೇಟನ್ನು ಮುರಿದು ಹಾಕಿ ಪೊಲೀಸ್ ಕಂಪ್ಲೇಂಟ್ ಕೊಡಲು ಹೋಗಲು ಬಿಡುವುದಿಲ್ಲ ಎಂದು  ಗೇಟಿನಲ್ಲಿ ಅಡ್ಡನಿಂತು ತಡೆಯುಂಟು ಮಾಡಿರುವುದಾಗಿ ನೀಡಿದ ದೂರಿನಂತೆ ಕಾರ್ಕಳ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 03/2022  ಕಲಂ: 143,147,341, 504, 506, 354, 354(D),427 ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಪಡುಬಿದ್ರಿ: ಪಿರ್ಯಾದಿದಾರರಾದ ಇಬ್ರಾಹಿಂ ಬ್ಯಾರಿ (58), ತಂದೆ: ಕಾದ್ರಿ ಬ್ಯಾರಿ, ವಾಸ:  ಮನೆ ನಂಭ್ರ 5097, ಗುತ್ತಕಾಡು, ಶಾಂತಿನಗರ, ತಾಳಿಪಾಡಿ ಗ್ರಾಮ, ಕಿನ್ನಿಗೋಳಿ, ಮಂಗಳೂರು, ದಕ್ಷಿಣ ಕನ್ನಡ  ಜಿಲ್ಲೆ ಇವರು  ಜಾತ್ರೆ ಮತ್ತು ನೇಮೋತ್ಸವ ಕಾರ್ಯಕ್ರಮಗಳಲ್ಲಿ ಹೂ ಮಾಡುವ ವ್ಯಾಪಾರ ಮಾಡಿಕೊಂಡಿದ್ದು, ದಿನಾಂಕ 01/01/2022 ರಂದು ಕಾಪು ತಾಲೂಕು ನಡ್ಸಾಲು ಗ್ರಾಮದ ಪಡುಬಿದ್ರಿಯ ಬೀಡು ಬಳಿ ಗರಡಿ  ನೇಮೋತ್ಸವಕ್ಕೆ ಸಂಜೆ 16:00 ಗಂಟೆಗೆ ತನ್ನ KA-20-EG-4203 ನೇ ನಂಬ್ರದ AVIATOR  ಸ್ಕೂಟರ್ ನಲ್ಲಿ ಬಂದು ರಾಹೆ 66 ರ ಬಳಿ ಗರಡಿಯ ಸಮೀಪ ಸ್ಕೂಟರ್ ನ್ನು ನಿಲ್ಲಿಸಿ ಹೂ ವ್ಯಾಪಾರ ಮಾಡಿಕೊಂಡಿದ್ದು ರಾತ್ರಿ 20:30 ಗಂಟೆ ಸಮಯಕ್ಕೆ ವ್ಯಾಪಾರಕ್ಕೆ ಬಂದ ಐಸ್‌ಕ್ರೀ ಅಂಗಡಿಯವರು ಸ್ಕೂಟರ್ ನ್ನು ಸ್ವಲ್ಪ ಸರಿಸಿ ಅವರ ವಾಹನ ನಿಲ್ಲಿಸಿ ಐಸ್‌ಕ್ರಿಂ ವ್ಯಾಪಾರ ಮಾಡುತ್ತಿದ್ದರು. ರಾತ್ರಿ 22:00 ಗಂಟೆಗೆ ಪಿರ್ಯಾದಿದಾರರು ವ್ಯಾಪಾರ ಮುಗಿಸಿ ಮನೆಗೆ ಹೋಗಲು ಸ್ಕೂಟರ್ ಬಳಿ ಬಂದಾಗ ಸ್ಕೂಟರ್ ಕಾಣದೇ ಇದ್ದು, ಹುಡುಕಾಡಿದಾಗ ಸಿಗಲಿಲ್ಲ. ಸ್ಕೂಟರ್ ಕೀ ಸ್ಕೂಟರ್ ನಲ್ಲಿಯೇ ಇದ್ದು ಯಾರೋ ಕಳ್ಳರು ದಿನಾಂಕ:01/01/2022 ರ ರಾತ್ರಿ 20:30 ಗಂಟೆಯಿಂದ 22:00 ಗಂಟೆಯ ಮಧ್ಯಾವಧಿಯಲ್ಲಿ   ಪಿರ್ಯಾದಿದಾರರ KA-20-EG- 4203 ನೇ ನಂಬ್ರದ ಸ್ಕೂಟರ್ ನ್ನು ಕಳವು ಮಾಡಿಕೊಂಡು ಹೋಗಿದ್ದು,  ಕಳುವಾದ ಮೋಟಾರು ಸೈಕಲ್ ನ ಮೌಲ್ಯ ರೂಪಾಯಿ 20,000/- ಆಗಿರುತ್ತದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 01/2022 ಕಲಂ: 379 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   

ಇತ್ತೀಚಿನ ನವೀಕರಣ​ : 04-01-2022 06:26 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080