ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 • ಪಡುಬಿದ್ರಿ: ದಿನಾಂಕ: 02.12.2021 ರಂದು ರಾತ್ರಿ ಪಿರ್ಯಾದಿ ಸಂತೋಷ್ ಆಚಾರ್ಯ ಇವರ ತಮ್ಮ ಹರೀಶ್ ಆಚಾರ್ಯ(32) ಎಂಬುವರು ಅವರ ಸ್ನೇಹಿತ ರಾಜೇಶ್ ಎಂಬುವರೊಂದಿಗೆ ಅವರ ಬಾಬ್ತು KA-19-EG-7277 ನೇ ನಂಬ್ರದ ಮೋಟಾರ್ ಸೈಕಲ್ಲಿನಲ್ಲಿ ಉಚ್ಚಿಲಕ್ಕೆ ಹೋಗಿ ಬರುವುದಾಗಿ ತಿಳಿಸಿ ಮನೆಯಿಂದ ಹೋಗಿದ್ದು, ಸಮಯ ಸುಮಾರು 22:30 ಗಂಟೆಯ ವೇಳೆಗೆ ಕಾಪು ತಾಲೂಕು ಬಡಾ ಗ್ರಾಮ ಉಚ್ಚಿಲದ ಅರಾಫಾ ಹೋಟೆಲ್ ಬಳಿ ತಲುಪುತ್ತಿದ್ದಂತೆ, ರಾಷ್ಟ್ರೀಯ ಹೆದ್ದಾರಿ-66 ರ ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಸಾಗುವ ಏಕಮುಖ ಸಂಚಾರ ರಸ್ತೆಯಲ್ಲಿ  KA-30-A-1178 ನೇ ನಂಬ್ರದ ಲಾರಿ ಚಾಲಕ ಮೆಹಬೂಬ್ ಇಮಾಮ್ ಸಾಬ್ ಎಂಬಾತನು ರಸ್ತೆಯ ಬದಿ ನಿಲ್ಲಿಸಿದ್ದ ತನ್ನ ಬಾಬ್ತು ಲಾರಿಯನ್ನು ಯಾವುದೇ ಸೂಚನೆ ನೀಡದೇ ಅಜಾರೂಕತೆಯಿಂದ ಒಮ್ಮೆಲೇ ರಾಷ್ಟ್ರೀಯ ಹೆದ್ದಾರಿಗೆ  ಚಲಾಯಿಸಿದ ಪರಿಣಾಮ, ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಬರುತ್ತಿದ್ದ KA-19-EG-7277 ನೇ ನಂಬ್ರದ ಮೋಟಾರ್ ಸೈಕಲ್ ಲಾರಿಯ ಹಿಂಬದಿಯ ಬಲಭಾಗಕ್ಕೆ ಡಿಕ್ಕಿ ಹೊಡೆದು ಅದರ ಸವಾರ ಹರೀಶ್ ಆಚಾರ್ಯ ಮತ್ತು  ಸಹ ಸವಾರ ರಾಜೇಶ್ ರವರು ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದಿದ್ದು, ಇಬ್ಬರಿಗೂ ತಲೆಗೆ, ಹಣೆಗೆ ಮತ್ತು ಕೈಗಳಿಗೆ ತೀವ್ರ ತರಹದ ಗಾಯಗಳಾಗಿರುತ್ತದೆ. ನಂತರ ಗಾಯಾಳುಗಳನ್ನು ಚಿಕಿತ್ಸೆಯ ಬಗ್ಗೆ ಒಂದು ಅಂಬುಲೆನ್ಸ್ ನಲ್ಲಿ ಉಡುಪಿಯ ಆದರ್ಶ ಆಸ್ಪತ್ರೆಗೆ  ಕರೆದುಕೊಂಡು ಹೋದಾಗ, ಅಲ್ಲಿನ ವೈದ್ಯಾಧಿಕಾರಿಯವರು ಪರೀಕ್ಷಿಸಿ ಹರೀಶ್ ಆಚಾರ್ಯ ರವರು  ಮೃತಪಟ್ಟಿರುವುದಾಗಿ ತಿಳಿಸಿದ್ದು, ರಾಜೇಶ್ ರವರನ್ನು ಒಳ ರೋಗಿಯಾಗಿ ದಾಖಲಿಸಿಕೊಂಡಿರುತ್ತಾರೆ. ಸದ್ರಿ ಅಪಘಾತದಿಂದ ಮೋಟಾರ್ ಸೈಕಲ್ ಮುಂಭಾಗ ಸಂಪೂರ್ಣ ಜಖಂಗೊಂಡಿದ್ದು, ಲಾರಿಯ ಹಿಂಬದಿಯ ಬಲಭಾಗ ಸಹ ಜಖಂಗೊಂಡಿರುತ್ತದೆ. ಈ  ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 114/2021 ಕಲಂ 279, 338,  304(A) ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಹಿರಿಯಡ್ಕ: ಪಿರ್ಯಾದಿ ಬೋಜ ಡಿ ಸಾಲಿಯಾನ್ ಇವರು ದಿನಾಂಕ 02/12/2021ರಂದು ಅಪರಾಹ್ನ ಹಿರಿಯಡ್ಕ ಶ್ರೀ ವೀರಭದ್ರ ದೇವಸ್ಥಾನದಿಂದ ತನ್ನ ಬಾಬ್ತು  ಕೆಎ 20 ಕೆ 3605 ನೇ  ಎಂ 80 ದ್ವಿ ಚಕ್ರ ವಾಹನವನ್ನು ಸವಾರಿ ಮಾಡಿಕೊಂಡು ಮನೆಯಾದ ಗುಡ್ಡೆಯಂಗಡಿ ಕಡೆಗೆ  ಹೋಗುತ್ತಾ ಅಪರಾಹ್ನ 1:10 ಗಂಟೆಗೆ ಹಿರಿಯಡ್ಕ ಶ್ರೀ ರಾಮಮಂದಿರದ ಬಳಿ ಗುಡ್ಡೆಯಂಗಡಿ ಕಡೆಗೆ ವಾಹವನ್ನು ತಿರುಗಿಸುವರೇ ರಸ್ತೆಯ ಅಂಚಿನಲ್ಲಿ ತನ್ನ ವಾಹನವನ್ನು ನಿಲ್ಲಿಸಿರುವಾಗ ಕೋಟ್ನಾಕಟ್ಟೆ ಕಡೆಯಿಂದ ಕೆಎ 21 ಹೆಚ್‌ 3434  ನೇ ಮೋಟಾರು ಸೈಕಲ್‌ನ್ನು ಅದರ ಸವಾರ ರಾಮಕೃಷ್ಣ ಭಟ್ ಎಂಬವರು ಅತೀವೇಗ ಹಾಗೂ ನಿರ್ಲಕ್ಷತನದಿಂದ ಸವಾರಿಮಾಡಿಕೊಂಡು ರಸ್ತೆಯ ತೀರಾ ಎಡಬದಿಗೆ ಬಂದು ಪಿರ್ಯಾದಿದಾರರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ವಾಹನ ಸಮೇತ ಬಿದ್ದ ಪರಿಣಾಮ ಪಿರ್ಯಾದಿದಾರರಿಗೆ ತೀವೃ ತರದ ರಕ್ತ ಗಾಯವಾಗಿರುತ್ತದೆ. ಈ  ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 63/2021 ಕಲಂ: 279 , 338   ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 ಅಸ್ವಾಭಾವಿಕ ಮರಣ ಪ್ರಕರಣ

 • ಬ್ರಹ್ಮಾವರ  : ಬ್ರಹ್ಮಾವರ  ತಾಲೂಕು ಬೈಕಾಡಿ ಗ್ರಾಮದ ರಾಮ ಭಜನ ಮಂದಿರದ ಹತ್ತಿರ ಮನೆ ನಂ 1-267(ಇ 13) ರಲ್ಲಿ  ವಾಸವಾಗಿರುವ ಪಿರ್ಯಾದಿ ಚರಣ್‌ ಕೆ.ಆರ್‌ ಇವರ ತಮ್ಮನಾದ ವಿನಯ್‌ ಕೆ. ಆರ್‌ (32 ವರ್ಷ) ಎಂಬವರು ದಿನಾಂಕ 02/12/2021 ರಂದು ಸಂಜೆ 5:00 ಗಂಟೆಗೆ ಕೆಲಸ ಮುಗಿಸಿ ಮನೆಗೆ ಬಂದು ವಿಶ್ರಾಂತಿ ಪಡೆಯಲೆಂದು ಮಲಗುವ ಕೋಣೆಗೆ ಹೋದವರನ್ನು  ರಾತ್ರಿ 8:30 ಗಂಟೆಗೆ ಅವರ ಪತ್ನಿ ಊಟಕ್ಕೆ ಕರೆಯಲು ಹೋದಾಗ ಕೋಣೆಯ ಬಾಗಿಲು ಒಳಗಿನಿಂದ ಚಿಲಕ ಹಾಕಿಕೊಂಡಿದ್ದು, ಅವರನ್ನು ಎಷ್ಟೇ ಕರೆದರು ಬಾಗಿಲು ತೆರೆಯದಿದ್ದಾಗ ಇತರರ ಸಹಾಯದಿಂದ ಬಾಗಿಲು ಒಡೆದು ನೋಡಿದಾಗ ವಿನಯ್‌ ಕೆ.ಆರ್‌ ರವರು ಕೋಣೆಯಲ್ಲಿ ನೇಣು ಬಿಗಿದುಕೊಂಡು ನೇತಾಡುವ ಸ್ಥಿತಿಯಲ್ಲಿದ್ದು, ಕೂಡಲೇ ಅವರನ್ನು ನೇಣಿನಿಂದ ಕೆಳಗೆ ಇಳಿಸಿ ಚಿಕಿತ್ಸೆ ಬಗ್ಗೆ ಒಂದು ವಾಹನದಲ್ಲಿ ಬ್ರಹ್ಮಾವರ ಮಹೇಶ್ ಆಸ್ಪತ್ರೆಗೆ ಕರೆದುಕೊಂಡು  ಹೋದಾಗ, ವೈಧ್ಯರು ವಿನಯ್‌ ಕೆ.ಆರ್‌ ರವರನ್ನು ಪರೀಕ್ಷಿಸಿ ಈಗಾಗಲೇ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 71/2021 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಮಣಿಪಾಲ: ಪಿರ್ಯಾದಿ ಹನಮವ್ವ ಇವರ ತಮ್ಮನಾದ ಮಂಜುನಾಥ ಎಂಬುವರು ಸಂಸಾರಿಕ ಸಮ್ಯಸೆಯಿಂದ ಅಥವಾ ಇತರೆ ಯಾವುದೋ ಹೇಳಿಕೊಳ್ಳಲಾಗದ ಕಾರಣದಿಂದ ಮನನೊಂದು ಜೀವನದಲ್ಲಿ ಜಿಗುಪ್ಸೆ ಗೊಂಡು ದಿನಾಂಕ: 03/12/2021 ರಂದು ಬೆಳಿಗ್ಗೆ  ಸುಮಾರು 08:30 ಗಂಟೆಯಿಂದ 11:00 ಗಂಟೆ ಮಧ್ಯಾವಧಿಯಲ್ಲಿ ತಾನು ವಾಸವಿದ್ದ ದುರ್ಗಾನಗರ, ಪಡು ಅಲೆವೂರು ಮನೆಯಲ್ಲಿ ನೇಣು ಬೀಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾನೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 41/2021 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಕಾರ್ಕಳ: ಫಿರ್ಯಾದಿ ರಾಜೇಶ್ ನೆಲ್ಸನ್  ಇವರ ಅಣ್ಣ ದಿ. ವಿನ್ಸೆಂಟ್ ಡಿಸೋಜಾರವರಿಗೆ ಸೇರಿದ ಕಾರ್ಕಳ ತಾಲೂಕು ಮಿಯಾರು ಗ್ರಾಮದ ನೆಲ್ಲಿಗುಡ್ಡೆ  ಮೊರಾರ್ಜಿ ದೇಸಾಯಿ ಶಾಲೆ ಬಳಿಯ 5 ಸೆಂಟ್ಸ್ ಕಾಲೋನಿ ಎದುರಿನ ಕಾರ್ಮಿಕರ ಶೆಡ್ ನಲ್ಲಿ ಈಗ್ಗೆ 5 ವರ್ಷಗಳಿಂದ ವಿನ್ಸೆಂಟ್ ಡಿಸೋಜಾರವರ ಪರಿಚಯದ ಕೇರಳ ಮೂಲದ ಪೌಲ್ (85) ರವರು ವಾಸವಿದ್ದು, ಪೌಲ್ ನ ಪರಿಚಯದ ಕೇರಳ ಮೂಲದ ಜೋನಿ (64) ಎಂಬವರು 15 ದಿನಗಳಿಂದ ವಾಸವಿದ್ದರು, ದಿನಾಂಕ: 03-12-2021 ರಂದು ಬೆಳಿಗ್ಗೆ 08:00 ಗಂಟೆ ಸುಮಾರಿಗೆ ಪೌಲ್ ರವರು ಫಿರ್ಯಾದುದಾರರ ಮನೆಗೆ ಹೋಗಿ ತನ್ನ ಪಕ್ಕದ ಶೆಡ್ ನಲ್ಲಿ ವಾಸವಿದ್ದ ಜಾನಿ ಮಲಗಿದ್ದಲ್ಲಿಯೇ ಮೃತಪಟ್ಟ ಸ್ಥಿತಿಯಲ್ಲಿರುವುದಾಗಿ ತಿಳಿಸಿದಂತೆ ಹೋಗಿ ನೋಡಿದಾಗ ಮಲಗಿದ್ದಲ್ಲೆ ಮೃತಪಟ್ಟ ಸ್ಥಿತಿಯಲ್ಲಿದ್ದು ಬಾಯಿಯಿಂದ ರಕ್ತಸ್ರಾವವಾಗಿರುವುದು ಕಂಡು ಬರುತ್ತದೆ. ಮೈಯೆಲ್ಲಾ ಕಜ್ಜಿಯಿದ್ದು ಚರ್ಮರೋಗವಿದ್ದಂತೆ ಕಂಡುಬಂದಿರುತ್ತದೆ. ಅವರ ಸಂಬಂದಿಕರು ಮತ್ತು ವಾರಸುದಾರರ ಬಗ್ಗೆ ತಿಳಿದುಬಂದಿರುವುದಿಲ್ಲ. ಮೃತ ಜೋನಿರವರು ಚರ್ಮಖಾಯಿಲೆಯಿಂದ ಅಥವಾ ಇನ್ಯಾವುದೋ ಖಾಯಿಲೆಯಿಂದ ಬಳಲುತ್ತಿದ್ದವರು ದಿನಾಂಕ: 02-12-2021 ರಂದು ರಾತ್ರಿ 08-00 ಗಂಟೆಯಿಂದ ಈ ದಿನ ಬೆಳಿಗ್ಗೆ 08-00 ಗಂಟೆಯ ಮದ್ಯಾವಧಿಯಲ್ಲಿ ಶೆಡ್ ನಲ್ಲಿ   ಮಲಗಿದಲ್ಲಿಯೇ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 44/2021 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   

ಇತ್ತೀಚಿನ ನವೀಕರಣ​ : 03-12-2021 05:42 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080