ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 • ಕೋಟ: ಪಿರ್ಯಾದಿ: ರಾಜೇಂದ್ರ ಪ್ರಾಯ 23 ವರ್ಷ ತಂದೆ: ಮಹಾಬಲ ಆಚಾರ್ಯ  ವಾಸ:ಅಂಕದಕಟ್ಟೆ, ಬಡಾಕೆರೆ, ಚಿಪ್ಪಿಬೆಟ್ಟು, ಕೋಟೇಶ್ವರ ಗ್ರಾಮ ಇವರು ದಿನಾಂಕ 01/12/2022 ರಂದು ಬೆಳಿಗ್ಗೆ 08:30 ಗಂಟೆಗೆ ತನ್ನ  KA20EA2286 ಡಿಸ್ಕವರಿ ಬೈಕ್ ನಲ್ಲಿ  ಹೆರಿಕುದ್ರುವಿನ ಗಣೇಶ ಎಂಬುವರನ್ನು ಸಹಸವಾರನಾಗಿ ಕುಳ್ಳಿರಿಸಿಕೊಂಡು ವಕ್ವಾಡಿಯಲ್ಲಿ ಸೇಂಟ್ರಿಂಗ್ ಕೆಲಸ ಮುಗಿಸಿ ನಂತರ ಬ್ರಹ್ಮಾವರದ ಸೈಟಿಗೆ ಕೆಲಸ ಮಾಡಲು ಹೋಗುವಾಗ ಸುಮಾರು ಬೆಳಿಗ್ಗೆ 11:45 ಗಂಟೆಗೆ ರಾ.ಹೆ 66 ರ ಕೋಟ ಮೂರುಕೈ ಯಲ್ಲಿ ಕುಂದಾಪುರ ಉಡುಪಿ ಏಕಮುಖ ಸಂಚಾರ ರಸ್ತೆಯಲ್ಲಿ ಎದುರಿನಿಂದ KA20C8313  ಮ್ಯಾಕ್ಸೀಮಾ ಗೂಡ್ಸ್ ವಾಹನವನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಸಿಕೊಂಡು ಬಂದು ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ, ಪಿರ್ಯಾದಿದಾರರು ಮತ್ತು ಸಹಸವಾರ ರಸ್ತೆಗೆ ಬಿದ್ದರು. ಗೂಡ್ಸ್ ಚಾಲಕ ಮತ್ತು ಸ್ಥಳೀಯರು  ಉಪಚರಿಸಿ ಎನ್.ಆರ್ ಆಚಾರ್ಯ ಆಸ್ಪತ್ರೆಗೆ ಒಳರೋಗಿಯಾಗಿ ದಾಖಲಿಸಿರುತ್ತಾರೆ. ಪಿರ್ಯಾದಿದಾರರ ಎಡಗೈಯ ಮಣಿಗಂಟಿಗೆ, ಎಡಕಾಲಿನ ಗಂಟಿಗೆ ಮೂಳೆ ಮುರಿತ ಹಾಗೂ ಬಲಕಾಲಿನಲ್ಲಿ ಎಡಸೊಂಟದಲ್ಲಿ ತರಚಿದ ಗಾಯ, ಗಣೇಶರಿಗೆ  ಎಡ ಮುಂಗೈ, ಬೆರಳು,  ಎಡ ಮುಂಗಾಲಿಗೆ  ತರಚಿದ ಗಾಯವಾಗಿರುತ್ತದೆ.  ಗೂಡ್ಸ್ ವಾಹನದಲ್ಲಿದ್ದ  ರೋಹಿಣಿಗೆ ತರಚಿದ ಗಾಯವಾಗಿರುತ್ತದೆ. ಈ ಬಗ್ಗೆ ಕೋಟ ಠಾಣಾ ಅಪರಾಧ ಕ್ರಮಾಂಕ 215/2022 ಕಲಂ: 279.337, 338 IPC  ಯಂತೆ ಪ್ರಕರಣ ದಾಖಲಿಸಲಾಗಿದೆ.
 • ಕುಂದಾಪುರ: ದಿನಾಂಕ 02/12/2022 ರಂದು  ರಾತ್ರಿ ಸುಮಾರು 8:20 ಗಂಟೆಗೆ, ಕುಂದಾಪುರ  ತಾಲೂಕಿನ,  ಕಾವ್ರಾಡಿ ಗ್ರಾಮದ ಮುಳ್ಳುಗುಡ್ಡೆಯ  ತಿರುವಿನ ರಾಜ್ಯ ರಸ್ತೆಯಲ್ಲಿ, ಆಪಾದಿತ ರವಿ ಎಂಬವರು KA09-D-4555ನೇ ಲಾರಿಯನ್ನು ಕುಂದಾಪುರ ಕಡೆಯಿಂದ ಅಂಪಾರು ಕಡೆಗೆ ಅತೀವೇಗವಾಗಿ ಚಲಾಯಿಸಿಕೊಂಡು ಬಂದು, ತಿರುವು ಹಾಗೂ ಇಳಿಜಾರಿನ ರಸ್ತೆಯಲ್ಲಿ ಆಪಾದಿತ  ನಿರ್ಲಕ್ಷ್ಯತನದಿಂದ  ಚಲಾಯಿಸಿದ ಪರಿಣಾಮ ಲಾರಿ ಚಾಲಕನ ನಿಯಂತ್ರಣ ತಪ್ಪಿ  ಅಡ್ಡ ಮಗ್ಗುಲಾಗಿ ರಸ್ತೆಯಲ್ಲಿ  ಬಿದ್ದು ಜಾರಿಕೊಂಡು  ಹೋಗಿ, ಪಿರ್ಯಾದಿ ಕೆ. ವಿಲ್ಸನ್‌‌ಪ್ರಾಯ  64  ವರ್ಷ   ತಂದೆ ದಿ. ಕುಂಜಿಕುಟ್ಟಿ  ವಾಸ:   ಮುತ್ತು ಮಹಲ್‌‌‌, ವಡೇರಹೋಬಳಿ ಗ್ರಾಮ  ಇವರು   ಅಂಪಾರು ಕಡೆಯಿಂದ ಕುಂದಾಪುರ ಕಡೆಗೆ KA20-Z-4314ನೇ ಮಹೀಂದ್ರ ಬೊಲೆರೋ ವಾಹನವನ್ನು ಚಲಾಯಿಸಿಕೊಂಡು ಬಂದು ಲಾರಿ ಬೀಳುವುದನ್ನು ಕಂಡು ರಸ್ತೆಯ ಎಡಬದಿಯಲ್ಲಿ ನಿಲ್ಲಿಸಿಕೊಂಡಿದ್ದ ಅವರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ   ಕೆ. ವಿಲ್ಸನ್‌ಹಾಗೂ ರವಿ ರವರು ಸಣ್ಣಪುಟ್ಟ   ಗಾಯಗೊಂಡು  ಕುಂದಾಪುರ ಚಿನ್ಮಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿರುತ್ತಾರೆ ಹಾಗೂ ಈ ಅಪಘಾತದಿಂದ ವಾಹನಗಳು ಜಖಂಗೊಂಡಿರುತ್ತದೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್ ಠಾಣೆ, ಅಪರಾಧ ಕ್ರಮಾಂಕ 127/2022   ಕಲಂ 279, 337   IPC    ಯಂತೆ ಪ್ರಕರಣ ದಾಖಲಿಸಲಾಗಿದೆ.
 • ಹಿರಿಯಡ್ಕ: ಪಿರ್ಯಾದಿ : ಕೆ.ವಿ.ಮಹೇಶ್ (38) ತಂದೆ: ವೀರಪ್ಪ ವಾಸ:  ಕೆಂಚಪ್ಲರ್ ವೀರಪ್ಪಮನೆ, ಚೌಡಮ್ಮ ದೇವಸ್ಥಾನದ ಬಳಿ, ಅವರುಗೊಳ್ಳ ಗ್ರಾಮ ಇವರು ದಿನಾಂಕ: 29/11/2022tರಂದು   ತನ್ನ ಮಾವ  ಮತ್ತಿಹಳ್ಳಿ ಸಿದ್ದಪ್ಪ ರವರನ್ನು ಹೆಚ್ಚಿನ  ಚಿಕಿತ್ಸೆಯ ಬಗ್ಗೆ ಮಂಗಳೂರಿನ ಶ್ರೀನಿವಾಸ ಆಸ್ಪತ್ರೆಗೆ ಕರೆದುಕೊಂಡು KA-02-AF-1477  ನೇ ಕಾರಿನಲ್ಲಿ ಕಾರು ಚಾಲಕ ಸಿದ್ದರಾಮೇಶ್ವರ, ಮತ್ತು ಸಂಬಂದಿಕರೊಂದಿಗೆ ದಾವಣಗೆರೆಯಿಂದ ಮಂಗಳೂರಿಗೆ ಹೊರಟಿದ್ದು, ಮರುದಿನ  ದಿನಾಂಕ: 30/12/2022 ರಂದು ಬೆಳಗ್ಗಿನ ಜಾವ 1:00 ಗಂಟೆಯ ಸಮಯಕ್ಕೆ ಉಡುಪಿಯ ಪೆರ್ಡೂರು ಗ್ರಾಮದ ಪಾಡಿಗಾರ ತಲುಪ್ಪುವಾಗ್ಗೆ ಕಾರಿನ ಚಾಲಕತನ್ನ ಕಾರನ್ನು ಅತೀವೇಗ ಹಾಗೂ ನಿರ್ಲಕ್ಷ್ಯತನದಿಂದ  ರಸ್ತೆಯ ತೀರಾ ಬಲಬದಿಗೆ ಚಲಾಯಿಸಿ ಕಲ್ಲೊಂದಕ್ಕೆ ಡಿಕ್ಕಿ ಹೊಡೆದನು, ಪರಿಣಾಮ ಬಲಬದಿಯ ಚಕ್ರ ಸ್ಪೋಟಗೊಂಡಿದ್ದುಬಂಪರ್ ಜಖಂಗೊಡಿರುತ್ತದೆ .ಅಲ್ಲದೆ ಸಂಬಂದಿಕರಾದ ಅಕ್ಕ ಶಾಂತಮ್ಮ ರವರ ಕಾಲು ಜಖಂಗೊಂಡಿರುತ್ತದೆ., ಮತ್ತಿಹಳ್ಳಿ ಸಿದ್ದಪ್ಪರವ ಬಲಕಾಲಿ ತೊಡೆಯಬಳಿ ಜಖಂಗೊಂಡಿರುತ್ತದೆ . ಸಿದ್ದೇಶ್  ಎಂಬವರಿಗೆ ಬಲಕಾಲಿನ ಮೊಣಗಂಡು  ಬಲಕೈ ಭುಜದ ಬಳಿ ನೋವುಂಟಾಗಿರುತ್ತದೆ .  ಈ ಬಗ್ಗೆ ಹಿರಿಯಡ್ಕ ಪೊಲೀಸ್‌ಠಾಣೆ. ಅಪರಾಧ ಕ್ರಮಾಂಕ  82/2022 ಕಲಂ : 279, 337 IPC ಯಂತೆ ಪ್ರಕರಣ ದಾಕಲಿಸಲಾಗಿದೆ.

ಅಸ್ವಾಭಾವಿಕ ಮರಣ ಪ್ರಕರಣ

 • ಕಾರ್ಕಳ: ಪಿರ್ಯಾಧಿ ಪವನ್‌ ಪ್ರಾಯ 29 ವರ್ಷ ತಂದೆ: ಶಂಕರ ವಾಸ: ಕೀರ್ತನಾ ನಿವಾಸ, ಚೇತನಹಳ್ಳಿ, ಅತ್ತೂರು ಪೊಸ್ಟ್  ನಿಟ್ಟೆ ಗ್ರಾಮ ಇವರ ತಂಗಿ ಕೀರ್ತನಾ ಪ್ರಾಯ 20 ವರ್ಷ ರವರು ಕಾರ್ಕಳ ಕಾಬೆಟ್ಟು ಮಂಜುನಾಥ ಪೈ ಮೆಮೊರಿಯಾಲ್‌ ಕಾಲೇಜಿನಲ್ಲಿ ತೃತೀಯ ವರ್ಷದ ಬಿ.ಎ ವಿಧ್ಯಾಬ್ಯಾಸ ಮಾಡಿಕೊಂಡಿದ್ದು. ಆಕೆಯು ದಿನದ ಹೆಚ್ಚಿನ ಸಮಯದಲ್ಲಿ ಮೊಬೈ ಲ್‌ ನಲ್ಲಿ ಇರುವುದರಿಂದ ಪಿರ್ಯಾಧಿದಾರರ ಅಣ್ಣ ಶಶಿಕಿರಣ್‌ ಆಗಾಗ ಅವಳಿಗೆ ಮೊಬೈಲ್‌ ಹೆಚ್ಚು ಉಪಯೋಗಿಸದಂತೆ ಬುದ್ದಿ ಹೇಳುತ್ತಿದ್ದು, ದಿನಾಂಕ 02/12/22 ರಂದು ರಾತ್ರಿ 8:00 ಗಂಟೆಗೆ ಕೀತನಾ ಮೊಬೈಲ್‌ ನೋಡುತ್ತಿದ್ದು, ಈ ಬಗ್ಗೆ ಶಶಿಕಿರಣ್‌   ನೀನು ಓದುವುದನ್ನು ಬಿಟ್ಟು ಇದೇ ರೀತಿ ಮೊಬೈಲ್‌ ನೋಡುವುದಾದರೆ ನಾಳೆಯಿಂದ ಕಾಲೇಜಿಗೆ ಹೋಗುವುದು ಬೇಡ ಎಂದು ತಿಳಿಸಿ ಕೆಲಸಕ್ಕೆ ಹೋಗಿದ್ದು, ಇಧೇ ವಿಚಾರದಲ್ಲಿ ದುಡುಕಿ ಕೀತನಾ ದಿನಾಂಕ 03/12/22 ರಂದು ಬೆಳಿಗ್ಗೆ 5:00 ಗಂಟೆಯಿಂದ 7:00 ಗಂಟೆಯ ಮಧ್ಯಾವಧಿಯಲ್ಲಿ ಮನೆಯ ಅಂಗಳದ ಎದುರುಗಡೆ ಇರುವ ಪೇರಳೆ ಮರಕ್ಕೆ ಸೀರೆಯಿಂದ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣಾ  ಯು,ಡಿ,ಆರ್ ನಂಬ್ರ: 40/2022 ಕಲಂ: 174 ಸಿ,ಆರ್,ಪಿ,ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.

ಇತರ ಪ್ರಕರಣ 

 • ಉಡುಪಿ : ಪಿರ್ಯಾದಿ ಪ್ರಸಾದ್‌ ಪ್ರಾಯ:34 ವರ್ಷ ತಂದೆ: ಹೆರಿಯಾ ಮರಕಾಲ ವಾಸ: ಕೊಂಡಾಡಿ ಭಜನೆ ಕಟ್ಟೆ, ಬೊಮ್ಮರಬೆಟ್ಟು ಗ್ರಾಮ ಇವರು ದಿನಾಂಕ 03/12/2022 ರಂದು ಬೆಳಿಗ್ಗೆ 10:30 ಗಂಟೆಗೆ ಉಡುಪಿ ತಾಲೂಕು ಪುತ್ತೂರು ಗ್ರಾಮದ ಅಂಬಾಗಿಲು ಗೋಪಾಲಪುರದ ಆರೋಪಿತ ನವೀನ್‌ ಕುಮಾರ್‌ ಅಂಬಾಗಿಲು ಗೋಪಾಲಪುರ ಇವರ ಮನೆಗೆ SCDCC ಬ್ಯಾಂಕ್‌ ನ ಸಿಬ್ಬಂಧಿಗಳೊಂದಿಗೆ ಸಾಲ ವಸೂಲಾತಿ ಬಗ್ಗೆ ಮಾತನಾಡಲು ಹೋಗಿದ್ದು, ಆರೋಪಿಯು ಏಕಾಏಕಿ ಪಿರ್ಯಾದುದಾರರನ್ನು ಉದ್ದೇಶಿಸಿ, ನಾನು ಹಣ ಕಟ್ಟುವುದಿಲ್ಲ,ನನಗೆ ಸಂಬಂಧವಿಲ್ಲ, ಮನೆಗೆ ಯಾಕೆ ಬಂದಿದ್ದು‘ಎಂದು ಅವಾಚ್ಯ ಶಬ್ದಗಳಿಂದ ಬೈದು, ಪಿರ್ಯಾದುದಾರರ ಎಡಕೆನ್ನೆಗೆ ಹೊಡೆದಿದ್ದಲ್ಲದೇ ಅಲ್ಲಿಯೇ ಇದ್ದ ಮರದ ರೀಪಿನಿಂದ ತಲೆಗೆ ಹೊಡೆಯಲು ಯತ್ನಿಸಿ ಕೊಲೆ ಮಾಡಲು ಪ್ರಯತ್ನಿಸಿದ್ದು, ಆ ಸಮಯ ಪಿರ್ಯಾದುದಾರರು ತಪ್ಪಿಸಿಕೊಂಡಿದ್ದು ಆರೋಪಿತನು ಅಲ್ಲಿದ್ದವರನ್ನು ಉದ್ದೇಶಿಸಿ ನಿಮ್ಮನ್ನು ಜೀವ ಸಹಿತ ಬಿಡುವುದಿಲ್ಲ ಎಂಬುದಾಗಿ ಜೀವ ಬೆದರಿಕೆ ಹಾಕಿದ್ದಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 177/2022 ಕಲಂ: 323, 504, 506, 307 IPC ಯಂತೆ ಪ್ರಕರಣ ದಾಕಲಿಸಲಾಗಿದೆ.

   

ಇತ್ತೀಚಿನ ನವೀಕರಣ​ : 03-12-2022 06:41 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080