ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕಾಪು: ದಿನಾಂಕ 02/12/2022 ರಂದು ಪಿರ್ಯಾದಿದಾರರಾದ ಜಯದೀಪ್ (20),  ತಂದೆ : ದಾಮೋದರ, ವಾಸ : ಭೀಮಸ್ ಗಾರ್ಡನ್, ಮೇಲ್ಫೇಟೆ ಉದ್ಯಾವರ ಗ್ರಾಮ ಮತ್ತು ಅಂಚೆ ಉಡುಪಿ ತಾಲೂಕು ಮತ್ತು ಜಿಲ್ಲೆ ಇವರು ಸವಾರಿ ಮಾಡಿಕೊಂಡಿದ್ದ ಅವರ KA-20-EV- 5273 ನೇ ಸ್ಕೂಟರ್‌ನಲ್ಲಿ  ಸುಕ್ಷಿತ್ ಭಂಡಾರಿ ರವರನ್ನು ಹಿಂಬದಿ ಸವಾರನಾಗಿ ಕುಳ್ಳರಿಸಿಕೊಂಡು ಕ್ಯಾಟರಿಂಗ್ ಕೆಲಸದ ಬಗ್ಗೆ ರಾಷ್ಟ್ರೀಯ ಹೆದ್ದಾರಿ 66 ಉಡುಪಿ ಮಂಗಳೂರು ಏಕಮುಖ ಸಂಚಾರ ರಸ್ತೆಯಲ್ಲಿ ಉಚ್ಚಿಲ ಕಡೆಗೆ ಹೋಗುತ್ತಿರುವಾಗ ಬೆಳಗ್ಗೆ 11:20 ಗಂಟೆಗೆ ಸರ್ವಿಸ್‌ ರಸ್ತೆಯಿಂದ ಕಟಪಾಡಿ ಜಂಕ್ಷನ್‌ ತಲುಪುತ್ತಿದ್ದಂತೆ ಪಿರ್ಯಾದಿದಾರರ ಸ್ಕೂಟರ್‌‌ ಹಿಂದಿನಿಂದ ಮಾರುತಿ ಹೊಸಮನಿ ರವರು ತನ್ನ KA-21-9948 ನೇ ಟಿಪ್ಪರ್ ನ್ನು ಅತೀ ವೇಗ ಹಾಗೂ ತೀವೃ ಅಜಾಗರೂಕತೆಯಿಂದ ತೀರಾ ಎಡಬದಿಗೆ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಸ್ಕೂಟರ್‌‌‌ಗೆ ಢಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು  ಹಾಗೂ ಸಹ ಸವಾರ ಸುಕ್ಷಿತ್ ಭಂಡಾರಿ ರವರು ಸ್ಕೂಟರ್‌ಸಮೇತ ಟಿಪ್ಪರ್ ಕೆಳಗೆ ಬಿದ್ದು, ಸುಕ್ಷಿತ್ ಭಂಡಾರಿ ಹಾಗೂ ಪಿರ್ಯಾದಿದಾರರ ಬಲಗೈನ ಮೇಲೆ ಹಾದು ಹೋಗಿದ್ದರಿಂದ ಸುಕ್ಷಿತ್ ಭಂಡಾರಿಯ ಎದೆಯ ಭಾಗಕ್ಕೆ ಹಾಗೂ  ತಲೆಯ ಭಾಗಕ್ಕೆ ತೀವೃ ಪೆಟ್ಟಾಗಿ ಪ್ರಜ್ಞೆ ತಪ್ಪಿದ್ದು, ಪಿರ್ಯಾದಿದಾರರಿಗೆ ಬಲಕೈಗೆ ತರಚಿದ ರೀತಿಯ ಗಾಯವಾಗಿರುತ್ತದೆ. ಕೂಡಲೇ ಶಶಾಂಕ ಸಾತ್ವಿಕ್ ಸ್ಥಳಕ್ಕೆ ಬಂದು ಅವರನ್ನು ಉಪಚರಿಸಿ  ರಿಕ್ಷಾವೊಂದರಲ್ಲಿ ಚಿಕಿತ್ಸೆಯ ಬಗ್ಗೆ ಉಡುಪಿ ಹೈಟೆಕ್ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು, ಪಿರ್ಯಾದಿದಾರರನ್ನು ದಾಖಲಿಸಿಕೊಂಡು, ಸುಕ್ಷಿತ್ ಭಂಡಾರಿಯನ್ನು ಮಣಿಪಾಲ ಕೆ.ಎಮ್.ಸಿ. ಆಸ್ಪತ್ರೆಗೆ ಕರೆದುಕೊಂಡು ಹೋಗಿರುತ್ತಾರೆ.  ಪಿರ್ಯಾದಿದಾರರು ಹೈಟೆಕ್‌ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ಮನೆಗೆ ಹೋಗಿದ್ದು, ಮಣಿಪಾಲ ಕೆ.ಎಮ್.ಸಿ. ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಸುಕ್ಷಿತ್ ಭಂಡಾರಿಯು ಮಧ್ಯಾಹ್ನ 1:20 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೇ ಕೆ.ಎಮ್.ಸಿ. ಆಸ್ಪತ್ರೆಯಲ್ಲಿ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಕಾಪು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 131/2022 ಕಲಂ: 279, 337, 304(ಎ) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ .
  • ಶಂಕರನಾರಾಯಣ: ದಿನಾಂಕ  02/12/2022  ರಂದು ಬೆಳಿಗ್ಗೆ 10:45 ಗಂಟೆಗೆ ಆರೋಪಿ KA-20-EQ-7885  ನೇ  ನಂಬ್ರದ  ಮೋಟಾರ್  ಸೈಕಲ್‌‌ನಲ್ಲಿ  ಶ್ರೀಮತಿ   ಗಿರಿಜಾ  ಇವರನ್ನು ಸಹ ಸವಾರನ್ನಾಗಿ  ಕುಳ್ಳಿರಿಸಿಕೊಂಡು ಹೆಬ್ರಿ   ತಾಲೂಕಿನ ಬೆಳ್ವೆ ಗ್ರಾಮದ  ಗೋಳಿಯಂಗಡಿ  ಶ್ರೀ ಬ್ರಾಹ್ಮಿ  ಪಾಸ್ಟ ಪುಡ್   ಅಂಗಡಿಯ  ಎದುರುಗಡೆ  ಗೋಳಿಯಂಗಡಿ  ಕಡೆಯಿಂದ  ಬೆಳ್ವೆ ಕಡೆಗೆ ಅತೀ ವೇಗ  ಹಾಗೂ ಅಜಾಗರೂಕತೆಯಿಂದ  ಚಲಾಯಿಸಿಕೊಂಡು  ಬಂದಿದ್ದು, ಇದರ   ಪರಿಣಾಮ  ಮೋಟಾರ್  ಸೈಕಲ್  ಹಿಂಬದಿ  ಕುಳಿತ್ತಿದ್ದ  ಶ್ರೀಮತಿ   ಗಿರಿಜಾ  ಇವರು ಹಿಮ್ಮುಖವಾಗಿ ರಸ್ತೆಯ  ಮೇಲೆ   ಬಿದ್ದು  ತಲೆಗೆ ಗಂಬೀರ ಸ್ವರೂಪದ  ಗಾಯವಾಗಿರುತ್ತದೆ. ಗಾಯಗೊಂಡ  ಅವರನ್ನು ಕೂಡಲೇ  ಹಾಲಾಡಿ ದುರ್ಗಾ  ಆಸ್ಪತ್ರೆಗೆ  ಕರೆದುಕೊಂಡು ಬಂದಾಗ  ಅಲ್ಲಿ  ಅವರನ್ನು ಪರೀಕ್ಷಿಸಿದ  ವೈದ್ಯರು  ಮೃತಪಟ್ಟಿರುತ್ತಾರೆ ಎಂದು ತಿಳಿಸಿರುತ್ತಾರೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 131/2022 ಕಲಂ: 279, 304(ಎ) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ .   
  • ಕೋಟ: ಪಿರ್ಯಾದಿದಾರರಾದ ನಿಖಿಲ್‌ ಪ್ರಭು (22), ತಂದೆ: ನಾಗಪ್ಪಯ್ಯ ಪ್ರಭು, ವಾಸ: ಶಾಂಭವಿ ನಿಲಯ, ಮ.ನಂ. 4-3, ಮಹಾಲಿಂಗೇಶ್ವರ ದೇವಸ್ಥಾನದ ಬಳಿ, ಮಣೂರು ಗ್ರಾಮ ಬ್ರಹ್ಮಾವರ  ತಾಲೂಕು ಇವರು  ದಿನಾಂಕ 02/12/2022 ರಂದು ಬೆಳಿಗ್ಗೆ ಕುಂದಾಪುರ ವಲಯ ಅರಣ್ಯಾಧಿಕಾರಿಯವರನ್ನು ಅವರ AP-28-AT-360 ನೇ ಕಾರಿನಲ್ಲಿ ಕೋಟಕ್ಕೆ ಕೆಲಸದ ನಿಮಿತ್ತ ಕರೆದುಕೊಂಡು ಬಂದು, ಕೆಲಸ ಮುಗಿದ ಬಳಿಕ ಪುನಃ ಅವರನ್ನು ಕೋಟದಿಂದ ಕುಂದಾಪುರಕ್ಕೆ ಕರೆದುಕೊಂಡು ಹೋಗಲು ರಾಷ್ಟ್ರೀಯ ಹೆದ್ದಾರಿ . 66 ಉಡುಪಿ - ಕುಂದಾಪರ ರಸ್ತೆಯಲ್ಲಿ ಉಡುಪಿ ಕಡೆಯಿಂದ ಕುಂದಾಪುರ ಕಡೆಗೆ ಕುಂದಾಪುರ ವಲಯ ಅರಣ್ಯಾಧಿಕಾರಿಯವರೊಂದಿಗೆ ಪಿರ್ಯಾದಿದಾರರು ಕಾರು ಚಲಾಯಿಸಿಕೊಂಡು ಬೆಳಿಗ್ಗೆ  07:45 ಗಂಟೆಗೆ ಮಣೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನದ ಎದುರು ರಸ್ತೆಯಲ್ಲಿ ಹೋಗುವಾಗ, ಅದೇ ರಸ್ತೆಯಲ್ಲಿ ಹಿಂದಿನಿಂದ  ಉಡುಪಿ ಕಡೆಯಿಂದ ಬರುತ್ತಿದ್ದ ಸವಾರ ವಾಸುದೇವ ನಾಯ್ಕ ತನ್ನ KA-20-EA-4937 ನೇ ಸ್ಕೂಟಿಯನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಕಾರಿಗೆ ಹಿಂದಿನಿಂದ ಢಿಕ್ಕಿ ಹೊಡೆದ ಪರಿಣಾಮ ಸ್ಕೂಟಿ ಸವಾರ ರಸ್ತೆಗೆ ಬಿದ್ದು, ಆತನ ಮುಖಕ್ಕೆ ಮತ್ತು ಕೈಕಾಲಿಗೆ ತೀವ್ರ ಗಾಯವಾಗಿರುತ್ತದೆ. ಪಿರ್ಯಾದಿದಾರರ ಕಾರಿನಲ್ಲಿದ್ದ ಯಾರಿಗೂ ಯಾವುದೇ ಗಾಯಗಳಾಗಿರುವುದಿಲ್ಲ. ಈ ಬಗ್ಗೆ ಕೋಟ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 216/2022 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ .  

ಅಸ್ವಾಭಾವಿಕ ಮರಣ ಪ್ರಕರಣ

  • ಬ್ರಹ್ಮಾವರ: ಪಿರ್ಯಾದಿದಾರರಾದ ವನಜ ಪೂಜಾತ್ತಿ  (54), ಗಂಡ: ಚಂದ್ರಶೇಖರ , ವಾಸ: ಶ್ರೀ ಅಮ್ಮ , ತಡಾಲು ಜಡ್ಡಿನ ಮನೆ, ಕರ್ಜೆ ಅಂಚೆ, ಹೊಸೂರು ಗ್ರಾಮ, ಬ್ರಹ್ಮಾವರ ತಾಲೂಕು ಇವರ  ಮಗ ಪ್ರಕಾಶ (23)  ಸುಮಾರು 3 ವರ್ಷದ ಹಿಂದೆ ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದು ಕೊರೋನ ಬಂದ ನಂತರ ಊರಿಗೆ ಬಂದು  ತೋಟದ ಕೆಲಸ ಹಾಗೂ ಗಾರೆ ಕೆಲಸ ಮಾಡಿಕೊಂಡಿರುತ್ತಾರೆ. ಪ್ರಕಾಶ ರವರು  ಸುಮಾರು 5 ತಿಂಗಳ ಹಿಂದೆ ಸಾಲ ಮಾಡಿ ಹೊಸ ರಿಕ್ಷಾವನ್ನು ಖರೀದಿಸಿದ್ದು, ಆ ಸಮಯ ಅವನು ಬೈಕ್‌ ನಲ್ಲಿ ಬಿದ್ದು ಒಂದು ತಿಂಗಳು ಮನೆಯಲ್ಲಿ ವಿಶ್ರಾಂತಿಯನ್ನು ಪಡೆದಿದ್ದು, ಇದರಿಂದ ಬೇಸರಗೊಂಡು ರಿಕ್ಷಾವನ್ನು ಮಾರಿರುತ್ತಾರೆ.  ನಂತರ ಮನೆಯಲ್ಲಿಯೇ ಇದ್ದು ಮಧ್ಯ ಸೇವನೆ ಮಾಡಿಕೊಂಡು ಮನೆಗೆ ಬರುತ್ತಿರುವುದಾಗಿದೆ.  ಸುಮಾರು 2 ವಾರದ ಹಿಂದೆ ಪೇತ್ರಿ ಸೊಸೈಟಿಯಿಂದ 1 ಲಕ್ಷ ಸಾಲದ ಮರುಪಾವತಿಯ ಬಗ್ಗೆ ಮನೆಗೆ ನೋಟಿಸು ಬಂದಿದ್ದು, ಇದರಿಂದ ಬೇಸರಗೊಂಡು ವಿಪರೀತ ಮದ್ಯಸೇವನೆ ಮಾಡಿಕೊಂಡು ಜೀವನದಲ್ಲಿ ಜೀಗುಪ್ಸೆಗೊಂಡು  ದಿನಾಂಕ 30/11/2022 ರಂದು ಬೆಳಿಗ್ಗೆ 9:00 ಗಂಟೆಯಿಂದ ದಿನಾಂಕ 02/12/2022 ರಂದು ಮಧ್ಯಾಹ್ನ  4:00 ಗಂಟೆಯ ಮಧ್ಯಾವಧಿಯಲ್ಲಿ ಹೊಸೂರು ಗ್ರಾಮದ ತಡಾಲು ಸರ್ಕಾರಿ ಹಾಡಿಯ ಮಧ್ಯದಲ್ಲಿ ಮರದ ಬೀಳಿಗೆ ನೈಲಾನ್ ಹಗ್ಗವನ್ನು ಕಟ್ಟಿ ಇನ್ನೊಂದು ತುದಿಯಿಂದ ಕುತ್ತಿಗೆಯನ್ನು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 61/2022 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ .
  • ಕೊಲ್ಲೂರು: ಪಿರ್ಯಾದಿದಾರರಾದ ನಾರಾಯಣ ನಾಯ್ಕ್ (65), ತಂದೆ: ನಾಗ ನಾಯ್ಕ್, ವಾಸ: ಗುಡ್ಡಿಮನೆ, ಬಸ್ರಿಬೇರು , ಜಡ್ಕಲ್ ಗ್ರಾಮ  ಬೈಂದೂರು ತಾಲೂಕು ಇವರ ಮಗ ಗೋವಿಂದ ನಾಯ್ಕ್ (39) ಇವರು  ಅವಿವಾಹಿತರಾಗಿರುತ್ತಾರೆ.  ದಿನಾಂಕ 01/12/2022 ರಂದು ರಾತ್ರಿ ಗೋವಿಂದ  ನಾಯ್ಕ್ ರವರು ಜಡ್ಕಲ್ ಗ್ರಾಮದ ಬಸ್ರಿಬೇರು ಎಂಬಲ್ಲಿ ವಾಸವಾಗಿರುವ  ಮನೆಯಲ್ಲಿ ಮನೆ ಮಂದಿಯೊಂದಿಗೆ ಊಟ ಮಾಡಿ ಮಲಗಿಕೊಂಡಿದ ವೇಳೆ ರಾತ್ರಿ 10:00 ಗಂಟೆಗೆ ವಿಪರೀತ ಕೆಮ್ಮು ಕಾಣಿಸಿಕೊಂಡಿದ್ದು ಉಸಿರಾಡಲು ಕಷ್ಟ ಸಾದ್ಯವಾಗಿ ಅಸ್ವಸ್ಥರಾದವರನ್ನು ಅವರ ತಮ್ಮ ರಮೇಶ ಮತ್ತು ನೆರೆಕರೆಯ ನಿವಾಸಿ  ರವಿ ಮತ್ತು ನವೀನ್ ರವರು   ಗೋವಿಂದ  ನಾಯಕ್ಕ ರವರನ್ನು  ಅಂಬುಲೆನ್ಸ್  ವಾಹನದಲ್ಲಿ  ಕುಂದಾಪುರ ಸರಕಾರಿ ಆಸ್ಪತ್ರೆಗೆ  ಚಿಕಿತ್ಸೆಗೆ  ಕರೆತಂದಾಗ ವೈದ್ಯಾಧಿಕಾರಿಗಳು ಪರೀಕ್ಷಿಸಿ ದಿನಾಂಕ 02/12/2022 ರಂದು ಬೆಳಗಿನ ಜಾವ 04:45 ಗಂಟೆಗೆ  ಚಿಕಿತ್ಸೆಗೆ  ಕರೆ ತರುವ ದಾರಿಯಲ್ಲಿ  ಮೃತ ಪಟ್ಟಿರುತ್ತಾರೆ ಎಂದು  ದೃಢೀಕರಿಸಿರುತ್ತಾರೆ.  ಈ ಬಗ್ಗೆ ಕೊಲ್ಲೂರು ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 18/2022 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ .
  • ಕಾರ್ಕಳ: ಪಿರ್ಯಾದಿದಾರರಾದ ಪ್ರಸನ್ನ ಶೆಟ್ಟಿ (33), ತಂದೆ: ಕೃಷ್ಣ ಶೆಟ್ಟಿ, ವಾಸ: ದೇವಸ ಮನೆ, ಮಲ್ಲಾರ್, ಮಾಳ ಅಂಚೆ ಮತ್ತು ಗ್ರಾಮ, ಕಾರ್ಕಳ ತಾಲೂಕು, ಉಡುಪಿ ಜಿಲ್ಲೆ ಇವರ  ತಂದೆ ಕೃಷ್ಣ ಶೆಟ್ಟಿ (65) ಇವರು ತಮ್ಮ ಪತ್ನಿ, ಮಗ ಹಾಗೂ ಸೊಸೆಯ ಜೊತೆಯಲ್ಲಿ ವಾಸ್ತವ್ಯ ಇದ್ದವರು ತಮ್ಮ ವಯುಕ್ತಿಕ ಅಥವಾ ಇನ್ನಾವುದೋ ಕಾರಣದಿಂದ ನೊಂದು, ಜೀವನದಲ್ಲಿ ಜುಗುಪ್ಸೆಗೊಂಡು  ದಿನಾಂಕ 02/12/2022 ರಂದು ಸಂಜೆ  6:30 ಗಂಟೆಯಿಂದ 7:30 ಗಂಟೆಯ ಮಧ್ಯೆ ತಮ್ಮ ವಾಸ್ತವ್ಯದ ಪಕ್ಕದಲ್ಲಿರುವ ಹಳೆಯ ಮನೆಯಲ್ಲಿ ಯಾವುದೋ ವಿಷ ಪದಾರ್ಥ ಸೇವಿಸಿ ಅಸ್ವಸ್ಥಗೊಂಡವರನ್ನು ಪಿರ್ಯಾದಿದಾರರು ಚಿಕಿತ್ಸೆ ಬಗ್ಗೆ ಕಾರ್ಕಳದ ಸಿಟಿ ನರ್ಸಿಂಗ್ ಹೋಂಗೆ ಕರೆದುಕೊಂಡು ಬಂದು ಚಿಕಿತ್ಸೆ ಕೊಡಿಸಿ, ಅಲ್ಲಿಯ ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಣಿಪಾಲ ಕೆ.ಎಂ.ಸಿ. ಆಸ್ಪತ್ರೆಗೆ ಕರೆದುಕೊಂಡು ಹೋಗಿ, ಅಲ್ಲಿಯ ವೈದ್ಯರಲ್ಲಿ ತೋರಿಸಿದಾಗ ಕೆ.ಎಂ.ಸಿ. ಆಸ್ಪತ್ರೆಯ ವೈದ್ಯರು ಪಿರ್ಯಾದಿದಾರರ ತಂದೆಯವರನ್ನು ಪರೀಕ್ಷಿಸಿ ಅದಾಗಲೇ ಮೃತಪಟ್ಟಿರುವುದಾಗಿ ರಾತ್ರಿ 10:15 ಗಂಟೆಗೆ ತಿಳಿಸಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 39/2022 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ .

ಇತರ ಪ್ರಕರಣ

  • ಕುಂದಾಪುರ: ಪಿರ್ಯಾದಿದಾರರಾದ ಶ್ರೀಮತಿ ರಾಧಾಧಾಸ್ (64), ಗಂಡ: ದಿ ನಿರಂಜನ ದಾಸ್ , ವಾಸ: ಅಧ್ಯಕ್ಷರು ಶ್ರೀ ಮೂಕಾಂಬಿಕಾ ಮಹಿಳಾ ಮಂಡಲಗಳ ತಾಲೂಕು ಒಕ್ಕೂಟ(ರಿ) ಕುಂದಾಪುರ ತಾಲೂಕು, ಉಡುಪಿಜಿಲ್ಲೆ ಇವರು ಕಳೆದ 28 ವರ್ಷಗಳಿಂದ ಕುಂದಾಪುರ ಬಿಲ್ಲವ ಸಮಾಜ ಸೇವಾ ಸಂಘ (ರಿ). ಶ್ರೀ ನಾರಾಯಣ ಗುರು ಕಲ್ಯಾಣ ಮಂಟಪ ಕುಂದಾಪುರ ಇದರ ಸದಸ್ಯರಾಗಿರುತ್ತಾರೆ. ದಿನಾಂಕ 03/09/2022 ರಂದು ಕುಂದಾಪುರ ನಾರಾಯಣ ಗುರು ಕಲ್ಯಾಣ ಮಂಟಪದಲ್ಲಿ ಬಿಲ್ಲವ ಸಮಾಜ ಸೇವಾ ಸಂಘದ ಸಾಮಾನ್ಯ ಸಭೆ ಇದ್ದು ಸಭೆಯಲ್ಲಿ ಪಿರ್ಯಾದಿದಾರರು ಭಾಗವಹಿಸಿ ಸಭೆ ಮುಗಿಸಿ ಸಂಜೆ 06:00 ಗಂಟೆ ಸಮಯಕ್ಕೆ ಮನೆಗೆ ಹೋಗಲು ಹೊರಟಾಗ ಕಲ್ಯಾಣ ಮಂಟಪದ ಬಾಗಿಲಲ್ಲಿ ಸಂಘದ ಪದಾಧಿಕಾರಿಗಳಾದ ಅಶೋಕ ಪೂಜಾರಿ, ಗಣೇಶ ವಿಠಲವಾಡಿ, ಭಾಸ್ಕರ ವಿಠಲವಾಡಿ, ಯೋಗೀಶ ಕೋಡಿ ಪಿರ್ಯಾದಿದಾರರನ್ನು ಅಡ್ಡ ಗಟ್ಟಿ, ಅವಾಚ್ಯವಾಗಿ ಬೈದು ಜೀವ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನಂತೆ ಕುಂದಾಪುರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 129/2022 ಕಲಂ: 341,  504, 506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  
  • ಹೆಬ್ರಿ: ಪಿರ್ಯಾದಿದಾರರಾದ ನವೀನ್ ನಾಯ್ಕ್ (25),  ತಂದೆ: ದಿ.ಪಾಂಡುರಂಗ ನಾಯ್ಕ್, ವಾಸ; ಅನಿತಾ ನಿಲಯ, ಹಣೆಗೋಡು,  ಬೆಳಂಜೆ ಗ್ರಾಮ ಹೆಬ್ರಿ ತಾಲೂಕು ತಾಲೂಕು ಇವರು KA-52-A-1905 ನೇ ಎಕ್ಸ್ ಪ್ರೆಸ್ ಬಸ್ಸಿನಲ್ಲಿ ಚಾಲಕರಾಗಿದ್ದು. ದಿನಾಂಕ 01/12/2022 ರಂದು ಸಂಜೆಯ ಸಮಯ ಬಸ್ಸಿನಲ್ಲಿ ಪ್ರಯಾಣಿಕರನ್ನು ಕುಳ್ಳಿರಿಸಿಕೊಂಡು ಬ್ರಹ್ಮಾವರದಿಂದ ಹೆಬ್ರಿಗೆ ಬರುತ್ತಿದ್ದು. ಅವರು ರಾತ್ರಿ 7:05 ಗಂಟೆಗೆ ಕಳ್ತೂರು ಗ್ರಾಮದ ಹೈಸ್ಕೂಲ್ ಶಾಲೆಯ ಬಳಿ ತಲುಪಿದಾಗ  ಬಸ್ಸಿನ ಹಿಂದುಗಡೆಯಿಂದ ಆರೋಪಿತ ದಿನಕರ ಪೂಜಾರಿ  KA-19-M.-638 ನೇ ಮಾರುತಿ ಸುಜುಕಿ 800 ಕಾರನ್ನು ಚಲಾಯಿಸಿಕೊಂಡು ಬಂದು  ಬಸ್ಸನ್ನು ಓವರ್  ಟೇಕ್ ಮಾಡಿ ಕಾರನ್ನು  ಬಸ್ಸಿಗೆ ಅಡ್ಡ ಇಟ್ಟು ಕಾರಿನಿಂದ ಕಳಗೆ ಇಳಿದು ಚಾಲಕನ ಡೋರ್ ನ ಬಳಿ ಬಂದು ಆತನ ಕೈಯಲ್ಲಿದ್ದ ಚೂರಿಯನ್ನು ಪಿರ್ಯಾದಿದಾರರಿಗೆ ತೋರಿಸಿ ಅವಾಚ್ಯ ಶಬ್ದದಿಂದ ಬೈದು ಬಸ್ಸಿನಿಂದ ಕಳಗೆ ಇಳಿ ಎಂದು ಜೋರು ಮಾಡಿದಾಗ ಪಿರ್ಯಾದಿದಾರರು ಬಸ್ಸಿನಿಂದ ಕೆಳಗೆ ಇಳಿದರು ಅಗ ಆರೋಪಿತನು ಪಿರ್ಯಾದಿದಾರರಲ್ಲಿ  ನಿನಗೆ ಸೈಡ್ ಕೊಡಲು ಅಗುವುದಿಲ್ಲವೇ ಎಂದು ಹೇಳಿ ಅತನ ಕೈಯಲ್ಲಿದ್ದ ಚೂರಿಯನ್ನು ತೋರಿಸಿ ಇನ್ನು ಮುಂದೆ ಹೀಗೆಯೇ  ಮಾಡಿದರೆ ನಿನ್ನನ್ನು ಇದೇ ಚೂರಿಯಿಂದ ಕೊಂದು ಹಾಕುತ್ತೇನೆಂದು ಜೀವ ಬೆದರಿಕೆ ಹಾಕಿದ್ದು. ಅಗ ಅಲ್ಲಿಗೆ ಬಸ್ಸಿನ  ನಿರ್ವಾಹಕ ಹರೀಶ್ ಪೈ ಇವರು ಬಂದದ್ದನ್ನು ಆರೋಪಿತನು ನೋಡಿ ಕಾರನ್ನು ಚಲಾಯಿಸಿಕೊಂಡು ಹೆಬ್ರಿ ಕಡೆಗೆ ಹೋಗಿರುವುದಾಗಿ ನೀಡಿದ ದೂರಿನಂತೆ ಹೆಬ್ರಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 70/2022 ಕಲಂ: 341, 504, 506 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಇತ್ತೀಚಿನ ನವೀಕರಣ​ : 03-12-2022 09:40 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080