ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕಾರ್ಕಳ: ಪಿರ್ಯಾದಿದಾರರಾದ ವಿಶ್ವನಾಥ (18), ತಂದೆ: ಸಂಪತ್, ವಾಸ: ಶ್ರೀ ಮಂಜುನಾಥ ನಿಲಯ, ಅತ್ತೂರು, ಗುಂಡ್ಯಡ್ಕ, ನಿಟ್ಟೆ ಗ್ರಾಮ, ಕಾರ್ಕಳ ತಾಲೂಕು ಇವರು ದಿನಾಂಕ 02/11/2022 ರಂದು ಮದ್ಯಾಹ್ನ ತನ್ನ ಮೋಟಾರ್ ಸೈಕಲ್‌ನಲ್ಲಿ  ಕಾರ್ಕಳ ಕಸಬಾ ಗ್ರಾಮದ ಆನೆಕೆರೆ ಕಡೆಯಿಂದ ನಕ್ರೆ ಜಂಕ್ಷನ್‌‌ ಕಡೆಗೆ  ಹಾದು ಹೋಗಿರುವ ರಸ್ತೆಯಲ್ಲಿ ಸವಾರಿ  ಮಾಡಿಕೊಂಡು ಬರುತ್ತಾ ಮದ್ಯಾಹ್ನ 2:05 ಗಂಟೆಗೆ  ಕಾರ್ಕಳ ಕಸಬಾ ಗ್ರಾಮದ ಕೃಷ್ಣಗಿರಿ ಕ್ರಾಸ್ ರಸ್ತೆ ಸಮೀಪ ತಲುಪಿದಾಗ ಎದುರುಗಡೆಯಿಂದ ಪಿರ್ಯಾದಿದಾರರ ಮಾವ ಸುಬ್ರಹ್ಮಣ್ಯ (46) ರವರು ತನ್ನ ದ್ವಿಚಕ್ರ ವಾಹನ ನಂಬ್ರ KA-20- EN-9936 ನೇದನ್ನು ಹೆಲ್ಮೆಟ್ ಧರಿಸದೇ ನಕ್ರೆ ಜಂಕ್ಷನ್‌ ಕಡೆಗೆ ಅತೀವೇಗ ಹಾಗೂ ನಿರ್ಲಕ್ಷತನದಿಂದ  ಸವಾರಿ ಮಾಡಿಕೊಂಡು ಬಂದು ನಿಯಂತ್ರಣ ಸಿಗದೇ ರಸ್ತೆಯ ಎಡಬದಿಯಲ್ಲಿರುವ ಚರಂಡಿಗೆ ಬಿದ್ದ ಪರಿಣಾಮ ಸುಬ್ರಹ್ಮಣ್ಣ ರವರಿಗೆ ಹಣೆಗೆ, ಮೂಗಿಗೆ, ಬಾಯಿಗೆ ತೀವ್ರ ಸ್ವರೂಪದ ಗಾಯವುಂಟಾಗಿ ಚಿಕಿತ್ಸೆಯ ಬಗ್ಗೆ ಕಾರ್ಕಳ ಟಿ.ಎಂ.ಎ ಪೈ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ನಂತರ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಣಿಪಾಲ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿನ ವೈದ್ಯರು ಪರೀಕ್ಷಿಸಿ ಸುಬ್ರಹ್ಮಣ್ಯರವರು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 138/2022 ಕಲಂ:  279, 304(A) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ .
  • ಕುಂದಾಪುರ: ದಿನಾಂಕ 02/11/2022 ರಂದು  ಬೆಳಿಗ್ಗೆ  08:45 ಗಂಟೆಗೆ,  ಕುಂದಾಪುರ  ತಾಲೂಕಿನ, ಉಪ್ಪಿನಕುದ್ರು  ಗ್ರಾಮದ  ತೆಂಕಿತ್ಲು ಕ್ರಾಸ್ ಬಳಿ   ರಸ್ತೆಯಲ್ಲಿ ಆಪಾದಿತ ಉಮೇಶ್ KA-20-C-5446 ನೇ ಆಟೋರಿಕ್ಷಾ ದಲ್ಲಿ ಪಿರ್ಯಾದಿದಾರರನ್ನು ಪ್ರಯಾಣಿಕರಾಗಿ ಕುಳ್ಳಿರಿಸಿಕೊಂಡು ಅತೀವೇಗ ಹಾಗೂ ನಿರ್ಲಕ್ಷತನದಿಂದ   ಚಾಲನೆ ಮಾಡಿ ತಲ್ಲೂರು- ಉಪ್ಪಿನಕುದ್ರು ರಸ್ತೆಯನ್ನು ಕ್ರಾಸ್ ಮಾಡುವಾಗ, ತಲ್ಲೂರು  ಕಡೆಯಿಂದ  ಉಪ್ಪಿನಕುದ್ರು ಕಡೆಗೆ ಹೋಗುತ್ತಿದ್ದ KA-14-A-6790 ನೇ ಬಸ್ಸಿಗೆ ಎಡಕ್ಕೆ ಡಿಕ್ಕಿ ಹೊಡೆಸಿದ ಪರಿಣಾಮ  ಆಟೋರಿಕ್ಷಾ ತಿರುಗಿ ಬಿದ್ದು  ಪಿರ್ಯಾದಿದಾರರ ತಲೆಗೆ ರಕ್ತಗಾಯ ಮತ್ತು ಎಡಕಾಲಿಗೆ ಮತ್ತು ಬಲಭುಜಕ್ಕೆ ಒಳನೋವು ಆಗಿರುತ್ತದೆ  ಆಪಾದಿತ ಉಮೇಶ್ ರವರಿಗೆ ಬಲಕೈಗೆ ಮುಖಕ್ಕೆ ಮತ್ತು ಬಲಕಾಲಿಗೆ ತರಚಿದ ಗಾಯವಾಗಿದ್ದು ಕುಂದಾಪುರ ಆದರ್ಶ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 112/2022 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಬ್ರಹ್ಮಾವರ: ಪಿರ್ಯಾದಿದಾರರಾದ ಸುಲೋಚನ  (47), ಗಂಡ: ಚಂದ್ರಶೇಖರ ನಾಯ್ಕ್‌ , ವಾಸ: 12-110, ಕಕ್ಕುಂಜೆ ಕೊಂಬೆ, ಕುಂಜಿಬೆಟ್ಟು ಅಂಚೆ , ಶಿವಳ್ಳಿ ಗ್ರಾಮ , ಉಡುಪಿ ತಾಲೂಕು  ಇವರ ತಾಯಿ ಜಲಜ  ಬಾಯಿ (69)ರವರು ಪಿರ್ಯಾದಿದಾರರ ಅಣ್ಣ ವಿಶ್ವನಾಥನಾಯ್ಕ ಹಾಗೂ ಅವರ ಮಕ್ಕಳೊಂದಿಗೆ ವಾಸವಾಗಿದ್ದು, ಪಿರ್ಯಾದಿದಾರರು ತನ್ನ ಗಂಡನ ಮನೆಯಲ್ಲಿ ವಾಸವಾಗಿರುವುದಾಗಿದೆ. ಜಲಜ ಬಾಯಿ ರವರು ಸುಮಾರು 20-25 ವರ್ಷಗಳಿಂದ ರಕ್ತ ವಾಯು( ರಕ್ತವಾತ), ಬಿ.ಪಿ, ಶುಗರ್‌ ಖಾಯಿಲೆಯಿಂದ ಬಳಲುತ್ತಿದ್ದು, ಅವರ ಅರೋಗ್ಯ ಸ್ಥಿತಿ  ತೀರಾ ಹದಗೆಟ್ಟಿದ್ದು, ಎರಡು ತಿಂಗಳಿನಿಂದ  ಅವರಿಗೆ ಖಾಯಿಲೆ  ತೀರಾ ಉಲ್ಬಣಗೊಂಡು, ಅವರು ಸರಿಯಾಗಿ ಅಹಾರವನ್ನು ಸೇವಿಸಲು ಆಗಾದೇ, ನಡೆದಾಡಲು ಆಗದೇ, ಮಲಗಿದ್ದಲ್ಲಿಯೇ ಮಲಮೂತ್ರ ಮಾಡಿಕೊಳ್ಳುತ್ತಿದ್ದರು. ಜಲಜ  ಬಾಯಿ ರವರ ಅರೈಕೆಯನ್ನು ಪಿರ್ಯಾದಿದಾರರ ಅಣ್ಣ ವಿಶ್ವನಾಥ ನಾಯ್ಕ್‌ ರವರು ನೋಡಿಕೊಳ್ಳುತ್ತಿದ್ದು, ಪಿರ್ಯಾದಿದಾರರು ಅಗಾಗ ಹೋಗಿ ತಾಯಿಯನ್ನು ನೋಡಿಕೊಳ್ಳುತ್ತಿದ್ದರು, ಪಿರ್ಯಾದಿದಾರರ ತಾಯಿಯನ್ನು ನೋಡಲು ಹೋದಾಗ ತಾಯಿಯು ನನ್ನ ಜೀವವೇ ಬೇಡ, ನನಗೆ ತಿರುಗಾಡಲು ಆಗುವುದಿಲ್ಲ, ನಾನು ಸಾಯುತ್ತೇನೆಂದು ಮಗಳಿಗೆ ಹೇಳುತ್ತಿದ್ದರು. ಆಗಾಗ ಪಿರ್ಯಾದಿದಾರು ತಾಯಿಗೆ ಪೋನ್‌ ಮಾಡಿದಾಗಲೂ ಕೂಡ ಜಲಜ  ಬಾಯಿರವರು ನಾನು ಜೀವ ತೆಗೆದುಕೊಳ್ಳುತ್ತೇನೆ ಎಂದು ಹೇಳುತ್ತಿದ್ದು,  ಅದೇ ರೀತಿ ದಿನಾಂಕ 01/11/2022 ರಂದು ಮಧ್ಯಾಹ್ನ 4:00 ಗಂಟೆಗೆ ಪಿರ್ಯಾದಿದಾರಿಗೆ ಅವರ ತಾಯಿ ಜಲಜ  ಬಾಯಿ ರವರು ಕರೆಮಾಡಿ ನನಗೆ ಜೀವನವೇ ಬೇಡ, ನಾನು  ಸಾಯುತ್ತೇನೆಂದು  ಹೇಳಿದ್ದು, ಆಗ ಪಿರ್ಯಾದಿದಾರರು ತಾಯಿಗೆ ಸಮಾದಾನ ಪಡಿಸಿರುತ್ತಾರೆ. ಪಿರ್ಯಾದಿದಾರರ ತಾಯಿ ಮಲಗುವಾಗ ಕರೆಂಟ್ ಹೋದಾಗ ಉಪಯೋಗಿಸಲು ಸೀಮೆ ಎಣ್ಣೆಯ ಚಿಮಣಿಯನ್ನು ಮಂಚದ ಹತ್ತಿರ ಇಟ್ಟು ಮಲಗುತ್ತಿದ್ದು ಅದರಂತೆ ದಿನಾಂಕ 01/11/2022 ರಂದು ರಾತ್ರಿ ಜಲಜ  ಬಾಯಿ ರವರು ಮನೆಯ ಕೋಣೆಯಲ್ಲಿ ಮರದ ಮಂಚದ ಮೇಲೆ ಮಲಗಿದ್ದವರನ್ನು ಪಿರ್ಯಾದಿದಾರರ ಅಣ್ಣ ವಿಶ್ವನಾಥ ನಾಯ್ಕ್‌ ರವರು ರಾತ್ರಿ 12:20 ಗಂಟೆಗೆ ನೋಡಿದ್ದು, ನಂತರ ದಿನಾಂಕ 02/11/2022 ರಂದು ಬೆಳಿಗ್ಗೆ 05:30 ಗಂಟೆಗೆ ವಿಶ್ವನಾಥ ನಾಯ್ಕ್‌ ರವರಿಗೆ ಎಚ್ಚರವಾಗಿ ನೋಡುವಾಗ ಮನೆಯಲ್ಲಿ ಬೆಂಕಿ ಉರಿಯುತ್ತಿರುವುದನ್ನು ನೋಡಿ, ತಾಯಿ ರೂಮ್‌ಗೆ ಬಂದು ನೋಡುವಾಗ ಮರದ ಮಂಚ ಹಾಗೂ ರೂಮ್ನ ಬಟ್ಟೆ ಬರೆಗೆ ಬೆಂಕಿ ಹತ್ತಿ ಉರಿಯುತ್ತಿದ್ದು, ತಾಯಿಯು ಬೆಂಕಿಯಲ್ಲಿ ಸಿಕ್ಕಿ ಹಾಕಿಕೊಂಡಿದ್ದು, ಕೂಡಲೇ ಇತರರು ಸೇರಿ ನೀರು ಹಾಕಿ ಬೆಂಕಿಯನ್ನು ನಂದಿಸಿದ್ದು, ಅಷ್ಟರ ಒಳಗೆ ತಾಯಿಯ ದೇಹವು ಸಂಪೂರ್ಣ ಸುಟ್ಟು ಕರಕಲಾಗಿ ನೆಲದ ಮೇಲೆ ಬಿದ್ದು ಮೃತಪಟ್ಟಿರುವ ಬಗ್ಗೆ ವಿಶ್ವನಾಥ ನಾಯ್ಕ್‌ ರವರು ಪಿರ್ಯಾದಿದಾರರಿಗೆ ತಿಳಿಸಿರುವುದಾಗಿದೆ. ಜಲಜ ಬಾಯಿ ರವರಿಗೆ ಮಲಗಿದ್ದಲ್ಲಿಯೇ ಬೆಂಕಿ ತಗುಲಿ ದೇಹ ಸುಟ್ಟು ಹೋಗಿ ಮೃತಪಟ್ಟಿದ್ದು, ಅವರಿಗೆ ಯಾವ ರೀತಿ ಬೆಂಕಿ ತಗುಲಿ ಸಾವು ಸಂಭವಿಸಿರಬಹುದು ಎಂಬ ಬಗ್ಗೆ ಪಿರ್ಯಾದಿದಾರರಿಗೆ ಸಂಶಯ ಇದ್ದು, ಈ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಬೇಕಾಗಿ ನೀಡಿದ ದೂರಿನಂತೆ ಬ್ರಹ್ಮಾವರ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 52/2022 ಕಲಂ: 174 (3) & (iv) ಸಿ.ಆರ್‌.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ .
  • ಮಣಿಪಾಲ: ಪಿರ್ಯಾದಿದಾರರಾದ ಡಾ.ಚಂದನ್ ರೇ (62) ತಂದೆ: ಸುಧೀರ್ ಕುಮಾರ್ ರೇ, ವಾಸ: AE – 42 SALT LAKE Bidnan Nagar, North 24, Parganas, CC block, West Bengal KOLKATTA ಇವರ ಮಗಳು ತನುಶ್ರೀ ರೇ(20) ಮಣಿಪಾಲದ ಈಶ್ವರ ನಗರದಲ್ಲಿರುವ ರೀಗಲ್  ಎಂಬೆಸ್ಸಿಯ ಪ್ಲಾಟ್ ನಂ: 403 ರಲ್ಲಿ ವಾಸವಾಗಿದ್ದು ಮಣಿಪಾಲದಲ್ಲಿ WGSHA ದಲ್ಲಿ BHM ವಿದ್ಯಾಬ್ಯಾಸ ಮಾಡುತ್ತಿದ್ದು ಪ್ರಸ್ತುತ್ 3ನೇ ವರ್ಷದ ಪದವಿ ವಿದ್ಯಾರ್ಥಿನಿಯಾಗಿರುತ್ತಾಳೆ.  ಆಕೆಯು ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 01/11/2022 ರಂದು 10:55 ಗಂಟೆಯಿಂದ  02/11/2022 ರ ಬೆಳಿಗ್ಗೆ 08:30 ಗಂಟೆಯ ನಡುವಿನ ಸಮಯದಲ್ಲಿ  ವಾಸವಿದ್ದ ಪ್ಲ್ಯಾಟ್‌ನ ಕೊಠಡಿಯ ಕಿಟಕಿಗೆ ವೇಲ್‌ ಕಟ್ಟಿ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 41/2022 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ .
  • ಹಿರಿಯಡ್ಕ: ಪಿರ್ಯಾದಿದಾರರಾದ ಜಯಕರ ನಾಯ್ಕ  (44 ), ತಂದೆ:ದಿ. ಮಂಜ  ನಾಯ್ಕ , ವಾಸ: ಕಮಲಾಕ್ಷಿ ನಿಲಯ ಉಡುಪರ ಬೆಟ್ಟು ಕುಕ್ಕೆಹಳ್ಳಿ  ಗ್ರಾಮ, ಉಡುಪಿ ತಾಲೂಕು    ಇವರ ತಮ್ಮ ಸುಧಾಕರ ನಾಯ್ಕ (43) ಇವರು ಚೋಳಬೆಟ್ಟುವಿನ ಮಜಲು ಗುಡ್ಡೆಯಲ್ಲಿ ಮನೆ ಮಾಡಿಕೊಂಡು ಹೆಂಡತಿ  ಹಾಗೂ  ಮಗನೊಂದಿಗೆ ವಾಸ ಮಾಡಿಕೊಂಡಿದ್ದು ಮೇಸ್ತ್ರಿ ಕೆಲಸ ಮಾಡಿಕೊಂಡಿರುತ್ತಾರೆ. ಸುಧಾಕರ ರವರಿಗೆ ಮೊದಲಿನಿಂದಲೂ ಕುಡಿತದ ಅಭ್ಯಾಸವಿದ್ದು ಇದರಿಂದ ಆಗಾಗಮನೆಯಲ್ಲಿ ಹೆಂಡತಿಯೊಂದಿಗೆ ಗಲಾಟೆಯಾಗಿ ಹೊಡೆದಾಡಿಕೊಳ್ಳುತ್ತಿದ್ದು ಬಳಿಕ ಸರಿಯಾಗಿ ಹೊಂದಿಕೊಂಡು ಹೋಗುತ್ತಿದ್ದರು ದಿನಾಂಕ 02/11/2022 ರಂದು ಬೆಳಿಗ್ಗೆ 07:00 ಗಂಟೆಗೆ ಸುಧಾಕರನು ಪಿರ್ಯಾದಿದಾರರ ಮನೆಯ ಬಳಿ ಬಂದು ಸ್ವಲ್ಪ ಹೊತ್ತು ಇದ್ದು ಬಳಿಕ ಕೆಲಸಕ್ಕೆ ಹೋಗುವುದಾಗಿ ಹೇಳಿ ಹೋಗಿರುತ್ತಾನೆ. ಸಂಜೆ 6:20 ಗಂಟೆಗೆ ಪಿರ್ಯಾದಿದಾರರ ಭಾವ  ಸತೀಶ ನಾಯ್ಕ ಪಿರ್ಯಾದಿದಾರರಿಗೆ ಕರೆ ಮಾಡಿ ಸುಧಾಕರ ನು ಮನೆಯಲ್ಲಿ ನೇಣು ಬಿಗಿದು ಆತ್ಮ ಹತ್ಯೆ ಮಾಡಿಕೊಂಡಿರುವುದಾಗಿ ತಿಳಿಸಿದ್ದು  ಪಿರ್ಯಾದಿದಾರರು ಕೂಡಲೇ ಹೊರಟು ಸುಧಾಕರನ ಮನೆಗೆ  ಸಾಯಂಕಾಲ  6:45 ಗಂಟೆಗೆ ಬಂದು ನೋಡಿದಾಗ ಸುಧಾಕರನ ಮನೆಯ ಹಿಂದಿನ  ಹಾಗೂ ಎದುರು ಬಾಗಿಲಿನಿಂದ ಚಿಲಕ ಹಾಕಿಕೊಂಡಿದ್ದು ಕಿಟಕಿ ಮೂಲಕ ನೋಡಲಾಗಿ ಮನೆಯ ಹಾಲ್ ನ ಮಾಡಿನ ಪಕ್ಕಸಿಗೆ ನೈಲಾನ್ ಹಗ್ಗವನ್ನು ಕಟ್ಟಿ  ಕುತ್ತಿಗೆಗೆ ನೇಣು ಬಿಗಿದು ಆತ್ಮ ಹತ್ಯೆ ಮಾಡಿಕೊಂಡಿದ್ದು ಮೃತ ದೇಹವು ನೇತಾಡುತ್ತಿದ್ದು ಕಾಲಿನ ಕೆಳಗೆ ಟಿಫಾಯಿ ಇದ್ದು ಟಿಪಾಯಿಗೆ ಕಾಲುಗಳು ತಾಗಿಕೊಂಡಿದ್ದವು ಕುಕ್ಕೆಹಳ್ಳಿಯ ಚೋಳಬೆಟ್ಟುವಿನ ಸುನೀಲ್ ಎಂಬುವವನು 15 ದಿನಗಳ ಹಿಂದೆ ಸುಧಾಕರನಿಗೆ ಹೊಡೆದಿರುತ್ತಾನೆ ಅಲ್ಲದೇ 15 ದಿನಗಳ ಹಿಂದೆ ಗಂಡ ಹೆಂಡತಿ ಮದ್ಯೆ ಗಲಾಟೆಯಾಗಿ ಹೆಂಡತಿ ಗಂಡನಿಗೆ ಹೊಡೆದಿರುವುದಾಗಿ ಆತನೇ ಹೇಳಿ ತೋರಿಸಿರುತ್ತಾನೆ ಮರಣದಲ್ಲಿ ಸಂಶಯ ಇದ್ದು  ಈ ಬಗ್ಗೆ ತನಿಖೆ  ನಡೆಸ ಬೇಕಾಗಿ ನೀಡಿದ ದೂರಿನಂತೆ ಹಿರಿಯಡ್ಕ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 42 /2022 ಕಲಂ: 174 (3) & ( iv)  ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.    

ಇತರ ಪ್ರಕರಣ

  • ಪಡುಬಿದ್ರಿ: ಪಿರ್ಯಾದಿದಾರರಾದ ಸುದೀಶ್ ಜೆ ಶೆಟ್ಟಿ (42, ತಂದೆ: ಜಯರಾಮ ಶೆಟ್ಟಿ, ವಾಸ: ಸೀತಾಂಬ ನಿವಾಸ, ಮಟ್ಟಿ ಹೌಸ್, ಹೆಜಮಾಡಿ ಗ್ರಾಮ, ಕಾಪು ತಾಲೂಕು, ಉಡುಪಿ ಜಿಲ್ಲೆ ಇವರು ಕಾಪು ತಾಲೂಕು ಹೆಜಮಾಡಿ ಗ್ರಾಮದ ಟೋಲ್‌‌ಗೇಟಿನಲ್ಲಿ ಕೆಲಸ ಮಾಡಿಕೊಂಡಿದ್ದು ದಿನಾಂಕ 30/10/2022 ರಂದು ರಾತ್ರಿ ಕರ್ತವ್ಯದಲ್ಲಿರುವ ಸಮಯ  23:00 ಗಂಟೆಯ ವೇಳೆಗೆ ಹೆಜಮಾಡಿಯ ಸಂದೇಶ್ ಶೆಟ್ಟಿ, ಮನೋಜ್ ಸುವರ್ಣ, ಶ್ರೇಯಸ್ ದೇವಾಡಿಗ ಮುಕ್ಕ, ಜಯರಾಜ್ ಪೂಜಾರಿ ಹೆಜಮಾಡಿ, ಕೀರ್ತನ್ ಪೂಜಾರಿ ಕೊಪ್ಪಲ ಹೆಜಮಾಡಿ ಹಾಗೂ ಇತರೆ 3 ಜನ ಆರೋಪಿತರು KA-19-MM-6888 ಕಿಯಾ ಮತ್ತು KA-20-MD-4371 ನೇ ನಂಬ್ರದ ಎರಡು ಕಾರುಗಳಲ್ಲಿ ಹೆಜಮಾಡಿ ಟೋಲ್‌‌‌ಗೇಟ್ ಬಳಿ ಬಂದು ಪಿರ್ಯಾದಿದಾರರನ್ನು ಏಕಾಏಕಿ ದೂಡಿ ಹಲ್ಲೆ ನಡೆಸಿ, ಅವಾಚ್ಯ ಶಬ್ಧಗಳಿಂದ ಬೈದು ಬೆದರಿಕೆ ಹಾಕಿರುತ್ತಾರೆ.  ಆರೋಪಿತರು ರಾತ್ರಿ ಸಮಯ ಪಿರ್ಯಾದಿದಾರರಿಗೆ ಪೋನ್ ಕರೆ ಮಾಡಿ ಬೆದರಿಕೆ  ಹಾಕುತ್ತಿದ್ದು, ಪೋನ್ ಕರೆ ಸ್ವೀಕರಿಸದಿದ್ದಾಗ ಮೆಸೇಜ್‌‌ಗಳ ಮೂಲಕ ಅವಾಚ್ಯ ಶಬ್ಧಗಳಿಂದ ನಿಂದಿಸಿ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನಂತೆ ಪಡುಬಿದ್ರಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 141/2022 ಕಲಂ: 143, 147, 323, , 504, 506 ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ .  

ಇತ್ತೀಚಿನ ನವೀಕರಣ​ : 03-11-2022 09:43 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080