ಅಭಿಪ್ರಾಯ / ಸಲಹೆಗಳು

ಅಸ್ವಾಭಾವಿಕ ಮರಣ ಪ್ರಕರಣ

 • ಕಾರ್ಕಳ : ಪಿರ್ಯಾದಿ ಸುಲೋಚನಾ ಶೆಟ್ಟಿ,(34) ಗಂಡ: ರಾಜೇಶ್ ಶೆಟ್ಟಿ, ವಾಸ: ಕನ್ನಾಲಿ  ಮನೆ, ತೆಂಕಬೆಟ್ಟು, ವಕ್ವಾಡಿ ಗ್ರಾಮ, ಇವರ ಗಂಡ ರಾಜೇಶ್ ಶೆಟ್ಟಿ,(38) ರವರು ಎರ್ಲಪ್ಪಾಡಿ ಗ್ರಾಮದ ಜಾರ್ಕಳ ಪಡಿಬೆಟ್ಟು ಮನೆ ಎಂಬಲ್ಲಿ ವಾಸವಾಗಿದ್ದು ವಿಪರೀತ ಕುಡಿತದ ಚಟ ಇರುತ್ತದೆ. ದಿನಾಂಕ: 03.11.2022 ರಂದು ಬೆಳಗ್ಗೆ ಪಿರ್ಯಾದಿದಾರರ ಗಂಡನ ತಂಗಿ ಪ್ರಿಯಾರವರು ಪಿರ್ಯಾದಿದಾರರಿಗೆ ಪೋನ್ ಮಾಡಿ ನಿನ್ನೆ ದಿನಾಂಕ: 02.11.2022 ರಂದು ಗಂಡ ರಾಜೇಶ್ ಶೆಟ್ಟಿ ರವರಿಗೆ ಆರೋಗ್ಯದ ಸಮಸ್ಯೆ ಆಗಿದ್ದು ಅವರನ್ನು ಅಂಬ್ಯುಲೆನ್ಸ್ ನಲ್ಲಿ ಕಾರ್ಕಳ ಸರ್ಕಾರಿ ಆಸ್ಪತ್ರೆಗೆ ರಾತ್ರಿ 11:30 ಗಂಟೆಗೆ ಕರೆದುಕೊಂಡು ಹೋಗಿದ್ದು, ರಾತ್ರಿ 11:47 ಗಂಟೆಗೆ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್  ಠಾಣೆ ಯುಡಿಆರ್‌49/2022 ಕಲಂ 174 CRPC ಯಂತೆ ಪ್ರಕರಣ ದಾಖಲಿಸಲಾಗಿದೆ.
 • ಬ್ರಹ್ಮಾವರ: ಪಿರ್ಯಾದಿ ಹರೀಶ್‌, (38), ತಂದೆ: ಸೋಮಪ್ಪ ಕೋಟ್ಯಾನ್‌, ವಾಸ: ಅಬ್ಬಣ್ಣಕುದ್ರು, ಉಪ್ಪೂರು ಗ್ರಾಮ ಇವರ ಅಕ್ಕಳಾದ ಪ್ರಮೀಳಾ ( 44 ) ಎಂಬವರು  ಹುಟ್ಟಿನಿಂದಲೇ ಅಂಗವಿಕಲರಾಗಿದ್ದು, ಅವರ ಎರಡೂ ಕಾಲುಗಳಲ್ಲಿ ಸ್ವಾಧೀನ ಇರುವುದಿಲ್ಲ. ದಿನಾಂಕ 02.11.2022 ರಂದು ರಾತ್ರಿ 9:00 ಗಂಟೆಗೆ ಮನೆಯಲ್ಲಿ ಊಟಮಾಡಿ ಮಲಗಿದ್ದ ಪ್ರಮೀಳಾ ರವರನ್ನು ದಿನಾಂಕ 03.11.2022 ರಂದು ಬೆಳಿಗ್ಗೆ 07:00 ಗಂಟೆಯ ಸುಮಾರಿಗೆ ಪಿರ್ಯಾದಿದಾರರ ಅಣ್ಣ ಸುರೇಶ್‌ ರವರು ಎಬ್ಬಿಸಿದಾಗ ಪ್ರಮೀಳಾ ರವರು ಎಳಲಿಲ್ಲ. ನಂತ್ರ ಪ್ರಮೀಳಾ ರವರನ್ನು ಚಿಕಿತ್ಸೆಯ ಬಗ್ಗೆ ಉಡುಪಿ ಅಜ್ಜರಕಾಡು ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಬೆಳಿಗ್ಗೆ 07:48 ಗಂಟೆಯ ಸುಮಾರಿಗೆ ಪರೀಕ್ಷಸಿದ ವೈಧ್ಯರು ಪ್ರಮೀಳಾ ಆಸ್ಪತ್ರೆಗೆ  ಬರುವ ಮೊದಲೇ  ಮೃತಪಟ್ಟ ಬಗ್ಗೆ ತಿಳಿಸಿರುತ್ತಾರೆ. ಪ್ರಮೀಳಾ ರವರು ಹೃದಯಾ ಸಂಬಂಧಿ ಖಾಯಿಲೆ ಅಥವಾ ಇನ್ಯಾವುದೋ ಖಾಯಿಲೆಯಿಂದ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಠಾಣೆ  ಯುಡಿಆರ್ ನಂ. 53/2022 ಕಲಂ 174 ಸಿಆರ್‌ಪಿಸಿ  ಯಂತೆ ಪ್ರಕರಣ ದಾಖಲಿಸಲಾಗಿದೆ.
 • ಕೋಟ: ಪಿರ್ಯಾದಿ ಪ್ರದೀಪ ಶೆಟ್ಟಿ ಪ್ರಾಯ 27 ವರ್ಷ ತಂದೆ: ದಿ ಗುಂಡು ಶೆಟ್ಟಿ ವಾಸ: ಕೊಯ್ಕಾಡಿ ಕೆಳ ಹೆಬ್ಬಾಗಿಲು ಮನೆ  ಮೊಳಹಳ್ಳಿ ಗ್ರಾಮ ಇವರ ಅಣ್ಣ ಪ್ರವೀಣ್ ಶೆಟ್ಟಿ ಪ್ರಾಯ 32 ವರ್ಷ ಈತನು ಹೋಟೆಲ್ ನಲ್ಲಿ ಕೆಲಸ ಮಾಡಿಕೊಂಡದ್ದವನು ವಿಪರೀತ ಶರಾಬು ಕುಡಿಯುವ ಚಟ ಹೊಂದಿದ್ದು ಸರಿಯಾಗಿ ಕೆಲಸಕ್ಕೆ ಹೋಗದೇ ಮನೆಯಲ್ಲಿಯೇ ಇರುತ್ತಿದ್ದವನು ಜೀವನದಲ್ಲಿ ಜಿಗುಪ್ಸೆಗೊಂಡು ಅಥವಾ ಇನ್ನಾವುದೋ ಕಾರಣದಿಂದ ದಿನಾಂಕ:01/11/2022 ರಂದು 21.30 ಗಂಟೆಯಿಂದ ದಿನಾಂಕ:03/11/2022 ರಂದು 10.15 ಗಂಟೆಯ ಮಧ್ಯಾವಧಿಯಲ್ಲಿ ಮನೆಯ ಹತ್ತಿರದ ರಾಜಾಜಿ ಭಂಡಾಕರ್ಸ ರವರ ಹಾಡಿಯಲ್ಲಿ ಚಾರು ಮರದ  ಕೊಂಬೆಗೆ  ನೈಲಾನ್ ಸೀರೆಯಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡು  ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಕೋಟ ಠಾಣಾ ಯು.ಡಿ.ಆರ್ ನಂಬ್ರ 48/2022 ಕಲಂ: 174 CRPC ಯಂತೆ ಪ್ರಕರಣ ದಾಖಲಿಸಲಾಗಿದೆ.

ಅಪಘಾತ ಪ್ರಕರಣಗಳು

 •  ಕಾರ್ಕಳ ದಿನಾಂಕ: 01.11.2022 ರಂದು ಮದ್ಯಾಹ್ನ 11:00  ಗಂಟೆಗೆ ಪಿರ್ಯಾದಿ ದರ್ಶನ್ ರೈ (26) ತಂದೆ; ದಿನಕರ ರೈ ವಾಸ; ಶಾಂಭವಿ ದೇವಿಪ್ರಸಾದ್ ಕಂಪೌಂಡ್, ನಿಟ್ಟೆ ಗ್ರಾಮ ಇವರು ತನ್ನ ತಾಯಿ ಶ್ರೀಮತಿ ವಿದ್ಯಾ ಡಿ. ರೈ (57) ಎಂಬವರೊಂದಿಗೆ ಕೆಲಸದ ನಿಮಿತ್ತ ನನ್ನ ಕಾರಿನಲ್ಲಿ ಕಾರ್ಕಳಕ್ಕೆ ಹೊರಟು, ಕಾರ್ಕಳ ಪೇಟೆಯಲ್ಲಿ ಕೆಲಸ ಮುಗಿಸಿ ನಿಟ್ಟೆಗೆ ಹೋಗುವರೇ ಬಂಗ್ಲೆಗುಡ್ಡೆಯಿಂದಾಗಿ  ಹೊರಟು  ಬಂಗ್ಲೆಗುಡ್ಡೆ – ಪುಲ್ಕೇರಿ  ಬೈಪಾಸ್ ರಸ್ತೆಯಲ್ಲಿರುವ ಕಾರ್ಕಳ ತಾಲೂಕು ಕುಕ್ಕುಂದೂರು ಗ್ರಾಮದ ಕೆ.ಎಂ.ಇ.ಎಸ್ ಶಾಲೆಯ ಕ್ರಾಸ್ ಬಳಿ ಇರುವ ಕಲ್ಪವೃಕ್ಷ ಎಂಬ ಅಂಗಡಿಗೆ ಹೋಗಿ ತೆಂಗಿನ ಎಣ್ಣೆ ತೆಗೆದುಕೊಂಡು ವಾಪಾಸು ನಾನು ನಿಲ್ಲಿಸಿದ್ದ ಕಾರಿನ ಬಳಿ ಬರುವರೇ ಕಲ್ಪವೃಕ್ಷ ಅಂಗಡಿಯ ಎದುರು ರಸ್ತೆಯ ಬದಿ ನಿಂತುಕೊಂಡಿದ್ದಾಗ,  ಸಮಯ ಸುಮಾರು ಮದ್ಯಾಹ್ನ 2:45 ಗಂಟೆಗೆ ಪುಲ್ಕೇರಿ ಕಡೆಯಿಂದ KA01MV9118 ನೇ ಕಾರಿನ  ಚಾಲಕ ಸಿದ್ಧಾರ್ಥ್‌ ರೆಡ್ಡಿ  ಎಂಬಾತನು ಅತೀ ವೇಗ ಹಾಗೂ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು  ರಸ್ತೆಯ  ಎಡಬದಿಯಲ್ಲಿ ನಿಂತುಕೊಂಡಿದ್ದ ಪಿರ್ಯಾದಿದಾರರ ತಾಯಿಯವರಿಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರ ತಾಯಿಯವರ ಎಡಕಾಲಿನ ತೊಡೆಗೆ, ಸೊಂಟಕ್ಕೆ ತಲೆಗೆ ರಕ್ತಗಾಯವಾಗಿರುತ್ತದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ  139/2022 ಕಲಂ  279, 338 ಐಪಿಸಿ  ಯಂತೆ ಪ್ರಕರಣ ದಾಖಲಿಸಲಾಗಿದೆ.  
 • ಅಮಾಸೆಬೈಲು: ಫಿರ್ಯಾದಿ: ಶೀನ ಪೂಜಾರಿ ಪ್ರಾಯ 65  ವರ್ಷ ತಂದೆ: ದಿ ಮಂಜುಪೂಜಾರಿ ದೇವಸ್ಥಾನ ಬೆಟ್ಟು ಮಡಾಮಕ್ಕಿ ಗ್ರಾಮ ಇವರು ದಿನಾಂಕ 02/11/2022 ರಂದು ಬೆಳಿಗ್ಗೆ 10:30 ಗಂಟೆಗೆ  ತನ್ನ ಅಳಿಯ  ಚೇತನರೊಂದಿಗೆ ನನ್ನ  KA 20 E G 3987 ನೇ ಟಿ ವಿ ಎಸ್ ಮೋಟಾರು ಸೈಕಲ್ ನಲ್ಲಿ  ಮಾಂಡಿಮೂರ್ ಕೈ ಕಡೆಯಿಂದ ಮಡಾಮಕ್ಕಿ ಕಡೆಗೆ ಹೋಗುವಾಗ  ಮಡಾಮಕ್ಕಿ ಗ್ರಾಮದ 4ನೇ ಮೈಲಿಗಲ್ಲು ಎಂಬಲ್ಲಿ  ಎದುರಿನಿಂದ KA 20 EN 8895 ನೇ ಮೋಟಾರು ಸೈಲ್ ಸವಾರ ತನ್ನ ಮೋಟಾರು ಸೈಕಲ್ ನ್ನು ಅತೀ ವೇಗ ಹಾಗೂ ನಿರ್ಲಕ್ಷತನದಿಂದ ಚಾಲನೆಮಾಡಿಕೊಂಡು ಬಂದು  ಪಿರ್ಯಾದಿದಾರರ  KA 20 E G 3987 ನೇ ಟಿ ವಿ ಎಸ್ ಮೋಟಾರು ಸೈಕಲಿಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರ ಬಲಕಾಲಿಗೆ ಹಾಗೂ ಕೈಗಳಗೆ ರಕ್ತಗಾಯವಾಗಿರುತ್ತದೆ  ಪಿರ್ಯಾದಿದಾರರ ಅಳಿಯ ಚೇತನನಿಗೆ ಯಾವುದೇ ಗಾಯವಾಗಿರುವದಿಲ್ಲ ಹಾಗೂ  ಅಪಘಾತ ಪಡಿಸಿದ KA 20 EN 8895 ನೇ ಚಾಲಕ ರತ್ನಾಕರ ಹಸ್ಲಾ ರವರಿಗೆ ತರಚಿದ ಗಾಯವಾಗಿರುತ್ತದೆ. ಈ ಬಗ್ಗೆ ಅಮಾಸೆಬೈಲು  ಪೊಲೀಸ್ ಠಾಣಾ ಅಪರಾಧ ಕ್ರಮಾಂಕ  29/2022  ಕಲಂ 279, 337,  ಐಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.  
 • ಕುಂದಾಪುಋ: ದಿನಾಂಕ 03-11-2022 ರಂದು  ಬೆಳಿಗ್ಗೆ  ಸುಮಾರು 09:00 ಗಂಟೆಗೆ,  ಕುಂದಾಪುರ  ತಾಲೂಕಿನ, ತಲ್ಲೂರು  ಗ್ರಾಮದ  ತಲ್ಲೂರು ಸೇತುವೆಯ  ಬಳಿ   ಪೂರ್ವ ಬದಿಯ ಎನ್ ಹೆಚ್ 66 ರಸ್ತೆಯಲ್ಲಿ, ಆಪಾದಿತ ಚಂದ್ರ ಮೊಗವೀರ  ಎಂಬವರು KA20-EV-9956 ನೇ TVS XL  ಮೋಟಾರ್ ಸೈಕಲ್ ನ್ನು ಕುಂದಾಪುರ ಕಡೆಯಿಂದ ಹೆಮ್ಮಾಡಿ ಕಡೆಗೆ ವಿರುದ್ದ ದಿಕ್ಕಿನಲ್ಲಿ ಅತೀವೇಗ ಹಾಗೂ ನಿರ್ಲಕ್ಷತನದಿಂದ   ಚಾಲನೆ ಮಾಡಿಕೊಂಡು ಬಂದು,  ಪಿರ್ಯಾದಿದಾರರಾದ ಮಿಥುನ್ ಕಾರಂತ್ ರವರುKA 20 EW 6868 ನೇ ಸ್ಕೂಟರ್ ನಲ್ಲಿ ಪ್ರವೀತಾ ಮೆಂಡೋನ್ಸಾ ರವರನ್ನು ಸಹ ಸವಾರರಾಗಿ ಕುಳ್ಳಿರಿಸಿ ನಾಡಾ ಗುಡ್ಡೆಯಂಗಡಿ ಕಡೆಯಿಂದ ಕುಂದಾಪುರ ಕಡೆಗೆ ಸವಾರಿ ಮಾಡಿಕೊಂಡು ಬರುತ್ತಿದ್ದ  ಸದ್ರಿ ಸ್ಕೂಟರ್‌‌ಗೆ ಎದುರುಗಡೆಯಿಂದ ಡಿಕ್ಕಿ ಹೊಡೆದ  ಪರಿಣಾಮ  ಪಿರ್ಯಾದಿದಾರರು, ಪ್ರವೀತಾ ಮೆಂಡೋನ್ಸಾ ಹಾಗೂ TVS XL  ಸವಾರ ವಾಹನಗಳ ಸಮೇತ ರಸ್ತೆಯಲ್ಲಿ ಬಿದ್ದು,ಪಿರ್ಯಾದಿದಾರರ ಎಡಕಾಲು, ಬಲಕೈಗೆ ಒಳಜಖಂ ಉಂಟಾದ ಗಾಯ ಹಾಗೂ ಮೈಕೈಗೆ ಒಳನೋವಾದ ಗಾಯ, ಪ್ರವೀತಾ ಮೆಂಡೋನ್ಸಾರವರಿಗೆ ಎಡಕಾಲಿಗೆ ಒಳಜಖಂ ಗಾಯ , ತಲೆಗೆ ಮತ್ತು ಬಲಕಾಲು , ಮುಖಕ್ಕೆ ಒಳನೋವು ಹಾಗೂ ತರಚಿದ ಗಾಯ ಹಾಗೂ TVS XL ಮೋಟಾರ್ ಸೈಕಲ್ ಸವಾರ ಚಂದ್ರ ಮೊಗವೀರರವರಿಗೆ ಎಡ ಕಾಲಿನ ಪಾದಕ್ಕೆ ತರಚಿದ ಗಾಯವಾಗಿದ್ದು ಪಿರ್ಯಾದಿದಾರರು ಹಾಗೂ  ಪ್ರವೀತಾ ಮೆಂಡೋನ್ಸಾರವರು ಕುಂದಾಪುರ ಚಿನ್ಮಯಿ  ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿದ್ದು, ಆಪಾದಿತ ಹೊರ ರೋಗಿಯಾಗಿ ಚಿಕಿತ್ಸೆ ಪಡೆದಿರುತ್ತಾರೆ . ಈ ಬಗ್ಗೆ ಮಿಥುನ್ ಕಾರಂತ್ ಪ್ರಾಯ:27  ವರ್ಷ ತಂದೆ :ನಾರಾಯಣ ಕಾರಂತ ವಾಸ : ರಾಮ ನಗರ ನಾಡ ಗುಡ್ಡೆಯಂಗಡಿ ರವರು ನೀಡಿದ ದೂರಿನಂತೆ ಕುಂದಾಪುರ ಸಂಚಾರ ಪೊಲೀಸ್ ಠಾಣೆ, ಅಪರಾಧ ಕ್ರಮಾಂಕ  113/2022  ಕಲಂ 279, 337,338     IPC  ಯಂತೆ ಪ್ರಕರಣ ದಾಖಲಿಸಲಾಗಿದೆ.    
   

ಇತರ ಪ್ರಕರಣ

 • ಶಂಕರನಾರಾಯಣ:  ಪಿರ್ಯಾದಿ 66  ವರ್ಷ ತಂದೆ, ದಿ, ವಾಮನ  ಹೆಗ್ಡೆ ವಾಸ, 9 ನೇ ಮೈಲ್ ಕಲ್ಲು   ಕಲ್ಮಾರ್ಗ ಅಲ್ಬಾಡಿ  ಗ್ರಾಮ ಇವರು   ದಿನಾಂಕ 17.01.2013  ರಲ್ಲಿ ಹೆಬ್ರಿ  ತಾಲೂಕಿನ ಬೆಳ್ಬೆ ಗ್ರಾಮದ   ಬೆಳ್ಬೆ  ಕೆನರಾ   ಬ್ಯಾಂಕ್‌‌ನಲ್ಲಿ  15,00,000/- ರೂ ಗೃಹ  ಸಾಲ  ಹಾಗೂ 6,00,000/- ರೂ  ಕೃಷಿ ಸಾಲವನ್ನು  ಪಡೆದುಕೊಂಡಿರುತ್ತಾರೆ. ಈ ಸಮಯ  1 ನೇ ಆರೋಪಿ 1.ರಾಘವೇಂದ್ರ ಪ್ರಾಯ 37 ವರ್ಷ ತಂದೆ, ರಾಮರಾಯ  ಹೆಗ್ಡೆ ರವರು  ಫಿರ್ಯಾದುದಾರರಲ್ಲಿ  ತನಗೆ   ಬ್ಯಾಂಕಿನ  ಮ್ಯಾನೇಜರ  ಇವರು ಪರಿಚಯವಿದ್ದು, ಅವರಲ್ಲಿ  ಹೇಳಿ ಸಾಲದ ಕಂತನ್ನು   ವಿಸ್ತರಿಸಿಕೊಡುವುದಾಗಿ   ನಂಬಿಸಿ ಬ್ಯಾಂಕಿನ ಕೆಲವು ಕಾಗದ  ಪತ್ರಗಳಿಗೆ  ಸಹಿ  ಮಾಡಿಸಿಕೊಂಡಿರುತ್ತಾನೆ,  ಈ   ಸಹಿ  ಮಾಡಿಸಿಕೊಂಡ ಕಾಗದ ಪತ್ರಗಳನ್ನು 1ರಿಂದ 3 ನೇ ಆರೋಪಿಗಳಾದ 1.ರಾಘವೇಂದ್ರ ಪ್ರಾಯ 37 ವರ್ಷ ತಂದೆ, ರಾಮರಾಯ  ಹೆಗ್ಡೆ ವಾಸ, ತೊಂಬಟ್ಟು ಕ್ರಾಸ್  ಗೋಳಿಯಂಗಡಿ  ಬೆಳ್ವೆ  ಗ್ರಾಮ ,2. ಸುಮಾ  ಪ್ರಾಯ  30 ವರ್ಷ  ಗಂಡ, ರಾಘವೇಂದ್ರ   ವಾಸ, ತೊಂಬಟ್ಟು ಕ್ರಾಸ್  ಗೋಳಿಯಂಗಡಿ  ಬೆಳ್ವೆ  ಗ್ರಾಮ ,3.ಶಾಖಾ ಪ್ರಭಂಧಕರು  ಕೆನರಾ ಬ್ಯಾಂಕ್  ಬೆಳ್ವೆ  ಶಾಖೆ ಹೆಬ್ರಿ ತಾಲೂಕು  ರವರುಗಳು  ಸೇರಿ ಸಮಾನ ಉದ್ದೇಶದಿಂದ  ಫಿರ್ಯಾದುದಾರರಿಗೆ ಮೋಸ  ಮಾಡುವ ಉದ್ದೇಶದಿಂದ 1  ನೇ  ಆರೋಪಿ  ಹೆಸರಲ್ಲಿ 24.12.2019 ರಲ್ಲಿ  ADD CONSTRUCTION  ಎಂಬ  ಹೆಸರಿನ ಸಂಸ್ಥೆಯನ್ನು ಹುಟ್ಟು ಹಾಕಿ  ಈ ಹಿಂದೆ   ಫಿರ್ಯಾದುದಾರರು ಸಾಲ  ಪಡೆದುಕೊಂಡ  ದಾಖಲಾತಿಯನ್ನು ನೀಡಿ  2 ನೇ ಆರೋಪಿಯ  ಜಾಮೀನಿನಲ್ಲಿ   3  ನೇ   ಆರೋಪಿಯು   25,00,000/- ರೂ ಸಾಲ ವನ್ನು  1  ನೇ  ಆರೋಪಿಗೆ ನೀಡಿರುತ್ತಾನೆ, 1ನೇ  ಆರೋಪಿಯು  ಪಡೆದುಕೊಂಡ ಸಾಲವನ್ನು  ಮರುಪಾವತಿ   ಮಾಡದೇ  ಇದ್ದು ಈ ಕಾರಣದಿಂದ   ಫಿರ್ಯಾದುದಾರರ  ಜಾಗ  ಏಲಂ ಮಾಡಲು  ಆದೇಶವಾಗಿರುತ್ತದೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆ  ಅಪರಾಧ ಕ್ರಮಾಂಕ  117/2022  ಕಲಂ:. 405,415,420,423  ಐ.ಪಿಸಿ    ಯಂತೆ ಪ್ರಕರಣ ದಾಖಲಿಸಲಾಗಿದೆ.
 • ಶಂಕರನಾರಾಯಣ:  ಪಿರ್ಯಾದಿ ರಾಘವೇಂದ್ರ  ಶೆಟ್ಟಿ   ( 30) ತಂದೆ, ರಾಜೀವ  ಶೆಟ್ಟಿ ವಾಸ ಬ್ರಹ್ಮಕೃಪಾ ಬಡಬಾಳು  ಜನ್ಸಾಲೆ ಸಿದ್ದಾಪುರ ಗ್ರಾಮ ಇವರು  ಕೆಎ.20  ಎಮ್‌ಸಿ 2627 ನೇ ನಂಬ್ರದ  ಮಾರುತಿ  ಸ್ವಿಷ್ಟ  ಕಾರಿನ ನೊಂದಣಿ   ಮಾಲೀಕರಾಗಿರುತ್ತಾರೆ,  ಸದ್ರಿ ಕಾರನ್ನು  ಆರೋಪಿಗೆ   6.80,000/- ರೂ ಗೆ ಮಾರಾಟ ಮಾಡಿದ್ದು, ಆರೋಪಿಯು  ಫಿರ್ಯಾದು ದಾರರ  ಮಾತನ್ನು ನಂಬಿ   ಕಾರನ್ನು  ಆರೋಪಿಗೆ  ನೀಡಿದ್ದು, ಈ  ಸಮಯ  ಆರೋಪಿಯು  ಮಂಗಳೂರು  ಮಹೇಂದ್ರ  ಕೊಟೇಕ್   ಬ್ಯಾಂಕಿನಲ್ಲಿ ಫಿರ್ಯಾದುದಾರರ ಹೆಸರಿಗೆ 5,00,000/- ರೂ ಸಾಲವನ್ನು  ಪಡೆದು ನೀಡುವುದಾಗಿ  ಹೇಳಿ ನಂಬಿಸಿ  ಸಾಲವನ್ನು ಪಡೆದುಕೊಂಡು ಫಿರ್ಯಾದುದಾರರಿಗೆ ನೀಡಿ  ಉಳಿದ  1,80,000/- ರೂ ಹಣವನ್ನು 15 ದಿನದ ಒಳಗಡೆ   ನೀಡುವುದಾಗಿ  ಹೇಳಿ  ಕಾರನ್ನು ತೆಗೆದುಕೊಂಡು ಹೋಗಿರುತ್ತಾನೆ, ಆದರೆ  ಆರೋಪಿಯು  ಬ್ಯಾಂಕಿಗೆ  ಸಾಲದ  ಕಂತನ್ನು ಹಾಕದೇ   ಕಾರನ್ನು  ಸಹ ವಾಪಾಸು ನೀಡದೇ ಫಿರ್ಯಾಧುದಾರರಿಗೆ  ಮೋಸ ಮಾಡಿರುತ್ತಾನೆ . ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ  118/2022  ಕಲಂ:.  417,419,420   ಐ.ಪಿಸಿ    ಯಂತೆ ಪ್ರಕರಣ ದಾಖಲಿಸಲಾಗಿದೆ. 
 • ಮಲ್ಪೆ: ಪಿರ್ಯಾದಿ ಗುಲಾಬಿ, ಪ್ರಾಯ: 72 ವರ್ಷ, ಗಂಡ: ಅಪ್ಪು ಸುವರ್ಣ, ವಾಸ:ಸನ್‌ಪ್ಲಸ್ಕ್ ಮನೆ, ತೊಟ್ಟಂ, ವಡಭಾಂಡೇಶ್ವರ, ಕೊಡವೂರು ಗ್ರಾಮ ರವರು  ದಿನಾಂಕ:03-11-2022 ರಂದು ಬೆಳಗಿನ ಜಾವ ಸಮಯ ಸುಮಾರು 06:30 ಗಂಟೆಗೆ ಮಲ್ಪೆ ಬಂದರಿನ ಹತ್ತಿರವಿರುವ ಮೀನು ಒಣಗಿಸುವ ಶೆಡ್‌ನಿಂದ ಮಲ್ಪೆ ಬಂದರಿಗೆ ಹಸಿ ಮೀನು ಖರೀದಿಸಲು ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ಓರ್ವ ವ್ಯಕ್ತಿಯು ಪಿರ್ಯಾದಿದಾರರ ಹತ್ತಿರ ಬಂದು ಪಿರ್ಯಾದಿದಾರರ ಕಣ್ಣಿಗೆ ಮೆಣಸಿನ ಖಾರದ ಪುಡಿ ಎರಚಿ ಕುತ್ತಿಗೆಯನ್ನು ಕೈಯಿಂದ ಹಿಡಿದು ಕುತ್ತಿಗೆಯಲ್ಲಿದ್ದ ಬಂಗಾರದ ಕರಿಮಣಿ ಸರವನ್ನು ಎಳೆಯಲು ಪ್ರಯತ್ನಿಸಿದಾಗ ಪಿರ್ಯಾದಿದಾರರು ಜೋರಾಗಿ ಬೊಬ್ಬೆ ಹಾಕಿದ್ದು ಬೊಬ್ಬೆ ಕೇಳಿದ ಆಸುಪಾಸಿನ ಜನರು ಪಿರ್ಯಾದಿದಾರರನ್ನು ಉಪಚರಿಸಿ, ಖಾರದ ಪುಡಿ ಎರಚಿದ ವ್ಯಕ್ತಿಯನ್ನು ಹಿಡಿದು ಆತನನ್ನು ವಿಚಾರಿಸಿದ್ದು ಆತನ ಹೆಸರು ಪ್ರಭಾಕರ ಪ್ರಾಯ:47 ವರ್ಷ, ತಂದೆ: ಸೂರಪ್ಪ ಅಮಿನ ವಾಸ: ಗುಜ್ಜರಬೆಟ್ಟು ಎಂದು ತಿಳಿಸಿರುತ್ತಾನೆ. ಈ ಬಗ್ಗೆ ಮಲ್ಪೆ ಪೊಲೀಸ್  ಠಾಣಾ ಅಪರಾಧ ಕ್ರಮಾಂಕ   ನಂಬ್ರ 91/2022 ಕಲಂ- 393 IPC ಯಂತೆ ಪ್ರಕರಣ ದಾಖಲಿಸಲಾಗಿದೆ. 
 • ಅಜೆಕಾರು: ದಿನಾಂಕ 03.11.2022 ರಂದು ಬೆಳಿಗ್ಗೆ 09-45 ಗಂಟೆಗೆ ಮರ್ಣೆ ಗ್ರಾಮದ ಗುಡ್ಡೆಯಂಗಡಿ ಎಂಬಲ್ಲಿ ಫಿರ್ಯಾದಿ ಸತೀಶ ಶೆಟ್ಟಿ (55), ತಂದೆ: ನಾರಾಯಣ ಶೆಟ್ಟಿ, ವಾಸ: ಭ್ರಾಮರಿ, ಗುಡ್ಡೆಯಂಗಡಿ, ಮರ್ಣೆ ಗ್ರಾಮ ಇವರು ಅವರ ಮನೆಗೆ ಬರುತ್ತಿರುವಾಗ ಆರೋಪಿತ ರಾಧಾಕೃಷ್ಣ ಶೆಟ್ಟಿ ಎಂಬವರು ಫಿರ್ಯಾದುದಾರರ ಜಮೀನಿನ ಪಕ್ಕದಲ್ಲಿ ಕಲ್ಲು ಇಟ್ಟಿರುವ ಬಗ್ಗೆ ಆಕ್ಷೇಪಿಸಿ, ಫಿರ್ಯಾದುದಾರರನ್ನು ತಡೆದು ನಿಲ್ಲಿಸಿ, ಅವಾಚ್ಯ ಶಬ್ದಗಳಿಂದ ಬೈದು, ಕೈಯಿಂದ ತಳ್ಳಿ, ಹೊಡೆದು ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿರುವುದಾಗಿದೆ. ಈ ಬಗ್ಗೆ ಅಜೆಕಾರು ಪೊಲೀಸ್‌ ಠಾಣಾ  ಅಪರಾಧ ಕ್ರಮಾಂಕ  35/2022 ಕಲಂ: 341, 323, 504,506  ಐಪಿಸಿ. ಯಂತೆ ಪ್ರಕರಣ ದಾಖಲಿಸಲಾಗಿದೆ.     

ಇತ್ತೀಚಿನ ನವೀಕರಣ​ : 03-11-2022 06:45 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080